ಹಾಡುಗಾರರಲ್ಲಿ ‘ಮಾನಸಿಕ ಪಠ್ಯ’ವಾಗಿ ಉಸಿರಾಡುತ್ತಿರುವ ಮತ್ತು ಆರಾಧನೆ ಹಾಗೂ ಇತರ ಪ್ರದರ್ಶನ ಸಂದರ್ಭಗಳಲ್ಲಿ ಪ್ರಕಟಗೊಳ್ಳುತ್ತಿರುವ ಜನಪದ ಕಾವ್ಯಗಳು ಜಗತ್ತಿನಾದ್ಯಾಂತ ಸಿಗುತ್ತವೆ. ತುಳುನಾಡಿನಲ್ಲಿ ಪ್ರಚಲಿತವಿರುವ ಇಂತಹ ಮೌಖಿಕ ಕಾವ್ಯ ಸಂಗ್ರಹ, ಸಂಪಾದನೆ ಮತ್ತು ಅಧ್ಯಯನಗಳು ಸಾಕಷ್ಟು ನಡೆದಿವೆ. ಅಂತಹವುಗಳಲ್ಲಿ ‘ಕೋಟಿ ಚೆನ್ನಯ’ ಮತ್ತು ‘ಸಿರಿಕಾವ್ಯ’ಗಳ ಕುರಿತು ವಿಶೇಷ ಹಾಗೂ ವಿಸ್ತೃತ ಅಧ್ಯಯನಗಳು ಸಾಕಷ್ಟು ನಡೆದಿವೆ. ಆದರೆ ಹಾಗೆ ನಡೆದಿರುವ ಅಧ್ಯಯನಗಳ ಬಗೆಗೆ ಚರ್ಚೆ ಸಂವಾದಗಳು ನಡೆದೇ ಇಲ್ಲವೆನ್ನಬೇಕು. ಈ ನೆಲೆಯಲ್ಲಿ ಇದೊಂದು ಉತ್ತಮ ಪ್ರಯತ್ನ.

ಪಠ್ಯವೆಂದರೇನು ?

ಒಂದು ನಿರ್ದಿಷ್ಟ ಸಂದರ್ಭದಲ್ಲಿ ಮೌಖಿಕವಾಗಿ ನಿರ್ವಹಣೆಗೊಳ್ಳುವ ಜಾನಪದ ಅಂಶವೇ ಪಠ್ಯ. ಮಾನಸಿಕ ಪಠ್ಯದ ಸ್ವರೂಪ ಮತ್ತು ಗಾತ್ರ ನಿರ್ದಿಷ್ಟವಾಗಿರುವುದಿಲ್ಲ. ಹಾಗಾಗಿ ‘ಪಠ್ಯ’ವನ್ನು ಇನ್ನೊಂದು ರೀತಿಯಲ್ಲೂ ವ್ಯಾಖ್ಯಾನಿಸಬಹುದು. ಅದು ನಿರ್ದಿಷ್ಟ ಸಂದರ್ಭವೊಂದರಲ್ಲಿ ಮೌಖಿಕವಾಗಿ ನಿರ್ವಹಣೆಗೊಳ್ಳುವ ಮಾನಸಿಕ ಪಠ್ಯ.

. ಪಠ್ಯ ಶೀರ್ಷಿಕೆ ಸತ್ಯನಾಪುರತ್ತ ಸಿರಿ ಸಿರಿಮಹಾಕಾವ್ಯ ಸಿರಿ ಪಾಡ್ದನ ಕ್ಷೇಮಕಲ್ಲ ಪಂಜರ್ಲಿ ಪಾಡ್ದನ
೨. ಹಾಡಿದ ಕಲಾವಿದರು ಮತ್ತು ಊರು ರಾಮಕುಂಜತ್ತೂರು ಗೋಪಾಲನಾಯ್ಕ ಮಾಚಾರು ರಾಮಕ್ಕಮುಗ್ಗೇರ‍್ತಿ ಗಿಡಿಕೆರೆ ಕುಂಡಪರವ ಬಂಗಾಡಿ
೩. ತಾಲೂಕು ಕಾಸರಗೋಡು ಬೆಳ್ತಂಗಡಿ ಮಂಗಳೂರು ಬೆಳ್ತಂಗಡಿ
೪. ಸಾಮಾಜಿಕ ವರ್ಗ ಬಾಕುಡ ನಾಯ್ಕ ಮುಗೇರ ಪರವ
೫. ಲಿಂಗ ಗಂಡು ಗಂಡು ಹೆಣ್ಣು ಗಂಡು
೬. ಸಂಗ್ರಹಕಾರರು ಅಮೃತ ಸೋಮೇಶ್ವರ ಲೌರಿ ಹಾಂಕೋ ಕೆ. ಚಿನ್ನಪ್ಪಗೌಡ ಅನೇಲಿ ಹಾಂಕೋ, ವಿವೇಕ ರೈ ಎ. ವಿ. ನಾವಡ ವಿವೇಕ ರೈ, ಯದುಪತಿ ಗೌಡ ರಾಜಶ್ರೀ
೭. ಸಂಗ್ರಹಿಸಿದ ವರ್ಷ/ಪ್ರಕಟಗೊಂಡ ವರ್ಷ ೧೯೭೨ / ೧೯೯೭ ೧೯೯೦ / ೧೯೯೮ ೧೯೯೬ / ೧೯೯೯ ೧೯೯೯ / ೨೦೦೪
೮. ಸ್ವರೂಪ (Form) : (ಗೇಯತೆ – ಲಯ – ಧಾಟಿ – ಛಂದಸ್ಸು) “ನಾರಾಯನ ನಾರಾಯಿನ……….” ಡೆನ್ನ, ಡೆನ್ನೊ, ಡೆನ್ನ ಡೆನ್ನೊ ಡನೊ..ಮೊದಲಾದ ಪಲ್ಲವಿ ತಾಣಗಳು ಇರುವ ರಾಗ ಸ್ವರಗಳು ಮೊದಲಾದುವುಗಳಿಂದ ಈ ಮೌಖಿಕ ಕಾವ್ಯಗಳು ಪ್ರಾರಂಭವಾಗುತ್ತವೆ. ಒಂದರಿಂದ ನಾಲ್ಕು ಅಥವಾ ಐದು ಸಾಲುಗಳಂತೆ ಈ ಪಲ್ಲವಿ ತಾಣಗಳಿರಬಹುದು.”ದನಿ ಬದಲ್ತ್ ಪನ್ಯೆರೇ” (ಧ್ವನಿ ಬದಲಿಸಿ ಹೇಳಲು) ಇವು ನೆರವಾಗುತ್ತವೆ. ನಾರಾಯಿನ ನಾರಾಯಿನ ದೇವೋ ಸತ್ಯನಾಪುರದ ಎರಮನೆಹ್‌ಗೆನೋ…. ಆರಿಯಬನ್ನಾರ್ ಬಿರುಮಾಳ್ವೆರ್ ಬಿರಿ ಅಜ್ಜರ್ ಉಳ್ಳೇರ್‌ಗೆನೊ ……………………………. ……………………………. ಆವನಮಗೊಡು ಪನ್ವೇರ್ ಅಜ್ಜೀರ್ ನಾರಾಯಿನ ನಾರಾಯಿನ ದೇವೋನಾರಾಯಿನ ನಾರಾಯಿನ ದೇವೋ ಎನ್ನ ಬೆರಮ್ಮವೋ ಎನ್ನ ಜಯವುಳ್ಳ ಬೆರಮ್ಮವೊ ಎನ್ನಾ ಜಯವುಳ್ಳ ಬೆಮ್ಮೇರೇ ಯಾನ್ ವತ್ತಿ ಕೆಲಸೊ ಯೇರ್ ಬಿ ಗಡ್ಡಿಗೆಡೋ ಮಾಜಿ ಮೂರ್ತಿತೀ….. ಸುತ್ತುಬಲಿ……….. ನಾರಾಯಿನ ಜಾ ನಾರಾಯಿನೋ ಜಾ.. ಜಾ…..! ಇನಿ ಸತ್ಯನಾಪುರಂದೆಯನೆಡ್‌ಗೆನ ಆರಿಯ ಬನ್ನಾರೆ ಬೆರ್ಮು ಮೂಲವೆರ್ ಅಜ್ಜೇರ್‌ಗೆನಾ ನಾಲ್‌ಊರು ನಾಲ್ ಡೇನೊನು.. ಅಜ್ಜೇರೆ ಪುದಾರ್ ಪೊರಪ್ಪು ಪೋತುಂಡೋ ಆ ಜಾ ಆ ಜಾ…. ಜಾ….. ಅಜ್ಜೇರೇ ಜಾ….. ಜಾ …..ಡೆನ್ನ ಡೆನ್ನೊ ಡೆನ್ನ ಡೆನ್ನೊ ಡೆನೆ ಡೆನ್ನಾನೆ ಹೇ…….ಹಾ! ಡೆನ್ನ ಡೆನ್ನ ಡೆನ್ನ ಡೆನ್ನಾ ಡೆನ್ನಾ ಹೇ ಜಾ ಸಚ್ಚನಾಪುರೊದು ಬಾರೋನು ಇತ್ತೇರೆ, ದುಬುದ ಕಾಲೊಡುಯೇ ಹಾ ದುಂಬುದುಂಬೇ ಕಾಲೊಡು ಬಾರೊನು ನೆರೆವೊನು ಆನಿಗೇ ಇಪ್ಪುನಗ
ಕನ್ನಡ ಅನುವಾದ : ನಾರಾಯಣ ನಾರಾಯಣ ದೇವಾ ಸತ್ಯನಾಪುರದ ಅರಮನೆಯಲ್ಲಿ ಆರಿಯ ಬನ್ನಾರ್ ಕುಟುಂಬದ ಬಿರ್ಮು ಆಳ್ವರು ಒಬ್ಬರು ಅಜ್ಜರು ಇದ್ದಾರಂತೆ …………………………… ಆ ಸಮಯದಲ್ಲಿ ಅಜ್ಜರೆಂದರು ನಾರಾಯಣ ನಾರಾಯಣ ದೇವಾ ಕನ್ನಡ ಅನುವಾದ : ನಾರಾಯಣ ನಾರಾಯಣ ದೇವಾ ನನ್ನ ಬೆರ್ಮಾ ಜಾ ನನ್ನ ಕೀರ್ತಿಪಡೆದ ಬೆರ್ಮರೊ ನಾನು ಹಿಡಿದ ಕೆಲಸ ಹೇರುವಗದ್ದುಗೆಯಲ್ಲಿ ಮೂರು ಮೂರ್ತಿಗಳ ಸುತ್ತು ಬಲಿ……….. ಕನ್ನಡ ಅನುವಾದ : ನಾರಾಯಣ ಜಾ ನಾರಾಯಣ ಜಾ ಇಂದು ಸತ್ಯನಾಪುರದ ಅರಮನೆಯಂತೆ ಆರ್ಯ ಬನ್ನಾರ್ ಬೆರ್ಮ ಮಾಳವರು ಅಜ್ಜರಂತೆ ನಾಲ್ಕು ಊರು ನಾಲ್ಕು ದೇಶವನು ಅಜ್ಜರ ಹೆಸರು ಕೀರ್ತಿ ಪಡೆದಿದೆ. ಆ ಜಾ ಆ ಜಾ…. ಜಾ….. ಅಜ್ಜರೂ ಜಾ….. ಜಾ….. ಕನ್ನಡ ಅನುವಾದ : ಡೆನ್ನ ಡೆನ್ನೊ ಡೆನ್ನ ಡೆನ್ನೊ  ಡೆನ್ನಾನೆ ಹೇ…….ಹಾ! ಡೆನ್ನ ಡೆನ್ನ ಡೆನ್ನ ಡೆನ್ನಾ ಡೆನ್ನಾ ಹೇ ಜಾ ಸಚ್ಚನಾಪುರದಲಿ ಆಳುತ್ತಾ ಇದ್ದರು  ಹಿಂದಿನ ಕಾಲದೊಲಯ್ಯ ಹಾ ಹಿಂದೆ ಹಿಂದಿನ ಕಾಲದದಲಿ ಆಳುತ್ತಾ ಮೆರೆಯುತ್ತಾ ಅಂದಿಗೆ ಇರುತಿರಲು
೯. ದೀರ್ಘತೆ – ಗಾತ್ರ ೨೨೫೦ ಸಾಲುಗಳು ೧೫೬೮೩ ಸಾಲುಗಳು ೭೦೫ ಸಾಲುಗಳು ೩೫೦ ಸಾಲುಗಳು
೧೦. ಸೂತ್ರ (Formula) : ಹಾಡುಗಾರರ ಮಾನಸಿಕ ಪಠ್ಯವೆಂದರೆ ಸಿದ್ಧ ಸೂತ್ರಗಳ ಕಟ್ಟುಗಳು; ಕತೆಯ ತುಣುಕುಗಳು (episodes); ಶೈಲೀಕೃತ ಭಾಷೆಯ ಬೆಸುಗೆ ತುಳು : • ಅಯ್ಯಯ್ಯೊ ಪಾಪೊನೆ ಉಲೊಉಲೊ ದೋಸೊನೆ ಓ ಹಿರಿಯಾಕ್ಲು ಇದ್ದಿ ದುಂಬುಪುಟ್ಟಿನ ಪಳಿಯಾಡಿಕುಲು ಇದ್ದಿ ಬೊಕ್ಕಪುಟ್ಟಿನ ತಂಗಡಿಯಾಡಿಕುಲು ಇದ್ದಿ ಮಗಿಕಲಾಡ್‌ಪುಟ್ಟಿನ ಮರ್ಮಾಲಡಿಕುಲು ಇದ್ದಿ ಮೊರಂವುದು ಪುಟ್ಟಿನ ಪುಳ್ಳಿಯಾಡಿಕಲು ಇದ್ದಿ

• ಗಿಂಡ್ಯೆಡ್ ನೀರ್ ಬಟ್ಟಲ್‌ಡ್‌ಪೇರ್

• ಸಂಬರಮೀರಿ ಕಜಿಪು ಸೂಂಚಿ ಮೀರಿ ಕಸಾಯ

• ಬಟ್ಟಾಲ್ ಬಂಜಿ ಶಾಮಿಯೊಂದು ಬೈದಂಡ್ ತಿಪ್ಪಿಲ್‌ಮಿರೆಟ್ ಕಪ್ಪುಲ್ಲಮಯಿ ತೋಲೊಂದು ಬೈದಂಡ್

ತುಳು :• ತುಳುನಾಡ ರಾಜೊ ಮಲೆನಾಡ ದೇಸೊ

• ಪೋಯಿ ಕುಮಾರಾಪೋಯಿ ಮುಕ್ಕಾಲ್ ಮೂಜೀಗಳಿಗೆದಾ ಜೊಗೊನಮ ಕೊರುಕೊ ನಮ್ಮ ಕೂಟು ಕುಟುಂಬೊಗು ಆರಾ ಬಾರಾ ಉರಿ ಸಿರಿ

• ನಾರಾಯಿನ ಕುಮಾರಾ ಆಟಾ ಪಾಠೊ ಬರವು ಪರವುದಲೆಕ್ಕಾ ಪಂಡೊನೂ ಕಲ್ಪಾವೊನೂ ಬಲ ಕುಮಾರಾ ಬಲೋ ಸೋ

 

ತುಳು :• ಮೈಲೆ ಮಾತೆರ್ ಮಡಿತುತತ್ಯೆರ್

• ಪಂಡ್ ಕೊರಿ ಪಾತೆರಲಾ ಕಟ್ಟ್‌ಕೋರಿ ಪೊದಿಕೆಲಾ

• ಎಕ್ಕಿನಾಯ ಬಂಜಿ ತೂಯರ್ ಮಾಸಿನಾಯತರೆ ತೂಯೆರ್

• ಬಾಯಿಡ್ ಸುತಿ ಮುಂಕುಡುಬೀಣೆ ಕೈಟ್ ತಾಲಾ ತಂಬೂರಿಗೆನಾ

• ನಲಿತ್ ನಾಲಾಟ ಗುಣಿತ್ ಮೂಜಾಟ ಈರೆನ ಗೊಬ್ಬು ಯಾವುಗೆನಾ

 

ತುಳು :• ಪಿಂಗಾರದ ಪಾಲೆಡ್ ಗಂಧೊದ ಗುಳಿಗೆಡ್

• ದಡ್ಕಲಕ್ಕೆ ಕುಡ್ತುಕುಲ್ಯೆ

• ಆಜಿ ಎಸಳ್‌ಡ್ ಮೂಜಿ ಕುಸುಮೊಡು

• ನೆತ್ತೆರ್‌ಡ್ ಪುಟ್ಟುದಿಜಿ ನೀರ್‌ಡ್ ಬಳತ್ತ್‌ದಿಜಿ

• ಅಯ್ಯೊ ಪಾಪೊನೆ ಉಲ ಉಲ ದೋಷನೆ

 

ಕನ್ನಡ :• ಅಯ್ಯಯ್ಯೊ ಪಾಪವೆ ಎಲ ಎಲಾ ದೋಷವೆ ಓ ಹಿರಿಯರಿಲ್ಲ ಕಿರಿಯರಿಲ್ಲ ಮೊದಲು ಹುಟ್ಟಿದ ಅಕ್ಕಂದಿರಿಲ್ಲ ಮತ್ತೆ ಹುಟ್ಟಿದ ತಂಗಿಯಂದಿರಿಲ್ಲ ಮಗ್ಗುಲಲ್ಲಿನ ಸೊಸೆಯಂದಿರಿಲ್ಲ ಮೊಣಕಾಲಿನಲ್ಲಿ(ಆಡುವ) ಮೊಮ್ಮಕ್ಕಳಿಲ್ಲ

• ಗಿಂಡಿಯಲ್ಲಿ ನೀರು ಬಟ್ಟಲಲ್ಲಿ ಹಾಲು

• ಸಂಬರ ಮೀರಿದ ಪಲ್ಯ ಶುಂಠಿ ಮೀರಿದ ಕಷಾಯ

• ಬಟ್ಟಲು ಬಸಿರು ರೂಪು ಪಡೆಯಿತು ಚಿಪ್ಪುಮೊಲೆಯಲ್ಲಿ ಕಪ್ಪು ಕಾಡಿಗೆ ತೋರಿ ಬಂತು.

ಕನ್ನಡ :• ತುಳುನಾಡ ರಾಜೊ ಮಲೆನಾಡ ದೇಶ

• ಹೋಗೋಣ ಕುಮಾರ  ಹೋಗೋಣ ಮುಕ್ಕಾಲು ಮೂರು ಗಳಿಗೆಯೂ ಜೋಗ ನಾವು ಕೂಡೋಣ ನಮ್ಮ ಕೂಡು  ಕುಟುಂಬಕ್ಕೆ ಅಭಯ ಹೊಣೆಭಾರ ಅದೃಷ್ಟ ಸಿರಿಸಂಪತ್ತು

• ನಾರಾಯಣ ಕುಮಾರಾ ಆಟಾಪಾಠಾ ಬರೆದು ಓದುವಂತೆ ತಿಳಿಸುತ್ತ ಕಲಿಸುತ್ತ ಬಾ ಕುಮಾರಾ ಬಾ ಸೋ

ಕನ್ನಡ :• ಮೈಲಿಗೆ ಬಟ್ಟೆ  ಬದಲಿಸಿದರು ಮಡಿವಸ್ತ್ರ ಉಟ್ಟುಕೊಂಡರು

• ಹೇಳಿ ಕೊಟ್ಟ ಮಾತೂ ಕಟ್ಟಿ ಕೊಟ್ಟ ಬುತ್ತಿಯೂ

• ಹಸಿದವನ ಹೊಟ್ಟೆ ನೋಡಿದರು ಸೋತವನ ತಲೆ ನೋಡಿದರು

• ಬಾಯಿಯಲ್ಲಿ ಸ್ತುತಿ ಮೂಗಿನಲ್ಲಿ ಣೆ ಕೈಯಲ್ಲಿ ತಾಳ ತಂಬೂರಿಯಂತೆ.

• ನಲಿದು ನಾಲ್ಕಾಟ ಗುಣಿಸಿ ಮೂರಾಟ ನಿಮ್ಮ ಆಟ ಸಾಕಂತೆ

 

ಕನ್ನಡ :• ಹಿಂಗಾರದ ಹಾಳೆಯಲ್ಲಿ ಗಂಧದ ಗುಳಿಗೆಯಲ್ಲಿ

• ಒಮ್ಮೆಲೇ ಎದ್ದ ಕೊಡವಿ ಕುಳಿತ

• ಆರು ಎಸಳಿನಲ್ಲಿ ಮೂರು ಕುಸುಮದಲ್ಲಿ

• ರಕ್ತದಲ್ಲಿ ಹುಟ್ಟಿಲ್ಲ ನೆತ್ತರಲ್ಲಿ ಬೆಳೆದಿಲ್ಲ

• ಅಯ್ಯಯ್ಯೊ ಪಾಪವೇ ಏನಪ್ಪಾ ದೋಷವೇ

ಸಿರಿಪಠ್ಯ

ಸಿರಿಕಾವ್ಯವನ್ನು ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ಹಾಡುಗಾರರಿಂದ ಹಾಡಿಸಿ ಸಂಗ್ರಹಸಿದಾಗ ಅವೆಲ್ಲವೂ ‘ಸಿರಿಪಠ್ಯ’ವೆನಿಸಿಕೊಳ್ಳುತ್ತದೆ. ಎಂದರೆ ಸಿರಿಕಾವ್ಯದಂತಹ ‘ಮಾನಸಿಕ ಪಠ್ಯಗಳು’ ಜನಪದದಲ್ಲಿ ಒಂದಕ್ಕಿಂತ ಹೆಚ್ಚು ಇವೆ ಎಂದ ಹಾಗಾಯಿತು. ಆಗ ಅವನ್ನು ‘ಬಹುಪಠ್ಯ’ ಎಂದೂ ಸ್ವೀಕರಿಸಬಹುದು. ಬಹು ಪಠ್ಯ ಎಂದರೆ ಬೇರೆ ಬೇರೆ ಪಾಠಗಳು, ಪಾಠಾಂತರಗಳು ಸಿರಿಪಠ್ಯದ ಅಂತರ್ ಪಠ್ಯೀಯ ಸಂಬಂಧಗಳ ಪರಿಶೀಲನೆಗಾಗಿ ಸಿರಿಪಾಡ್ದನದ ನಾಲ್ಕು ಪಾಠಗಳನ್ನು ಇಲ್ಲಿ ನಾನು ಆಯ್ಕೆ ಮಾಡಿ ಕೊಂಡಿದ್ದೇನೆ.

೧. ರಾಮಕುಂಜತ್ತೂರು ಹಾಡಿರುವ ‘ಸತ್ಯನಾಪುರದ ಸಿರಿ’; ಸಂಗ್ರಹ ಅಮೃತ ಸೋಮೇಶ್ವರ, ೧೯೭೨.

೨. ಗೋಪಾಲನಾಯಕ ಮಾಚಾರು ಹಾಡಿರುವ ಸಿರಿ ಮಹಾಕಾವ್ಯ : ಸಂಗ್ರಹ : ಲೌರಿಹಾಂಕೋ, ಕೆ. ಚಿನ್ನಪ್ಪಗೌಡ, ಅನೇಲಿ ಹಾಂಕೋ, ಬಿ.ಎ. ವಿವೇಕ ರೈ. ೧೯೯೮

೩. ಗಿಡಿಗೆರೆ ರಾಮಕ್ಕ ಮುಗೇರ‍್ತಿ ಹಾಡಿರುವ ‘ಸಿರಿ ಪಾಡ್ದನ’ : ಸಂಗ್ರಹ ಎ.ವಿ. ನಾವಡ ೧೯೯೯

೪. ಕುಂದಪರವ ಬಂಗಾಡಿ ಹಾಡಿರುವ ‘ತೇಮಕಲ್ಲ ಪಂಜಳ ಪಾಡ್ದನ’ : ಸಂಗ್ರಹ: ವಿವೇಕ ರೈ, ಯದುಪತಿಗೌಡ, ರಾಜಶ್ರೀ.

೧೧. ತೆ (Story) :

ಭಿನ್ನ ಪಾಠಗಳನ್ನು ತಳೆವ ಪಾಡ್ದನವೊಂದು ತನ್ನ ಕತೆಯಲ್ಲೂ ಮಾರ್ಪಾಡು ತೋರುವು ದುಂಟು. ಕತೆಯನ್ನು ಆಶಯಗಳ (motif) ದೃಷ್ಟಿಯಿಂದ ಗಮನಿಸಬಹುದು.  ಇಲ್ಲಿರುವ ನಾಲ್ಕು ಪಠ್ಯಗಳಲ್ಲಿ ಕೊನೆಯದ್ದನ್ನು ನೋಡಿದರೆ ಕತೆಯ ಆಶಯ ಬೇರೆಯೇ ಆಗಿ ಕಾಣಿಸು ತ್ತದೆ. ಕುಂಡಪರವ ಹಾಡಿರುವ ‘ ಕ್ಷೇಮಕಲ್ಲ ಪಂಜುರ್ಲಿ’ ಹೇಳುವುದು ಸಿರಿಯ ಕತೆಯನ್ನೇ. ಒಂದು ಪಾಡ್ದನದ ಕತೆಯೆನ್ನುವುದು ಹಲವು ಪರಿವರ್ತನಶೀಲ ಆಶಯಗಳ ಒಂದು ಗೊಂಚಲಾಗಿರುತ್ತದೆ. ಇಲ್ಲಿನ ನಾಲ್ಕು ಪಠ್ಯಗಳಲ್ಲಿ ‘ಕ್ಷೇಮಕಲ್ಲ ಪಂಜುರ್ಲಿಯ’ ಕತೆಯ ಹೆಣಿಗೆ ಬೇರೆಯೇ ಆಗಿರುವುದು ಕಾಣಿಸುತ್ತದೆ. ಪಾಡ್ದನದ ಹೆಸರಲ್ಲಿ ಪಂಜುರ್ಲಿ ಎನ್ನುವ ಹೆಸರಿದ್ದರೂ ಅಲ್ಲೆಲ್ಲೂ ಆರಂಭದಲ್ಲಿ ಪಂಜುರ್ಲಿಯ ಹುಟ್ಟಿನ ಬಗೆಗೆ ಏನೂ ಹೇಳುವು ದಿಲ್ಲ. ಅಲ್ಲಿ ಅಜ್ಜರ ಹೆಸರು ಬರುತ್ತದೆ. ಅಜ್ಜರ ಬೈಲು, ಭೂಮಿ, ಭಂಡಾರ ಬಾಳಿನ ಬಗೆಗೆ ಬರುತ್ತದೆ. ಲಂಕೆಲೋಕನಾಡು ಬ್ರಹ್ಮವರ ಬಗೆಗೆ ಬರುತ್ತದೆ. ಭಿಕ್ಷೆ ಬೇಡಲು ಬರುವ ಬ್ರಾಹ್ಮಣನ ಹೆಸರು ಬರುತ್ತದೆ. ಏಳು ಮಂದಿ ಸಿರಿಗಳಿಗೆ ಸಿರಿಗುಂಡ, ಭೂತಗಳಿಗೆ ಭೂತಸ್ಥಾನ ಕಟ್ಟಿಸಿರಿ ಅಜ್ಜ ಎಂದೆಲ್ಲ ಬೇರೆಯೇ ಆಶಯಗಳು ಕಾಣಿಸಿಕೊಳ್ಳುತ್ತವೆ. ಇಲ್ಲೆಲ್ಲ ಸಿದ್ಧ ಸೂತ್ರಗಳು, ನುಡಿಗಟ್ಟುಗಳಿಗಿಂತ ನೇರ ಪ್ರಶ್ನೋತರಗಳ ಬಂಧ ಇದೆ.

ನಾವಡರು (೨೦೦೪) ತಮ್ಮ ತುಳು ಪಾಡ್ದನ : ಬಂಧ ಮತ್ತು ವಿನ್ಯಾಸ ಕೃತಿಯಲ್ಲಿ ಹೇಳುವ ಹಾಗೆ “ಇಡಿಯ ಪಾಡ್ದನ ಪ್ರದರ್ಶನ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಸೂತ್ರಾತ್ಮಕ ಅಭಿವ್ಯಕ್ತಿಗಳು ಪ್ರದೇಶದಿಂದ ಪ್ರದೇಶಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದುಂಟು.”  ಇಲ್ಲಿ ಗೋಪಾಲನಾಯ್ಕ ಮತ್ತು ಕುಂಡಪರವ ಅವರ ಸಿರಿಕತೆಯ ಅಭಿವ್ಯಕ್ತಿಯಲ್ಲಿ ವ್ಯತ್ಯಾಸ ಇದೆ.

“ಓ ಯಾರೆಲೋ ಯಾರೆಲೋ ರಭದ್ರ ನನ್ನನ್ನು ಮುಟ್ಟಬೇಡ. ಮುಟ್ಟಬೇಡ ಓ ಮುಟ್ಟಬೇಡ” ಎಂದರು ಬಾಲೆಕ್ಕ “ಸಿರಿ”. ರಭದ್ರ ಹೇಳಿದ ಮಾತು ಕೇಳಲಿಲ್ಲ.

“ಹರಿವ ನದಿಯಲ್ಲಿ ಪಾರೆ ಕಲ್ಲಾಗಿ ನಿಂತಿರು” ಎಂದು ಶಾಪನೀಡಿ ಬಾಲೆಕ್ಕ ಸಿರಿ ಮುಂದೆ ಬೋಳದ ಪದವಿಗೆ ಹೋಗುತ್ತಾರೆ. ಪುಟ್ಟುಬಳಕೆಯ ಪಾಡ್ದನಗಳು ಗ್ರಂಥದ ಸಂಪಾದಕರಲ್ಲಿ ಒಬ್ಬರಾದ ಪ್ರೊ. ವಿವೇಕ ರೈ (೨೦೦೪, ೫ – ೨೭) ಅವರು ಗ್ರಂಥದ ಪ್ರಸ್ತಾವನೆಯಲ್ಲಿ ಕುಂಡ ಪರವನಂತಹ ಪಾಡ್ದನ ಗಾಯಕರ ಕಿರುಪರಿಚಯ ನೀಡಿರುತ್ತಾರೆ. ಕುಂಡಪರವ ನಿರೂಪಿಸಿದ ಕ್ಷೇಮಕಲ್ಲ ಪಂಜುರ್ಲಿ ಪಾಡ್ದನವನ್ನು ಗ್ರಹಿಸಿಕೊಳ್ಳಲು ಈ ಭಾಗದ ಓದು ಅತ್ಯಂತ ಅಗತ್ಯ ವೆನಿಸುತ್ತದೆ. ಕುಂಡಪರವ ಕಳೆದ ನಲವತ್ತು ವರ್ಷಗಳಿಂದ ಭೂತಕಟ್ಟುವ ವೃತ್ತಿಯನ್ನು ಮಾಡುತ್ತಾ ಬರುತ್ತಿದ್ದಾರೆ. ಕ್ಷೇಮಕಲ್ಲ ಪಂಜುರ್ಲಿ ಆರಾಧನೆ ಸಿರಿ ಆರಾಧನೆಯ ಸಂದರ್ಭ ದಲ್ಲಿ ನಡೆಯುತ್ತದೆ.

ಅನೇಕ ಸನ್ನಿವೇಶಗಳು ಗಾಯಕರ ನೆನಪಿನ ಭಂಡಾರದಲ್ಲಿ ನಿರ್ದಿಷ್ಟ ಭಾಷಿಕ ಶೈಲಿಯ ರಚನೆಗಳಾಗಿ ದಾಖಲೆಗೊಳ್ಳುವ ಮಾದರಿಗಳನ್ನು ಲೌರಿ ಹಾಂಕೊ ‘ಬಹುರೂಪಗಳು’ (multiforms) ಎಂದಿರುವುದನ್ನೂ, ಬೇರೆ ಬೇರೆ ಸನ್ನಿವೇಶಗಳಲ್ಲಿ ಈ ಕಲಾವಿದರು ಕಲಿತು ಅನುಭವಿಸಿದ ಪಾಡ್ದನಗಳ ಭಾಗಗಳ ಒಟ್ಟು ಸೇರಿ ರೂಪುಗೊಳ್ಳುವ ಗಾಯಕರು ‘ಮಾನಸಿಕ ಪಠ್ಯ’ (mental test) ವನ್ನು ಕಟ್ಟುವ ಸ್ವರೂಪ ಸಾಧ್ಯತೆ ಪ್ರಕ್ರಿಯೆಯ ಕಡೆಗೆ ಗಮನ ಸೆಳೆಯುತ್ತಾರೆ.

೧೨. ನಿರೂಪಕ ಲಿಂಗ ಮತ್ತು ಪಠ್ಯ ಸ್ವರೂಪ

ನಿರೂಪಕರ ಲಿಂಗ ಮತ್ತು ಪಠ್ಯ ಸ್ವರೂಪದ ಸಂಬಂಧವನ್ನು ತಿಳಿಯಲು ಡಾ. ಗಾಯತ್ರಿ ನಾವಡರು (೧೯೯೭, ೫೦ – ೭೪) ಸಿರಿ ಪಾಡ್ದನದ ಮಹಿಳಾ ಪಠ್ಯ ಮತ್ತು ಪುರುಷ ಪಠ್ಯಗಳನ್ನು ಆಯ್ದುಕೊಂಡು ಪರಿಶೀಲಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಸಿರಿಪಾತ್ರಿಣಿ ಶ್ರೀಮತಿ ಕಾವೇರಿ ಅವರಿಂದ ಸಿರಿಪಾಡ್ದನದ ಮಹಿಳಾಪಠ್ಯವನ್ನು ಅವರು ಸಂಗ್ರಹಿಸಿದ್ದಾರೆ. ಸಿರಿ ಪಾತ್ರಿಯೇ ಆಗಿದ್ದ ರಾಮಕುಂಜತ್ತೂರು ಅವರಿಂದ ಅಮೃತ ಸೋಮೇಶ್ವರರು ಸಂಗ್ರಹಿಸಿರುವ ಪುರುಷ ಪಠ್ಯದ ಜೊತೆಗಿಟ್ಟು ಈ ಇಬ್ಬರ ಸಿರಿಪಠ್ಯವನ್ನು ಆಯ್ದುಕೊಳ್ಳುವಲ್ಲಿ ಅವರ ಹಿನ್ನೆಲೆಯನ್ನು ಅವರು ವಿಶೇಷವಾಗಿ ಗಮನಿಸುತ್ತಾರೆ. ಅವರ ಪ್ರಕಾರ ಲಿಂಗವನ್ನು ಹೊರತುಪಡಿಸಿ ನೋಡಿದರೂ ಈ ಇಬ್ಬರು ಪಾಡ್ದನಕಾರರಲ್ಲಿ ಅನೇಕ ಸಮಾನ ಅಂಶಗಳನ್ನು ಅವರು ಗುರುತಿಸುತ್ತಾರೆ. ಅವರಿಬ್ಬರೂ ದೀರ್ಘಕಾಲ ಸಿರಿ ಮತಾಚರಣೆಯಲ್ಲಿ ಸಿರಿ ಪಾತ್ರಿಯರಾಗಿದ್ದು ಬಹಳಷ್ಟು ಅನುಭವವಿರುವವರು. ಇಬ್ಬರ ಪಾಡ್ದನದ ಪ್ರದರ್ಶನ ಸಂದರ್ಭ ಒಂದೇ ಆಗಿದೆ ಎನ್ನುವುದೂ ಗಮನಿಸಬೇಕಾದ್ದು. ಇಬ್ಬರೂ ತುಳು ಮಾತೃಭಾಷಿಕರು ಮತ್ತು ಮಾತೃವಂಶೀಯರು ಹಾಗೂ ಬ್ರಾಹ್ಮಣೇತರ ವರ್ಗಕ್ಕೆ ಸೇರಿದವರು. ಈ ಎಲ್ಲ ಸಮಾನಾಂಶ ಗಳ ಹಿನ್ನೆಲೆಯಲ್ಲಿ ಪಠ್ಯವೊಂದು ಪಡೆದುಕೊಂಡ ಭಿನ್ನ ಸ್ವರೂಪ ಏನು? ಈ ಭಿನ್ನತೆಯ ಪ್ರಮಾಣ ಮತ್ತು ವಿನ್ಯಾಸ ಏನು? ಎನ್ನುವುದನ್ನು ಪರಿಶೀಲಿಸುವುದು ಇಲ್ಲಿ ಗಾಯತ್ರೀ ನಾವಡರ ಪ್ರಧಾನ ಉದ್ದೇಶವಾಗಿದೆ. ಇದಕ್ಕಾಗಿ ಬಹುದೀರ್ಘವಾದ ಸಿರಿಪಾಡ್ದನದ ಮೂರು ಮುಖ್ಯ ಪ್ರಕರಣಗಳನ್ನು ಅವರು ಗುರುತಿಸಿಕೊಂಡು ಈ ಭಿನ್ನತೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.

೧. ಸಿರಿಯ ಅಜ್ಜ ಬೆರ್ಮು ಆಳ್ವ ಸತ್ತಾಗ ಅರಮನೆಯ ಹಕ್ಕು ಮತ್ತು ಅಧಿಕಾರದ ಪ್ರಶ್ನೆ ಯನ್ನು ಮುಂದಿಟ್ಟು ಸಿರಿಯನ್ನು ಕೂಟದ ಕಳಕ್ಕೆ ಕರೆಯುವ ಪ್ರಸಂಗ.

೨. ಗಂಡ ಕಾಂತುಪೂಂಜನ ಅನೈತಿಕ ಹಾಗೂ ಅನ್ಯಾಯವನ್ನು ಪ್ರತಿಭಟಿಸಿ ಸಿರಿ ಕೇಳುವ ಬರ (ವಿಚ್ಛೇದನ) ಪ್ರಸಂಗ.

೩. ಮಗ ಕುಮಾರನ ಪ್ರತಿರೋಧವನ್ನು ಮೀರಿ ಸಿರಿ ಕೊಡ್ಸರಾಳ್ವನನ್ನು ಮರು ಮದುವೆಯಾಗುವ ಪ್ರಸಂಗ.

ಈ ಮೂರು ಸಂದರ್ಭಗಳು ಸ್ತ್ರೀತ್ವವನ್ನು ‘ಸ್ತ್ರೀ’ ಎಂಬ ಸಾಂಪ್ರದಾಯಿಕ ಪರಿಕಲ್ಪನೆಯಿಂದ ಭಿನ್ನವಾಗಿ ಪ್ರಕಟಿಸಿ ಸ್ತ್ರೀತ್ವವನ್ನು ಹೊಸದಾಗಿ ನಿರ್ವಚಿಸುತ್ತದೆ ಎನ್ನುವುದನ್ನು ಪರಿಶೀಲಿಸಲು ಅವರು ಕೂಟಗಳ, ಬರ, ಮರುಮದುವೆಗಳಿಗೆ ಸಂಬಂಧಿಸಿದಂತೆ ಪುರುಷ ಪಠ್ಯ ಮತ್ತು ಮಹಿಳಾ ಪಠ್ಯಗಳು ಬಳಸಿಕೊಂಡಿದ್ದಾರೆ. ಲಿಂಗ, ಲಿಂಗ ಪ್ರಭೇದ ಮತ್ತು ಪಠ್ಯದ ಸಂಬಂಧವನ್ನು ಅಳೆಯುವ ಮಾನದಂಡಗಳು ಪ್ರಧಾನವಾಗಿ ಮೂರು ಅಂಶಗಳು. ಅವು ಪಠ್ಯವೊಂದರ ಪ್ರದರ್ಶನ ಸಂದರ್ಭ, ವಸ್ತು ಪರಿಕರ ಹಾಗೂ ಕಾವ್ಯಾತ್ಮಕ ಮತ್ತು ಶೈಲಿಕ ಸ್ವರೂಪಗಳು ಎಂಬುದಾಗಿ ಗಮನಿಸಿದ್ದಾರೆ. ಪುರುಷ ಪಠ್ಯದ ಗಮನ ಪುರುಷನ ಅಧಿಕಾರ, ಅಸ್ತಿತ್ವದ ಕಡೆಗಿದ್ದು ಆ ಬಗೆಗೆ ಒತ್ತು ನೀಡಲಾಗುತ್ತದೆ. ಪುರುಷಾಧಿಕಾರವನ್ನು ಸ್ಥಾಪಿಸುವ ಈ ತುಡಿತ ಪಠ್ಯದ ಹೆಣ್ಣು ಪುರುಷನ ಅಸ್ತಿತ್ವಕ್ಕೆ ಪ್ರಶ್ನೆ ಒಡ್ಡಿದಲ್ಲೆಲ್ಲಾ ಅವಳನ್ನು, ಅವಳ ಹೆಣ್ಣುತನವನ್ನು ಮುಚ್ಚಿ ಹಾಕಲಾಗುತ್ತದೆ. ಪುರುಷ ಪಠ್ಯ ಮುಚ್ಚಿ ಹಾಕಿದ ಈ ಪುಟಗಳನ್ನು, ಅಧ್ಯಾಯಗಳನ್ನು ಮಹಿಳಾ ಪಠ್ಯ ಹೊರತೆಗೆಯುವ ಪ್ರಯತ್ನ ಮಹಿಳಾ ಪಠ್ಯದಲ್ಲಿ ಕಾಣಿಸುತ್ತದೆ ಎನ್ನುವ ಅಭಿಪ್ರಾಯಗಳನ್ನು ಗಾಯತ್ರಿ ನಾವಡರ ಅಧ್ಯಯನ ದಾಖಲಿಸಿದೆ.

೧೩. ಹಾಡಿದ ಪಠ್ಯ ಮತ್ತು ಹೇಳಿ ಬರೆಸಿದ ಪಠ್ಯ

ಸಿರಿ ಮಹಾಕಾವ್ಯದ ಬೃಹತ್ ಪಠ್ಯವೊಂದನ್ನು ದಾಖಲಿಸುವ ಉದ್ದೇಶದಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಬೆಳಾಲು ವೂಚಾರು ಪರಿಸರದ ಮೂಡಲ ಮನೆಯ ಗೋಪಾಲ ನಾಯ್ಕ ಎನ್ನುವ ಕಲಾವಿದರಿಂದ ಬಹುಮುಖೀ ದಾಖಲಾತಿಯ ವಿಧಾನವನ್ನು ಅನುಸರಿಸಿ ಸಿರಿಪಠ್ಯವನ್ನು ಪಡೆದಿರುವ ಪ್ರಯತ್ನ ತುಳು ಜಾನಪದ ಅಧ್ಯಯನದಲ್ಲಿ ಒಂದು ಅತ್ಯಂತ ಮಹತ್ವದ ಬೆಳವಣಿಗೆ.  ಲೌರಿ ಹಾಂಕೊ, ಅನ್ನೆಲಿ ಹಾಂಕೊ,  ಬಿ. ಎ. ವಿವೇಕ ರೈ ಮತ್ತು  ಕೆ. ಚೆನ್ನಪ್ಪಗೌಡರು ಸದಸ್ಯರಾಗಿದ್ದ ತಂಡವೊಂದು ಇತರ ತಂತ್ರಜ್ಞರ ನೆರವಿನಿಂದ ಇಂತಹ ಪಠ್ಯವೊಂದನ್ನು ಸಂಗ್ರಹಿಸಿರುತ್ತಾರೆ ಮತ್ತು ಅದು ಗ್ರಂಥರೂಪ ಸಂಪುಟಗಳಲ್ಲಿ ಪ್ರಕಟವೂ ಆಗಿರುತ್ತದೆ.

ಗೋಪಾಲನಾಯ್ಕ ಹಾಡಿರುವ ಮತ್ತು ಅವರಿಂದ ಹೇಳಿಸಿ ಬರೆದ ಸಿರಿ ಪಠ್ಯಗಳ ತೌಲನಿಕ ಅಧ್ಯಯನವನ್ನು ಬಹಳಷ್ಟು ಸೂಕ್ಷ್ಮವಾದ ವಿವರಗಳೊಂದಿಗೆ ವ್ಯಾಪಕ ನೆಲೆಯಲ್ಲಿ  ಕೆ. ಚೆನ್ನಪ್ಪ ಗೌಡರು (೨೦೦೩, ೧ – ೨೦) ತಮ್ಮ ಸಂಸ್ಕೃತಿ ಸಿರಿ ಅಧ್ಯಯನ ಗ್ರಂಥದಲ್ಲಿ ದಾಖಲಿಸಿ ಕೊಂಡು ಈ ಸಂಬಂಧವಾಗಿ ಹಾಡುಗಾರರಾದ ಗೋಪಾಲನಾಯ್ಕ ಅವರ ಅಭಿಪ್ರಾಯಗಳನ್ನು ದಾಖಲಿಸಿಕೊಂಡು ಚರ್ಚೆನಡೆಸಿದ್ದಾರೆ.

ಎ. ವಿ. ನಾವಡ (೧೯೯೯, ೪೨ – ೪೪) ಅವರ ಪ್ರಕಾರ ಸಿರಿ ಜಾತ್ರೆ ಸಂಪ್ರದಾಯದೊಳಗೆ ಆಯಾ ಸ್ಥಳ ಮೂಲದೈವ, ಅಲ್ಲಿಗೆ ಬರುವ ಭಕ್ತ ವರ್ಗದವರ ಸಾಮಾಜಿಕ /ಭೌಷಿಕ ಹಿನ್ನೆಲೆಗನುಗುಣವಾಗಿ ಬೇರೆ ಬೇರೆ ಪ್ರದರ್ಶನ ಸಂಪ್ರದಾಯಗಳು ಹುಟ್ಟಿಕೊಳ್ಳುತ್ತವೆ.  ಹೀಗಾಗಿ ಸಿರಿ ಸಂಪ್ರದಾಯಗಳೊಳಗೆ ಅನೇಕ ಪಠ್ಯಗಳು ಸಿಗಬಹುದು. ಮಹಿಳೆಯರು ವಿಶೇಷವಾಗಿ ಸಿರಿಪಾಡ್ದನದ ಅಬ್ಬಗ ದಾರಗ ಪ್ರಸಂಗವನ್ನು ನಾಟಿಗದ್ದೆಯಲ್ಲಿ ಹಾಡುತ್ತಾರೆ.  ಇವು ಸುದೀರ್ಘವಾಗಿರುತ್ತವೆ. ಆದರೆ ಅದೇ ಮಹಿಳೆಯರು ಸಿರಿಜಾತ್ರೆಯಲ್ಲಿ ಸಿರಿ ಭಕ್ತರಾಗಿ ಮೈದುಂಬಿಕೊಂಡಾಗ ಬಿಡಿ ಬಿಡಿ ತುಣುಕುಗಳನ್ನಷ್ಟೇ ಹಾಡುತ್ತಾರೆ. ನಾಟಿಗದ್ದೆಯಲ್ಲಿ ಮಹಿಳೆಯರು ಪ್ರಥಮ ಪುರುಷ ದಾಟಿಯಲ್ಲಿ ಹಾಡಿದರೆ ಸಿರಿಜಾತ್ರೆಯಲ್ಲಿ ಉತ್ತಮ ಪುರುಷರಲ್ಲಿರುತ್ತದೆ.

ಗಾಯತ್ರಿ ನಾವಡ (೧೯೯೭, ೯೧ – ೯೨) ಅವರು ಹೇಳುವಂತೆ ಸಿರಿಪಾಡ್ದನದ ಪ್ರದರ್ಶನ ಸಂದರ್ಭವನ್ನು ಬೃಹತ್ ಪಠ್ಯದ ಪರಿಕಲ್ಪನೆಯಲ್ಲಿ ಇಡಿಯಾಗಿ ಗ್ರಹಿಸಿ ಸಿರಿ ಪಂಥವನ್ನು ಅರ್ಥೈಸಬೇಕಾಗುತ್ತದೆ. ಯಾಕೆಂದರೆ ಸಿರಿ ಪಾಡ್ದನದ ಪಠ್ಯ ಸಿರಿ ಆಚರಣೆಯ ಸ್ವರೂಪವನ್ನು ನಿರ್ಧರಿಸುವಲ್ಲಿ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಆಚರಣೆಯ ಸಂದರ್ಭ ದಲ್ಲಿ ಪಾಡ್ದನದ ಪಠ್ಯ ಸ್ಪಷ್ಟಗೊಂಡು ಸಿರಿ ಪಂಥದ ಪರಂಪರೆಯ ನಿರಂತರತೆಯಲ್ಲಿ ದುಡಿಯುತ್ತದೆ.

ಅಧಿಕೃತ ಮತ್ತು ಅನಧಿಕೃತ ಪಠ್ಯ

ಮೌಖಿಕ ಮಹಾಕಾವ್ಯಗಳ ಅಧಿಕೃತ ಗಾಯಕರು ಯಾರು ಎನ್ನುವ ಪ್ರಶ್ನೆ ಎದುರಾಗು ವುದು ಸಹಜ. ಹಾಗೆ ನೋಡಿದಾಗ ಸಿರಿ ಮಹಾಕಾವ್ಯದ ಅಧಿಕೃತ ಹಾಡುಗಾರರು ಯಾರು ಎನ್ನುವುದನ್ನು ಗಮನಿಸಬೇಕಾಗುತ್ತದೆ. ಸಿರಿದರ್ಶನದಲ್ಲಿ ಪಾಲುಗೊಳ್ಳುವ ಸಿರಿ ಪಾತ್ರಿಣಿ ಯರು, ಕುಮಾರ ಪಾತ್ರಿ, ನಟ್ಟಗದ್ದೆಗಳಲ್ಲಿ ಸಿರಿಪಾಡ್ದನ ಹಾಡುವ ನಟ್ಟಿನೆಡುವ ಹೆಂಗಸರು ಮೊದಲಾದವರು. ಇವರಲ್ಲಿ ಅಧಿಕೃತ ಹಾಡುಗಾರರು ಯಾರು ಎನ್ನುವುದನ್ನು ನಿರ್ಣಯಿಸಲು ಬರುತ್ತದೆಯೇ? ಈ ಪರಂಪರೆಯ ಅಧಿಕೃತ ವಕ್ತಾರರು ಯಾರು ಎನ್ನುವುದನ್ನು ನಿರ್ಧರಿಸು ವುದು ಅಷ್ಟು ಸುಲಭವಿಲ್ಲ, ಮತ್ತು ಹಾಗೆ ಪರಿಭಾವಿಸುವುದು ಕೂಡ ಸಮಂಜಸವೆನಿ ಸುವುದಿಲ್ಲ. ಆದರೆ ಮೌಖಿಕ ಕಾವ್ಯಗಳ ಪರಂಪರೆಯ ವಕ್ತಾರರನ್ನು ಹೊರತುಪಡಿಸಿ ಇತರರಿಂದ ಹಾಡಿಸಿದಾಗ ಅದು ಅಧಿಕೃತ ಪಾಠ ಎನಿಸಿಕೊಳ್ಳಲಾರದು ಎನ್ನುವ ವಾದ ಮತ್ತು ಆಕ್ಷೇಪಗಳು ಇವೆ. ಈ ಕುರಿತು ಪೀಟರ್ ಜೆ.ಕ್ಲಾಸ್ (೧೯೯೧, ೭ – ೯) ಒಂದೆಡೆ ಆತಂಕ ವ್ಯಕ್ತಪಡಿಸಿದ್ದುಂಟು. ಅವರ ಪ್ರಕಾರ ‘ಕೃತಕ ಸಂಯೋಜಿತ ಸಂದರ್ಭದಲ್ಲಿ ಆಸಕ್ತಿ ಮತ್ತು ಕುತೂಹಲಕ್ಕಾಗಿ ಅತ್ಯಂತ ದೀರ್ಘ ಪಾಠಾಂತರದಲ್ಲಿ ಸಂಗ್ರಹಿಸುವ ಸ್ಪರ್ಧಾತ್ಮಕ ಮನೋ ವೃತ್ತಿಯಿಂದ ಸಂಗ್ರಹಿಸಿದ ಪಾಠವು ಅಧಿಕೃತವಾಗಿ ಪರಂಪರೆಯನ್ನು ಪ್ರತಿನಿಧಿಸುವ ಪಾಠವಾಗಿ ಪರಿಗಣಿಸಲ್ಪಡದು. “ಅತ್ಯಂತ ದೀರ್ಘ ಪಾಠವೊಂದಕ್ಕೆ ಸಂಗ್ರಹಕಾರನ ಆಸಕ್ತಿ ಮತ್ತು ಕುತೂಹಲಗಳ ಜೊತೆಗೆ ಆತನ ಸ್ಪರ್ಧಾತ್ಮಕ ಮನೋವೃತ್ತಿಯೂ ಕಾರಣವೆನ್ನುವ ಹೇಳಿಕೆ ತೀರ ಪೂರ್ವ ಗ್ರಹಿತವಾದುದು; ಮತ್ತು ಯಾವುದು ಅಧಿಕೃತ ಪಾಠ ಯಾವುದು ಅನಧಿಕೃತ ಪಾಠ ಎನ್ನುವುದನ್ನು ನಿರ್ಣಯಿಸುವಾಗ ಯಾವುದೋ ಒಂದು ಸಂದರ್ಭವನ್ನು ಮಾತ್ರ ಪ್ರಮಾಣ ಎಂದು ಪರಿಗಣಿಸುವುದು ಸಂಶೋಧನೆಯಲ್ಲಿ ಒಂದು ಅಪಕಲ್ಪನೆ” (ನೋಡಿ ವಾಮನ ನಂದಾವರ ೨೦೦೧, ೯೪) ಸಂಶೋಧಕನೋರ್ವ ಪಡೆದಿರುವ ಪೂರ್ವಗ್ರಹಿಕೆಯ ಸೈದ್ಧಾಂತಿಕ ನಿಲುವು ‘ಅಧಿಕೃತ’ ಮತ್ತು ‘ಅನಧಿಕೃತ’ ಪಠ್ಯಗಳನ್ನು ಹುಟ್ಟು ಹಾಕುತ್ತಿದೆ ಯೆನ್ನಬಹುದು.  ಮೌಖಿಕ ಮಹಾಕಾವ್ಯದ ರಚನೆ, ಬೆಳವಣಿಗೆ ಮತ್ತು ಅಸ್ತಿತ್ವ ಇವುಗಳ ಮೇಲೆ ನಿರೂಪಕನ / ಗಾಯಕ ಬದುಕಿನ ಅನುಭವಗಳು, ಆತನ ಪರಿಸರ, ಪ್ರಾದೇಶಿಕತೆ ಇವು ಬಹಳಷ್ಟು ಪ್ರಭಾವ ಬೀರುತ್ತವೆ. ಈ ಅಂಶಗಳನ್ನು ಗಮನಿಸಿಕೊಂಡಾಗ ಗೋಪಾಲ ನಾಯ್ಕ, ರಾಮಕ್ಕ ಮುಗ್ಗೇರ‍್ತಿ, ಮೊದಲಾದ ಹಾಡುಗಾರರ ಪಾಠಗಳು ಅನಧಿಕೃತ ಎಂದೆನಿಸು ವುದೇ ಇಲ್ಲ. ಜಾನಪದ ಅಧ್ಯಯನದ ಆಧುನಿಕ ಪರಿಕಲ್ಪನೆಯ ನೆಲೆಯಲ್ಲಿ ನೋಡಿದಾಗ ಅಧಿಕೃತ ಮತ್ತು ಅನಧಿಕೃತ ಪಾಠಗಳ ನಡುವಣ ಅಂತರ ತೀರ ಪಾರದರ್ಶಕವಾದುದು. ನಿರ್ದಿಷ್ಟ ಸಂದರ್ಭದಲ್ಲಿ ಪ್ರತಿಯೊಂದು ಪಾಠವೂ ಮಹತ್ವದ್ದಾಗಿರುತ್ತದೆ ಮತ್ತು ಅಷ್ಟೇ ಮುಖ್ಯದ್ದಾಗಿರುತ್ತದೆ.

ಆಕರ ಗ್ರಂಥಗಳು

  • ಅಮೃತ ಸೋಮೇಶ್ವರ : ೧೯೯೭ ತುಳುಪಾಡ್ದನ ಸಂಪುಟ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ಹೊಸಪೇಟೆ ತಾಲ್ಲೂಕು.
  • ಗಾಯತ್ರಿ ನಾವಡ : ೧೯೯೭ ವಿರಚನೆ, ಸ್ತ್ರೀವಾದಿ ಸಂಸ್ಕೃತಿ ಚಿಂತನ, ಎನ್. ಆರ್. ಎ. ಎಂ. ಎಚ್. ಪ್ರಕಾಶನ, ಕೋಟೇಶ್ವರ
  • ಗಾಯತ್ರಿ ನಾವಡ : ೧೯೯೯ ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ ಮತ್ತು ಸಿರಿ ಪ್ರಕಾಶನ, ಹೊಸ ಪೇಟೆ.
  • ಚಿನ್ನಪ್ಪ ಗೌಡ ಕೆ. : ೨೦೦೩ ಸಂಸ್ಕೃತಿ ಸಿರಿ, ಮದಿಪು ಪ್ರಕಾಶನ, ಮಂಗಳ ಗಂಗೋತ್ರಿ, ದಕ್ಷಿಣ ಕನ್ನಡ
  • ನಾವಡ ಎ. ವಿ. : ೧೯೯೯ ಒಂದು ಸೊಲ್ಲು ನೂರು ಸೊರ, ಕರ್ನಾಟಕ ಸಂಘ, ಪುತ್ತೂರು, ದಕ್ಷಿಣ ಕನ್ನಡ
  • ನಾವಡ ಎ. ವಿ. : ೧೯೯೯ ಗಿಡಿಕೆರೆ ರಾಮಕ್ಕ ಮುಗ್ಗೇರ‍್ತಿ ಕಟ್ಟಿದ ಸಿರಿ ಪಾಡ್ದನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  • ವಾಮನ ನಂದಾವರ : ೨೦೦೧ ಕೋಟಿಚೆನ್ನಯ ಜಾನಪದೀಯ ಅಧ್ಯಯನ, ಹೇಮಾಂಶು ಪ್ರಕಾಶನ, ಮಂಗಳೂರು – ೬
  • ವಿವೇಕ ರೈ ಬಿ. ಎ, ಯದುಪತಿ ಗೌಡ, ರಾಜಶ್ರೀ : ೨೦೦೪ ಪುಟ್ಟುಬಳಕೆಯ ಪಾಡ್ದನಗಳು, ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಮಂಗಳೂರು ವಿಶ್ವವಿದ್ಯಾನಿಲಯ.
  • Claus Peter J. : 1991 Tulu Paddanas : Text and Performance, Perspectives on Dakshina Kannada and Kodagu. Mangalore University, Decinnial Volum, Mangalore – 574 199.
  • Lauri Honko : 1998 Textalising the Siri Epic, Helsinki.