ಸಿಜಿಕೆ ಕೆಲವು ವಿವರಗಳು

ಹುಟ್ಟಿದ ಸ್ಥಳ : ಮಂಡ್ಯ, ಕರ್ನಾಟಕ ರಾಜ್ಯ

ಹುಟ್ಟಿದ ದಿನಾಂಕ : ೨೭ ಜೂನ್ ೧೯೫೦

ವಿದ್ಯಾರ್ಹತೆ : ಬಿ.ಎ. (ಆನರ್ಸ್) ಎಂ.ಎ. (ಅರ್ಥಶಾಸ್ತ್ರ)

ಉದ್ಯೋಗ : ನಿರ್ದೇಶಕರು,ಗಾಂಧಿ ಅಧ್ಯಯನ ಕೇಂದ್ರ, ಗಾಂಧಿಭವನ
ಪ್ರಾಧ್ಯಾಪಕರು,ಅರ್ಥಶಾಸ್ತ್ರ ವಿಭಾಗ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-೫೬೦ ೦೫೬

ವಾಸ : ಪಿ. ೫, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-೫೬೦ ೦೫೬

 

ಪಡೆದುಕೊಂಡಿರುವ ಪ್ರಶಸ್ತಿಗಳು/ಗೌರವಗಳು

 • ೧೯೯೫-೯೬ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
 • ೧೯೯೦ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
 • ರಶಿಯದ ಲೆನಿನ್‌ಗ್ರಾಡ್‌ನಲ್ಲಿ ಜರುಗಿದ ಸ್ಟಾನಿಸ್ಲೋವಸ್ಕೆ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ (೧೯೮೪)ದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
 • ನವದೆಹಲಿಯ ಸಂಗೀತ ನಾಟಕ ಅಕಾಡೆಮಿಯು ಏರ್ಪಡಿಸಿದ್ದ ದಕ್ಷಿಣ ವಲಯ ರಂಗೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
 • ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ.
 • ೨೦೦೩ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿ
 • ೨೦೦೩-೪ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

 

ಸಂಘಟಕರಾಗಿ ದುಡಿದಿರುವುದು

 • ‘ಸಮುದಾಯ’ ತಂಡದ ಸಂಸ್ಥಾಪಕ ಕಾರ್ಯದರ್ಶಿ
 • ಶ್ರೀಮತಿ ಇಂದಿರಾಗಾಂಧಿಯವರು ಸ್ಪರ್ಧಿಸಿದ್ಧ ಚಿಕ್ಕಮಗಳೂರು ಚುನಾವಣೆ ಸಂದರ್ಭದಲ್ಲಿ ಫ್ಸಾಸಿಸ್ಟ್ ವಿರೋಧಿ ಸಾಂಸ್ಕೃತಿಕ ರ‍್ಯಾಲಿ ಆಯೋಜಿಸಿದ್ದು.
 • ಪ್ರಗತಿಪರ ಹಾಗೂ ವೈಜ್ಞಾನಿಕ ಸಂಸ್ಕೃತಿಯನ್ನು ಹರಡಲು ಕರ್ನಾಟಕದಾದ್ಯಂತ ೩೦ ದಿನಗಳ ಎರಡು ಸಾಂಸ್ಕೃತಿಕ ಜಾತಾಗಳನ್ನು ಏರ್ಪಡಿಸಿದ್ದು.
 • ರಂಗಭೂಮಿ ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಲು ಹುಟ್ಟಿಕೊಂಡ “ರಂಗಭೂಮಿ ಕ್ರಿಯಾ ಸಮಿತಿ”ಯ ಸಂಸ್ಥಾಪಕ ಕಾರ್ಯದರ್ಶಿ.
 • ‘ರಂಗನಿರಂತರ’ ತಂಡದ ಸಂಸ್ಥಾಪಕ ಅಧ್ಯಕ್ಷ-೧೯೮೨.
 • ಬೆಂಗಳೂರಿನಲ್ಲಿ ಮೊದಲ ಬಾರಿಗೆ ೧೫೦ ದಿನಗಳ ಆಪ್ತ ರಂಗಭೂಮಿ ಕಾರ್ಯಕ್ರಮ ಏರ್ಪಡಿಸಿದ್ದು.
 • ೧೯೯೦ರಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ೧೦ ದಿನಗಳ ಯುವ ನಾಟಕ ರಚನೆಕಾರರು ಹಾಗೂ ಯುವ ನಿರ್ದೇಶಕರುಗಳ ಉತ್ಸವ ಏರ್ಪಡಿಸಿದ್ದು.
 • ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ೩೦ ವರ್ಷಗಳಾದಾಗ ಸಾಂಸ್ಕೃತಿಕ ಉತ್ಸವ ಏರ್ಪಡಿಸಿದ್ದು.
 • ಬಂಡಾಯ ಸಾಹಿತ್ಯ ಸಂಘಟನೆಯ ಸಂಸ್ಥಾಪಕ ಕಾರ್ಯದರ್ಶಿ.
 • ಕಾರ್ಯದರ್ಶಿ, ಕರ್ನಾಟಕ ರಂಗ ಕುಶಲಕರ್ಮಿಗಳ ಸಂಘ.

 

ನಾಟಕ ರಚನೆಕಾರ ಮತ್ತು ನಿರ್ದೇಶಕರಾಗಿ

 • “ಬೆಲ್ಚಿ” ಬಿಹಾರದಲ್ಲಿ ದಲಿತರ ಮೇಲೆ ಜರುಗಿದ ಹಲ್ಲೆಯನ್ನು ಆಧರಿಸಿ ರಚಿಸಿದ ನಾಟಕ. ಸಮುದಾಯ ತಂಡವು ಈ ನಾಟಕವನ್ನು ರಾಷ್ಟ್ರಾದ್ಯಂತ ೨೦೦೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ.
 • “ಸೈಕ್ಲೋನ್”, ೧೯೭೬ರಲ್ಲಿ ದಕ್ಷಿಣ ಭಾರತದಲ್ಲಿ ಚಂಡಮಾರುತದಿಂದುಂಟಾದ ಹಾನಿಯನ್ನು ಕುರಿತಂತೆ ರಚಿಸಲಾದ ನಾಟಕ. ಈ ನಾಟಕವು ರಾಜಕೀಯ ಪಕ್ಷಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಆ ಸಂದರ್ಭದಲ್ಲಿ ಮಾಡಿಕೊಂಡ ಲಾಭ ಕುರಿತದ್ದಾಗಿತ್ತು.
 • “ಪಂಚ ತಂತ್ರ” – ಹೋಟಲು ಕಾರ್ಮಿಕರ ಸಮಸ್ಯೆಯನ್ನು ಆಧರಿಸಿದ್ದು. ಹೋಟಲು ಕಾರ್ಮಿಕರಿಂದಲೇ ಅಭಿನಯಿಸಲ್ಪಟ್ಟಿತ್ತು.
 • “ಭಾರತ ದರ್ಶನ” ನಕ್ಸಲೀಯರ ಕೊಲೆಗಳ ಬಗ್ಗೆ ನ್ಯಾಯಮೂರ್ತಿ ತಾರ್ಕುಂಡೆಯವರ ವರದಿಯನ್ನು ಆಧರಿಸಿ ರಚಿಸಿದ ನಾಟಕ.
 • “ಮೇ ಡೇ” ಕೆಂಬಾವುಟ ಉದಯವನ್ನಾಧರಿಸಿದ್ದು.
 • “ಅಬೋಲಿನ” ಯಶವಂತ ಚಿತ್ತಾಲರ ಸಣ್ಣ ಕತೆಯನ್ನು ಆಧರಿಸಿದ್ದು.
 • “ಕಳ್ಳಿಯಲ್ಲಿ ಕೆಂಪು ಹೂವು” ಕೇಶವರೆಡ್ಡಿ ಹಂದ್ರಾಳ ಅವರ ಸಣ್ಣ ಕತೆಯನ್ನು ಆಧರಿಸಿದ್ದು.
 • “ಒಡಲಾಳ”- ದೇವನೂರು ಮಹಾದೇವ ಅವರ ಕತೆಯನ್ನು ಆಧರಿಸಿದ್ದು. ಇದು ಕನ್ನಡ ರಂಗಭೂಮಿ ಇತಿಹಾಸದಲ್ಲಿ ಒಂದು ಗಮನಾರ್ಹವಾದ ನಾಟಕ.

 

ನಿರ್ದೇಶಕರಾಗಿ

ಕುಸುಮಬಾಲೆ; ರಚನೆ : ದೇವನೂರು ಮಹಾದೇವ

ಸನ್ನಿವೇಶ; ರಚನೆ : ಬಿ.ವಿ. ವೈಕುಂಠರಾಜು

ಮಹಾಚೈತ್ರ; ರಚನೆ : ಹೆಚ್.ಎಸ್. ಶಿವಪ್ರಕಾಶ್

ಸುಲ್ತಾನ್‌ ಟಿಪ್ಪು; ರಚನೆ : ಹೆಚ್.ಎಸ್. ಶಿವಪ್ರಕಾಶ್

ಶೇಕ್ಸ್‌ಪಿಯರನ ಸ್ವಪ್ನ ನೌಕೆ; ರಚನೆ : ಹೆಚ್.ಎಸ್. ಶಿವಪ್ರಕಾಶ್

ನೀಗಿಕೊಂಡ ಸಂಸ; ರಚನೆ : ಕಿ.ರಂ. ನಾಗರಾಜ್

ಕಾಲಜ್ಞಾನಿ ಕನಕ; ರಚನೆ : ಕಿ.ರಂ. ನಾಗರಾಜ್

ಪಂಚಮ; ರಚನೆ : ಸಿದ್ಧಲಿಂಗಯ್ಯ

ಚಿಕ್ಕದೇವ ಭೂಪ; ರಚನೆ : ಲಿಂಗದೇವರು ಹಳೆಮನೆ

ಮದರ್ ಕರೇಜ್; ರಚನೆ : ಲಿಂಗದೇವರು ಹಳೆಮನೆ (ಬೆಕ್ಟ್‌ನ ಮದರ್‌ಕರೇಜ್ ಆಧರಿಸಿದ್ದು)

ಫಾದರ್‌; ರಚನೆ : ಕೆ.ಎಂ. ನಾಗಣ್ಣ (ಸ್ಟಿನ್‌ಬರ್ಗ್‌ನ ಫಾದರ್ ಆಧರಿಸಿದ್ದು)

ಒಥಲೊ, ಜ್ಯೂಲಿಯಸ್ ಸೀಸರ್; ಅನು : ಕೆ.ಎಸ್. ಭಗವಾನ್ (ಶೇಕ್ಸ್‌ಪಿಯರ್‌ನ ಕೃತಿಗಳು)

ತುಘಲಕ್; ರಚನೆ : ಗಿರೀಶ್ ಕಾರ್ನಾಡ್

ತಬರನಕತೆ; ರಂಗರೂಪ : ಆರ್. ನಾಗೇಶ್ (ಪೂರ್ಣಚಂದ್ರ ತೇಜಸ್ವಿಯವರ ಕಥೆ ಆಧರಿಸಿದ್ದು)

ಯಯಾತಿ; ರಚನೆ : ಗಿರೀಶ್ ಕಾರ್ನಾಡ್

ಮತ್ತೆ ಮೊಹೆಂಜದಾರೊ; ರಚನೆ : ಪಾಲ್ ಸುದರ್ಶನ್, ಸಿಜಿಕೆ.

ವೈಶಂಪಾಯನ ತೀರ; ರಚನೆ : ಎಲ್.ಎನ್. ಮುಕುಂದರಾಜ್  (ಮಹಾಬಲಮೂರ್ತಿ ಕೊಡ್ಲೆಕೆರೆಯವರ ಸಣ್ಣಕತೆಯನ್ನು ಆಧರಿಸಿದ್ದು)

ಬೇಲಿ ಮತ್ತು ಹೊಲ; ರಚನೆ : ಕುಂ. ವೀರಭದ್ರಪ್ಪ

ದೇಶಪ್ರೇಮಿ ಸುರಪುರ ನಾಯಕ; ರಚನೆ : ಕೆ.ಎಂ. ಮುನಿಕೃಷ್ಣಪ್ಪ.

 

ರಂಗತರಬೇತಿ/ಕಾರ್ಯಾಗಾರಗಳ ನಿರ್ದೇಶಕರಾಗಿ

ಕೆ.ಜಿ.ಎಫ್‌ನ ಬಿ.ಇ.ಎಂ.ಎಲ್.ನಲ್ಲಿ

ಬೆಂಗಳೂರಿನ ಮೈಕೋದಲ್ಲಿ

ಬೆಂಗಳೂರಿನ ಎನ್.ಜಿ.ಇ.ಎಫ್.ನಲ್ಲಿ

‘ಪ್ರಯೋಗರಂಗ’ ಆಶ್ರಯದಲ್ಲಿ ಜರುಗಿದ ವಿದ್ಯಾರ್ಥಿ ಕಾರ್ಯಾಗಾರ

ಸಂಚಯ, ಸೂತ್ರಧಾರ, ರಂಗಸಂಪದ, ರಂಗನಿರಂತರ, ಮೈಸೂರಿನ ಸಮುದಾಯ, ಪೊನ್ನಂಪೇಟೆಯ ಸೃಷ್ಟಿ ಕೊಡಗು ರಂಗ

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಧ್ಯಮಿಕ ಶಾಲೆಯ ಉಪಾಧ್ಯಾಯರಿಗಾಗಿ ಜರುಗಿದ ಕಾರ್ಯಾಗಾರ

ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ್ದ ಹಿನ್ನೆಲೆ ರಂಗಕರ್ಮಿಗಳ ಕಾರ್ಯಾಗಾರ

 

ಚಲನಚಿತ್ರಗಳ ನಂಟು

‘ಭುಜಂಗಯ್ಯನ ದಶಾವತಾರಗಳು’ ಪ್ರಶಸ್ತಿ ವಿಜೇತ ಚಿತ್ರದ ಸಹ ನಿರ್ದೇಶಕ ಹಾಗೂ ಸಂಭಾಷಣೆ ರಚನೆ

‘ವೀರಪ್ಪನ್’ ಪ್ರಶಸ್ತಿ ವಿಜೇತ ಚಿತ್ರಕ್ಕಾಗಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚನೆ

‘ಸಾಂಗ್ಲಿಯಾನ’ ಚಿತ್ರಕ್ಕೆ ಸಂಭಾಷಣೆ ರಚಿಸಿದ್ದು

 

ಬೆಳಕು ವಿನ್ಯಾಸಕರರಾಗಿ

ಬೆಂಗಳೂರು ಸುಚಿತ್ರ ಫಿಲಂ ಸೊಸೈಟಿಯ ಪೀರ್ ರಂಗಮಂದಿರ ವಿನ್ಯಾಸ ರೂಪಿಸಿದ್ದು

ಮಂಡ್ಯದ ಕೆ.ವಿ. ಶಂಕರೇಗೌಡ ಸಂಭಾಗಣದ ವಿನ್ಯಾಸ ರೂಪಿಸಿದ್ದು

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡಕ್ಕೆ ಬೆಳಕು ವಿನ್ಯಾಸ ಹಾಗೂ ಸಭಾಂಗಣಕ್ಕೆ ಬೆಳಕು ಮತ್ತು ಧ್ವನಿ ವ್ಯವಸ್ಥೆಯನ್ನು ವಿನ್ಯಸಗೊಳಿಸಿದ್ದು.