ಜನನ : ೮-೩-೧೯೫೮ – ಚಾಮರಾಜನಗರ

ಮನೆತನ : ಕಲಾವಿದರ ಮನೆತನ, ತಂದೆ ವಿ. ಚಂದ್ರಶೇಖರಯ್ಯ – ತಾಯಿ ಯಶೋಧಮ್ಮ.

ಗುರುಪರಂಪರೆ : ವಿದುಷಿ ರುಕ್ಮಿಣಮ್ಮನವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ಪಡೆದು ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಹಿಂದೂಸ್ಥಾನಿ ಶೈಲಿಯ ಗಾಯನದಲ್ಲೂ ಸಾಕಷ್ಟು ಪರಿಶ್ರಮವಿದೆ.

ಸಾಧನೆ : ರಾಜ್ಯಾದ್ಯಂತ ಇವರ ಕಾರ್ಯಕ್ರಮಗಳು ನಡೆದಿವೆ – ಹೆಚ್ಚಿನಂಶ ಸುಗಮ ಸಂಗೀತ ಗಾಯಕರಾಗಿ ಹೆಸರು ಗಳಿಸಿರುತ್ತಾರೆ. ಕನ್ನಡ ಸಾಹಿತ್ಯ ಸಮ್ಮೇಳನ, ನವರಾತ್ರಿ ಸಂಗೀತೋತ್ಸವ, ಗಣೇಶೋತ್ಸವಗಳಲ್ಲಿ ಇವರ ಕಾರ್ಯಕ್ರಮಗಳು ನಡೆದಿವೆ. ೧೯೯೬ ರಲ್ಲಿ ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್. ಆರ್. ಲೀಲಾವತಿ – ರಂಗ ಗೀತೆಗಳ ಗಾಯಕ ಹೆಚ್.ಕೆ.ಯೋಗಾನರಸಿಂಹ ಅವರೊಂದಿಗೆ ಹಾಡಿದ್ದಾರೆ. ಏಳು ಭಕ್ತಿಗೀತೆ, ದೇಶಭಕ್ತಿ ಗೀತೆಗಳ ಧ್ವನಿ ಸುರುಳಿಗಾಗಿ ಹಾಡಿದ್ದಾರೆ. ರಾಗ ಸಂಯೋಜಕರಾಗಿಯೂ ಇವರು ಪ್ರಸಿದ್ಧರು. ಆಕಾಶವಾಣಿ ಬಿ.ಹೈ. ಕಲಾವಿದರು.

ಪ್ರಶಸ್ತಿ – ಸನ್ಮಾನ : ಕನ್ನಡ ಸಂಘ ಚಾಮರಾಜನರ, ರಂಗತರಂಗ, ಮುಂತಾದ ಸಂಸ್ಥೆಗಳಿಂದ ಗೌರವಿಸಿ ಸನ್ಮಾನಿಸಲ್ಪಟ್ಟಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೨೦೦೦-೦೧ರ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.