ಪಲ್ಲವಿ : ಸುಂಟರಗಾಳಿಗೆ ಸಿಲುಕಿದ ಮನಸೇ
ಕಡಿವಾಣ ಹಾಕು ಇರು ದತ್ತ ಧ್ಯಾನದಲ್ಲಿ

ಚರಣ :  ಮನಸು ಶುದ್ಧವಿರಲಿ ಗುರುವನು ನಂಬಿ
ಗುರಿಯನು ತಲುಪಲು ಸಾಧನೆ ಮಾಡು     

ದುರುಳ ಚಿಂತನೆ ಮರುಳುಗೊಳಿಸಿತು
ಎಚ್ಚರ ಇರಲಿ ಹೆಜ್ಜೆಯ ನಡಿಗೆ

ಗುರು ಹಿರಿಯರನು ಮರೆಯದೆ ನೀನಿರು
ತೋಜೋ ವಧೆಯನು ಮಾದಂತಿರು

ಸತ್ಯವ ತಿಳಿಸಲು ನಗುತಲಿ ತಿಳಿಸು
ಸುಳ್ಳನು ಸತ್ಯವ ಮಾಡದಿರು

ತತ್ತ್ವಾರ್ಥವನು ತಿಳಿಯಲು ಬೇಕು
ಸಚ್ಚಿದಾನಂದವ ಕಾಣಲು ಬೇಕು