ಕಣ್ಣೀರಿನುಪ್ಪು ಸೋಂಕದ ಸುಖಕೆ
ಹಂಬಲಿಸದಿರೊ ಬೆಪ್ಪೆ ;
ದುಃಖ-ಫಲವಿದೆ ಇದೆಕೊ ನಿನ್ನೆದುರು ತಟ್ಟೆಯಲಿ
ಸುಲಿ, ಸುಖ ಅದರ ಸಿಪ್ಪೆ !