ಚಿಕ್ಕ ಮಕ್ಕಳನ್ನು ದೊಡ್ಡವರು ಡಬ್ಬು ಮಲಗಿಸಿಕೊಂಡು ಬೆನ್ನು ಬಾಗಿಸಿ ನಿಲ್ಲುತ್ತಾರೆ. ದೊಡ್ಡ ಮಕ್ಕಳಾದರೆ ದೊಡ್ಡವರ ಕುತ್ತಿಗೆಯನ್ನು ಅಪ್ಪಿಕೊಳ್ಳುತ್ತಾರೆ. ಚಿಕ್ಕಮಕ್ಕಳಾದರೆ ಆಡಿಸುವವರೆ ಅವರ ಕೈಹಿಡಿದುಕೊಳ್ಳಬೇಕು. ಬೆನ್ನ ಮೇಲೆ ಕುಳಿತ ಮಗುವಿನೊಂದಿಗೆ ಹೋಗಿ ಅಂಗಳದಲ್ಲಿರುವವರೊಡನೆ ಕೆಳಗಿನಂತೆ ಸಂವಾದ ಮಾಡುತ್ತಾರೆ:
“ನಮ್ಮ ಕುರಿಮರಿ ಬಂದಿತ್ತಾ”
“ಹೌದು”
“ಅನ್ನ ಹಾಕಿದ್ರಾ”
“ಹೌದು”
“ರೊಟ್ಟಿ ಕೊಟ್ಟಿದ್ದಾ”
“ಹೌದು”
ಹೆಸರು ಕೇಳುತ್ತಿದ್ದಂತೆ ಅಳುತ್ತಿದ್ದ ಮಗುವೋ ಅಳು ನಿಲ್ಲಿಸಿ, ಸಂವಾದವನ್ನು ಆಲಿಸುತ್ತದೆ.
ಕೊನೆಗೆ, ಸಂವಾದ ಮಾಡುತ್ತಿದ್ದವರ ಹತ್ತಿರ ಆಡಿಸುವವರು. “ಉಪ್ಪುಪ್ಪು ಬೇಕೆ” ಎಂದು ಕೇಳುತ್ತಾರೆ. ಅವರು “ಬೇಡಬೇಡ”ವೆಂದರೂ ಕೇಳದೇ ಅವರ ಬದಿಗೆ ಬೆನ್ನು ಮಾಡಿ ನಿಂತು, ಪುರ್ ಪುರ್ ಎನ್ನುತ್ತಾ ನಿಂತಿದ್ದ ಎಲ್ಲರ ಬಳಿಗೆ ಹೋಗಿ, ಹಾಗೆಯೇ ಹೇಳುತ್ತಾ ಬೆನ್ನ ಮೇಲಿನ ಮಗುವನ್ನು ಕುಣಿಸುತ್ತಾರೆ. ಮಗುವು ಕೇಕೆ ಹಾಕಿ ನಗಲಾರಂಭಿಸುತ್ತದೆ.
Leave A Comment