ನಾಲ್ಕು ಕಂಬಗಳಿದ್ದ ದೇವಸ್ಥಾನದ ಅಥವಾ ಮನೆಯ ಜಗಲಿಯ ಮೇಲೆ ಈ ಆಟ ಆಡಬೞುದು. ಅಥವಾ ಅಂಗಳದಲ್ಲಿ ನಾಲ್ಕು ಕಡೆ ಚೌಕದ ಮೂಲೆಗಳನ್ನು ಆರಿಸಿ ಅವುಗಳನ್ನು ಕಂಬವೆಂದು ಭಾವಿಸಬಹುದು. ೫ ಜನ ಆಟಗಾರರು ಇದೇ ರೀತಿ ಕಂಬಗಳ ಸಂಖ್ಯೆಗಿಂತ ಒಬ್ಬರು ಹೆಚ್ಚಿಗೆ ಇದ್ದುಕೊಂಡು ಹೆಚ್ಚು ಅಥವಾ ಕಡಿಮೆ ಕಂಬಗಳ ಆಟವನ್ನೂ ಆಡಬಹುದು. ಆಟಗಾರರು ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಹಾರುತ್ತ ಇರಬೇಕು. ಆಗ ಯಾವ ಸ್ಥಳ ಖಾಲಿಯಾಗುವುದೋ ಅದನ್ನು ತಕ್ಷಣ ೫ ನೆಯವನು ಹಿಡಿದುಕೊಳ್ಳುವನು. ಸ್ಥಳವಿಲ್ಲದೆ ತಿರುಗುತ್ತಿರುವವನು ಕಳ್ಳನು. ಬಹಳ ಹೊತ್ತು ಈ ಆಟವನ್ನು ಆಡಬಹುದು.