ಆಟಗಾರರೆಲ್ಲ ಕೈಗಿಂಚು ಹಾಕಿಕೊಂಡು ವರ್ತುಳಾಕಾರದಲ್ಲಿ ನಿಲ್ಲುತ್ತಾರೆ. ನಡುವೆ ಒಬ್ಬಳು ಕುಳಿತಿರುತ್ತಾಳೆ. ಅವಳು ಕಮಲೆ, ನಿಂತಿರುವವರು.

“ಏನಿದು ಕಮಲೆ
ಬಿಸಿಲಲಿ ಕುಳಿತೆ
ಚಿಕ್ಕ ಗುಲಾಬಿ ಹೂವೆ
ಎದ್ದು ನಿಲ್ಲೆ ಕಮಲೆ
ಸುತ್ತು ಮುತ್ತು ತಿರುಗೆ
ಯಾರ್ ಬೇಕಾದ್ರು ಮುಟ್ಟೆ”

ಎಂದು ಹಾಡುತ್ತ ತಮ್ಮ ಎಡಕ್ಕೆ ಅಥವಾ ಬಲಕ್ಕೆ ಎಲ್ಲರೂ ಸಾವಕಾಶವಾಗಿ ಸರಿಯುತ್ತ ತಿರುಗುತ್ತಿರುವರು. “ಎದ್ದು ನಿಲ್ಲೆ ಕಮಲೆ” ಎಂದ ಕೂಡಲೇ ಕಮಲೆ ಎದ್ದು ವೃತ್ತದ ಒಳಗೆ ಸುತ್ತುವಳು. “ಮುಟ್ಟೆ” ಎಂದಕೂಡಲೇ ಒಬ್ಬರನ್ನು ಮುಟ್ಟುವಳು. ಅವಳೇ ಮುಂದಿನ ಕಮಲೆ.

ಗುಲಾಬಿ ಹುವೇ, ಹಾಗೂ ಕಮಲಕ್ಕನ ಆಟಗಳಲ್ಲಿ ಮುಟ್ಟಿಸಿಕೊಂಡವರನ್ನು ವೃತ್ತದಿಂದ ಹೊರಗಿರಿಸಿ, ಕೊನೆಯಲ್ಲಿ ಉಳಿದವರನ್ನು “ಹಂಡಿ” ಮಾಡಿದರು ಎನ್ನುವುದುಂಟು.