ಅಂಗಳದಲ್ಲಿ ಸುಮಾರು ೧೫’ ಉದ್ದ ಹಾಗೂ ಸು.೨ ಅಗಲವಾದ ಗೆರೆಯನ್ನು ಕೆಳಗಿನಂತೆ ಎಳೆಯಬೇಕು. 

ಈ ಆಟಕ್ಕೆ ೫ ಅಥವಾ ಹೆಚ್ಚು ಆಟಗಾರರು ಬೇಕು. ಆಟಗಾರರ ಸಂಖ್ಯೆಯಷ್ಟೇ ಕಲ್ಲುಗಳನ್ನು ನಡುವಿನ ಚೌಕದಲ್ಲಿ ಇಡುವರು. ಒಬ್ಬನು ಕಳ್ಳ. ಉಳಿದವರೆಲ್ಲ ಮಾರ್ಗದ ಹೊರಗೆ ನಿಂತಿರುತ್ತಾರೆ. ಕಳ್ಳ ಮಾತ್ರ ಮಾರ್ಗದಲ್ಲಿಯೇ ಓಡಾಡಬೇಕು. ಆಟ ಪ್ರಾರಂಭವಾದೊಡನೆ ಕಳ್ಳನು ಎರಡೂ ಮಾರ್ಗಗಳಲ್ಲಿ ನಡೆಯತೊಡಗುವನು. ಆತ ದೂರ ಹೋಗುತ್ತಲೇ ಸಮೀಪದ ಆಟಗಾರರು ಕಲ್ಲನ್ನೆತ್ತಲು ಪ್ರಯತ್ನಿಸುವರು. ಆಗ ಕಳ್ಳ ಓಡಿಬಂದು ಅವರನ್ನು ಮುಟ್ಟುವನು. ಮುಟ್ಟಿಸಿಕೊಂಡವ ಆಟ ಬಿಡಬೇಕು. ಆಟ ಹಾಗೆಯೇ ಮುಂದೆ ಸಾಗಬೇಕು. ಮುಟ್ಟಿಸಿಕೊಂಡುವನು ಕಳ್ಳನಾಗುವನು, ಪುನಃ ಆಟದ ಪ್ರಾರಂಭ. ಕಳ್ಳನು ಮಾರ್ಗ ಬಿಟ್ಟು ಆಚೆ ಈಚೆ ಸರಿಯುವುದಿಲ್ಲ. ಆದ್ದರಿಂದ ಅವನ ಕೈ ನಿಲುಕುವುದಕ್ಕಿಂತ ತುಸು ಆಚೆ, ಆಟಗಾರರು ನಿಂತುಕೊಳ್ಳುವರು. ಹೆಚ್ಚು ಕಲ್ಲು ಎತ್ತಿ ತಂದವರು ಇತರರಿಗೆ ಕಲ್ಲು ಮುಟ್ಟಿಸಬೇಕು: ಆಗ ಅವರು ತಮ್ಮ ಸ್ಥಳ ದಾಟಿ ಇನ್ನೊಂದು ಸ್ಥಳಕ್ಕೆ ಹೋಗಬಹುದು.ಎಲ್ಲರಿಗೂ ಕಲ್ಲು ಸಿಕ್ಕಿದ ಮೇಲೆ ಎಲ್ಲರೂ ಒಂದು ಮನೆಯಲ್ಲಿ ನೆರೆಯುವರು, ಕೈಯಲ್ಲಿ ಕಲ್ಲಿದ್ದವರುನ್ನು ಕಳ್ಳ ಮುಟ್ಟಬಾರದು. ಕಳ್ಳ ಯಾರನ್ನು ಮುಟ್ಟಲು ಶಕ್ಯವಾಗದೇ ಇದ್ದರೆ, ಅವನೇ ಕಳ್ಳನಾಗಿ ಮುಂದುವರಿಯಬೇಕು.