ಆಟಗಾರರು ಸಮಾನ ಸಂಖ್ಯೆಯಲ್ಲಿದ್ದು ಎರಡು ಪಂಗಡಗಳಾಗಿ ನಿಲ್ಲುತ್ತಾರೆ. ಒಂದು ಪಂಗಡದವರು ಹಾಯುವವರು, ಇನ್ನೊಂದು ಪಂಗಡದವರು ಕಟ್ಟುವವರು. ಒಂದು ಪಂಗಡದಲ್ಲಿದ್ದ ಆಟಗಾರರ ಸಂಖ್ಯೆಯಷ್ಟೇ ಅಂಕಣ ತೆಗೆಯಬೇಕು. ಒಂದೊಂದು ಅಂಕಣ ಸುಮಾರು ನಾಲ್ಕು ಮೊಳ ಉದ್ದ, ಎಂಟು ಮೊಳ ಅಗಲ ಇರಬೇಕು. ಎಲ್ಲ ಅಂಕಣಗಳ ನಡುವೆ ಹಾಯ್ದು ಹೋಗುವಂತೆ ಮಧ್ಯ ಗೆರೆ ಎಳೆಯಬೇಕು. ಹಾಯುವ ಪಂಗಡದವರು ಅಂಕಣದ ಹೊರಗೆ “ಅ” ಸ್ಥಳದಲ್ಲಿ ನಿಲ್ಲುತ್ತಾರೆ ಕಟ್ಟುವ ಪಕ್ಷದ ಒಬ್ಬನು ಗಿಡಗನಾಗುತ್ತಾನೆ.  ಕಟ್ಟುವವರು ಒಟ್ಟು ಐದು ಜನರೆಂದುಕೊಳ್ಳೋಣ. ಅವರಲ್ಲಿ ಒಬ್ಬ “ಗಿಡಗ” ಉಳಿದವರು ಅಂಕಣದ ಅಗಲ ರೇಖೆಯಗಳಾದ ಇ.ಈ,ಉ.ಊ ಗಳ ಮೇಲೆ ಹಾಯುವವರನ್ನು ಅಡ್ಡಗಟ್ಟಿ ನಿಲ್ಲಬೇಕು. ಇವರು ತಮ್ಮ ರೇಖೆಯ ಮೇಲೆ ಮಾತ್ರ ಓಡಾಡಬೇಕು. ಗಿಡುಗನು ಮಾತ್ರ ಆ, ಎ.ಏ,ಒ ಹಾಗೂ ಮಧ್ಯದ ಯು.ಐ ರೇಖೆಗಳುಂಟ ಅಂದರೆ ಚೌಕದ ಸುತ್ತ ಹಾಗೂ ನಡುವಿನ ರೇಖೆಗುಂಟ ಬೇಕಾದಂತೆ ತಿರುಗಾದಬಹುದು. “ಅ” ದಲ್ಲಿ ನಿಂತ ಆಟಗಾರರು ಕಟ್ಟುವವರ ಕೈಗೆ ಗೆರೆ ದಾಟುವಾಗ ಸಿಗದೆ, ಒಂದೊಂದೇ ಅಂಕಣ ದಾಟುತ್ತ ಬರುತ್ತಾರೆ.

ಹಾಯುವವರಿಗೆ ಕಟ್ಟುವವರಿಂದ ತಪ್ಪಿಸಿಕೊಂಡು ಒಳಹೋಗುವದಾಗದಿದ್ದಲ್ಲಿ ಹಾಯುವವ ತಾನು ದಾಟಬೇಕಾದ ರೇಖೆಗುಂಟ ಓಡಿ ಅಂಕಣದ ಹೊರಗೆ ಹೋಗುತ್ತ “ಮುರಿದೆ ಬಿಡು” ಎಂದು ಹೇಳಿ ಕಟ್ಟುವವನ ಕೈಗೆ ಸಿಗದೆ ಇನ್ನೊಂದು ಅಂಕಣ ಸೇರಬಹುದು. (ಚಿತ್ರದಲ್ಲಿ “ಕ” ನೋಡಿರಿ)

ಆದರೆ ಅಂಕಣಬಿಟ್ಟು ಹೊರಗೋಡಿದಾಗ, ಗಿಡಗ ಓಡಿಬಂದು ಅವನನ್ನು ಮುಟ್ಟಿದರೆ “ಹುಯ್ಲು” ಆಗುವದು. ಹಾಯುವವ ಅಡ್ಡ ಮುರಿದಾಗ ಗಿಡುಗನೂ ತನ್ನ ರೇಖೆ ಬಿಟ್ಟು ಹೊರಗೆ ಬರಬಹುದು. ಬೇಗ ಬಂದು ಮುಟ್ಟಬಹುದು; ಅಥವಾ ಅಂಕಣ ಹೊಕ್ಕಲು ಕೊಡದೆ, ಗಿಡಗ ಅವನ್ನು ದೂರ ಓಡಿಸಿಕೊಂಡು ಹೋಗಿ ಮುಟ್ಟಬಹುದು. ಅಂಕಣ ಹೊಕ್ಕುವಾಗಲೂ ಗಿಡಗ ತನ್ನ ರೇಖೆಯ ಮೇಲೆ ನಿಂತು ಅವನನ್ನು ಮುಟ್ಟಬಹುದು. ಗಿಡಗ ತನ್ನ ರೇಖೆಯ ಮೇಲೆ ತಿರುಗಾಡುವಾಗಲೂ ಹಾಯುವವರನ್ನು ಯಾವ ಅಂಕಣದಲ್ಲಿಯೂ ಮುಟ್ಟಬಹುದು. ಒಂದು ಅಂಕಣದಿಂದ ಇನ್ನೊಂದು ಅಂಕಣ ದಾಟುವಾಗ ಕಟ್ಟುವವರು ಮುಟ್ಟಿಸ್ಕಿಕೊಂಡರೆ ಹಾಯುವವರುಆಟ ಬಿಟ್ಟು ಕಟ್ಟಬೇಕು. ಹಾಯುವವರಲ್ಲಿ ಯಾರಾದರೊಬ್ಬರು ಎಲ್ಲ ಅಂಕಣಗಳನ್ನೂ ದಾಟಿ “ಎ” ಗೆ ಬಂದು, ತಿರುಗಿ “ಆ” ಸ್ಥಳ ಮುಟ್ಟಿದರೆ, ಹಾಯುವ ಪಕ್ಷದ ರಾಜ್ಯವಾಗುವುದು. ರಾಜ್ಯ ಮಾಡಿದವನು “ಅ” ಸ್ಥಳಕ್ಕೆ ಹೋಗುವಾಗಲೂ ಕಟ್ಟಲು ನಿಂತವರು ಹಾಗೂ ಗಿಡಗ ಅವನನ್ನು ಮುಟ್ಟಲು ಪ್ರಯತ್ನಿಸುವವರು.