ಆಟಗಾರರು ದೊಡ್ಡ ವರ್ತುಳ ಮಾಡಿ ಕುಳಿತುಕೊಳ್ಳುವರು. ಒಬ್ಬ ಟೊಪ್ಪಿಗೆಯವ. ಟೊಪ್ಪಿಗೆಯ ಬದಲಿಗೆ ಕರವಸ್ತ್ರ ಇಲ್ಲವೆ ಅರಿವೆಯ ತುಂಡನ್ನೂ ಉಪಯೋಗಿಸಬಹುದು. ಟೊಪ್ಪಿಗೆಯವನು ಟೊಪ್ಪಿಗೆಯನ್ನು ಅಂಗಿಯೊಳಕ್ಕೆ ಅಡಗಿಸಿಕೊಳ್ಳುತ್ತಾನೆ ಹಾಗೂ ವರ್ತುಳದ ಹೊರಗೆ “ಲೋಡ್ ಲೋಡ್ ತಿಮ್ಮಯ್ಯಾ” ಎನ್ನುತ್ತಾನೆ. ಅವನು ಹಾಗೆ ಹೇಳಿದ ಪ್ರತಿಬಾರಿಗೂ ಕುಳಿತವರು “ಎನ್ ಬೇಕು ಸಂಗಯ್ಯಾ” ಎಂದು ಕೇಳುತ್ತಾರೆ. ಈ ರೀತಿ ಪ್ರಶ್ನೋತ್ತರಗಳು ಸಾಗುತ್ತಿರುವಾಗಲೇ ಟೊಪ್ಪಿಗೆಯನ್ನು ಯಾರ ಹಿಂದಾದರೂ ಇಟ್ಟು ಅದು ಇನ್ನೂ ತನ್ನ ಅಂಗಿಯೊಳಗೇ ಇರುವಂತೆ ನಟಿಸುತ್ತಾ ಮುಂದೆ ಹೋಗುವನು. ಈ ಮಧ್ಯೆ ಪ್ರಶ್ನೋತ್ತರದ ಗಡಿಬಿಡಿಯಲ್ಲಿದ್ದ ಆಟಗಾರರು ತಮ್ಮ ಹಿಂದೆ ಟೊಪ್ಪಿಗೆ ಇದ್ದುದ್ದುನ್ನು ಗಮನಿಸದಿರಬಹುದು. ಗಮನಿಸಿದರೆ ಅದನ್ನು ತಟ್ಟನೆ ಎತ್ತಿ ಟೊಪ್ಪಿಗೆ ಹಾಕಿದವನನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುತ್ತಾನೆ. ಹೊಡೆತ ತಪ್ಪಿಸಿಕೊಳ್ಳಲು ಟೊಪ್ಪಿಗೆ ಹಾಕಿದವನು ಓಡಿಬಂದು ಟೊಪ್ಪಿಗೆ ಹಾಕಿಸಿಕೊಂಡವನ ಸ್ಥಳದಲ್ಲಿ ಕುಳಿತುಕೊಳ್ಳುತ್ತಾನೆ. ಒಂದು ವೇಳೆ ಟೊಪ್ಪಿಗೆ ಹಾಕಿಸಿಕೊಂಡವನು ಟೊಪ್ಪಿಗೆಯನ್ನು ಗಮನಿಸದೆ ಹೋದರೆ ಟೊಪ್ಪಿಗೆ ಹಾಕಿದವನು ಒಂದು ಸುತ್ತು ಮುಗಿಸಿ ಟೊಪ್ಪಿಗೆಯನ್ನು ಹೆಕ್ಕೆ ಅವನನ್ನು ಹೊಡೆಯುವನು. ಆಗ ಕುಳಿತವನು ಎದ್ದು ಓಡಿಹೋಗುವನು. ಒಂದು ಸುತ್ತು ತಿರುಗಿ ಬಂದು ತನ್ನ ಸ್ಥಳದಲ್ಲಿ ಕುಳಿತುಕೊಳ್ಳುವನು ಹಾಗೂ ಅಟ್ಟಿಕೊಂಡು ಬಂದವನು ಮತ್ತೆ ಟೊಪ್ಪಿಗೆ ಅಡಗಿಸಿ ಆಟ ಆರಂಬಿಸುವನು.