ಇದರಲ್ಲಿ ಇರಬೇಕಾದವು ಎರಡು ಪಕ್ಷ. ಪ್ರತಿಯೊಂದು ಪಕ್ಷದಲ್ಲಿ ಅಷ್ಟಷ್ಟೇ ಆಟಗಾರರು. ಅಂಗಳದ ನಡುವೆ ಒಂದು ಉದ್ದ ರೇಖೆ. ರೇಖೆಯ ಒಂದು ಬದಿಗೆ ಹಾಯುವವರು, ಇನ್ನೊಂದು ಬದಿಗೆ ಕಟ್ಟುವವರು ಸಾಲಾಗಿ ನಿಲ್ಲಬೇಕು. ಕಟ್ಟುವ ಪಕ್ಷದವರೆಲ್ಲರು ಹಾಯುವ ಪಕ್ಷಕ್ಕೆ ಎದುರಾಗಿ ಕೈತೋಳು ಎಡಬಲಕ್ಕೆ ಚಾಚಿ, ಗೆರೆಯ ಮೇಲೆ ನಿಂತಿರುತ್ತಾರೆ, ಕಟ್ಟುವವರು ಸೋಡ್ಯಾ ಎಂದ ಕೂಡಲೇ ಆಟ ಪ್ರಾರಂಭವಾಗುತ್ತದೆ. ಹಾಯುವವರು ನುಣುಚಿಕೊಂಡು ಗೆರೆ ದಾತಲು ಪ್ರಯತ್ನಿಸುತ್ತಾರೆ. ಗೆರೆ ದಾಟಿ ಆಚೆ ಹೋದವರು ಕಟ್ಟುತ್ತಿರುವವರನ್ನು ತಮ್ಮೆಡೆ ಎಳೆದು, ಹಾಯುವವರಿಗೆ ದಾರಿ ಮಾಡಲು ಪ್ರಯತ್ನಿಸುತ್ತಾರೆ. ಕಟ್ಟುವವನೇ ಶಕ್ತಿವಂತನಾದರೆ ತನ್ನನ್ನು ಎಳೆಯಲು ಬಂದವನನ್ನೇ ಎಳೆದು, ಹಾಯುವ ಪಕ್ಷವಿದ್ದ ಸ್ಥಳಕ್ಕೆ ತಳ್ಳಲೂಬಹುದು. ಎಲ್ಲ ಹಾಯುವವರೂ ಗೆರೆ ದಾಟಿ ಈಚೆ ಬಂದ ಮೇಲೆ ಕಟ್ಟುವವರು, ಈಚೆ ಬಂದವರ ಕಡೆಗೆ ಮುಖ ಮಾಡಿ ನಿಲ್ಲುವರು. ಆಗ ಒಬ್ಬ ಹಾಯುವ ಪಕ್ಷದವ ತನ್ನ ಸ್ಥಳಕ್ಕೆ ಮರಳಿದರೆ ಹಾಯುವವರ ರಾಜ್ಯವಾಯಿತು “ಗೋಳ್ಯಾ” ಎನ್ನುತ್ತ ಆತನು ತನ್ನ ರಾಜ್ಯ ಪ್ರವೇಶಿಸುವನು. ಇಲ್ಲಿ “ಗಿಡಗ” ಇಲ್ಲ. ಗೆರೆ ದಾಟುವಾಗ ಹಾಯುವವರಲ್ಲೊಬ್ಬನನ್ನೇಯಾದರೂ ಕಟ್ಟುವವರು ಮುಟ್ಟಿದರೆ ಹಾಯುವವರಿಗೆ “ಹುಯ್ಲು”.