ಆಟಗಾರರು ಸುತ್ತಲೂ ವರ್ತುಲಾಕಾರಾವಾಗಿ ಕುಳಿತುಕೊಳ್ಳುವರು. ಅವರಲ್ಲಿ ಒಬ್ಬರು “ಗುಲು ಗುಲು ಗುಲಕ್” ಎನ್ನುವರು. ಆಗ ಎಲ್ಲರೂ ಕೈ ಮುಷ್ಟಿ ಕಟ್ಟಿ ತಮ್ಮ ಕೈಮುಷ್ಟಿಗಳನ್ನು ಒಂದರ ಬೆನ್ನಿಗೊಂದು ತಿರುಗಿಸುತ್ತ “ಗುಲಕ್” ಎಂದ ಕೂಡಲೆ ನೆಲದ ಮೇಲೆ ತಟ್ಟನೆ ತಮಗೆ ಬೇಕಾದ ರೀತಿಯಲ್ಲಿ ಕೈ ಹಸ್ತಗಳನ್ನಿಡುವರು. ಇವರಲ್ಲಿ ಯಾರ ಹಸ್ತಗಳ ಇರುವಿಕೆ ಇತರರಂತೆ ಇರುವುದಿಲ್ಲವೋ ಅವರು ಗೆದ್ದಂತೆ. ಗೆದ್ದವರು ಆಟದ ಕಣದಿಂದ ಹೊರಗಿರಬೇಕು, ಗೆದ್ದವರೆಲ್ಲ ಹೊರಗೆ ಹೋಗಿ ಕೊನೆ ಗುಳಿದವರು ಮರು ಆಟಕ್ಕೆ “ಗುಲು ಗುಲಕ್” ಹೇಳಲು ಕೂಡುತ್ತಾರೆ.