ಆಟಗಾರರು ವರ್ತುಲಾಕಾರವಾಗಿ ನಿಲ್ಲುತ್ತಾರೆ. ನಡುವೆ ಒಬ್ಬರು ಆ ವರ್ತುಲದ ಸುತ್ತಲೂ ಒಳಗಡೆ ಸುತ್ತುತ್ತ ಒಮ್ಮೆಲೆ ಯಾರ ಮುಂದಾದರೂ ಬೆನ್ನು ಮಾಡಿ ನಿಂತು ಚಪ್ಪಾಳೆ ತಟ್ಟುತ್ತಾರೆ. ಕೂಡಲೇ ಅವರ ಹಿಂದಿದ್ದವರು ನಡುವೆ ಹೋಗಿ ಮೊದಲಿನವರಂತೆ ತಿರುಗಬೇಕು, ಹಾಗೂ ಚಪ್ಪಾಳೆ ತಟ್ಟಿದವರು ತೆರವಾದ ಸ್ಥಳಕ್ಕೆ ಬರಬೆಕು, ಹೀಗೆ ಆಟ ಬಹಳ ಹೊತ್ತು ನಡೆಯುತ್ತದೆ.