ಸರ್ವ ಶಿಕ್ಷಣ ಅಭಿಯಾನಕರ್ನಾಟಕ
ರಾಜ್ಯ ಯೋಜನಾ ನಿರ್ದೇಶಕರ ಕಛೇರಿ, ಹೊಸ ಸಾರ್ವಜನಿಕ ಕಛೇರಿಗಳ ಪೂರಕ ಕಟ್ಟಡ ನೃಪತುಂಗ ರಸ್ತೆ, ಬೆಂಗಳೂರು-೫೬೦ ೦೦೧.  ಸಂಖ್ಯೆ : ಸಶಿಅ/ಚಿಕದ/೨೦೧೦-೧೧ ದಿನಾಂಕ : ೨೬.೦೫.೨೦೧೦

ಸುತ್ತೋಲೆ

ದಾವಣಗೆರೆ ಜಿಲ್ಲೆಯ ಅಕ್ಕ-ಪಕ್ಕದ ಜಿಲ್ಲೆಗಳ ಪ್ರೇಕ್ಷಣೀಯ ಸ್ಥಳಗಳು
ವಿ: ೨೦೧೦೧೧ನೇ ಸಾಲಿನ ಚಿಣ್ಣರ ಜಿಲ್ಲಾ ದರ್ಶನ ಕುರಿತಂತೆ ಮಾರ್ಗಸೂಚಿ

ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿ, ಒಂದು ಪ್ರಮುಖ ಗುರಿಯಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾ./ಪ.ವ. ಹಾಗೂ ಹೆಣ್ಣು ಮಕ್ಕಳಿಗಾಗಿ “ಚಿಣ್ಣರ ವ್ಯಕ್ತಿತ್ವ ವಿಕಸನ-ಕರ್ನಾಟಕ ಪರಿಚಯ” ಎಂಬ ಶೈಕ್ಷಣಿಕ ಪ್ರವಾಸವನ್ನು ೨೦೦೪- ೦೫ ಹಾಗೂ ೨೦೦೬-೦೭, ೨೦೦೭-೦೮, ೨೦೦೮-೦೯ ಹಾಗೂ ೨೦೦೯-೧೦ನೇ ಸಾಲಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ೨೦೧೦-೧೧ ನೇ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸದರಿ ಚಟುವಟಿಕೆಯ ಫಲಾನುಭವಿಗಳನ್ನಾಗಿಸಲು ಹಾಗೂ ತಮ್ಮ ಜಿಲ್ಲೆಯನ್ನು ಸಮಗ್ರವಾಗಿ ಅರಿಯುವ ನಿಟ್ಟಿನಲ್ಲಿ “ಚಿಣ್ಣರ ಕರ್ನಾಟಕ ದರ್ಶನದ” ಬದಲಿಗೆ “ಚಿಣ್ಣರ ಜಿಲ್ಲಾ ದರ್ಶನ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಚಿಣ್ಣರ ಜಿಲ್ಲಾ ದರ್ಶನದ ಸಾಮಾನ್ಯ ಉದ್ದೇಶಗಳು:-

* ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪರಿಪೂರ್ಣವಾಗಿ ಜಿಲ್ಲೆಯ ಮುಖ್ಯವಾದ ಸ್ಥಳಗಳು ಅಂದರೆ ಸ್ಥಳೀಯ ವೈಜ್ಞಾನಿಕ, ಧಾರ್ಮಿಕ, ಭೌಗೋಳಿಕ, ನೈಸರ್ಗಿಕ, ಐತಿಹಾಸಿಕ, ವಿಜ್ಞಾನ ಮತ್ತು ಕೈಗಾರಿಕೆಗಳು, ಉತ್ತಮ ಶಾಲೆ, ಆಕಾಶವಾಣಿ ಕೇಂದ್ರ, ಗಣಿಗಳು, ಉದ್ಯಾನವನ, ಮ್ಯೂಸಿಯಂ, ಪ್ರಖ್ಯಾತ ವ್ಯಕ್ತಿಗಳು ಹುಟ್ಟಿದ ಊರು ಇತ್ಯಾದಿಯನ್ನು ಅರಿಯುವುದು.

* ಮಕ್ಕಳು ತಮ್ಮ ಶೈಕ್ಷಣಿಕ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ಮಾರ್ಗದರ್ಶನವನ್ನು ನೀಡುವುದು.

* ಮಕ್ಕಳಲ್ಲಿ ಸಹಕಾರ, ಹೊಂದಾಣಿಕೆ, ನಾಯಕತ್ವ ಮನೋಭಾವವನ್ನು ಬೆಳೆಸುವುದು.

* ತಮ್ಮ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಅರಿವು ಹಾಗೂ ಅಭಿವೃದ್ಧಿಗೊಳಿಸುವಲಿ ತಮ್ಮ ಜಿಲ್ಲೆಯ ಸಾಮಾಜಿಕ ಸ್ಥಿತಿಗತಿಯ ಕುರಿತು ಅರಿವುಂಟು ಮಾಡುವುದು.

* ಮಕ್ಕಳಿಗೆ ನೈಜ ಪರಿಸರದ ದರ್ಶನ ಮಾಡಿಸುವುದು.

* ತರಗತಿ ಕಲಿಕೆಗೆ ಪೂರಕವಾದ ಮಾಹಿತಿ ಒದಗಿಸುವುದು.

* ಶಾಲಾ ಚಟುವಟಿಕೆಗಳನ್ನು ಹೊರಪ್ರಪಂಚ ಹಾಗೂ ಸಮಾಜದೊಂದಿಗೆ ಸಮನ್ವಯಗೊಳಿಸುವುದು.

* ತಮ್ಮ ಜಿಲ್ಲೆಯ ಐತಿಹಾಸಿಕ ವಿಷಯಗಳ ನೈಜ ಸ್ಥಿತಿಯ ದರ್ಶನ ಮಾಡಿಸುವುದು.

* ಪ್ರಾದೇಶಿಕ ಮಟ್ಟದ ಜನಜೀವನ, ಭಾಷೆ, ಆಚಾರ ವಿಚಾರಗಳಲ್ಲಿನ ವೈವಿಧ್ಯತೆಯ ಅರಿವುಂಟುಮಾಡುವುದು.

ನಿರ್ದಿಷ್ಟ ಉದ್ದೇಶಗಳು:-

* ಮಕ್ಕಳು ಶಿಕ್ಷಣದಲ್ಲಿ ಆಸಕ್ತಿ ಬೆಳೆಸಿಕೊಂಡು ಪಠ್ಯೇತರ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚು ಉತ್ಸಾಹದಿಂದ ಭಾಗವಹಿಸುವುದು. ಮಕ್ಕಳು ಶಾಲೆಯತ್ತ ಹೆಚ್ಚು ಆಕರ್ಷಿತರಾಗಿ ಶಾಲೆ ಬಿಡುವ ಸಾಧ್ಯತೆಗಳು ಕಡಿಮೆಮಾಡುವುದು.

* ಆರ್ಥಿಕವಾಗಿ ಹಿಂದುಳಿದ ಮಕ್ಕಳು ಹಾಗೂ ಹೆಣ್ಣು ಮಕ್ಕಳು ತಮ್ಮ ಜಿಲ್ಲೆಯ ಅನೇಕ ಸ್ಥಳಗಳ ನೈಜ ಪರಿಸರ ದರ್ಶನ ಪಡೆಯಲು ಸಹಕಾರಿಯಾಗುವುದು.

* ಮಕ್ಕಳ ಕೀಳರಿಮೆ ಹೋಗಲಾಡಿಸುವುದು.

* ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು.

* ಮಕ್ಕಳಲ್ಲಿ ಪಠ್ಯವಸ್ತುವಿನ ಸಾಮರ್ಥ್ಯಗಳ ಬೆಳವಣಿಗೆಗೆ ಸಹಕಾರಿಯಾಗುವುದು.

* ಸೆಮಿಸ್ಟರ್ ಪದ್ಧತಿಯ ಗುಂಪು ಚಟುವಟಿಕೆ ಹಾಗೂ ವೈಯಕ್ತಿಕ ಚಟುವಟಿಕೆಗಳನ್ನೊಳಗೊಂಡ ಯೋಜನೆಗಳನ್ನು ತಯಾರಿಸಲು ಮಕ್ಕಳಲ್ಲಿ ಮನೋಸ್ಥೈರ್ಯ ಬೆಳೆಸುವುದು.

* ವಿದ್ಯಾರ್ಥಿಗಳಲ್ಲಿ ವೀಕ್ಷಣೆ, ಮೌಖಿಕ ಹಾಗೂ ಲಿಖಿತ ಕೌಶಲ್ಯಗಳ ಸಂವರ್ಧನೆ ಮಾಡುವುದು.

* ನೋಡಿ ಕಲಿಯುವುದರಿಂದ ಅನೇಕ ಪರಿಕಲ್ಪನೆಗಳು ಸ್ಪಷ್ಟವಾಗುವುದು. ಮಕ್ಕಳಿಗೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮಕ್ಕಳ ದಾಖಲಾತಿ, ಹಾಜರಾತಿ ಉತ್ತಮವಾಗುತ್ತದೆ. ಒಟ್ಟಾರೆ ಗುಣಮಟ್ಟದ ಶಿಕ್ಷಣ ನೀಡುವ ದಿಸೆಯಲ್ಲಿ ಎಲ್ಲಾ ಮಕ್ಕಳಲ್ಲಿ ಉತ್ಸಾಹ ತುಂಬುವುದಗಿದೆ

ಯೋಜನೆಯ ಲಾಭವು ನೇರವಾಗಿ ಮಕ್ಕಳಿಗೆ ತಲುಪುವುದರಿಂದ ಔಚಿತ್ಯಪೂರ್ಣವಾಗಿದ್ದು, ಪೋಷಕರು ಹಾಗೂ ಸಮುದಾಯದ ಸಹಕಾರವನ್ನು ಸಹ ಗಳಿಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟು ಒಮ್ಮತದಿಂದ ಈ ಕಾರ್ಯಕ್ರಮವನ್ನು ಅನುಮೋದಿಸಲಾಗಿದೆ.

. ಯೋಜನೆಯ ಆಯವ್ಯಯ:-

೨೦೧೦-೧೧ನೇ ಸಾಲಿನ ಜಿಲ್ಲೆಗಳ ಸರ್ವ ಶಿಕ್ಷಣ ಅಭಿಯಾನದ ಎ.ಡಬ್ಲ್ಯು.ಪಿ.&ಬಿ ಯಲ್ಲಿನ ಇನ್ನೋವೇಟಿವ್ ಎಕ್ಟಿವಿಟಿ ಫಾರ್ ಎಸ್.ಸಿ./ಎಸ್.ಟಿ. ಚಟುವಟಿಕೆಯಡಿಯಲ್ಲಿ ಪ್ರತಿ ಜಿಲ್ಲೆಗೆ ರೂ. ೧೫ ಲಕ್ಷಗಳು ಅನುಮೋದನೆಯಾಗಿರುತ್ತದೆ. ಒಟ್ಟಾರೆ ರಾಜ್ಯದ ರೂ. ೪೩೫ ಲಕ್ಷ. ಪ್ರತಿ ೫೦ ಮಕ್ಕಳು ಹಾಗೂ ೪ ಶಿಕ್ಷಕರು, ೧ ಬಿ.ಆರ್.ಪಿ. ಮತ್ತು ಸಿ.ಆರ್.ಪಿ.ಯನ್ನು ಒಳಗೊಂಡ ತಂಡಕ್ಕೆ ಸೀಮಿತ ಅನುದಾನ: ೨೫,೦೦೦/-. ವಲಯವಾರು ಕನಿಷ್ಠ ೮ ತಂಡಗಳ ಪ್ರವಾಸ ಹಮ್ಮಿಕೊಳ್ಳುವುದು. ಡೈಸ್ ೨೦೦೮ ರ ಪ್ರಕಾರ ಎಸ್.ಸಿ./ಎಸ್.ಟಿ. ಮಕ್ಕಳ ದಾಖಲಾತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಚನ್ನಗಿರಿ ತಾಲ್ಲೂಕಿನಿಂದ ಹೆಚ್ಚುವರಿಯಾಗಿ ೩ ತಂಡಗಳಲ್ಲಿ ಪ್ರವಾಸ ಆಯೋಜಿಸುವುದು. ಒಟ್ಟಾರೆ ೨೦೧೦-೧೧ ನೇ ಸಾಲಿನಲ್ಲಿ ೨೧೭೨ ತಂಡಗಳ ಚಿಣ್ಣರ ಜಿಲ್ಲಾ ದರ್ಶನ ಪ್ರವಾಸ ಅನಷ್ಟಾನಗೊಳಿಸುವುದು.

ಘಟಕವೆಚ್ಚದ ವಿವರ:-

ರೂ. ೨೫,೦೦೦/- ಅನುದಾನದ ಚಟುವಟಿಕೆವಾರು ವಿವರ ಈ ಕೆಳಕಂಡಂತೆ ಇರುತ್ತದೆ.

* ಕೆ.ಎಸ್.ಆರ್.ಟಿ.ಸಿ. ಬಸ್ ಟ್ರಾನ್ಸ್  ರ್ಪೋಟೇಷನ್  ವೆಚ್ಚ (ಗರಿಷ್ಠ ದೂರ ೬೦೦ ಕಿ.ಮೀ. ಗೆ ೨೨ ರೂ. ನಂತೆ ೫೫ ಸೀಟರ್ ಬಸ್, ೨ ದಿನಗಳಿಗೆ ಗರಿಷ್ಠ ಅನುದಾನ ರೂ. ೧೩,೨೦೦/-)

* ಊಟ ೫೫ ಜನರಿಗೆ (೫೦ ಮಕ್ಕಳು ಹಾಗೂ ೪ ಶಿಕ್ಷಕರು+ಚಾಲಕ) ೨ ದಿನಗಳಿಗೆ- ಗರಿಷ್ಠ  ಅನುದಾನ ರೂ. ೬,೦೦೦/- * ಒಂದು ರಾತ್ರಿಯ ಉಳಿಯುವಿಕೆಗೆ (ಡಾರ‍್ಮೆಟ್ರಿಗಾಗಿ) ೫೫ ಜನರಿಗೆ ಗರಿಷ್ಟ ಅನುದಾನ ರೂ. ೧೫೦೦/-

* ವಿವಿಧ ಸ್ಥಳಗಳ ಎಂಟ್ರೆನ್ಸ್ ಫೀಸ್ (ಉಚಿತವಾಗಿ ಮೊದಲೆ ಅನುಮತಿ ಪಡೆದಿರಬೇಕು, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ) ಗರಿಷ್ಠ ಅನುದಾನ ರೂ. ೫೦೦/-

* ಬಸ್ ಹಾಲ್ಟಿಂಗ್ ಫೀ – ಗರಿಷ್ಠ ಅನುದಾನ ರೂ. ೧೦೦/-

* ಡ್ರೈವರ್ ಬಾಟ & ಇನ್ಶೂರೆನ್ಸ್ – ಗರಿಷ್ಠ ಅನುದಾನ ರೂ. ೬೦೦/-

* ೫೪ ಜನರಿಗೆ (ನೋಟ್ ಬುಕ್, ಕ್ಯಾಪ್, ಪೆನ್) ಗರಿಷ್ಠ ಅನುದಾನ ರೂ. ೧೫೦೦/-

* ಚಿಣ್ಣರ ಜಿಲ್ಲಾ ದರ್ಶನ ಕೈಪಿಡಿ ೫೫ ಪುಸ್ತಕಗಳಿಗೆ ಗರಿಷ್ಠ ಅನುದಾನ ರೂ. ೧,೧೦೦/- (ಡಯಟ್ ತಯಾರಿಸಿದಂತಹ ಕೈಪಿಡಿಯ ಮುದ್ರಣವನ್ನು ಉಪನಿರ್ದೇಶಕರು ನಿಯಮಾನುಸಾರ ಮುದ್ರಿಸುವುದು)

* ದಾಖಲೀಕರಣ – ಗರಿಷ್ಠ ಅನುದಾನ ರೂ. ೩೦೦/-

* ಔಷಧಿ – ಗರಿಷ್ಠ ಅನುದಾನ ರೂ. ೨೦೦/-

ಒಟ್ಟು ೫೦ ಮಕ್ಕಳು ಹಾಗೂ ೪ ಶಿಕ್ಷಕರಿಗೆ ೨ ದಿನದ ಪ್ರವಾಸಕ್ಕೆ ಗರಿಷ್ಠ ವೆಚ್ಚ ಮಾಡಬಹುದಾದ ಅನುದಾನ ರೂ. ೨೫,೦೦೦/- (ಪ್ರತಿ ಮಗುವಿಗೆ ತಗಲುವ ಅಂದಾಜು ವೆಚ್ಚ ರೂ. ೫೦೦/-)

ಜಿಲ್ಲಾ ಚಿಣ್ಣರ ಕರ್ನಾಟಕ ದರ್ಶನವನ್ನು ಎರಡು ದಿನಗಳು ಆಯೋಜಿಸುವುದು.

. ಅನುಷ್ಠಾನಕ್ಕೆ ಸಂಬಂಧಿಸಿದ ಅಂಶಗಳು:
* ಜಿಲ್ಲಾ ಹಂತದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಚಿಣ್ಣರ ಜಿಲ್ಲಾ ದರ್ಶನ ಸಮನ್ವಯ ಸಮಿತಿಯನ್ನು ರಚಿಸುವುದು (ಜಿಲ್ಲಾ ಉಪನಿರ್ದೇಶಕರು(ಆ) ಸದಸ್ಯ ಕಾರ್ಯದರ್ಶಿಗಳು, ಡಯಟ್ ಪ್ರಾಂಶುಪಾಲರು- ಉಪ ಅಧ್ಯಕ್ಷರು, ಆಯಾ ಜಿಲ್ಲೆಯ ಎಲ್ಲಾ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲಾ ತಾಲ್ಲೂಕಿನ ತಹಶೀಲ್ದಾರರು, ಕೆ.ಎಸ್.ಆರ್.ಟಿ.ಸಿ. ಪ್ರತಿನಿಧಿ, ಆರ್.ಟಿ.ಓ. ಪ್ರತಿನಿಧಿ, ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು, ಪ್ರತಿ ತಾಲ್ಲೂಕಿನಿಂದ ಒಂದು ಸ್ವಯಂ ಸೇವಕ ಸಂಘದ ಪ್ರತಿನಿಧಿ, ಜಿಲ್ಲಾ ಕೆ.ಎಸ್.ಟಿ.ಡಿ.ಸಿ. ಪ್ರತಿನಿಧಿ ಒಳಗೊಂಡಂತೆ ರಚಿಸವುದು). ಜಿಲ್ಲೆಯ ಎಲ್ಲಾ ವಲಯಗಳ ಜಿಲ್ಲಾ ದರ್ಶನಕ್ಕೆ ಸಂಬಂಧಿಸಿದಂತೆ ತಾಲ್ಲೂಕುವಾರು ಕ್ರಿಯಾ ಯೋಜನೆಯನ್ನು ಅನುಮೋದಿಸುವುದು ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮನ್ವಯ ಕಾರ್ಯ ನಿರ್ವಹಿಸುವುದು.

* ತಾಲ್ಲೂಕು ಹಂತದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಆಹಕ ಅಧಿಕಾರಿಯ ಅಧ್ಯಕ್ಷತೆಯಲ್ಲಿ ಚಿಣ್ಣರ ಜಿಲ್ಲಾ ದರ್ಶನ ಅನುಷ್ಠಾನ ಸಮಿತಿಯನ್ನು ರಚಿಸುವುದು (ಸದಸ್ಯರುಗಳು: ಕ್ಷೇತ್ರ ಶಿಕ್ಷಣ ಅಧಿಕಾರಿಗಳು, ಬಿ.ಆರ್.ಸಿ., ತಾಲ್ಲೂಕು ಪಂಚಾಯಿತಿ ಪ್ರತಿನಿಧಿ, ಕೆ.ಎಸ್.ಆರ್.ಟಿ.ಸಿ. ಪ್ರತಿನಿಧಿ, ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು, ಆರ್.ಟಿ.ಓ. ಪ್ರತಿನಿಧಿ, ೨ ಸಿ.ಎ.ಈ.ಓ. ಒಳಗೊಂಡಂತೆ ರಚಿಸುವುದು ಹಾಗೂ ಪ್ರತಿ ಶೈಕ್ಷಣಿಕ ವಲಯದಲ್ಲಿ ಪ್ರತಿ ತಂಡ ಪ್ರವಾಸ ಹೊರಡುವಲ್ಲಿ ಮಕ್ಕಳ ಆಯ್ಕೆ, ರೂಟ್‌ಮ್ಯಾಪ್ ತಯಾರಿಕೆ, ತಂಡದ ಇನ್ಶೂರೆನ್ಸ್ ಮಾಡಿಸುವುದು. ಊಟ, ವಸತಿ, ಒಟ್ಟಾರೆ ಕ್ರಿಯಾ ಯೋಜನೆ ತಯಾರಿಕೆಯಿಂದ ಹಿಡಿದು ಅನುಷ್ಠಾನದವರೆವಿಗೂ ಈ ಸಮಿತಿ ಕಾರ್ಯನಿರ್ವಹಿಸುತ್ತದೆ. ಕಡ್ಡಾಯವಾಗಿ ಕೆ.ಎಸ್.ಟಿ.ಡಿ.ಸಿ. ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಎಲ್ಲೆಲ್ಲಿ ಲಭ್ಯವಿದೆಯೋ ಅಲ್ಲಿಯೇ ಬಳಸುವುದು ಎಂದು ವಿಶೇಷವಾಗಿ ಸೂಚಿಸಿದೆ. ಯಾವುದೇ ಕಾರಣಕ್ಕೂ ಯೋಗ್ಯವಿಲ್ಲದ ಸ್ಥಳಗಳಲ್ಲಿ ಮಕ್ಕಳಿಗೆ ವಸತಿ ವ್ಯವಸ್ಥೆ ಮಾಡುವಂತಿಲ್ಲ.

. ವಿದ್ಯಾರ್ಥಿಗಳನ್ನು ಹಾಗೂ ಮೇಲ್ವಿಚಾರಕರ ಆಯ್ಕೆಗೆ ಮಾನದಂಡಗಳು:

ವಿದ್ಯಾರ್ಥಿಗಳ ಆಯ್ಕೆ:

ಪ್ರತಿ ಬ್ಲಾಕ್‌ಗೆ ಎಂಟು ಅಥವಾ ಹೆಚ್ಚಿನ ತಂಡಗಳಂತೆ ಹಾಗೂ ಪ್ರತಿ ತಂಡದಲ್ಲಿ ೫೦ ಮಕ್ಕಳಿರುವಂತೆ ಪ್ರವಾಸ ತಂಡಗಳನ್ನು ರಚಿಸಬೇಕು. ಹಾಗಾಗಿ ಪ್ರತಿ ಬ್ಲಾಕ್‌ನಿಂದ ಕನಿಷ್ಠ ೪೦೦ ಮಕ್ಕಳಿಗೆ ಪ್ರವಾಸ ಹಮ್ಮಿಕೊಳ್ಳುವುದು. ಇನ್ನೂ ಹೆಚ್ಚಿನ ತಂಡಗಳನ್ನು ಸಹ ಆಯೋಜಿಸಬಹುದಾಗಿದೆ. (ಹೆಚ್ಚುವರಿಯಾಗಿ ಆಯ್ಕೆಯಾಗಿರುವ ೩೮ ಬ್ಲಾಕ್‌ಗಳಲ್ಲಿ ಹೆಚ್ಚುವರಿ ಕನಿಷ್ಠ ೪ ತಂಡಗಳು – ೧೫೦ ವಿದ್ಯಾರ್ಥಿಗಳು, ಅಂದರೆ ಈ ಬ್ಲಾಕ್‌ನಲ್ಲಿ ಒಟ್ಟಾರೆಯಾಗಿ ಕನಿಷ್ಠ ೧೧ ಅಥವಾ ಹೆಚ್ಚಿನ ತಂಡಗಳಂತೆ ಹಾಗೂ ಕನಿಷ್ಠ ೫೫೦ ಮಕ್ಕಳು ಒಳಗೊಂಡಂತೆ ಪ್ರವಾಸ ಹಮ್ಮಿಕೊಳ್ಳುವುದು).

ವಿಶೇಷ ಸೂಚನೆ:
ಖಂಡಿಕೆ ೧ (ಯೋಜನೆಯ ಆಯವ್ಯಯ) ರ ಘಟಕ ವೆಚ್ಚ (೫೦ ಮಕ್ಕಳ ಒಂದು ತಂಡಕ್ಕೆ ರೂ. ೨೫,೦೦೦) ದಲ್ಲಿ ಉಳಿಕೆ ಆದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಪ್ರವಾಸ ಹಮ್ಮಿಕೊಳ್ಳುವುದು.

* ೫, ೬, ಮತ್ತು ೭ನೇ ತರಗತಿಯ ಮಕ್ಕಳನ್ನು ಸದರಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡುವುದು.

* ಆಯಾ ಶೈಕ್ಷಣಿಕ ವಲಯದ ೫, ೬ ಮತ್ತು ೭ನೇ ತರಗತಿಯಲ್ಲಿ ಎಲ್ಲಾ ಮಕ್ಕಳ ಒಟ್ಟು ಸಂಖ್ಯೆಯಲ್ಲಿ ೭೫% ಎಸ್.ಸಿ./ಎಸ್.ಟಿ. ಹಾಗೂ ೨೫% ಪ್ರತಿಭಾನ್ವಿತ ಮಕ್ಕಳನ್ನು ಜಿಲ್ಲಾ ಚಿಣ್ಣರ ದರ್ಶನಕ್ಕೆ ಆಯ್ಕೆ ಮಾಡುವುದು. ಶೇಕಡಕ್ಕೆ ಅನುಗುಣವಾಗಿ ಪೂರ್ಣ ಪ್ರಮಾಣದಲ್ಲಿ ಹೆಣ್ಣು ಮಕ್ಕಳನ್ನು ಸದರಿ ಕಾರ್ಯಕ್ರಮಕ್ಕೆ ಒಳಪಡಿಸುವುದು. ಯಾವುದೇ ಸಾಂಕ್ರಾಮಿಕ ಕಾಯಿಲೆಯಿಂದ ಹಾಗೂ ದೀರ್ಘಕಾಲಿಕ ಕಾಯಿಲೆಗಳಿಂದ ನರಳುತ್ತಿರುವವರನ್ನು ಕರೆತರಬಾರದು.

* ಆರೋಗ್ಯಕರವಾಗಿರುವ ಮಕ್ಕಳನ್ನು ಆಯ್ಕೆಮಾಡುವುದು.

* ತಂದೆ ತಾಯಿಗಳಿಂದ ಒಪ್ಪಿಗೆ ಪತ್ರ ಪಡೆಯುವುದು.

* ಜಿಲ್ಲಾ ದರ್ಶನಕ್ಕೆ ಮಕ್ಕಳನ್ನು ಆಯ್ಕೆ ಮಾಡುವಲ್ಲಿ ಪ್ರತಿ ತಾಲ್ಲೂಕಿನಿಂದ ಆಯ್ಕೆ ಮಾಡಲು ತಾಲ್ಲೂಕು ಸಮಿತಿಯನ್ನು ಬಿ.ಇ.ಓ., ಬಿ.ಆರ್.ಸಿ., ತಾಲ್ಲೂಕು ಪಂಚಾಯತ್‌ನ ಒಬ್ಬರು ಸದಸ್ಯರು ಹಾಗೂ ಒಂದು ಸ್ವಯಂಸೇವಾ ಸಂಘದ ಪ್ರತಿನಿಧಿಯನ್ನು ಒಳಗೊಂಡಂತೆ ರಚಿಸಿ ಮೇಲಿನ ಮಾನದಂಡದಂತೆ ಆಯ್ಕೆ ಮಾಡುವುದು

ಶಿಕ್ಷಕರನ್ನು ಆಯ್ಕೆ ಮಾಡಲು ನಿಗದಿಪಡಿಸಿರುವ ಮಾನದಂಡಗಳು:

ತಂಡದಲ್ಲಿ ಕಡ್ಡಾಯವಾಗಿ ಇಬ್ಬರು ಪುರುಷ ಶಿಕ್ಷಕರು ಹಾಗೂ ಇಬ್ಬರು ಮಹಿಳಾ ಶಿಕ್ಷಕರಿರಬೇಕು.

* ಈ ಪೈಕಿ ಒಬ್ಬರು ಸ್ಕೌಟ್ ಮತ್ತು ಗೈಡ್ಸ್ ತರಬೇತಿ ಹೊಂದಿದ ಶಿಕ್ಷಕರಾಗಿರಬೇಕು.

* ಒಬ್ಬರು ವಿಜ್ಞಾನ ಹಾಗೂ ಒಬ್ಬರು ಕಲಾ ಶಿಕ್ಷಕರಾಗಿರಬೇಕು.

* ಪ್ರಥಮ ಚಿಕಿತ್ಸೆ ಜ್ಞಾನವನ್ನು ಹೊಂದಿರಬೇಕು.

* ಆರೋಗ್ಯವಂತ ಕ್ರಿಯಾಶೀಲ ಉತ್ಸಾಹಿ ಶಿಕ್ಷಕರಾಗಿರಬೇಕು.

* ೫೦ ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿರಬೇಕು.

* ಪ್ರವಾಸ ಹೋಗುವ ಸ್ಥಳದ ಪರಿಚಯವನ್ನು ಮನಗಂಡಿರಬೇಕು.

* ಪ್ರತಿ ತಂಡಕ್ಕೂ ಬೇರೆ ಬೇರೆ ಶಿಕ್ಷಕರನ್ನು ಆಯ್ಕೆ ಮಾಡಬೇಕು.

ರಾಜ್ಯ ಯೋಜನಾ ನಿರ್ದೇಶಕರು ಸರ್ವ ಶಿಕ್ಷಣ ಅಭಿಯಾನ