ಹೈನುಗಾರಿಕೆ ಪ್ರಾಚೀನ ಕಾಲದಿಂದಲೂ ಮಾನವನ ಮುಖ್ಯ ಕಸುಬು ಅಥವಾ ಉಪಕಸುಬಾಗಿ ನಡೆದುಕೊಂಡು ಬಂದಿದೆ. ವ್ಯಕ್ತಿಯೊಬ್ಬನ ಅಂತಸ್ತು ಹಾಗೂ ಹಿರಿತನವನ್ನು ಆತ ಹೊಂದಿದ್ದ ಗೋಸಂಪತ್ತಿನಿಂದಲೇ ಅಳೆಯುತ್ತಿ‌ದ್ದ ಕಾಲವೊಂದಿತ್ತು. ಇಂದಿಗೂ ಸಹ ಹೈನುಗಾರಿಕೆಯೇ ರೈತನಿಗೆ ಹಾಗೂ ಆತನ ಕುಟುಂಬಕ್ಕೆ ನಿಯತವಾಗಿ ಆದಾಯ ತಂದು ಕೊಡುವ ಕಸುಬಾಗಿದೆ. ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಸಹಕಾರ ಕ್ಷೇತ್ರದ ಪ್ರವೇಶದ ನಂತರ ಭಾರತದ ಗ್ರಾಮೀಣ ಆರ್ಥಿಕ ಚಿತ್ರಣವೇ ಬದಲಾಗಿದೆ ಹಾಗೂ ಹಲವಾರು ರೈತ ಮಹಿಳೆಯರು ಸ್ವಾವಲಂಬಿಗಳಾಗುವಂತೆ ಮಾಡಿದೆ.

ಭಾರತೀಯ ರೈತ ಸಾವಿರಾರು ವರ್ಷಗಳಿಂದ ಹೈನುಗಾರಿಕೆಯನ್ನು ಮಾಡಿಕೊಂಡು ಬಂದಿದ್ದರೂ ಸಹ. ಆತ ಆಧುನಿಕ ಹಾಗೂ ಸಂಕರಣ ತಳಿಗಳಿಂದ ಮತ್ತು ವೈಜ್ಞಾನಿಕ ಪಶುಪಾಲನೆಯಿಂದ ತನ್ನ ಆದಾಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಈ ದಿಸೆಯಲ್ಲಿ ಬೆಂಗಳೂರಿನ ಕೃಷಿ ಹೆಚ್ಚು ಉಪಯುಕ್ತವಾಗಬಲ್ಲದು, ಅವರು ಪ್ರಾಚೀನ ಗೋಸಂಸ್ಕೃತಿಯನ್ನು ಪರಿಚಯಿಸಿಕೊಟ್ಟಿರುವುದಲ್ಲದೆ, ಕರ್ನಾಟಕದ ದನಗಳ ಇತಿಹಾಸ, ವಿದೇಶಿ ರಾಸುಗಳ ಪರಿಚಯ, ಅವುಗಳ ಪಾಲನೆ, ಪೋಷಣೆ, ಕೃತಕ ಗರ್ಭಧಾರಣೆ, ಕರುಗಳ ಆರೈಕೆ ಹಾಗೂ ಪೋಷಣೆಯಲ್ಲಿನ ಹಾಲಿನ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚಿಲ್ಲದ್ದಾರೆ. ಈ ಕೃತಿಯ ತಾಂತ್ರಕ ಪರಿಶೀಲನೆಯನ್ನು ಡಾ. ಕೆ. ಸತ್ಯನಾರಾಯಣ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ವಿಸ್ತರಣಾ ವಿಭಾಗ, ಪಶುವೈದ್ಯಕೀಯ ಕಾಲೇಜು, ಬೆಂಗಳೂರು ಇವರು ನಿರ್ವಹಿಸಿ ಕೃತಿ ಉತ್ತಮವಾಗುವುದಕ್ಕೆ ತಮ್ಮ ಸಲಹೆ, ಸೂಚನೆ ನೀಡಿದ್ದಾರೆ.

ಈ ಕೃತಿ ಹೈನೋದ್ಯಮದಲ್ಲಿ ತೊಡಗಿರುವ ಎಲ್ಲರಿಗೂ, ವಿದ್ಯಾರ್ಥಿಗಳಿಗೆ, ವಿಸ್ತರಣಾ ಕಾರ್ಯಕರ್ತರಿಗೆ ಹಾಗೂ ಇತರ ಆಸಕ್ತರಿಗೆ ಅತ್ಯುಪಯುಕ್ತವಾಗುವುದೆಂದು ನೀರಿಕ್ಷಿಸಲಾಗಿದೆ.

ಡಾ. ಉಷಾಕಿರಣ್
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಹಾಗೂ
ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ
ಕನ್ನಡ ಅಧ್ಯಯನ ವಿಭಾಗ
ಕೃಷಿ ವಿಶ್ವವಿದ್ಯಾನಿಲಯ
ಬೆಂಗಳೂರು -೫೬೦ ೦೨೪