“ಅನ್ನಾ ಬಡಸ್ವಂಗೆ ಯಾರೆಲ್ಲಾ ನೆನಸೀದೆ
ಅನ್ನಾ ಗೋಳು ತನಗೆ ಮಿಗೋಲಾದೋ| ಎಲ್ಲೆಣ್ಣೆ
ನಾನು ನೀನುಂಬೋ ಒಡನೂಟಾ.
ತುಪ್ಪಾ ಬಡ ಸ್ವಂಗೆ ಯಾರೆಲ್ಲಾ ನೆನುಸೀದೆ
ತುಪ್ಪಾಗಳು ತನಗೆ ಮಿಗೂಲಾದೋ-ಎಲ್ಲೆಣ್ಣೆ
ನಾನು ನೀನುಂಬೋ ಒಡನೂಟಾ | ಅಂದೇಳೀ
ಹಿಡ್ದಾನೆ ಬಳಿಯಾ ನಳೀತೋಳಾ

“ಬಡಸ್ವಾಕೆ ಬಡಸೀದೆ ನೂರೊಂದಾ ಬಡಸೀದೆ
ಉಪ್ಪಾ ಬಡಸ್ವದಕೆ ಮರತೀದೆ”
ಹಿಡಿದಾ ನಳಿತೋಳಾ ಒಪ್ಪಾದಲ್ ತಪ್ಪಸಗಂಡೇ
ಉಪ್ಪೀ ಗಂದೇಳಿ ನೆಡದಾಳೇ  |  ಸೂಬದ್ರಿ
ಹಿತ್ಲ ಕಣಕನ ಬಾಗ್ಲಾಗೇ ನೆಡದಾಳೆ ”
ಬಾವೀಯಾ ಹಗ್ಗಾ ಮಡೂಲಲ್ಲೇ | ಲ್ಲೀ | ಟ್ಟಿ ಕಂಡೇ

ಬಾಳೀಯಾ ಬನವಾ ಇಳೂದಾಳೇ |  ಸೂಬದ್ರಿ
ಬಾಳೀ ಮರಕಗ್ಗಾ ಇಡೋವಾಳೆ
ಬಾಳೀ ಮರಕಗ್ಗಾ ಇಡ್ವದ್ನು ಆ ಬಾಳೀ
ಪಾಪಕೆ ತಾನು ಒಳವಲ್ಲ | ಅಂಬುದ್ನು

ಇಳ್ಳೀಯಾ ಬನವಾ ಇಳೀದಾಳೆ | ಸೂಬದ್ರಿ
ಕಂಚೀ ಮರಕಗ್ಗಾ ಇಡೋವಾಳೇ
ಕಂಚೀ ಮರಕಗ್ಗಾ ಇಡ್ವದ್ನು ಆ ಕಂಚೀ
ಆ ಪಾಪಕ್ ತಾನೂ ಒಳವಲ್ಲ| ಅಂಬುದ್ನು

ಮಾಯೀನಾ ಬನವಾ ಇಳದಾಳೆ |ಸೂಬದ್ರಿ
ಮಾಯೀನಾ ಮರಕಗ್ಗಾ ಇಡೋವಾಳೇ
ಮಾಯೀನಾ ಮರಕಗ್ಗಾ ಇಡ್ವದ್ನು ಆ ಮಾಯಿ
ಆ ಪಾಪಕ್ ತಾನು ಒಳೊಪ್ಪೆ | ಅಂಬುದ್ನು

ಕೆದೂಗೀ ಬನವಾ ಇಳೂದಾಳೇ |  ಸೂಬದ್ರಿ
ಕೆದೂಗೊಂದೊಲಿ ಒಗದಾಳೇ|  ಸೂಬದ್ರಿ
ಸೆಳ್ಳುಗರೀಲೊಲೀ ಬರದಾಳೇ |  ಸೂಬದ್ರಿ
ಪಾಪದ ಪಲಗುಣಾ ಪುಣ್ಯಾದಲೆಡತಂದಾ

ಸೆಣ್ಣದಿಲತಿ ತಾಳೀದಾ ಹೆರಿಯಣ್ಣಾ |ಣ್ಣ| ನ ಕಣ್ಣೀಗೆ
ಇಂಗಾಳಿ ಹಬ್ಬ ತೊಡಗಾಲೇ | ಅಂದ್ ಸೂಬದ್ರಿ
ಸೆಳ್ಳುಗರೀಲೋಲಲೀ ಬರದಾಳೇ |  ಸೂಬದ್ರಿ
ತನ್ನಾ ಗಿಳಿಗೋಳಾ ದೆನಿದೂರೇ

ಎಂದೂ ಕರದಮಲ್ಲಾ ಬಂದಾರೇ ಗಿಳಿಗೋಳೂ
ಬಂದಾರೆ ಸೂಬದ್ರಿ ಬಡನಲ್ಲಿ | ನಿಂದೀ ಕಂಡೇ
ಏನು ಕಾರಣಲೆ ಕರದೀಯೇ
ಪಾಪದ ಪಲಗೂಣಾ ಪುಣ್ಯದತಿಡತಂಡ,

ಸೆಣ್ಣದಿಲತೀ ತಾಳೀತಾ ಹೆರಿಯಣ್ಣಾ | ಣ್ಣ|ನ ಕಣ್ಣೀಗೆ
ಇಂಗಾಳಿ ಹಬ್ಬ ತೊಡಗಾಲೇ | ಅಂದೇ ಸೂಬದ್ರಿ
ಕೊಟ್ಟಾಳೆ ಕಯ್ಯಾಬರದೋಲೆ |  ಸೂಬದ್ರಿ
ಮಾಯಿನಾ ಮರಕಗ್ಗಾ ಇಡೋವಾಳೇ |  ಸೂಬದ್ರಿ
ಹಗ್ಗಾದಲ್ ಪರಣವಾ ಕಳಕಂತೇ.
ಹಗ್ಗಾದಲ್ ಪರಣವಾ ಕಳ್ಕಂಡದ್ ಕಂಡಾರೆ

ಹಾರಿದವಂಬರಕೇ ಸೆರಿಯಾಗಿ | ಗಿಳಿಗೋಳು.
ಸೂಬದ್ರಿ ಅರಮನಗೇ ಬರೂವವು | ಗಿಳಿಗೋಳು
ಹೋಗಿ ಮಿಳಿಮೇನೇ ಕುಳತಾರೆ | ಗಿಳಿಗೋಳು
ಅರಗೀ ನೋಡಿದರೆ ಒಳಗೊಮ್ಮೆ
“ಮೂಳೂಗಿ ಒಳಗೆ ತುಪ್ಪೋ ಗರುಂಬರಣಜೀಣಾ
ಕೇಳೀ ಬಾರೊಂದು ಹೊಸಸುದ್ದೆ| ನಿನ್ನಾಲುಮಡ್ದಿ

ಹಗ್ಗಾದಲ್ ಪರಣವಾ ಕಳಕಂತು.
ಅಟ್ಟಂಬಾ ಮಾತಾ ಕೇಳಾನೆ ಅರಜೀಣಾ
ಉಣತಾ ಕಯ್ಯಲೇ ಕುಡಗೆದ್ದೇ | ಅರಜೀಣಾ
ಪನ್ನೀರಲಿ ಮೊಕವಾ ತೊಳದಾನೆ | ಅರಜೀಣಾ
ಮಾಳೂಗೀ ಒಳಗೆ ನೆಡದಾನೇ | ಅರಜೀಣಾ
ಮಾಳೂಗೀ ಒಳಗೆ ನೆಡದಾನೆ | ಅರಜೀಣಾ
ಪನ್ನೀರಾ ಗಿಂಡೀ ಮಡೂಗಾನೆ | ಅರಜೀಣಾ

ಗಿಳಿಗೋಳಾ ಒಡ್ನೋಗೇ ನಿಲೋವಾನೆ
ಗಿಳಿಗೋಳೋಡನೋಗೇ ನಿಲ್ವದ್ನು ಗಿಳಿಗೋಳು
ಕೊಟ್ಟಾರೆ ಕಯ್ಯಾ ಬರದೊಲೆ.
ಕೊಟ್ಟಾ ವಾಲೀಯಾ ದುಟ್ಟೆತ್ತಿ ನೋಡಾನೆ
ಪನ್ನೀ ಮರಿಯಲ್ಲೇಮುಗುಳೋ ನೆಗ್ಗೇ | ಗಿ| ಆಡೀತಾ

ಮಾಳೂಗೀ ಒಳಗೆ ನೆಡದಾನೆ | ಅರಜೀಣಾ
ತಟ್ಟೀಲ್ ಹಾಲಾ ಎರದಾನೆ | ಅರಜೀಣಾ
ಬಾಳೀ ಹೆಣ್ಣೇಳಾಸುಲೀದಾನೆ | ಅರಜೀಣ
ಇಳ್ಳೀ ಹಣ್ಣೇಳಾ ಸುಲೀದಾನೆ | ಅರಜೀಣ
ಹಾಲೊಳಗಣ್ಣಾ ಸುಲೀದಾನೆ | ಅರಜೀಣ
ಮಾಳಗ್ಗಿಂದೆರಗೇ ಬರೂವಾನೆ  | ಅರಜೀಣ

ಗಿಳಿಗೋಳೊಡ ನೋಗೆ ನಿಲುವಾನೇ
ಗಿಳಿಗೋಳೋಡನೋಗೇ ನಿಲ್ವದ್ನು ಅರಜೀಣಾ
ಗಿಳಿಗೋಳಿಗ್ಹಾಲಾ ಕೊಡೋವಾನೇ
ಹಾಲಾ ಕುಡ್ದವೇ | ಗಿಳಿಯೋ ಹಣ್ಣಾ ಮೆದ್ದವೇ | ಗಿಳಿಯೋ
ಹಾರಿದವಂಬರಕೆ | ಸೆರಿಯಾಗಿ |ಗ್ವ|ದ್ನು ಅರಜೀಣಾ
ಮಾಳೂಗೀ ಒಳಗೆ ನೆಡದಾನೆ

ನಾಗಾಬೆತ್ತವಾ ತಡದಾನೆ | ಅರಜೀಣಾ
ಅಮರತದಾ ಗಿಂಡೀ ತಡದಾನೆ  | ಅರಜೀಣಾ
ಮಾಳಗ್ಗಿಂದೆರಗಿ ಬರೋವಾನೆ | ಅರಜೀಣಾ
ಹಿತ್ಲ ಕಣಕ್ನ ಬಾಗಲ್ಲೇ ಹೆರೋಟಾನೆ | ಅರಜೀಣಾ
ಬಾಳೀಯಾ ಬನವಾ ಇಳೀದಾನೆ | ಅರಜೀಣಾ
ಇಳ್ಳೀಯಾ ಬನವಾ ಇಳೀದಾನೆ | ಅರಜೀಣಾ
ಕಂಚೀಯ ಬನವಾ ಇಳಿದಾನೆ | ಅರಜೀಣಾ

ಮಾಯೀನಾ ಬನಕೇ ನೆಡದಾನೆ
ಸುಬದ್ರಿ ಒಡನೋಗೇ ನಿಲೋವಾನೆ
“ಉಪ್ಪಿ ಗೋದೆಣ್ಣೇ ಉಪ್ಪರಗೀ ನೆಗದಿದಿಯೋ
ಮತ್ತೇ ಸಾಗರ ಇಳದೀಯೋ | ಅಂದೇಳೇ
ಇಳ್ಳೀಯಾ ಎಲಿಯಾ ಕೊಯೀತಂದೇ | ಅರಜೀಣಾ
ಎಲಿಯಾ ಮೆನೆಲಿಯಾ ಮಡದಾಸೇ | ಸೂಬದ್ರಿ

ಕೊಳ್ಳನ ಹಗ್ಗಾ ಸೆಡೂಲೀಸೇ | ಅರಜೀಣಾ
ಎಲಿಯಾ ಮೆನದ್ರ ಒರಗೀಸೆ | ಅರಜೀಣಾ
ಅದಕಿಟ್ ಅಮರತವಾ ತಳದಾನೆ | ಅರಜೀಣಾ
ನಾಗಾ ಬೆತ್ತವಾ ಎಳೆದಾನೇ
ನಾಗಾ ಬೆತ್ತವಾ ಎಳ್ವದ್ನು ಸೂಬದ್ರೀ

ಮಿಯ್ಯಾ ಮುರುದೆದ್ದೇ ಕುಳತಾಳೇ
ಮಿಯ್ಯಾ ಮುರುದೆದ್ದೇ ಕುಳ್ವದ್ನು ಅರಜೀಣಾ
ಆಗೊಂದು ಮಾತಾ ನುಡೀದಾನೇ
ಮಾವನ ಮಗತಾನು ತಡಕೊಂಡೋಗು ಸೋದರ ತಾನು

ಹೆರುಗೇ ಸೋದರವಾ ಅರಸೀದಿಯೋ| ಅಂದೇಳಿ
ಆಗೇ ತೋರಾನಿಯೇ ನಿಜರೂಪಾ
ಮಾವನ ಮಗನೇ ತಡಕಂಡೋಗು ಸೋದರದವ್ನೆ
ಇಟ್ ನನ್ನ ಗೋಳೆಕೆ ಹೊಯಿಕಂಡೇ
ಅತ್ತೀಮಗನೆ ತಡಕಂಡೋಗು ಸೋದರದವ್ನೆ
ಇಟ್ ನನ್ ಗೋಳೆಕೆ ಹೋಯೀಕಂಡೇ | ಅಂದ್ ಸೂಬದ್ರಿ

ಬೂಮಗ್ ಸೇರಿಯಾಗೆ ತಲೆಬಾಗೇ
ಬೂಮಗ್ ಸೆರಿಯಾಗೇ ತಲಬಾಗ್ವದ್ನು ಅರಜೀಣಾ
ಕೆದೂಗೀ ಬನವಾ ಇಳದಾನೆ |ಅರಜೀಣಾ
ಕೆದೂಗೊಂದೊಲೀ ಒಗದಾನೆ | ಅರಜೀಣಾ
ಸೆಳ್ಳು ಗರೀಲೋಲೀ ಬರದಾನೆ | ಅರಜೀಣಾ
ತನ್ನಾ ಗಿಳಿಗೋಳಾ ದೆನೀದೋರೇ

ಇಂದೂ ಕರದಮಲ ಬಂದಾರೆ ಗಿಳಿಗೋಳು
ನಿಂದಾರೆ ಅರ್ಜುನ್ನಾ ಒಡನಲ್ಲೇ
ಈ ಕೂಸು ಜೀಂವಾ ಈ ಮಾಣಿಕಯ್ಲದೆ
ಈ ಮಾಣಿಗ್ ದಾರೀ ಎರದೋಗು | ಅಂದೇಳೆ
ಕೊಟ್ಟಾನೆ ಕಯ್ಯಾ ಬರದೋಲೆ
ಕೊಟ್ಟಾ ಪಾಲೀಯಾ ರಟ್ಟಿಯಲಗಡಸಗಂಡೇ
ಹಾರಿದಂಬರಕೇ ಸೆರಿಯಾಗೇ | ಗಿಳಿಗೋಳು

ನಾರ್ಣದೆವ್ನರ ಮನಗೇ ನೆಡೆದಾವೇ | ಗಿಳಿಗೋಳು
ಹೋಗಿ ಗಿಳಿಗೋಳು ಅರಗಾರೆ | ಗಿಳಿಗೋಳು
ಹೋಗಿ ಮಿಳಿಮೆನೆ ಕುಳತಾರೆ
ಹೋಗಿ ಮಿಳಿಮೆನೆ ಕುಳವದ್ನು ಗಿಳಿಗೋಳು
ಅರಗೀ ನೋಡಿದರೆ ಒಳಗೊಮ್ಮೆ | ನಾರ್ಣದೆವ
ವಾಲಗ್ಗುಂಡಾನೆ ಹಸೆಯಲ್ಲಿ

ಈ ಕೂಸು ಜೀಂವಾ ಈ ಮಾಣಿ ಕಯ್ಲದೆ
ಈ ಮಾಣಿಗ್ ದಾರೀ ಎರದೋಗೂ | ಅಂದೇಳೆ
ಕೊಟ್ಟಾರಿಯೇ ಕಯ್ಯಾ ಬರದೊಲೆ | ನಾರ್ಣದೆವ್ನಾ
ತೊಡಿಯಾ ಮೆನೋಲಿ ಮಡಗಾರೆ
ತೊಡಿಯಾ ಮೆನನೋಲಿ ತಡೆದೆತ್ತಿ ನೋಡಾನೆ
ಪನ್ನೀ ಮರಿಯಲ್ಲೇ ಮುಗುಳುನೆಗ್ಗೆ | ಗ್ಗೀ| ಆಡೀತಾ

ಮಾಳೂಗೀ ಒಳಗೆ ನೆಡದಾನೆ | ನಾರ್ಣದೆವ
ಹಾಲ್ತಟ್ಟೀಲ್ಹಾಲಾ ಎರದಾನೆ | ನಾರ್ಣದೆವ
ಬಾಳೀ ಹಣ್ಣೇಳಾ ಸೊಲಿದಾನೆ | ನಾರ್ಣದೆವ
ಇಳ್ಳೀ ಹಣ್ಣೇಳಾ ಸೋಲೀದಾನೆ | ನಾರ್ಣದೆವ
ಹಾಲೊಳಗಣ್ಣಾ ನುಳೀದಾನೆ | ನಾರ್ಣದೆವ
ಮಾಳಗ್ಗಿಂದೆರಗೇ ಬರೋವಾನೆ. | ನಾರ್ಣದೆವ
ಗಿಳಿಗೊಳೋಡನೋಗೇ ನಿಲೋವಾನೇ | ನಾರ್ಣದೆವ

ಗಿಳಿಗೋಳೀಗ್ ಹಾಲಾ ಕೊಡೋವಾನೇ
ಗಿಳಿಗೋಳೊಡನೋಗೇ ನಿಲ್ವದ್ನು ಗಿಳಿಗೋಳು
ರಟ್ಟೆ ಅಲ್ಲಾಡೇ ಕುಡೀದಾವೇ.
ಹಾಲಾ ಕುಡ್ದವೇ ಗಿಳಿಯೋ ಹಣ್ಣಾಮದ್ದವೇ ಗಿಳಿಯೋ
ಹಾರಿದಂವಬರಕೇ ಸೆರೀಯಾಗೇ
ಹಾರಿದವಂಬರಕೇ ಸೆರಿಯಾಗುತ್ನು ನಾರ್ಣದೆವ

ಮಾಳೂಗೀ ಒಳಗೆ  ನೆಡದಾನೆ | ನಾರ್ಣದೆವ
ಅಟ್ಟತ್ತೀ ಪಟ್ಟಗೀಯೂ ತೆಗದಾನೇ | ನಾರ್ಣದೆವ
ಮೆಟ್ಟೀ ಬೀಗವಾ ಕರೀದಾನೆ.
ಮೆಟ್ಟಿ ಬೀಗವಾ ಕರ‍್ವದ್ನು ನಾರ್ಣದೆವ
ಮುಚ್ಚಲ ತೆಗದೇ ಕಡಗಿಟ್ಟೇ | ನಾರ್ಣದೆವ
ಪಟ್ಟೆ ಜೋತುರವಾ ನೆರ ದುಟ್ಟೇ | ನಾರ್ಣದೆವ
ಮುತ್ತನ ಮುಂಡಸನಾ ತಲಗೇಸುತ್ತೇ | ನಾರ್ಣದೆವ

ಪಟ್ಟೇ ಹಚ್ಚಡವಾ ಹೊಗುಲೀಗೆ | ಹಾಯೀಕಂಡೇ
ಮುರು ಬಗ್ಸ ಹಣವಾ ಮೊಗದಾನೆ | ನಾರ್ಣದೆವ
ಜೋತುರ ಸೆರುಗಿಲೇ ಬಿಗೂದಾನೆ | ನಾರ್ಣದೆವ
ಪೆಟ್ಟೂಗೀ ಬಾಯಲ್ಲೇ ಮಡೂಗಾನೆ | ನಾರ್ಣದೆವ
ಸಣ್ಣಾಕಯ್ ಹಡ್ಪಾ ಹೋಗಲೀಗೆ | ಹಾಯೀಕಂಡೇ

ಮಾಳಗ್ಗಿಂದೇರಗೇ ಬರೋವಾನೇ | ನಾರ್ಣದೆವಾ
ರಾಜಂಗ್ಳ ಮೆಟ್ಟಾ ಇಳೀದಾನೆ | ನಾರ್ಣದೆವಾ
ನಾರ್ಯೋರಾ ಕೇರಿಗಾಗೇ ನೆಡದಾನೆ | ನಾರ್ಣದೆವಾ
ಹೋಗೀ ಬಾಗಲ್ಲೇ ನಿಲೋವಾನೇ | ನಾರ್ಣದೆವಾ
ನಾರ್ಯೋರಿಗ್ ಒಂದೀಳ್ಯಾ ಕೊಡೋವಾನೇ ?

ಸುಕ್ರರ ತದಗಿಯೊ ಬ್ರಸ್ತರ ಬಿದಗಿಯೋ
ಸಣಿಯರ ಸೂಬದ್ರೀ ಮುದ ವಿಯೋ | ನಾರೀಯೋರೆ.
ನೀವು ನಮ್ಮನಗೇ ಬರೋಬೇಕೆ | ಸುಬದ್ರಿ ಮನಿಯಾ
ಮೂಡನ ಹಸಗರವಾ ಬರಿಯಾಬೇಕೇ | ಅಂದೇಳೇ
ನಾರ್ಯೋರಿಗ್ ಒಂದೀಳ್ಯಾ ಕೊಡೋವಾನೇ | ನಾರ್ಣದೆವ
ನಿಸ್ತ್ರೋರ್ ಕೇರಿಗಾಗೇ ನೆಡದಾನೇ |
ಹೋಗಿ ಬಾಗಲ್ಲೇ ನಿಲೋವಾನೇ

ಸುಕ್ರರ ತದಗಿಯೋ ಬ್ರಸ್ತರ ಬಿದಗಿಯೋ
ಸಣಿಯರ ಸೂಬದ್ರಿ ಮದವೀಯೋ| ನಾರಿಯೋರೆ
ನೀವು ನಮ್ಮನಗೇ ಬರೋಬೇಕೇ | ನಮ್ಮನಿಯಾ
ಅಂಕಣದಲ್ ಅಯ್ದ್ ಸೇಡೀ ಬರಬೇಕೇ |ಕು| ಅಂದೇಳಿ

ನಿಸ್ತ್ರೇರಿಗ್ ಒಂದೀಳ್ಯಾ ಕೊಡೋವಾನೇ | ನಾರ್ಣದೆವ
ಕುಂಬರ ನರಮನಗೇ ನೆಡದಾನೆ | ನಾರ್ಣದೆವ
ಹೋಗಿ ಬಾಗಲ್ಲೇ ನಿಲೋವಾನೇ | ನಾರ್ಣದೆವ
ಕುಂಬರ ಗೊಂದೀಳ್ಯಾ ಕೊಡೋವಾನೇ

ಸುಕ್ರರ ತದಗಿಯೋ ಬ್ರಸ್ತರ ಬಿದಗಿಯೋ
ಸಣಿಯರ ಸೂಬದ್ರೀ ಮದವೀಯೋ |
ಕೊಂಬು ಕೊಂಬು ಗೆಯ್ಯೋ ಕೊಂಬಗೆ ಮುಚ್ಚಳಗೆಯ್ಯೋ
ಅದಕ್ಕೊಪ್ಪುದೆರಡು ಆರತೀ  ಗೆಯ್ಯೋ | ಕುಂಬರಾ
ತಂದಿರ‍್ಸೋ ನಮ್ಮ ಜಗಲ್ಯಲ್ಲೇ | ಅಂದೇಳಿ
ಕುಂಬರ ಗೊಂದೀಳ್ಯಾ ಕೊಡೋವಾನೇ | ನಾರ್ಣದೆವ
ಆಚಾರಿ ಅರ‍್ಮನಗೇ ನೆಡದಾನೆ |  ನಾರ್ಣದೆವ
ಹೋಗಿ ಬಾಗಲ್ಲೇ ನಿಲೋವಾನೆ |

ಬ್ರಸ್ತರ ಬಿದಗಿಯೋ ಸುಕ್ರರ ತದಗಿಯೋ
ಸಣಿಯರ ಸೂಬದ್ರೀ ಮದವೀಯೋ| ಅಚಾರಿ
ನೀನು ನಮ್ಮನಗೇ ಬರೋಬೇಕೋ | ನಮ್ಮನಿಯಾ
ಬಾಗಲ ತೋರಣವಾ ಗೆಯೀಬೇಕೋ | ಅಂದೇಳಿ
ಆಚಾರೀ ಗೊಂದೀಳ್ಯಾ ಕೊಡೋವಾನೇ | ನಾರ್ಣದೆವ
ಬಿನ್ನಾಣಿ ಅರಮನಗೇ ನೆಡದಾನೆ |
ಹೋಗಿ ಬಾಗಲ್ಲೇನಿಲೋವಾನೆ |

ಸುಕ್ರರ ತದಗಿಯೋ ಬ್ರಸ್ತರ ಬಿದಗಿಯೊ |
ಸಣಿಯರ ಸೂಬದ್ರೀ ಮದವೀಯೋ | ಬಿನ್ನಾಣಿ
ನೀನು ನಮ್ಮನಗೇ ಬರೋಬೇಕೆ | ಬಿನ್ನಾಣೀ
ಸೂಬದ್ರಿ ಸಿರ‍್ಪನ್ನಿ ಗೆಯಬೇ ಕೋ| ಅಂದೇಳೇ

ಬಿನ್ನಾಣೀ ಗೊಂದೀಳ್ಯಾ ಕೊಡೋವಾನೇ | ನಾರ್ಣದೆವ
ಇಂದ್ರಾಲೋಕಕ್ಕಾಗೇ ನೆಡದಾನೆ | ನಾರ್ಣದೆವ
ಇಂದ್ರಲೋಕ್ದಂಗಡೀ ತೆಣ್ಗಿಮೆನೇ ಕುಳೀತಾನೆ, | ನಾರ್ಣದೆವ
ಇಂದ್ರಾಸೆಟ್ಟೀ ಅಂದೇ ದೆನೀದೂರೇ.
ಇಂದ್ರಾಸೆಟ್ಟೀ ಅಂದೇ ದೆನಿದೂರ‍್ವದ್ನು ಇಂದ್ರಾ ಸೆಟ್ಟಿ
ಓಯ್ಗುಂಡೇ ಒಡುನೇ ಬರೂವಾನೇ
ಓಯ್ಗುಂಡೇ ಬಡ್ನೇ ಬಂದೀ ಏನಂಬಾನೆ.

ಏನು ಕಾರಣಲೇ ಕರದೀಯೆ |
ಕರದಂ ಕಾರ್ಯಾವಿಲ್ಲಾ ಸಿರಿದುಂಬಿಸರಸಯ್ಯೇ
ಇಂದ್ರಾ ಪಟ್ಟೀ ನೋಡೇ ತೆಗೆತಾರೋ | ಅಂಬುದ್ನು
ಮಾಳೂಗೀ ಒಳಗೆ ನೆಡದಾನೆ | ಇಂದ್ರಾಸೆಟ್ಟಿ
ಜವಳೀಯೂ ದಿಂಡಾ ಬಿಡಸಾನೆ | ಇಂದ್ರಾಸೆಟ್ಟಿ
ಮಾಳಗ್ಗಿಂದೆರಗೇ ಬರವಾನೇ ಇಂದ್ರಾಸೆಟ್ಟಿ

ನಾರ್ಣದೆವ್ನ ಬಲಗಯ್ಲೆ ಕೊಡೋವಾನೇ
ನಾರ್ಣದೆವ್ನಾ ಬಲಗಯ್ಲೆ ಕೊಡ್ವದ್ನು ನಾರ್ಣದೆವ
ಆಚಗಯ್ನಾ ಪಟ್ಟೀ ಇಚಮಗ್ಗೀ| ನೋಡಾನೆ
ಬಣ್ಣಾ ಸಾಕಿದರಾ ಇಚಮಗ್ಗೀ | ನೋಡಾನೆ
ಬಣ್ಣಾ ಸಾಕಿದರಾ ಬೆಲೆ ಹೇಳೋ.
ದೆಡಿಗೆ ಸಾವರವಂದಾ ಮೊಳಕೆ ಸಾವರವಂದಾ

ಅದಕೆ ಸಾವಿರದಾಹಣವಂದಾ | ಅಂಬುದ್ನು ನಾರ್ಣದೆವ
ಅದಕಲ್ಲೇ ಹಣವಾ ಸಲಸಾನೆ | ನಾರ್ಣದೆವ
ಪಟ್ಟೀ ದಟ್ಟಿಯಲೆ ಬಿಗೀದಾನೆ | ನಾರ್ಣದೆವ
ರಾಜಬೀದಿಗಾಗೇ ನೆಡದಾನೆ, | ನಾರ್ಣದೆವ
ಚಿನವರನರಮನಗೇ ನೆಡದಾನೆ | ನಾರ್ಣದೆವ
ಹೋಗಿ ಬಾಗಲ್ಲೇ ನಿಲೋವಾನೆ | ನಾರ್ಣದೆವ

ಚಿನವರನಂದೇ ದೆನಿದೂರೇ
ಇಂದೂ ಕರದಮಲ್ಲಾ ಬಂದಾನೆ ಚಿನವರ,
ನಿಂದಾನೆ ನಾರ್ಣದೆವ್ನಾ ಒಡನಲ್ಲಿ| ನಿಂದೀ ಕಂಡೇ

ಏನು ಕಾರಣಲೆ ಕರದೀಯೋ
ಇಂದ್ರಲೋಕ್ದ್ ಸೊನ್ಗಾರಾ ಇಂದೇ ಗದ್ದಗೀ ಹೂಡೋ
ಕಟ್ಟಣಿ ಮಣಿಸರ‍್ನಾ ಗೇಯೀಕೋಡೋ.
ಇಂದ್ರಾಲೋಕ್ದ ಸೋನ್ಗಾರಾ. ಇಂದೇಗದ್ದಗಿ ಹೂಡೋ
ತೋಳ್ ಬಳಿ ಮಣಿಸರ‍್ನಾ ಗೇಯೀಕೋಡೋ
ಇಂದ್ರಾ ಲೋಕ್ದ್ ಸೋನ್ಗಾರಾ ಇಂದೇ ಗದ್ದಗೀ ಹೂಡೇ

ತೋಳ್ ಬಿಳಿ ಮಣಿ ಸರ‍್ನಾ ಗೆಯೀದಾನೆ
ಇಂದ್ರಾಲೋಕ್ದ ಸೋನ್ಗಾರಾ ಇಂದೇ ಗದ್ದಗೀ ಹೂಡೇ
ಕಟ್ಟಣಿ ಮಣಿಸರ‍್ನಾ ಗೆಯೀದಾನೇ | ಚಿನವರಾ
ನಾರ್ಣದೆವ್ನ ಬಲಗಯ್ಲೆ ಕೊಡೋವಾನೇ
ನಾರ್ಣದೆವ್ನ ಬಲಗಯ್ಲೆ ಕೊಡ್ವದ್ನು ನಾರ್ಣದೆವ

ಅದಕಲ್ಲೇ ಹಣವಾ ಸಲೀಸಾನೆ  | ನಾರ್ಣದೆವ
ಹಚ್ಡ ಸೇರಿಗೀಲೇ ಬಿಗೂದಾನೆ | ನಾರ್ಣದೆವ
ತನ್ನಾ ಅರಮನೆಗೇ ಬರೋವಾನೇ | ನಾರ್ಣದೆವ
ಬಂದೀ ರಾಜಂಗ್ಳಾ ನೆಗದತ್ತೇ | ನಾರ್ಣದೆವ
ಮಾಳೂಗೀ ಒಳಗೆ ನೆಡದಾನೆ | ನಾರ್ಣದೆವ
ನಾಗಾಬೆತ್ತವಾ ತಡದಾನೇ | ನಾರ್ಣದೆವ
ನಾಗಾ ಬೆತ್ತವಾ ತಿರಸಾನೆ | ನಾರ್ಣದೆವ
ನಾಗಾಲೋಕ್ದ ಮಂದೀ ನರದದೇ | ನಾರ್ಣದೇ‌ವ್ನ ಮನಿಯಾ

ಮುತ್ತೀನಾ ಚಪ್ಪರವಾ ಇಡೋವಾರೆ
ಮುತ್ತೀನಾ ಚಪ್ಪರಾ ಮುನ್ನೂರೂಗಾವುದ್ದಾ
ಮತ್ತೀನಾ ಸರಜಲ್ಲಿ ಬಿಡಸಾರೆ | ತನ್ನಾಲೋ
ಮುದ್ದನ ತಂಗೀಯೂ ಮೊದವೀಗೆ |ಗ್| ಂದ್ ನಾರ್ಣದೆವ
ಚಪ್ಪರ್ದಾ ಕೆಲಸ ಮುಗೀದಾವೆ.
ಚಪ್ಪರ್ದಾ ಕೆಲ್ಸಾ ಮುಗ್ವದ್ನು ನಾರ್ಣದೆವ್ನ ಮನಿಗೆ
ನಾರಿಯೋರು ಬಂದೇ ನೆರದಾರೆ | ನಾರ್ಣದೆವ್ನ ಮನಿಯೂ

ಮೂಡಣಸಗರವಾ ತೊಳದಾರೆ | ನಾರ್ಣದೆವ
ಮೂಡಣ ಸಗರವಾ ಬರದಾರೆ
ಮೂಡಣ ಸಗರವಾ ಬರ‍್ವದ್ನು ನಾರ್ಣದೆವ್ನ ಮನಿಗೇ
ಕುಂಬಾರಾ ಬಂದೇ ನೆರದಾನೆ
ಕುಂಬು ಕುಂಬು ಗೆಯ್ದೆ? ಕುಂಬಗ ಮುಚ್ಚಳ ಗೆಯ್ದೇ
ಆರತೀಯೆಯ್ದಾ ಗೆಯೀದಾನೆ| ಕುಂಬಾರಾ

ತಂದಿರಸಾನೆ ದೊಡ್ಡಾ ಜಗೋಲ್ಯಲ್ಲೇ | ನಾರ್ಣದೆವ್ನ ಮನಿಗೆ
ಬಿನ್ನಾಣಿ ಬಂದೇ ನೆರದಾನೆ.
ಬಂದಾ ಬಿನ್ನಾಣಿಯಾ ಚಂದದಿಂದು ಪಚರಿಸೇ
ಹೊನ್ನಾ ಮಣೆಯೊಂದಾ ಮಡುಗಾನೆ
ಹೊನ್ನಾ ಮಣೆಯೊಂದಾ ಕುಳವಕ್ ಕೋಟ್ ಬಿನ್ನಾಣಗೆ

ರನ್ನದೊಂದೀಳ್ಯಾ ಮೆಲಕೊಟ್ಟೇ
ರನ್ನ ದೋಂದೀಳ್ಯಾ ಮೆಲಕೊಡ್ವದ್ನು ನಾರ್ಣದೆವ್ನ ಮನಿಗೆ
ಆಚಾರೀ ಬಂದೇ ನೆರದಾನೆ | ನಾರ್ಣದೆವ್ನ ಮನಿಯಾ

ಬಾಗ್ಲ ತೋರಣವಾ ಗೆಯೀದಾನೆ
ಬಾಗ್ಲ ತೋರಣವಾ ಗೆಯ್ವದ್ನು ನಾರ್ಣದೆವ್ನ ಮನಿಗೇ
ಆಚಾರರೀ ಬಂದೇ ನೆರದಾನೆ | ನಾರ್ಣದೆವ್ನ ಮನಿಯೂ
ಬಾಗ್ಲ ತೋರಣವಾ ಗೇಯಿದಾನೆ
ಬಾಗ್ಲ ತೋರಣವಾ ಗೆಯ್ವದನ್ನು ನಾರ್ಣದೆವ್ನ ಮನಿಗೇ
ಅಸಗನು ಬಂದೇ ನೆರದಾನೆ | ನಾರ್ಣದೆವ್ನ ಮನಿಯಾ

ಮುತ್ತನ ನೆಲಗಟ್ಟಾ ಗಯೀದಾನೆ.
ಮುತ್ತಲ ನೆಲಗಟ್ಟಾ ಗೆಯ್ದಿದನ್ನು ನಾರ್ಣದೆವಾ
ರಾಜಂಗ್ಳ ಮೆಟ್ಟಾ ಇಳೀದಾನೆ  | ನಾರ್ಣದೆವಾ
ಬಾಳೀಯೂ ಬನವಾ ಇಳೀದಾನೆ | ನಾರ್ಣದೆವಾ

ಕಂಚೀಯಾ ಬನವಾ ಇಳೀದಾನೆ | ನಾರ್ಣದೆವಾ
ಇಳ್ಳೀಯಾ ಗಬನವಾ ಇಳಿದಾನೆ | ನಾರ್ಣದೆವಾ
ಮಾಯೀನಾ ಬನಕೇ ನೆಡದಾನೆ | ನಾರ್ಣದೆವಾ
ಸೂಬದ್ರಿ ಅರ್ಜಿನ್ನಾ ಕರ್ಕಂಡ ಬರೋವಾನೆ | ನಾರ್ಣದೆವಾ
ತನ್ನಾ ಅರ‍್ಮನಗೇ ಬರೋವಾನೆ | ನಾರ್ಣದೆವಾ
ರಾಜಂಗ್ಳಲ್ ತಂದೇ ಕುಳಸಾನೆ | ನಾರ್ಣದೆವಾ
ಮಾಳೂಗೀ ಒಳಗೆ ನೆಡದಾನೆ | ನಾರ್ಣದೆವಾ
ಅಕ್ಸತಿ ಬಟ್ಟಲವಾ ತಡದಾನೆ | ನಾರ್ಣದೆವಾ
ಹೊನ್ನಾ ಮಣೆಯೊಂದಾ ತಡದಾನೆ | ನಾರ್ಣದೆವಾ

ಎಣ್ಣೀಯಾ ಗಿಂಡೀ ಬಲಗಯ್ಲಿ | ತಡಕಂಡೀ
ಮೊಳಗ್ಗಿಂದೆರಗೇ ಬರೋವಾನೆ
ಹೊನ್ನಾ ಮಣೆಯೊಂದಾ ಮಡಗಾನೆ  | ನಾರ್ಣದೆವಾ
ಮಣೆಯಾ ಮೆನೋಗೆ ಕುಳಿತಾನೆ