ಮುದ್ರೆ ದುಂಗಲವಾ ಬೆರಳ್ ದುಂಬೇ

ಮತ್ನ ಬಾಸಿಂಗಾ ತಡದಾನೆ | ಅರಜೀಣಾ
ಮತ್ತನ ತಂಡಲವಾ ತಡದಾನೆ | ಅರಜೀಣಾ
ಅದು ಎಲ್ಲಾ ಸೆಳ್ಳುಗುರಲ್ ಮಡಗಾನೆ
ಅದುವೆಲ್ಲಾ ಸೆಳ್ಳುಗುರಲ್ ಅಡಗೀಸಿ ಅರಜೀಣಾ
ಸೆಣ್ಣಾ ಗಂಬುಳಿಯಾ ಹೊಗಲೀಗೆ | ಹಾಯಿ | ಕಂಡೇ

ತನ್ನಾ ಕಯ್ಚಂಚೀ ತಡದಾನೆ | ಅರಜೀಣಾ
ಪೆಟ್ಟೂಗೀ ಬಾಯಲ್ಲೇ ಮಡೂಗಾನೆ | ಅರಜೀಣಾ
ಮಾಳಗ್ಗಿಂದೆರಗೇ ಬರೋವಾನೆ | ಅರಜೀಣಾ
ಹಿತ್ಲ ಕಣಕನ ಬಾಗ್ಲದಾಗೇ ನೆಡದಾನೆ | ಅರಜೀಣಾ
ತನ್ನಾ ಮನಿಕೂಸ್ನಾ ದೆನೀದೂರೇ | ಅರಜೀಣಾ

ಹೋಗ್ವಾಕಾರು ತಿಂಗ್ಳ ಬರುವಾಕಾರು ತಿಂಗ್ಳಾ
ಬರುವಾಕ್ ಹನ್ನಯ್ಡು ತಿಂಗ್ಳ ತಡವುಂಟು – ಮನಿಕೂಸಾ
ನಾರೋರಿಗ್ ನಾಹೊದ್ ಸುದ್ಧಿ ಬರೀಬೇಡೀ | ಅಂದೇಳಿ
ಹಿತ್ಲ ಕಣಕ್ನ ಬಾಗಲ್ಲೇ ಹೆರೊಟಾನೇ | ಅರಜೀಣಾ
ಕಲ್ದಣಪೀಗಾಗೇ ನೆಡದಾನೆ | ಅರಜೀಣಾ
ತಾರೀ ಹೊಳಿಯಲ್ಲೇ ನಿಲೋವಾನೇ | ಅರಜೀಣಾ
ಅಲ್ಲೊಂದ್ ಹಣ್ಣಡಕೀ ಒಡದಾನೇ | ಅರಜೀಣಾ
ಎಲೆ ತಿಂದ್ ತಂಬಳವಾ ಉಗದಾನೆ | ಅರಜೀಣಾ

ತಾರೀ ಕೂಸ್ನಂದೇ ದೆನೀದೂರೇ | ತಾರೀಕೂಸಾ
ಓಯ್ಗುಂಡೇ ಒಡನೇ ಬರೋವಾನೇ
ಒಯ್ಗುಂಡೇ ಒಡ್ನೇ ಬಂದೀ ಏನಂಬಾನೆ
ಏನು ಕಾರಣಲಿ ಕರದೀಯೋ
ಕರದಂ ಕಾರ್ಯವಿಲ್ಲ ಕಿರಿದಂಚಿಸರ ಸಯ್ಯೆ
ಮುತ್ತೀನಾ ದೋಣೀ ಹೊಳಿಗೆಳಿಯೋ| ತಾರೀಕೂಸಾ

ಚಿನ್ನದ ಹುಟ್ಟಾ ತಡದಾನೆ
ಚಿನ್ನದ ಹುಟ್ಟಾ ತಡ್ವದ್ನು ಅರಜೀಣಾ
ಮುತ್ತೀನಾ ದೋಣೀ ನೆಗದತ್ತೆ | ತಾರೀಕೂಸಾ
ಚಿನ್ನಾದುಟ್ನಲ್ಲಿ ಬಳಗಾನೆ
ಚಿನ್ನಾ ದುಟ್ನಲ್ಲಿ ಬಳಗ್ವದ್ನು ತಾರೀಕೂಸ್ನಾ
ಮುತ್ತೀನಾ ದೋಣಿ ತೆರೆತಾಡಿ
ಮುತ್ತೀನಾ ದೋಣಿ ತೆರೆತಾಡ್ವದ್ನು ಅರಜೀಣಾ

ದೋಣಿಗಿಂದ್ ಕೆಳಗೆ ಇಳದಾನೆ | ಅರಜೀಣಾ
ತಾರೀಕೂಸ್ಗೆ ಬುದ್ಧೀ ಬರದಾನೆ
ತಾರೀಕೂಸ್ಗೆ  ಬುದ್ಧೀ ಏನಂದಿ ಬರದಾನೆ
ತನ್ನ ನಾರ್ಯೋರಿಗ್ ತಾಬಂದಾ ಸುದ್ದೀ ಒರೀಬೇಡಾ
ಗಂಡ್ನ ಕೆಳ್ಗ್ನ ಹಿಂಡರ್ಗೆ ಅತ್ತೀ ಕೆಳ್ನ್ಗ ಸೂಸದಿರಗೆ

ನಿಮಗೆ ನಾದೋಣಿ ತರುವಾದಿಲ್ಲಾ | ಅಮ್ಮಾನೋರೆ
ಬಿಟಮಂಡೀ ಕಟ್ಟೆ ಮನಗೋಗಿ | ಅಂದೇಳಿ
ತಾರೀ ಕೂಸ್ಗೆ ಬುದ್ಧೀ ಒರದಾನೆ | ಅರಜೀಣಾ
ಹೋಗಾದ ಕಟ್ಟೀ ನೆಗದಾನೆ

ಹೋಗಾಲದ ಕಟ್ಟೀ ನಗದತ್ತೆ ಅರಜೀಣಾ
ಸೆಣ್ಣ ಗಂಬಳಿಯಾ ಮಡದಾಸೇ | ಅರಜೀಣಾ
ಚಕ್ರಾಪಳಿ ಹೊಯ್ದೇ ಕುಳತಾನೆ | ಅರಜೀಣಾ
ನಾರಿಯೋರ್ಗಿಟ್ ಸಾಪಾ ಬಿಡೋವಾನೆ
ನಾರ್ಯೋರ್ಗಿಟ್ ಸಾಪಾ ಏನಂದಿ ಬಿಡೋವಾನೇ

ನಾರ್ಯೋರಿಗ್ ನಿದ್ದೂರೀ ಹುರಿಯಾಲೇ | ಅಂಬುದ್ನು
ನಾರ್ಯೋರ ಮಿಯ್ಮುದಂದದ್ದೇ ಕುಳತಾರೆ | ನ್ಯಾರ್ಯೋರು
ಅರ್ಜಿನ ನೋಳಲು ಹೊಳುವಾದಿಲ್ಲ | ನಾರ್ಯೋರು
ಮಾಳಗ್ಗಿಂದೆರಗೇ ಬರೋವಾರೇ
ದೇವಾರೀ ಹೊಳಿಯಾ ಗಳಿಯಾಲಿಲ್ಲಾ | ಅಮ್ಮಾನೋರೆ
ಬಿಟಮಂಡೀ ಕಟ್ಟೇ ಮನಗೋಗಿ

“ಕಂಡೀ ಇರುವುದಕಿಂತಾ ಕಾಣಾದೆ ಇರಲಕ್ಕು
ಕಂಡೀ ಮತ್ತೊಮ್ಮೆ ಅಗಲಾಬಾರಾ
ಕಂಡೀ ಮತ್ತೊಮ್ಮೆ ಅಗಲಿದರಕ್ಕಾ ಕೇಳೇ
ಕಂಡಗದಾ ಮೆಣಸಾ ಕುಡೀದಂತೆ.
ಕೂಡಿ ಇರುವುದಕಿಂದು ಕೂಡದೇ ಇರಲಕ್ಕು
ಕೂಡೀ ಮತ್ತೊಮ್ಮೆ ಅಗಲಬಾರಾ

ಕೂಡಿ ಮತ್ತೊಮ್ಮೆ ಅಗಲದರಕ್ಕಾ ಕೇಳೇ
ಗೂಡಿನಾ ಉಪ್ರಾ ಕುಡಿದಂತೆ | ಅಕ್ಕಾ ಕೇಳೇ
ನಾವ ಹೋಪೋ ನಮ್ಮಾ ಅರಮನಗೆ |ಗ್| ಂದ್ ನಾರ್ಯೋರು
ಬಿಟಮಂಡೀ ಕಟ್ಟೇ ಮನಗೋಗೇ
ಬಿಟಮಂಡಿ ಕಟ್ಟೆ ಮನಗೋಗುತ್ನು ಅರಜೀಣಾ,.
ಆಗೊಂದು ಮಾತಾ ನುಡೀದಾನೆ.

ಹಿಂದ್ನ ಕಾಲ್ದಲ್ಲೇ ತಾರೀ ಉಕ್ಕಲ ಬತ್ತಾ
ಈಗ್ನ ಕಾಲ್ದಲ್ಲೇ ನಾಕೋಸಿದ್ಧಿ | ಕಂಬ್ಳಿ ಚಪ್ಪೆ
ಮನೆ ಮನೆ ತಪ್ಪದೆ ತಿರೂಗುಣ್ಣೋ |ಅಂದ್ ಅರ್ಜಿಣಾ
ತಾರೀ ಕೂಸಗ್ ಸಾವಿರವಾ ಉರೂಸಾರೆ | ಅರಜೀಣಾ
ಆಗೊಂದು ಮಾತಾ ನುಡೀದಾನೆ.

ಇಟ್ಟಕ್ ಬಂದವರುರೂ ಇಟ್ಟೂ ಮರಗುತ್ತಾರೋ
ತನ ಮಾವನ ಮಗಳೆಟ್ಟಾ ಮರಗೂಗೇ | ತನಗಿನ್ನೂ
ಮಾವನಮಗ್ಳ ಗೋಬೆ ಒಳೂತಲ್ಲ.
ಇಟ್ಟಕ್ ಬಂದವರು ಇಟ್ಟೂ ಮರಗುತಾರೋ
ತನತ್ತೀ ಮಗಳೆಟ್ಟಾ ಮರಗೂಗೇ | ತನಗಿನ್ನು

ತನ್ನತ್ತಿ ಮಗಳ್ ಗೋಬೀ ಒಳೂತಲ್ಲಾ
ಬಾಳಿಹುಟ್ಟುವಂಗೆ ನಾರೀ ತಾ ಹುಟ್ಟೀತು
ಬಾಳುಟ್ಟೇ ತಾನೂ ಪಲಾಬಂದೇ
ನಿಂಬೀ ಹುಟ್ಟುವಂಗೆ ರಂಚಿತಾ ಹುಟ್ಟೀತು
ನಿಂಬುಟ್ಟಿ ತಾನು ಪಲಾಬಂಧಿ |ತನಗಿನ್ನು

ಮಾವ್ನ ಮಗಳ್ ಗೂಬೆ ತರವಲ್ಲ | ಅಂದ್ ಅರಜೂಣಾ
ಬಿಚ್ಚೀದಾ ಮಂಡೀ ಬೆಟ್ಟಾ ಕೀಡಾಡುತೆ
ಸೀಂ ಸಿರಿಪಾದಾಕಲಿಯುತ್ತೆ | ನಾರ್ಯೋರು
ಹಿತ್ಲಕಟಕ್ನ ಬಾಗಲ್ಲೇ ನೆಡದಾರೆ | ”
ತಮ್ಮಾ ಮನಿಕೂಸ್ನಾ ದೆನಿದೂರೆ
ಎಂದೂ ಕರದಮಲ್ಲ ಬಂದಾನೇ ಮನಿಕೂಸಾ
ನಿಂದಾನೇ ನಾರ್ಯೋರಾ ಒಡನಲ್ಲೇ |ಲ್| ನಿಂದೀ ಕಂಡೇ.

“ಏನು ಕಾರಣಲೆ ಕರದಾರೆ ”
“ಕರದು ಕಾರಣಿಲ್ಲ ಕಿರಿದುಂಬೆಸರ ಸಯ್ಯೆ
ದೆವಕಿಟ್ಟಿರುಳೇ ನೆಡದಾರಿಯೇ, ”
“ದೆವರ ನಾಕಾಣಾಲಿಲ್ಲ ದೆವರ ನಾ ನೋಡಾಲಿಲ್ಲಾ
ದೆವರ್ ಎಟ್ಟಿರುಳೇ ನೆಡದಾರೋ

ಅಟ್ಟಂಬಾ ಮಾತಾ ಕೇಳಾರೆ ನಾರ್ಯೋರು
ಹಿತ್ಲ ಕಣಕನ ಬಾಗಲ್ಲೇ ನೆಡದಾರೆ
ಬಿಚ್ಚೀದಾ ಮಂಡೀ ಬೆಟ್ಟಾ ಕೀಡಾಡೂತೆ
ಸೀರೀ ಸೀರಿ ಪಾದಾಕಲಿಯುತೆ | ನಾರ್ಯೋರು
ಕಲ್ಲಾ ದಣಿಪೀಗಾಗೇ ನೆಡದಾರೆ | ನಾರ್ಯೋರು
ತಾರೀ ಹೊಳಿಯಲ್ಲೇ ನಿಲೊವಾರೇ | ನಾರ್ಯೋರು

‘ತಾರೀಕೂಸಾ’ ನಂದೇ ದೆನಿದೂರೇ | ತಾರೀಕೂಸಾ
ಓಯ್ಗುಂಡೇ ಬಡನೇ ಬರೋವಾನೇ
ಓಯ್ಗುಂಡೇ ಬಡನೇ ಬಂದೀ ಏನಂಬಾನೆ.
ಏನು ಕಾರಣಲಿ ಕರದೀರೇ
ಕರದಂ ಕಾರ್ಯವಿಲ್ಲ ಕಿರಿದುಂಚಿ ಸರ ಸಯ್ಯೆ

ಮುತ್ತೀನಾ ದೋಣಿ ಹೊಳೀ ಗೆಳಿಯೋ | ತಾರೀಕೂಸಾ
ಬೆನ್ನಾ ದುಟ್ನಲ್ಲೇ ಬಳೂಗೀಸೋ |
ಇಲ್ಲೆರು ಬಂದೀರೋ ಇಲ್ಲೆರು ನಿಂದೀರೋ
ಇಲ್ಲೆರು ತಂಬಿಲವ ಉಗದೀರೋ | ತಾರೀಕೂಸಾ
ದೇವರೀ ಹೊಳಿಯೂ ಗೆಳದಾರಿಯೂ

“ತಾರಿಗೆ ಬರುವವ್ರು ಸಕಲಾ ಸಾವಿರ ಮಂದಿ
ಎಲತಿಂದ್ ತಂಬಲವಾ ಉಗದಾರೆ | ಅಮ್ಮಾ ನೋರೆ
ಅದು ಎಲ್ಲಾ ನಿಮ್ಮಾ ಪುರಿಸಾರಾ ? ಅಮ್ಮಾನೋರೆ
ಸೆಣ್ಣಾ ಗಂಬಳಿಯಾ ಕುಡೋಗೆದ್ದೇ | ಅರಜೀಣಾ
ಸೆಣ್ಣಾ ಗಂಬಳಿಯಾ ಹೋಗುಗೆ | ಹಾಯೀಕಂಡೇ
ಅರ್ಜುಣ ನಂಬೆಸರು ಇಲ್ಲಿಂದಿತ್ತಾಗಿರಲೇ
ಬಡ್ ಮಾಣಿ ಅಂಬೆಸರು ನೆಡೀಯಾಲೇ | ಲ್| ಂದ್ ಬಡ ಮಾಣಿ

ಅಲ್ದ್ ಕಟ್ಟಿ ಕೆಳಗೆ ಇಳದಾನೆ.
ಉದ್ದು ಕರಿಉದ್ದು ಉದ್ದು ಮಡಿ ಉದ್ದು
ಉದ್ದನೇ ತೋಳದೇ ಹಣಿನೀರಾ | ಕೊಂಬಲೆ ಬರೂವಾ
ತುಂಬಿ ಹಕ್ಕಿ ನಮಗೇಳೆ ಸಕೂಣವೇ
ಹೆಸರು ಕರಿಉದ್ದು ಹೆಸರು ಮಡಿ ಉದ್ದು
ಹೆಸರನೇ ತೊಳದೇ ಹಣೀನೀರಾ| ಕೊಂಬೆಲೆಬರೂವಾ

ಹಕ್ಕೀ ನಮಗೇಳೇ ಸಕೂಣವೇ
ಸಕಣಾ ಕೇಳಿತಾ ಸೆರಗೀಲಿ ಗೆಂಟೀಡಿತಾ
ಹದಿನಾರು ಮೆಟ್ಟಾ ನೆಡಿಯುತ್ತೇ | ಬಡಮಾಣೀ
ಹದಿನಾರು ಕಯ್ದೂರೀ ತನಗಂದೇ
ಬಾಳಿಮೆನಿರುವಾ ಏಳ್ನೂರು ಪಾಂಡ್ವಾಳಾ
ದೇವರ ತಂಗೀ ನನ್ನಾ ನೆನಿಯೂ ತದಿಯೂ |

“ದೇವ್ರಾ ತಂಗಿಗೂ ನಿಮಗೂ ಯಾತರ ಸಂಭಂಧಾ
ದೆವರ ತಂಗೀ ನಿಮ್ಮಾ ನೆನುವಾದಿಲ್ಲ | ಅಂಬುದ್ನು
ಪಾಂಡ್ ವಳ್ಗೆ ಸಾಪಾ ಇಡೋವಾನೇ
ಪಾಂಡವಳ್ಗೆ ಸಾಪಾ ಏನಂದಿ ಇಡೋವಾನೇ
“ನೀ ಕೂತಾ ರಾಜ್ಯ ಸುಬನಿಲ್ಲಾ
ಮಕ್ಕಿ ಗದ್ದೀಲಿ ಜೆಬ್ಹೆಕ್ಕು ಕೂಗೀಲಾ
ದೆವರ ತಂಗಿ ನಮ್ಮಾ ನೆನಿಯಾತದಿಯೂ ?|

ದೆವರ ತಂಗಿಗೂ ನಿಮಗೂ ಯಾತರ ಸಂಬಂದ
ದೆವರ ತಂಗೀ ನಿಮ್ಮಾ ನೆನುವಾದಿಲ್ಲಾ ಅಂಬುದ್ನು
ಕೂಗಿಲಗೆ ಸಾಪಾ ಇಡೋವಾನೇ
ಕೂಗಿಲಗೆ ಸಾಪಾ ಏನಂದಿ ಇಡೋವಾನ
ನೀ ಕಚ್ಚೀದರೆ ನಿನಗಿಲ್ಲಾ | ಕೂಗೀಲಾ
ನಿನ್ನ ನೆಡ್ ನಾಲಗೆ ಕುಂದೇ ಒರಗಾಲೋ | ಅಂದೇಳೇ
ಕೂಗಿಲಗೆ ಸಾಪಾ ಇಡೊವಾನೇ.

ಸಕಣಾ  ಕೇಳಿತೇ ಸೆರಗಿಲಿ ಗೆಂಟಿಡಿಯಿತೆ
ಹದ್ನಾರು ಮೆಟ್ಟಾ ನೆಡೆಯುತೆ | ಬಡಮಾಣಿ
ಹದ್ನಾರು ಕಯ್ದಾರಿ ತನಗಂದೇ.

ಬಾಳೀ ಮೆನಿರುವಾ ಏಳ್ನೂರು ಗಿಳಿಗೋಳೆ
ದೆವರ ತಂಗೀ ನನ್ನಾ ನೆನಿಯಾತದಿಯಾ
“ಮೀಯ್ತದೆ ಒಗಿತದೆ ಮಿಂದೀ ಮಡಿ ಉಡ್ತದೆ
ಮಿಂದೀ ಹಾಸಗಲೇ ಒರ‍್ಗ ತದೆ | ದೆವಾರೆ
ನಿಮ್ಮಾ ಜಾನದಲೇ ಇರೋವಾಳ| ಅಂಬುದ್ನು
ಗಿಳೋಳಿಗ್ ಸಾವರವಾ ಒರಸಾನೆ.
ಗಿಳಿಗೋಳಿಗ್ ಸಾವರವಾ  ಏನಂದಿ ಒರಸಾನೆ.

ನೀ ಕಚ್ಚಿದೆರೆ ಹುಸಿಯಿಲ್ಲಾ | ಗಿಳಿಗೋಳೇ
ನೀವ್ ಕೂತಾ ರಾಜ್ಯಾ ಸುಬನಾವೋ”
ಸಕಣಾ ಕೇಳಿತಾ ಸರಗೀಲಿ ಗೆಂಟಿಡಿಯಿತೆ
ಹದ್ನಾರು ಮೆಟ್ಟಾ ನೆಡೆಯೂತೆ | ಬಡಮಾಣಿ
ಹದ್ನಾರು ಕಯ್ದಾರಿ ತನಗಂದೇ

“ಕೆಯ್ಯಾ ಗೆದ್ದೀಲ ಜೆಬ್ಹೆಕ್ಕು ಕೊಕ್ಕನೇ
ದೆವರ ತಂಗೀ ನನ್ನಾ ನೆನಿಯಾತದಿಯಾ
ಮೀಯ್ತದೋಗಿತದೆ ಮಿಂದೀ ಮಡಿ ಉಡ್ತದೆ
ಮಿಂದೀ ಹಾಸಗಲೇ ಒರ‍್ಗತದೆ |ದೆವಾರೆ
ನಿಮ್ಮಾ ಜಾನದಲೇ ಇರೋವಾಳು| ಅಂಬುದ್ನು
ಕುಕ್ಕಗ್ ಸಾವರವಾ ಒರಸಾನೆ

ನೀ ಉಟ್ಟಾ ಪಟ್ಟೀ ಮಾಸಾದೇ ಇರಬೇಕು
ನೀ ಕಚ್ಚೀದರೆ ಹುಸಿಯಿಲ್ಲ | ಅಂದೇಳೆ          |
ಕುಕ್ಕಗ ಸಾವರವಾ ಒರಸಾನೆ       .
ಸಕಣಾ ಕೇಳೀತೇ ಸೆರಗಿಲಿ ಗೆಂಟಿಡೀತೆ
ಹದ್ನಾರು ಕಯ್ದಾರಿ ತನಗಂದೇ
ಕೆಯ್ಯಾ, ಗದ್ದೀಲಿ ಒತ್ ಹೊಕ್ಕೂ ಕೋಳಿಯೆ
ದೆವ್ರ ತಂಗೀ ನನ್ನಾ ನೆನಿಯಾತದಿಯಾ?
ಮಿಯ್ತ ದೋಗಿತದೆ ಮಿಂದ್ ಮಡಿ ಉಡ್ತದೆ
ಮಿಂದೀ ಹಾಸಗಲೇ ಒರಗತದೆ | ದೆವರೆ
ನಿಮ್ಮಾ ಜಾನದಲೇ ಇರೋವಾಳೇ | ಅಂಬುದ್ನು

ಕೋಳೀಗೆ ಸಾವರವಾ ಉರುಸಾನೆ
ಕಾಲನ ಬಳ್ಳೀ ಕಾಲಗೆ ಸುತ್ತೂ ತಂಕೇ
ಕಾಡದೂ ಬಂಟಾ ಸರಗೆಯ್ಯೋ | ನಿನ್ನಾರು
ನೆತ್ತೀ ಮೆನ್ ಜುಟ್ಟಾ ಬೆಳಿಯಲಿ | ಅಂದೇಳಿ
ಕೋಳಿ ಹುಂಜ್ಗ್ ಸಾವರವಾ ಹರೂಸಾನೆ
ಸಕಣಾ ಕೇಳೀತೆ ಸೆರಗಿಲಿ ಗಂಟಿಡೀಯಿತೇ
ಹದ್ನಾರು ಮೆಟ್ಟಾ ನಡೀಯೂತೆ | ಬಡಮಾಣಿ
ಹದ್ನಾರು ಕಯ್ದಾರಿ ತನಗಂದಾ.

ಹತ್ಯಾಣಪುರದಲ್ಲೇ ಇತ್ ಬರುಮಯ್ಲೂಗಿ
ನಾರಾಯಣ ಪುರದಾ ಹಸುಗುತ್ತೇ |ತ್ತೀ| ನೀ ಕೇಳೇ
ನಾಉಟ್ ಜೋತರವಾ ಒಗೆದ್ ಕೊಡೇ
ದೆವರ ಮನಿಯಾ ಕನ್ನೆಣ್ಮಕ್ಳುಗವಣದಲ್ಲಿ

ಗಂಡ್ಗೋಳ್ ಮಯ್ಲಿಗೀಯಾ ಬೆರಸಬಾರಾ | ಬಡಮಾಣಿ
ಮುಂದೀನಳ್ಳದಲ್ಲೇ ಒಗದೂಡೋ |
ನಾಉಟ್ ಜೋತರವಾ ನಾಉಗದೀ ಉಡುವಾಕೆ
ನಿನ್ನಪ್ಪಣೆ ಕೇ ಹಸಗುತ್ತೀ ನೀ ಕೇಳೆ |
ಹಾಸೀ ಮಾತಾಡಿ ಮನಗೋಗೇ

ಹಾಸೀ ಮಾತಾಡೋಕೆ ದೆಸಾದವಳಲ್ಲ
ದೇಸಕ್ಕೆ ಒಂದು ಒಡೆಯರು | ಕೇಳಿದ್ರೆ
ಕೊಲ್ಲಂಬ್ರೋ ನಿನ್ನಾ ಬಯ್ಯಂಬ್ರೋ | ಅಂಬುದ್ನು
ಹಸಗುತ್ತೀ ಮನಿಯಾ ಹಸಗಾನೇ | ಅಲ್ಲೇ ಬರೋವಾನೇ.

ಹೆಣ್ಣಾ ಹಂಗ್ಸೂ ಕಯ್ಲೆ ಬಂಡಾ ಮಾಡುವಂವ್ಗೆ
ಚಬ್ಕಾ ತಂದೆಯ್ಡಾ ಬಗೀಯಲೆ | ಅಂಬುದ್ನು
ಹಸಗೆಗೆ ಸಾಪಾ ಇಡೋವಾನೇ
ಹಸಗಗೆ ಸಾಪಾ ಏನಂದೀ ಇಡೋವಾನೇ
ಒಗ್ವಾ ಹಳ್ಳೆಲ್ಲಾ ಕೊಣುಕಾಲೆ | ಹಸಗನಾ
ಕಟ್ದಾ ಗೂಡೆಲ್ಲಾ ಹೋಗೀಯಾಲೇ|

ಹೊನ್ನಾ ಮಾಣಿಕದಾ ಕೀಲುಂಬ ಸಗಾನಾ
ಕೀಲೂ ಗೂಡೆಲ್ಲಾ ಹೊಗಿಯಾಲಿ
ಕಿಲೂಗೂಡೆಲ್ಲಾ  ಹೋಗಿಯಾಗುತ್ನು ಅಸಗಾನು
ನಾರ್ಣದೆವ್ನರಮನಗೇ ನೆಡದಾನೆ | ಅಸಗಾನು
ಹೋಗೀ ಬಾಗಲ್ಲೇ ನಿಲೋವಾನೇ.
ಹೋಗೀ ಬಾಗಲ್ಲೇ ನಿಲುವುದ್ನು ನಾರ್ಣದೆವ

ಒಲಗ್ಗುಂಡಾನೆ ಹಸಿಯಲ್ಲಿ | ನಾರ್ಣದೆವಾ
ಆಗೊಂದು ಮಾತಾ ನುಡೀದಾನೆ.
“ಎಣ್ಣೇ ದಿವೂಗೀ ಕಣ್ಣೀಗೆ ಹೊಗೆಯಂದಿ
ಹೊನ್ನು ಮಾಣಿಕದ ಬೆಳಕೀಲಿ | ಲೂ| ಂಬೂ ಹಸಗಾನೆ
ಎನ್ ಬಂದ್ಯೋ ನನ್ನ ಅರಮನಗೆ ”

“ಯಾವೂರ ಸಂನ್ಯಾಸ್ಯೋ ಯಾವೂರ ಬಡಮಾಣ್ಯೋ
ನಮ್ಮೂರ್ಗೆ ರತವೇರೇ ಬರೂತಾನೋ | ದೆವಾರೆ
ತಾ ಉಟ್ಟಾ ಜೋತರವಾ ಒಗದೇ ಕೋಡೋ | ಅಂಬುದ್ನು
ದೆವರ ಮನಿಯಾ ಕನ್ನೆಣ್ಮಕ್ಳ ಬಣದಲಿ

ಗಂಡ್ಗೋಳ ಮಯ್ಯಗೀಯಾ ಬೆರಸ್ ಬಾರಾ | ಬಡಮಾಣಿ
ಮುಂದೀನಳ್ದಲ್ಲಿ ಒಗದುಂಡು | ಅಂಬುದ್ನು ನಮ್ಮನೆಯಾ
ಉಂಬಾಗಂಜೆಲ್ಲಾ ಮರಿಯಾದೋ | ನಮ್ಮನೆಯಾ
ಕಟ್ದ ಗೂಡೆಲ್ಲಾ ಹೊಗೆಯಾದೋ | ನಮ್ಮನೆಯಾ
ಒಗುವಾ ಹಳ್ಳೆಲ್ಲಾ ಕೊಣುಕಾದೋ | ನಮ್ಮನೆಯಾ
ಹೊನಮಾಣಿಕದ ಬೆಳಕು ಮಸಕಾದೋ” ನಮ್ಮನೆಯಾ

“ಅಂವ ಸನ್ಯಾಸಿಯಲ್ಲಾ ಅಂವ ಬಡಮಾಣ್ಯಲ್ಲ
ಅಂವ ಸೂಬದ್ರೀ ಪುರಿ | ಸಾನೋ | ಅಸಗನೇ
ತಡವಿಲ್ದೆ ಮಡಿಯಾ ಉಗದ್ ಕೊಡೋ “.

ಅಟ್ಟಂಬಾ ಮಾತಾ ಕೇಳಾನೆ ಅಸಗನು
ತನ್ನಾ ಅರಮನೆಗೆ ಬರೋವಾನೇ | ಅಸಗನು
ಬಡಮಾಣಿ ಒಡನೋಗಿ ನಿಲೋವಾನೇ.

“ಜೀ” ಅಂದೇ ಕರವಾ ಮುಗೀದಾನೋ
“ಅಯ್ಯೋ ದೆವರೇ ನೀವಂಬುದ ತಾನರಿಯೆ
ತಡವಿಲ್ದೆ ಮಡಿಯಾ ಒಗದೇ ಕೊಡ್ದೆ
ಊರಿಗಿಲ್ಲದ ಬಗೆ ನಿನುಗೇ ಬಂದೇನೋ
ಮನಸೀ ರಂಬದನೂ ಅರಿಯೇನೋ ಬಡಮಾಣಿ
ಮುಂದೀನಳ್ಳಕೆ ನೆಡದಾನೆ

ಹರ್ವಾ ಮಣಿನಾಗಾನಾ ಹೆಡೆ ಹಿಡ್ದಿ ಎಳ್ತಂದೀ
ಹೆಡಿಯಾ ಮೆನೇ ಹೆಡಿಯಾ ಮಡದ್ಹಾಸೇ| ಬಡಮಾಣಿ
ತಾನುಟ್ಟ ಜೋತರವಾ ಒಗದ್ದುಟ್ಟೇ |
ಮಣಿನಾಗನ ತೇಗದೇ ಗುಡಿ |ಗ್ ಹಣದೇ
ಈಗ ನೋಡಾ ನನ್ನಾ ಸಮರತಾ | ಅಂದೇಳೇ
ಹಳ್ಳಾ ಕಿಂದಾಚೆ ನೆಡದಾನೆ | ಬಡಮಾಣಿ

ಹಸಗಾಗಿಟ್ ಸಾಪಾ ಬಿಡೋವಾನೇ
ಹಸ್ಗಾಗಿಟ್ ಸಾಪಾ ಏನಂದಿ ಬಿಡೋವಾನೇ
ಒಗುವಾ ಹಳ್ಳೆಲ್ಲಾ ಹಣೀಯಾಲೇ | ಅಸಗಾನಾ
ಕಟ್ಟೀದ ಗೂಡೆಲ್ಲಾ ಹದೂಳಾಲೇ | ಅಸಗಾನಾ
ಉಂಬಾ ಗಂಜೆಲ್ಲಾ ಹದೂಳಾಲೇ | ಅಸಗಾನಾ
ಹೊನ ಮಾಣಿಕದ ಬೆಲಕು ಹದೂಳಾಲೇ

ಬಡಮಾಣಿ ಅಂಬೆಸ್ರು ಇಲ್ಗಂದಿತ್ತಾಗಿರ‍್ಲೇ
ಸನ್ಯಾಸಿ ಅಂಬೆಸ್ರು ನೆಡಿಯಾಲಿ |ಲ್| ಂದ ಸನ್ಯಾನ
ನಾರ್ಣದೆವ್ನರ ಮನಗೇ ನೆಡದಾನೆ | ಸನ್ಯಾಸಿ
ಹಿತ್ಲ ಕಣ್ಕ್ನ ಬಾಗಲ್ಲೇ ನಿಲೋವಾನೇ  ”
ಲಾಗೊಂದು ಮಾತಾ ನುಡೀದಾನೆ.

ಕಿತ್‌ದಲ್ ಮತ್ವಾರೆ ಮೆತ್ತದಲ್ ಸಾರ‍್ಸವಾರೆ
ಸಾರ‍್ಸದಲ್ ಸೇಡಿ  ಬರೂವಾರೇ | ಗವ್ಡೀಯೋರೆ
ಮೊನ್ನಾಗ್ ಸತ್ತೋರಾ ಹೊಲೆಯೇನೆ ?”
“ಮೊನ್ನೆಗ್ ಸತ್ತೋರಲ್ಲಾ ನಿನ್ನಾಗ್ ಬರ‍್ವೋರಲ್ಲಾ
ಸೂಬದ್ರೀ ಮದ್ವೀ ಸಣೀಯಾರಾ | ಸನ್ಯಾಸಿ
ನಾಳ್ ಬಂದ್ ಬಂದ್ ತುತ್ತಾ ಮಲಲಕ್ಕೋ ”

“ಗೇರ‍್ವರ್ ಗೇರೀರೇ ತಳಸ್ವರ್ ತಳ್ಸೀರೇ
ಮಿಕ್ಕೀದೋರುದ್ದಾ ಬಡವಾರೇ | ಗವ್ಡೀಯೋರೆ
ಮನ್ನೇ ಸತ್ತೋರಾ ಹೊಲೆಯೇನೇ ?”
“ಮನೆ ಸತ್ತೋರಲ್ಲಾ ನಿನ್ನಾಗ್ ಸತ್ತೋರಲ್ಲಾ

ಸಣಿಯಾರಾ ಸೂಬದ್ರೀ ಮೊದವೀಯೋ | ಸಂನ್ಯಾಸಿ
ನಾಳ್ ಬಂದ್ ಒಂದ್ ತುತ್ತಾ ಮೆಲಲಕ್ಕೋ
ಅಡಗಡಗ್ ಬರ‍್ವೀಯೋ ಗೊಡವೀ ಮತಾಡ್ಡೀಯೋ
ಮನಗೊಂದ್ ತರೂವಿಯೋ ಹಗರಣಾ ”

“ಹಗೆ ನಿನ್ನಪ್ಪಗೆ ಹಗೆ ನಿನ್ನವ್ವಿಗೆ
ಹಗೆ ನಿನ್ನ ನಾಳ್ ಬರ‍್ವಾ ಕವ್ಲೋರಿಗೆ | ಅಂದೇಳೇ
ಮುಂದನ ಬಾಗಲ್ಲೇ ನೆಡದಾನೆ | ಸಂನ್ಯಾಸಿ
ಹೋಗಿ ಬಾಗಲ್ಲೇ ನಿಲೋವಾನೆ | ಸಂನ್ಯಾಸಿ
ಆಗೊಂದು ಮಾತಾ ನುಡಿದಾನೇ

“ಹನ್ನೆಯ್ಡು ಬಾಳೆ ಹಣ್ಣಾ ಬಣ್ಣಿಸಿ ಮೆದ್ದೀದೆ
ಸುಣ್ಣವ ಮೆದ್ದೇ ಇರಲಾರೆ |  ಬಾವಾ ಕೇಳೋ
ನನ್ನೊಟ್ಟಿ ಬಾಳೂ ಹಸೀದಾವೋ”
“ನಿನ್ನೊ ಹಸಿದರೆ ಇಲ್ಲೆಲ್ಲಿ ಅವನಕ್ಕೋ
ತಂಗೀ ಅರಮನ್ನೆ ಕಡೂದೂರೆ | ಬಾವಾಕೇಳೋ
ಅಲ್ಲೊದರ ನಿನಗೆ ಅನುವಕ್ಕೋ.

ತಂಗೀ ಅರಮನೆ ಎತ್ತಂದು ನಾನರಿಯೇ
ಹಾದಿಯಾ ಗುರುತಾ ತನಗಿಲ್ಲಾ
ಹಾದೀಯ ಬಲ್ಲಾದೀರೆ ಸಾದೇವ್ನಾ ಕಳಗೂತೆ
ನೀ ಹೋಗೋ ತಂಗಿ ಅರಮನ್ಗೆ | ಅಂದ್ ನಾರ್ಣದೆವ
ತಮ್ಮಾ ಸಾದೇವ್ನಾ ದೆನೀದೂರೇ