“ನೇತಾಜಿ” ಎಂಬ ಬಿರುದ್ಧು ಪಡೆದ ವೀರ ದೇಶಾಭಿಮಾನಿ ಸುಭಾಷ ೧೮೯೭ರ ಜನೆವರಿ ೨೩ ರಂದು ಹುಟ್ಟಿದರು.  ಅವರ ತಂದೆ ರಾಯ್ ಬಹದೂರ್‌ ಜಾಕೀನಾಥ ಬೋಸರು ಒರಿಸ್ಸಾದ ರಾಜಧಾನಿ ಕಟಕದಲ್ಲಿದ್ದರು. ಇವರು ಮೇಧವಿ, ಪ್ರಸಿದ್ಧ ವಕೀಲರು. ತಾಯಿ ಪ್ರಭಾವತಿ, ಬೋಸರು. ಸನಾತನ ಧರ್ಮ, ಆಚಾರ, ವಿಚಾರಗಳಲ್ಲಿ ಶ್ರದ್ದೇವುಳ್ಳವರು. ತಮ್ಮ ನಂಬಿಕೆಯಂತೆ ನಿತ್ಯ ಜೀವನವನ್ನು ನಡೆಸುವರು. ಸರಳವಾದ ಮನಸ್ಸು ಉದಾರವಾದ ಹರದಯ: ದಾನ, ಧರ್ಮ, ಪರೋಪಕಾರ ನಿರತರು.

ಈ ತಾಯಿ ತಂದೆಗಳೀಗೆ ಹದಿನಾಲ್ಕು ಮಂದಿ ಮಕ್ಕಳೂ. ಅವರಲ್ಲಿ ಸುಭಾಷರೂ ಒಂಬತ್ತನೆಯವರು.

ವಿದ್ಯಾಭ್ಯಾಸ :

ಮೊದಲ ಮೊದಲ ಇವರ ವಿದ್ಯಾಭ್ಯಾಸವೆಲ್ಲ ಒಂದು ಐರೋಪ್ಯ ಶಾಲೆಯಲ್ಲಿ ನಡೆಯಿತು.ಎಲ್ಲ ಪರೀಕ್ಷೆಗಳಲ್ಲಿಯೂ ಅವರದು ಮೊದಲನೆಯ ಸ್ಥಾನ ಅಥವಾ ಎರಡನೆಯ ಸ್ಥಾನ ! ೧೯೧೩ರಲ್ಲಿ  ಕಲ್ಕತ್ತೆಯ ಪ್ರಸಿಡೆನ್ಸಿ ಕಾಲೇಜನ್ನು ಸೇರಿದರು.

ಅವರ ಮನಸ್ಸಿನಲ್ಲಿ ಏನೋ ಬದಲಾವಣೆ ಆಯಿತು. “ವಿವೇಕಾನಂದ ಸ್ವಾಮಿಗಳಂತೆ ನಾನೂ ಒಬ್ಬ ಗುರುವನ್ನು ಹುಡುಕಬೇಕು. ಸತ್ಯಶೋಧನೆ ಮಾಡಬೇಕು. ದೇವರ ಅನುಗ್ರಹ ಪಡೆಯಬೇಕು. ನನ್ನ ಶಕ್ತಿಯಿಂದ ಪ್ರಪಂಚವನ್ನೇ ಚಕಿತಗೊಳಿಸಬೇಕು” ಎಂದು ನಿಶ್ಚಯ ಮಾಡಿದರು. ಆಗ ಅವರಿಗೆ ಹದಿನಾರು ವಯಸ್ಸು. ಯಾರಿಗೂ ಹೇಳದೇ, ಮನಬಿಟ್ಟು, ಕಾಲೇಜು ಬಿಟ್ಟು ಹಿಮಾಲಯದ ಕಡೆಗೆ ಹೊರಟು ಬಿಟ್ಟರು. ಆರು ತಿಂಗಳು ಸುತ್ತಾಡಿದರೂ ಗುರುವೂ ಸಿಕ್ಕಲಿಲ್ಲ. ಸತ್ಯದ ಸುಳಿಯೂ ಸಿಕ್ಕಲಿಲ್ಲ. ನೆಟ್ಟಗೆ ಮನೆಗೆ ಬಂದರು. ತಾಯಿ-ತಂದೆ, ಒಡಹುಟ್ಟಿದವರು, ಎಲ್ಲರಿಗೂ ಸಂತೋಷವಾಯಿತು. ತಾಯಿ ಪ್ರಭಾವತಿ ದೇವಿ ಮುದ್ದು ಮಗನನ್ನು ಅಪ್ಪಿಕೊಂಡರು. ಸುಭಾಷರು “ಅಮ್ಮಾ, ಭಾರತದ ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿದನಲ್ಲ. ಆ ವಿಶ್ವರೂಪ ದರ್ಶನಕ್ಕಾಗಿ ನಾನು ಆಸೆ ಪಡುತ್ತೇನೆ” ಎಂಬುವುದಾಗಿ ಹೇಳಿದರು. ತಾಯಿ ಸಂತೋಷದಿಂದ, “ಮಗೂ, ಶ್ರೀಕೃಷ್ಣನ ಅನುಗ್ರಹ ನಿನ್ನ ಮೇಲೆ ಅಪಾರವಾಗಿದೆ. ನರೇಂದ್ರನಂತೆ ನೀನೂ ನರೋತ್ತಮನಾಗುವೆ,” ಎಂದು ಆಶೀರ್ವಾದ ಮಾಡಿದಳೂ. “ಧನ್ಯನಾದೆ” ಎಂದು ಮೌನವಾಗಿ ಬೋಸರು ತಾಯಿಗೆ ನಮಸ್ಕಾರ ಮಾಡಿದರು.

ದೇಶನಾಯಕರ ಪ್ರಭಾವ:

ಸುಭಾಷರು ಓದುತ್ತಿದ್ದ ಶಾಲೆಯ ಮುಖ್ಯ  ಉಪಾಧ್ಯಾಯರಾಗಿದ್ದ ವೇಣಿಮಾಧವದಾಸರು ಭೋಸರ ಮನಸ್ಸು, ಜೀವನದ ಮೇಲೆ ಪ್ರಭಾವ ಬೀರಿದರು. ಅಂದಿನಿಂದ ಬೋಸರಿಗೆ ರಾಮಕೃಷ್ಣ ಪರಮಹಂಸ, ಸ್ವಾಮಿವಿವೇಕಾನಂದ, ಅರವಿಂದ ಘೋಷ್, ಮೊದಲಾದವರು ಜೀವನ, ಬೋಧನೆಗಳಲ್ಲಿ ಆಸಕ್ತಿ ಹುಟ್ಟಿತು. ದೇಶಸೇವೆ ಮಾಡಬೇಕು, ಮಾನವ ಕುಲದ ಸೇವೆ ಮಾಡಬೇಕು, ಎಂಬ ಆಸೆಯನ್ನು ಅವರು ಬೆಳಸಿಕೊಳ್ಳುತ್ತ ಬಂದರು. ಅರವಿಂದರು ಒಮ್ಮೆ ವಿದ್ಯಾರ್ಥಿಗಳಿಗೆ ಹೇಳಿದ ಈ  ಮಾತು ಬೋಸರಿಗೆ ಬಹಳ ಮೆಚ್ಚಿಗೆ ಆಯಿತು: “ನಿಮ್ಮಲ್ಲಿ ಕೆಲವರಾದರೂ ದೊಡ್ಡವರಾಗಬೇಕೆಂಬುವುದು ನನ್ನ ಆಸೆ. ನಿಮಗಾಗಿ ನೀವು ದೊಡ್ಡವರೆನಿಸಲು ಬಾರದು. ಭಾರತವನ್ನು ದೊಡ್ಡದನ್ನಾಗಿ ಮಾಡಲಿಕ್ಕಾಗಿ ನೀವು ದೊಡ್ಡವರಾಗಬೇಕು. ಪ್ರಪಂಚದ ಎಲ್ಲಾ ರಾಷ್ವ್ರಗಳ ಮಧ್ಯೆ  ಭಾರತವೂ ಮೇಲಕ್ಕೆ ತಲೆಯನ್ನೆತ್ತಿ ನಿಲ್ಲುವಂತೆ ಮಾಡಲು ನೀವು ದೊಡ್ಡವರಾಗಬೇಕು. ಭಾರತಮಾತೆಯ ಗುಲಾಮತನ ಕೊನೆಗಾಣಿಸಲು ತ್ಯಾಗ ಮಾಡಿ, ಪ್ರಾಣ  ಕೊಡಲೂ ಸಿದ್ಧರಾಗಿ”.

ಬೋಸರು ಪ್ರೆಸಿಡೆನ್ಸಿ ಕಾಲೇಜಿನಲ್ಲಿದ್ದಾಗ ಅಲ್ಲಿ ಇ.ಎಫ್.ಓಟಿನ್ ಎಂಬುವ ಬ್ರಿಟಿಷ್ ಉಪಾಧ್ಯಾಯ. ಅವನು ಪಾಲಿಗೆ ಭಾರತೀಯ ವಿದ್ಯಾರ್ಥಿಗಳು ಕೆಲಸಕ್ಕೆ ಬಾರದವರೂ ಮರ್ಯಾದೆಗೆ ಅರ್ಹರಲ್ಲ. ಒಂದು ದಿನ ಓಟಿನ ಬೋಸರ ಹಲವು ಸಹಪಾಠಿಗಳ ಮೇಲೆ ಕೈ ಮಾಡಿದ. ಗಲಾಟೆ ಆಯಿತು. ಬೋಸರು ಮೇಲಿನವರಿಗೆ ದೂರನ್ನೊಯ್ದರು: ಏನೂ ಆಗಲಿಲ್ಲ. ಮಾರನೆಯ ದಿನ ಹುಡುಗರು ಒಟ್ಟಿನ್ನಿನ ಮೇಲೆ ಬಿದ್ದರು. ಗಲಾಟೆ ಆಯಿತು. ಹುಡುಗರೆಲ್ಲ  ಕಾಲೇಜಿಗೆ ಬಹಿಷ್ಕಾರ ಹಾಕಿದರು. ಇದಕ್ಕಾಗಿ ಅಧಿಕಾರಿಗಳೂ, “ಭೋಸರೇ ಈ ಮುಷ್ಕರಕ್ಕೆ ಕಾರಣ” ಎಂದು ಅವರನ್ನು ಕಾಲೇಜಿನಿಂದ ಹೊರಕ್ಕೆ ಕಳುಹಿಸಿದರು!

ಅನಂತರ ಅವರು ಸ್ಕಾಟೀಷ್ ಚರ್ಚ ಕಾಲೇಜು ಸೇರಿ, ಓದನ್ನು ಮುಂದುವರಿಸಿರು. ಜೊತೆಗೆ ಯೋಧ ಶಿಕ್ಷಣವನ್ನೂ ಪಡೆದರು. ಖಾಕಿ ಸಮವಸ್ತ್ರ ಧರಿಸಿ ಭುಜದ ಮೇಲೆ ಬಂದೂಕನ್ನು ಇರಿಸಿ ಓಡಾಡುವುದೆಂದರೆ  ಬೋಸರ ಸಂತೋಷಕ್ಕೆ ಹಮ್ಮೆಗೆ , ಪಾರವೇ ಇಲ್ಲ.

೧೯೧೯ರಲ್ಲಿ ಸುಭಾಷರು ಎಂ.ಎ. ಪರೀಕ್ಷೆಗೆ  ಓದುತ್ತಿದ್ದಾಗ ಒಂದು ದಿನ ಇದ್ದಕ್ಕಿದ್ದ ಹಾಗೆಯೇ ಜಾನಕೀಯರಾಂ ಬೋಸರು ಬಂದು “ಇಂಗ್ಲೆಂಡಿಗೆ ಹೋಗಿ ಸಿವಿಲ್ ಸರ್ವಿಸ್ ಪರೀಕ್ಷೆ ಮಾಡುತ್ತೀಯಾ” ಎಂದು  ಕೇಳೀದರು.  “ನಾಳೆ ನಿನ್ನ ನಿಶ್ಚಯ ಹೇಳು” ಅಂದರು. ಆಂಗಿನ ಕಾಲದಲ್ಲಿ “ಇಂಡಿಯನ್ ಸಿವಿಲ್ ಸರ್ವಿಸ್ ” ಪರೀಕ್ಷೆಯನ್ನು ಬ್ರಿಟನ್ನಿನ ಸರಕಾರ ನಡೆಸುತ್ತಿತ್ತು. ಇದರಲ್ಲಿ ಉತ್ತೀರ್ಣರಾದವರಿಗೆ ಕೂಡಲೇ ದೊಡ್ಡ ಹುದ್ದೆ. ಕೈತುಂಬ ಸಂಬಳ, ಕೆಲವೇ ವರ್ಷಗಳಲ್ಲಿ ಬಹು ದೊಡ್ಡ ಅಧಿಕಾರಿಯಾಗಿ ಸಾವಿರಾರು ರೂಪಾಯಿ ಸಂಬಳ ಪಡೆಯುವ ಅವಕಾಶ. “ನಾನಿನ್ನೂ ಹುಡುಗ: ಪರೀಕ್ಷೆಗೆ ಉಳಿದಿರುವುದು ಎಂಟೇ ತಿಂಗಳು. ಪಾಸಾಗುವುದೂ ಸಂದೇಹವೇ. ಒಂದು ವೇಳೆ ಪಾಸಾದರೂ ಮುಂದೇನು ಮಾಡಬೇಕೆಂಬುವುದು ನನ್ನ ಕೈಯಲ್ಲಿಯೇ ಇದೆ” ಅಂದುಕೊಂಡರು ಸುಭಾಷ್. ತಂದೆಗೆ “ಹೋಗುತ್ತೇನೆ” ಎಂದು ಹೇಳಿದರು. ಬ್ರಿಟಿಷರು ಭಾರತೀಯರನ್ನು ಸೆರೆಗೆ ಹಾಕಿದುದು, ಅಪಮಾನ ಮಾಡಿದುದು,ಕೋಂದದ್ದು ಇವುಗಳಿಂದ ಬೋಸರ ಹೃದಯ ಬಹಳ ನೋವಿಗೆ ಗುರಿಯಾಗಿತ್ತು . ಆದರೂ ವಿಲಾಯಿತಿಗೆ ಹೋಗಿ ಪರೀಕ್ಷೆಗೆ ನಾಲ್ಕನೆಯ ಸ್ಥಾನ ಪಡೆದರು.

ಸರಕಾರದ ಸೇವಕನೇ, ದೇಶಸೇವಕನೆ?

ಬೋಸರಿಗೆ “ಧರ್ಮಸಂಕಟ” ಮೊದಲಾಯಿತು. “ಬ್ರಿಟಿಷ್ ಸರಕಾಋದ ಒಬ್ಬ ಸೇವಕನಾಗಿ ಬೋಗಭಾಗ್ಯಗಳನ್ನು ಅನುಭವಿಸುವುದೆ? ಇಲ್ಲ, ಭಾರತಮಾತೆಯ ಸೇವಕನಾಗಿ, ಸ್ವಾತಂತ್ರ್ಯವನ್ನು ಪಡೆಯುವುದೆ?” ಎಂಬ ಪ್ರರ್ಶನೆಗೆ ಅವರು ಉತ್ತರ ಕೊಡಬೇಕಾಯಿತು. ಮೊದಲನೆಯದು ಭೋಗದ ಮಾತು: ಎರಡನೆಯದು ತ್ಯಾಗದ ಮಾತು. ಸ್ವಾಮಿ ವಿವೇಕಾನಂದ, ಅರವಿಂದ ಘೋಷರ ಉಪದೇಶಗಳು ನೆನಪಿಗೆ ಬಂದವು. ಹತ್ತಾರು ನೂರಾರು, ಭಾರತದ ತರುಣ ತರುಣಿಯರು, ಮಾತೃಭಾಷೆಯ ಸಲುವಾಗಿ ಪ್ರಾಣಗಳನ್ನು ಕೊಟ್ಟವರ ಚಿತ್ರಗಳು ಅವರ ಕಣ್ಣಮುಂದೆ ಸಾಲಾಗಿ ಬಂದು ನಿಂತು ಚಲಿಸಿದುವು. “ತಂದೆ ತಾಯಿಗಳಿಗೆ ಪ್ರೀಯವಾದ ಕೆಲಸ ಮಾಡಲೇ? ಇಲ್ಲ ಮಹಾತಾಯಿ, ಭಾರತಮಾತೆಗೆ ಪ್ರೀಯವಾದ ಕೆಲಸ ಮಾಡಲೇ?ಈ ಪ್ರಶ್ನೆಗೆ ಉತ್ತರ ಕೊಡಬೇಕಾಯಿತು. “ಬ್ರಿಟಿಷ್ ಆಡಳಿತ ಕೊನೆಗಾಣಬೇಕು” ಭಾರತಮಾತೆಯ ಬಂದವಿಮೋಚನೆ ಆಗಲೇಬೇಕು” ಎಂದು ಸಂಕಲ್ಪ ಮಾಡಿದರು! ಪ್ರಸಿದ್ಧ ದೇಶಭಕ್ತ ಚಿತ್ತರಂಜನದಾಸರಿಗೆ ಪತ್ರ ಬರೆದರು. ಅವರಿಂದ ಉತ್ತರ ಬಂತು. “ಭಾರತದ ಬಂಧವಿಮೋಚನೆಗೆ ಕೆಲಸ ಮಾಡುವವರಿಲ್ಲ; ಬೇಕಾದಷ್ಟು ಕೆಲಸ ಕಾದಿದೆ” ಎಂದು ದಾಸರು ಬರೆದರು.

ಭಾರತಕ್ಕೆ ಬಂದರುಗಾಂಧೀದಾಸರನ್ನು ಕಂಡರು:

ಸಿವಿಲ್ ಸರ್ವಿಸಿಗೆ ರಾಜೀನಾಮೆ ಕೊಟ್ಟು, ಬ್ರಿಟನ್ ಬಿಟ್ಟು, ಬೋಸರು ೧೬-೭-೧೯೨೧ ರಂದು ಮುಂಬಯಿಗೆ ಬಂದರು. ಮಹಾತ್ಮಾ ಗಾಂಧಿಯವರು ಆಗತಾನೆ ಅಹಿಂಸಾತ್ಮಕ ಅಸಹಕಾರವನ್ನು ಆರಂಭಿಸಿದ್ದರು. ಬ್ರಿಟಿಷ್ ಆಡಳಿತವನ್ನು ಕೊನೆಗಾಣಿಸುವ ನಿಶ್ಚಯ ಮಾಡಿದ್ದರು.  ಬೋಸರು ತಮ್ಮ ಅಭಿಪ್ರಾಯಗಳನ್ನೆಲ್ಲ ಗಾಂಧೀಜಿಯವರಿಗೆ ಮನಗಾಣಿಸಿದರು. ಗಾಂಧೀಜಿಯವರನ್ನು ಚೆನ್ನಾಗಿ ಅರ್ಥಮಾಡಿಕೊಂಡರು. ಗಾಂಧೀಜಿ “ನೀನು ಹೋಗಿ ಚಿತ್ತರಂಜನದಾಸರನ್ನು ನೋಡು” ಎಂದು ಅವರಿಗೆ ಸೂಚನೆ  ಮಾಡಿದರು. “ಅಹಿಂಸೆಯಲ್ಲಿ ಈ ತರುಣನಿಗೆ ನಂಬಿಕೆ ಇಲ್ಲ” ಎಂಬುವುದು ಗಾಂಧೀಜಿಯವರಿಗೆ ಸ್ಪಷ್ಟವಾಯಿತು. “ಕಂದಾಯ ಕೊಡದೇ ಹೋಗುವುದು ಅಸಹಕಾರ, ಇವುಗಳಿಂದ ಬ್ರಿಟಿಷ್ ಸಾಮ್ರಾಜ್ಯವನ್ನು ಕೊನೆಗಾಣಿಸಲು ಆಗುವುದಿಲ್ಲ. ಶಸ್ತ್ರಾಸ್ತ್ರಗಳನ್ನೇ ಹಿಡಿಯಬೇಕು: ರಣಭೂಮಿಯಲ್ಲಿಯೇ ಬ್ರಿಟಿಷರನ್ನು ಎದುರಿಸಿ, ಅವರನ್ನು ಭಾರತದಿಂದ ಓಡಿಸಬೇಕು, ನಾವು ಸ್ವತಂತ್ರರಾಗಬೇಕು”, ಎಂಬುವುದು ಸುಭಾಷ ಚಂದ್ರ ಬೋಸರಿಗೆ ಸ್ಪಷ್ಟವಾಯಿತು.

ಸ್ವಯಂ ಸೇವಕದಳದ ನಾಯಕರಾದರು :

ನೆಟ್ಟಗೆ ಕಲಕತ್ತೆಗೆ ಬಂದರುಳ ಚಿತ್ತರಂಜನದಾಸರನ್ನು ಕಂಡರು. ಆಗ ದಾಸರು ಹಿಂದಿನಂತೆ ಅರಮನೆಗೆ ಸಮಾನವಾದ ಮಹಲಿನಲ್ಲಿರಲಿಲ್ಲ. ದಿನದಿನವೂ ಸಾವಿರಾರು ರೂಪಾಯಿಗಳನ್ನು ಸಂಪಾದನೆ ಮಾಡುತ್ತಿರಲಿಲ್ಲ. ತ್ಯಾಗದ ಪರಮ ಸಂಕೇತವೆನಿಸಿದ್ದರು. ಕಾಂಗ್ರೆಸ್ಸಿನ ಮಹಾನಾಯಕರೆನಿಸಿದ್ದರು. ಪರದೇಶಿ ವಸ್ತ್ರ ಬಹಿಷ್ಕಾರ, ನ್ಯಾಯಸ್ಥಾನ ಬಹಿಷ್ಕಾರ, ಶಾಸನಸಭೆಗಳು- ಶಾಲಾ ಕಾಲೇಜುಗಳ ಬಹಿಷ್ಕಾರ- ಈ ಬಹಿಷ್ಕಾರತ್ರಯ” ಚಳುವಳಿ ಚೆನ್ನಾಗಿ  ನಡೆದಿತ್ತು. ಆದರೂ ವಿದ್ಯಾವಂತರು ಅಸಹಕಾರವನ್ನು ಪ್ರತಿಭಟಿಸಿದರು.! ಹಿಂಸೆಯ ಮಾರ್ಗದಲ್ಲಿಯೇ ನಂಬಿಕೆಯಿಟ್ಟ ಕ್ರಾಂತಿಕಾರರು ಕಾಂಗ್ರೆಸ್ಸನ ಈತಿ ನೀತಿಗಳನ್ನು ಒಪ್ಪಲಿಲ್ಲ. ಆದರೆ ಭಾರತದ ಪಾಮರಕೋಟಿ ಮಹಾತ್ಮರ ಹಿಂದೆ ಯಿತ್ತು. ಕಾಂಗ್ರೆಸ್ಸಿನ ಚಟುವಟಿಕೆಗಳು ಕೊಂಚ ಮಂದವಾಗಿದ್ದವು.

೧೯೨೧ರಲ್ಲಿ ಬ್ರಿಟನ್ನಿನ ಯುವರಾಜರು ಭಾರತಕ್ಕೆ ಬಂದರು. ಕಾಂಗ್ರೆಸ್ ಅವರ ಭೇಟಿಯನ್ನು ಪ್ರತಿಭಟಿಸಿತು. ಈ ಬಹಿಷ್ಕಾರ ಎಲ್ಲೆಲ್ಲೂ  ಪೂರ್ಣ ಯಶಸ್ವಿಯಾಯಿತು. ಕಲ್ಕತ್ತೆಯಲ್ಲಂತೂ ವರ್ಣಿಸಲಾಗದ ಯಶಸ್ಸು! ಇದನ್ನು ಕಂಡು ಬಂಗಾಳದ ಸರಕಾರ ಸುಮ್ಮನೆ ಇರಲು ಸಾಧ್ಯವೆ? ಕಾಂಗ್ರಸ್ ಸ್ವಯಂ ಸೇವಕ ದಳವನ್ನು “ಅಕ್ರಮಕೂಟ”ವೆಂದು ಸಾರಿತು. ಕೂಡಲೇ ವಿದ್ಯಾರ್ಥಿಗಳೂ, ಕಾರ್ಖಾನೆಗಳ ಕೆಲಸಗಾರರೂ ಸ್ವಯಂ ಸೇವಕರು ಮುಂದೆ ಬಂದರು. ಅವರ ನಾಯಕ ಸುಭಾಷ ಚಂದ್ರಬೋಸ. ಬಂಗಾಳ ಸರಕಾರದವರು ದೇಶಬಂಧುದಾಸರನ್ನೂ, ಸುಭಾಷ್ ಚಂದ್ರಭೋಸರನ್ನು ಬಂಧಿಸಿದರು. (೧೦-೧೨-೧೯೨೧),. ಸಾವಿರಾರು ಸ್ವಯಂಸೇವಕರನ್ನು ಸೆರೆಮನೆಗಳಲ್ಲಿ  ಇಟ್ಟರು. ಇದೇ ಬೋಸರ ಸ್ವಯಂಸೇವಕರನ್ನು ಸೆರಮನೆಗಳಲ್ಲಿ ಇಟ್ಟರು. ಇದೇ ಬೋಸರ ಸೆರೆಮನೆವಸದ ಮೊದಲನೆಯ ಅನುಭವ.

೧೯೨೧ರಿಂದ ೧೯೪೧ರ ವರೆಗೆ ಅಂದರೆ ೨೦ ವರ್ಷಗಳಲ್ಲಿ ಸರಕಾರದವರು ಸುಭಾಷರನ್ನು ಹನ್ನೊಂದು ಸಲ ಹಿಡಿದು, ಬಂಧನದಲ್ಲಿಟ್ಟರು.

೧೯೨೪ರ ಕಲಕತ್ತೆಯ ಪೌರಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿತು. ದೇಶಬಂಧು ದಾಸರು “ಮೇಯರ್‌” ಆದರು. ಸುಭಾಷ್ ಚಂದ್ರ ಬೋಸರು ಆಡಳೀತಾಧಿಕಾರಿಗಳಾದರು. ಆ ಅಧಿಕಾರ ಸ್ಥಾನಕ್ಕೆ ಬಂದವರ ಸಂಬಳ ತಿಂಗಳಿಗೆ ಮೂರು ಸಾವಿರ! ಬೋಸರು ೧,೫೦೦ ಸಾಕೆಂದರು! ಕಲಕತ್ತೆಯ ಪೌರಸಭೆಯ ಆಡಳಿತದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದರು. ಇದನ್ನು ಬ್ರಿಟಿಷರು ಹೇಗೆ ಸಹಿಸಿಯಾರು? ಬೋಸರನ್ನು ಹಿಡಿದು ದೂರದ ಬರ್ಮಾ ದೇಶಕ್ಕೆ ಸಾಗಿಸಿದರು. ಮಾಂಡಲೆ ಸೆರೆಮನೆಯಲ್ಲಿಟ್ಟರು.  ಈ ಸೆರೆಮನೆಯಲ್ಲಿಯೇ ಲೋಕಮಾನ್ಯ ಬಾಲಗಂಗಾಧರ ತಿಲಕರು ಆರು ವರ್ಷಗಳಿದ್ದರು! ಲಾಲಾ ಲಜಪತರಾಯರು ಒಂದು ವರ್ಷ ಇದ್ದರು! ಕಡೆ ಕಡೆಗೆ ಅವರ ಆರೋಗ್ಯ ಕೆಟ್ಟಿತು. ಆಗ ೧೯೨೭ರಲ್ಲಿ ಅವರನ್ನು ಬಂಧನದಿಂದ ಬಿಡುಗಡೆ ಮಾಡಿದರು. ಹೊರಗೆ ಬಂದಾಗ ಬೋಸರು ರಕ್ತಮಾಂಸಗಳಿಲ್ಲದೆ ಬಡಕಲಾಗಿ ಹೋಗಿದ್ದರು. ಸೆರೆಮನೆಯಲ್ಲಿದ್ದಾಗ ಬ್ರಿಟಿಷರ ಅಧಿಕಾರಿಗಳು ಮನುಷ್ಯ ಸಾಮಾನ್ಯನಿಗೆ ಒದಗಿಸಬೇಕಾದ ಅನುಕೂಲತೆಗಳನ್ನೂ ಸಹ ಕೊಡದೇ ಹೋದರು.  ಕಡೆಗೆ ದುರ್ಗಾಪೂಜೆ ಮಾಡಲು ಸಹ ಅವಕಾಶ ಕೊಡದೇ ಹೋದರು. ಬೋಸರು ಇದನ್ನೆಲ್ಲ ಹೆಗೆ ಸಹಿಸಿಯಾರು? ಆರು ವಾರಗಳ: ಕಾಲ ಉಪವಾಸ ಮಾಡಿದರು.

ಅನಾರೋಗ್ಯದಿಂದ ಬೋಸರು ಕಲಕತ್ತೆಗೆ ಬಂದರು, ಮಾಂಡಲೆಯಿಂದ. ಇಲ್ಲಿ  ಕಂಡದ್ದೇನು? ನಾಯಕರತ್ನ ದೇಶಬಂಧು ಚಿತ್ತರಂಜನದಾಸರು ಸ್ವರ್ಗಸ್ಥರಾಗಿದ್ದರು. ಮಹಾತ್ಮಾಗಾಂಧೀಯವರು ಸಹ ಸಾರ್ವಜನಿಕ ಜೀವನದಿಂದ ನಿವೃತ್ತರಾದರೋ ಅನ್ನುವ ಮಟ್ಟಿಗೆ ಸುಮ್ಮನೆ ಕೂತರು. ಭಾರತಕ್ಕೆ ಯಾರು ದಿಕ್ಕು ಅನ್ನುವ ಹಾಗಿತ್ತು ಪರಿಸ್ಥಿತಿ.

ದೇಹ ದುರ್ಬಲವಾದರೇನು, ಮನೋಬಲದ ಮುಂದೆ ಬಲವುಂಟೇ! ಸುಭಾಷ ಚಂದ್ರರು ಬಂಗಾಳ ಪ್ರಾಂತ್ಯದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. ತೂಕಡಿಸುವ ರಾಷ್ಟ್ರವನ್ನು ಎಚ್ಚರಗೊಳಿಸುವುದು ಹೇಗೆಂಬುವುದು ದೊಡ್ಡ ಸಮಸ್ಯೆಯೇ ಆಯಿತು. ಆ ವೇಳೆಗೆ ಸರಿಯಾಗಿ ಬ್ರಿಟಿಷರ ಸರಕಾರದವರು ಸೈಮನ್ ಕಮೀಷನ್ ಎಂಬುವುದು ಒಂದನ್ನು ರಚಿಸಿ, “ಇನ್ನೊಂದು ಕಂತಿನ ರಾಜಕೀಯ  ಸುಧಾರಣೆಗಳಿಗೆ ಭಾರತೀಯರು ಅರ್ಹರಾಗಿದ್ದಾರೆಯೇ, ಇಲ್ಲವೆ ಎಂಬುವುದನ್ನು ಕುರಿತು ವಿಚಾರಣೆ ನಡೆಸಿ, ವರದಿಮಾಡಿ:” ಎಂದು ಆಜ್ಞೆ ಮಾಡಿದರು. ಎಂದರೆ, ಭಾರತದ ಜನ ಇನ್ನೂ ಸ್ವಲ್ಪ ಅಧಿಕಾರ ಪಡೆಯಲು ಯೋಗ್ಯರೇ ಎಂಬ ಪ್ರಶ್ನೆ! ಇದಕ್ಕಿಂತ ಭಾರತಕ್ಕೆ ಮಾಡಬಹುದಾದ ಅಪಮಾನ ಇನ್ನೊಂದು ಉಂಟೆ? ಭರತಖಂಡವೇ ಪ್ರಳಯಮೂರ್ತಿಯಂತೆ ಸಿಡಿದು ಎದ್ದಿತು, ಪ್ರತಿಭಟಿಸಿತು. “ಸೈಮನ್ ಸಮಿತಿಗೆ ಬಹಿಷ್ಕಾರ! ದಿಕ್ಕಾರ ಎಂಬ ಕೂಗು ಭಾರತದಲ್ಲೆಲ್ಲ ಮರುದನಿ ಕೊಟ್ಟಿತು.  ಬಂಗಾಳವನವನೆಲ್ಲ ಬಡಿದೆಬ್ಬಿಸಿದರು.  ಬೋಸರು. “ಅಖೀಲ ಬಂಗಾಳ ವಿದ್ಯಾರ್ಥಿ “ಸಮ್ಮೇಳನ, “ಅಖಿಲ ಬಂಗಾಳ ತರುಣ” ಸಮ್ಮೇಳನಗಳಿಗೆ ನವಚೈತನ್ಯವನ್ನು ಕೊಟ್ಟರು. ಪಂಡಿತ ಜವಾಹರಲಾಲ್, ಸಾಹೇಬ್ ಖುರೇಷಿ, ಸುಭಾಷ ಚಂದ್ರ ಬೋಸ್ ಮೂವರು ಮಹಾಕಾರ್ಯದರ್ಶಿಗಳಾದರು.

೧೯೨೮ರಲ್ಲಿ ಕಲಕತ್ತೆಯಲ್ಲಿ ಕಾಂಗ್ರೆಸ್ಸ ಅಧಿವೇಶನ ನಡೆಯಿತು,. ಸುಭಾಷರು “ಪೂರ್ಣ ಸ್ವಾತಂತ್ರ್ಯವೇ ನಮ್ಮ ಗುರಿ ಎಂದು ಘೊಷಿಸಬೇಕು” ಎಂದು ವಾದಿಸಿದರು.   ಕಾಂಗ್ರೆಸ್, ಒಂದು ವರ್ಷದಲ್ಲಿ ನಮ್ಮ ದೇಶ ಒಳ ಆಡಳಿತವನ್ನು ನಮಗೆ ಒಪ್ಪಿಸಬೇಕು”, ಎಂದು ನಿರ್ಣಯ ಮಾಡಿತು.

ಈ ಕಾಂಗ್ರೆಸ ಆದಿವೇಶನಕ್ಕೆ ೫೦ ಸಾವಿರ ಮಂದಿ ಕೆಲಸಗಾರರು ಬಂದಿದ್ದರು!. ಬಂಗಾಳದ ಸ್ವಯಂ ಸೇವಕ ಪಡೆಗೆ ಬೋಸರು ದಂಡನಾಯಕರಾಗಿದ್ದರು! ಎಲ್ಲರಿಗೂ ಸಮರಶಿಕ್ಷಣ ಕೊಟ್ಟಿದ್ದರು! ಎಲ್ಲರೂ ಯೋಧಯೋಗ್ಯ ಸಮವಸ್ತ್ರ ಧರಿಸಿದ್ದರು!

ಮುಂದಿನ ಲಾಹೋರ ಅಧಿವೇಶನದಲ್ಲಿ, ಜವಹರ ಲಾಲರ ಅಧ್ಯಕ್ಷತೆಯಲ್ಲಿ, ಪೂರ್ಣ ಸ್ವಾತಂತ್ರ್ಯವೇ ಭಾರತದ ಗುರಿಯೆಂಬ ನಿರ್ಣಯವಾಯಿತು. ಅಂದಿನಿಂದ ಸುಭಾಷ್ ಚಂದ್ರಭೋಸರು ವ್ಯಕ್ತಿತ್ವದ ಕಳೆ, ಶಕ್ತಿ ಏರುತ್ತ ಬಂದುವು. ಅವರು ಒಂದು ಕಡೆಗೆ ಕಾರ್ಖಾನೆಗಳ ಕೆಲಸಗಾರರನ್ನೂ ಇನ್ನೊಂದು  ಕಡೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನೂ ಎಚ್ಚರಗೊಳಿಸಿದರು. ರಾಷ್ಟ್ರಲ್ಲೆಲ್ಲ ಬ್ರಟಿಷ್ ಪೀಡೆಯಿಂದ ಭಾರತವು ರಕ್ಷಿತವಾಗಬೇಕು” ಎಂಬ ವಾತಾವರಣವನ್ನು ಉಂಟು ಮಾಡಿದರು. ಬ್ರಿಟಿಷ್ ಸರಕಾರದವರಾದರೋ ಮೇಲಿಂದ ಮೇಲೆ ಬೋಸರನ್ನು ಬಂಧಿಸಲು ಆರಂಭಿಸಿದರು. ಇದರಿಂದ ಅವರು ಕ್ಷಯರೋಗಕ್ಕೆ ತುತ್ತಾದರು. ಚಕಿತ್ಸೆಗಾಗಿ ಅವರು ಎರಡು ಬಾರಿ ಯೂರೋಪಿಗೆ ಹೋಗಬೇಕಾಯಿತು. ಅಲ್ಲಿ ಹಲವು ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿದರು.

ಕಾಂಗ್ರೆಸ್ಸಿನ ಅಧ್ಯಕ್ಷರು:

೧೮೩೮ರಲ್ಲಿ ಅವರು ಹರಿಪುರ ಕಾಂಗ್ರಸ್ಸಿನ ಅಧ್ಯಕ್ಷರಾಗಿ ಚುನಾಯಿತರಾದರು. ಇದರಿಂದಾಗಿ ಸ್ವಾತಂತ್ರ್ಯ ಸಂಗ್ರಾಮದ ಸ್ವರೂಪವೇ ಬದಲಾವಣೆ ಹೊಂದಿತು. ಆಗಲೇ ಜವಹರಲಾಲರ ಅಧ್ಯಕ್ಷತೆಯಲ್ಲಿ “ಯೋಜನೆಯ ಸಮಿತಿ” ರೂಪುಗೊಂಡದ್ದು, ಜನರ ಬಡತನವನ್ನೂ ತೊಲಗಿಸಲು ಹೇಗೆ ಮುಂದುವರೆಬೇಕು ಎಂದು ಯೋಚಿಸಿದರು.

ಒಂದು ವರ್ಷ ಅಧ್ಯಕ್ಷ ಪದವಿಯ ಕಾಲದಲ್ಲಿ ಹಾಕಿಕೊಂಡ ಕೆಲಸಗಳನ್ನು ಮುಗಿಸಲು ಸಾಧ್ಯವಿಲ್ಲ. ಆದಕಾರಣ ಮುಂದಿನ ವರ್ಷದ ಅಧ್ಯಕ್ಷ ಚುನಾವಣೆಗೆ ನಿಲ್ಲುವುದು ಸರಿಯೆಂದು ಬೋಸರಿಗೆ ತೋರಿತು.  ಗಾಂಧೀಜಿ  ಮತ್ತು  ಇತರೆ ಬಲ ಪಕ್ಷ ನಾಯಕರಿಗೆ ಇದು ಸರಿಬೀಳಲಿಲ್ಲ. ಬೋಸರು ಚುನಾವಣೆಗೆ ನಿಂತರು ಗಾಂಧೀಜಿಯವರ ಒಪ್ಪಿಗೆಯಿಂದ ಪಟ್ಟಾಭೀ ಸೀತಾರಾಮಯ್ಯನವರು ನಿಂತರು. ಚುನಾವಣೆಯಲ್ಲಿ ಬೋಸರು ಗೆದ್ದರು. ಗಾಂಧೀಜಿಯವರು ಇದು ತಮ್ಮ ಸೋಲೆಂದು ಭಾವಿಸಿದರು. ತ್ರಿಪುರಿಯಲ್ಲಿ (೧೯೩೯) ಕಾಂಗ್ರೆಸ ಸೇರಿತು. ಸುಭಾಷರಿಗೆ ಅರೋಗ್ಯ ಸರಿಯಿಲ್ಲ. ವಿಪರೀತ ಜ್ವರ. ಸಭೆಗೆ ಅವರನ್ನು ಎತ್ತಿಕೊಂಡು ಬರಬೇಕಾಯಿತು. ಆದರೂ ಬೋಸರು ಕಾರ್ಯಕ್ಷೇಥ್ರ ಬಿಡಲಿಲ್ಲ.

“ಆರ ತಿಂಗಳ ತಿಂಗಳ ಒಳಗೆ ಭಾರತಕ್ಕೆ ಸ್ವಾತಂತ್ರ್ಯ ಕೊಡದೇ ಹೋದರೆ ನಾವು ಹೊಡೆದಾಟಕ್ಕೆ ಸಿದ್ಧರಾಗಬೇಕು”. “ಇನ್ನು ಆರೇ ತಿಂಗಳು: ಯೂರುಪಿನಲ್ಲಿ ಯುದ್ಧ ಆರಂಭವಾಗುತ್ತದೆ.  ಆಗ ಬ್ರಿಟಿಷ ವಿರೊಧಿ ರಾಷ್ಟ್ರಗಳ ಸಹಾಯ ಪಡೆದು ಅಸ್ತ್ರಸನ್ನದರಾಗಿ, ಹೊಡೆದಾಡಿ ಸ್ವಾತಂತ್ರ್ಯ ಪಡೆಯಬೇಕು” ಅಂದರು ಬೋಸ್! ಕಾಂಗ್ರೆಸ್ಸಿನಲ್ಲಿ ಗಾಂದೀಜಿ, ನೆಹರು ಮೊದಲಾದವರೊಡನೆ ಕಲಹವಾಗಿ ಬೋಸರು ಅಧ್ಯಕ್ಷ ಪದವಿಗೆ ರಾಜೀನಾಮೆ ಕೊಡಬೇಕಾಯಿತು”.

ಬೋಸರು “ಫಾವರ್ಡ ಬ್ಲಾಕ್” ಎಂಬ ಪಕ್ಷ ಕಟ್ಟಿದರು. ಅದು ದಿನದಿನ ಬಲಗೊಳ್ಳುತ್ತಾ ಬಂತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು “ಬೋಸರು ಇನ್ನು ಮೂರು ವರ್ಷಗಳಕಾಲ ಕಾಂಗ್ರೆಸ್ಸಿನಲ್ಲಿ ಯಾವ ಅಧಿಕಾರ ಸ್ಥಾನಕ್ಕೂ ಅನರ್ಹರು” ಎಂದು ಸಾರಿತು.

ಬ್ರಿಟಿಷರ ಮುಷ್ಟಿಯಿಂದ ಪಾರು :

ಬೋಸರ ಭವಿಷ್ಯ ನಿಜವಾಯಿತು. ೧೯೩೯ನೇಯ ಸೆಪ್ಟೆಂಬರಿನಲ್ಲಿ ಯೂರಪಿಯನಿಲ್ಲಿ ಯುದ್ಧ ಮೊದಲಾಯಿತು. “ಫಾವರ್ಡ ಬ್ಲಾಕಿ”ನ ಪ್ರಚಂಡ ಚಳುವಳಿ ರಾಷ್ಟ್ರದಾದ್ಯಂತ ಮೊದಲಾಯಿತು. ಈ ಪಕ್ಷ ಈ ಪಕ್ಷದ ನಾಯಕ ತಮ್ಮ ಪಾಲಿಗೆ ಮೃತ್ಯುವೆಂದು ಬ್ರಿಟಿಷ ಸರಕಾರ ಭಾವಿಸಿತು. ೧೯೪೦ಬೇ ಜುಲೈ ತಿಂಗಳಲ್ಲಿ ಬೋಸರನ್ನೂ , ಅವರ ಅನುಯಾಯಿಗಳು ನೂರು ಮಂದಿಯನ್ನು ಬಂಧಿಸಿತು.  ಬೋಸರಾದರೂ” ಇದೇ ಭಾರತದ ಸಮಯ. ಭರತವು ಬ್ರಟನ್ನಿನ ವೈರಿಗಳೊಂದಿಗೆ ಒಂದಾಗಿ ಹೊಡೆದಾಡಬೇಕು. ಭಾರತವು ಅಂತರರಾಷ್ಟ್ರೀಯ ರಾಜಕೀಯದಿಂದ ದೂರವಾಗಿರಲು ಸಾಧ್ಯವಿಲ್ಲ” ಎಂಬ ನಿರ್ಣಯಕ್ಕೆ ಬಂದರು.

೧೯೪೦ನೆಯ ನವೆಂಬರ  ತಿಂಗಳ ಕೊನೆಯಲ್ಲಿ ಬ್ರಿಟಿಷ ಸರಕಾರಕ್ಕೆ ಸ್ಪಷ್ಟವಾಗಿ ಎಚ್ಚರಿಕೆ  ಕೊಟ್ಟರು. “ಹೀಗೆ  ನೀವು ನನ್ನನ್ನು ಬಿಡುಗಡೆ ಮಾಡಿದಿರಾ ಸರಿ. ಇಲ್ಲವಾಧರೆ ನಾನು ಉಪವಾಸವನ್ನೇ ಆರಂಭಿಸುತ್ತೇನೆ” ಅಂದರು. ಅಧಿಕಾರಿಗಳು ಮೊದಲ ಮೊದಲು ಉದಾಸೀನರಂತೆ ವರ್ತಿಸಿದರು. ಆಮೇಲೆ  ಸಾಯುವವರೆಗೆ ಉಪವಾಸ ಮಾಡಿದರೇನು ಗತಿ! ಅಂದುಕೊಂಡು ಅವರನ್ನು ಮನೆಯಲ್ಲಿ ಇಟ್ಟು ಸರ್ಪಕಾವಲು ಹಾಕಿದರು. ಬೋಸರು ಮನೆ ಬಿಟ್ಟು ಕದಲಲ್ಲ! ಅಷ್ಟಕ್ಕೆ ಅವರ ಮಲಗುವ ಕೋಣೆಯೊನ್ನು ಕದಲಿಲಲ್ಲ! ಅಷ್ಟೇಕೆ, ಅವರ ಮಲಗುವ ಕೋಣೆಯನ್ನು ಸಹ ಬಿಡಲಿಲ್ಲ! ನಲವತ್ತು ದಿನಗಳು ಉರುಳಿದವು. ೧೯೪೧ನೆಯ ಜನೆವರಿ ಮೂರನೇ ವಾರ ಇರಬೇಕು, ಬೋಸರು ತಮ್ಮ ಮನೆಯಿಂದ ಆದೃಶ್ಯರಾದರು. ಮತ್ತೆ ಅವರ ವಿಚಾರನ್ನು ತಿಳಿಯ ಬಂದುದ್ದು ೧೯೪೧ನೆಯ ನವೆಂಬರಲ್ಲಿ ಜರ್ಮನಿಯಿಂದ ಬೋಸರು ರೇಡಿಯೋದಲ್ಲಿ ಮಾತನಾಡಿದಾಗ || ಭಾರತದಿಂದ ಅದೃಶ್ಯವಾದ ಒಂಬತ್ತು ತಿಂಗಳ: ಅನಂತರ !

ಕಾವಲುಗಾರರಿಗೆಲ್ಲ ಕೈಗೊಟ್ಟ ಬೋಸರು ಹೇಗೆ ತಪಿಸಿಕೊಂಡು ಹೋದರು ?

ನನ್ನ ಕೊಣೆಯು ಒಳಕ್ಕೆ ಒಬ್ಬರೂ ಬರಬೇಡಿ,ನನ್ನನ್ನು ಮಾತನಾಡಿಸಬೇಡಿ; ನನಗೇನಾದರೂ  ಆಹಾರ ಕೊಡಬೇಕಾಧರೆ ಕೊಣೆಯಲ್ಲಿಟ್ಟು ಹೊರಟು ಹೋಗಿ. ನಾನು ಯೋಗಾಭ್ಯಾಸದಲ್ಲಿದ್ದೇನೆ ಎಂದು ತನ್ನವರಿಗೆಲ್ಲ ಹೇಳಿದರು. ಅವಾದರೋ “ಬೋಸರು ಯೋಗಾರೂಢ ರಾಗಿದ್ದಾರೆ” ಎಂದು ಸುದ್ಧ ಹರಡಿದರು. ಬ್ರಿಟಿಷ ಕಾವಲುಗಾರರು ಇದು ನಿಜವೋ ಸುಳ್ಳೊ ಎಂದು ತಿಳಿಯಲು ಹತ್ತು ಹತ್ತು ನಿಮಿಷಗಳಿಗೊಮ್ಮೆ ಕಿಟಕಿ, ಮೂಲಕ ಬೋಸರ ಕೋಣೆಯೊಳಕ್ಕೆ ಇಣುಕಿ ನೋಡುತ್ತಿದ್ದರು! ಬೋಸರು ಬಾಗಿಲಿಗೆ ಬೆನ್ನು ಮಾಡಿ ಒಬ್ಬ ಭೋಸರ ಬಾಗಿಲಿಗೆ ಬೆನ್ನು ಮಾಡಿ, ಮಣೆಯ ಮೇಲೆ ಪದ್ಮಾಸನ ಹಾಕಿಕೊಂಡು ಶಿಲಾಮೂರ್ತಿಯಂತೆ,  ಕೂಗುತಿದ್ದರು| ಹೀಗೆ ಅನೇಕ ದಿನಗಳು ಉರುಳಿದವು. ಬೋಸರ ಗಡ್ಡ ಮೀಸೆಗಳು ಬೆಳೆದವು. ಒಂದು ದಿನ ಯಾರೋ ಒಬ್ಬ ಮೌಲ್ವಿ ಹೊರಗೆ ಹೊದ.ಕಾವಲುಗಾರರು ನೋಡುತ್ತಲೇ ಇದ್ದಾರೆ! ಆಮೇಲೆ ಕಿಟಕಿ ಮೂಲಕ ಕೊಣೆಯಲ್ಲಿ ಕೂತ ಯೋಗಿಯನ್ನು ನೋಡುತ್ತಾರೆ! ಎಲ್ಲಿದ್ದಾನೆ ಯೋಗಿ! ಯೋಗಿ ಮೌಲ್ವಿಯಾಗಿ ಪರಾರಿಯಾಗಿದ್ದಾನೆ! ಅವರು ನೆಟ್ಟಗೆ ರೇಲ್ವೆ ಸ್ಟೇಷನ್ನಿಗೆ ಹೋಗಿ ಪಂಜಾಬ್ ಮೇಯಿಲ್ ಗಾಡಿ ಹತ್ತಿದ್ದರು; “ಪೆಷಾವರ ಚಲೋ” ಅಂದರು!

ಸಿಂಗಪೂರದಲ್ಲಿ ಸುಭಾಷರು ಸ್ವತಂತ್ರ್ಯ ಭಾರತದ ವೀರಗಣಕ್ಕೆ ಸ್ಪೂರ್ತಿಯಾದರು.

ಸುಭಾಷ ಚಂಧ್ರಬೋಸರು ತಮ್ಮ ಮನೆಯನ್ನೂ ತಮ್ಮ ಮಾತೃಭೂಮಿಯನ್ನೂ ಬಿಟ್ಟು ಹೋಗುವುದಕ್ಕೆ ಮೊದಲು ಮಹಾತ್ಮಾ ಗಾಂಧಿವರನ್ನೂ, ಭಾರತೀಯರನ್ನೂ ಸಂಭೋಧಿಸಿ, ಕೊಟ್ಟ ಹೇಳಿಕೆಯಲ್ಲಿ ಹೀಗೆಂದರು.

“ನಾನು ಯಾವುದೇ ಪದವಿ, ಪ್ರತಿಷ್ಟೇ ಪ್ರಯೋಜನ ಪಡೆಯಲು ಯಾವ ವಿದೆಶದ ಕಡೆಗೂ ಕೈಯೊಡ್ಡಿಲ್ಲ. ನನ್ನ ಮಾತೃಭೂಮಿಯ ದಾಸ್ಯ ವಿಮೋಚನೆಗಾಗಿ ವಿದೇಶಗಳ ಸಹಾಯ ಪಡೆಯುತ್ತೇನೆ. ನಾನಿಟ್ಟಿರುವ ಹೆಜ್ಜೆಯೇ ಸರಿ… ಈ ರೀತಿ ನಿಶ್ಚಯ ಮಾಡಿ ನಾನು ಅಪಾಯಕ್ಕೆ ಗುರಿಯಾಗಿದ್ದೇನೆ: ಭಾರತವನ್ನೂ ಅಪಾಯದ ಕಡೆಗೆ ತಳ್ಳಿದ್ದೇನೆ.

ಬೋಸರು ಪೆಷಾವರಿಗೆ ಬಂದರು; ಒಬಬನ ಪಟಾಣನ ಮನೆಯಲ್ಲಿ ಇಳಿದುಕೊಂಡರು. ಪಠಾಣ ಬಹಳ ಉದಾರಿ, ಉಪಕಾರಿ. ಪೇಷಾವರಿನಲ್ಲಿ ಬೋಸರಿಗೆ “ಭಗತ್” ರಾಂ” ಎಂಬ ಸಹಾಯಕನಾಗಿದ್ದ ಸಿಕ್ಕಿದ್ದ. ಅವನಿಂದ ಬೋಸರು ಪಠಾಣರ ಭಾಷೆಯಲ್ಲಿ ಚೆನ್ನಾಗಿ ಮಾತನಾಡುವುದನ್ನು ಕಲಿತರು , “ಭಗತ್ ರಾಂ” “ರಹಮತ್ ಖಾನ್” ಆದ. ಗೂಢಚಾಚರರ ಕಣ್ಣಿಗೆ ಬಿದ್ದರೆ ಅಪಾಯವೆಂದು ಇಬ್ಬರು ಪೆಷಾವರ ಬಿಟ್ಟು ಕತ್ತಲಾಗುವುದರೊಳಗೆ ಗಡಿ ಪ್ರದೇಶಕ್ಕೆ ಬಂದರು. ಕಾಡೆನ್ನದೆ, ದುಷ್ ಮೃಗಗಳನ್ನು ಲಕ್ಷಿಸದೇ, ಕಾಲುನಡಿಗೆಯಿಂದಲೇ ಮುಂದುವರೆದು ಕಾಬೂಲಿಗೆ ಹೋದರು.ಅಲ್ಲಿಂದ ಮುಂದೆ ಹೋಗದೆ ಇದ್ದರೆ ಬ್ರಿಟಿಷ್ ಪೋಲಿಸರ ವಶವಾಗುವುದು ಖಂಡಿತ. ನದಿ ಅಡ್ಡವಾಗಿದೆ: ಅಂಬಿಗರು ಯಾರು ಇವರನ್ನು ನದಿ ದಾಟಿಸಲು ಒಪ್ಪಲಿಲ್ಲ. ನೀರು ತುಂಬುವ ಚರ್ಮದ ಚೀಲಗಳನ್ನು ನೀರಿನ ಮೇಲೆ ಬಿಟ್ಟರು: ಅವೇ  ಈಜುಬುರುಡೆಗಳಾದವು. ಅವುಗಳನ್ನು ಹಿಡಿದುಕೊಂಡು, ಮುಳುಗುತ್ತ-ತೇಲುತ್ತ, ಸತ್ತೇವೋ- ಬದುಕಿದೆವೋ ಅನ್ನುತ್ತಾ ದಡ ಸೇರಿದರು. ಲಾರಿಯೊಂದನ್ನು ಹತ್ತಿ ಕಾಬೂಲ್ ಪಟ್ಟಣಕ್ಕೆ ಬಂದರು. ಅದರೆ ಪಟ್ಟಣದಲ್ಲಿ ಇವರು ಎಲ್ಲಿ ಇಳಿದುಕೊಳ್ಳಬೇಕು? ಕಡೆಗೆ ಒಂದು  ದುರ್ವಾಸೆನೆಯ ಧರ್ಮ ಛತ್ರದ ಕೊಣೆಯೊಂದನ್ನು ಹಿಡಿದರು.ಹೋಟೆಲಿನಿಂದ ಬೆಂದು ಬೇಯದ, ಜೀರ್ಣವಾಗದ ಊಟ ತಂದು, ತಿಂದು, ಹಾಸಿಗೆ ಹಿಡಿದರು. ರಮಹತ್ ಖಾನ್ ಹೋಗಿ ಒಬ್ಬ ವೈದ್ಯರನ್ನು ಕರೆ ತಂದರು. ಚಕಿತ್ಸೆ ಆಯಿತು. ಎಂತಹ ಶ್ಚರ್ಯ! ಆ ವೈದ್ಯ ಭಾರತೀಯ. ಆತನೂ ಕ್ರಾಂತಿಕಾರರ ಗುಂಪಿನವ. ಆತ ಬರ್ಲಿನ್ ನಗರದಲ್ಲಿ (ಜರ್ಮನಿ)” ಸ್ವತಂತ್ರ್ಯ ಭಾರತ ಸೈನ್ಯ” ಒಂದನ್ನ ಕಟ್ಟಿದ್ದನೆಂಬುವುದು ಗೊತ್ತಾಯಿತು. ಬೋಸರ ಸಂತೋಷಕ್ಕೆ ಪಾರವೇ ಇಲ್ಲ.

ಕಾಬೂಲಿನಲ್ಲಿ ಹೆಚ್ಚು ಕಾಲ ಇರುವುದು ಕ್ಷೇಮಲ್ಲವೆಂಬುವುದು ಗೂಡಚಾರರ ಸಂಚಿನ ಚಟುವಟಿಕೆಗಳಿಂದ ಸ್ಪಷ್ಟವಾಯಿತು. ಬೋಸರು ರಷ್ಯದ ರಾಯಭಾರ ಕಾರ್ಯಾಲಯದಿಂದ ಸಹಾಯ ದೊರೆತು ತಾವು ಮಾಸ್ಕೋಗೆ ಹೋಗಬಹುದೆಂದು ನಂಬಿ, ನೋಡಿದರು. ಪ್ರಯೋಜನವಾಗಲಿಲ್ಲ. ವೈದ್ಯ ಮಿತ್ರರ ಮಾತನ್ನೂ ಕೇಳಿ, “ಧರ್ಮಛತ್ರ “ಬಿಟ್ಟು, “ಅನಾಥಾಶ್ರಮ”ವೊಂದಕ್ಕೆ ಹೋದರು. ಇಟಲಿಯ ರಾಯಭಾರ ಕಚೇರಿಯ ಸಹಾಯಕ್ಕೆ ಪ್ರಯತ್ನ ಮಾಡಿದರು. ಆ ಪ್ರಯತ್ನ  ಕೈಗೂಡಿತು. ಇಟಲಿಯರಾಯಭಾರಿಗಳು ಸುಭಾಷರ ಪ್ರಯಾಣಕ್ಕೆ ಏರ್ಪಾಟು ಮಾಢಿ, ಇಟಲಿಗೆ ಹೋಗಿ  ಮುಸೋಲಿನಿಯನ್ನು ನೋಡಿ ಜರ್ಮನಿಗೆ ಹೋಗಿ ಹಿಟ್ಲರನನ್ನು ನೋಡಿ” ಎಂದು ಹೇಳಿದರು.

ಜಪಾನಿನಲ್ಲಿ ಮನೆ ಮಾಡಿದ್ದ ಭಾರತದ ಕ್ರಾಂತಿಕಾರ ರಾಸ ಬಿಹಾರ ಬೋಸರು ಸುಭಾಷ ಚಂದ್ರ ಬೋಸರಿಗೆ “ಜಪಾನ ಸರಕಾರ ತಮಗೆ ಎಲ್ಲ ಬಗೆಯ ಸಹಾಯ ಸಹಕಾರ ಕೊಡಲು ಸಿದ್ಧವಾಗಿದೆ. ತಾವು ಕೂಡಲೇ ಇಟಲಿಗೂ ಜರ್ಮನಿಗೂ ಹೋಗಿ ಅಲ್ಲಿ ಶಸ್ತ್ರ ಸಹಾಯ ಪಡೆಯಿರಿ, ರಷ್ಯದಿಂದ ಹೆಚ್ಚು ಸಹಾಯ ದೊರೆಯುವ ಸಂಭವ ಇಲ್ಲ” ಎಂದು ಸೂಚಿಸಿದರು.

ಭಾರತವೀರರೇ, ಚಲೋ ಡಿಲ್ಲಿ!

ಈ ಸೂಚನೆಯಂತೆ ಸುಭಾಷರು ಬರ್ಲಿನ ನಗರಕ್ಕೆ ಬಂದರು ! ಶ್ರೇಷ್ಠ ಆಧಿಕಾರಿಗಳೊಂದಿಗೆ ಮಾತನಾಡಿದರು.  ಸುಭಾಷ್ – ಹಿಟ್ಲರ್‌ ಭೇಟಿಯಾಯಿತು. ಭಾರತ ಸ್ವಾತಂತ್ರ್ಯ ಸಾಧನೆಗಾಗಿ ಸುಭಾಷ ಚಂದ್ರಭೋಸರು ಮಾಡುವ ಪ್ರಯತ್ನಕ್ಕೆ ಜರ್ಮನ್ ಸರಕಾಋವು ಪೂರ್ಣ ನೆರವಾಗುತದೆ. ಅಜಾದ್ ಹಿಂದ್ ಕೇಂದ್ರ ಕಚೇರಿ, ಅಜಾದ್ ಹಿಂದ್ ರೇಡಿಯೋ ಕಾರ್ಯಾಲಯ, ಭಾರತೀಯತರುಣ ಸಂಸ್ಥೆ, ಮೊದಲಾದವುಗಳನ್ನು ಸ್ಥಾಪಿಸಲೂ ಭಾರತೀಯ ತರುಣರಿಗೆ ಸಮರ ಶಿಕ್ಷಣ ಕೊಡಲು , ಅಗತ್ಯವಾದ ಸಹಾಯ ನೀಡುತ್ತದೆ; ಇವೆಲ್ಲವುಗಳ ನಿರ್ವಾಹಣಕ್ಕಾಗಿ ಹಣವನ್ನು ಸಾಲವಾಗಿ ಕೊಡುತ್ತದೆ. ಈ ಷರತ್ತುಗಳ ಒಪ್ಪಂದವು ಸಿದ್ಧವಾಯಿತು. ಸುಭಾಷ್, ಹಿಟ್ಲರ ಇಬ್ಬರೂ ಅದಕ್ಕೆ ಸಹಿ ಹಾಕಿದರು. ಅಂದಿನಿಂದ ಪ್ರಾರಂಭವಾಯಿತು. ಬರ್ಲಿನ್ನಿನಲ್ಲಿ ಸ್ವತಂತ್ರ್ಯ ಭಾರತದ ರಾಯಭಾರ ಕಾರ್ಯಾಲಯ! ಸುಭಾಷರೇ ಭಾರತದ ರಾಯಬಾರಿಗಳು೧ ೧೯೪೧ನೆಯ ನವೆಂಬರ ಎಡರಂದು ಬರ್ಲಿನ ನಗರದಲ್ಲಿ ಆಜಾದ್ ಹಿಂದ್ ಕೇಂದ್ರದ ಮೊದಲನೆಯ ಸಮ್ಮೇಳನ ನಡೆಯಿತು. ೧೯೪೨ರ ಡಿಸೆಂಬರ ತಿಂಗಳಲ್ಲಿ ಆಜಾದ್ ಹಿಂದ ಫೌಜ್ (ಸ್ವತಂತ್ರ್ಯ ಭಾರತದ ಸೈನ್ಯ) ಪ್ರಾರಂಭೋತ್ಸವ ನಡೆಯಿತು ! ಯೋಧರು ಪ್ರಮಾಣ ವಚನ ತೆಗೆದುಕೊಂಡರು! ಹದಿನೈದು ಮಂದಿಯಿಂದ ಆರಂಭವಾದದ್ದು ಅಲ್ಪಕಾಲದಲ್ಲಿಯೇ ೩,೫೦೦ಕ್ಕೆ ಏರಿತ್ತು ! ಇವರಿಗೆಲ್ಲ ಸಮರ ಶಿಕ್ಷಣ ಕೊಟ್ಟದಾಯಿತು. ಇವರೆಲ್ಲ, “ಚಲೋ ಡಿಲ್ಲಿ” ಎಂದು ಘೋಷಣೆ ಮಾಡುತ್ತ ವಿಜಯ ಪ್ರಯಾಣಕ್ಕೆ ಸಿದ್ಧರಾದರು. ಯಾರು ಇವರೆಲ್ಲ? ಜರ್ಮನರು ನಾನಾ ರಂಗಗಳಲ್ಲಿ (ಯೂರೋಪ್ ಮತ್ತು ಮಧ್ಯಪೂರ್ವ) ಬಂಧಿಗಳನ್ನಾಗಿ ಮಾಡಿ ಜರ್ಮನಿಗೆ ಕರೆತಂದ ಭಾರತೀಯ ಯೋಧರು! ಮತ್ತು ಜರ್ಮನಿಯಲ್ಲಿದ್ದ ಭಾರತೀಯರ ಪ್ರಜಾಸಾಮಾನ್ಯರು!

೧೯೪೧ನೆಯ ಡಿಸೆಂಬರ ವೇಳೆಗೆ ಜಗತ್ತಿನ ಸಂಗ್ರಾಮ್ ಫೆಸಿಫಿಕ್ ಸಾಗರಕ್ಕೂ ಹರಡಿತು: ಜಪಾನ್ ದೇಶವೂ ಬ್ರಿಟನ್ನಿಗೆ ವಿರುದ್ಧವಾಗಿ ನಿಂತಿತು. ಆಗ ನೇತಾಜಿ ಪೂರ್ವ ಎಷ್ಯಾ ಖಂಡಕ್ಕೆ ಬಂದು, ಮಲಯ, ಸಿಂಗಪೂರ, ಬರ್ಮ,. ಮತ್ತು ಇತರೆ ಪೂರ್ವ ಎಷ್ಯಾ ದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಒಲಿಸಿಕೊಂಡು, “ಅಜಾದ್ ಹಿಂದ್ ಫೌಜ್ ( ಸ್ವತಂತ್ರ ಭಾರತ ಸೈನ್ಯ)  ಬೆಲೆಸುವ  ಆಲೋಚನೆ ಮಾಢಿದರು.  ಬರ್ಮ ಭಾರತ ಗಡಿಗಳಲ್ಲಿ ಹಿಂದ್ ಫೌಜಿನ, ಯೋಧರನ್ನೂ ಕೂಡಿಸಿ, ಬಂಗಾಳ ಮತ್ತು ಅಸ್ಸಾಂ ಗಡಿಗಳ ಮೇಲೆ ದಾಳಿ ಎಬ್ಬಿಸಬಹುದೆಂದು ಬೋಸರ ಲೆಕ್ಕಾಚಾರ. ಆಗ ಭಾರತದೊಳಗೆ ಜನರು , ಸೈಣಿಕರು ಬ್ರಿಟನ್ನಿನ ವಿರುದ್ಧ ದಂಗೆ ಏಳುವುದು ಖಂಡಿತವೆಂದು ಬೋಸರು ನಿಶ್ಚಯಕ್ಕೆ ಬಂದರು.

ಪೆಸಿಫಿಕ್ ಸಾಗರದಲ್ಲಿ ಯುದ್ಧವಾರಂಭವಾದ ಕೂಡಲೇ ೩೦ ವರ್ಷಗಳಿಂದ ಜಪಾನಿನಲ್ಲಿ ನೆಲೆಸಿ, ಭಾರತದ ಬಂಧವಿಮೋಚನೆಗಾಗಿ ಕೆಲಸ  ಮಾಡುತ್ತಿದ್ದ ರಾಸ್ ಬಿಹಾರಿ ಬೋಸರು ಪೂರ್ವ ಎಷ್ಯಾ ದೇಶಗಳ ಭಾರತೀಯರನ್ನೆಲ್ಲ ಸಂಭೋಧಿಸಿ ಭಾಷಣಗಳನ್ನು ಮಾಡಿ “ಸ್ವತಂತ್ರ್ಯ ಭಾರತ ಸಂಘ ಸ್ಥಾಪಿಸಿದರು.  ೧೯೪೨ನೆ ಫೆಬ್ರವರಿಯಲ್ಲಿ ಜಪಾನರು ಸಿಂಗಪೂರವನ್ನಾಕ್ರಮಿಸಿದರು. ಮಲಯ, ಸಿಂಗಪೂರಗಳನ್ನು ಕಾಪಾಡಲು ಯುದ್ಧ ಮಾಡಲಿಕ್ಕಾಗಿ, ಸಿಂಗಪೂರ ಬಿತ್ತು,  ಬ್ರಿಟಿಷರು ಭಾರತೀಯ ಯೋಧರನ್ನು ಕೈಬಿಟ್ಟರು.  ಜಪಾನರಿಗೆ ಶರಣಾಗತರಾಗಿ, ೩೦ ಸಾವಿರ ಮಂದಿ ಭಾರತೀಯ ಯೋಧರನ್ನೂ ಅಧಿಕಾರಿಗಳನ್ನೂ ಜಪಾನರ ಬಂಧಿಗಳಾಗಿ ಒಪ್ಪಿಸಿ ಬಿಟ್ಟರು. ಜಪಾನಿನ ಸರಕಾರದವರು ಭಾರತೀಯ ಯೋಧ-ಬಂಧಿಗಳನ್ನೆಲ್ಲ ಕ್ಯಾಪ್ಟನ್ ಮೋಹನಸಿಂಗರ ದಂಡನಾಯಕತ್ವದಲ್ಲಿ, ಇರಿಸಿದರು. ಇವರೆಲ್ಲ “ಅಜಾದ್ ಹಿಂದ್ ಫೌಜ್ಗೆ – ಸ್ವತಂತ್ರ್ಯ ಭಾರತ ಸೈನ್ಯಕ್ಕೆ ಸೇರಿದರು.  ಜೊತೆಗೆ ಸಾವಿರಾರು ಮಂದಿ  ಭಾರತೀಐರ ಪ್ರಜಾಸಾಮಾನ್ಯರು ಸೇರಿದರು.  ಹೀಗೆ ರೂಪುಗೊಂಡ ೩೦ ಸಾವಿರ ಮಂದಿ ಯೋಧರನ್ನು ಶಸ್ತ್ರಸಜ್ಜಿತರನ್ನಾಗಿ ಮಾಡಿ, ಚಲೋ ಡಿಲ್ಲಿ ಎಂದು ವೀರ ಘೊಷಣೆ ಮಾಡುತ್ತ ಭಾರತದ ಗಡಿಗಳ ಮೇಲೆ ಅವರು ದಾಳಿ  ಹೊರಡಲು ನೇತಾಜಿ ಅನುಗೊಳಿಸಿದರು.

೧೯೪೨ನೆಯ ಜೂನ್ ತಿಂಗಳಲ್ಲಿ ಪೂರ್ವ ಎಷ್ಯದಲ್ಲಿದ್ದ ಭಾರತೀಯರ ಸಮ್ಮೇಳನ, ಪೂರ್ವ ಏಷ್ಯಾಕ್ಕೆ ಬಂದು ಭಾರತ ಸ್ವಾತಂತ್ರ್ಯ ಸಂಗ್ರಾಮದ ನಾಯಕತ್ವ ವಹಿಸಿಕೊಳ್ಳಬೇಕೆಂದು ಸುಭಾಷ್ ಚಂದ್ರ ಬೋಸರಿಗೆ ಅಹ್ವಾನಕೊಟ್ಟಿತು.

ಬೋಸರು ಜರ್ಮನಿಯಿಂದ ಜಪಾನಿಗೆ ಬಂದದ್ದು ಒಂದು ಪವಾಡವದಂತೆ ಇದೆ. ಭಾರತದಲ್ಲಿ ಬ್ರಿಟಿಷರ ವಿರುದ್ಧ ಜನ ಏಳಬೇಕು, ಇದಕ್ಕೆ ಸ್ಫೂರ್ತಿ ಕೊಟ್ಟು ಕೆಲಸ ಮಾಡಲು ತಾವು ಭಾರತದ ಹತ್ತಿರ ಇರಬೇಕು ಎಂದು ಸುಭಾಷರು ಬಯಸಿದರು. ಯುದ್ಧ ಕಾಲದಲ್ಲಿ ದೂರದ ಪ್ರಯಾಣ ತುಂಬ ಅಪಾಯಕರವಾಗಿತ್ತು. ಸುಭಾಷರು ಜೀವ ಸಹಿತ ಜಪಾನ ತಲುಪುವರೇ ಎಂಬುವುದು ಅನುಮಾನವಾಗಿತ್ತು. ಸುಭಾಷರು ಜರ್ಮನಿಯ ಸರಕಾರಕ್ಕೆ ೫-೧೨-೨೯೪೨ರಂದು ಹೀಗೆ ಬರೆದರು:

“ನನ್ನನ್ನು ವಿಮಾನದ ಮೂಲಕವಾದರೂ ಕಳಿಸಿ, ಸರ್ಬ ಮೆರಿನ್ ಮೂಲಕವಾದರೂ ಕಳಿಸಿ, ಹಡಗಿನ ಮೂಲಕವಾದರೂ ಕಳಿಸಿ, ಈ ಪ್ರಯಾಣದಲ್ಲಿ ಒಂದು ಪ್ರಮಾಣದ ವಿಪತ್ತು ಇದ್ದೇ ಇದೆ. ಯಾವಾಗಲೂ ಇದು ಇದ್ದೇ ಇರುತ್ತದೆ. ಆಗಬಹುದಾದ ವಿಪತ್ತಿಗ ಪೂರ್ಣ ಜವಾಬ್ದಾರ ನಾನುಜ. ನನ್ನ ಅದೃಷ್ಟದಲ್ಲಿ ನನಗೆ ನಂಬಿಕೆಯಿದೆ”.

೯೦ ದಿನಗಳ ಅವರ ಸಬ್ ಮೆರಿನ್ ಪ್ರಯಾಣ ಪ್ರತಿ ಕ್ಷಣವೂ ಯಮಗಂಡದ ಪ್ರಯಾಣ. ಜರ್ಮನಿಯಿಂದ ಹೊರಟು ಶತ್ರುಗಳಿಂದ ಆವೃತ್ತವಾದ ಬ್ರಟನ್ನಿನ, ಆಫ್ರಿಕದ ಸುತ್ತ ಸಮುದ್ರ , ಹಿಂದುಸಾಗರ ದಾಟಿ  ಸುಮಾತ್ರ ಮತ್ತು ಫಿನಂಗಿಗೆ ಬಂದರು. ಅಲ್ಲಿಂದ ವಿಮಾನ ಹತ್ತಿ ಜಪಾನ ಮುಟ್ಟಿ, ಕಡೆಗೆ ಸಿಂಗಪೂರಕ್ಕೆ ಆಗಮಿಸಿದರು!

೧೯೪೩ರನೆಯ ಜೂನ್ ತಿಂಗಳಲ್ಲಿ ಜಪಾನಿಗೆ ಬಂದವರೇ ಬೋಸರು ಜಪಾನಿನ ನಾಯಕರಿಗೆ ತಮ್ಮ ಮಾರ್ತಭೂಮಿಯ ಬಂಧ ವಿಮೋಚನೆಯ ಯೋಜನೆಗಳನ್ನೆಲ್ಲ ವಿವರಿಸಿದರು.  ಅವರಿಂದ ಸಹಾಯದ ಭರವಸೆ ಪಡೆದರು. ಟೋಕಿಯೋ ರೇಡಿಯೋ ಮೂಲಕ ಭಾರತದ ಭಾರತೀಯರನ್ನೂ, ಪೂರ್ವ ಏಷ್ಯಾ ದೇಶಗಳ ಭಾರತೀಯರನ್ನೂ ಸಂಭೋಧಿಸಿ, ಮಾತನಾಡಿದರು.  ಭಾರತೀಯರು ಸಮತೋಷಕ್ಕೆ ಪಾರವೇ ಇಲ್ಲ. ೨-೭-೧೯೪೩ರಂದು ಬೋಸರು ಸಿಂಗಪೂರಕ್ಕೆ ಬಂದರು. ಎರಡು ದಿನಗಳ ನಂತರ ಪೂರ್ವ ಏಷ್ಯಾ ದೇಶಗಳ ಭಾರತೀಯರೆಲ್ಲ “ಸ್ವತಂತ್ರ ಭಾರತ ಸಂಘ”ದ ಆಶ್ರಯದಲ್ಲಿ ಸಭೆ ಸೇರಿದರು. ಅವರ ನಾಯಕ ರಾಸ್ ಬಿಹಾರಿ ಬೊಸರು, ಸಂಘದ ಸ್ವಾತಂತ್ರ್ಯ ಸಂಗ್ರಾಮದ ನಾಯಕ ಪಟ್ಟವನ್ನು ನೇತಾಜಿಗೆ ಕಟ್ಟಿದರು.

ಮಾರನೆಯ ದಿನವೇ ನೇತಾಜಿಯವರು ಭಾರತ ರಾಷ್ಟ್ರೀಯ ಸೇನೆಯ ಪ್ರಚಂಡ ಮಹಾದಂಡನಾಯಕರಾದರು. ಖಾಕಿ ಸಮವಸ್ತ್ರ ಧರಿಸಿ ಸಿಂಗಪೂರ ನಗರಸಭಾ ಭವನದ ಮುಂದಿನ ಮೈದಾನದಲ್ಲಿ ಯೋಧರೆಲ್ಲ ಪಡೆ ಪಡೆಗಳಾಗಿ, ಸಾಲು ಸಾಲಾಗಿ ನಿಂತು. ಸುಭಾಷ್ ಚಂದ್ರ ಬೋಸರು ಸೇನ ದಂಡ ಪ್ರಣಾಮವನ್ನು ಸ್ವೀಕರಿಸಿದರು. ಸ್ವತಂತ್ರ್ಯ ಭಾರತ ವೀರಗಣವನ್ನು ಸಂಭೋಧಿಸಿ ಅವರು ಮಾಡಿದ ಮೊಟ್ಟ ಮೊದಲ ಭಾಷಣ ಸುವರ್ಣಕ್ಷರಗಳಲ್ಲಿ ಸೂರ್ಯಚಂದ್ರರು ಇರುವವರೆಗೆ ಬರೆದು ಇಡತಕ್ಕಂತಹುದು. “ಚಲೋ ಡಿಲ್ಲಿ” ಈ ರಣಘೊಷದಿಂದ ಆರಂಭಿಸಿದರು.

ನಾವೀಗ ವಿಜಯಯಾತ್ರೆಯನ್ನು ಆರಂಭಿಸಿದ್ದೇವೆ. ಈ ಸಮರ ಯಾತ್ರೆ ಮುಗಿಸಿ ,.ಜಯಗಳಿಸಿ, ಅದರ ಫಲವನ್ನು ಉತ್ಸವ ಸುಖವನ್ನು ಅನುಭವಿಸಲು  ಈ ವೀರ ಗಣದಲ್ಲಿ ಎಷ್ಟು ಮಂದಿ ಇರುವರೋ ನಾನು ಹೆಳಲಾರೆ. ಆದರೆ ನಾವು ನಮ್ಮ ಪ್ರಯತ್ನದಲ್ಲಿ ಜಯಗಳಿಸುತ್ತೇವೆಂಬುವುದು ನಾವು ಸ್ವತಂತ್ರ್ಯರಾಗುತ್ತೇವೆಂಬುವುದು ನಿಜ. ಪ್ರೇಮಬಂಧುಗಳೇ! ನಾನು ನಿಮಗೆ ಹಸಿವು- ಬಾಯಾರಿಕೆ, ವೇದನೆ- ವಿಪತ್ತು ಮಾತ್ರ ಕಡೊಬಲ್ಲೆ. ನನ್ನ ಬಳಿ ಇನ್ನೇನಿದೆ? ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧಹಕ್ಕು. ಅದನ್ನು ನಾವು ಪಡೆಯುತ್ತೇವೆ. ಶತಶತಮಾನಗಳಿಂದ ನಮ್ಮ ಹಿಂದಿನವರುಬಲಿದಾನ ಮಾಡಿದ್ದಾರೆ. ಬಲಿದಾನ ಮಾಡುವ ಭಾಗ್ಯ, ಭಾರತ ಮತೆಯ ಬಂಧವಿಮೋಚನೆಗಾಗಿ ಪ್ರಾಣಗಳನ್ನು ಅರ್ಪಿಸುವ ಮಹದವಕಾಶ, ಎಲ್ಲರಿಗೂ ಯಾವಾಗಲೂ ಲಭಿಸುವುದಿಲ್ಲ. ಗುಲಾಮರಂತೆ ನೂರು ವರ್ಷ ಬದುಕುವುದಕ್ಕಿಂತ ರಣರಂಗ ಪ್ರವೇಸ ಮಾಡಿ, ಮೂರು ದಿನ ಹೋರಾಡಿ, ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಸತ್ತು ವೀರ ಸ್ವರ್ಗ ಸೇರೋಣ… ವೀರ ಯೋಧರ ! ನೀವೆಲ್ಲ ನನಗೆ ನಿಮ್ಮ ರಕ್ತ ಕೊಡಿ! ನಿಮಗೆಲ್ಲ ನಾನು ಸ್ವತಂತ್ರ್ಯ  ಭಾರತವನ್ನು ಕೊಡುತ್ತೇನೆ! ” ಎಂದು ಮುಗಿಸಿದರು.  ಈ ಮಾತು ಮುಗಿಸುವುದಕ್ಕಿಲ್ಲ, ಸಾವಿರಾರು ಮಂದಿ ತರುಣರು “ಇದೋ ನಮ್ಮ ರಕ್ತ! ಸ್ವೀಕರಿಸ!” ಎಂಬುವುದಾಗಿ ಆಕಾಶ ಕಳಚಿ ಬೀಳುವಂತೆ ಘೋಷಣೆ ಮಾಡಿದರು.

ನೇತಾಜಿ, “ಈ ಪ್ರತಿಜ್ಞಾಪತ್ರಕ್ಕೆ ಮಸಿಯಲ್ಲಿ ಅಲ್ಲ, ತಮ್ಮ ರಕ್ತಾಕ್ಷರಗಳಿಂದ ಸಹಿ ಹಾಕಬಲ್ಲವರು  ಮುಂದೆ ಬನ್ನಿ ಅವರನ್ನು ನಾನು ಇದೋ ಪ್ರೇಮ ಬಾಹುಗಳಿಂದ ಅಲಿಂಗನ  ಮಾಡುತ್ತೇನೆ ” ಎಂದು ನಿಲಿಸಿದರು. ತಕ್ಷಣ ಹದಿನೇಳು ಮಂದಿತರು ತರುಣಿಯರು, ವೀರ ರಮಣಿಯರು, ಓಡಿ ಬಂದರು.  ಚೂರಿಯಿಂದ ತಮ್ಮ ಬೆರಳನ್ನು ಕೊರೆದು ಆ ರಕ್ತದಿಂದ ಪ್ರತಿಜ್ಞಾಪತ್ರಕ್ಕೆ ಸಹಿ ಹಾಕಿದರು! ಅನಂತರ ಸಾವಿರಾರು ಮಂದಿ ಯುವಕರು ರಕ್ತಾಕ್ಷರಗಳಿಂದ ಸಹಿ ಹಾಕಿದರು!

ಅನಂತರ ನೇತಾಜಿಯಿವರು ಮಲಯ, ಥೈಲ್ಯಾಂಡ್, ಬರ್ಮ ಫ್ರಾನ್ಸ, ಇಂಡೋ ಚೀನಗಳಿಗೆ ವಿದ್ಯುದ್ವೇಗದಿಂದ ಹೋಗಿ, ಭರತಿಯರನ್ನು ಕಂಡು ಏಳೀ ಎದ್ದೇಳಿ! ಸಮರ ಸನ್ನಧರಾಗಿ! ಭಾರತವನ್ನು ಬಂಧನದಿಂದ ಬಿಡಿಸಿ ” ಎಂದು ಕೇಳಿದರು.  ಪೂರ್ವ ಏಷ್ಯಾ ಖಂಡದ ಭಾರತೀಯರೆಲ್ಲ ಸ್ವಾತಂತ್ರ್ಯ ಸಾಧನೆಯ ಹುಚ್ಚರಾದರು!

ನೇತಾಜಿಯವರು ೨೧-೧೦-೧೯೪೩ರಂದು ಸ್ವಾತಂತ್ರ ಭಾರತ ಸೇನೆಯ ಹೆಸರಿನಲ್ಲಿ “ಅಜಾದ್ ಹಿಂದ್ ಸರಕಾರ” ಸ್ಥಾಪಿಸಿದರು. ಮಂತ್ರಿ ಮಂಡಲವನ್ನೂ ರಚಿಸಿದರು! ಭಾರತದ ಸ್ವತಂತ್ರ ಸರಕಾಋದ ಮೊದಲನೆಯ ರಾಷ್ಟ್ರಪತಿ ಸುಭಾಷ ಚಂದ್ರಭೋಸರು :” ಈ ವರ್ಷದೊಳಗೆ ಸ್ವತಂತ್ರ ಭಾರತ ಸೈನ್ಯರು ಭಾರತವನ್ನು ವಶಪಡಿಸಿಕೊಂಡು, ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುತ್ತದೆ” ಎಂದು ಸಾರಿದರು.

ಮಹಾ ಯುದ್ಧ ಉಗ್ರಸ್ವರೂಪ ತಾಳಿತು: ಬ್ರಿಟಿಷ್ ಸಾಮ್ರಾಜ್ಯದ ಅಡಿಗಲ್ಲುಗಳು ಅಲ್ಲಾಡಿದುವು. ಜಪಾನ್ ಸೈನ್ಯಸಿಂಗಪೂರದ ಮೇಲೆ ದಾಳಿ ಮಾಡಿತು.  ಅದರೊಂದಿಗೆ ಭಾರತ ಸೈನ್ಯವು ಒಂದಾಯಿತು. ಬ್ರಟಿಷರ ವಸಾಹತು ಗಳೊಂದೊಂದೊಂದು ಅವರ ಕೈ ಬಿಡಲಾರಂಭಿಸಿದುವು. ೧೯-೧೨-೧೯೪೩ರಂದು ಅಂಡಮಾನ್ ದ್ವೀಪವಶವಾಯಿತು. ಮಾರನೆಯ ದಿನವೇ ಫೋರ್ಟ ಬ್ಲೇರಿನಲ್ಲಿ ಸ್ವತಂತ್ರ್ಯ ಭಾರತ ಸರಕಾರದ ತ್ರೀವರ್ಣ ಧ್ವಜ ಹಾರಿಸಿದುವು,  ಭಾರತದ ನೆಲ! ಭಾರತದ ಧ್ವಜ! ಭಾರ‍ತದ ಸೈನ್ಯ! ಪರಮಾಧಿಕಾರವುಳ್ಳ ಸ್ವತಂತ್ರ್ಯ ಭಾರತ ಸರಕಾರ ಸ್ಥಾಪನೆ ಆಯಿತು. ಆಜಾದ್ ಹಿಂದ್ ಆಕಾಶವಾಣಿಯ ಮೂಲಕ ಈ ವರ್ತಮಾನ ಭಾರತದಲ್ಲೆಲ್ಲ ಪ್ರಚಾರವಾಯಿತು. ಅಂಡಮಾನಿಗೆ ಶಹೀದ್ ದ್ವೀಪವೆಂತಲೂ ನಿಕೋಬಾರಿಗೆ “ಸ್ವರಾಜ್ ದ್ವೀಪವೆಂತಲೂ ಹೆಸರನ್ನಿಟ್ಟರು! ಇಂಡೋನೇಷ್ಯಾ ಬರ್ಮ, ಇಟಲಿ ಫಿಲಿಪೈನ್ಸ, ಜಪಾನ್, ಜರ್ಮನಿ, ಮಂಚುಕೋ ನ್ಯಾನ್ ಕಿಂಗ್, ಸಯಾಂ, ಈ ರಾಷ್ಟ್ರಗೆಲ್ಲ ಈಗಾಗಲೇ :ಅಜಾದ್ ಹಿಂದ್” ಸರಕಾರವೇ ಭಾರ‍ತ ಸರಕಾರ ಎಂದು ಮನ್ನಣೆ ಕೊಟ್ಟಿದವು.

“ಅಜಾದ್ ಹಿಂದ್ ಫೌಜಿ”ನ ಹೆಮ್ಮೆಯೆಂದರೆ ಸಾವಿರಾರು ಮಹಿಳೆಯರನ್ನು ಒಳಗೊಂಡಿದ್ದ “ಝಾನ್ಸಿ ಪಡೆ:” ಇದಕ್ಕೆ ಕರ್ನಲ್, ಲಕ್ಷ್ಮೀಬಾಯಿಯವರೇ ನಾಯಕಿ ಯರಾಗಿದ್ದರು. ಅಲ್ಲದೇ, ಅಜಾದ್ ಹಿಂದ ಸರಕಾರದ ಮಂತ್ರಿಮಂಡಲದಲ್ಲಿಯೂ ಇದ್ದರು.

ತಮ್ಮ ಸೈನಿಕರು ಬರ್ಮದಿಂದ ಭಾರತಕ್ಕೆ ಹೊರಟಾಗ ಸುಭಾಷರು ಮಾಡಿದ ಭಾಷಣ ಮಹಾವೀರ ಕಾವ್ಯದ ಸ್ವಾತಂತ್ರ್ಯಗೀತೆಯಂತಿದೆ!

“ಅಗೋ ಅಲ್ಲಿ ನಮ್ಮ ಜನ್ಮಭೂಮಿ, ಪುಣ್ಯಭೂಮಿ,  ಪವಿತ್ರ ಭಾರತ ಭೂಮಿಯೆ ನಾವು! ನಾವೇ ಅಜೇಯ ಭಾರತ!… ದೇವರು ನಮ್ಮ ನಾಯಕ! ನಡೆಯಿರಿ, ನುಗ್ಗಿರಿ, ಭಾರತದ ಸ್ವಾತಂತ್ರ್ಯ ಸಾಧನೆಯ ಕಾರ್ಯದಲ್ಲಿ ರಣರಂಗದಲ್ಲಿ ಬಿದ್ದು ಸತ್ತು ಸ್ವರ್ಗ ಸೇರೋಣ!

೧೮-೩-೧೯೪೪ನೆಯ ದಿನ ಭಾರತದ ಸೈನಿಕರು ಬಮಾ ಗಡಿ ದಾಟಿದರು. ಪವಿತ್ರ ಭಾರದಲ್ಲಿ ಕಾಲುಗಳನ್ನಿಟ್ಟರು!

ಈ ಮಧ್ಯೆ ನೇತಾಜಿ ಹನ್ನೆರಡು ಆಡಳಿತ ಶಾಖೆಗಳನ್ನು ಏರ್ಪಡಿದಿರು. ೫-೪-೧೯೪೪ನೆಯ ದಿನ ರಂಗೂನಿನಲ್ಲಿ ಆಜಾದ್ ಹಿಂದ ನ್ಯಾಷನಲ್ ಬ್ಯಾಂಕ್ ಸ್ಥಾಪಿಸಿದರು. ಆಜಾದ್ ಹಿಂದ್ ಫೌಜಿಗೆ ಯೋಧರಾದರೋ ಬರ್ಮಾ ಭಾರತ ಗಡಿಗಳಲ್ಲಿ ಎಂಟು ಕ್ಷೇತ್ರಗಳಲ್ಲಿ ಇಂಫಾಲ್ ಮೈದಾನ ಮತ್ತು ಕೊಹಿಮಾ ಸಮೀಫದಲ್ಲಿ ಪರಾಕ್ರಮ ಪ್ರಕಟಿಸುತ್ತಿದ್ದಾರೆ! ಈ ಕ್ಷಣವೋ, ಮರುಕ್ಷಣವೋ, ಇಂಫಾಲ್ ಬಿತ್ತು, ಭಾರತ ಸೈನ್ಯದ ವಶವಾಯಿತು! ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯದ ಸಾಮಾಧಿ ಆಯಿತು” ಎಂದು ಸುದ್ಧಿ ಬರಬೇಕು!

ಕಡೆಯ ಉಸಿರು ಭಾರತಕ್ಕಾಗಿ :

ಆದರೆ ವಿಧಿಯ ನಿಶ್ಚಯವೇಬೇರ ಆಗಿತ್ತು. ಭಾರತದ ಸೈನ್ಯಗಳು ಇಂಫಾಲಿನ ಮೂರು ಮೈಲಗಳ ದೂರದಲ್ಲಿವೆ. ಶತ್ರುಗಳಿಂದ ಅವರಿಗೆ ರಕ್ಷಣೆ ಇಲ್ಲ, ಯಾವ ಕ್ಷಣದಲ್ಲಿ ಆಕಾಶದಿಂದ ಬಾಂಬುಗಳು ಬೀಳುವವೋ, ಗೊತ್ತಿಲ್ಲ. ಸ್ವತಂತ್ರ ಭಾರತ ಯೋಧರು ಕಂದಕಗಳಲ್ಲಿ ಕೂತು, ನಿಂತು ಕಟ್ಟ ಕಡೆಯ ಹೋರಾಟ ನಡೆಸುತಿದ್ಧಾರೆ. ಭಾರತಯೋಧರಿಗೆ ಆಗುತ್ತಿದ್ದ ಸರಬರಾಯಿಗೆ ಬರ್ಮಾದಲ್ಲಿ ಪೂರ ಅಡ್ಡಿಯಾಯಿತು. ೧೯೪೪ರ ಜೂನ- ಜುಲೈ ತಿಂಗಳುಗಳಲ್ಲಿ ಸುಭಾಷರ ಸೈನ್ಯ ಹಿಂದಕ್ಕೆ ಸರಿಯಬೇಕಾಯಿತು. ಗಾಯಗೊಂಡವರೂ, ಸಾಯುತ್ತಿದ್ದುದರಿಂದ, ಚಿಂದಿ ಬಟ್ಟೆ- ಯವರು, ಮಲೇರಿಯಾ, ರಕ್ತಭೇಧಿ ಮೊದಲಾದ ರೋಗಗಳಿಂದ ನರಳುತ್ತಿದ್ದವೂ ರಂಗೂನಿಗೂ, ಮಾಂಡಲೆಗೂ ಹಿಂತಿರುಗಲಾರಂಭಿಸಿದರು.

ಶತ್ರು ಬಲವೇರಿತು,ಸ್ವಾತಂತ್ರ್ಯ ಯೋಧರಿಗಾದರೋ ದೈವ ಪ್ರತಿಕೂಲವಾಯಿತು. ಶತ್ರುಗಳು ರಂಗೂನ್ ಕಡೆ ದಾವಿಸುವ ಚಟುವಟಿಕೆ ಕಂಡು ಬಂತು. ಸುಭಾಷರೂ ಅವರ ಮಂತ್ರಿಗಳೂ ಇತರ ಪ್ರಮುಖರೂ ರಂಗನೂನನ್ನು ಬಿಟ್ಟು ಬ್ಯಾಂಕಾಕ್ಗೆ ಹೋಗಬೇಕಾಯಿತು.

ಮಲಯದಲ್ಲಿ ಸಂಚಾರ ಮಾಡುತ್ತಾ, ಸುಭಾಷರು, ಸೆರಂಬನ್ನಿಗೆ ಬಂದರು. ಅಲ್ಲಿ ಜಪಾನಿನ ಮೇಲೆ ರಷ್ಯ ಯುದ್ಧವನ್ನಾರಂಭಿಸಿದೆ ಎಂಬ ಸುದ್ಧಿ ಬಂತು. ಆಯಿತು. ಅಜಾದ ಹಿಂದ್ ಫೌಜಿನ ಪ್ರಯತ್ನವೆಲ್ಲ ಮಣ್ಣುಗೂಡಿತು. “ಜಪನ್ ಸೋತು ಶರಣಾಗುವುದಾದರೆ ನಾನು ಹೋರಾಟ ಮುಂದುವರೆಸುವುದು ಆಂದರೆ ಆತ್ಮಹತ್ಯೆ ಮಾಡಿಕೊಂಡಂತೆಯೇ” ಎಂದು ನೇತಾಜಿಯವರಿಗೆ ಸ್ಷಷ್ಟವಾಯಿತು.  “ಆಜಾದ್ ಹಿಂದ್ ಫೌಜ್ ಶರಣಾಗುವುದು ಇಲ್ಲ” ಎಂಬ ನಿಶ್ಚಯಕ್ಕೆ ಬಂದರು. ಕೂಡಲೇ ಸಿಂಗಪೂರಕ್ಕೆ ಬಂದರು. “ಮಂಚೂರಿಯಕ್ಕೆ ಹೋಗಿ ರಷ್ಯನ್ನರ ಸಂಪರ್ಕವನ್ನೇಕೆ ಕಲಿಪಸಿಕೊಳ್ಳಬಾರದು” ಅನ್ನಿಸಿತು ನೇತಾಜಿಗೆ.

ಆಗಸ್ಟ ೧೪ನೆಯ ದಿನ ಸಂಜೆ “ಆಜಾದ್ ಹಿಂದ ಫೌಜಿ”ನ “ಮಹಿಳಾ ಶಾಖೆಯ”ಯವರು “ಝಾನ್ಸಿರಾಣಿ”ಯ ವೀರ ಜೀವನ ಕುರಿತು ಒಂದು ನಾಟಕವನ್ನು ರಂಗಭೂಮಿಯ ಮೇಲೆ ತಂದರು. ನೇತಾಜಿಯವರು ಆನಾಟಕವನ್ನು ನೋಡಿದರು. ಅನಂತರ ಪೂರ್ವ ಏಷ್ಯಾದ ಭಾರತೀಯರನ್ನೆಲ್ಲ ಸಂಭೋಧಿಸಿ ಎಂದೆಂದಿಗೆ ಮರೆಯಲಾಗದಂತಹ ಸಂದೇಶವನ್ನು ಕೊಟ್ಟರು.

“ಭಾರತದ ಸ್ವಾತಂತ್ರ್ಯ ಮಹಾಸಂಗ್ರಾಮದ ದಿವ್ಯವಾದ, ಬಲಿದಾನದ ಪರಮಸ್ವರೂಪವೆನಿಸಿದ ಅಧ್ಯಾಯ ಮುಗಿಯಿತು. ಆದರೆ ಎಷ್ಯಾ ಖಂಡದ ಇತಿಹಾಸದಲ್ಲಿಯೇ ಭಾರತೀಯರು ಅಮರರೆನಿಸಿ ಎಲ್ಲ ಕಾಲವೂ  ಉಳಿಯುವರು. ಸೋದರ ಸೋದರಿಯರೇ! ಜನಬಲ ಧನಬಲ ನೀಡುವುದನ್ನೂ ಮೀರಿಸಿ ಬಲಿದಾನ ಮಾಡಿ,  ವಿಶಾಲ ಪ್ರಪಂಚಕ್ಕೆ ದೇಶಭಕ್ತಿಗೆ ಅದ್ವೀತಿಯ ವೆನಿಸಿದ ಉದಾಹರಣೆಯಾಗಿದ್ದೀರಿ. ತಮ್ಮಜನ್ಮಭೂಮಿಗಾಗಿ, ಭಾಋತ ಮಾತೆಗಾಗಿ, ಒಂದು ಪೀಳಿಗೆಯ ಜನ ಏನು ಮಾಡಲು ಸಾಧ್ಯ ಅದನ್ನು ಮೀರಿಸಿ  ಮಾಡಿದ್ದೀರಿ. ತಮ್ಮ ತ್ಯಾಗ, ಬಲಿದಾನ ನಿರರ್ಥಕವಾಗುವುದಿಲ್ಲ. ಆದರೆ ಬೇಗ ಪ್ರತಿಫಲ ಸಿಗಲಿಲ್ಲವಲ್ಲಾ ಎಂಬ ದುಃಖ ನಿಮ್ಮೆಲ್ಲರಿಗಿಂತ ನನಗೆ ಹೆಚ್ಚಾಗಿದೆ. ಆದರೆ ಇಷ್ಟು ಮಾತ್ರ ನಿಜ: ಭಾರತವೂ ಬಹುಬೇಗ ಸ್ವತಂತ್ರ್ಯವಾಗಲೇಬೇಕು! ಆಗಿಯೇ ಆಗುತ್ತದೆ! ಇದನ್ನು ಮರೆಯಬೇಡಿ: ಖಂಡಿತವಾಗಿಯೂ ನಿರಾಶರಾಗಬೇಡಿ! ಧೈರ್ಯವಾಗಿರಿ! ತಲೆಯನ್ನು ಮೇಲಕ್ಕೆ ಎತ್ತಿ ನಿಲ್ಲಿ!: ಮಾತು ಮುಗಿಸುವ ಮೊದಲೆ  ನೇತಾಜಿಯವರ ಕಂಠ ಕಟ್ಟಿತ್ತು.

ಆಗಸ್ಟ್ ೧೫ನೆಯ ದಿನ ಜಪಾನರು ಸೋತು ಶರಣಾಗತರಾದರು. ಎರಡು ದಿನಗಳ  ನಂತರ ಸುಭಾಷರು ಬ್ಯಾಂಕಾಕಿನಲ್ಲಿ ವಿಮಾನ  ಹತ್ತಿ :” ಎಲ್ಲಿಗೋ ” ಹೋರಟರು” ಆಜಾದ್ ಹಿಂದ ಫೌಜಿನ ” ಉಪದಂಡನಾಯಕರಾಗಿದ್ದ ಹಬೀಬ ಉರ ರಮಹಾನರೊಬ್ಬರು ಮಾತ್ರ ನೇತಾಜಿಯವರೊಂದಿಗೆ ಹೋದರು. ಐದು ದಿನಗಳ ಅನಂತರ ೨೨-೮-೧೯೪೫ನೆಯ ದಿನ ಟೋಕಿಯೋ ರೇಡಿಯೋ ೧೯-೮-೧೯೪೫ನೆಯ ದಿನ ಫಾರ್ಮೋಸದಲ್ಲಿ ವಿಮಾನಪಘಾತಕ್ಕೆ ಗುರಿಯಾಗಿ  ನೇತಾಜಿ ಸುಭಾಷ್ ಚಂದ್ರ ಬೋಸರು ಕಾಲವಾದರು” ಎಂಬ ಸುದ್ಧಿಯನ್ನು ಪ್ರಕಟಿಸಿತು.

ಕರ್ನಲ ಹಬೀಬ -ಉರ್‌-ರಹಮಾನರು ನೇತಾಜಿ ಕಡೆಯ ಉಸಿರನ್ನೆಳೆದಾಗ ಏನು ಹೇಳಿದರೆಂಬುವುದನ್ನು ಹೀಗೆ ವರದಿ ಮಾಡಿದ್ದಾರೆ.

“ಪ್ರೀಯ ಹಬೀಬ್ ! ನನ್ನ ಬದುಕು ಮುಗಿಯಿತು. ನನ್ನ ಮಾತೃಭೂಮಿಯನ್ನು ದಾಸ್ಯದಿಂದ ಮುಕ್ತಗೊಳಿಸಲು ತ್ರಿಕರಣ ಪೂರ್ವಕವಾಗಿ ಈ ನಿಮಿಷದವರೆಗೆ ಹೋರಾಡಿದೆ.  ಭಾರತವೂ ಬಹುಬೇಗ ಸ್ವತಂತ್ರವಾಗುತ್ತದೆ ಎಂದು ನನ್ನ ದೇಶಬಂಧುಗಳಿಗೆ ಹೇಳು. ಜಗತ್ತಿನ ಯಾವ ಶಕ್ತಿಯೂ ಭಾಋತದ ಸ್ವಾತಂತ್ರ್ಯ ಸಾಧನೆಗೆ ಅಡ್ಡಿ ಬರಲಾರದು”.

ನೇತಾಜಿಸುಭಾಷ ಚಂದ್ರ ಬೋಸರಂತಹ ಮಹಾವೀರರು ಒಂದಲ್ಲ ನಾಲ್ಕು ಯುಗಗಳಿಗೂ ಒಬ್ಬರು ಹುಟ್ಟಿಯಾರು.

ರಣರಂದಲ್ಲಿ ಯೋಧರನ್ನು ಕರೆದುಕೊಂಡು ಹಗಲೆನ್ನದೆ ರಾತ್ರಿಯೆನ್ನದೆ, ಕಾಡನ್ನದೆ, ಮೇಡನ್ನದೆ, ಅನ್ನವಿಲ್ಲದೆ, ನೀರಿಲ್ಲದೆ, ಪ್ರಯಾಣ ಮಾಡುವಾಗ ಯೋಧರು, “ನೇತಾಜಿ, ಇದು ವಿಪತ್ಕಾಲ, ತಾವು ನಮ್ಮೊಡನೆ ಎಲ್ಲರಿಗೂ ಕಾಣುವಂತೆ ನಡೆಯಬಾರದು. ಮೇಲಾಗಿ ತಮ್ಮ ದೇಹಾರೋಗ್ಯ ಚೆನ್ನಾಗಿಲ್ಲ” ಅಂದಾಗ ಅವರು, “ಣಾನು ಗುಟ್ಟಾಗಿ ವಾಹನದಲ್ಲಿ ಕೂತು ಪ್ರಯಾಣ ಮಾಡಬೇಕೆ? ಎಂದಿನವರೆಗೆ ಯೋಧನೊಬ್ಬ  ನಡೆಯುತತಾನೋ ಅಂದಿನವರೆಗೆ ನಾನು ಅವನೊಂದಿಗೆ ನಡೆಯಬೇಕು” ಎಂದು ಉತ್ತರ ಕೊಡುತ್ತಿದ್ದರು. ತಾವು ರಾಷ್ಟ್ರಪತಿಗಳು, ಮಿಕ್ಕವರೆಲ್ಲ ಯೋಧರು ಎಂಬ ಕಲ್ಪನೆಯೇ ಅವರಿಗಿಲ್ಲ. ರಣಗಂದಲ್ಲಿ ಇಬ್ಬರು ಯೋಧರು. ಇದು ಅವರ ಮನೋಧರ್ಮ: ಆ ಧರ್ಮಕ್ಕೆ ಅನುಗುಣವಾದ ನಡತೆ.

ನೇತಾಜಿಯವರು ಹೊಳೆ ದಾಟಬೇಕಾಗಿ ಬಂದಾಗ ಹುಟ್ಟು ಹಾಕಿ, ದೋಣಿ ನಡೆಸಿದ್ದಾರೆ. ಗಾಡಿಗಳು ಕೆಸರಿನಲ್ಲಿ ಹೂತು ಹೋದಾಗ ಹೆಗಲಿಗೆ ಹೆಗಲು ಕೊಟ್ಟು,ನಗುತ್ತಾ ನಗುತ್ತಾ, ಮೇಲಕ್ಕೆ ಎತ್ತಿದ್ದಾರೆ. ಗಾಯಗೊಂಡ ಯೋಧನಿಗೆ ಬಾಯಾರಿಕೆ ಆಯಿತೆಂದು ಕಂಡುಬಂದ ಕೂಡಲೇ ನೀರು ತಂದು ಅವನಿಗೆ ಕುಡಿಸಿದ್ದಾರೆ ! ಸೈನಿಕರನ್ನು ತಮ್ಮ ಪ್ರಾಣದಂತೆ ಕಂಡಿದ್ದಾರೆ!  ಆದಕಾರಣವೇ ಸೈನಿಕರೆಲ್ಲ ನೇತಾಜಿಯವರಿಗೆ ತಮ್ಮ ಪ್ರಾಣಗಳನ್ನೂ ಕೊಡಲು ಸಿದ್ಧರಾದರು.

“ಅಜಾದ್ ಹಿಂದ್ ಫೌಜಿ” ನಲ್ಲಿ ಕೇಸರ ಸಿಂಗ್, ಗ್ಯಾನಿಯೆಂಬ ಸಿಖ್ ಅಧಿಕಾರಿ ಒಬ್ಬರಿದ್ದರು. ಅವರು, “ಪೂಜ್ಯ ನೇತಾಜಿ, ಭಾರತವು ಸ್ವತಂತ್ರವಾದ ಮೇಲೆ, ತಾವು ಏನು  ಮಾಡಬೇಕೆಂದಿರುವಿರಿ?” ಎಂಬುದಾಗಿ ಪ್ರಶ್ನೆ ಹಾಕಿದರು. ಅದಕ್ಕೆ ನೇತಾಜಿಯವರು “ಭಾರತವು ಖಂಡಿತವಾಗಿಯೂ ಸ್ವತಂತ್ರವಾಗುತ್ತದೆ. ನನ್ನ ಅದೃಷ್ಟವಶದಿಂದ ಸ್ವಾತಂತ್ರ್ಯ ನನ್ನ ಕೈಗೆ ಬಂದರೆ ನಾನೇನು ಮಾಡುವೆನು ಗೊತ್ತೇ? ಅಖಂಡ ಭಾರತದ ಪ್ರಭುತ್ವ ಸೂತ್ರಗಳನ್ನು ಮಹಾತ್ಮಾಗಾಂಧೀಯವರಿಗೆ ಒಪ್ಪಿಸುವೆನು. ಅನಂರ ಹಿಮಾಚಲ ಪ್ರದೇಶಕ್ಕೆ ಹೋಗಿ ತಪ್ಪಸ್ಸು ಮಾಡಿ, ಎ೪ದೆಂದಿಗೂ ನಾಶವಾಗದಂತಹ ಬ್ರಹ್ಮಾನಂದ ಪದವನ್ನು ಗಳಿಸಿಕೊಳ್ಳುತ್ತೇನೆ” ಎಂಬುದಾಗಿ ಉತ್ತರವಿತ್ತರು!

ಭಾರತದ ದುರದೃಷ್ಟ: ನೇತಾಜಿಯಂತಹ ನಾಯಕರು ಸ್ವತಂತ್ರ ಭಾರತದ ಆಡಳಿತ ಸೂತ್ರಗಳನ್ನು ವಹಿಸಲು ಇಲ್ಲವಾದರು. ಅನೇಕರು ಇಂದಿಗೂ, ಸುಭಾಷರು ತೀರಿಕೊಂಡರು. ಅವರು ಇನ್ನಿಲ್ಲ ಎಂಬುವುದನ್ನು ನಂಬುವುದಿಲ್ಲ. ಸಂಶಯ ನಿವಾರಣೆಗಾಗಿ ವಿಚಾರಣೆ ನಡೆಯುತ್ತಲೇ ಇದೆ. ಯಾರು ಏನೇ ಹೇಳಲಿ, ನಿಜಸ್ಥತಿ ಏನೇ ಇರಲಿ;

ಅಶ್ವತ್ಥಾಮಾ ಬಲಿರ್ವ್ಯಾಸೋ   
ಹನುಮಾಂಶ್ಚ
ವಿಭೀಷಣಃ
ಕೃಪಃ ಪರಶುರಾಮಶ್ಚ
ಸಪ್ತೇತೇ ಚಿರಜೀವಿನಃ

ಅಶ್ವತ್ತಾಮ, ಬಲಿ ವಾಸ, ಹನುಮಂತ, ವಿಭೀಷಣ, ಕೃಪ,. ಪರಶುರಾಮ- ಇವರಿಗೆ ಮರಣವಿಲ್ಲ ಎಂದು ನಮ್ಮ ಜನರ ನಂಬಿಕೆ. ಈ ಏಳು ಮಂದಿ ಚಿರಂಜೀವಿಗಳ ಗಣಕ್ಕೆ ನೇತಾಜಿಸುಭಾಷ ಚಂದ್ರ ಭೋಸರನ್ನು ಸೇರಿಸಬೇಕು.