ಮನೆತನ : ಸಂಗೀತ ಬಲ್ಲವರ ಮನೆತನ, ತಾಯಿ ಪದ್ಮಾವತಮ್ಮ ಉತ್ತಮ ಗಾಯಕಿ.

ಗುರುಪರಂಪರೆ: ಸುಗಮ ಸಂಗೀತದಲ್ಲಿ ಮೈಸೂರು ಅನಂತಸ್ವಾಮಿಯವರ ಮಾರ್ಗದರ್ಶನ. ನಾರಾಯಣರಾವ್ ಮಾನೆಯವರೂ ಮಾರ್ಗದರ್ಶನ ನೀಡಿರುತ್ತಾರೆ. ವಿ|| ಆರ್. ಕೆ. ಪದ್ಮನಾಭ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಹಾಗೂ ರಾಜಭಾವೂ ಸೊಂಟಕ್ಕಿಯವರಲ್ಲಿ ಹಿಂದೂಸ್ಥಾನಿ ಸಂಗೀತದಲ್ಲೂ ಶಿಕ್ಷಣ ಪಡೆದಿದ್ದಾರೆ.

ಸಾಧನೆ : ಶಾಲಾ – ಕಾಲೇಜುಗಳಲ್ಲಿನ ವ್ಯಾಸಂಗದ ದಿನಗಳಲ್ಲಿ, ಭಾವಗೀತೆಗಳ ಗಾಯನಕ್ಕಾಗಿ ಅನೇಕ ಬಹುಮಾನಗಳಿಸಿದ್ದಾರೆ. ನಾರಾಯಣರಾವ್ ಮಾನೆಯವರೊಡನೆ ಅನೇಕ ಕಾರ್ಯಕ್ರಮಗಳಲ್ಲಿ ಹಾಡಿರುತ್ತಾರೆ. ಪ್ರಭಾತ್ ಕಲಾವಿದರ ಅನೇಕ ರೂಪಕಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ಸ್ಟೂಡೆಂಟ್ಸ್ ಕಲ್ಚರಲ್ ಅಸೋಸಿಯೇಷನ್ ಪ್ರಸ್ತುತ ಪಡಿಸಿದ ಕಾಳಿದಾಸ ಕೃತಿದರ್ಶನ, ಶಾಂತಲೆ ನೃತ್ಯ ರೂಪಕಗಳಿಗೆ ಕಂಠದಾನ ಮಾಡಿ ರಾಷ್ಟ್ರಾದ್ಯಂತ ಸಂಚಾರ ಮಾಡಿರುತ್ತಾರೆ. ಕಾಕನಕೋಟೆ ನಾಟಕ ಹಾಗೂ ಚಲನಚಿತ್ರಗಳಲ್ಲಿ ಇವರು ಹಾಡಿರುವ ನೇಸರ ನೋಡು ಗೀತೆ ಅತ್ಯಂತ ಜನಪ್ರಿಯ. ಡಾ|| ರಾಜ್‌ಕುಮಾರ್ ಅವರ ಜೊತೆಯೂ ಕೆಲವು ಯುಗಳ ಗೀತೆ ಹಾಡಿದ್ದಾರೆ. ಇಳೆಯರಾಜ ಅವರ ನಿರ್ದೇಶನದಲ್ಲಿ ಕೆಲವು ತಮಿಳು ಚಿತ್ರಗಳಿಗೂ ಕಂಠದಾನ ಮಾಡಿರುತ್ತಾರೆ. ಶಿಶುನಾಳ ಶರೀಫ್, ದೀಪಿಕಾ, ಭಾವ ಸಂಗಮ, ಬಾರೋ ವಸಂತ ಮುಂತಾದ ಧ್ವನಿ ಸುರುಳಿಗಳಲ್ಲಿ ಹಾಡಿದ್ದಾರೆ. ಭಕ್ತಿ ಗೀತೆ, ಸುಪ್ರಭಾತಗಳ ಕ್ಯಾಸೆಟ್ಟುಗಳೂ ಹೊರಬಂದಿವೆ. ಆಕಾಶವಾಣಿ – ದೂರದರ್ಶನಗಳಲ್ಲೂ ಕಾರ್ಯಕ್ರಮ ಪ್ರಸಾರವಾಗಿವೆ.

ಪ್ರಶಸ್ತಿ – ಸನ್ಮಾನ : ಕೆಲವೊಂದು ಕನ್ನಡ ಸಂಸ್ಥೆಗಳಿದ ಗೌರವಿಸಲ್ಪಟ್ಟಿದ್ದಾರೆ. ೧೯೯೬-೯೭ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರಿ ಪ್ರಶಸ್ತಿ ಇವರಿಗೆ ಸಂದಿದೆ.