ವಿವಿಧ ಅರ್ಥಕೋಶಗಳು ಸುಳಿಯ ಬಗೆಗೆ ಈ ಕೆಳಗಿನ ಅರ್ಥಗಳನ್ನು ಗುರುತಿಸಿವೆ;
ಸುಳಿ = ನೀರಿನಲ್ಲಿ ಸುತ್ತುವ ಕುಳಿ (ರಾಜಗೋಪಾಲ; ಕೇಶವ ಭಟ್ಟ; ೧೯೭೦ : ೨೬೦)
ಸುಳಿ = ೧. ಚಕ್ರಕಾರವಾಗಿ ಸುತ್ತುವಿಕೆ
೨. ಜಲಾವರ್ತ; ಚಕ್ರದಂತೆ ತಿರುಗುವ ನೀರು
೩. ಸುರುಳಿಯಾಗಿ ಸುತ್ತಿಕೊಂಡಿರುವ ಚಿಗುರೆಲೆ
೪. ಚಕ್ರಾಕಾರವಾಗಿ ಸುತ್ತು; ಗುಂಡಾಗಿ ತಿರುಗು
(ವೆಂಕಟಸುಬ್ಬಯ್ಯ, ಶೇಷಗಿರಿರಾವ್, ರಾಮಚಂದ್ರ ಮೂರ್ತಿ; ೧೯೮೧ : ೬೨೭)
ಸುೞಿ = a curl; (T ಚುೞಿ; Te ಸುಡಿ) ಹುಬ್ಬುಗಳ ಮಧ್ಯದ ಸುೞಿ.
ಕುದುರೆಯ ಪುರ್ಬಿನೊಳು ಕದಪಿನೊಳು ಬೆನ್ನೊಳುರದೊಳು ಪೆಗಲೊಳುದರದೊಳ್ ತುದಿಮೂಗು ತುದಿಗಿವಿಯ ಮೊದಲ್ಕಣ್ಣ ಕಡೆಗಳೊಳ್ ಮುಷ್ಕದೊಳು ತಿಗದೊಳು ಮೊದಲ ಬಾಲದೊಳು, ಮೂಗಿನ ಕಮ್ಬಿನೊಳು ಮೇಣ್ ಗುದದಗ್ರದೊಳ್ ಮಧ್ಯ ನೆತ್ತಿಯೊಳು ಜಾನು ಜಂಘೆಯೊಳು ಮೂತ್ರದ ನಾಳದೊಳು ಗಲ್ಲದೊಳು ನಿಜಾಸನದಿ ಸುೞಿ ಪುಟ್ಟಲ್ಕೆ ಕಷ್ಟಮಕ್ಕುಂ. (ರೆ.ಎಫ್. ಕಿಟ್ಟಲ್; ೧೯೯೧; ೬೧೯)
ಸುೞಿ೧ ಸುಳಿ೧, (ಕ್ರಿ). ೧.ಗುಂಡಾಗಿ ಸುತ್ತು; ಚಕ್ರಾಕಾರವಾಗಿ ತಿರುಗು : ‘ಸುೞಿ, ಭ್ರಮಣೆ, ಪರಿಭ್ರಮಣೇ-ಜಲಾವರ್ತೇಚ’ (ಶಮಧಾ); ಈ ಮುಗುಳೊಳಮಾ ಮಾೞಿಯನಱಸಿ ಸುೞಿವುದಳಿ ಕೆಲಕೆಲದೊಳ್ (ಕವಿರಾ, ೩-೧೨೩); ಲತೆಯ ಮನೆಗಳೊಳ್ ತೆಱಂಬೊಳೆವಲರ ಬಸದೆ ಸುೞಿವಳಿಗಳ ಬಳಗದ ದನಿಗೆ ಕಿನಿಸಿ ಕಿಂಕಿಱಿವೋದಳ್ (ಪಂಪಭಾ ೫-೪)
೨. ಕಾಣಿಸಿಕೊಳ್ಳು; ಗೋಚರವಾಗು : ದಂಪತಿಗಳಲ ಶರೀರದೊಳ್ ಸುೞಿದು ಕೆತ್ತುವ ಪುಣ್ಗಳಬಾಯ್ಗೞಿಂದ ಮೆಲ್ವೊಗೆವರುಣಾಂಬು ಧಾರೆಗಳ್ (ಜಗವಿ೭-೮೩)
೩. ಸಮುದ್ರ, ನದಿ, ತೊರೆಗಳಲ್ಲಿಯ ಆಳವಾದ ಕಡೆಯಲ್ಲಿರುವ ತಿರುಗುಣಿ; ಜಲಾವರ್ತ : “ಸುೞಿಯೆಂದು ಜಲಾವರ್ತ” (ಕಶಸಾ ೫೩-೧೪೨); ಸುಳಿಯೊಳಗಿರ್ದು ಬೆಟ್ಟುಪೋಱ ಪೊಣ್ಮುವಿನಂಲವಣಾಂಬುರಾಶಿ ಕುಕ್ಕುವಿಗುದಿವಲ್ಲಿ ಪಂಪಭಾ (ಘುಳುಘುಳು ನೇವ್ವಿ ಬೊಬ್ಬುಳಿಯನೀಸು ೞಿಯಂ (ಚಿಕವಿ ೧-೩೭).
೪. ದೇಹದಲ್ಲಿ ಕಾಣಿಸಿಕೊಳ್ಳುವ ಕೂದಲಿನ ಸುತ್ತು, ಆವರ್ತ : ಮುಂದಲೆಯ ಸುೞಿಯಿಂದಕ್ಕುಂ ಕಳ್ಳಂ (ಲೋಕೋಪ ೧೧-೨೫); ಅಪ್ಪುವು ಸುೞಿಗಳ್ ನೂಱು ಭೇದದಿಂದಂ ತರಗಕ್ಕೆ (ಅಶ್ವಶಾ ೪-೧)
೫. ತೆಂಗು, ಬಾಳೆ, ಮೊದಲಾದ ಸಸ್ಯಗಳ ಕುಡಿ, – ಎಳೆಯ ಚಿಗುರು : “ಸುೞಿ-ಕೆಲಸಗಳ್ಳಂ; ಸಸಿಯ ಸುೞಿ” (ಶಮದ ಪರಿ ೧);
ತಿಳಿನೀರ ಸುಂತುರ್ವನಿಗಳಂ ಪೊರೆದೆಳೆವಾೞೆಯ ಸುೞಿಯ ಬಿಜ್ಜಣಿಗೆಗಳ ನಡಿನಡಿಗೆ ಬೀಸಿಯುಂ (ಕಾದಂ ಪೊ.೮೫೫).
೫. ಗುರುತು; ಜಾಡು : ಮೇಳದಂಕದಂತೆ ಸುೞಿದು (೦) ಡೊಂಬರ ಕೋಡಗದಂತಾಡಿ (ಪಂಪಭಾ-೭೨)
೬. ಸೋಮಾರಿ; ಆಲಸಿ : “ಸುೞಿ-ಕೆಲಸಗಳ್ಳಂ; ಸಸಿಯ ಸುೞಿ” (ಶಮದ. ಪರಿ೧)
ಸುಳಿ೨ : ೨. ಖಳಿಕಟಿಲ ಬಿೞಿವೊಯಿಲೊ ಸಿಡಿಲಿನ ಸುಳಿಯೊ ಮೈಮಸೆಯರುಣವಾರಿಯೊ ಮಳೆಗಳಿಲ್ಲದ ಹೊನಲೊರಣದಲಿ ಚಿತ್ರವಾಯ್ತು (ಕುವ್ಯಾದ್ರೋ ೧೪-೭); ಶರಧಿಯ ಸುಳಿಗಳೆಣೆಯೆನಿಸು ನಾಭಿ (ಅಂಜಚ ೭ -೧೮೬); ಗಳೆಯ ಡೊಂಬತಿಯಾಟ ದಾಪರಿ….. ಸುಳಿಯ ನೀರಿನ ತಲೆಯ ಹೂಗರಿ (ಕ ಎಪು.೮೯-೧೫).
೩. ದನವಿನ ಬೆಂನ ಸುಳಿಯ ಮೇಲೆ ಬರೆದರೆ ಮೂಣುದು (ಎಕ.XI ಹೊಳಲ್ಕೆ ೯೩-೩;?); ಸಿಂಧೂ ದೇಶದ ಕುದುರೆಗಳನ್ನು ಆರಿಸಿಕೊಂಡನು. … ಲಕ್ಷಣವಾದ ಹತ್ತು ಸುಳಿಗಳುಳ್ಳವು (ವಚಭಾ ೧೪೦).
೪. ಸಸಿ ಬಲಿದು ಹೊಸ ಸುಳಿ ತೋೞಿದಲ್ಲಿಯಲ್ಲದೆ ಆ ತುಷ ಪರ್ಣ ಬಿಡದು (ಮೋಳಿಮಾ ೧೪೧-೫೪೦); ಎಳೆಯ ಬಾಳೆಯ ಸುಳಿಗೆ ಸೀಗೆಯ ಮೆಳೆಯೊಡನೆ ಸರಸವೆ (ಕುವ್ಯಾದ್ರೋ ೧೨-೨೯); ಎಳೆಯಬಾಳೆಯ ಸುಳಿಯು ಅನಲನ ಪೊಯ್ಯಲಿ ನಂದವೋಲ್ (ನಳಚ ೫-೨)
೭. ಸಂತಾನ; ಸಂತತಿ : ಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದು ಗೊತ್ತು ಇಲ್ಲದೆ ಹೋಯಿತು (ಪುರಂದ ೧-೧೬೧-೨)
೮. [ವ್ಯಾಕ] ಋ ಕಾರಕ್ಕೆ ಕಾಗುಣಿತದಲ್ಲಿ ಬರುವ ಚಿಹ್ನೆ; ವಟ್ಟೃಸುಳಿ (ಲ) : ಇದು ಋಕಾರದ ಸುಳಿ (ಸಂಶೋಧ; ೨೬); ಒತ್ತಕ್ಷರ ‘ರಕಾರವು’ ಕೆಳಗೆ ಸುಳಿಯೊಂದಿಗೆ ಪ್ರತ್ಯೇಕವಾಗಿ ಬಲಬದಿಯಿಂದ ಆರಂಭವಾಗಿ ಎಡಬದಿಯಲ್ಲಿ ಮೇಲೇರುತ್ತದೆ (ನೊಳಂಬ ೮೦).
Leave A Comment