ಸೂಕ್ಷ್ಮಾಣುಗಳ ವೈವಿಧ್ಯ

ಟ್ರುಪರ್ ಅವರ ಪ್ರಕಾರ ೧೯೯೧ರವರೆಗಿನ ಬ್ಯಾಕ್ಟೀರಿಯಾ ಪ್ರಭೇದಗಳ ಸಂಖ್ಯೆ ೩೦೫೮. ಇವುಗಳಿಗೆ ಸೈನೋಬ್ಯಾಕ್ಟೀರಿಯಾಗಳನ್ನು ಸೇರಿಸಿದರೆ ಸಂಖ್ಯೆ ೪೦೦೦ ಆಗುತ್ತದೆ. ನಮ್ಮ ದೇಶದಲ್ಲಿರುವ ಬ್ಯಾಕ್ಟೀರಿಯಾ ಪ್ರಭೇದಗಳ ಸಂಖ್ಯೆ ೮೫೦ (ಕೋಷ್ಟಕ ೧.೧). ಪ್ರೊಟೊಝೋಆಗಳ ಜೊತೆ ವಾಸಿಸುವ, ಆಹಾರ ನಾಳಗಳಲ್ಲಿರುವ, ನೆಲ ಹಾಗೂ ಹೂಳಿನಲ್ಲಿರುವ ಮತ್ತು ಆಳ ಸಮುದ್ರದಲ್ಲಿರುವ ಹಲವಾರು ಬ್ಯಾಕ್ಟೀರಿಯಾಗಳನ್ನು ಇದುವರೆಗೆ ಸಂಶೋಧನಾಲಯಗಳಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ.

ಪ್ರಪಂಚದಲ್ಲಿರುವಂಥ ವೈರಸ್‌ಗಳ ಪಟ್ಟಿ ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ. ಸುಮಾರು ೫೦೦೦ ವೈರಸ್ ಪ್ರಭೇದಗಳಿರಬಹುದೆಂದು ಲೆಕ್ಕಹಾಕಿದ್ದಾರೆ. ಇತರ ಜೀವಿಗಳಿಗೆ ಹೋಲಿಸಿದರೆ ಸೂಕ್ಷ್ಮಾಣುಗಳಲ್ಲಿ ಅನುವಂಶಿಕ ವೈವಿಧ್ಯ ಹೆಚ್ಚು. ಮಾರ್ಗುಲಿಸ್ ಹಾಗೂ ಸ್ವಾರ್ಜ್ ಅವರ ಪ್ರಕಾರ ೯೫ ಫೈಲಾಗಳ ಪೈಕಿ ೫೨ ಫೈಲಾಗಳು ಸೂಕ್ಷ್ಮಾಣುಗಳಿಗೆ ಸಂಬಂಧಿಸಿವೆ.

ಪ್ರಪಂಚದಾದ್ಯಂತ ಸುಮಾರು ೪೦ ಸಾವಿರ ಪಾಚಿ (ಸೂಕ್ಷ್ಮದರ್ಶಕೀಯ) ಪ್ರಭೇದಗಳನ್ನು ವಿವರಿಸಲಾಗಿದೆ. ಅವುಗಳಲ್ಲಿ ಒಟ್ಟು ೩೫ ಲಕ್ಷ ಪ್ರಭೇದಗಳಿರಬಹುದೆಂದು ಅಂದಾಜು ಮಾಡಿದ್ದಾರೆ. ಸುಮಾರು ೧೦ ಲಕ್ಷ ೫೦ ಸಾವಿರ ಶಿಲೀಂಧ್ರ ಪ್ರಭೇದಗಳ ಪೈಕಿ ೭೦ ಸಾವಿರ ಪ್ರಭೇದಗಳನ್ನು ವಿವರಿಸಲಾಗಿದೆ. ಜಗತ್ತಿನಲ್ಲಿರುವ ಪ್ರೊಟೊಝೋಆ ಪ್ರಭೇದಗಳ ಸಂಖ್ಯೆ ೧೦ ಲಕ್ಷ ಎಂದು ಗೊತ್ತಾಗಿದೆ. ಆದರೆ ಇವುಗಳ ಪೈಕಿ ಕೇವಲ ೪೦ ಸಾವಿರ ಪ್ರಭೇದಗಳನ್ನು ವರ್ಗೀಕರಿಸಿದ್ದಾರೆ. (ಕೋಷ್ಟಕ ೧.೧).

ಕೋಷ್ಟಕ . ಸೂಕ್ಷ್ಮಾಣು ಪ್ರಭೇದಗಳ ಸಂಖ್ಯೆ

ಕ್ರ
ಸಂ

ಗುಂಪು

ಭಾರತದಲ್ಲಿಯ ಪ್ರಭೇದಗಳ ಸಂಖ್ಯೆ

ಪ್ರಪಂಚದಲ್ಲಿಯ ಪ್ರಭೇದಗಳ ಸಂಖ್ಯೆ

ಜಾಗತಿಕ ಸೇಕಡಾವಾರು

೧. ಬ್ಯಾಕ್ಟೀರಿಯಾ

೮೫೦

೪೦೦೦

೨೧.೨೫

೨. ವೈರಸ್‌ಗಳು ಎಪ್ಲಾಸ್ಮಿಡ್ ಹಾಗೂ ಫೇಜ್‌ಗಳನ್ನು ಸೇರಿಸಿ)

ಅಂಕಿ ಸಂಖ್ಯೆ ಲಭ್ಯವಿಲ್ಲ

೫೦೦೦

೩. ಶೈವಲ (ಸೂಕ್ಷ್ಮಜೀವಿ)

ಅಂಕಿ ಸಂಖ್ಯೆ ಲಭ್ಯವಿಲ್ಲ

೪೦,೦೦೦

೪. ಶಿಲೀಂಧ್ರ

೧೨,೫೦೦

೭೦,೦೦೦

೧೭.೮೫

೫. ಪ್ರೊಟೊಝೋವಾ

೨,೫೭೭

೪೦,೦೦೦

೬.೪೪

  ಒಟ್ಟು

 

,೫೯,೦೦೦

 

 ಜೀವಿವೈವಿಧ್ಯವನ್ನು ರಕ್ಷಿಸುವಲ್ಲಿ ಸೂಕ್ಷ್ಮಾಣುಗಳ ಪಾತ್ರ

 

ಸುಮಾರು ೩.೮ ಬಿಲಿಯನ್ ವರ್ಷಗಳ ಹಿಂದೆಯೇ ಬ್ಯಾಕ್ಟೀರಿಯಾಗಳು ಭೂವಾತಾವರಣವನ್ನು ಸುಸ್ಥಿತಿಗೆ ತಂದವು. ಕಾರ್ಬನ್ ಡೈಆಕ್ಸೈಡ್ ಪ್ರಮಾಣದಲ್ಲಿಯ ಇಳಿತ ಹಾಗೂ ಮಿಥೇನ್ ಪ್ರಮಾಣದಲ್ಲಿಯ ಏರಿಕೆಗಳು ಜೀವಿಯ ಉತ್ಪತ್ತಿಗೆ ಕಾರಣವಾದವು. ಇಲ್ಲದೆ ದ್ಯುತಿಸಂಶ್ಲೇಷಣೆ ನಡೆಸುವ ಸೈನೋಬ್ಯಾಕ್ಟೀರಿಯಾಗಳು ಆಕ್ಸಿಜನ್ ಉತ್ಪಾದನೆಗೆ ಕಾರಣವಾಗಿ, ವಾತಾವರಣದಲ್ಲಿಯ ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆಮಾಡಿದವು. ಈ ಕ್ರಿಯೆಗಳು ನಡೆಯದಿದ್ದರೆ ಭೂಮಿಯ ಮೇಲೆ ಜೀವಿಗಳು (ಬ್ಯಾಕ್ಟೀರಿಯಾ ಬಿಟ್ಟು) ಅಥವಾ ಮಾನವ ಜೀವಿಸಲು ಸಾಧ್ಯವಾಗುತ್ತಿರಲಿಲ್ಲ. ಭೌತ-ರಾಸಾಯನಿಕ ಚಕ್ರಗಳ ಮೂಲಕ ಸೂಕ್ಷ್ಮಾಣುಗಳು ಜೀವಪರೆ ಹಾಗೂ ಜಾಗತಿಕ ಪರಿಸರವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಕೀಟ ಹಾಗೂ ಸಸ್ಯಾಹಾರಿ ಸಸ್ತನಿಗಳ ಜಠರದಲ್ಲಿರುವ ಬ್ಯಾಕ್ಟೀರಿಯಾ, ಶಿಲೀಂಧ್ರ ಹಾಗೂ ಪ್ರೊಟೊಝೋಆಗಳು ಪ್ರಾಣಿಗಳ ಪಚನ ಕ್ರಿಯೆಯಲ್ಲಿ ನಿರ್ಧಾರಕ ಪಾತ್ರವನ್ನು ವಹಿಸಿವೆ. ಈ ಸೂಕ್ಷ್ಮಾಣುಗಳು ಜಠರದಲ್ಲಿಯ ಸೆಲ್ಲುಲೋಸ್ ಹಾಗೂ ಲಿಗ್ನಿನ್ ಎಂಬ ಕಾರ್ಬೋಹೈಡ್ರೇಟುಗಳನ್ನು ಒಡೆದು ಸರಳ ಮಾಡುತ್ತವೆ. ಈ ಕ್ರಿಯೆ ನಡೆಯದಿದ್ದರೆ ಪ್ರಾಣಿಗಳಿಗೆ ಶಕ್ತಿದೊರೆಯದೆ ಸಾವನ್ನಪ್ಪಬೇಕಾಗುತ್ತಿತ್ತು. ಸೇಕಡಾ ೮೫ರಷ್ಟು ಭೂಸಸ್ಯಗಳಲ್ಲಿ ಮೈಕೋರೈಝಾ ಬೆಳೆದಿದೆ. ಇದೂ ಕೂಡ ಸಸ್ಯಗಳಿಗೆ ಬಹಳ ಸಹಕಾರಿಯಾಗಿದೆ.

ಕಡಲ ಪರಿಸರದಲ್ಲಿ ಸೇಕಡಾ ೭೫ರಷ್ಟು ಆಹಾರ ಉತ್ಪಾದನೆ ಹಾಗೂ ಜೈವಿಕ ರಾಶಿ ತೇಲು ಸಸ್ಯಗಳಿಂದ ಲಭ್ಯ ಇವೆ. ಅಲ್ಲದೆ ಹವಳದ ದಿಬ್ಬಗಳೂ ಕೂಡ ಅನೇಕ ಹವಳ ಪಾಚಿಗಳಿಗೆ ಆಶ್ರಯ ನೀಡಿವೆ. ನೆನಪಿಡಿ ಭೂಮಿಯ ಮೇಲಿನ ಜಾಲವು ಸೂಕ್ಷ್ಮಾಣುಗಳ ಮೇಲೆ ಅವಲಂಬಿಸಿದೆ. ಭೂಮಿಯ ಮೇಲಿನ ಸೂಕ್ಷ್ಮಾಣುಗಳು (ಹೆಚ್ಚಾಗಿ ಶಿಲೀಂಧ್ರ) ಅತಿ ಹೆಚ್ಚು ಜೈವಿಕ ರಾಶಿಯನ್ನು ಉತ್ಪಾದಿಸುತ್ತವೆ. ಮಣ್ಣಿನ ಸಂಯೋಜನೆ, ರಚನೆ ಹಾಗೂ ಸಂರಕ್ಷಣೆಯಲ್ಲಿ ಇವು ಅತ್ಯಂತ ಪ್ರಧಾನ ಪಾತ್ರ ವಹಿಸಿವೆ. ಜೈವಿಕ ನಿಯಂತ್ರಣದ ಮೂಲಕ ಇವು ಪರಿಸರ ವ್ಯವಸ್ಥೆಯನ್ನೂ ರಕ್ಷಿಸುತ್ತವೆ.

ಕೆಳಸ್ಥರದ ಸಸ್ಯಗಳಲ್ಲಿ ವೈವಿಧ್ಯ

ಪಾಚಿ, ಕಲ್ಲುಹೂವು (ಶಿಲಾವಲ್ಕ) ಹಾಗೂ ಪ್ರಾಮಾಜಿಗಳಂಥ ಕೆಳಸ್ಥರದ ಸಸ್ಯಗಳಲ್ಲಿ ನೀರು ಹಾಗೂ ಆಹಾರವನ್ನು ಸಾಗಿಸುವ ಊತಕಗಳಿರುವುದಿಲ್ಲ (ಚಿತ್ರ ೧). ಪ್ರಪಂಚದಲ್ಲಿ ಇಂಥ ಸಸ್ಯ ಪ್ರಭೇದಗಳ ಸಂಖ್ಯೆ ಸುಮಾರು ಇಪ್ಪತ್ತು ಲಕ್ಷ ಒಂದು ಸಾವಿರ. ಇವುಗಳ ಪೈಕಿ ನಮ್ಮ ದೇಶದಲ್ಲಿ ೩೯,೦೭೦ ಪ್ರಭೇದಗಳಿವೆ (ಕೋಷ್ಟಕ ೧.೨).

ಚಿತ್ರ ೧

 ಕೋಷ್ಟಕ . ಭಾರತದ ಸಸ್ಯ ವೈವಿಧ್ಯ

 

ಕ್ರ.
ಸಂ.

ಗುಂಪು

ಭಾರತದಲ್ಲಿಯ ಪ್ರಭೇದಗಳ ಸಂಖ್ಯೆ

ಪ್ರಪಂಚದಲ್ಲಿಯ ಪ್ರಭೇದಗಳ ಸಂಖ್ಯೆ

ಜಾಗತಿಕ ಸೇಕಡಾವಾರು

೧. ಕೆಳಸ್ಥರ ಸಸ್ಯಗಳು

೩೯,೦೭೦

೨,೦೧,೦೦೦

೧೯.೪೩

೨. ಶೈವಲ

೨೩,೦೦೦

೧,೦೦,೦೦

೨೩.೦೦

೩. ಶಿಲೀಂಧ್ರ

೧೨,೫೦೦

೭೦,೦೦೦

೧೭.೮೫

೪. ಕಲ್ಲುಹೂವು

೧೦೦೦

೧೭,೦೦೦

೫.೮೮

೫. ಪಾಮಾಜಿಗಳು

೨೫೭೦

೧೪,೦೦೦

೧೮.೩೫

೬. ಮೇಲ್‌ಸ್ಥರದ ಸಸ್ಯಗಳು

೧೬,೦೯೦

೨,೬೩,೭೨೦

೬.೧೦

೭. ಜರೀಸಸ್ಯಗಳು

೧೦೨೫

೧೩,೦೦೦

೭.೮೮

೮. ಹೂವುಬಿಡದ ಸಸ್ಯಗಳು

೬೫

೭೨೦

೯.೦೨

೯. ಹೂವು ಬಿಡುವ ಸಸ್ಯಗಳು

೧೫,೦೦೦

೨,೫೦,೦೦೦

೬.೦೦

  ಒಟ್ಟು

೫೫,೧೬೦

೪,೬೪,೭೨೦

ಪ್ರಪಂಚದಲ್ಲಿಯ ಸುಮಾರು ೧ ಲಕ್ಷ ಪಾಚಿ ಪ್ರಭೇದಗಳ ಪೈಕಿ ೨೩ ಸಾವಿರ ಪ್ರಭೇದಗಳು ನಮ್ಮ ದೇಶದಲ್ಲಿವೆ. ಕಲ್ಲುಹೂವು ಒಂದೇ ಸಸ್ಯದಂತೆ ಕಂಡರೂ ಕೂಡ ಅದರಲ್ಲಿ ಪಾಚಿ ಹಾಗೂ ಶಿಲೀಂಧ್ರಗಳು ಸಹಜೀವನ ನಡೆಸುತ್ತವೆ (ಚಿತ್ರ ೧.೧). ಅಂದರೆ ಶಿಲೀಂಧ್ರ ಪಾಚಿಗೆ ಆಶ್ರಯ ಹಾಗೂ ನೀರು ಒದಗಿಸುತ್ತದೆ. ಬದಲಾಗಿ ಪಾಚಿ ಶಿಲೀಂಧ್ರಕ್ಕೆ ಆಹಾರ ಒದಗಿಸುತ್ತದೆ. ಉಷ್ಣವಲಯ ಹಾಗೂ ಸಮಶೀತೋಷ್ಣ ಪ್ರದೇಶಗಳಲ್ಲಿ ಕಲ್ಲುಹೂವು ಹೆಚ್ಚು ಬೆಳೆಯುತ್ತದೆ ಅಲ್ಲದೆ ಸಮಶೀತೋಷ್ಣ ಪ್ರದೇಶದಲ್ಲಿ ಇದರ ವೈವಿಧ್ಯ ಹೆಚ್ಚು (ಕೋಷ್ಟಕ ೧.೩). ಪ್ರಪಂಚದಾದ್ಯಂತ ಸುಮಾರು ೧೭ ಸಾವಿರ ಕಲ್ಲುಹೂ ಪ್ರಭೇದಗಳಿವೆ. ನಮ್ಮ ದೇಶದಲ್ಲಿ ಕಲ್ಲುಹೂ ಪ್ರಭೇದಗಳ ಸಂಖ್ಯೆ ೧೦೦೦. ಭೂಮಿಯ ಮೇಲೆ ಒಟ್ಟು ೧೪ ಸಾವಿರ ಪಾಮಾಜಿ ಪ್ರಭೇದಗಳುಂಟು, ಅವುಗಳ ಪೈಕಿ ೨೫೭೦ ಪ್ರಬೇದಗಳು ನಮ್ಮ ದೇಶದಲ್ಲಿವೆ. ಇವು ತಂಪು ಅಥವಾ ಸಮಶೀತೋಷ್ಣ ಹಾಗೂ ಆದ್ರ ವಾತಾವರಣದಲ್ಲಿ ಬೆಳೆಯುತ್ತವೆ. ಇಂಥ ವಾತಾವರಣದಲ್ಲಿಯೇ ಇವುಗಳ ವೈವಿಧ್ಯವೂ ಹೆಚ್ಚು.

ಚಿತ್ರ ೧.೧

 ಕೋಷ್ಟಕ . ಕಲ್ಲು ಹೂವು ವೈವಿಧ್ಯ ಹೇರಳವಾಗಿರುವ ೧೦ ದೇಶಗಳು

 

ಕ್ರ.ಸಂ. ದೇಶಗಳು ಕುಲಗಳು ಟೆಕ್ಸಾ
೧. ಯು.ಎಸ್.ಎ.ಮತ್ತು ಕೆನಡಾ ೪೦೧ ೩೪೦೯
೨. ಆಸ್ಟ್ರೇಲಿಯಾ ೨೯೯ ೨೪೯೯
೩. ಫ್ರಾನ್ಸ್ ೧೮೧ ೨೨೦೦
೪. ಸ್ವೀಡನ್ ಮತ್ತು ನಾರ್ವೆ ೨೧೬ ೨೧೪೨
೫. ವೆಸ್ಟ್ ಇಂಡೀಸ್ ೧೭೩ ೧೭೫೧
೬. ಯುನೈಟೆಡ್ ಕಿಂಗ್‌ಡಮ್ ೨೫೦ ೧೬೦೦
೭. ನ್ಯೂಜಿಲೆಂಡ್ ೨೪೩ ೧೧೬೨
೮. ಭಾರತ ೧೬೩ ೧೧೫೦
೯. ಮೆಕ್ಸಿಕೊ ೧೩೦ ೯೯೭
೧೦. ಫಿಲಿಪೈನ್ಸ್ ೧೩೭ ೯೭೪

 ಮೇಲ್ವರ್ಗದ ಸಸ್ಯಗಳಲ್ಲಿ ವೈವಿಧ್ಯ

ಈ ಸಸ್ಯಗಳಲ್ಲಿ ಬೀಜಕಗಳು, ಆಹಾರ ಹಾಗೂ ನೀರು ಸಾಗಿಸುವ ಊತಕಗಳು, ಶಂಕುಗಳು ಅಥವಾ ಹೂವುಗಳಿರುತ್ತವೆ. ಈ ಸಸ್ಯಗಳನ್ನು ಪುಚ್ಛ ಸಸ್ಯಗಳು, ಅನಾವೃತ ಬೀಜಿ ಸಸ್ಯಗಳು ಹಾಗೂ ಆವೃತ ಬೀಜಿ ಸಸ್ಯಗಳೆಂದು ವಿಂಗಡಿಸಲಾಗಿದೆ (ಚಿತ್ರ ೧.೨).

ಚಿತ್ರ ೧.೨

ಒಟ್ಟು ವಿವರಿಸಿದ ೧೩ ಸಾವಿರ ಪುಚ್ಛ ಸಸ್ಯಗಳ ಪೈಕಿ ೧೦೨೫ ಪ್ರಭೇದಗಳು ನಮ್ಮಲ್ಲಿವೆ. ಬೀಜಕಗಳಿಂದ ಸಂತಾನೋತ್ಪತ್ತಿ ಮಾಡಿಕೊಳ್ಳುವ ಈ ಸಸ್ಯಗಳು ಆದ್ರ ಮಿಶ್ರಿತ ಉಷ್ಣವಲಯದ ಕಾಡುಗಳಿಗೆ ಸೀಮಿತವಾಗಿವೆ. ಜೀವವಿಕಾಸವನ್ನು ತಿಳಿದುಕೊಳ್ಳಲು ಪುಚ್ಛ ಸಸ್ಯಗಳು ಬಹಳ ಸಹಾಯಕವಾಗಿವೆ. ಇವುಗಳಲ್ಲಿ ಸಿಲೋಫೈಟ ಗುಂಪಿಗೆ ಸೇರಿದ ಸಸ್ಯಗಳು ಸುಮಾರು ೪೦ ಕೋಟಿ ವರ್ಷಗಳ ಹಿಂದೆ ಪ್ರಭಲವಾಗಿದ್ದವು. ಈಗ ಅವೆಲ್ಲ ಅಳಿದು ಹೋಗಿ, ಎರಡು ಕುಲಗಳು ಮಾತ್ರ ಉಳಿದುಕೊಂಡಿವೆ.

ಕೋಷ್ಟಕ . ಮೇಲ್ವರ್ಗದ ಸಸ್ಯಗಳ ಹಂಚಿಕೆ

೧. ಲ್ಯಾಟಿನ್ ಅಮೇರಿಕ ೮೫,೦೦೦
೨. ಉಷ್ಣವಲಯದ ಹಾಗೂ ಅರೆಉಷ್ಣವಲಯದ ಆಫ್ರಿಕ ೪೫,೦೦೦
೩. ಉಷ್ಣವಲಯದ ಹಾಗೂ ಅರೆ ಉಷ್ಣವಲಯದ ಏಸಿಯಾ ೫೦,೦೦೦
೪. ಆಸ್ಟ್ರೇಲಿಯಾ ೧೫,೦೦೦
೫. ಉತ್ತರ ಅಮೆರಿಕ ೧೭,೦೦೦
೬. ಯುರೋಪ ೧೨,೫೦೦

ಅನಾವೃತ ಬೀಜಿ ಸಸ್ಯಗಳಲ್ಲಿ ಬೀಜಗಳು ಬೆತ್ತಲೆಯಾಗಿರುತ್ತವೆ. ಅಂದರೆ ಈ ಸಸ್ಯಗಳಲ್ಲಿ ಫಲ ಇರುವುದಿಲ್ಲ. ಪ್ರಪಂಚದಲ್ಲಿ ೭೨೦ ಪ್ರಭೇದಗಳಿವೆ. ಅವುಗಳ ಪೈಕಿ ೬೪ ಪ್ರಭೇದಗಳು ನಮ್ಮಲ್ಲಿವೆ. ಅನಾವೃತ ಬೀಜಿ ಸಸ್ಯಗಳಲ್ಲಿ ಒಂದಾದ ಸೈಕಾಸ್ (ಚಿತ್ರ ೧.೨) ಈಚಲು ಮರದಂತೆ ಕಾಣುತ್ತದೆ. ಇದು ಉಷ್ಣವಲಯದ ಕಾಡುಗಳಲ್ಲಿ ಬೆಳೆಯುತ್ತದೆ. ಇದೊಂದು ಪುರಾತನ ಗುಂಪಿಗೆ ಸೇರಿದ ಸಸ್ಯ. ಇನ್ನೊಂದು ಗುಂಪು ಕೋನಿಫರ‍್ಗಳು. ಪ್ರಪಂಚದಾದ್ಯಂತ ಇವು ಬೆಳೆಯುತ್ತವೆ. ಇವುಗಳಲ್ಲಿ ವೈವಿಧ್ಯ ಹೆಚ್ಚು. ಇವುಗಳ ಮರ (wood) ಮೆದುವಾಗಿದ್ದು ಅತ್ಯಮೂಲ್ಯವಾದದ್ದು. ಈ ಗುಂಪಿನಲ್ಲಿಯ ಪೈನಸ್ ಹಾಗೂ ಸಿಕ್ವಾಯಾ ಸಸ್ಯಗಳು ಬೃಹದಾಕಾರದವು. ಇವು ೧೩೦ ಮೀ. ಎತ್ತರದ ವರೆಗೆ ಬೆಳೆಯಬಲ್ಲವು. ೪೯೦೦ ವರ್ಷಗಳಾದ ಈ ಗುಂಪಿನ ಕೆಲ ಮರಗಳು ನೋಡಲು ಇಂದೂ ಸಿಗುತ್ತವೆ. ನಮ್ಮ ದೇಶದ ಹಿಮಾಲಯದಲ್ಲಿ ಕೋನಿಫರ‍್ಗಳು ಹಾಗೂ ಉಷ್ಣವಲಯದ ಕಾಡು ಮತ್ತು ದಕ್ಷಿಣ ಭಾರತದಲ್ಲಿ ಪೋಡೋಕಾರ್ಪಸ್ ಎಂಬ ಸಸ್ಯಗಳು ಬೆಳೆಯುತ್ತವೆ.

ಆವೃತ ಬೀಜಿ ಸಸ್ಯಗಳು ಹೂ ತಳೆಯುತ್ತವೆ ಹಾಗೂ ಬೀಜಗಳು ಫಲದೊಳಗಿರುತ್ತವೆ (ಚಿತ್ರ ೧.೨). ಈ ಸಸ್ಯಗಳಲ್ಲಿ ವೈವಿಧ್ಯ ಬಹಳ. ಇವುಗಳಲ್ಲಿ ೨.೫ ಲಕ್ಷ ಪ್ರಭೇದಗಳಿವೆ. ಇವುಗಳ ಪೈಕಿ ನಮ್ಮ ದೇಶದಲ್ಲಿ ೧೫ ಸಾವಿರ ಪ್ರಭೇದಗಳು ಬೆಳೆಯುತ್ತವೆ (ಕೋಷ್ಟಕ ೧.೨). ಆವೃತ ಬೀಜಿ ಸಸ್ಯಗಳು ಸುಮಾರು ೧೩.೫ ಕೋಟಿ ವರ್ಷಗಳ ಹಿಂದೆ ಉದಯಿಸಿರಬಹುದೆಂದು ಪಳೆಯುಳಿಕೆಗಳು ತಿಳಿಸುತ್ತವೆ. ಇವುಗಳ ಎತ್ತರ ೧ಮಿಮೀ. ದಿಂದ ಹಿಡಿದು ೧೦೦ ಮೀಗಳಷ್ಟು. ರ್ಯಾಫ್ಲೇಸಿಯಾ ಹೂವಿನ ವ್ಯಾಸ ಒಂದು ಮೀ.ನಷ್ಟಿದೆ (ಚಿತ್ರ ೧.೩).

ಚಿತ್ರ ೧.೩

 ನಮ್ಮ ಊಟ, ಔಷಧಿ, ನಾರು, ಚೌಬಿನೆ, ಮಸಾಲೆ ಪದಾರ್ಥಗಳು, ಮನೆ ಕಟ್ಟುವ ಸಾಮಾನುಗಳು, ಇತ್ಯಾದಿ ಆವೃತ ಬೀಜಿ ಸಸ್ಯಗಳಿಂದ ದೊರೆಯುತ್ತವೆ. ಕೆಲವೊಂದು ಕುಟುಂಬಗಳಲ್ಲಿ ಒಂದೊಂದೇ ಪ್ರಭೇದಗಳುಂಟು. ಹಲವಾರು ಕುಟುಂಬಗಳಲ್ಲಿ ಸಾವಿರಾರು ಪ್ರಭೇದಗಳುಂಟು. ಉದಾಹರಣೆಗೆ ಫ್ಯಾಬೇಸಿ ಕುಟುಂಬದಲ್ಲಿ ೧೪,೫೦೦ ಪ್ರಭೇದಗಳಿವೆ.

ಮೇಲ್ವರ್ಗದ ಸಸ್ಯಗಳು ಸಾಮಾನ್ಯವಾಗಿ ಎಲ್ಲ ಪರಿಸರ ವ್ಯವಸ್ಥೆಯಲ್ಲೂ ಬೆಳೆಯುತ್ತವೆ. ಆದರೆ ಅವುಗಳ ಹಂಚಿಕೆ ಒಂದೇ ತೆರನಾಗಿಲ್ಲ. ಪ್ರಪಂಚದ ೨/೩ದಷ್ಟು ಆವೃತ ಬೀಜಿ ಸಸ್ಯಗಳು ಉಷ್ಣವಲಯದಲ್ಲಿ ಬೆಳೆಯುತ್ತವೆ (ಕೋಷ್ಟಕ ೧.೪). ದೃವಗಳಿಂದ ವಿಷ್ಣವದ್ರೇಖೆಯ ಕಡೆಗೆ ಹೋದಂತೆ ಇವುಗಳ ಸಾಂದ್ರತೆ ಹೆಚ್ಚುತ್ತದೆ (ಸ್ಥಂಬಾಲೇಖನ:೧). ಮೇಯರ್ (೧೯೯೦) ಎಂಬಾತನು ಇವುಗಳ ಸಾಂದ್ರತೆ ಹೆಚ್ಚು ಇರುವ ೧೮ ಅಗ್ರತಾಣಗಳನ್ನು ಗುರುತಿಸಿದನು (ಕೋಷ್ಟಕ ೧.೫). ಈ ತಾಣಗಳು ಸುಮಾರು ೫೦ ಸಾವಿರ ಸ್ಥಳೀಯ ಸಸ್ಯಪ್ರಭೇದಗಳಿಗೆ ನೆಲೆಕೊಟ್ಟಿವೆ. ಈ ಎಲ್ಲ ಸಸ್ಯ ಪ್ರಭೇದಗಳು ಜಾಗತಿಕ ಸೇಕಡಾ ೨೦ರಷ್ಟಿವೆ. ಅಲ್ಲದೆ ಈ ಸಸ್ಯತಾಣಗಳು ಪ್ರದೇಶವು ಒಟ್ಟು ಭೂಮಿಯ ಸೇಕಡಾ ೦.೫ರಷ್ಟಿದೆ (ಕೋಷ್ಟಕ೧.೫).

ಸ್ಥಂಬಾಲೇಖನ ೧. ಸಸ್ಯರಾಶಿ ವಿಫುಲವಾಗಿರುವ ಹತ್ತು ರಾಷ್ಟ್ರಗಳು

 ಕೋಷ್ಟಕ . ಸ್ಥಳೀಯ ಜೀವ ಪ್ರಭೇದಗಳು ಹಾಗೂ ಜೀವಿವೈಧ್ಯದ ೧೮ ತಾಣಗಳು

 

ಕ್ರ.
ಸಂ

ಸ್ಥಳ

ಉಭಯ ಚರಿಗಳ ಸಂಖ್ಯೆ

ಸರೀ ಸೃಪಗಳ ಸಂಖ್ಯೆ

ಸಸ್ತನಿಗಳ ಸಂಖ್ಯೆ

ಮೇಲ್ವರ್ಗದ ಸಸ್ಯಗಳ ಸಂಖ್ಯೆ

ದಕ್ಷಿಣ ಆಫ್ರಿಕ

೨೩

೪೩

೧೫

೬೦೦೦

ಪ.ಅಮೆಜಾನ್

೭೦

೫೦೦೦

ಅಟ್ಲಾಂಟಿಕ್ ತೀರದ ಬ್ರೆಜಿಲ್

೧೬೮

೯೨

೪೦

೫೦೦೦

ಮಡಗಾಸ್ಕರ್

೧೪೨

೨೩೪

೮೬

೪೯೦೦

ಫಿಲಿಪೈನ್ಸ್

೪೧

೧೨೦

೯೮

೩೭೦೦

ಉ.ಬೋರ್ನಿಯೊ

೪೭

೬೯

೪೨

೩೫೦೦

ಪೂ.ಹಿಮಾಲಯ

೨೫

೨೦

೩೫೦೦

ನೈ. ಆಸ್ಟ್ರೇಲಿಯಾ

೨೨

೨೫

೧೦

೨೮೩೦

ಪ.ಇಕ್ವಿಡಾರ್

೨೫೦೦

೧೦ ಬೊಕೊ (ಕೊಲಂಬಿಯಾ)

೧೧೧

೧೩೭

೨೫೦೦

೧೧ ಮಲೇಶಿಯಾ

೩೪೦೦

೧೨ ಕ್ಯಾಲಿಫೋರ್ನಿಯಾ

೧೫

೨೧೪೦

೧೩ ಪಶ್ಚಿಮ ಘಟ್ಟ

೯೧

೧೬೦೦

೧೪ ಮಧ್ಯ ಚಿಲಿ

೧೪೫೦

೧೫ ನ್ಯೂಕೆಲೆಡೋನಿಯಾ

೨೧

೧೪೦೦

೧೬ ಪೂರ್ವ ಆರ್ಕ ಪರ್ವತ (ತಾಂಜಾನಿಯಾ)

೪೯

೨೦

೫೩೫

೧೭ ನೈ.ಶ್ರೀಲಂಕಾ ೫೦೦
೧೮ ನೈ.ಕೊಟೆಡ್‌ವೈರ್ ೨೦೦

ಮೂಲ: ಜಾಗತಿಕ ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣೆ ಕೇಂದ್ರ ೧೯೯೨

ಪ್ರಾಣಿ ಸಂಕುಲಗಳ ವೈವಿಧ್ಯ

ಪ್ರಪಂಚದಲ್ಲಿ ಸುಮಾರು ೧೨ ಲಕ್ಷ ೧೬ ಸಾವಿರ ಪ್ರಾಣಿ ಪ್ರಭೇದಗಳಿವೆ. ಅವುಗಳ ಪೈಕಿ ೧೧ ಲಕ್ಷ ೭೦ ಸಾವಿರ ಪ್ರಭೇದಗಳು ಅಕಶೇರುಕಗಳು. ಅಂದರೆ ಸುಮಾರು ೪೭ ಸಾವಿರ ಪ್ರಭೇದಗಳು ಕಶೇರುಕಗಳಿವೆ. ಕೀಟಗಳು ಗುಂಪು ಅತಿ ದೊಡ್ಡದು. ಇದರಲ್ಲಿ ೯ ಲಕ್ಷ ೫೦ ಸಾವಿರ ಪ್ರಭೇದಗಳುಂಟು. ಮೃದ್ವಂಗಿಗಳಲ್ಲಿ ೮೦ ಸಾವಿರ ಪ್ರಭೇದಗಳಿವೆ. ನಿಮೆಟೋಡ್‌ಗಳಲ್ಲಿ ೨೫ ಸಾವಿರ ಹಾಗೂ ಪ್ರೊಟಜೋಅಗಳಲ್ಲಿ ೪೦ ಸಾವಿರ ಪ್ರಭೇದಗಳಿವೆ (ಕೋಷ್ಟಕ ೧.೬), (ಚಿತ್ರ ೧.೪).

ಚಿತ್ರ ೧.೪

ಕೋಷ್ಟಕ . ಪ್ರಾಣಿ ವೈವಿಧ್ಯ ಮತ್ತು ಭಾರತದ ಸ್ಥಳೀಯ ಪ್ರಾಣಿಗಳು

 

ಕ್ರ.
ಸಂ.

ಫೈಲಮ್

ಭಾರತದಲ್ಲಿರುವ ಪ್ರಭೇದಗಳು

ಪ್ರಪಂಚದಲ್ಲಿರುವ ಪ್ರಭೇದಗಳು

ಭಾರತಕ್ಕೆ ಸೀಮಿತವಾಗಿರುವ ಪ್ರಭೇದಗಳು

ಪ್ರೊಟೋಝೋಆ

೨೫೮೦

೪೦,೦೦೦

  ರೋಟಿಫೆರಾ

೩೧೦

೨೫೦೦

೨೬

  ನಿಮೆಟೋಡ್

೨೩೫೦

೨೫,೦೦೦

  ಮೃದ್ವಂಗಿಗಳು

೫೦೫೩

೮೦,೦೦೦

  ಅನೆಲಿಡಾ

೧೦೯೫

೧೨,೬೨೦

೬೦

  ಮೀನುಗಳು

೨೫೫೦

೨೧,೭೫೦

  ಉಭಯವಾಸಿಗಳು

೨೧೦

೫೧೫೦

೫೩

  ಸರೀಸೃಪಗಳು

೪೩೦

೬೫೫೦

೪೪

  ಪಕ್ಷಿಗಳು

೧೨೩೦

೯೬೭೨

೪೨

  ಸ್ತನಿಗಳು

೩೭೫

೪೩೨೭

ಮೊಟ್ಟಮೊದಲ ಕಶೇರುಕಗಳಾದ ಮೀನುಗಳ ಉದಯವಾದದ್ದು ೫೦ ಕೋಟಿ ವರ್ಷಗಳ ಹಿಂದೆ. ಸುಮಾರು ೪೦ ಕೋಟಿ ವರ್ಷಗಳ ಹಿಂದೆ ಮೀನುಗಳಿಂದಲೇ ಭೂವಾಸದ ಕಶೇರುಗಳು ಹುಟ್ಟಿದವು. ಪ್ರಪಂಚದಲ್ಲಿ ಸುಮಾರು ೨೨ ಸಾವಿರ ಮೀನು ಪ್ರಭೇದಗಳಿವೆ. ನಮ್ಮ ದೇಶದಲ್ಲಿ ಮೀನು ಪ್ರಭೇದಗಳ ಸಂಖ್ಯೆ ೨೫೫೦. ಎಲ್ಲ ಬಗೆಯ ನೀರಿನಲ್ಲಿ ಮೀನುಗಳು ವಾಸಿಸುತ್ತವೆ. ಸೇಕಡಾ ೪೦ರಷ್ಟು ಮೀನುಗಳು ಸಿಹಿ ನೀರಿನಲ್ಲಿ ವಾಸಮಾಡಿಕೊಂಡಿವೆ. ಮೀನುಗಳ ಆಕಾರ, ಗಾತ್ರ ಹಾಗೂ ಜೀವಶಾಸ್ತ್ರದಲ್ಲಿ ವೈವಿಧ್ಯ ಹೆಚ್ಚು. ಪಾಂಡಕಾ ಪಿಗ್ಮಿಯಾ ಎಂಬ ಮೀನು ಅತಿ ಚಿಕ್ಕದು. ಇದರ ಉದ್ದ ೧ ಸೆಮಿ. ತಿಮಿಂಗಿಲ ಶಾರ್ಕ್ ಎಂಬ ಮೀನಿನ ಉದ್ದ ೧೫ ಮೀಟರ್‌ಗಳು. ಇವುಗಳ ಬಣ್ಣದಲ್ಲೂ ವೈವಿಧ್ಯ ಹೆಚ್ಚು. ಜಾಗತಿಕ ಮಟ್ಟದಲ್ಲಿ ಮೀನುಗಳನ್ನು ಆಹಾರವಾಗಿ ಹೆಚ್ಚು ಬಳಸುತ್ತಾರೆ.

ಪ್ರಪಂಚದಲ್ಲಿ ೫೦೦೦ಕ್ಕೂ ಮಿಕ್ಕಿ ಉಭಯ ಜೀವಿ ಪ್ರಭೇದಗಳಿವೆ. ಭಾರತದಲ್ಲಿ ೨೧೦ ಪ್ರಭೇದಗಳಿವೆ. ಈ ಜೀವಿಗಳು ತಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ವಾತಾವರಣದಿಂದ ಶಕ್ತಿಯನ್ನು ಪಡೆಯುತ್ತವೆ. ಇವಕ್ಕೆ ವ್ಯಾಪ್ಯತ್ವಚೆ ಇದೆ ಹಾಗೂ ತೊಟ್ಟಿನಂತ ಹಲ್ಲುಗಳಿವೆ. ಇವು ನೀರು ಹಾಗೂ ಭೂಮಿ ಎರಡರ ಮೇಲೂ ತಮ್ಮ ಜೀವನವನ್ನು ಸಾಗಿಸುತ್ತವೆ. ಉಭಯ ಜೀವಿಗಳು ತಮ್ಮ ಮರಿಹುಳು ಜೀವನವನ್ನು ನೀರಿನಲ್ಲಿ ಹಾಗೂ ವಯಸ್ಕ ಜೀವನವನ್ನು ಭೂಮಿಯ ಮೇಲೆ ಕಳೆಯುತ್ತವೆ. ಇತರ ಕಶೇರುಕಗಳಿಗೆ ಹೋಲಿಸಿದರೆ ಉಭಯ ಜೀವಿಗಳು ಪರಿಸರ ವಿಜ್ಞಾನ ದೃಷ್ಟಿಯಿಂದ ಕಡಿಮೆ ತೊನೆದಾಡುತ್ತವೆ. ಇವುಗಳ ವಂಶಾಭಿವೃದ್ಧಿ ಹಾಗೂ ಬೆಳವಣಿಗೆಗೆ ಸ್ವಲ್ಪ ಹೆಚ್ಚು ಉಷ್ಣತೆ, ಆರ್ದ್ರ ಸ್ಥಿತಿ ಮತ್ತು ನೀರು ಬೇಕು.

ಪ್ರಪಂಚದಲ್ಲಿ ಸುಮಾರು ೬೫೫೦ ಹಾಗೂ ನಮ್ಮ ದೇಶದಲ್ಲಿ ಸುಮಾರು ೪೩೦ ಸರೀಸೃಪ ಪ್ರಭೇದಗಳಿವೆ. ಮೈಮೇಲೆ ಹುರುಪೆಗಳುಳ್ಳ ಈ ಪ್ರಾಣಿಗಳು ನೇರವಾಗಿ ಗಾಳಿಯನ್ನು ಉಸಿರಾಡಿಸುತ್ತವೆ. ವಾತಾವರಣದಲ್ಲಿಯ ಶಕ್ತಿಯನ್ನು ಉಪಯೋಗಿಸಿಕೊಂಡು ತಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುತ್ತವೆ. ನೆಲ ಹಾಗೂ ಜಲ ವಾಸಿಗಳಾದ ಈ ಪ್ರಾಣಿಗಳು ಮೊಟ್ಟೆಗಳನ್ನಿಡಬಹುದು ಅಥವಾ ಮರಿಗಳನ್ನು ಹೆರಬಹುದು. ಉಪ್ಪು ನೀರಿನಲ್ಲೂ ಇವು ವಾಸಿಸಬಲ್ಲವು.

ಭೂಮಿಯ ಮೇಲೆ ಸುಮಾರು ೯೬೭೨ ಹಾಗೂ ನಮ್ಮ ದೇಶದಲ್ಲಿ ೧೨೩೦ ಪಕ್ಷಿ ಪ್ರಭೇದಗಳಿವೆ. ಇವು ಬಿಸಿ ರಕ್ತದ ಪ್ರಾಣಿಗಳು ಜೀವಿ ವಿಕಾಸದಲ್ಲಿ ಸರೀಸೃಪಗಳ ಹುರುಪೆಗಳು ಗರಿಗಳಾಗಿ ಪರಿವರ್ತನೆಯಾದವು. ಪಕ್ಷಿಗಳಲ್ಲಿ ಮುಂದಿನ ಕಾಲುಗಳು ರೆಕ್ಕೆಗಳಾಗಿ ಮಾರ್ಪಟ್ಟಿವೆ. ಪಕ್ಷಿಗಳಿಗೆ ಹಲ್ಲುಗಳಿಲ್ಲ. ಸಂತಾನೋತ್ಪತ್ತಿಗಾಗಿ ಇವು ಮೊಟ್ಟೆಗಳನ್ನಿಡುತ್ತವೆ. ಎಲ್ಲ ಆವಾಸ ಹಾಗೂ ಪರಿಸರ ವ್ಯವಸ್ಥೆಯಲ್ಲೂ ಇವು ವಾಸಿಬಲ್ಲವು. ಭೂವಾಸಿ ಪಕ್ಷಿಗಳಲ್ಲಿ ವೈವಿಧ್ಯ ಹೆಚ್ಚು.

ಕಾರ್ಬೆಟ್ ಹಾಗೂ ಹಿಲ್ (೧೯೯೧) ಅವರು ೪೩೨೭ ಸಸ್ತನಿ ಪ್ರಭೇದಗಳನ್ನು ಗುರುತಿಸಿದ್ದಾರೆ. ಸುಮಾರು ೩೭೫ ಪ್ರಭೇದಗಳು ನಮ್ಮ ದೇಶದಲ್ಲಿವೆ. ಸ್ತನಿ ದೇಹದ ಮೇಲೆ ಕೂದಲುಗಳಿದ್ದು ಸಸ್ತನಿಗಳು ಮರಿಗಳಿಗೆ ಹಾಲುಣಿಸುತ್ತವೆ. ಸಸ್ತನಿಗಳು ಬಿಸಿ ರಕ್ತದ ಪ್ರಾಣಿಗಳು. ಇವುಗಳ ಆಹಾರಕ್ಕನುಗುಣವಾಗಿ ಹಲ್ಲುಗಳಲ್ಲಿ ವೈವಿಧ್ಯವಿದೆ. ಇವು ಸಾಮಾನ್ಯವಾಗಿ ಎಲ್ಲ ತರಹದ ಆವಾಸಗಳಿಗೂ ಹೊಂದಿಕೊಳ್ಳುತ್ತವೆ. ಆದರೆ ಕೆಲವು ಸ್ತನಿಗಳು ನಿರ್ದಿಷ್ಟ ಸ್ಥಳಗಳಿಗೆ ಮಾತ್ರ ಸೀಮಿತವಾಗಿವೆ. (ಸ್ಥಂಬಾಲೇಖನ: ೨, ಕೋಷ್ಟಕ ೧.೭).

ಸ್ಥಂಬಾಲೇಖನ: ೨ ಪ್ರಾಣಿರಾಶಿ ವಿಫುಲವಾಗಿರುವ ಹತ್ತು ರಾಷ್ಟ್ರಗಳು

ಕೋಷ್ಟಕ . ಯಾವ ದೇಶದಲ್ಲಿ ಎಷ್ಟು ಸ್ಥಳೀಯ ಕಶೇರುಕಗಳು?

ಕ್ರ. ಸಂ.

ದೇಶ

ಉಭಯಚರಿಗಳ ಸಂಖ್ಯೆ

ಸರೀಸೃಪಗಳ ಸಂಖ್ಯೆ

ಪಕ್ಷಿಗಳ ಸಂಖ್ಯೆ

ಸಸ್ತನಿಗಳ ಸಂಖ್ಯೆ

೧. ಬ್ರಾಜಿಲ್

೨೯೩

೧೭೮

೧೭೬

೭೦

೨. ಮೆಕ್ಸಿಕೊ

೧೬೯

೩೬೮

೮೮

೧೩೬

೩. ಆಸ್ಟ್ರೇಲಿಯಾ

೧೬೦

೬೦೫

೩೪೯

೨೧೦

೪. ಮಡಗಾಸ್ಕರ್

೧೪೨

೨೩೧

೯೭

೬೭

೫. ಇಕ್ವಡೋರ್

೧೩೬

೧೦೦

೬. ಕೊಲಂಬಿಯಾ

೧೩೦

೧೦೬

೭. ಭಾರತ

೧೧೦

೧೫೬

೬೯

೮. ಇಂಡೋನೇಶಿಯಾ

೧೦೦-

೧೫೦

೩೫೬

೧೬೫

೯. ಪೆರು

೮೭

೯೫

೧೦೬

೧೦. ವೆನೆಝಲ

೭೬

೧೧. ಫಿಲಿಫೈನ್ಸ್

೧೩೧

೧೭೨

೯೦

೧೨. ನ್ಯೂಜಿಲೆಂಡ್

೭೪

೧೩. ಸೊಲಮನ್ ದ್ವೀಪಗಳು

೭೨

೧೪. ಅಮೇರಿಕ

೯೩

ಕ್ರಿ.ಪೂ ೧೦೦೦ದಲ್ಲಿ ನಮ್ಮ ಪೂರ್ವಜರು ಹಲವಾರು ಕಾಡು ಪ್ರಾಣಿಗಳನ್ನು ಸಾಕಿ, ಅವುಗಳಿಂದ ಅನುಕೂಲ ಪಡೆಯತೊಡಗಿದರು. ಸಾಕು ಪ್ರಾಣಿಗಳಿಂದ ಮಾಂಸ, ಹಾಲು, ಬೆಣ್ಣೆ, ಉಣ್ಣೆ, ಚರ್ಮ, ಇತ್ಯಾದಿಗಳನ್ನು ಪಡೆಯಬಹುದು. ಅಲ್ಲದೆ ಈ ಪ್ರಾಣಿಗಳನ್ನು ಬೇಸಾಯದಲ್ಲಿ ಉಪಯೋಗಿಸಬಹುದು. ಕತ್ತೆಗಳನ್ನು ಬೇಸಾಯದಲ್ಲಿ ಹೆಚ್ಚು ಉಪಯೋಗಿಸುತ್ತಿದ್ದಾರೆ. ಕತ್ತೆ ಕುದುರೆ, ಒಂಟೆಗಳನ್ನು ಯುದ್ಧ ಸಾಮಗ್ರಿಗಳನ್ನು ಸಾಗಿಸುವಲ್ಲಿ ಬಳಸುತ್ತಿದ್ದಾರೆ. ಹಂದಿ, ಬಾತು, ಕೋಳಿಗಳನ್ನು ಮಾಂಸಕ್ಕಾಗಿ ಹೆಚ್ಚು ಪ್ರಮಾಣದಲ್ಲಿ ಸಾಕುತ್ತಿದ್ದಾರೆ (ಕೋಷ್ಟಕ ೧.೮). ಕರ್ನಾಟಕದ ಮುಖ್ಯ ಪ್ರಾಣಿ ಸಂಪತ್ತನ್ನು ಕೋಷ್ಟಕ ೧.೯ದಲ್ಲಿ ಕೊಟ್ಟಿದೆ.

ಕೋಷ್ಟಕ . ಜೀವಿವೈವಿಧ್ಯ ಮತ್ತು ಸಾಕು ಪ್ರಾಣಿಗಳ ಹಾಗೂ ಕೋಳಿಗಳ ಅಂದಾಜು ಸಂಖ್ಯೆ

ಕ್ರ.
ಸಂ.

ಪ್ರಾಣಿಗಳು

ಸ್ಥಳಜನ್ಯ ತಳಿಗಳು

ಪಳಗಿಸಿದ ತಳಿಗಳು

ಸಂಖ್ಯೆ(ಸಾವಿರ)

೧. ದನ

೨೭

೧೯೨೪೫೩

೨. ಎಮ್ಮೆ

೬೯೭೮೩

೩. ಮೇಕೆ

೨೨

೯೫೨೫೫

೪. ಕುರಿ

೪೦

೪೮೭೬೫

೫. ಹಂದಿ

೧೦

೧೦೦೭೧

೬. ಕುದುರೆ

೪೧೯೫೮೮

೭. ಕತ್ತೆ

೧೦೧೦೦೦

೮. ಒಂಟೆ

೧೦೭೮

೯. ಬಾತುಗಳು

೯೦೧೦೦೦

೧೦. ಗೀಸ್‌ಗಳು

  ಒಟ್ಟು

೧೭

೯೦೦

ಕೋಷ್ಟಕ . ಕರ್ನಾಟಕದ ಮುಖ್ಯ ಪ್ರಾಣಿ ಸಂಪತ್ತು

೧.ಆನೆ ೨.ಕಾಡೆಮ್ಮೆ ೩.ಕರಡಿ ೪.ಕಡ
೫.ಜಿಂಕೆ ೬.ಕೃಷ್ಣಮೃಗ ೭.ಬಾರ್ಕ ೮.ಮುನಿಯ
೯.ಮುಳ್ಳುಹಂದಿ ೧೦.ಹುಲಿ ೧೧.ಚಿರತೆ ೧೨.ಸೀಳುನಾಯಿ
೧೩.ತೋಳ ೧೪.ನರಿ ೧೫.ಮುಂಗಸಿ ೧೬.ಕಾಡುಬೆಕ್ಕು
೧೭.ಕಾಡುಹಂದಿ ೧೮.ಚಿಪ್ಪು ಹಂದಿ ೧೯. ಹೆಜ್ಜಾರ್ಲೆ ೨೦.ನೀರ್ಕಾಗೆ
೨೧. ಹಾವ್ವಕ್ಕಿ ೨೨.ಚಮಚಕೊಕ್ಕು ೨೩.ಬೆಳ್ಳಕ್ಕಿ ೨೪. ಬಿಲಿಕೊಕ್ಕರೆ
೨೫. ಐಬಿಸ್ ೨೬.ರಂಗುಗೊಕ್ಕರೆ ೨೭.ಬುಗುಟುಬಾತು ೨೮.ಗುಳುಮುಳುಕ
೨೯.ಚುಕ್ಕೆಬಾತು ೩೦.ರಣಹದ್ದು ೩೧.ಗರುಡ ೩೨.ಹದ್ದು
೩೩.ಗೂಬೆ ೩೪.ಗೀಜಗ ೩೫.ಗೌಜಲಕ್ಕಿ ೩೬.ಕಾಡುಕೋಳಿ
೩೭.ಬಸ್ಟರ್ಡ್ ೩೮.ನವಿಲು ೩೯.ನವರಂಗ ೪೦.ರಾಜಹಕ್ಕಿ
೪೧.ಕೋಗಿಲೆ ೪೨.ಭಾರದ್ವಾಜ ೪೩.ಶ್ವೇತಕಂಠ ೪೪. ಮಧುರಕಂಠ

ಕೋಷ್ಟಕ ೧.೧೦ ನಮ್ಮ ದೇಶದಲ್ಲಿಯ ಜೀವ ಮಂಡಲ ಭಂಡಾರವನ್ನು ಹಾಗೂ ಕೋಷ್ಟಕ ೧.೧೧ ನೀಲಗಿರಿ ಜೀವಮಂಡಲವನ್ನು ತೋರಿಸುತ್ತವೆ.

ಕೋಷ್ಟಕ .೧೦: ಜೀವಮಂಡಲ ಭಂಡಾರ

೧. ನಮ್‌ಧಾಫಾ ಅರುಣಾಚಲ ಪ್ರದೇಶ
೨. ಉತ್ತರಖಾಂಡ ಉತ್ತರಪ್ರದೇಶ
೩. *ಮನ್ನಾರ ಖಾರಿ ತಮಿಳುನಾಡು
೪. *ಸುಂದರಬನ್ ಪಶ್ಚಿಮ ಬಂಗಾಲ
೫. ಥಾರ್ ಮರಳುಗಾಡು ರಾಜಸ್ಥಾನ
೬. *ಮಾನಸ ಅಸ್ಸಾಂ
೭. ಕಛ್‌ದ ರಣಭೂಮಿ ಗುಜರಾತ್
೮. ಅಂದಮಾನದ ಉತ್ತರ ದ್ವೀಪಗಳು ಅಂದಮಾನ ಮತ್ತು ನಿಕೋಬಾರ
೯. *ನಂದಾದೇವಿ ಉತ್ತರ ಪ್ರದೇಶ
೧೦. ಕಾಜಿರಂಗ ಅಸ್ಸಾಂ
೧೧. ಕನ್ಹಾ ಮಧ್ಯುಪ್ರದೇಶ
೧೨. *ನಾಕ್‌ರೇಕ್ ಮೇಘಾಲಯ
೧೩. *ನೀಲಗಿರಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು
೧೪. *ಗ್ರೇಟ್ ನಿಕೋಬಾರ್ ಅಂಡಮಾನ ಮತ್ತು ನಿಕೋಬಾರ

*ಈಗಾಗಲೇ ಸ್ಥಾಪಿತವಾದ ಜೀವಮಂಡಲ ಭಂಡಾರ. ಉಳಿದವು. ಸ್ಥಾಪಿಸಲು ಉದ್ದೇಶಿಸಲಾಗಿದೆ.

ಕೋಷ್ಟಕ .೧೧: ನೀಲಗಿರಿ ಜೀವಮಂಡಲ ಭಂಡಾರ (NBR)

ಸ್ಥಾಪನೆ: ಸೆಪ್ಟೆಂಬರ್ ೧೯೮೬          ಸ್ಥಳ: ಪಶ್ಚಿಮ ಘಟ್ಟಗಳು     ಒಟ್ಟು ಕ್ಷೇತ್ರ: ೫೫೨೦ ಚ.ಕಿ.ಮೀ.

ಕ್ರ.
ಸಂ.

ರಾಜ್ಯ

ಕ್ಷೇತ್ರ (ಚ.ಕಿಮೀ)

ಒಳಾವರಣ (ಚ.ಕಿಮೀ)

ಪ್ರವಾಸೋದ್ಯಮ ಕ್ಷೇತ್ರ (ಚ.ಕಿಮೀ)

ಜೀರ್ಣೋದ್ಧಾರ ಕ್ಷೇತ್ರ (ಚ.ಕಿಮೀ)

೧. ಕೇರಳ

೧೪೫೫.೪

೨೬೪.೫

೦.೦

೨೪೫.೯

೨. ಕರ್ನಾಟಕ

೧೫೨೭.೪

೭೦೧.೮

೨೬೯.೨

೩೪೪.೨

೩. ತಮಿಳುನಾಡು

೨೪೩೭.೬

೨೭೪.೧

೬೫.೮

೧೧೬.೩

  ಒಟ್ಟು

೫೫೨೦.೪

೧೨೪೦.೩

೩೩೫.೦

೭೦೬.೪

* * *