ದೇವರ ಕಾಡು (ನಾಗವನ)

ಸಾಮಾನ್ಯವಾಗಿ ನಮ್ಮ ದೇಶದ ಪ್ರತಿಯೊಂದು ಗ್ರಾಮದಲ್ಲಿ, ಸ್ಥಳೀಯ ದೇವರು ಅಥವಾ ದೇವತೆಯ ಹೆಸರಿನಲ್ಲಿ ಕೆಲವು ಸಸ್ಯ-ಪ್ರಾಣಿಗಳನ್ನು ಸಂರಕ್ಷಿಸುತ್ತಾರೆ ಹಾಗೂ ಅವುಗಳನ್ನು ಪೂಜಿಸುತ್ತಾರೆ. ಸಸ್ಯ-ಪ್ರಾಣಿಗಳುಳ್ಳ ಈ ಪೂಜ್ಯನೀಯ ಸ್ಥಳಕ್ಕೆ ದೇವರಕಾಡು ಅಥವಾ ನಾಗವನ (sacred groves) ಎಂದು ಕರೆಯುತ್ತಾರೆ. ಪಶ್ಚಿಮ ಘಟ್ಟಗಳು ಹಾಗೂ ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲಿ ದೇವರ ಕಾಡುಗಳು ಹೆಚ್ಚು. ಯಾಕೆಂದರೆ ಅಲ್ಲಿ ಕಾಡುಗಳು ಹೆಚ್ಚು. ದೇವರ ಕಾಡುಗಳು ನಿತ್ಯಹರಿದ್ವರ್ಣ ಅರಣ್ಯಗಳ ಭಾಗಗಳು. ಆದರೆ ಬಯಲು ಸೀಮೆಯಲ್ಲಿಯ ದೇವರ ಕಾಡುಗಳಲ್ಲಿ ಜೀವಿ ವೈವಿಧ್ಯ ಕಡಿಮೆ. ಸ್ಥಳೀಯ ಜನರಿಗೆ ದೇವರ ಕಾಡುಗಳು ಪೂಜ್ಯನೀಯ. ಸ್ಥಳೀಯ ಜನರು ದೇವರ ಕಾಡುಗಳನ್ನು ದೇವತೆಗಳ ರೂಪದಲ್ಲಿ ಪೂಜಿಸುತ್ತಾರೆ. ಹೀಗಾಗಿ ದೇವರ ಕಾಡುಗಳನ್ನು ತಲೆತಲಾಂತರದಿಂದ ಪೂಜಿಸುತ್ತ ಬಂದಿದ್ದಾರೆ. ದೇವರ ಕಾಡುಗಳಲ್ಲಿ ಅತ್ಯಂತ ವಿರಳವಾದ ಹಾಗೂ ಹೊಸ ಪ್ರಭೇದಗಳನ್ನು ಕಾಣಬಹುದು.(ಚಿತ್ರ ೪.೧)

ಚಿತ್ರ ೪.೧ ನಮ್ಮ ಸಂಪ್ರದಾಯಗಳಿಂದ ಜೀವಿ ವೈವಿಧ್ಯದ ಸಂರಕ್ಷಣೆ

ಕೇರಳ ಮತ್ತು ತಮಿಳುನಾಡಿನಲ್ಲಿ ಅನೇಕ ದೇವರಕಾಡುಗಳಿವೆ. ಅವುಗಳಿಗೆ ಸರ್ಪಕಾವು ಎಂದು ಅವರು ಕರೆಯುತ್ತಾರೆ. ಈ ದೇವರ ಕಾಡುಗಳು ಸರ್ಪಗಳಿಗೆ ಅರ್ಪಣೆ. ಈ ರಾಜ್ಯಗಳ ದೇವರ ಕಾಡುಗಳಲ್ಲಿ ಅಯ್ಯಪ್ಪ ಹಾಗೂ ಅಯ್ಯಾನೂರ ದೇವಾಲಯಗಳಿವೆ. ನಮ್ಮ ರಾಜ್ಯದ ಕೊಡಗಿನಲ್ಲಿ ಸಿಲ್ವನ್‌ದೇವಾಲಯಗಳಿವೆ. ಛೋಟಾ ನಾಗಪುರದಲ್ಲಿಯ ದೇವರ ಕಾಡುಗಳಲ್ಲಿ ಕರಡಿಗಳು ಸಂರಕ್ಷಿತವಾಗಿವೆ.

ದೇವರ ಕಾಡುಗಳಲ್ಲಿ ಅನೇಕ ಜೀವಿ ಪ್ರಭೇದಗಳು ಸಂರಕ್ಷಿತವಾಗಿವೆ. ಆದರೆ ಅವೇ ಪ್ರಭೇದಗಳು ಇತರ ಪ್ರದೇಶಗಳಲ್ಲಿ ಕಣ್ಮರೆಯಾಗುತ್ತಲಿವೆ. ಕುನ್‌ಸ್ಟೆಲೇರಿಯಾ ಕೇರಳೆನ್ಸಿಸ್ (Kunstleria keralansis) ಎಂಬ ಸಸ್ಯವು ದೇವರ ಕಾಡುಗಳಲ್ಲಿ ಮಾತ್ರ ಉಳಿದಿದೆ. ದೇವರ ಕಾಡುಗಳಿಂದ ಹಲವಾರು ಜೀವಿ ಪ್ರಭೇದಗಳು ಉಳಿದುಕೊಂಡಿವೆ. ಅಂದರೆ ದೇವರಕಾಡುಗಳು ಜೀವಿವೈವಿಧ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ದೇವರ ಕಾಡುಗಳು ಕೇವಲ ಅಲ್ಲಿಯ ಪರಿಸರವನ್ನಷ್ಟೇ ರಕ್ಷಿಸುವುದಿಲ್ಲ. ಜೊತೆಗೆ ಸ್ಥಳೀಯ ಜನರಿಗೆ ಉರುವಲು, ಒಣ ಎಲೆ, ಹಾಗೂ ಇತರ ಉತ್ಪನ್ನಗಳನ್ನೂ ಕೊಡುತ್ತವೆ.

ವೈಷ್ಣವಿ ಸಂಸ್ಕೃತಿಯು ೧೫ನೇ ಶತಮಾನದ ಕೊನೆಗೆ ರಾಜಸ್ಥಾನದ ಪಿಪಸಾರ ಗ್ರಾಮದ, ರಜಪೂತ ಸಂತ ಜಂಭೇಶ್ವರ ಮಹಾರಾಜರಿಂದ ಸ್ಥಾಪಿತವಾಯಿತು. ವೈಷ್ಣವಿ ಪಂಥವು ಶಾಖಾಹಾರ, ಜೀವಿಗಳ ಬಗ್ಗೆ ಪೂಜ್ಯ ಭಾವನೆ ಹಾಗೂ ಸಸ್ಯಗಳ ಸಂರಕ್ಷಣೆಯನ್ನು ಭೋದಿಸುತ್ತದೆ. ಹೀಗಾಗಿ ವೈಷ್ಣವಿ ಜನಾಂಗವಿರುವ ಸ್ಥಳವು ಇತರ ಸುತ್ತಲಿನ ಸ್ಥಳಗಳಿಗೆ ಹೋಲಿಸಿದರೆ ಹಚ್ಚ ಹಸಿರಾಗಿರುತ್ತದೆ. ಅಲ್ಲದೆ ಅಲ್ಲಿ ಚಿಂಕಾರಾ ಹಾಗೂ ಹರಿಣಿಗಳು ಜನರೊಂದಿಗೆ ಬೆರೆತು ಬಾಳುತ್ತವೆ.

ವೈಷ್ಣವಿ ಜನರು ತಮ್ಮ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೇಟೆಯಾಡುವುದನ್ನು ಮತ್ತು ಮರ ಕಡಿಯುವುದನ್ನು ನಿಷೇಧಿಸಿದ್ದಾರೆ. ಇಷ್ಟಾದರೂ ಕೂಡ ಸಲ್ಮಾನ್ ಖಾನ್ ಹಾಗೂ ಆತನ ಸ್ನೇಹಿತರು ಈ ಎರಡೂ ಪ್ರಾಣಿಗಳನ್ನು ಕೊಂದು ಮೆರೆದಿದ್ದಾರೆ. ಅಪ್ಪಿಕೋ ಚಳುವಳಿ ಪ್ರಾರಂಭವಾದದ್ದು ವೈಷ್ಣವಿ ಜನರಿಂದಲೇ. ಇಂದಿನ ಪರಿಸರ ಪ್ರಿಯರಿಗೆ ವೈಷ್ಣವಿ ಜನರ ತ್ಯಾಗವೇ ವೇದವಾಗಿದೆ.

ನೈಸರ್ಗಿಕ ಪರಿಸರ, ಅರಣ್ಯ, ಸರೋವರ, ನದಿ ಹಾಗೂ ವನ್ಯಜೀವಿಗಳ ರಕ್ಷಣೆ ಹಾಗೂ ಅಭಿವೃದ್ಧಿ ಪಡಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ ಎಂದು ರಾಷ್ಟ್ರೀಯ ಶಾಸನ ಒಪ್ಪಂದ ೫೧ರಲ್ಲಿ ಬರೆಯಲಾಗಿದೆ. ಕ್ರಿ.ಪೂ. ೪ನೇ ಶತಮಾನದಿಂದಲೂ ಸಸ್ಯ ಪ್ರಾಣಿಗಳನ್ನು ರಕ್ಷಿಸುವಲ್ಲಿ ನಮ್ಮ ಪೂರ್ವಜರು ಆಸಕ್ತಿವಹಿಸಿ ಉದ್ಯಾನವನ ಹಾಗೂ ಅಭ್ಯಯಾರಣ್ಯಗಳನ್ನು ಸ್ಥಾಪಿಸಿದ್ದರು. ವನ್ಯ ಜೀವಿಗಳಿಗೆ ಕಾನೂನು ರೀತ್ಯ ರಕ್ಷಣೆ ಒದಗಿಸುವಲ್ಲಿ ೧೯೭೨ರಲ್ಲಿ ಕೇಂದ್ರೀಯ ಶಾಸನವನ್ನು ಜಾರಿಗೆ ತರಲಾಯಿತು (ಕೋಷ್ಟಕ ೪.೧) ಮತ್ತು ೪.೪). ವಿಶೇಷವಾಗಿ ಅಳಿವಿನ ಅಂಚಿಗೆ ಬಂದ ವನ್ಯ ಜೀವಿಗಳಿಗೆ ರಕ್ಷಣೆ ನೀಡಲು ಈ ಶಾಸನ ಹೆಚ್ಚು ಸಹಕಾರಿಯಾಗಿದೆ. ಈ ಕಾಯ್ದೆಗೆ ೧೯೯೧ರಲ್ಲಿ ವಿಶೇಷ ತಿದ್ದುಪಡಿಯನ್ನು ಮಾಡಿ, ಈ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಉಗ್ರ ಶಿಕ್ಷೆಯನ್ನು ಶಿಫಾರಸುಮಾಡಲಾಗಿದೆ.

ಕೊಷ್ಟಕ . ಭಾರತದಲ್ಲಿ ಜೀವಿವೈವಿಧ್ಯದ ಕಾನೂನಿನ ಅವಕಾಶಗಳ ವಿವಿಧ ರೂಪಗಳು

ಕ್ರ ಸಂ

ಬೆಳೆಸಿದ/ಸಾಕಿದ

ವನ್ಯ

ಸಸ್ಯ ಪ್ರಾಣಿ ಸಸ್ಯ ಪ್ರಾಣಿ
೧. ಗುರುತಿಸುವಿಕೆ x x x x
ಉದ್ದರಣೆ x x
೩. ಉಪಯೋಗ x *
೪. ವ್ಯಾಪಾರ * * *
೫. ತಳಿ ಅಭಿವೃದ್ಧಿ/ದ್ವಿಗುಣಗೊಳಿಸುವಿಕೆ *
೬. ತಿರುಗಾಟ *
೭. ಪೀಠಿಕೆ
೮. ಭೌದ್ಧಿಕ ಆಸ್ತಿ ಹಕ್ಕುಗಳು x x x x
೯. ಸ್ವಸ್ಥಾನೀಯ ಸಂರಕ್ಷಣೆ x x * *
೧೦. ಅನ್ಯಸ್ಥಾನೀಯ ಸಂರಕ್ಷಣೆ x x *

* ಪೂರ್ಣ ರಕ್ಷಣೆ     ೦ ಅರೆರಕ್ಷಣೆ      x ರಕ್ಷಣೆಗೊಳಪಟ್ಟಿಲ್ಲ

ಅಳಿವಿನ ಅಂಚಿಗೆ ಬಂದಿರುವ ವನ್ಯ ಸಸ್ಯಪ್ರಾಣಿಗಳ ಅಂತರರಾಷ್ಟ್ರೀಯ ವ್ಯಾಪಾರೀ ಒಪ್ಪಂದ (ಸೈಟ್ಸ್-CITES-Convention on Internal Trade in Endangered Species) ವನ್ನು ೧೯೭೫ರಲ್ಲಿ ಎಲ್ಲ ರಾಷ್ಟ್ರಗಳು ಒಪ್ಪಿಕೊಂಡವು. ಈ ಒಪ್ಪಂದದ ಪ್ರಕಾರ ಭೂಮಿಯ ಮೇಲೆ ಅಪರೂಪದ ಸಸ್ಯ ಪ್ರಾಣಿಗಳಿವೆ. ಇವುಗಳನ್ನು ನಾವು ಒಮ್ಮೆ ಕಳೆದುಕೊಂಡರೆ ಮತ್ತೆ ಅವನ್ನು ನಾವು ತಿರುಗಿ ಪಡೆಯಲು ಸಾಧ್ಯವಿಲ್ಲ. ನಮ್ಮ ಮುಂದಿನ ಉಪಯೋಗಕ್ಕೆ ಈ ಜೀವಿಸಂಕುಲ ಬೇಕೇಬೇಕು. ತಮ್ಮ ತಮ್ಮ ರಾಷ್ಟ್ರಗಳಲ್ಲಿರುವ, ಅಳಿವಿನಂಚಿನಲ್ಲಿರುವ ಸಸ್ಯ ಪ್ರಾಣಿಗಳನ್ನು ಉಳಿಸಿಕೊಳ್ಳಲೇಬೇಕಾದ ಪ್ರಸಂಗ ಬಂದಿದೆ. ಈ ಕಾರ್ಯವನ್ನು ‘ಸೈಟ್ಸ್’ದ ಸಹಾಯದಿಂದ ಮಾಡಬಹುದು. ನಮ್ಮ ದೇಶದಲ್ಲಿ ಸಾಕಷ್ಟು ಸಸ್ಯ ಪ್ರಭೇದಗಳನ್ನು ಸಂಗ್ರಹಿಸಿಡಲಾಗಿದೆ. (ಕೋಷ್ಟಕ ೪.೨, ೪.೩ ಮತ್ತು ೪.೪)

ಕೋಷ್ಟಕ೪. ರಾಷ್ಟ್ರೀಯ ಸಸ್ಯ ಅನುವಂಶಿಕ ಸಂಪನ್ಮೂಲ ಇಲಾಖೆ, ಹೊಸದೆಹಲಿಯಲ್ಲಿ ರತಕ್ಕಂಥ ಸಂಗ್ರಹಣೆ

ಕ್ರ ಸಂ

ಬೆಳೆಯ ಗುಂಪು

ಲಭ್ಯವುಳ್ಳ ಸಂಖ್ಯೆ

೧. ಏಕದಳ ಧಾನ್ಯಗಳು

೩೭,೫೩೬

೨. ಬೇಳೆಕಾಳುಗಳು

೨೧,೭೪೫

೩. ಮಿಲ್ಲೆಟ್‌ಗಳು

೧೩,೪೧೦

೪. ಎಣ್ಣೆ ಬೀಜಗಳು

೧೩,೦೬೩

೫. ತರಕಾರಿ

೩,೮೩೯

೬. ನಾರು

೨,೬೦೯

೭. ಔಷಧೀಯ ಹಾಗೂ ಸುಗಂಧೀಯ ಸಸ್ಯಗಳು

೧೩೮

೮. ನಿದ್ರಾಜನಕಗಳು

೬೬೫

೯. ಮಿಥ್ಯ ಏಕದಳ ಧಾನ್ಯಗಳು

೬೩೫

೧೦. ಅಭಿವೃದ್ಧಿ ಪಡಿಸಿದ ತಳಿಗಳು

೧೯,೭೯೬

೧೧. ಸುಧಾರಿತ ತಳಿಗಳು

೧೯೭೮೬

೧೨. ಹೊರಗಿನಿಂದ ತಂದ ಮಾದರಿ

೧೯,೭೮೬

  ಒಟ್ಟು

೧,೧೩,೮೨೨

 ಕೋಷ್ಟಕ . ರಾಷ್ಟ್ರೀಯ ಸಸ್ಯ ಅನುವಂಶಿಕ ಸಂಪನ್ಮೂಲ ಇಲಾಖೆ, ಹೊಸ ದೆಹಲಿಯಲ್ಲಿರುವ ವಿವಿಧ ಬೆಳೆಗಳ ದಾಖಲೆ (೧೯೮೦ರವರೆಗೆ)

ಕ್ರ ಸಂ

ಗುಂಪು

ವೈವಿಧ್ಯಗಳ ಸಂಖ್ಯೆ

ಬೆಳೆಗಳು
೧. ಭತ್ತ

೬೨೦೦

೨. ಗೋದಿ

೧೪೦೦

೩. ಓಟ್

೧೦೦೦

೪. ಮೆಕ್ಕೆಜೋಳ

೫೦೦

೫. ಬಾರ್ಲಿ

೭೦೦

೬. ಜೋಳ

೯೧೫

೭. ಸಜ್ಜೆ

೨೬೯೦

೮. ಬರಗು

೨೭೦

೯. ಬರ್ಸಿಮ್‌ ಮೇವು ಬೆಳೆ

೪೦

೧೦. ಕಡಲೆ

೮೧೬

೧೧. ತೊಗರಿ

೧೭೭೨

೧೨. ಮಾಸೂರು ಬೇಳೆ

೩೨೫

೧೩. ವಠಾಣಿ (ಬಟಾಣಿ)

೧೮೨೫

೧೪. ಅಲಸಂದೆ

೨೫೨೩

೧೫. ಚವಳಿ/ಗೋರಿಕಾಯಿ

೩೫೮೦

೧೬. ಹೆಸರು

೧೩೬೭

೧೭. ರೈಸ್ ಬೀನ್

೪೦೦

೧೮. ಉದ್ದು

೧೪೧೪

೧೯. ಚಮಚೆ ಬಳ್ಳಿ

೯೩

೨೦. ಕೆಂಪು ಸಾಸಿವೆ

೯೮

೨೧. ಸೆಣಬು ಮತ್ತು ಹತ್ತಿ

೨೦೦

೨೨. ಕಬ್ಬು

೮೦೦

ಹಣ್ಣುಗಳು
೨೩. ಸೇಬು

೧೨

೨೪. ಬಾರೆ

೧೬

೨೫. ಗೂಸ್‌ಬೆರ‍್ರಿ

೨೬. ದ್ರಾಕ್ಷಿ

೨೭. ಪಿಯರ್

೨೮. ಪೀಟ್

೧೫

೨೯. ಪ್ಲಮ್

೩೦ ದಾಳಿಂಬೆ

೪೯

ತರಕಾರಿಗಳು
೩೧. ಬದನೆ

೮೨೧

೩೨. ಮೆಣಸಿನಕಾಯಿ

೧೯೫

೩೩. ಹೀರೆಕಾಯಿ ಜಾತಿ

೯೨

೩೪. ಬೆಳ್ಳುಳ್ಳಿ

೬೮೦

೩೫. ಈರುಳ್ಳಿ

೧೦೯೧

೩೬. ಓಕ್ರಾ

೧೦೪೫

೩೭. ಸೆಮ್

೧೩೬೧

೩೮. ಟೊಮ್ಯಾಟೊ

೧೭೫೦

 ಕೋಷ್ಟಕ . ಜೀವಿವೈವಿಧ್ಯಕ್ಕೆ ಸಂಬಂಧಪಟ್ಟ ಅಂತರರಾಷ್ಟ್ರೀಯ ಗ್ರಂಥ

 

ಕ್ರ ಸಂ

ಒಡಂಬಡಿಕೆ

ಭಾರತದಿಂದ ಕಾಯಂಮಾಡಿದ ದಿನಾಂಕ

೧. ಸಸ್ಯ-ಪ್ರಾಣಿಗಳನ್ನು ತಮ್ಮ ನೈಸರ್ಗಿಕ ಆವಾಸಗಳಲ್ಲಿ ಸಂರಕ್ಷಿಸುವ ಒಡಂಬಡಿಕೆ. ಸ್ವೀಕಾರ ಮಾಡಿದ ದಿನಾಂಕ ೮.೧೧.೧೯೩೯, ಲಂಡನ್

೯.೧೧.೧೯೩೯

೨. ಅಂತರರಾಷ್ಟ್ರೀಯ ತಿಮಿಂಗಿಲ ಬೇಟೆಯ ಒಡಂಬಡಿಕೆ ನಿಬಂಧನೆ, ೨.೧೨.೧೯೪೬, ವಾಷಿಂಗ್‌ಟನ್

೨.೧೨.೧೯೮೧

೩. ಅಂತರರಾಷ್ಟ್ರೀಯ ಸಸ್ಯ ಸಂರಕ್ಷಣೆಯ ಒಡಂಬಡಿಕೆ, ೬.೧೨.೧೯೫೧, ರೋಮ್

೯.೬.೧೯೫೨

೪. ಅಂತರರಾಷ್ಟ್ರೀಯ ತೈಲದಿಂದಾಗುವ ಸಮುದ್ರಮಾಲಿನ್ಯ ತಡೆಯುವ ಒಂಡಬಡಿಕೆ ೧೨.೫.೧೯೫೪, ಲಂಡನ್

೨೩.೫.೧೯೬೨

೫. ಆಗ್ನೇಯ ಏಸಿಯಾ ಹಾಗೂ ಪ್ಯಾಸಿಫಿಕ್ ಪ್ರದೇಶಗಳಲ್ಲಿಯ ಸಸ್ಯ ಸಂರಕ್ಷಣೆ ಒಪ್ಪಂದ ೨೭.೨.೧೯೫೬, ರೋಮ್

೨.೭.೧೯೫೬

೬. ಅಂಟಾರ್ಕ್‌ಟಿಕ್ ಒಡಂಬಡಿಕೆ ೧.೧೨.೧೯೫೯, ವಾಷಿಂಗ್‌ಟನ್

೧೯.೮.೧೯೮೩

೭. ವಾತಾವರಣ ಹಾಗೂ ನೀರಿನೊಳಗೆ ಅಣ್ವಸ್ತ್ರ ಪರೀಕ್ಷೆ ನಿಷೇಧ ಒಂಡಂಬಡಿಕೆ, ೫.೮.೧೯೬೩, ಮಾಸ್ಕೊ

೧೦.೧೦.೧೯೬೩

೮. ನೀರಿನ ಪಕ್ಷಿಗಳು ನೆಲೆಸಿರುವ ತರಿಭೂಮಿ ಒಡಂಬಡಿಕೆ ೨.೨.೧೯೭೧, ರಾಮ್‌ಸರ್

೧.೨.೧೯೮೨

೯. ಜಾಗತಿಕ ಸಾಂಸ್ಕೃತಿಕ ಹಾಗೂ ನೈಸರ್ಗಿಕ ಪಿತ್ರಾರ್ಜಿತ ರಕ್ಷಣೆ ಒಡಂಬಡಿಕೆ ೨೩.೧೧.೧೯೭೨, ಪ್ಯಾರಿಸ್

೧೪.೨.೧೯೭೮

೧೦. ಅಂತರರಾಷ್ಟ್ರೀಯ ಅಳಿವಿನಂಚಿನಲ್ಲಿರುವ ವನ್ಯ ಸಸ್ಯ-ಪ್ರಾಣಿಗಳ ವ್ಯಾಪಾರ ಒಡಂಬಡಿಕೆ, ೩,೩,೧೯೭೩, ವಾಷಿಂಗ್‌ಟನ್

೧೮.೧೦.೧೯೭೬

೧೧. ವಲಸೆಹೋಗುವ ವನ್ಯಪ್ರಾಣಿಪ್ರಭೇದಗಳ ಸಂರಕ್ಷಣೆ ಒಡಂಬಡಿಕೆ ೨೩.೬.೧೯೭೯, ಬಾನ್

೧.೧೧.೧೯೮೩

೧೨. ಅಂಟಾರ್ಕಟಿಕ್‌ದಲ್ಲಿ ನೆಲೆಸಿರುವ ಸಮುದ್ರ ಜೀವಿಗಳ ಸಂರಕ್ಷಣೆ ಒಡಂಬಡಿಕೆ, ೨೦.೫.೧೯೮೦, ಕ್ಯಾನ್‌ಬೆರಾ

೧೭.೭.೧೯೮೫

೧೩. ನೀರಿನ ಪಕ್ಷಿಗಳು ನೆಲೆಸಿರುವ ತರಿಭೂಮಿಯ ಸಂರಕ್ಷಣೆ ಒಡಂಬಡಿಕೆಯ ಮಾರ್ಪಾಟು ಮಾಡುವ ಒಪ್ಪಂದ, ೩.೧೨.೧೯೮೨, ಪ್ಯಾರಿಸ್

೯.೩.೧೯೮೪

೧೪. ಯುನೈಟೆಡ್ ರಾಷ್ಟ್ರದ ಸಮುದ್ರ ಕಾಯ್ದೆಯ ಒಡಂಬಡಿಕೆ, ೧೦.೧೨.೧೯೮೨, ಮೊಂಟೆಗೊ ಬೆ

೧೦.೧೨.೧೯೮೨

೧೫. ಅಂತರರಾಷ್ಟ್ರೀಯ ಉಷ್ಣವಲಯದ ಚೌಬಿನೆ ಒಪ್ಪಂದ ೧೯.೧೧.೧೯೮೩, ಜಿನೆವಾ

೧.೪.೧೯೮೫

೧೬. ಹಾನಿಕಾರಕ ತ್ಯಾಜ್ಯಗಳ ನಿರ್ವಹಣೆ ಒಪ್ಪಂದ ೨೨.೩.೧೯೮೯

೧೫.೩.೧೯೮೯

ನಮ್ಮ ದೇಶದಲ್ಲಾಗುತ್ತಿರುವ ಜನಸಂಖ್ಯಾ ಸ್ಫೋಟದಿಂದ ನಾವು ಸಂಪನ್ಮೂಲಗಳನ್ನು ಹೆಚ್ಚು ಬಳಸುವ ಪರಿಸ್ಥಿತಿ ಬಂದಿದ್ದು ಪರಿಸರ ನಾಶವಾಗುತ್ತಲಿದೆ. ಇದರಿಂದ ವನ್ಯಜೀವಿಗಳ ನೆಲೆ ನಾಶವಾಗುತ್ತಲಿದೆ. ಅನೇಕ ವನ್ಯ ಪ್ರಾಣಿ ಸಸ್ಯಗಳು ಅಳಿವಿನ ಅಂಚಿಗೆ ಸಂದಿವೆ. ಇಂಥ ಸಸ್ಯ ಪ್ರಾಣಿಗಳನ್ನು ಉಳಿಸಿಕೊಳ್ಳಲು ಅನೇಕ ಕಾರ್ಯಕ್ರಮ/ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಳಿವಿನಂಚಿನಲ್ಲಿರುವ ಪ್ರಾಣಿ, ಇತರ ಪ್ರಾಣಿಗಳು ಹಾಗೂ ಅವುಗಳ ಆವಾಸ, ಸಂರಕ್ಷಣೆಗಾಗಿ ನಮ್ಮ ದೇಶದಲ್ಲಿ ೭೫ ರಾಷ್ಟ್ರೀಯ ಉದ್ಯಾನಗಳು ಮತ್ತು ೪೨೧ ಅಭಯಾರಣ್ಯಗಳನ್ನು ನಿರ್ಮಿಸಲಾಗಿದೆ. ಈ ತಾಣಗಳ ಒಟ್ಟು ವಿಸ್ತೀರ್ಣ ದೇಶದ ಸೇಕಡಾ ೪೨ರಷ್ಟು (ಕೋಷ್ಟಕ ೪.೫) ಮತ್ತು ಕೋಷ್ಟಕ ೪.೫ಅ).

ಕೋಷ್ಟಕ . ರಾಷ್ಟ್ರೀಯ ಉದ್ಯಾನಗಳು ಹಾಗೂ ಅಭಯಾರಣ್ಯಗಳು (೧೯೮೮)

ಕ್ರ ಸಂ ರಾಜ್ಯ ಅಭಯಾ ರಣ್ಯಗಳು ಅಭ್ಯಯಾರಣ್ಯಗಳ ಕ್ಷೇತ್ರ (ಚ.ಕಿಮೀ) ರಾಷ್ಟ್ರೀಯ ಉದ್ಯಾನಗಳು ರಾಷ್ಟ್ರೀಯ ಉದ್ಯಾನಗಳ ಕ್ಷೇತ್ರ (ಚ.ಕಿಮೀ)
೧. ಅಂದಮಾನ್ ಮತ್ತು ನಿಕೋಬಾರ್

೯೪

೪೫೫.೦೦

೩೬೧.೦೦

೨. ಆಂಧ್ರಪ್ರದೇಶ

೧೬

೯೬೭೨.೦೦

೩. ಅರುಣಾಚಲಪ್ರದೇಶ

೧೪೭೪.೦೦

೨೩೦೭.೦೦

೪. ಆಸ್ಸಾಮ್

೫೫೧

೪೨೦

೫. ಬಿಹಾರ

೧೪

೩೦೮೫

೯೭೯

೬. ಚಂಡಿಗಡ

೨೫

೭. ದಿಲ್ಲಿ

೧೩

೮. ಗೋವಾ

೨೬೩

೧೦೭

೯. ಗುಜರಾತ

೧೨

೧೬೮೨

೫೮೦

೧೦. ಹರಿಯಾನ

೧೩೦

೧೧. ಹಿಮಾಚಲ ಪ್ರದೇಶ

೨೮

೨೪೭೮

೨೪೧೧

೧೨. ಜಮ್ಮು ಮತ್ತು ಕಾಶ್ಮೀರ

೧೩

೫೩೦೯

೩೮೧೦

೧೩. ಕರ್ನಾಟಕ

೧೮

೩೭೮೫

೨೪೦೦

೧೪. ಕೇರಳ

೨೭೧

೯೬೩

೧೫. ಮಧ್ಯಪ್ರದೇಶ

೩೧

೨೨,೪೭೫

೧೧

೬೨೮೩

೧೬. ಮೇಘಾಲಯ

೨೯

೨೮೮

೧೭. ಮಣಿಪುರ

೮೧

೧೮. ಮಹಾರಾಷ್ಟ್ರ

೧೧

೧೨,೮೬೭

೨೧೭೩

೧೯. ಮಿಜೋರಾಮ್

೬೮೧

೨೦. ನಾಗಾಲ್ಯಾಂಡ್

೨೨೩

೨೧. ಒರಿಸ್ಸಾ

೧೬

೬೭೨೭

೩೦೩

೨೨. ಪಂಜಾಬ

೨೫೩

೨೩. ರಾಜಸ್ಥಾನ

೨೧

೫೫೦೯

೩೮೫೬

೨೪. ಸಿಕ್ಕಿಂ

೯೬

೮೫೦

೨೫. ತಮಿಳುನಾಡು

೧೦

೨೬೫೪

೨೬. ತ್ರಿಪುರಾ

೧೮೯

೨೭. ಉತ್ತರ ಪ್ರದೇಶ

೧೪

೬೭೮೫

೨೫೬೦

೨೮. ಪಶ್ಚಿಮ ಬಂಗಾಲ

೧೬

೧೪೭೬

೨೭೫೧

  ಒಟ್ಟು

೩೬೮

೧,೦೭,೩೧೦

೬೬

೩೩,೯೮೮

  ಜೂನ್‌೯೨ರವರೆಗೆ

೪೧೬

೭೩

 ಕೋಷ್ಟಕ . : ಕರ್ನಾಟಕದಲ್ಲಿಯ ರಾಷ್ಟ್ರೀಯ ಉದ್ಯಾನಗಳು/ಅಭಯಾರಣ್ಯಗಳು

ಕ್ರ ಸಂ ರಾಷ್ಟ್ರೀಯ ಉದ್ಯಾನಗಳು/ಅಭಯಾರಣ್ಯ ವಿಸ್ತೀರ್ಣ(ಚ.ಕಿಮೀ) ಪ್ರದೇಶ
೧. ರಂಗನತಿಟ್ಟು ಪಕ್ಷಿಧಾಮ ೦.೬೭ ಮೈಸೂರು
೨. ಅರಬೀತಿಟ್ಟು ೧೩.೫೦ ಮೈಸೂರು
೩. ಬ್ರಹ್ಮಗಿರಿ ಅಭಯಾರಣ್ಯ ೧೮೧.೨೯ ಮಡಿಕೇರಿ
೪. ನಗು ಅಭಯಾರಣ್ಯ ೩೦.೩೨ ಮೈಸೂರು
೫. ಮೇಲುಕೋಟೆ ದೇವಸ್ಥಾನ ಅಭಯಾರಣ್ಯ ೪೯.೮೦ ಮಂಡ್ಯ
೬. ಬಿಳಿಗಿರಿ ರಂಗನತಿಟ್ಟು ಗುಡ್ಡಗಳ ಅಭಯಾರಣ್ಯ ೫೩೯.೫೩ ಮೈಸೂರು
೭. ನಾಗರಹೊಳೆ ರಾಷ್ಟ್ರೀಯ ಉದ್ಯಾನ ೫೭೧.೫೫ ಮೈಸೂರು, ಮಡಿಕೇರಿ
೮. ಆದಿಚುಂಚನಗಿರಿ ನವಿಲು ಅಭಯಾರಣ್ಯ ೦.೮೪ ಮಂಡ್ಯ
೯. ಕಾವೇರಿ ಅಭಯಾರಣ್ಯ ೫೧೦.೫೨ ಮೈಸೂರು
೧೦. ಪುಷ್ಪಗಿರಿ ಅಭಯಾರಣ್ಯ ೧೦೨.೬೦ ಮಡಿಕೇರಿ
೧೧. ತಲಕಾವೇರಿ ಅಭಯಾರಣ್ಯ ೧೦೫.೦೧ ಮಡಿಕೇರಿ
೧೨. ಸೋಮೇಶ್ವರ ಅಭಯಾರಣ್ಯ ೮೮.೪೦ ದಕ್ಷಿಣ ಕನ್ನಡ
೧೩. ಮೂಕಾಂಬಿಕಾ ಅಭಯಾರಣ್ಯ ೨೪೭.೦೦ ದಕ್ಷಿಣ ಕನ್ನಡ  
೧೪. ಶರಾವತಿ ಕಣಿವೆ ಅಭಯಾರಣ್ಯ ೪೨೧.೨೩ ಶಿವಮೊಗ್ಗ
೧೫. ಶೆಟ್ಟಹಳ್ಳಿ ಅಭಯಾರಣ್ಯ ೩೯೫.೬೦ ಶಿವಮೊಗ್ಗ
೧೬. ಭದ್ರಾಅಭಯಾರಣ್ಯ ೪೯೨.೪೬ ಚಿಕ್ಕಮಗಳೂರು, ಶಿವಮೊಗ್ಗ
೧೭. ಕುದುರೆಮುಖ ರಾಷ್ಟ್ರೀಯ ಉದ್ಯಾನ ೬೦೦.೦೦ ಚಿಕ್ಕಮಗಳೂರು
೧೮. ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ ೧೧೯.೦೦ ಹಾವೇರಿ
೧೯. ದಾಂಡೇಲಿ ಅಭಯಾರಣ್ಯ ೮೩೪.೧೬ ಉತ್ತರ ಕನ್ನಡ
೨೦. ಘಟಪ್ರಭ ಪಕ್ಷಿಧಾಮ ೨೯.೭೯ ಬೆಳಗಾವಿ
೨೧. ಅನಿಸಿ ರಾಷ್ಟ್ರೀಯ ಉದ್ಯಾನ ೨೫೦.೦೦ ಉತ್ತರಕನ್ನಡ
೨೨. ಭನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ೧೦೪.೩೪ ಬೆಂಗಳೂರು ಜಿಲ್ಲೆ
೨೩. ಬಂಡಿಪುರ ರಾಷ್ಟ್ರೀಯ ಉದ್ಯಾನ ೮೬೬.೦೦ ಮೈಸೂರು
  ಒಟ್ಟು ೬೫೫೩.೬೧  

 ವಿಶೇಷಯೋಜನೆಗಳು

ಭಾರತದಲ್ಲಿ ಅನೇಕ ಪ್ರಾಣಿಗಳು ಹೆಚ್ಚು ಒತ್ತಡಕ್ಕೆ ಒಳಗಾಗಿ ಅಳಿವಿನ ಅಂಚಿಗೆ ಸರಿಯುತ್ತಲಿದ್ದು, ಅವುಗಳ ಸಂರಕ್ಷಣೆಗೆ ವಿಶೇಷ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.

೧. ಹುಲಿಯೋಜನೆ (೧೯೭೩) (ಕೋಷ್ಟಕ ೪.೬, ೪.೭)
೨. ಗಿರ್ ಸಿಂಹಧಾಮ ಯೋಜನೆ (೧೯೭೨)
೩. ಹಿಮಾಲಯದ ಕಸ್ತೂರಿ ಜಿಂಕೆಗಳ ಯೋಜನೆ (ಕೋಷ್ಟಕ ೪.೭)
೪. ಮಣಿಪುರದ ಜಿಂಕೆ ಯೋಜನೆ (೧೯೭೭) ಕೋಷ್ಟಕ ೪.೭)
೫. ಹಾಂಗಲ್ ಯೋಜನೆ
೬. ಮೊಸಳೆ ಮರಿ ಯೋಜನೆ (೧೯೭೫) (ಕೋಷ್ಟಕ ೪.೭)
೭. ಆನೆ ಯೋಜನೆ (೧೯೯೨)
೮. ಘೇಂಡಾ ಮೃಗ ಯೋಜನೆ (೧೯೮೭)
೯. ಹಿಮಚಿರತೆ ಯೋಜನೆ

ಕೋಷ್ಟಕ . ಹುಲಿ ಸಂರಕ್ಷಣಾ ಧಾಮಗಳಲ್ಲಿಯ ಪ್ರಾಣಿ ವೈವಿಧ್ಯ

ಕ್ರ ಸಂ

ಹುಲಿಧಾಮ

ಪ್ರಾಣಿ ಗಳು

ಪಕ್ಷಿಗಳು

ಸರೀ ಸೃಪಗಳು

ಉಭಯ ವಾಸಿಗಳು

ಮೀನು

ಅಕ ಶೇರುಕ

೧. ಬಂಡೀಪುರ

೩೧

೧೬೬

೨. ಬುಕ್ಸಾ

೬೨

೨೧೪

೩೫

೬೨

೩. ಕಾರ್ಬೆಟ್

೫೦

೪೭೦

೪೦

೨೯

೧೮೧

೪. ದುದ್ವಾ

೫೧

೩೭೫

೧೪

೧೫

೯೦

೫೩

೫. ಕನ್ಹಾ

೬೩

೨೨೫

೧೦

೨೮

೬. ಮಾನಸ

೭೬

೩೧೫

೪೨

೫೪

೯೧

೭. ಮೇಲ್ಘಾಟ

೨೭

೨೫೨

೮. ಮುಂದನಥುರೈ

೩೮

೧೬೫

೬೯

೨೬

೯. ನಾಗಾರ್ಜುನ ಸಾಗರ

೪೩

೨೯೫

೩೧

೨೧

೧೦. ನಮ್‌ದಾಫ್

೯೬

೨೩೪

೨೯

೨೫

೭೬

೧೬೭

೧೧. ಪಲಾಮಾವು

೪೭

೧೭೦

೧೧

೧೨೧

೧೨. ಪೆಂಚ್

೩೮

೧೬೮

೧೩

೧೮

೧೩. ಪೆರಿಯಾರ್

೬೬

೨೬೪

೩೨೬

೧೪

೫೦

೧೪. ರನ್‌ಥಂಬೋರ್

೩೪

೨೫೬

೧೧

೨೫

೧೫. ಸರಿಸ್ಕಾ

೨೩

೧೦೦

೨೫

೧೬. ಸಿಂಪ್ಲಿಪಾಲ್

೪೬

೨೫೦

೨೯

೧೭. ಸುಂದರಬನ್

೩೫

೨೬೦

೫೭

೧೨೩

೧೨೫

೧೮. ವಾಲ್ಮಿಕಿ

೨೮

೧೦೩

ಕೋಷ್ಟಕ . ಬೆಂಗಳೂರಿನಲ್ಲಿನ ಚರ್ಮಗಳ ವ್ಯಾಪಾರಿಗಳಿಂದ ವಶಪಡಿಸಿಕೊಂಡು ಸರಕಾರಕ್ಕೆ ಮುಟ್ಟುಗೋಲು ಹಾಕಿದ ಚರ್ಮಗಳ ವಿವರಣೆ ಹಾಗೂ ಅವುಗಳ ಬೆಲೆ ೧೯೭೪)

ಕ್ರ ಸಂ

ಪ್ರಾಣಿಯ ಚರ್ಮ

ಸಂಖ್ಯೆ

ಬೆಲೆ ರೂ.

ಶರಾ

೧. ಹುಲಿ

೨೫,೦೦೦

ತಲೆಬುರುಡೆ ಸಹಿತ
೨. ಚಿರತೆ

೯೩೦೦

೧ತಲೆ ಬುರುಡೆ ಸಹಿತ
೩. ಕಾಡುಬೆಕ್ಕು

೧೫೦

೪. ಹೆಬ್ಬಾವು

೬೨೭

೯೪,೫೦೦

೫. ಮೊಸಳೆ

೧೭೨

೩೪,೦೦೦

೬. ಉಡ

೪೫೦೦

೪೫೦೦

೭. ಜಿಂಕೆಗಳು

೧೪೬

೧೯,೯೫೦

ಚುಕ್ಕೆ ಜಿಂಕೆ, ಕಾಡುಕುರಿ, ಕೃಷ್ಣಮೃಗ, ಇಲಿ ಜಿಂಕೆ, ಮುಂತಾದವು
೮. ಕಡವೆ

೨೨

೫೫೦೦

೯. ನೀರುನಾಯಿ

೨೨೨

೬೬೫೦

೧೦. ಕರಡಿ

೧೯,೦೦೦

೧೧. ಚರ್ಮಗಳಿಂದ ತಯಾರಾದ ವಸ್ತುಗಳು

೩೪

೧೩,೧೦೦

ಹೆಂಗಸರ ವ್ಯಾನಿಟಿ ಬ್ಯಾಗ್, ಕೋಟುಗಳು, ಪರ್ಸ್, ಪೆಟ್ಟಿಗೆಗಳು, ಮುಂತಾದವು
  ಒಟ್ಟು ಬೆಲೆ ರೂ. ೨,೪೧,೨೦೦.೦೦