ಹುಲ್ಲುಗಾವಲುಗಳು

ಭೂಮಿಯ ಮೇಲೆ ಸುಮಾರು ಸೇಕಡಾ ೨೦.೭ರಷ್ಟು ಹುಲ್ಲುಗಾವಲುಗಳಿವೆ. ಅವುಗಳ ಒಟ್ಟುವಿಸ್ತಾರ ೩.೧೩ ಕೋಟಿ ಚ.ಕಿಮೀಗಳು. ಮಾನವನ ಚಟುವಟಿಕೆ ಹಾಗೂ ದನಕರುಗಳ ದಾಳಿಗೆ ಮೊದಲು ಭೂಮಿಯ ಮೇಲೆ ಸುಮಾರು ಸೇಕಡಾ ೪೦ರಷ್ಟು ಹುಲ್ಲುಗಾವಲುಗಳಿದ್ದವು. ೨.೪೬ ಕೋಟಿ ಚ.ಕಿಮೀದಷ್ಟು ಸವಾನಾ ಮತ್ತು ೬೦.೭೦ ಲಕ್ಷ ಚ.ಕೀಮೀಗಳಷ್ಟು ಸಮಶೀತೋಷ್ಣ ಹುಲ್ಲುಗಾವಲು ಭೂಮಿಯ ಮೇಲಿದೆ (ಕೋಷ್ಟಕ ೩.೮).

ಕೋಷ್ಟಕ . ಪ್ರಪಂಚದ ಹುಲ್ಲುಗಾವಲಿನ ಕ್ಷೇತ್ರ

ಕ್ರ ಸಂ

ಹುಲ್ಲುಗಾವಲು ಪ್ರದೇಶ

ಮಿಲಿಯನ್ ಚ.ಕಿಮೀ (೧೯೭೫)

ಮಿಲಿಯನ್ ಚ.ಕಿಮೀ (೧೯೮೩)

೧. ಸವಾನಾ

೧೫.೦

೨೪.೬

೨. ಸಮಶೀತೋಷ್ಣ ಹುಲ್ಲುಗಾವಲು

೯.೦

೬.೭

೩. ಒಟ್ಟು ಹುಲ್ಲುಗಾವಲು

೨೪.೦

೩೧.೩

೪. ಪ್ರಪಂಚದ ಸೇಕಡಾವಾರು ಕ್ಷೇತ್ರ

೧೬.೧%

೨೦.೭%

ಉಷ್ಣವಲಯದ ಸವಾನಾದಲ್ಲಿ ೧೦೦-೧೫೦ ಸೆಮೀ.ದಷ್ಟು ಮಳೆಯಾಗುತ್ತದೆ. ಇಲ್ಲಿ ಶುಷ್ಕಕಾಲವೂ ಹೆಚ್ಚು. ಸವಾನಾ ಹುಲ್ಲುಗಾವಲು ಆಫ್ರಿಕ, ದಕ್ಷಿಣ ಅಮೇರಿಕ ಹಾಗೂ ಆಸ್ಟ್ರೇಲಿಯಾಗಳಲ್ಲಿ ಹೆಚ್ಚು. ಸಮಶೀತೋಷ್ಣ ಹುಲ್ಲುಗಾವಲುಗಳಲ್ಲಿ ಮಳೆ ಬಹಳ ಕಡಿಮೆ. ಇಲ್ಲಿ ವರ್ಷಕ್ಕೆ ೨೫-೭೫ ಸೆಮೀ ದಷ್ಟು ಮಳೆಯಾಗುತ್ತದೆ.

ಪುರಾತನ ಸಂಸ್ಕೃತಿಗಳು ಹುಟ್ಟಿಕೊಂಡಿದ್ದು ಹುಲ್ಲುಗಾವಲಿದ್ದ ಸ್ಥಳಗಳಲ್ಲಿ. ಅವು ಮಾನವನ ಸಾಕು ಪ್ರಾಣಿಗಳಿಗೆ ಆಹಾರ ಒದಗಿಸಿದವು. ಈಗ ಹುಲ್ಲುಗಾವಲುಗಳು ಕೃಷಿ ಭೂಮಿಯಾಗಿ ಮಾರ್ಪಟ್ಟಿವೆ.

ನೈಸರ್ಗಿಕ ಹಾಗೂ ಅರೆನೈಸರ್ಗಿಕ ಹುಲ್ಲುಗಾವಲು ಪ್ರದೇಶಗಳಲ್ಲಿ ಸಸ್ಯಪ್ರಭೇದಗಳು ಹೆಚ್ಚು ಆದರೆ ಪ್ರಾಣಿ ಪ್ರಭೇದಗಳು ಕಡಿಮೆ. ಸುಮಾರು ೨೪೫ ಸ್ತನಿ ಪ್ರಭೇದಗಳು ಹುಲ್ಲುಗಾವಲಿಗೆ ಹೊಂದಿಕೊಂಡಿವೆ. ಈ ಸಂಖ್ಯೆ ಜಾಗತಿಕ ಸ್ತನಿಗಳ ಕೇವಲ ಸೇಕಡಾ ಆರರಷ್ಟು. ಸುಮಾರು ೪೭೭ ಪಕ್ಷಿ ಪ್ರಭೇದಗಳು ಹುಲ್ಲುಗಾವಲಿನಲ್ಲಿ ವಾಸಿಸುತ್ತವೆ. (ಶೇ.೫ರಷ್ಟು). ಇಲ್ಲಿ ವಾಸಿಸುವ ಪಕ್ಷಿಗಳು ಹೆಚ್ಚು ವಲಸೆ ಹೋಗುತ್ತವೆ. ಹುಲ್ಲುಗಾವಲುಗಳ ಸತತ ನಾಶದಿಂದ ಅನೇಕ ಪಕ್ಷಿ ಪ್ರಭೇದಗಳು ಅಳಿವಿನ ಅಂಚಿಗೆ ಸರಿದಿವೆ.

ನಮ್ಮ ದೇಶದಲ್ಲಿ ಹುಲ್ಲುಗಾವಲುಗಳು ಅಷ್ಟೊಂದಿಲ್ಲ. ಬೆಂಕಿ, ಮಣ್ಣಿನ ಸವಕಳಿ ಹಾಗೂ ದನಕರುಗಳು ಹೆಚ್ಚು ಮೇಯುವುದರಿಂದ ಹುಲ್ಲುಗಾವಲುಗಳ ಕ್ಷೇತ್ರ ಕಡಿಮೆಯಾಗುತ್ತಲಿದೆ. ಜನಸಂಖ್ಯಾ ಸ್ಪೋಟದಿಂದಲೂ ಹುಲ್ಲುಗಾವಲುಗಳ ಮೇಲೆ ಒತ್ತಡ ಹೆಚ್ಚಾಗಿದೆ. ಉಪಫ್ಲೂರಿಕನ್ ಎಂಬ ಪಕ್ಷಿಗಳು ಹಿಂದೊಮ್ಮೆ ಹುಲ್ಲುಗಾವಲಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಇದ್ದವು. ಈಗ ಅವುಗಳ ಸಂಖ್ಯೆ ಕ್ಷೀಣಿಸಿದೆ.

ತರಿಭೂಮಿಗಳು

ಡುಗಾನ್ ಎಂಬ ವಿಜ್ಞಾನಿ ೧೯೯೦ರಲ್ಲಿ ತರಿ ಭೂಮಿಗಳನ್ನು ೩೦ ಬಗೆಗಳಾಗಿ ವಿಂಗಡಿಸಿದನು. (ಕೊಷ್ಟಕ ೩.೯). ನಮ್ಮ ದೇಶದ ತರಿ ಭೂಮಿಯಲ್ಲಿ ಜೀವಿವೈವಿಧ್ಯ ಹೆಚ್ಚು. ಹಿಮಾಲಯದ ತರಿಭೂಮಿಯಿಂದ ಅನೇಕ ನದಿಗಳ ಉಗಮವಾಗಿವೆ. ಪಶ್ಚಿಮ ಭಾರತದಲ್ಲಿ ಶುಷ್ಕ ಹಾಗೂ ಅರೆಶುಷ್ಕ ಪ್ರದೇಶವಿದ್ದು ಅದು ಉಪ್ಪು ಮಿಶ್ರಿತ ಹಾಗೂ ಸಮುದ್ರದ ಹಿನ್ನೀರಿನಿಂದ ಕೂಡಿದೆ. ಉತ್ತರ ಭಾರತದಲ್ಲಿ ಗಂಗಾ ಹಾಗೂ ಬ್ರಹ್ಮಪುತ್ರ ನದಿ ಪ್ರದೇಶಗಳಿವೆ. ಜೊತೆಗೆ ಸರೋವರ, ಕೊಳ ಹಾಗು ಜಾಗು ಪ್ರದೇಶಗಳೂ ಉಂಟು. ದಕ್ಷಿಣ ಭಾರತದಲ್ಲಿ ಅನೇಕ ಕೆರೆಗಳು ಹಾಗೂ ಅಣೆಕಟ್ಟುಗಳಿವೆ. ನಮ್ಮ ದೇಶದ ಅಂಚಿನ ಗುಂಟ ೭೫೦೦ ಚ.ಕಿಮೀದಷ್ಟು ಕರಾವಳಿ ಪ್ರದೇಶವಿದೆ ಹಾಗೂ ಒಟ್ಟು ೪೦.೧೦ಲಕ್ಷ ಹೆಕ್ಟರ್‌ಗಳಷ್ಟು ತರಿ ಭೂಮಿ ಇದೆ. ಜಾಗತಿಕ ನಿಸರ್ಗ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಸಂಸ್ಥೆಯ ಪ್ರಕಾರ ೧೯೮೯ರಲ್ಲಿ ನಮ್ಮ ದೇಶದಲ್ಲಿ ೫.೮೨ ಕೋಟಿ ಹೆಕ್ಟರ‍್ಗಳಷ್ಟು ತರಿ ಭೂಮಿ ಇತ್ತು

(ಕೋಷ್ಟಕ ೩.೧೦, ೩.೧೧)

ಕೋಷ್ಟಕ . ಭೂಮಿಯ ಮೇಲಿರುವ ಸಿಹಿನೀರಿನ ತರಿಭೂಮಿ ಪ್ರದೇಶ

ಕ್ರ ಸಂ ತರಿಭೂಮಿಯ ನಮೂನೆ ಪ್ರದೇಶ (ಚ.ಕಿಮೀ) (ಸಾವಿರ)
೧. ಜವುಗು ಪ್ರದೇಶ

೧೮೬೭

೨. ಫೆನ್ಸ(ಜವುಳು)

೧೪೮೩

೩. ಸ್ವಾಂಪ್ಸ(ಜವುಳು)

೧೧೩೦

೪. ಮಹಾಪೂರ ಬಯಲು

೮೨೩

೫. ಜವುಗು ಪ್ರದೇಶ(ಮಾರ್ಶ)

೨೭೪

೬. ಸರೋವರ

೧೧೪

  ಒಟ್ಟು

೫೬೯೧

ಆಕರ: ಅಸೆಲ್‌ಮನ್, ಆಯ್ ಮತ್ತು ಕ್ರುಝಿನ್ ಪಿ.ಜೆ. ೧೯೮೯

ಕೋಷ್ಟಕ .೧೦ ಭಾರತದಲ್ಲಿರುವ ತರಿ ಭೂಮಿ (೧೯೮೯)

ಕ್ರ ಸಂ

ವಿಸ್ತೀರ್ಣ

ಮಿಲಿಯನ್ ಹೆಕ್ಟರ್

೧. ಭತ್ತದ ಕೃಷಿ ಭೂಮಿ

೪೦.೯

೨. ಮೀನು ಸಾಕಾಣಿಕೆಗೆ ಯೋಗ್ಯವಾದದ್ದು

೩.೬

೩. ಮೀನು ಹಿಡಿಯಲು ಯೋಗ್ಯವಾದದ್ದು

೨.೯

೪. ಕಾಂಡ್ಲವನಗಳು

೦.೪

೫. ಅಳಿವೆ

೩.೯

೬. ಹಿನ್ನೀರು

೩.೫

೭. ಮಾನವ ನಿರ್ಮಿತ

೩.೦

೮. ನದಿಗಳು

೨೮೦೦೦ ಕಿಮೀ.

೯. ಕಾಲುವೆಗಳು

೧೧೩,೦೦೦ಕಿಮೀ.

೧೦. ನದಿಗಳನ್ನು ಹೊರತುಪಡಿಸಿ ಉಳಿದ ತರಿ ಭೂಮಿ

೫೮.೨

ಜಾಗತಿಕ ನಿಸರ್ಗ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಸಂಸ್ಥೆ (೧೯೮೯)

ಕೋಷ್ಟಕ .೧೧ ಅತ್ಯಂತ ಗಂಭೀರ ಸ್ವರೂಪದಲ್ಲಿ ವಿನಾಶದೆಡೆಗೆ ಸರಿಯುತ್ತಿರುವ ಭಾರತದಲ್ಲಿಯ ತರಿ ಭೂಮಿ

೧. ದಾಲ್ ಸರೋವರ ೨. ವುಲಾರ್ ಸರೋವರ
೩. ಹರಿಕೆ ಸರೋವರ ೪. ಹೈದರ್‌ಗಡ್ ಹತ್ತಿರವಿರುವ ಜೀಲ್ಸ
೫. ದಹರ ಮತ್ತು ಸಂಜ್ ಜೀಲ್ಸ ೬. ದಕ್ಷಿಣ ಕಚ್‌ದ ಖಾರಿ
೭. ಖಂಬತ್‌ದ ಖಾರಿ ೮. ಖಬರ್‌ತಾಲ್
೯. ಡೈಫೋರ್ ಭೀಲ್ ೧೦. ಲೋಗ್‌ಟಾಕ್ ಸರೋವರ
೧೧. ಉಪ್ಪು ಸರೋವರ, ಜವುಗು ೧೨. ಸುಂದರ್‌ಬನ್‌ಗಳು
೧೩. ಚಿಲ್ಕಾ ಸರೋವರ ೧೪. ಕೊಲ್ಲೇರು ಸರೋವರ
೧೫. ಕರ್ನಾಟಕ ಕರಾವಳಿಯ ಅಳಿವೆಗಳು ೧೬. ಕಲಿವೆಲಿ ಕೆರೆ ಮತ್ತು ವೇದಯಂತಿಟ್ಟು ಅಳಿವೆ
೧೭. ಕೋಚಿನ್‌ದ ಹಿನ್ನೀರು ೧೮. ಅಂದಮಾನ ಹಾಗೂ ನಿಕೋಬಾರ್ ದ್ವೀಪಗಳಲ್ಲಿಯ ತರಿಭೂಮಿ

ತರಿ ಭೂಮಿ ನೀರನ್ನು ಶುದ್ಧೀಕರಿಸುತ್ತದೆ. ಅಂತರ್ಜಲದ ಮಟ್ಟವನ್ನು ಏರುಪೇರು ಮಾಡುತ್ತದೆ. ನೆರೆ ಹಾಗೂ ಮಣ್ಣಿನ ಸವಕಳಿಯನ್ನು ನಿಯಂತ್ರಿಸುತ್ತದೆ. ಕರಾವಳಿ ಪ್ರದೇಶವನ್ನು ಸ್ಥಿರವಾಗಿಡುತ್ತದೆ, ಹೂಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇದಕ್ಕೆ ಹೆಚ್ಚು. ಇದು ಬಿರುಗಾಳಿಯ ರಭಸವನ್ನು ತಡೆಯುತ್ತದೆ, ನೀರಿನ ಸಾಗಣೆ ಮಾಡುತ್ತದೆ ಹಾಗೂ ವಾತಾವರಣದ ಸ್ಥಿರತೆಯನ್ನು ಕಾಪಾಡುತ್ತದೆ. ತರಿ ಭೂಮಿಯಲ್ಲಿ ಅರಣ್ಯ ಸಂಪತ್ತು, ವನ್ಯಜೀವಿ ಸಂಪತ್ತು, ಮೀನುಗಳು ಹಾಗೂ ಕೃಷಿ ಸಂಪತ್ತುಗಳಿವೆ.  ತರಿ ಭೂಮಿಯ ಈ ಸಂಪತ್ತಿನಿಂದ ಅನೇಕ ಜನರ ಜೀವನ ನಿರ್ವಹಣೆ ನಡೆದಿದೆ.

ಪ್ರಪಂಚದಾದ್ಯಂತ ತರಿ ಭೂಮಿಯ ನಾಶ ನಡೆದೇ ಇದೆ. ಕ್ರಿ.ಶ. ೧೮೪೦ರಿಂದ ಈಚೆಗೆ ನ್ಯೂಜಿಲೆಂಡ್‌ನಲ್ಲಿ ಸೇಕಡಾ ೯೦ರಷ್ಟು ತರಿ ಭೂಮಿ ನಾಶವಾಗಿದೆ. ೧೮೪೦ರಲ್ಲಿ ೧೬೧೪ ಚ.ಕಿಮೀದಷ್ಟು ತರಿ ಭೂಮಿ ಇತ್ತು. ೧೯೭೬ರ ಹೊತ್ತಿಗೆ ಅದರ ಕ್ಷೇತ್ರ ಕೇವಲ ೨೬೨ಚ.ಕಿಮೀಗೆ ಇಳಿಯಿತು.

ಕೋಷ್ಟಕ .೧೨ ತರಿ ಭೂಮಿಯ ನಾಶಕ್ಕೆ ಕಾರಣಗಳು

ಕ್ರ ಸಂ

ಕಾರಣಗಳು

ಅಳಿವೆಗಳು

ವ್ಯವೃತ ಕರಾ ವಳಿ

ನೆರೆ, ಬಯಲು

ಸಿಹಿ ನೀರಿನ ಜೌಗು

ಸರೋವರ

ಪೀಟ್‌ಪ್ರದೇಶ

ಅರಣ್ಯ

ಮಾನವ ಚಟುವಟಿಕೆಗಳು
೧. ಕೃಷಿ, ಅರಣ್ಣೀಕರಣ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಬಸಿ ಕಾಲುವೆ * * * * x * *
೨. ನೆರೆ ನಿಯಂತ್ರಣ ಹಾಗೂ ನೌಕಾಯಾನಕ್ಕಾಗಿ ಕಾಲುವೆ ನಿರ್ಮಾನ *   x        
೩. ರಸ್ತೆ ನಿರ್ಮಾನ, ಘನತ್ಯಾಜ್ಯಗಳ ವಿಲೇವಾರಿಗಾಗಿ * * * * x    
೪. ಜಲಕೃಷಿ ಸಮುದ್ರಕೃಷಿಗಾಗಿ * x x x x    
೫. ನೆರೆಹಾವಳಿ ತಪ್ಪಿಸಲು ಸಮುದ್ರಗೋಡೆ, ಅಣೆಕಟ್ಟು, ಹಾಗೂ ಡೈಕು ನಿರ್ಮಾಣ * * * * x    
೬. ಪೀಡೆ, ಕೀಟ ನಾಶಕ, ಕಳೆನಾಶಕ ಹಾಗೂ ಚರಂಡಿ ನೀರಿನ ವಿಲೇವಾರಿ * * * * *    
೭. ಪೀಟ್, ಕಲ್ಲಿದ್ದಲು, ಫಾಸ್ಪೇಟ ಇತ್ಯಾದಿಗಳಿಗಾಗಿ ತರಿ ಭೂಮಿಯಲ್ಲಿ ಗಣಿಗಾರಿಕೆ x x x   * * *
೮. ಅಂತರ್ಜಲದ ಅಮೂರ್ತನೆಗಾಗಿ     x *      
೯. ಅಣೆಕಟ್ಟು ಹಾಗೂ ಕಾಲುವೆಗಳಿಂದ ಹೂಳಿನ ದಿಕ್ಕು ಬದಲಾವಣೆ * * * *      
೧೦ ಕಾಲುವೆ, ರಸ್ತೆ ಹಾಗೂ ಇತರ ಇಮಾರತುಗಳಿಂದ ಜಲದಲ್ಲಿಯ ಬದಲಾವಣೆ * * * * *    
೧೧ ಅಂತರ್ಜಲ, ತೈಲ, ಅನಿಲ ಹಾಗೂ ಇತರ ಖನಿಜಾಂಶಗಳನ್ನು ಹೊರತೆಗೆಯುವುದರಿಂದಾಗುವ ಪರಿಣಾಮ * x * *      
ನೈಸರ್ಗಿಕ ಪರಿಣಾಮಗಳು
೧೨ ಭೂಕುಸಿತ x x     x x x
೧೩ ಸಮುದ್ರ ಪಾತಳಿಯಲ್ಲಿ ಎತ್ತರ * *         *
೧೪ ಅನಾವೃಷ್ಟಿ * * * * x x x
೧೫ ಚಂಡಮಾರುತಗಳು * *       x x
೧೬ ಸವಕಳಿ * * x     x  
೧೭ ಜೈವಿಕ ಪರಿಣಾಮಗಳು     * * *    

*ತರಿ ಭೂಮಿ ನಾಶಕ್ಕೆ ಕಾರಣಗಳು  x ಮುಖ್ಯ ಕಾರಣವಲ್ಲ

ನಮ್ಮ ದೇಶದಲ್ಲಿ ೧೮ ತರಿ ಭೂಮಿಗಳು ಹೆಚ್ಚು ಹಾನಿಗೆ ಒಳಗಾಗಿವೆ. ಪಟ್ಟಣಗಳ ಚರಂಡಿ ನೀರಿನಿಂದ, ಕಾಖಾನೆಗಳ ಹೊಲಸು ನೀರಿನಿಂದ, ರಾಸಾಯನಿಕ ಹಾಗೂ ಕೀಟನಾಶಕಗಳಿಂದ ಸಾಕಷ್ಟು ತರಿ ಭೂಮಿ ವಿನಾಶದ ಅಂಚಿಗೆ ಸರಿದಿದೆ. ಯಮುನಾ ಹಾಗೂ ಗಂಗಾನದಿಗಳೂ ಕೂಡ ಮಾಲಿನ್ಯಗೊಂಡಿವೆ. ಇದರಿಂದ ಅಲ್ಲಿಯ ಜಲಚರಗಳ ಜೀವಕ್ಕೆ ಧಕ್ಕೆಯಾಗಿದೆ. ಸಮುದ್ರದ ಹಿನ್ನೀರೂ ಕೂಡ ಮಾಲಿನ್ಯಗೊಂಡು ಅಲ್ಲಿಯ ಮೀನುಗಳು, ಸೀಗಡಿಗಳು, ಪ್ರಾನ್‌ಗಳು ಹಾಗೂ ಇತರ ಜಲ ಪ್ರಾಣಿಗಳ ಅಭಿವೃದ್ಧಿ ಕುಂಟಿತವಾಗಿದೆ. ನೀರಾವರಿ ಹಾಗೂ ಕಾರ್ಖಾನೆಗಳಿಗೆ ತರಿ ಭೂಮಿಯಿಂದ ಹೆಚ್ಚು ನೀರನ್ನು ಬಳಸಿದ್ದರಿಂದ ತರಿ ಭೂಮಿ ನಾಶವಾಗಿದೆ (ಕೋಷ್ಟಕ ೩.೧೦). ಜಲಪಕ್ಷಿಗಳ ರಕ್ಷಣೆಗಾಗಿ ತರಿ ಭೂಮಿಯ ರಕ್ಷಣೆ ಅತಿ ಮುಖ್ಯ.

ಕಾಂಡ್ಲವನಗಳು

ಈ ಕಾಡುಗಳು ಉಷ್ಣವಲಯ ಹಾಗೂ ಅರೆಉಷ್ಣವಲಯದ ಕರಾವಳಿಯಲ್ಲಿ ಬೆಳೆಯುತ್ತವೆ. ಇಲ್ಲಿ ಸಸ್ಯಗಳು ೧-೫೦ ಮೀ. ಎತ್ತರ ಬೆಳೆಯಬಲ್ಲವು. ಕಾಂಡ್ಲವನ ಪರಿಸರ ವ್ಯವಸ್ಥೆಯಲ್ಲಿ ವಿವಿಧ ಬಗೆಯ ಸಸ್ಯಪ್ರಾಣಿ ಪ್ರಭೇದಗಳನ್ನು ಕಾಣಬಹುದು. ಏಸಿಯಾದ ಕಾಂಡ್ಲವನಗಳಲ್ಲಿ ದೊರೆಯುವ ಸಸ್ಯ-ಪ್ರಾಣಿಗಳ ಪಟ್ಟಿಯನ್ನು ಕೋಷ್ಟಕ ೩.೧೩ರಲ್ಲಿ ಕೊಟ್ಟಿದೆ. ಈ ಪರಿಸರ ವ್ಯವಸ್ಥೆಯಲ್ಲಿ ಅಪ್ಪು ಸಸ್ಯಗಳು, ಏರುಬಳ್ಳಿಗಳು ಹಾಗೂ ಪರೋಪ ಸಸ್ಯಗಳು, ಮೀನುಗಳು, ಪಕ್ಷಿಗಳು, ಮೃದ್ವಂಗಿಗಳು ಹಾಗೂ ಇತರ ಜಲ ಪ್ರಾಣಿಗಳ ಅಭಿವೃದ್ಧಿ ಕುಂಟಿತವಾಗಿದೆ.

ಕೋಷ್ಟಕ .೧೩ ಏಸಿಯಾದ ಕಾಂಡ್ಲವನಗಳಲ್ಲಿಯ ಜೀವಿವೈವಿಧ್ಯ

ಕ್ರ ಸಂ ಸಸ್ಯಗಳು ಪ್ರಭೇದಗಳ ಸಂಖ್ಯೆ
ಸೂಕ್ಷ್ಮಾಣು ಜೀವಿಗಳು  
೧. ಬ್ಯಾಕ್ಟೀರಿಯಾ

೧೦

ಸಸ್ಯಗುಂಪುಗಳು

 

೧. ಶೈವಲ

೬೫

೨. ಶಿಲೀಂಧ್ರ

೨೫

೩. ಪಾಮಾಜಿಗಳು ಹಾಗೂ ಜರೀಸಸ್ಯಗಳು

೩೫

೪. ದ್ವಿದಳ ಸಸ್ಯಗಳು

೧೧೦

೫. ಏಕದಳ ಸಸ್ಯಗಳು

೭೩

. ಪ್ರಾಣಿಗುಂಪುಗಳು

 

೧. ಪ್ರೊಟೊಜೊಅ

೧೮

೨. ಪೊರಿಫೆರ ಮತ್ತು ಬ್ರಾಯೋಜೊಅ

೩. ಸಿಲೆಂಟರೇಟ ಮತ್ತು ಸಿನೋಫೋರ

೪. ಪೊಲಿಚೀಟ್ಸ

೧೧

೫. ಪೊಲಿಚೀಟ್ಸ ಹೊರತುಪಡಿಸಿ

೧೩

೬. ಕ್ರಸ್ಟೇಸಿಯನ್ಸ್

೨೨೯

೭. ಮೃದ್ವಂಗಿಗಳು

೨೧೧

೮. ಕೀಟಗಳು ಮತ್ತು ಅರ್ಯಾಕ್‌ನಿಡ್ಸ್

೫೦೦

೯. ಕಂಟಕ ಚರ್ಮಿ

೧೦. ಮೀನು

೨೮೩

೧೧. ಉಭಯ ಚರಿಗಳು

೧೨. ಸರೀಸೃಪಗಳು

೨೨

೧೩. ಪಕ್ಷಿಗಳು

೧೭೭

೧೪. ಸಸ್ತನಿಗಳು

೩೬

(ಸೇಯಂಗರ್ ಹಾಗೂ ಇತರರು ೧೯೮೩)

ಕೋಷ್ಟಕ .೧೪ ಕಾಂಡ್ಲವನಗಳು :ವಿಸ್ತಾರ ಹಾಗೂ ರಕ್ಷಣೆಯ ಸ್ಥಳಗಳು

ಕ್ರ ಸಂ

ಭೂಖಂಡ

ಕಾಂಡ್ಲವನಗಳ ವಿಸ್ತಾರ (ಹೆಕ್ಟರ್)

ಕಾಂಡ್ಲಸಸ್ಯಗಳ ರಕ್ಷಣೆಯ ಸ್ಥಳಗಳು

೧. ಏಸಿಯಾ

೧೨೯೦೦೩೪೫

೭೧೧

೨. ಆಫ್ರಿಕ

೬೦೦೮೮೮೦

೯೭

೩. ಉತ್ತರ ಮತ್ತು ಮಧ್ಯ ಅಮೆರಿಕ

೪೨೧೭೫೮೩

೨೯೧

೪. ದಕ್ಷಿಣ ಅಮೆರಿಕ

೧೮೧೪೦೨೩

೭೯

೫. ಓಸಿಯಾನಿಯ

೧೫೨೨೯೩೦

೪೯೩

  ಒಟ್ಟು

೧೫೪೬೩೭೬೨

೧೬೭೧

ಪ್ರಪಂಚದಲ್ಲಿ ಒಟ್ಟು ೧.೫೪ ಕೋಟಿ ಹೆಕ್ಟೇರ್‌ಗಳಷ್ಟು ಕಾಂಡ್ಲವನಗಳ ಪ್ರದೇಶವಿದೆ (ಕೋಷ್ಟಕ ೩.೧೪). ಅದರ ಪೈಕಿ ೧೬೭೧ ರಕ್ಷಿತ ಕಾಂಡ್ಲವನ ಸ್ಥಳಗಳಿವೆ. ನಮ್ಮ ದೇಶದಲ್ಲಿ ೩೪ ಸಂರಕ್ಷಿತ ಕಾಂಡ್ಲವನಗಳ ಸ್ಥಳಗಳಿವೆ. (ಕೋಷ್ಟಕ ೩.೧೫).ಅವುಗಳ ಒಟ್ಟು ಕ್ಷೇತ್ರ ೩.೫೬ ಲಕ್ಷ ಹೆಕ್ಟರ್‌ಗಳಷ್ಟು ನಕ್ಷೆ ೩.೨ ನಮ್ಮ ದೇಶದಲ್ಲಿರುವ ಕಾಂಡ್ಲವನ, ಹವಳದಿಬ್ಬಗಳು ಮತ್ತು ತರಿ ಭೂಮಿಯನ್ನು ತೋರಿಸುತ್ತದೆ.

ಕಾಂಡ್ಲವನಗಳ ಉಪಯೋಗ ಅತ್ಯಮೂಲ್ಯ. ಸ್ಥಳೀಯ ಜನರು ಮರದಿಂದ ಮನೆಕಟ್ಟುವ ಸಾಮಾನುಗಳನ್ನು ಹಾಗೂ ಕಂಬಗಳನ್ನು ತಯಾರಿಸುತ್ತಾರೆ. ಮರದಿಂದ ಕಾಗದದ ಮುದ್ದೆ ಹಾಗೂ ಇದ್ದಲನ್ನು ತಯಾರಿಸುತ್ತಾರೆ. ಮರವನ್ನು ಉರುವಲಾಗಿಯೂ ಬಳಸುತ್ತಾರೆ. ‘ಸಿಪಾ’ ಎಂಬ ಸಸ್ಯದಿಂದ ಸಕ್ಕರೆ ತಯಾರಿಸಿ, ಅದರಿಂದ ಮದ್ಯಸಾರವನ್ನು ತಯಾರಿಸುತ್ತಾರೆ. ಈ ಮದ್ಯಸಾರವನ್ನು ವಾಹನಗಳಿಗೆ ಬಳಸುತ್ತಾರೆ. ಕಾಂಡ್ಲಸಸ್ಯಗಳ ಎಲೆಗಳನ್ನು ದನಕರುಗಳು ತಿನ್ನುತ್ತವೆ. ಹೀಗಾಗಿ ಕಾಂಡ್ಲವನಗಳ ನಾಶ ಮುಂದುವರಿದಿದೆ. ಕಾಂಡ್ಲವನಗಳು ಅನೇಕ ಪ್ರಾಣಿಗಳಿಗೆ ಆಶ್ರಯಕೊಡುತ್ತವೆ. ಅಲ್ಲದೆ ಇಲ್ಲಿ ಜನ ಪ್ರಾಣಿಗಳ ಅಭಿವೃದ್ಧಿಯನ್ನು ಕೈಕೊಳ್ಳಬಹುದು. ಕರಾವಳಿಯ ಮಣ್ಣನ್ನು ಇವು ರಕ್ಷಿಸುತ್ತವೆ. ಗಾಳಿಯ ವೇಗವನ್ನು ತಗ್ಗಿಸುತ್ತವೆ. ಸುಂದರಬನ್ ಕಾಂಡ್ಲವನಗಳು ಬಂಗಾಲದ ಹುಲಿಗೆ ಆಶ್ರಯ ನೀಡಿವೆ.

ಕಾಂಡ್ಲವನಗಳನ್ನು ಕೃಷಿ ಭೂಮಿಯನ್ನಾಗಿ ಮಾರ್ಪಡಿಸಿರುವುದರಿಂದ ಮಣ್ಣು ಖಾರವಾಗಿದೆ. ಇತರ ಪ್ರಾಣಿಗಳಿಗೆ ನೀರು ವಿಷಯವಾಗಿದೆ. ಪಾಚಿಯ ಬೆಳವಣಿಗೆ ತಗ್ಗಿ ಮೀನುಗಳಿಗೆ ಆಹಾರ ಸಿಗದಂತಾಗಿದೆ. ಉಪ್ಪು ತೆಗೆಯುವುದಕ್ಕಾಗಿ ನಿರ್ಮಿಸಿದ ಕೊಳಗಳಿಂದ ಕಾಂಡ್ಲವನಗಳ ನಾಶವಾಗಿದೆ. ಕಾರ್ಖಾನೆಗಳಿಂದ ಬಿಡುಗಡೆಯಾದ ತ್ಯಾಜ್ಯದಿಂದ, ಕಡಲಿನಲ್ಲಿ ತೈಲ ನಿರ್ಮಾಣದಿಂದ ನಾಗರೀಕರಣದಿಂದ, ಗಣಿಗಾರಿಕೆಯಿಂದಲೂ ಕಾಂಡ್ಲ ವನಗಳ ನಾಶವಾಗಿದೆ.

ಕಾಂಡ್ಲ ವಂಶಾಭಿವೃದ್ಧಿ ಬಹಳ ವಿಚಿತ್ರ (ಚಿತ್ರ ೩.೨) ಮರ ಫಲ ಬಿಟ್ಟಮೇಲೆ, ಬೀಜ ಫಲದೊಳಗಿರುವಾಗಲೇ ಅಂಕುರಿಸುತ್ತದೆ. ಅಭಿವರ್ಧಿಸಿದ ಬೀಜ ಮಡ್ಡಿ ಮಣ್ಣಿಗೆ ಬಿದ್ದು ಅಲ್ಲೇ ಬೇರು ಬಿಡುತ್ತದೆ. ಇದಕ್ಕೆ ಮರಿಹಾಕುವ ಸಸ್ಯವೆಂದು ಕರೆಯಬಹುದು. ಕಾಂಡ್ಲ ಸಸ್ಯಗಳ ಬಗ್ಗೆ ಸಾಗರ ವಿಜ್ಞಾನದ ರಾಷ್ಟ್ರೀಯ ಸಂಸ್ಥೆಯಲ್ಲಿ ಸಂಶೋಧನೆ ನಡೆಸಿದ್ದಾರೆ. ಕಾಂಡ್ಲ ವನಸಿರಿಯನ್ನು ಹೆಚ್ಚಿಸುವ ಪ್ರಯತ್ನ ನಡೆಸಿದ್ದಾರೆ. ಸುಂದರ್‌ಬನ್ ಕಾಂಡ್ಲ ಅರಣ್ಯವು ಬಂಗಾಲದ ಹುಲಿಗಳಿಗೆ ಆಶ್ರಯ ನೀಡಿದೆ. ಈ ಅರಣ್ಯ ಹೋದರೆ ಹುಲಿಯೂ ಹೋಗುತ್ತದೆ.

ಕೋಷ್ಟಕ ೩.೧೪. ೩.೧೫ ಕರ್ನಾಟಕದ ಅರಣ್ಯಗಳು ಹಾಗೂ ಪ್ರಮುಖ ಸಸ್ಯಗಳನ್ನು ಸೂಚಿಸುತ್ತವೆ.

ಚಿತ್ರ ೩.೨: ತಾಯಿ ಸಸ್ಯದಲ್ಲಿದ್ದಾಗಲೇ ಕಾಂಡ್ಲ ಸಸ್ಯದ ಬೀಜ ಮೊಳೆಯುತ್ತದೆ.

 ಕೋಷ್ಟಕ .೧೫ ಭಾರತದಲ್ಲಿ ಕಾಂಡ್ಲವನಗಳ ಕ್ಷೇತ್ರ ಹಾಗೂ ಸಂರಕ್ಷಿತ ಪ್ರದೇಶಗಳು

 

ಕ್ರ ಸಂ

ಪ್ರದೇಶ

ಕ್ಷೇತ್ರ (ಹೆಕ್ಟರ್)

ಸಂರಕ್ಷಿತ ಪ್ರದೇಶ

೧. ಮುಖ್ಯಭೂಮಿ

೩೦೬,೦೦೦

೨೫

೨. ಅಂದಮಾನ್ ಮತ್ತು ನಿಕೋಬಾರ್ ದ್ವೀಪಗಳು

೫೦,೦೦೦

  ಒಟ್ಟು

೩೫೬,೦೦೦

೩೪

ಹವಳದ ದಿಬ್ಬಗಳು

ಸುಮಾರು ಆರು ಲಕ್ಷ ಚ.ಕಿಮೀದಷ್ಟು ವಿಸ್ತಾರವುಳ್ಳ ಈ ಪ್ರದೇಶ ೩೦ ಮೀ. ಆಳವಾಗಿದೆ. ಸೇಕಡಾ ೬೦ರಷ್ಟು ಹವಳದ ದಿಬ್ಬಗಳು ಹಿಂದೂಮಹಾಸಾಗರದಲ್ಲಿವೆ (ಕೋಷ್ಟಕ ೩.೧೬) ಹವಳದ ದಿಬ್ಬಗಳಲ್ಲಿ ಜೀವಿವೈವಿಧ್ಯ ಹೆಚ್ಚು. ಆಸ್ಟ್ರೇಲಿಯಾ ಹವಳದ ದಿಬ್ಬಗಳಲ್ಲಿ ಸುಮಾರು ೨೦೦೦ ಮೀನು ಪ್ರಭೇದಗಳಿವೆ ಹಾಗೂ ೫೦೦ ಹವಳ ಪ್ರಭೇದಗಳಿವೆ.

ಕೋಷ್ಟಕ .೧೬ ಹವಳ ದಿಬ್ಬಗಳು

ಕ್ರ ಸಂ

ಪ್ರದೇಶ

ಸೇಕಡಾವಾರು ಪ್ರದೇಶ

೧. ಹಿಂದುಮಹಾಸಾಗರ

೬೦%

೨. ಕ್ಯಾರಿಬಿಯನ್

೧೪

೩. ದಕ್ಷಿಣ ಪ್ಯಾಸಿಫಿಕ್ (ಪೂರ್ವ ಆಸ್ಟ್ರೇಲಿಯಾ ಸೇರಿಸಿ)

೧೨%

೪. ಉತ್ತರ ಪ್ಯಾಸಿಫಿಕ್

೧೨%

೫. ದಕ್ಷಿಣ ಅಟ್ಲಾಂಟಿಕ್ ಮತ್ತು ಪೂರ್ವ ಪ್ಯಾಸಿಫಿಕ್

೧%

ಆಹಾರ ಉತ್ಪಾದನೆ ಹಾಗೂ ಸುಸ್ಥಿರ ಅಭಿವೃದ್ಧಿಯಲ್ಲಿ ಹವಳದ ದಿಬ್ಬಗಳು ಮುಖ್ಯ ಪಾತ್ರವಹಿಸುತ್ತವೆ. ಇವು ಕಡಲಿಗಾಗುವ ಅನಾಹುತಗಳನ್ನು ತಗ್ಗಿಸುತ್ತವೆ. ಮಣ್ಣಿನ ಸವಕಳಿಯನ್ನು ತಗ್ಗಿಸುತ್ತವೆ. ಮರಳು ಬೀಡುಗಳನ್ನು ನಿರ್ಮಿಸುತ್ತವೆ. ಹಡಗುದಾಣ ನಿರ್ಮಾಣಕ್ಕೆ ಅನುಕೂಲಮಾಡುತ್ತವೆ. ಅನೇಕ ಮೀನು ಪ್ರಭೇದಗಳ ಅಭಿವೃದ್ಧಿಗೆ ಸಹಾಯ ಮಾಡುತ್ತವೆ. ಅನೇಕ ಜೀವಿ ಪ್ರಭೇದಗಳಿಗೆ ಆಶ್ರಯ ನೀಡುತ್ತವೆ ಅಲ್ಲದೆ ಪ್ರವಾಸಿಗರನ್ನೂ ಆಕರ್ಷಿಸುತ್ತವೆ.

ಬಿರುಗಾಳಿ, ವಾತಾವರಣದಲ್ಲಿಯ ಬದಲಾವಣೆ ಹಾಗೂ ಕಾಯಿಲೆಗಳಿಂದ ಹವಳದ ದಿಬ್ಬಗಳು ನಾಶವಾಗಬಹುದು. ಮಾನವನ ಅನೇಕ ಚಟುವಟಿಕೆ, ಮಾಲಿನ್ಯ, ಅತಿಬಳಕೆ, ಹೂಳು ತುಂಬುವುದರಿಂದ ಹಾಗೂ ಮಣ್ಣಿನ ಸವಕಳಿಯಿಂದಲೂ ಇವುಗಳಿಗೆ ಭಯವಿದೆ.

ಶ್ರೀಲಂಕಾದ ಪಕ್ಕದಲ್ಲಿ ಹಾಗೂ ನಮ್ಮ ದೇಶದಲ್ಲಿ ಕಛ್, ಅಂದಮಾನ ಮತ್ತು ನಿಕೋಬಾರ್ ದ್ವೀಪಗಳ ಸಮುದ್ರದಲ್ಲಿ ಸುಮಾರು ೪೨೦೦ ಚ.ಕೀಮಿದಷ್ಟು ಹವಳದ ದಿಬ್ಬಗಳಿವೆ. ಬಹಳ ಮತ್ತು ಶೆಲ್‌ಗಳನ್ನು ಮಾರಾಟ ಮಾಡುವುದರಿಂದ ಹಾಗೂ ಪರದೇಶಗಳಿಗೆ ರಫ್ತು ಮಾಡುವುದರಿಂದ ಈ ಪ್ರದೇಶ ಕಡಿಮೆಯಾಗುತ್ತಲಿದೆ.

* * *