ಇತ್ತೀಚೆಗೆ ವಿನಾಶವಾದ ಜೀವಿಗಳು

ಸುಮಾರು ೩-೪ ಸಾವಿರ ವರ್ಷಗಳ ಹಿಂದೆ ಮಾನವ ಕಾಡು ಕಡಿದು ವ್ಯವಸಾಯ ಪ್ರಾರಂಭಿಸಿದ್ದರಿಂದ ಸಾಕಷ್ಟು ಅರಣ್ಯ ಹಾಗೂ ಕಾಡು ಪ್ರಾಣಿಗಳ ನಾಶವಾದವು. ಉದಾಹರಣೆಗೆ ಹರಪ್ಪ ಮೊಹೆಂಜೋದಾರೋ ಸಂಸ್ಕೃತಿ, ಪ್ರಕೃತಿಯ ಬಗ್ಗೆ, ರೋಮನ್ನರು ತೋರಿದ ಅನಾದರ, ಮೌಡ್ಯ, ನೈಸರ್ಗಿಕ ನಿಯಮಾವಳಿಗಳ ಬಗ್ಗೆ ತಿರಸ್ಕಾರ ಇವು ರೋಮನ್ನರವನ್ನು ಮಣ್ಣುಮುಕ್ಕಿಸಿದವು. ಕ್ರಿ.ಶ. ೪ನೇ ಶತಮಾನದಲ್ಲಿ ಮಾನವ ಹವಾಯಿ ದ್ವೀಪಗಳ ಮೇಲೆ ಹಾಗೂ ಕ್ರಿ.ಶ. ೯ನೇ ಶತಮಾನದಲ್ಲಿ ನ್ಯೂಜಿಲೆಂಡ್‌ನಲ್ಲಿ ಕಾಲಿಟ್ಟ ನಂತರ ಎರಡೂ ಸ್ಥಳಗಳಲ್ಲಿ ಅನೇಕ ಪಕ್ಷಿ ಪ್ರಭೇದಗಳ ನಾಶವಾದವು. ಕ್ರಿ.ಶ. ೧೫ ಹಾಗೂ ೧೬ನೇ ಶತಮಾನದಲ್ಲಿ ಆವಾಸ ನಾಶ. ಹೊಸ ಪ್ರಾಣಿಗಳ ಆಗಮನ, ಬೇಟೆ ಮುಂತಾದವುಗಳಿಂದ ಜೀವಿಗಳ ವಿನಾಶ ಮುಂದುವರಿಯಿತು (ಕೋಷ್ಟಕ ೨.೫ ಹಾಗೂ ೨.೬). ಭಾರತದಲ್ಲಿ ಅಳಿವಿನ ಅಂಚಿಗೆ ಸರಿದ ಔಷಧಿಯ ಸಸ್ಯಗಳನ್ನು ಕೋಷ್ಟಕ ೨.೭ರಲ್ಲಿ ಪಟ್ಟಿ ಮಾಡಿದೆ ಹಾಗೂ ಭಾರತದಲ್ಲಿ ಬೆಳೆಯುವ ಕೆಲವು ಮುಖ್ಯ ಔಷಧಿ ಸಸ್ಯಗಳನ್ನು ಕೋಷ್ಟಕ ೨.೮ರಲ್ಲಿ ಪಟ್ಟಿ ಮಾಡಿದೆ. ೨೦ನೇ ಶತಮಾನದ ಕೊನೆಯ ದಶಕದಲ್ಲಾದ ಜೀವಿವೈವಿಧ್ಯನಾಶ ತೀರಭಿನ್ನವಾದದ್ದು. ಇದು ನೈಸರ್ಗಿಕ ನಾಶವಲ್ಲ. ಆದರೆ ಮಾನವನ ಚಟುವಟಿಕೆಗಳಿಂದಾದದ್ದು. ಒಂದು ಲೆಕ್ಕಾಚಾರದ ಪ್ರಕಾರ ಪ್ರತಿದಿನ ೫೦-೧೦೦ ಪ್ರಭೇದಗಳು ನಾಶವಾಗುತ್ತವೆಯಂತೆ. ಇದು ಹೀಗೆಯೇ ಮುಂದುವರಿದರೆ ಇನ್ನೂ ಕೆಲವು ವರ್ಷಗಳಲ್ಲಿ ನಾವು ಎಲ್ಲ ಪ್ರಾಣಿಗಳನ್ನೂ ಕಳೆದುಕೊಳ್ಳುತ್ತೇವೆ. ಪ್ರಾಣಿಗಳಿಲ್ಲದೆ ನಾವು ಬದುಕಲು ಸಾಧ್ಯವೇ? ಯೋಚಿಸಿ.

ಕೋಷ್ಟಕ . ಭಾರತದಲ್ಲಿ ೧೬೦೦ರಿಂದ ಈಚೆಗೆ ಸರ್ವನಾಶವಾದ ಪಕ್ಷಿಗಳು

ಕ್ರ. ಸಂ.

ಗಣ

ಕುಟುಂಬ

ಹೆಸರು

ಇಂಗ್ಲೀಷ್ ಹೆಸರು

ಕಣ್ಮರೆಯಾಗುವುದಕ್ಕಿಂತ ಮೊದಲು ಯಾವ ವರ್ಷಕಂಡಿತು

ಕಣ್ಮರೆಯಾಗಲು ಕಾರಣ

೧. ಅನ್ಸೆರಿಫಾರ್ಮ್ ಅನೇಟಿಡೆ ಫೊಡೋನೆಸ್ಸಾ ಕ್ಯಾರಿಯೋಫಿಲ್ಲೇಸಿಯಾ ಪಿಂಕ್ ಹೆಡ್ ಡಕ್

೧೯೩೫

ಬೇಟೆ
೨. ಗಾಲ್ಲೀಫಾರ್ನ್ಸ್ ಫ್ಯಾಸಿನಿಡೆ ಓಫ್ರಿಸ್ಟಾ ಸುಫರ್‌ಸಿಲಿಯೋಸಾ ಹಿಮಾಲಯನ್ ಮೌಂಟೇನ್ ಕ್ವಿಲ್

೧೮೬೮

ಬೇಟೆ
೩. ಸ್ಟ್ರೆಗಿಫಾರ್ಮ್ಸ ಸ್ಟ್ರೈಜಿಡೆ ಅಥೆನೇ ಬ್ಲೆವಿಟ್ಟ ಫಾರೆಸ್ಟ್ ಆವ್‌ಲೆಟ್

೧೯೧೪

 

ಕ್ರ.ಸಂ

ಮುಖ್ಯ ಗುಂಪು

ರಾಜ್ಯ

ಜರೀಸಸ್ಯಗಳು (ಪುಚ್ಛ ಸಸ್ಯಗಳು)
೧. ಐಸೋಟಿಸ್ ದಿಕ್ಷಿತ್ತಿ ಶೆಂಧೆ ಮಹಾರಾಷ್ಟ್ರ
೨. ಐಸೊಟಿಸ್ ಸಂಪತ್‌ಕುಮಾರ್ನಿ ಡಿ.ಎನ್.ರಾವ್ ಕರ್ನಾಟಕ
ಅಸ್ಪಿಡಿಯೇಸಿ  
೩. ಲಾಸ್ಟ್ರೆಯೋಪ್ಸಿಸ್ ವಟ್ಟಿ (ಬೆಡ್ಡೊಮೆ) ತಗಾವಾ ಮಣಿಪುರ
ದ್ವಿದಳ ಸಸ್ಯಗಳು ಅಂಕಥೇಸಿ
೪. ಡಿಕ್ಲಿಪ್ಟೇರಾ ಅಬುಯನ್ಸಿಸ್ ಬ್ಲಾಟರ್ ರಾಜಸ್ಥಾನ
ರೂಬಿಯೇಸಿ
೫. ಓಫಿಯೋರೆಝಾ ಬ್ರುನೋಸಿಸ್ ಕರ್ನಾಟಕ, ಕೇರಳ ಮತ್ತು ತಮಿಳುನಾಡು
೬. ಒಫಿಯೋರೈಝಾ ಕಾಡೇಟಾ ಫಿಶರ್ ಕೇರಳ
೭. ಒಫಿಯೋರೈಝಾ ರ್ಯಾಡಿಕನ್ಸ ಕೇರಳ
೮. ವೆಂಡ್‌ಲ್ಯಾಂಡಿಯಾ ಅಂಗುಷ್ಟಿಫೋಲಿಯಾ ತಮಿಳುನಾಡು
ಸ್ಟೆರ್ಕ್ಯೂಲಿಯೇಸಿ
ಸ್ಟೆರ್‌ಕ್ಯೂಲಿಯಾ ಖಾಸಿಯಾನಾ ಮೇಘಾಲಯ
ಏಕದಳ ಸಸ್ಯಗಳು
ಸೈಪರೇಸಿ
೧೦. ಕಾರೆಕ್ಸ್ ರೆಪಂಡಾ ಮೇಘಾಲಯ
ಪೋಯೇಸಿ
೧೧. ಇರಾಗ್ರಾಸ್ಟಿಸ್ ರಾಟ್ಟ್‌ಲೇರಿ ತಮಿಳುನಾಡು
೧೨. ಇರಿಯೋಕ್ರೈಸಿಸ್ ರಂಗಾಚಾರಿ ತಮಿಳುನಾಡು
೧೩. ಹುಬ್ಬಾರ್ಡಿಯಾ ಹೆಪ್ಟಾನ್ಯೂರಾನ್ ಕರ್ನಾಟಕ
ಲಿಲಿಯೇಸಿ
೧೪. ಡಿಪ್‌ಕ್ಯಾಡಿ ಕಾನ್‌ಕೆನೆನ್‌ಸೆ
೧೫. ಡಿಪ್‌ಕ್ಯಾಡಿ ರೀಡಿ ಹೇಬ್ ಮತ್ತು ದಾಸಗುಪ್ತ
೧೬. ಅರ್ಜಿನಿಯಾ ಪಾಲಿಫಿಲ್ಲಾ  
ಆರ್ಕಿಡೇಸಿ
೧೭. ಕ್ಯಾಲಂಥೆ ವೈಟಿನಾ ಸಿಕ್ಕಿಮ್
೧೮. ಪ್ಲಿಯೋನ್ ಲೆಗೆನೇನಿಯಾ ಮೇಘಾಲಯ
ಪಾಮೆ
೧೯. ಕೊರಿಫಾ ಟಾಲಿಯೇರಾ
ಜಿಂಜಿಬರೇಸಿ
೨೦. ಹೆಡಿಚಿಯಮ್ ಮಾರ್ಜಿನೇಟಮ್ ನಾಗಾಲ್ಯಾಂಡ್

 ಕೋಷ್ಟಕ . ಭಾರತದಿಂದ ಕಣ್ಮರೆಯಾದ ಮೇಲ್ವರ್ಗದ ಸಸ್ಯಗಳು

 ಕೋಷ್ಟಕ . ಭಾರತದಲ್ಲಿಯ ಅಳಿವಿನ ಅಂಚಿನಲ್ಲಿರುವ, ಗಾಯಗೊಳಿಸಬಹುದಾದ, ಹಾಗೂ ವಿರಳ ಔಷಧೀಯ ಸಸ್ಯಗಳು

 

ಕ್ರ.ಸ.

ಸಸ್ಯದ ಹೆಸರು

ಶಾಸ್ತ್ರೀಯ ಹೆಸರು

ಪ್ರದೇಶ

೧. ಸಫೇದ ವಿಷ Aconitum deinorrhtzum ಹಿಮಾಲಯ
೨. ಅತಿ ಬಜೆ Aconitum heterophyllum ಹಿಮಾಲಯ
೩. ಕಾಲಮೇಘ Andrographis Paniculata ಭಾರತದ ಮೈದಾನ ಪ್ರದೇಶ
೪. ಅಗಿಲುಗಂಧ Aqualaria agallocha ಈಶಾನ್ಯ ಭಾರತ
೫. ದೇಶಿ ಬೆಲಡೋನಾ Atropa acuminata ಪಶ್ಚಿಮ ಹಿಮಾಲಯ
೬. ಜಲಭ್ರಹ್ಮಿ Bacopa monnierii ಭಾರತದ ಮೈದಾನ ಪ್ರದೇಶ
೭. ರಕ್ತ ಪುನರ್ನವ Boerhaavia diffusa ಭಾರತದ ಮೈದಾನ ಪ್ರದೇಶ
೮. ಕಣ್ಣುಕಾಡಿಗೆ ಗಿಡ Colchicum luteum ಪಶ್ಚಿಮ ಹಿಮಾಲಯ
೯. ವಿಷ ತೀಟೆ Coptis teeta ಅರುಣಾಚಲ ಪ್ರದೇಶ
೧೦. ಡೈಯೋಸ್ಟೋರಿಯಾ ಪ್ರಾಜೆರಿ Dioscorea prazeri ಪೂರ್ವಹಿಮಾಲಯ
೧೧. ಡೈಯೊಸ್ಕೋರಿಯಾ ಡೆಲ್ಟಾಯಿಡಿಸ್ Dioscorea deltoides ಪಶ್ಚಿಮ ಹಿಮಾಲಯ
೧೨. ನೀಲಕಂಠ Gentiana kurroo ಹಿಮಾಲಯ
೧೩. ವಿಷಮಧಾರಿ Glorisoa superba ಭಾರತದ ಮೈದಾನ ಪ್ರದೇಶ
೧೪. ಪುಷ್ಕರ ಮೂಲ Inula racemosa ಕಾಶ್ಮೀರ
೧೫. ಸುಗಂಧ ಸಸ್ಯ Picrorhiza kurooa ಹಿಮಾಲಯ
೧೬. ಕಟುಕ ರೋಹಿಣಿ Picrorhiza kurooa ಹಿಮಾಲಯ
೧೭. ಬನಕಾಕರಿ Podophyllum hexandrum ಹಿಮಾಲಯ
೧೮. ರಕ್ತಚಂದನ Pterocarpus santalinus ಆಂಧ್ರಪ್ರದೇಶ
೧೯. ಸರ್ಪಗಂಧ Rauwolfia serpentina ಭಾರತದ ಮೈದಾನ ಪ್ರದೇಶ
೨೦. ಹೇಮಜ Rheum emodi ಹಿಮಾಲಯ
೨೧. ರೀಯಮ್ ನೊಬೈಲ್ Rheum nobile ಹಿಮಾಲಯ
೨೨. ಶ್ರೀಗಂಧ Santalum album ಕರ್ನಾಟಕ
೨೩. ಕೋಷ್ಠ Saussurea lappa ಹಿಮಾಲಯ
೨೪. ಹೆರಾತು ಕಡ್ಡಿ Swertia chirayita ಹಿಮಾಲಯ
೨೫. ಪಿಂಡೀತಗರ Valeriana wallichii ಹಿಮಾಲಯ
೨೬. ಸುಗಂಧ ಮೂಳ Hedychtum spicatum ಹಿಮಾಲಯ
೨೭. ದಾರು ಹರಿದ್ರ Berberis aristata ಹಿಮಾಲಯ
೨೮. ಖೋರಸಾನಿ Hyoscyamus niger ಭಾರತದ ಮೈದಾನ ಪ್ರದೇಶ
೨೯. ಸೀಮೇಗೋರಂಟಿ Peganum harmala ಹಿಮಾಲಯ
೩೦. ಗಣಿಗಲ ಮಸ್ತೆ Valeriana jatamaust ಹಿಮಾಲಯ

ಕೋಷ್ಟಕ . ಔಷಧೀಯ ಸಸ್ಯಗಳು

 

೧. ಅಶೋಕ (Saraca indica)
೨. ಅರಿಶಿನ ಬೂರಗ (Cochlospermum gosspium)
೩. ಅರಿಶಿಣ ತೇಗ(adina cordifolia)
೪. ಅರಳೆ ಮರ(Ficus religiosa)
೫. ಅಮಟೆ ಮರ(Spondia mangifera)
೬. ಅತ್ತಿ ಮರ(Ficus glomerata)
೭. ಅಳಲೆಕಾಯಿ ಮರ (Terminalia chebula)
೮. ಇಂಗಳ(Balanites roxburghii)
೯. ಕೆಂಪು ಬೂರಗ(Bombax malabaricum)
೧೦. ಕಕ್ಕೆ(Cassia fistula)
೧೧.ಕಡವಳ(Anthocephalus cadamba)
೧೨. ಕಸ್ತೂರಿ ಜಾಲಿ (Acacia farnesiana)
೧೩. ಕರಿ ಮತ್ತಿ (Terminalia tomentosa)
೧೪.ಕಾಚಿನ ಮರ (Acacia catechu)
೧೫. ಕಾಡು ಬೇವು (Melia axedarach)
೧೬. ಕೆಂಪು ಮಂದಾರ(Bauhinia purpurea)
೧೭. ಕೋಡ ಮುರಕ( Holarrehena antidysentrica)
೧೮. ಗೋಡಂಬಿ(Anacardium occidentale)
೧೯. ಜಾಲಿ(Acacia arabica)
೨೦.ದೊಡ್ಡ ಚಳ್ಳಹಣ್ಣಿನ ಮರ(Cordia myxa)
೨೧. ನೀರಲ ಮರ(Eugenia jambolana)
೨೨. ನುಗ್ಗೆ ಮರ(Moringa oleifera)
೨೩. ಪಾರಿಜಾತ(Nyctanthes arbortristis)
೨೪. ಪುತ್ರ ಜೀವಿ(Polyalthia longifolia)
೨೫. ಬಸರಿ ಮರ(Ficus infectoria)
೨೬. ಬನ್ನಿ ಮರಿ(Prosopis spicigera)
೨೭. ಬ್ರಹ್ಮ ವೃಕ್ಷ(Butea frondosa)
೨೮. ಬಾರೆ ಬೋರೆ(Zizyphus jujuba)
೨೯. ಬಿಲ್ವ(Aegle marmelos)
೩೦. ಬೆಟ್ಟನೆಲ್ಲಿ(Phyllanthus emblica)
೩೧. ಬೇವು(Azadirachta indica)
೩೨. ಬೇಲದ ಮರ(Feronia elephntum)
೩೩. ಮರಲಿಂಗ(Crataeva nurvala)
೩೪. ಮದ್ದಾಲೆ(Alstonia scholaris)
೩೫. ಮಾವು(Mangifera indica)
೩೬. ಮುಳ್ಳು ಮುತ್ತುಗ(Erythrina indica)
೩೭. ತಾರೆ(Terminalia bellarica)
೩೮.  ಶಿರೀಷ್(Albizia lebbeck)
೩೯. ಶ್ರೀಗಂಧ(Santalum album)
೪೦. ಸೀತಾಫಲ(Annona squamosa)
೪೧. ಹಲಸು(Atrocarpus integra)
೪೨. ಹುಣಸೆ ಮರ(Tamarindus indica)
೪೩. ಹೂವರಸಿ(Thespesia populnea)
೪೪. ಹೊಳೆ ದಾಸವಾಳ(Lagerstroemia flos-reginae)
೪೫. ಹೊಂಗೆ ಮರ(Pongamia glabra)
೪೬. ಹೊಳೆ ಮತ್ತಿ(Terminalia arjuna)
೪೭. ಹಿಪ್ಪೆ ಮರ(Madhuca indica)
೪೮. ಹಾನುನಂಜಿನ ಗಿಡ(Ruta graveolens)
೪೯. ಕರ್ಪೂರ(Cinnamomum camphora)
೫೦. ಪಚ್ಚೆ ಕರ್ಪೂರ(Dryobalanops aromatica)
೫೧.ಸೋನಾಮುಖಿ(Cassia angustifolia)
೫೨. ಶ್ರೀತುಳಸಿ(Ocimum sanctum)
೫೩. ಕಾಮಕಸ್ತೂರಿ(Ocumum bascilicum)
೫೪. ನೀಲಗಿರಿ(Eucalyptus spp.)
೫೫. ವಿಷನಾಗ(Aconitum ferox)
೫೬. ತಲೆ ಜಾದರಿ(Clematis gouriana)
೫೭. ಅಮೃತ ಬಳ್ಳಿ(Tinospora cordifolia)
೫೮. ತರಿಕೆ(Mahonia nepaulensis)
೫೯. ಶಿಪ್ರಿಗಿಡ(Capparis aphylla)
೬೦. ಕುಷ್ಟಪ(Gynocardia odorata)
೬೧. ನಾಗಸಂಪಿಗೆ(Mesua ferrea)
೬೨. ಸಣ್ಣ ಬಿಂದಿಗೆ ಗಿಡ(Malva sylvestris)
೬೩. ದೆವ್ವ ಹತ್ತಿ(Abroma angusta)
೬೪. ಮುಳ್ಳು ಮದ್ದುಗಿಡ(Fagonia arabica)
೬೫. ಕರಿಬೇವು(Murraya koenigii)
೬೬. ಪಪ್ಪುಳಿ(Ventilago madraspatana)
೬೭. ದಾಳಿಂಬ(Punica granatum)
೬೮. ಗೋರಂಟಿ(Lawsonia enermis)
೬೯. ಕಡವಳೆ(Mitragyana parvifolia)
೭೦. ಬಕುಳ(Mimusops elengi)
೭೧. ಬಿಳಿ ದೇವಕಗಣಿಗಲು(Plumeria alba)
೭೨. ಅಶ್ವಗಂಧ(Withania somnifera)
೭೩. ಉತ್ತರಾಣಿ(Achyranthes aspera)
೭೪. ಈಶ್ವರಿ ಬೇರು(Apama indica)
೭೫. ಹಾಲಗಳ್ಳಿ(Euphorbia tirucalti)
೭೬. ಮರ ಜೌಡಲ(Jatropha curcus)
೭೭. ಔಡಲ(Ricinus communis)
೭೮. ಅಕ್ರೋಡ(Juglans regia)
೭೯. ಕಸ್ತೂರಿ ಅರಿಷಣ(Curcuma aromatica)
೮೦. ಅರಿಶಿಣ(Curcuma longa)
೮೧. ಕಲ್ಲುಶುಂಠಿ(Zingiber zerumbet)
೮೨. ನಾಗದವನ(Crinum asiaticum)
೮೩. ಕೇಸರಿ(Crocus sativus)
೮೪. ಕಾಡು ಚೂರ್ಣಗಡ್ಡೆ(Tacca pinnatifida)
೮೫. ಈರುಳ್ಳಿ(Allium cepa)
೮೬. ಲೋಳೆಸರ(Aloe vera)
೮೭. ಮಜ್ಜಿಗೆ ಗೆಡ್ಡೆ(Asparagus officinalis)
೮೮. ಶತಾವರಿ(Asparagus racemosuas)
೮೯. ಬಜೆ(Acorus calamus)
೯೦. ತಾಲೀಸ ಪತ್ರ(Taxus baccata)

ಮಾನವನಚಪಲಕ್ಕೆಬಲಿಯಾದಪ್ರಾಣಿಪಕ್ಷಿಗಳು

ಡೋಡೋ

ಇಂಗ್ಲೀಷ್ ಭಾಷೆಯಲ್ಲಿ ಡೋಡೋ ಎಂದರೆ ‘ಹೇಳ ಹೆಸರಿಲ್ಲದಂತೆ ನಿರ್ನಾಮವಾಗಿರುವ’ ಎಂದು (ಚಿತ್ರ ೨.೩). ಶುದ್ಧ ಪೆದ್ದನಾಗಿರುವವನನ್ನು “ಅವನೊಬ್ಬ ಡೋಡೋ” ಎನ್ನುತ್ತಾರೆ. ಡೋಡೋ ಒಂದು ಪಕ್ಷಿ. ೧೭ನೇ ಶತಮಾನಕ್ಕಿಂತ ಹಿಂದೆ ಮಾರಿಷಸ್ ದ್ವೀಪದಲ್ಲಿ ವಾಸಿಸುತ್ತಿದ್ದ ಒಂದುಬಗೆಯ ಪಕ್ಷಿ. ಹಿಂದೂ ಮಹಾಸಾಗರದ ಒಂದು ದ್ವೀಪ ಮಾರಿಷಸ್. ಇದರ ವಿಸ್ತರಣೆ ಕೇವಲ ೧೮೫೦ ಚ.ಕಿಮೀ.

ಚಿತ್ರ ೨.೩ ಡೋಡೋ ಪಕ್ಷಿ

ಅದು ಜೀವಿಸುತ್ತಿದ್ದಾಗ ಅದರ ಪರಿಸರದಲ್ಲಿ ಅದಕ್ಕೆ ವೈರಿ ಪಕ್ಷಿ ಹಾಗೂ ವೈರಿ ಮೃಗಗಳಿರಲಿಲ್ಲ. ಆದ್ದರಿಂದ ಇತರ ಎಲ್ಲ ಜೀವಿಗಳೂ ಸ್ವರಕ್ಷಣೆಗಾಗಿ ರೂಪಸಿಕೊಂಡಿರುವಂಥ ಯಾವ ಸಾಧನವನ್ನೂ ಅದು ರೂಪಿಸಿಕೊಂಡಿರಲಿಲ್ಲ. ಅದೊಂದು ಹಾರಲಾರದ ಪಕ್ಷಿಯಾಗಿತ್ತು. ವೇಗವಾಗಿ ಓಡಲೂ ಅದಕ್ಕೆ ಆಗುತ್ತಿರಲಿಲ್ಲ. ಶತ್ರುವಿನೊಡನೆ ಹೋರಾಡುವ ಪ್ರವೃತ್ತಿಯೇ ಅದರಲಿಲ್ಲಿ. ಇಷ್ಟಾದರೂ ಅದು ನಿರ್ಭಯವಾದ ವಾತಾವರಣದಲ್ಲಿ ತನ್ನ ಜೀವನವನ್ನು ಸುಗಮವಾಗಿ ಸಾಗಿಸುತ್ತಿತ್ತು. ಅದರ ಸಂಖ್ಯೆಯೂ ಸಮೃದ್ಧವಾಗಿತ್ತು.

ಕೋಳಿಯ ೨-೩ರಷ್ಟು ಗಾತ್ರವಿದ್ದ ಡೋಡೋ ನೋಡಲು ಅಂದವಾಗಿರಲಿಲ್ಲ. ಅದಕ್ಕೆ ದುಂಡನೆಯ ದೊಡ್ಡ ದೇಹವಿತ್ತು. ಅದಕ್ಕೆ ಅತ್ಯಂತ ಚಿಕ್ಕ ಕಾಲುಗಳಿದ್ದವು. ಅದರ ರೆಕ್ಕೆಗಳು ಮೊಟುಕಾಗಿದ್ದವು. ಕೊಂಡಿಯಂತಹ ಕೊಕ್ಕು ಇದಕ್ಕಿತ್ತು.

೧೫೦೭ರಲ್ಲಿ ಪೋರ್ಚುಗೀಜರು ಆ ದ್ವೀಪಕ್ಕೆ ಬಂದಿಳಿದಾಗ ಅದನ್ನು ನೋಡಿ ಅವರು ಅಚ್ಚರಿಗೊಂಡಿರಬಹುದು. ಅದರ ಮಾಂಸ ರುಚಿಯಾಗಿದೆ ಎಂದು ತಿಳಿದ ಮೇಲೆ ಡೋಡೋದ ಸಂಖ್ಯೆ ಕಡಿಮೆಯಾಗಹತ್ತಿತು. ಬಿಳಿಯರೊಂದಿಗೆ ಬಂದ ನಾಯಿ-ಬೆಕ್ಕುಗಳು ಡೋಡೋಗಳ ಮೂಳೆಗಳನ್ನು ಹಾಗೂ ಮರಿಗಳನ್ನು ತಿಂದುಹಾಕಿದವು. ೧೬೮೦ರ ವೇಳೆಗೆ ಈ ಪಕ್ಷಿ ನಿರ್ನಾಮವಾಯಿತು. ೧೮೦೧ರಲ್ಲಿ ಜೆ.ವಾಸ್ ಎಂಬ ಕಲಾವಿದ ಬಿಡಿಸಿದ ಡೋಡೋವಿನ ಚಿತ್ರವಷ್ಟೇ ಇಂದು ಉಳಿದಿದೆ. ಈ ಚಿತ್ರವನ್ನು ಹೇಗೆ ಬಿಡಿಸಿದರೆಂದು ನೀವು ಕೇಳುತ್ತೀರಾ? ಅಲ್ಲಿ ದೊರೆತ ಮೂಳೆಗಳ ಆಧಾರದ ಮೇಲೆ ಚಿತ್ರವನ್ನು ರಚಿಸಿದ್ದಾರೆ. ಆಕ್ಸ್‌ಫರ್ಡ್ ವಸ್ತು ಸಂಗ್ರಹಾಲಯದಲ್ಲಿ ಡೋಡೋವಿನ ಕಾಲು ಮತ್ತು ಪಾದಗಳನ್ನು ಪ್ರದರ್ಶಿಸಲಾಗಿದೆ.

ಭಾರಿ ಆಕ್

ಉತ್ತರ ಅಟ್ಲಾಂಟಿಕ್ ದ್ವೀಪಗಳಲ್ಲಿ ಬಹು ಸಂಖ್ಯೆಯಲ್ಲಿದ್ದ ಸಾಗರ ಪಕ್ಷಿಗಳು. ಇವುಗಳಲ್ಲಿ ೨೨ ಪ್ರಭೇದಗಳಿದ್ದವು. ಇದರ ಎತ್ತರ ೭೫ ಸೆಮೀ.ಗಳಷ್ಟಿತ್ತು (ಚಿತ್ರ ೨.೪). ಇದರ ಮಾಂಸ ರುಚಿಕರವಾಗಿದ್ದರಿಂದ ೧೫೯೦ರಲ್ಲಿ ಐರಿಷ್ ವ್ಯಾಪಾರಿಯೊಬ್ಬ ಹಡಗಿನ ತುಂಬಾ ಈ ಪಕ್ಷಿಗಳನ್ನು ತನ್ನ ದೇಶಕ್ಕೆ ತೆಗೆದುಕೊಂಡು ಹೋದ. ಇವುಗಳ ಪುಕ್ಕ ಹಾಗೂ ಕೊಬ್ಬಿಗಾಗಿಯೂ ನಾವಿಕರು ಈ ಪಕ್ಷಿಯನ್ನು ಕೊಲ್ಲತೊಡಗಿದರು.

ಆಕ್ ಪಕ್ಷಿಯ ರೆಕ್ಕೆಗಳು ಮೋಟಾಗಿದ್ದುದರಿಂದ ಹಾಗೂ ಕಾಲುಗಳು ಚಿಕ್ಕವಿದ್ದುದರಿಂದ ಅದು ಹಾರಲಾರದೆ ಹಾಗೂ ಓಡಲಾರದೆ ಸುಲಭವಾಗಿ ಬೇಟೆಗೆ ತುತ್ತಾದವು. ಇದಕ್ಕೆ ಜಾಲ ಪಾದವಿದ್ದುದರಿಂದ ಸಲೀಸಾಗಿ ಈಜುತ್ತಿತ್ತು. ಮೊಟ್ಟೆಗಳನ್ನೂ ಇಡಲು ಅದು ದಂಡೆಗೆ ಬಂದಾಗ ನಾವಿಕರು ಅದನ್ನು ಸುಲಭವಾಗಿ ಕೊಲ್ಲುತ್ತಿದ್ದರು. ೨೫೦ ವರ್ಷಗಳ ಕಾಲ ಆಕ್ ಪಕ್ಷಿಗಳನ್ನು ಸತತವಾಗಿ ಸಾಗಿಸಿದರು. ೧೮೩೪ರ ವೇಳೆಗೆ ಆಕ್ ಪಕ್ಷಿಗಳ ಸಂಖ್ಯೆ ಕ್ಷೀಣಿಸಿತದು. ೧೮೪೪ರಲ್ಲಿ ಈ ಪಕ್ಷಿ ಸರ್ವನಾಶವಾಯಿತು.

ಪ್ರಯಾಣಿಕ ಪಾರಿವಾಳ

೧೯ನೇ ಶತಮಾನದ ಅಂತ್ಯದವರೆಗೆ ಈ ಪಾರಿವಾಳಗಳು ಗುಂಪು ಸ್ವಚ್ಛಂದವಾಗಿ ಹಾರಾಡುವುದು ಸರ್ವೇಸಾಮಾನ್ಯವಾಗಿತ್ತು (ಚಿತ್ರ ೨.೪). ಅವು ಆಹಾರ ಅರಸಿ ಹಾರಲು ಪ್ರಾರಂಭಿಸಿದರೆ ಕೆಳಗಿನ ಪ್ರದೇಶದಲ್ಲಿ ಕತ್ತಲೆ ಕವಿಯುತ್ತಿತ್ತಂತೆ. ಒಂದು ಗುಂಪಿನಲ್ಲಿ ಸುಮಾರು ೨೨೩ ಕೋಟಿ ಪಕ್ಷಿಗಳಿದ್ದವೆಂದು ಅಮೇರಿಕದ ಪ್ರಾಣಿಶಾಸ್ತ್ರಜ್ಞ ಅಂದಾಜು ಮಾಡಿದ್ದ. 

ಚಿತ್ರ ೨.೪

 ಈ ಪಕ್ಷಿಯ ಭಾರ ಸುಮಾರು ೨೦೦-೨೫೦ ಗ್ರಾಂ ಇವುಗಳ ಗುಂಪಿಗೆ ಆಹಾರದ ಕೊರತೆಯಿರಲಿಲ್ಲ. ಅಮೇರಿಕದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರು ಈ ಪಕ್ಷಿಯನ್ನು ಮಾಂಸಕ್ಕಾಗಿ ಕೊಲ್ಲುತ್ತಿದ್ದರಾದರೂ ಅಗತ್ಯಕ್ಕಿಂತ ಹೆಚ್ಚು ಪಕ್ಷಿಗಳನ್ನು ಕೊಲ್ಲುತ್ತಿರಲಿಲ್ಲ. ಅಲ್ಲದೆ ಪಕ್ಷಿಗಳ ಸಂತಾನೋತ್ಪತ್ತಿಯ ಕಾಲದಲ್ಲಿ ಅವರು ಪಕ್ಷಿಗಳಿಗೆ ರಕ್ಷಣೆ ಒದಗಿಸುತ್ತಿದ್ದರು. ಪರಿಸರ ಸಮತೋಲನ ಹೇಗೆ ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಅಮೇರಿಕಕ್ಕೆ ನೆಲೆಸಲು ಬಂದ ಬಿಳಿಯರಿಗೆ ಪರಿಸರ ಪ್ರಜ್ಞೆ ಶೂನ್ಯವಾಗಿತ್ತು. ಒಮ್ಮೆ ಈ ಪಕ್ಷಿಯ ಮಾಂಸದ ರುಚಿಯನ್ನು ಉಂಡ ಬಿಳಿಯರು ಅವುಗಳ ಮಾರಣಹೋಮ ಪ್ರಾರಂಭಿಸಿದರು. ಮಾರಣಹೋಮ ಪ್ರಾರಂಭವಾದ ಕೇವಲ ೩೦ ವರ್ಷಗಳಲ್ಲಿ ಪರಿಸ್ಥಿತಿ ತೀರ ಹದಗೆಟ್ಟಿತು. ೧೯೦೯ರಲ್ಲಿ ಕನಿಷ್ಠ ಒಂದು ಪಾರಿವಾಳವನ್ನಾದರೂ ಪತ್ತೆಮಾಡಿದವರಿಗೆ ಬಹುಮಾನ ಘೋಷಿಸಲಾಯಿತು. ಆದರೆ ಯಾರಿಂದಲೂ ಈ ಪಕ್ಷಿಯನ್ನು ಪತ್ತೆಮಾಡಲಾಗಲಿಲ್ಲ. ಯಾಕೆಂದರೆ ೧೯೦೨ರಲ್ಲಿಯೇ ಇದು ನಿರ್ನಾಮವಾಗಿತ್ತು.

ಮೋವಾ

ಮೋವಾ ಹಾರಲಾರದ ಪಕ್ಷಿ. ಇದರಲ್ಲಿ ೦.೫-೪.೦ಮೀ. ಎತ್ತರವುಳ್ಳ ಪ್ರಭೇದಗಳಿದ್ದವು (ಚಿತ್ರ ೨.೪) ಈ ಪಕ್ಷಿ  ನ್ಯೂಜಿಲೆಂಡಿಗೆ ಮಾತ್ರ ಸೀಮಿತವಾಗಿತ್ತು. ಇದರ ಬಲಿಷ್ಟ ಕಾಲಿನಲ್ಲಿ ನಾಲ್ಕು ಬೆರಳುಗಳಿದ್ದವು. ಚಿಕ್ಕ ತಲೆಯುಳ್ಳ ದೊಡ್ಡ ಗಾತ್ರ ಪಕ್ಷಿ. ಮರಳುಗಾಡಿನಲ್ಲಿ ವಾಸವಾಗಿತ್ತು. ನ್ಯೂಜಿಲೆಂಡಿಗೆ ಮಾನವ ಪಾದಾರ್ಪಣೆ ಮಾಡಿದಂದಿನಿಂದ ಇದರ ಮಾರಣಹೋಮವು ಪ್ರಾರಂಭವಾಯಿತು. ಇದರ ಮಾಂಸ ಬಹಳ ರುಚಿ. ಹೀಗಾಗಿ ಅದರ ಬೇಟೆಯ ಪ್ರಮಾಣ ಹೆಚ್ಚಿತು. ಮೂಳೆಗಳನ್ನು ಆಯುಧದಂತೆ  ಬಳಸುತ್ತಿದ್ದರು.ಮೊಟ್ಟೆಯ ಚಿಪ್ಪನ್ನು ನೀರು ತುಂಬಲು ಬಳಸುತ್ತಿದ್ದರು. ಹೀಗಾಗಿ ಅದರ ಬೇಟೆಯ ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಳವಾಯಿತು. ೧೭ನೇ ಶತಮಾನದ ಅಂತ್ಯದ ವೇಳೆಗೆ ಮೋವಾ ಸರ್ವನಾಶವಾಗಿದ್ದವು.

ಥೈಲಾಸಿನಸ್

ಇದೊಂದು ವಿಚಿತ್ರ ಪ್ರಾಣಿ. ಟಾಸ್ಮೇನಿಯಾದಲ್ಲಿ ವಾಸಮಾಡಿಕೊಂಡಿತ್ತು. ಇದರ ಮೂತಿ ನಾಯಿ ಮೂತಿಯಂತಿದ್ದು ಇದು ಕಾಂಗರೂ ಜಾತಿಗೆ ಸೇರಿದ ಪ್ರಾಣಿ. ಇದರ ಹಿಂಭಾಗದ ಡಬ್ಬದ ಮೇಲೆ ಜಿರಾಫೆಗೆ ಇದ್ದಂತೆ ಪಟ್ಟಿಗಳಿದ್ದವು. ಇದೊಂದು ಒಳ್ಳೆಯ ಬೇಟೆಗಾರ ಪ್ರಾಣಿಯಾಗಿತ್ತು. ಇದರ ಬೇಟೆಗೆ ನಿಂತ ಬೇಟೆಗಾರರು ಈ ಪ್ರಾಣಿಯ ನಾಶಕ್ಕೆ ಕಾರಣವಾದರು. ೧೯೩೩ರಲ್ಲಿ ಈ ಪ್ರಾಣಿ ಕಣ್ಮರೆಯಾಯಿತು.

ಕ್ವಾಗ್ಗಾ

ಇದೂ ವಿಚಿತ್ರವಾದ ಪ್ರಾಣಿಯೇ. ನೋಡಲು ಕುದುರೆಯಂತೆ ಕಂಡರೂ, ಇದರ ಮುಖದಿಂದ ದೇಹದ ಮಧ್ಯದವರೆಗೆ ಜೀಬ್ರಾಕ್ಕಿರುವಂತೆ ಪಟ್ಟಿಗಳಿವೆ. ಕಾಲುಗಳ ಬಣ್ಣ ದೇಹದ ಬಣ್ಣಕ್ಕಿಂತ ಸ್ವಲ್ಪ ಕಡಿಮೆ. ದಕ್ಷಿಣ ಆಫ್ರಿಕಾದಲ್ಲಿ ವಾಸಿಉತ್ತಿದ್ದ ಗೊರಸುಳ್ಳ ಸ್ತನಿ. ಇದರ ಮಾಂಸ ಹಾಗೂ ಚರ್ಮಕ್ಕೆ ಬೇಡಿಕೆ ಹೆಚ್ಚಿ ಕೊಲೆ ಪ್ರಾರಂಭವಾಗಿ ೧೮೭೨ರಲ್ಲಿ ಈ ಪ್ರಾಣಿಯ ಕೊಲೆ ನಿಂತೇ ಹೋಯಿತು.

ಸೈಲ್ರನ ಕಡಲ ಹಸು

ಇದೂ ಕೂಡ ವಿಚಿತ್ರವಾದ ಪ್ರಾಣಿ. ಇದರ ಮುಖ ಗೋವಿನಂತೆ, ದೇಹ ಮೀನಿನಂತೆ. ಈಜಾಡಲು ಎರಡು ಪುಟ್ಟ ಹುಟ್ಟಿನಂತೆ ಕೆರ‍್ಕೆಗಳಿವೆ. ಉತ್ತರ ಫೆಸಿಫಿಕ್ ಸಮುದ್ರದಲ್ಲಿ ವಾಸಮಾಡಿಕೊಂಡಿತ್ತು. ಇದರ ಉದ್ದ ಸುಮಾರು ೯ ಮೀ.ಗಳಷ್ಟಿತ್ತು. ಮಿತಿ ಮೀರಿದ ಬೇಟೆಯಿಂದ ಈ ಮುಗ್ದ ಪ್ರಾಣಿ ೧೭೬೬ರಲ್ಲಿ ಸರ್ವನಾಶವಾಯಿತು.

ಅಳಿವಿನಅಂಚಿನಲ್ಲಿರುವಕೆಲವುಪ್ರಾಣಿಗಳು

ಚೀತಾ

ನಮ್ಮ ದೇಶದಿಂದ ನಿರ್ನಾಮವಾಗಿದೆ.