ಕೆಂಪು ದತ್ತ ಪುಸ್ತಕ        

ಜೀವಿ ವಿಕಾಸದಲ್ಲಿ ಅನೇಕ ಪ್ರಭೇದಗಳು ಜನಿಸಿದವು ಹಾಗೂ ಅನೇಕ ಪ್ರಭೇದಗಳು ಕಾಲನ ವಶವಾದವು. ಈ ವಿಶ್ವದಲ್ಲಿ ಬದಲಾವಣೆಯೊಂದೇ ಶಾಶ್ವತ. ಕಾಲನ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಭೇದಗಳು ಉಳಿದುಕೊಂಡವು. ಅನುತ್ತೀರ್ಣವಾದ ಪ್ರಭೇದಗಳು ಮಣ್ಣು ಸೇರಿದವು. ಹುಟ್ಟುಸಾವು ಜೀವ ಜಗತ್ತಿನಲ್ಲಿ ಸಹಜ ಹಾಗೂ ಅನಿವಾರ್ಯ.

ಯಾವುದೇ ಜೀವಿಯು ಗೋಚರ ಭವಿಷತ್ತಿನಲ್ಲಿ ವಿನಾಶವಾಗುವ ಲಕ್ಷಣಗಳು ಕಂಡು ಬಂದರೆ ಅಂಥ ಜೀವಿಯು ಅಳಿವಿನಂಚಿನಲ್ಲಿದೆ ಎಂದು ಹೇಳಬಹುದು. “ಕೆಂಪು ದತ್ತ ಪುಸ್ತಕ”ದ (Red data book) ಪರಿಕಲ್ಪನೆಯು ಸರ್ ಪೀಟರ್ ಸ್ಕಾಟ್ (೧೯೬೦) ಅವರಿಂದ ಅಭಿವೃದ್ಧಿಯಾಯಿತು. ಜೀವಿಗಳು ಯಾವ ರೀತಿಯಾಗಿ ಅಪಾಯಕ್ಕೊಳಗಾಗಿವೆ ಹಾಗೂ ಅಪಾಯದ ಮಟ್ಟ ಏನು ಎಂಬುದನ್ನಾಧರಿಸಿ ವಿನಾಶದ ಅಂಚಿನಲ್ಲಿರುವ ಜೀವಿಗಳ ಪಟ್ಟಿಯನ್ನು ತಯಾರಿಸುತ್ತಾರೆ. ಜೀವಿಗಳು ವಿನಾಶವಾಗಲಿಕ್ಕೆ ಕಾರಣಗಳೇನು ಎಂಬುದನ್ನು ಕೆಂಪು ದತ್ತ ಪುಸ್ತಕವೂ ಜನಸಾಮಾನ್ಯರಿಗೆ ತಿಳಿಸುತ್ತದೆ.

ಜಾಗತಿಕ ನಿಸರ್ಗ ಹಾಗೂ ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಸಂಸ್ಥೆಯು (IUCN) ಜಾಗತಿಕವಾಗಿ ಕೆಂಪು ದತ್ತ ಪುಸ್ತಕವನ್ನು ಸಂಕಲಿಸಿದೆ. ಈ ಸಂಸ್ಥೆ ಪ್ರಕಟಿಸಿದ ಕೆಂಪು ದತ್ತ ಪುಸ್ತಕ (೧೯೯೦)ದಲ್ಲಿ ಜಾಗತಿಕ ಮಟ್ಟದಲ್ಲಿ ವಿನಾಶದ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿ ಇದೆ. ಅನೇಕ ರಾಷ್ಟ್ರಗಳು ರಾಷ್ಟ್ರೀಯ ಕೆಂಪು ದತ್ತ ಪಟ್ಟಿ ತಯಾರಿಸಿವೆ. ಈ ಎರಡೂ ಕೆಂಪು ದತ್ತ ಪುಸ್ತಕಗಳು ಬೇರೆ ಬೇರೆ ಎಂಬುದನ್ನು ಗಮನದಲ್ಲಿಡಬೇಕು.

ಪ್ರಾಣಿಗಳನ್ನು .ಯು.ಸಿ.ಎನ್ ಹೀಗೆ ಪಟ್ಟಿ ಮಾಡಿದೆ.

. ಅಳಿದು ಹೋದ ಪ್ರಾಣಿಗಳು: ಐವತ್ತು ವರ್ಷಗಳಿಂದ ಈಚೆಗೆ ಈ ಪ್ರಾಣಿಗಳು ಕಂಡುಬಂದಿಲ್ಲ.

. ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳು: ಅಳಿವಿನ ಭಯದಲ್ಲಿರುವ ಪ್ರಾಣಿಗಳ ವಿನಾಶಕ್ಕೆ ಕಾರಣವಾದ ಅಂಶಗಳು ಹೀಗೆಯೇ ಮುಂದುವರಿದರೆ ಅಳಿವು ನಿಶ್ಚಿತ ಹಾಗೂ ಈ ಪ್ರಾಣಿ ಅಳಿದು ಹೋಗಿದೆ ಎಂದು ಈ ಮೊದಲು ತಿಳಿದಿದ್ದು, ಕಾಡಿನಲ್ಲಿ ಇತ್ತೀಚಿನ ೫೦ ವರ್ಷಗಳಲ್ಲಿ ಕಂಡುಬಂದಿದ್ದರೆ.

. ಗಾಯಗೊಳಿಸಬಹುದಾದ ಪ್ರಾಣಿಗಳು: ಇದಕ್ಕೆ ಕಾರಣವಾದ ಅಂಶಗಳು ಮುಂದುವರಿದರೆ ಇಷ್ಟರಲ್ಲೇ ಅಳಿವಿನ ಅಂಚಿಗೆ ಸರಿಯುವ ಪ್ರಾಣಿ. ಅತಿ ಬಳಕೆ, ಆವಾಸ ನಾಶ, ವಾತಾವರಣದಲ್ಲಾದ ಬದಲಾವಣೆ, ಈ ಪ್ರಾಣಿಗಳ ಸಂಖ್ಯೆ ಹೆಚ್ಚು ಕಡಿಮೆಯಾಗುವುದು ಹಾಗೂ ಅವುಗಳ ಜೀವಕ್ಕೆ ರಕ್ಷಣೆ ದೊರೆಯದಿದ್ದರೆ, ಇವುಗಳ ಜೀವಕ್ಕೆ ಭಯವಿದೆ. ಇಂಥ ಸಮಯದಲ್ಲಿ ಈ ಪ್ರಾಣಿಗಳು ನಾಶವಾಗುವ ಲಕ್ಷಣಗಳು ಹೆಚ್ಚುತ್ತವೆ.

. ವಿರಳ ಪ್ರಾಣಿಗಳು: ಪ್ರಪಂಚದಾದ್ಯಂತ ಇವುಗಳ ಸಂಖ್ಯೆ ಕಡಿಮೆ ಇದೆ. ಸಧ್ಯಕ್ಕೆ ಯಾವುದೇ ತರಹದ ಭಯ ಇವುಗಳಿಗೆ ಇಲ್ಲ. ಆದರೆ ಭವಿಷ್ಯದಲ್ಲಿ ಭಯ ತಪ್ಪಿದ್ದಲ್ಲ.

. ಅನಿರ್ಧರಿತ ಪ್ರಾಣಿಗಳು: ಇವು ವಿನಾಶದ ಅಂಚಿನಲ್ಲಿರುವ ಪ್ರಾಣಿಗಳೆಂದೋ, ಗಾಯಗೊಳಿಸುವಂಥವುಗಳೆಂದೋ ಅಥವಾ ವಿರಳವಾಗಿವೆ ಎಂದೋ ತಿಳಿದುಕೊಂಡಿದ್ದು ಹಾಗೂ ಪ್ರಾಣಿಗಳ ವಿವರ ಗೊತ್ತಿರದಿದ್ದರೆ ಅವನ್ನು ಯಾವ ಪಂಗಡಕ್ಕೆ ಸೇರಿಸಬೇಕೆಂಬುದು ತಿಳಿಯದಿದ್ದರೆ ಅವು ಅನಿರ್ಧರಿತ ಪ್ರಾಣಿಗಳು.

. ಪ್ರಾಣಿಗಳ ಬಗ್ಗೆ ಕಡಿಮೆ ತಿಳಿವಳಿಕೆ: ಪ್ರಾಣಿಗಳ ಬಗ್ಗೆ ನಿರ್ದಿಷ್ಟವಾದ ವಿವರಗಳು ಇರದಿದ್ದರೆ ಅವುಗಳನ್ನು ಯಾವುದಾದರೂ ಒಂದು ಪಂಗಡಕ್ಕೆ ಸೇರಿಸಬಹುದು.

ಮೇಲಿನ ವ್ಯಾಖ್ಯಾನಗಳನ್ನು ಸಸ್ಯಗಳಿಗೂ ಅಳವಡಿಸಬಹುದು.

ಜೀವಿಗಳ ಭಯಕ್ಕೆ ಕಾರಣಗಳು

ಪ್ರಭೇದಗಳಿಗೆ ಅಪಾಯ ಹುಟ್ಟಿಸಿರುವ ಕಾರಣಗಳ ಮಾನವನಿಂದ ಹುಟ್ಟಿಕೊಂಡಿರಬಹುದು ಅಥವಾ ಅವನ ಪ್ರಭಾವಕ್ಕೊಳಗಾಗಿರಬಹುದು (ಸ್ಥಂಬಾಲೇಖನ:೩).

 • ವ್ಯವಸಾಯ, ಜನರ ವಾಸಸ್ಥಾನ ನಿರ್ಮಾಣ, ಅರಣ್ಣೀಕರಣ, ಬೆಂಕಿ ಹಾಗೂ ಪರಿಸರ ಮಾಲಿನ್ಯದಿಂದ ವಾಸಸ್ಥಾನದಲ್ಲಿ ಬದಲಾವಣೆ ಅಥವಾ ವಾಸಸ್ಥಾನ ನಾಶ.
 • ಸ್ವಪ್ರಯೋಜನಕ್ಕಾಗಿ ಜೀವಿಗಳ ಮಿತಿ ಮೀರಿದ ಬಳಕೆ.
 • ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಪರದೇಶದ ಸಸ್ಯ ಪ್ರಭೇದಗಳನ್ನು ತಂದು ನೆಡುವುದು, ಸ್ವದೇಶಿ ಪ್ರಭೇದಗಳ ಜೊತೆ ಸಂಕರಣವಾಗುವುದು.
 • ಪೀಡೆ ಎಂದು ತಿಳಿದು ಯಾವುದೋ ಒಂದು ಪ್ರಭೇದವನ್ನು ಹಾಳು ಮಾಡುವುದು, ನಿಯಂತ್ರಿಸುವುದು ಹಾಗೂ ತೊಂದರೆ ಕೊಡುವುದು.
 • ದೊಡ್ಡ ಪ್ರಮಾಣದಲ್ಲಿ ಸಾಕು ಪ್ರಾಣಿ ಅಥವಾ ಸಸ್ಯ ಪ್ರಭೇದಗಳನ್ನು ಹೊಸದಾಗಿ ತರುವುದರಿಂದ ಸ್ಥಳೀಯ ಹಾಗೂ ಪರದೇಶಿಯ ಕಾಯಿಲೆಗಳು ಹೆಚ್ಚುತ್ತವೆ. 

ಸ್ಥಂಬಾಲೇಖನ ೩: ಭೀತಿಯ ವಿಶ್ಲೇಷಣ: ಪಕ್ಷಿಗಳು

 ಜಾಗತಿಕ ಮಟ್ಟದಲ್ಲಿ ಅಪಾಯದಲ್ಲಿರುವ ಸಸ್ಯಪ್ರಾಣಿಗಳು

 

ಕೆಂಪು ದತ್ತಿ ಪುಸ್ತಕದ (೧೯೯೦) ಪ್ರಕಾರ ಸುಮಾರು ೪೪೫೨ ಪ್ರಾಣಿ ಪ್ರಭೇದಗಳು ಭಯದ ನೆರಳಿನಲ್ಲಿವೆ (ಕೋಷ್ಟಕ ೨.೧) ಪ್ರಪಂಚದಲ್ಲಿ ಒಟ್ಟು ೧೦ ಲಕ್ಷ ಪ್ರಾಣಿಗಳನ್ನು ವಿವರಿಸಲಾಗಿದೆ. ಅವುಗಳ ಪೈಕಿ ಸೇಕಡಾ ೧೧.೭ರಷ್ಟು ಸ್ತನಿಗಳು, ಸೇ. ೧೦.೬ರಷ್ಟು ಪಕ್ಷಿಗಳು, ಸೇ. ೩.೬ರಷ್ಟು ಮೀನುಗಳು ಹಾಗೂ ಸೇ. ೩.೫ರಷ್ಟು ಸರೀಸೃಪಗಳು ಹೆಚ್ಚು ಭಯದಲ್ಲಿವೆ. ಜೊತೆಗೆ ಸೇಕಡಾ ೦.೧೫ರಷ್ಟು ಕೀಟ (೧೦೮೩) ಪ್ರಭೇದಗಳೂ ಭಯದ ನೆರಳಿನಲ್ಲಿವೆ. ದೊಡ್ಡ ಗಾತ್ರದ ಕಶೇರುಕಗಳು ಚಿಕ್ಕ ಗಾತ್ರದ ಅಕಶೇರುಕಗಳಿಗಿಂತ ಹೆಚ್ಚು ಭಯದಲ್ಲಿವೆ (ಕೋಷ್ಟಕ ೨.೧).

ಕೋಷ್ಟಕ .೧ವಿನಾಶದ ಅಂಚಿನಲ್ಲಿರುವ ಪ್ರಾಣಿಗಳು (.ಯು.ಸಿ.ಎನ್ ೧೯೯೦ ಕೆಂಪು ಪಟ್ಟಿ)

ಕ್ರ. ಸಂ.

ಪ್ರಾಣಿಗಳು

ಪ್ರಭೇದಗಳ ಸಂಖ್ಯೆ

ವಿವರಿಸಿದ ಒಟ್ಟು ಪ್ರಭೇದಗಳು

ಭಯದಲ್ಲಿರುವ

ಅಳಿವಿನ ಅಂಚಿನಲ್ಲಿರುವ

೧. ಅಕಶೇರುಕಗಳು

೧೯೭೭

೧೪೯

೯೪೭೧೧೯

೨. ಕಶೇರುಕಗಳು

೨೪೭೫

೬೮೬

೧೨೭೮೪

೩. ಮೀನುಗಳು

೭೧೩

೩೬೮

೨೦೦೦೦

೪. ಉಭಯಚರಿಗಳು

೫೭

೪೦೧೪

೫. ಸರೀಸೃಪಗಳು

೧೬೯

೩೮

೪೭೭೧

೬. ಪಕ್ಷಿಗಳು

೧೦೨೯

೧೩೨

೯೬೭೨

೭. ಸಸ್ತನಿಗಳು

೫೦೭

೧೪೦

೪೩೨೭

  ಒಟ್ಟು

೪೪೫೨

೮೩೫

೯೮೯೯೦೩

ಕೋಷ್ಟಕ ೨.೨ ಅಳಿವಿನಂಚಿನಲ್ಲಿರುವ ಕಶೇರುಕ ಹಾಗೂ ಸಸ್ಯಗಳನ್ನು ತೋರಿಸುತ್ತದೆ. ಏಸಿಯಾದಲ್ಲಿ ೬೬೦೮ ಸಸ್ಯ ಪ್ರಭೇದಗಳು ಮತ್ತು ೧೬೯೪ ಕಶೇರುಕ ಪ್ರಭೇದಗಳು ಅಳಿವಿನಂಚಿನಲ್ಲಿವೆ. ನಮ್ಮ ದೇಶದಲ್ಲಿ ೧೩೩೬ ಸಸ್ಯ ಪ್ರಭೇದಗಳು ಹಾಗೂ ೧೩೯ ಕಶೇರುಕ ಪ್ರಭೇದಗಳು ಅಳಿವಿನಂಚಿನಲ್ಲಿವೆ. ಉಳಿದ ದೇಶಗಳಿಗೆ ಹೋಲಿಸಿದರೆ ಅಳಿವಿನ ಅಂಚಿಗೆ ಸರಿದ ಜೀವಿಗಳ ಸಂಖ್ಯೆ ನಮ್ಮ ದೇಶದಲ್ಲಿ ಹೆಚ್ಚು.

ಕೋಷ್ಟಕ . ಭಯದ ನೆರಳಿನಲ್ಲಿರುವ ಕಶೇರುಕಗಳು ಹಾಗೂ ಸಸ್ಯಗಳ ಸಂಖ್ಯೆ

ಕ್ರ. ಸಂ.

ಸ್ಥಳ

ಕಶೇರುಕಗಳು

ಸಸ್ತನಿಗಳು

ಪಕ್ಷಿ ಗಳು

ಸರೀಸೃಪಗಳು

ಅಭಯ ಚರಿಗಳು

ಮೀನುಗಳು

ಸಸ್ಯಗಳು

೧. ಏಸಿಯಾ

೧೬೯೪

೪೯೭

೯೧೮

೧೪೬

೧೨೪

೬೬೦೮

೨. ಭಾರತ

೧೩೮

೩೯

೭೨

೧೭

೧೩೩೬

೩. ಯುರೋಪ್

೫೪೧

೬೬

೩೯೬

೧೬

೧೫

೪೮

೨೬೭೭

೪. ದಕ್ಷಿಣ ಮತ್ತು ಮಧ್ಯ ಅಮೇರಿಕ

೭೫೬

೧೪೫

೨೧೯

೮೮

೨೭

೨೭೭

೫೭೪೭

೫. ದಕ್ಷಿಣ ಅಮೇರಿಕ

೮೪೮

೨೩೯

೫೩೫

೫೮

೧೪

೨೦೬೧

೬. ಆಫ್ರಿಕ

೧೨೮೭

೬೮೮

೪೫೩

೮೯

೪೯

೩೩೦೮

೭. ಓಸಿಯಾನಿಯಾ

೨೭೪

೬೦

೧೬೮

೨೧

೧೮

೨೬೭೩

ಆಕರ: ಜಾಗತಿಕ ನಿಸರ್ಗ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಸಂಸ್ಥೆ ೧೯೯೦.

ಕೋಷ್ಟಕ ೨.೭ ನಮ್ಮ ದೇಶದಲ್ಲಿಯ ಭಯದಲ್ಲಿರುವ, ಗಾಯಗೊಳಲಿಸಬಹುದಾದ ಹಾಗೂ ವಿರಳ ಔಷಧೀಯ ಸಸ್ಯಗಳನ್ನು ತೋರಿಸುತ್ತದೆ. ಕೋಷ್ಟಕ ೨.೪ ಯಾವ ದೇಶದಲ್ಲಿ ಹೆಚ್ಚು ಪ್ರಾಣಿಗಳು ವಿನಾಶದ ಅಂಚಿನಲ್ಲಿವೆ ಎಂಬುದನ್ನು ತೋರಿಸುತ್ತದೆ. ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚು ಸ್ತನಿ ಹಾಗೂ ಪಕ್ಷಿ ಪ್ರಭೇದಗಳು ಅಳಿವಿನ ಅಂಚಿಗೆ ಸರಿದಿವೆ.

ಕೋಷ್ಟಕ . ಯಾವ ದೇಶದಲ್ಲಿ ಎಷ್ಟು ಕಶೇರುಕಗಳು ಅಳಿವಿನ ಅಂಚಿನಲ್ಲಿವೆ (ಐಯುಸಿಎನ್ ೧೯೯೦)

ಸಸ್ತನಿಗಳು

ಪಕ್ಷಿಗಳು

ಸರೀಸೃಪಗಳು

ಉಭಯಚರಿಗಳು

ಮೀನುಗಳು

ದೇಶ

ಸಂಖ್ಯೆ

ದೇಶ

ಸಂಖ್ಯೆ

ದೇಶ

ಸಂಖ್ಯೆ

ದೇಶ

ಸಂಖ್ಯೆ

ದೇಶ

ಸಂಖ್ಯೆ

ಮಡಗಾಸ್ಕರ ೫೩ ಇಂಡೋನೇಷ್ಯಾ ೧೩೫ ಯುಎಸ್‌ಎ ೨೫ ಯುಎಸ್‌ಎ ೨೨ ಯುಎಸ್‌ಎ ೧೬೪
ಇಂಡೋನೇಷ್ಯಾ ೪೯ ಬ್ರಾಝಿಲ್ ೧೨೩ ಭಾರತ ೧೭ ಇಟಲಿ ಮೆಕ್ಸಿಕೊ ೯೮
ಬ್ರಾಝಿಲ್ ೪೦ ಚೀನಾ ೮೩ ಮೆಕ್ಸಿಕೊ ೧೬ ಮೆಕ್ಸಿಕೊ ಇಂಡೋನೇಷ್ಯಾ ೨೯
ಭಾರತ ೩೯ ಕೋಲಂಬಿಯಾ ೬೯ ಇಂಡೋನೇಷ್ಯಾ ೧೩ ಭಾರತ ಫಿಲಪೈನ್ಸ್ ೨೧
ಆಸ್ಟ್ರೇಲಿಯಾ ೩೮ ಪೆರು ೬೫ ಮಲೇಶಿಯಾ ೧೨ ನ್ಯೂಜಿಲೆಂಡ್ ಆಸ್ಟ್ರೇಲಿಯಾ ೧೬
ಝೈರೆ ೩೧ ಇಕ್ವಡೋರ್ ೬೪ ಬ್ರಾಝಿಲ್ ೧೧ ಸೆಟೆಲ್ಲೆಸ್ ಕೆನಡಾ ೧೫
ತಾಂಜಾನಿಯಾ ೩೦ ಅರ್ಜೆಂಟಿನಾ ೫೩ ಕೋಲಂಬಿಯಾ ೧೦ ಸ್ಪೇನ್ ಥೈಲ್ಯಾಂಡ್ ೧೩
ಪೆರು ೨೯ ಯುಎಸ್ ೪೩ ಮಡಗಾಸ್ಕರ್ ೧೦ ಯುಗೋಸ್ಲಾವಿಯ ಶ್ರೀಲಂಕಾ ೧೨
ವಿಯಟ್ನಾಮ್ ೨೮ ಮಯನ್‌ಮಾರ್ ೪೨ ಮಯನ್ಮಾರ್ ೧೦     ಕ್ಯಾಮರೂನ್ ೧೧

ಜೀವಿ ಪ್ರಭೇದಗಳು ಅಳಿವಿನಂಚಿಗೆ ಸರಿಯಲು ಅನೇಕ ಕಾರಣಗಳಿವೆ. ಯಾವುದೇ ಒಂದು ದೇಶದಲ್ಲಿಯ, ಅಳಿವಿನಂಚಿಗೆ ಸರಿದ ಪ್ರಭೇದಗಳನ್ನು ಆ ದೇಶದ ಒಟ್ಟು ಪ್ರಭೇದಗಳ ಜೊತೆ ಹೋಲಿಸಬೇಕು. ಸಾಮಾನ್ಯವಾಗಿ ಉಷ್ಣವಲಯದ ದೇಶಗಳಲ್ಲಿ ಪ್ರಭೇದಗಳು ಹೆಚ್ಚು. ಜೊತೆಗೆ ಈ ದೇಶಗಳಲ್ಲಿ ಜನಸಂಖ್ಯಾ ಸ್ಪೋಟವಾಗಿ ಆವಾಸಗಳ ಮೇಲೆ ಹೆಚ್ಚು ಒತ್ತಡ ಬಿದ್ದಿದೆ. ಉಷ್ಣವಲಯದ ಆರ್ದ್ರ ಅರಣ್ಯ ಹಾಗೂ ಗಿರಿಪ್ರದೇಶದ ಉಷ್ಣವಲಯದ ಮಳೆಗಾಡುಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಪ್ರಭೇದಗಳು ಅಳಿವಿನಂಚಿಗೆ ಸರಿದಿವೆ. ಸವಾನಾ (ಹುಲ್ಲುಗಾವಲು), ಮರಳುಗಾಡು, ಅರೆಶುಷ್ಕ ಪ್ರದೇಶಗಳಲ್ಲಿ ವಿನಾಶದ ಅಂಚಿಗೆ ಸರಿದಿರುವ ಪ್ರಾಣಿ ಪ್ರಭೇದಗಳ ಸಂಖ್ಯೆಯೂ ಹೆಚ್ಚು. ಆದರೆ ಸಮಶೀತೋಷ್ಣ ಹಾಗೂ ದೃವ ಪ್ರದೇಶಗಳ ಆವಾಸದಿಂದ ಕಡಿಮೆ ಪ್ರಮಾಣದಲ್ಲಿ ಪ್ರಭೇದಗಳು ಅಳಿವಿನಂಚಿಗೆ ಸರಿಯುತ್ತವೆ.

ಭೂವಾಸಸ್ಥಳಗಳಿಗೆ ಹೋಲಿಸಿದರೆ, ಜಲವಾಸಸ್ಥಳಗಳನ್ನು ನಾವು ಹೆಚ್ಚು ಗಮನಿಸಿಲ್ಲ. ಪ್ರಪಂಚದಲ್ಲಿ ಸುಮಾರು ೧೮೦೦ ಸಿಹಿ ನೀರಿನ ಪ್ರಭೇದಗಳು ನಶಿಸಿವೆ ಅಥವಾ ಅಳಿವಿನಂಚಿಗೆ ಸರಿದಿವೆ. ಸೇಕಡಾ ೨೦ರಷ್ಟು ಮೀನು ಪ್ರಭೇದಗಳು ಆವಾಸನಾಶ, ಆವಾಸ ಮಾರ್ಪಾಟು, ಮಾಲಿನ್ಯ ಹಾಗೂ ಮಿತಿ ಮೀರಿದ ಬಳಕೆಯಿಂದ ನಾಶವಾಗಿವೆ ಅಥವಾ ಅಳಿವಿನಂಚಿಗೆ ಸರಿದಿವೆ.

ಭಾರತದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳು

ಜೀವ ಮಂಡಲದಲ್ಲಿ ಮಾತ್ರ ಜೀವಿಗಳಿವೆ. ಜೀವಮಂಡಲದ ದಪ್ಪ ಸುಮಾರು ೧೬ ಕಿಮೀ. ಭೂಮಿಯ ಗಾತ್ರಕ್ಕೆ ಹೋಲಿಸಿದರೆ ಇದೊಂದು ತೆಳುವಾದ ಪರೆ. ಜೀವಿಗಳು ಬದುಕಲಿಕ್ಕೆ ಬೇಕಾದ ಸೂಕ್ತವಾದ ಹವಾಮಾನ, ಹೇರಳವಾದ ಆಹಾರ, ಹಾಗೂ ತಮ್ಮ ವಂಶವನ್ನು ಅಭಿವೃದ್ಧಿ ಮಾಡಿಕೊಳ್ಳಲು ಬೇಕಾದ ಸೂಕ್ತ ಪರಿಸರ ಹಾಗೂ ವಾಸಿಸಲಿಕ್ಕೆ ಬೇಕಾದ ಯೋಗ್ಯ ಆವಾಸ ಈ ಜೀವಮಂಡಲಗಳಿವೆ.

ಯಾವುದೇ ಒಂದು ಜೀವಿಗೆ ತನ್ನದೇ ಆದ ಆವಾಸವಿದೆ. ಅಲ್ಲಿ ಮಾತ್ರ ಆ ಜೀವಿ ಬದುಕಿ ಬಾಳಲು ಸಾಧ್ಯ. ಒಂದು ಆವಾಸದಲ್ಲಿ ಒಂದೇ ಜೀವಿ ವಾಸಿಸುವುದಿಲ್ಲ. ಜೊತೆಗೆ ಇತರ ಜೀವಿಗಳೂ ಪರಸ್ಪರ ಅವಲಂಬಿತವಾಗಿ ಬದುಕುತ್ತವೆ. ಅಂಥ ಆವಾಸಕ್ಕೆ ಜೀವಾವಾಸ ಅಥವಾ ಜೀವಾಶ್ರಯ ಎನ್ನುತ್ತಾರೆ. ಜೀವಾವಾಸಕ್ಕೆ ಅನುಗುಣವಾಗಿ ಅಲ್ಲಿ ಜೀವಿಗಳ ವಿಕಾಸವಾಗಿದೆ. ಆದ್ದರಿಂದಲೇ ಭೂಮಿಯ ಮೇಲೆ ಜೀವಿಗಳ ವೈವಿಧ್ಯ ಅಗಾಧ.

ನಿಸರ್ಗವೊಂದು ನಿಪುಣ ಕುಶಲಕರ್ಮಿ, ಅದು ಹೆಣೆದ ಜೀವಜಾಲ ಬಹಳ ಕ್ಲಿಷ್ಟ ಹಾಗೂ ಸಂಕೀರ್ಣವಾದದ್ದು. ಇಲ್ಲಿ ಯಾವಾಗಲೂ ನಯ ನಾಜೂಕಿನ ಸಮತೋಲನ ಇರುತ್ತದೆ. ಯಾವುದೇ ಒಂದು ಜೀವಿಗೆ ಕೆಡಾದರೆ ಅಥವಾ ಆ ಜೀವಿಯ ನಾಶವಾದರೆ ನಾಜೂಕಿನ ಬಲೆ ಅಸ್ತವ್ಯಸ್ತವಾಗಬಹುದು ಅಥವಾ ಹರಿದು ಹೋಗಬಹುದು. ಈ ಬಲೆ ಹರಿದರೆ ಮಾನವನ ಅಸ್ತಿತ್ವ ಹಾಗೂ ಬದುಕಿಗೆ ಹಾನಿಯಾಗುತ್ತದೆ. ಆದ್ದರಿಂದ ಬಲೆ ಹರಿಯದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ.

ನಮ್ಮ ಪುರಾಣಗಳಲ್ಲಿ ಅನೇಕ ಪ್ರಾಣಿಗಳ ಉಲ್ಲೇಖವಿದೆ. ನಾವು ಹಿಂದಿನಿಂದಲೂ ಹಲವಾರು ಪ್ರಾಣಿಗಳನ್ನು ಪೂಜಿಸುತ್ತ ಬಂದಿದ್ದೇವೆ. ಅನೇಕ ಪ್ರಾಣಿಗಳು ನಮ್ಮ ದೇವತೆಗಳಿಗೆ ವಾಹನಗಳಾಗಿವೆ. ಅನೇಕ ಪ್ರಾಣಿಗಳನ್ನು ನಾವು ರಾಜ್ಯ ಹಾಗೂ ರಾಷ್ಟ್ರ ಪ್ರಾಣಿಗಳನ್ನಾಗಿ ಆರಿಸಿಕೊಂಡಿದ್ದೇವೆ. ಕೆಲವು ಪ್ರಾಣಿಗಳು ಅತ್ಯಂತ ಸುಂದರವಾಗಿವೆ, ಇನ್ನು ಕೆಲವು ಬಹು ಉಪಯೋಗಿ. ಪ್ರಾಣಿಗಳ ಬಣ್ಣ, ಕೂಗು, ಹಾಡು, ವರ್ತನೆ, ನರ್ತನೆ, ಪ್ರೇಮಜೀವನ ಎಲ್ಲವೂ ವೈವಿಧ್ಯಮಯ. ಇಂಥ ಪ್ರಾಣಿಗಳಲ್ಲಿ ಹಲವಾರು ಪ್ರಾಣಿಗಳು ವಿನಾಶದ ಅಂಚಿಗೆ ಸರಿಯುತ್ತಲಿವೆ. ಕಣ್ಮರೆಯಾಗುತ್ತಲಿರುವ ಕಣ್ಮಣಿಗಳ ಉಳಿವಿಗಾಗಿ ನಾವೆಲ್ಲರೂ ಇಂದು ಶ್ರಮಿಸಬೇಕಿದೆ. ಯಾಕೆಂದರೆ ಮಾನವನಿಲ್ಲದೆ ಇತರ ಸಸ್ಯ ಪ್ರಾಣಿಗಳು ಬದುಕುತ್ತವೆ. ಆದರೆ ಇತರ ಸಸ್ಯ-ಪ್ರಾಣಿಗಳಿಲ್ಲದೆ ಮಾನವ ಬದುಕಲಾರ. ಸಸ್ಯ-ಪ್ರಾಣಿಗಳ ನಾಶವೇ ಮಾನವನ ನಾಶ.

ಕಣ್ಮರೆಯಾಗಲಿರುವ ಕಣ್ಮಣಿಗಳು

೧. ಅಮೃತಶಿಲೆಯ ಬೆಕ್ಕು ೨.ಅರ್ಮಿನ್
೩. ಅಂಡಮಾನದ ಕಾಡು ಹಂದಿ ೪.ಉಡ
೫. ಉಪಫ್ಲೋರಿಕನ್ ೬. ಉಪ್ಪು ನೀರಿನ ಮೊಸಳೆ
೭. ಏಡಿಭಕ್ಷಕ ಮಂಗ ೮. ಏಷಿಯಾದ ಆನೆ
೯.ಐಬೆಕ್ಸ ೧೦.ಒಂಟಿಕೊಂಬಿನ ಖಡ್ಗಮೃಗ
೧೧.ಕಸ್ತೂರಿ ಮೃಗ ೧೨. ಕರಾಕಲ್
೧೩. ಕರಡಿ ಹಂದಿ ೧೪. ಕಡಲ ಗೋವು
೧೫. ಕರಡಿ ಬೆಕ್ಕು ೧೬. ಕೃಷ್ಣ ಮೃಗ
೧೭. ಕಾಟಿ ೧೮. ಕಾಶ್ಮೀರ ಕಡವೆ
೧೯. ಕಾಡು ಚವರೀಮೃಗ ೨೦. ಕಾಡೆಮ್ಮೆ, ಕಾಡುಕೋಣಗಳು
೨೧. ಕುಳ್ಳನರಿ ೨೨. ಕೆಂಪು ಪಾಂಡಾ
೨೩. ಕೆಂಪು ನರಿ ೨೪. ಗ್ರೇಟ್ ಇಂಡಿಯನ್ ಬಸ್ಟರ್ಡ್
೨೫. ಗ್ರೇಟ್ ಪೈಡ್ ಹಾರ್ನಬಿಲ್ ೨೬. ಗಂಗಾನದಿಯ ಡಾಲ್ಫಿನ್
೨೭. ಘಡಿಯಾಲ್ ೨೮.ಚಾಳೀಸು ಕೋತಿ
೨೯. ಚಿರತೆ ೩೦. ಚಿರತೆ ಬೆಕ್ಕು
೩೧. ಚಿಕ್ಕ ಹಂದಿ ೩೨. ಚಿಪ್ಪು ಹಂದಿ
೩೩. ಚಿಂಕಾರಾ ೩೪. ಚುಸ್ಯಾಲಿನ್‌ಕ್ಕೆಂಗ್
೩೫. ಚೇರ್ಡನ್ಸ್ ಕೌರ್ಸರ್ ೩೬. ಟಕಿನ್
೩೭. ಟಿಬೇಟದ ಗ್ಯಾಝೆಲ್ ೩೮. ತಿಬೇಟದ ಕಾಡುಕತ್ತೆ
೩೯. ಟಿಬೇಟದ ಜಿಂಕೆ ೪೦. ಟೋಪಿ ಲಂಗೂರ
೪೧. ತ್ರಾವಣಕೋರದ ಹಾರುವ ಚಿಕ್ಕ ಅಳಿಲು ೪೨. ತೊಗಲಾಮೆ
೪೩. ದರೋಡೆಕೋರ ಏಡಿ ೪೪. ನಯನ್
೪೫. ನಖವಿಲ್ಲದ ನೀರುನಾಯಿ ೪೬. ನಾಲ್ಕು ಕೊಂಬಿನ ಎರಳೆ
೪೭. ನೀಲಗಿರಿ ತಾರ್ಹ್ ೪೮. ನೀಲಿ ಕುರಿ
೪೯. ನೀಲಿ ತಿಮಿಂಗಿಲ ೫೦. ಪಲ್ಲಾಸ್ ಬೆಕ್ಕು
೫೧. ಬಂಗಾರ ಬಣ್ಣದ ಬೆಕ್ಕು ೫೨. ಬಂಗಾರ ಬಣ್ಣದ ಲಂಗೂರ
೫೩. ಬಂಗಾಲದ ಫ್ಲೋರಿಕನ್ ೫೪. ಭಾರತದ ಕಾಡುಕತ್ತೆ
೫೫. ಭಾರತದ ತೋಳ ೫೬. ಭಾರತದ ಸಿಂಹ
೫೭. ಭಾರತದ ಕಲ್ಲು ಹೆಬ್ಬಾವು ೫೮. ಬಾರಾ ಸಿಂಘಾ
೫೯. ಬಿರುಗೂದಲ ಮೊಲ ೬೦. ಬಿಳಿ ಹುಬ್ಬಿನ ಗಿಬ್ಬನ್
೬೧. ಬೂದು ಬಣ್ಣದ ದೈತ್ಯ ಅಳಿಲು ೬೨. ಮಲಬಾರ ಸಿವೆಟ್
೬೩. ಮಲಯಾದ ಸೂರ್ಯ ಕರಡಿ ೬೪. ಮಂದಗತಿಯ ಕಾಡುಪಾಪ
೬೫. ಮಗ್ಗರ್ ೬೬. ಮೀನುಗಾರ ಬೆಕ್ಕು
೬೭. ಮೊಟ್ಟೆ ತಿನ್ನುವ ಹಾವು ೬೮. ಮೂಷಕ ಜಿಂಕೆ
೬೯. ಮಾರ್ಖೋರ್ ೭೦. ಲಿಂಕ್ಸ್ ಕಾಡು ಬೆಕ್ಕು
೭೧. ರಣ ಬೆಕ್ಕು ೭೨. ರಾಜ ಹೆಬ್ಬಾವು
೭೩. ರೆಟೆಲ್ ೭೪. ಶಾಪು
೭೫. ಸಿಂಹಬಾಲದ ಸಿಂಗಳೀಕ ೭೬.ಸಿರೋ
೭೭. ಸೀಳುನಾಯಿ ೭೮.ಸ್ಟರ್ಮ್ ತಿಮಿಂಗಿಲ
೭೯. ಸೋಮಾರಿ ಕರಡಿ ೮೦. ಸೈಬೇರಿಯಾದ ಕೊಕ್ಕರೆ
೮೧. ಹಣೆಕೊಂಬಿನ ಜಿಂಕೆ ೮೨. ಹಸಿರು ಕಡಲಾಮೆ
೮೩.ಹಿರಿಯ ಪಾಂಡಾ ೮೪. ಹಿಮಚಿರತೆ
೮೫. ಹಿಮಾಲಯದ ಕಂದು ಕರಡಿ ೮೬. ಹಿಮಾಲಯದ ತಾಹ್ರ
೮೭.ಹುಲಿ ೮೮. ಹೊಗೆ ಚಿರತೆ

ನಡುಗಡ್ಡೆಗಳಿಗೆ ಸೀಮಿತವಾಗಿರುವ ಹಾಗೂ ಭಯದ ಅಂಚಿನಲ್ಲಿರುವ ಪ್ರಭೇದಗಳು

ಸಾಗರ ನಡುಗಡ್ಡೆಗಳಲ್ಲಿಯ ಪರಿಸರ ವ್ಯವಸ್ಥೆ ಬಹಳ ದುರ್ಬಲವಾಗಿದ್ದು, ಅವುಗಳ ಕಾಳಜಿಯನ್ನು ಬಹಳ ಮಾಡಬೇಕಿದೆ. ಸುಮಾರು ಆರರಲ್ಲಿ ಒಂದು ಸಸ್ಯ ಪ್ರಭೇದವು ಇಲ್ಲಿ ಬೆಳೆಯುತ್ತದೆ, ಮೂರರಲ್ಲಿ ಒಂದು ಅಳಿವಿನಂಚಿನಲ್ಲಿರುವ ಪ್ರಭೇದವು ನಡುಗಡ್ಡೆಗೆ ಸೀಮಿತವಾಗಿದೆ. ಆವಾಸ ನಾಶದಿಂದ ಪ್ರಭೇದಗಳಿಗೆ ಧಕ್ಕೆ ತಗುಲಿದೆ.

ಪ್ರಭೇದ ನಾಶವು ನೈಸರ್ಗಿಕ ಕ್ರಿಯೆ. ಪ್ರತಿಯೊಂದು ಪ್ರಭೇದಕ್ಕೂ ನಿರ್ಧಿಷ್ಟವಾದ ಜೀವಾವಧಿ ಇದೆ. ಹಿಂದೊಮ್ಮೆ ಜೀವಿಸಿದ್ದ ಪ್ರಭೇದಗಳು ಈಗ ನಿರ್ನಾಮವಾಗಿವೆ. ಸಾವಿರಕ್ಕೆ ಒಂದರಂತೆ ಪ್ರಭೇದಗಳು ನಿರ್ನಾಮವಾಗುತ್ತಲಿವೆ. ಯಾವುದೇ ಒಂದು ಪ್ರಭೇದವು ತನ್ನ ಪೀಳಿಗೆಯನ್ನು ಉತ್ಪಾದನೆ ಮಾಡದೆ ನಿರ್ನಾಮವಾದರೆ ಅದಕ್ಕೆ ಪ್ರಭೇದನಾಶ ಎನ್ನುತ್ತಾರೆ. ಪ್ರಭೇದ ನಾಶಕ್ಕೂ ಹಾಗೂ ಪರಿಸರಕ್ಕೂ ನೇರವಾದ ಸಂಬಂಧವಿದೆ.

 • ಯಾವುದೇ ಪ್ರಭೇದದ ಸಂಖ್ಯೆ ವಿರಳವಾಗಿದ್ದರೆ ಅದು ನಾಶವಾಗುವ ಪ್ರಮಾಣ ಹೆಚ್ಚು.
 • ಯಾವುದೇ ಪ್ರಭೇದಕ್ಕೆ ಚದುರುವ ಸಾಮರ್ಥ್ಯ ಹೆಚ್ಚು ಇದ್ದರೆ ಅದರ ನಾಶವಾಗುವ ಸಾಮರ್ಥ್ಯ ಇಳಿಮುಖವಾಗುತ್ತದೆ.
 • ಸ್ವಾಭಾವಿಕವಾಗಿ ಯಾವ ಪ್ರಭೇದವು ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿದೆಯೋ ಅಂಥ ಪ್ರಭೇದದ ಸಂಖ್ಯೆಯೂ ತೀವ್ರಗತಿಯಲ್ಲಿ ಹೆಚ್ಚುತ್ತದೆ.
 • ಯಾವ ಪ್ರಭೇದದ ಆಯುಷ್ಯ ಹೆಚ್ಚೋ ಅದು ಸರಳವಾಗಿ ನಾಶವಾಗುವುದಿಲ್ಲ.
 • ಪ್ರಾಣಿಯ ಪುಷ್ಟಿಯ ಸ್ಥಾನ ಮೇಲೆ ಹೋದಂತೆ ಆ ಪ್ರಾಣಿಯ ಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ಅಂಥ ಪ್ರಾಣಿಗಳು ಅಳಿವಿನಂಚಿಗೆ ಸುಲಭವಾಗಿ ಸರಿಯುತ್ತವೆ.
 • ಸ್ಥಿರ ಪ್ರಭೇದಗಳಿಗೆ ನಾಶವಾಗುವ ಬೆದರಿಕೆ ಕಡಿಮೆ. ಅವುಗಳ ಸಂಖ್ಯೆಯಲ್ಲಿ ಬದಲಾವಣೆಯಾಗುತ್ತಿದ್ದರೆ ಅಂಥ ಪ್ರಭೇದಗಳಿಗೆ ನಾಶವಾಗುವ ಭಯ ಹೆಚ್ಚು.
 • ಯಾವುದೇ ಪ್ರಭೇದವು ಒಂದು ಸ್ಥಳಕ್ಕೆ ಹೊಂದಿಕೊಂಡಿದ್ದರೆ ಅದಕ್ಕೆ ನಾಶವಾಗುವ ಅವಕಾಶ ಕಡಿಮೆ.
 • ಅನುವಂಶಿಕವಾಗಿ ಯಾವುದೇ ಪ್ರಭೇದವು ನೈಸರ್ಗಿಕವಾಗಿ ಕಡಿಮೆ ಅವಿಧಿ ಬದುಕುತ್ತಿದ್ದರೆ ಅಂಥ ಪ್ರಭೇದದ ನಾಶವಾಗುವ ದರ ಹೆಚ್ಚು.
 • ಆವಾಸದಲ್ಲಿ ಬದಲಾವಣೆಯಾದರೆ ಅಥವಾ ತುಂಡುತುಂಡಾದರೆ ಅಲ್ಲಿರುವ ಜೀವಿಗಳು ನಾಶವಾಗುವ ದರ ಹೆಚ್ಚು.

ಹಿಂದೆ ನಡೆದ ಸಾಮೂಹಿಕ ವಿನಾಶದ ಸಂಗತಿಗಳು

ಜೀವಿಗಳು ಕಾಲಕಾಲಕ್ಕೆ ಸಾಮೂಹಿಕವಾಗಿ ವಿನಾಶವಾದುದಕ್ಕೆ ಪಳೆಯುಳಿಕೆ ದಾಖಲೆಗಳಿವೆ. ವಿನಾಶದ ದರ ಒಂದೇ ಬಗೆಯಲ್ಲಿ ಆಗಲಿಲ್ಲ. ಸೇಕಡಾ ೬೦ರಷ್ಟು ನಾಶವು ಚಿಕ್ಕ ಘಟನಾವಳಿಗಳಲ್ಲಿ ನಡೆದವು. ಮೊಟ್ಟಮೊದಲ ವಿನಾಶದ ದಾಖಲೆ ಸುಮಾರು ೭೦ ಕೋಟಿ ವರ್ಷ ಹಿಂದಿನದು. ಈ ಸಮಯದಲ್ಲೇ ದೊಡ್ಡ ಪ್ರಮಾಣದ ವೈವಿಧ್ಯ ನಾಶವಾಯಿತು. ೨೫ ಕೋಟಿ ವರ್ಷಗಳ ಹಿಂದೆ ಸೇಕಡಾ ೪೪ರಷ್ಟು ಮೀನು ಪ್ರಭೇದಗಳು, ಸೇಕಡಾ ೫೮ರಷ್ಟು ಚತುಷ್ಪದಿಗಳ ಪ್ರಭೇದಗಳು ವಿನಾಶಗೊಂಡಿವೆ. ಅನಂತರದ ೧೪ ಕೋಟಿ ವರ್ಷಗಳ ಹಿಂದಿನ ಜುರಾಸಿಕ್ ಕಾಲದ ಅಂತ್ಯದಲ್ಲಿ ಡೈನೋಸಾರ್‌ಗಳ ನಾಶ ಮತ್ತು ಇತ್ತೀಚಿಗೆ, ಅಂದರೆ ೧೦ ಸಾವಿರ ವರ್ಷಗಳ ಹಿಂದೆ ದೈತ್ಯ ಮ್ಯಾಮುತ್‌ಗಳ ಕಣ್ಮರೆಯಾಗಿರುವುದು ಪಳೆಯುಳಿಕೆಗಳಿಂದ ಗೊತ್ತಾಗುತ್ತದೆ.

ಹತ್ತು ಲಕ್ಷ ವರ್ಷಗಳ ಹಿಂದೆ ಏಸಿಯಾ ಹಾಗೂ ಯುರೋಪ್‌ಗಳಲ್ಲಿ ಮಾನವನ ಆಗಮನದಿಂದ ಅನೇಕ ಸಸ್ಯ ಪ್ರಾಣಿ ಪ್ರಭೇದಗಳ ಮೇಲೆ ದುಷ್ಪರಿಣಾಮವಾಯಿತು. ೫೦ ಸಾವಿರ ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಹಾಗೂ ೧೧ ಸಾವಿರ ವರ್ಷಗಳ ಹಿಂದೆ ಅಮೆರಿಕೆಯಲ್ಲಿ ಮಾನವ ಕಾಲೂರಿದನಂತರ  ಅಲ್ಲಿಂದ ಕೆಲವು ಜೀವಿಗಳು ನಾಶವಾದವು. ಆಸ್ಟ್ರೇಲಿಯಾದಿಂದ ದೊಡ್ಡ ಸ್ತನಿಗಳು, ಹಾವುಗಳು ಹಾಗೂ ಹಲವಾರು ಪಕ್ಷಿ ಪ್ರಭೇದಗಳು ಕಣ್ಮರೆಯಾದವು. ಅಮೇರಿಕದಿಂದ ಸುಮಾರು ೭೫-೮೦ ಸ್ತನಿ ಪ್ರಭೇದಗಳು ನಾಶವಾದವು.