ಬೈಲಿಗೆ ಬೈಲಾಯಿತೊ ರಾಮ ಬೈಲೊಳಗೆ
ಜಗವಾಯಿತೊ ರಾಮ || ಬೈಲಿಗೆ ||

ಬಾಲೆಯು ಬಾವಿಯ ನೀರಿಗೆ ಹೋಗಿ
ಜಲವನ್ನು ತುಂಬಿಕೊಂಡು ಬರುತಿರಲಾಗಿ
ಕಾಲು ಜಾರಿತು ಕೊಡ ಒಡೆಯಿತು
ಕುಲ ಕುಲವೆಲ್ಲ ಕೂಡಿ ಹೋಯಿತು || ಬೈಲಿಗೆ ||

ಸೂತ್ರದ ಗೊಂಬೆಯ ಮಾಡಿ ನವ ಸೂತ್ರ ಹಿಡಿದು
ಕುಣಿಸಾಡಿ ಸೂತ್ರವು ಹರಿಯಿತು
ಆಟವು ನಿಂತಿತು || ಬೈಲಿಗೆ ||

ಎಣ್ಣೆಯ ಬಿತ್ತಿಯ ಮಾಡಿ ಶಿವ ಕಣ್ಣನೆ
ಜ್ಯೋತಿಯನ್ನತ್ತಿಸಿ ಎಣ್ಣೆಯು ತೀರಿತು
ದೀಪವು ಹಾರಿತು || ಬೈಲಿಗೆ ||

ಬರದಾಗಿತ್ತು ಬಂದೆ ಭವದೊಳಗೆ ಗುರುಧ್ಯಾನವಿರಲಿ
ನಿನ್ನ ಮನದೊಳೊಗೆ ನೀರೊಳಗಿನ
ಕಮಲದೊಳಾಡಿ ಸಂಸಾರದೊಳಿರಬೇಕು ಹೀಗೆ

ಕಾಮ ಕ್ರೋಧ ಲೋಭ ಮೋಹ ಮದ
ಮಾತ್ಸರ್ಯ ನಿನ್ನೊಳಗಿವೆ ಹೇಳು ಇದು ಆರು
ಅಕ್ಷರ ಮಂತ್ರ ಇದು ಮೇಲೆಂದು ತಿಳಿಯಬೇಕ
ನೀರೊಳಗಿನ ಕಮಲದೊಳಾಡಿ ಸಂಸಾರ ಏಳು
ಇರಬೇಕೀಗ || ಬೈಲಿಗೆ ||

ಇಂದ್ರಿಯ ಜಾಲ ಮೋಹದ ಮಾಲ ಸ್ವಾಧೀನ
ಇವೇ ಹೇಳಣ್ಣ ನೀ ಎಲ್ಲಾ ಲಿಂಗವ
ನೋಡಣ್ಣ ಮುಕ್ತಿ ಪ್ರದಾಯುಕ್ತವೇಳಣ್ಣ
ನೀರೊಳಗಿನ ಕಮಲದೊಳಾಡಿ ಸಂಸಾರದೊಳಿರಬೇಕು “ಬೈಲಿಗೆ’