ಶಾಂತಾದೇವಿ: ಪ್ರಾಣಕಾಂತ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಪಯಣವೆಲ್ಲಿಗೆ  ಕಾಂತ  ಹರುಷದಿಂ ಪೇಳುವೆನು
ಮಾರ್ಬಲಂ  ವಡಗೊಂಡು  ಹೋಗುವ ಪರಿಯ ॥

ಶಾಂತಾದೇವಿ: ಪ್ರಾಣಕಾಂತರೆ ನೀವು ಬಹಳ ಕೋಪಾರೂಢರಾಗಿ, ಯುದ್ಧಕ್ಕೆ ಹೋಗುವುದು ಸರಿಯಲ್ಲ. ಸುಮ್ಮನೆ ಅರಮನೆಗೆ ಹೋಗೋಣ ಬಾರೈ ಕಾಂತ ಮತಿಗುಣವಂತ.

ಮಯಬ್ರಹ್ಮ: ಹೇ ರಮಣಿ ಹೇಳುತ್ತೇನೆ ಕೇಳು.

ಪದ

ಪ್ರಾಣಕಾಂತೆಯೆ  ಕೇಳು  ಪೇಳುವೆ  ನಾನೀಗ  ಸಮರಕ್ಕೆ
ಹೋಗುವೆನು  ತಡೆಯಬೇಡವೇ ನೀನು ॥
ಕಾಂತೆಯೆ ಕೇಳಿನ್ನು  ನಮ್ಮೊಳು  ಸಮರವ
ಮಾಡಬೇಕೆನುತಲಿ  ಬರುವರು ಅವರು ॥

ಮಯಬ್ರಹ್ಮ: ಹೇ ರಮಣಿ ಹೇಳುತ್ತೇನೆ ಕೇಳು. ಆ ಕೈಲಾಸವಾಸನಾದ ಶಂಕರನು ರಣಾಗ್ರಕ್ಕೆ ಬರುತ್ತೇನೆಂದು ಚಾರಕನ ಮುಖೇಣ ವರ್ತಮಾನವನ್ನು ಕೊಟ್ಟಿರುವನು. ಆದ್ದರಿಂದ ನಾನು ರಣಾಗ್ರಕ್ಕೆ ಹೋಗುವ ಸಮಯದಲ್ಲಿ ನೀನು ತಡೆಯಬೇಡ. ಸುಮ್ಮನೆ ಅರಮನೆಗೆ ತೆರಳುವಂಥವಳಾಗೆ ಕಾಂತೆ ಮತಿಗುಣವಂತೆ.

ಪದ

ಹರಿಹರರೊಳು  ವೈರ  ಮಾಡುವುದು
ತರವಲ್ಲಾ  ನೋಡಿ  ನಗುವರು ಜನರು
ಧಾರುಣಿಯೊಳಗೆ ಕಾಂತಾ  ರಮಣಾ ॥

ಶಾಂತಾದೇವಿ: ಪ್ರಾಣಕಾಂತರೆ ಹರಿಹರರಲ್ಲಿ ರಣಾಗ್ರವನ್ನು ಮಾಡುವುದು ಧರ್ಮವಲ್ಲಾ. ಸುರಮುನಿಗಳು ಕೇಳಿದರೆ ನಗುವುದಿಲ್ಲವೆ. ಶ್ರೀಹರಿಯು ಶಂಕರಮೂರ್ತಿಯು ನಿಮಗೆ ಮಾಡಿದ ಅಪರಾಧವೇನು ಖಂಡಿತವಾಗಿ ಸಮರಕ್ಕೆ ಹೋಗಬೇಡವೈ ಕಾಂತ ಮತಿಗುಣವಂಥ.

ಪದ

ಕಾಂತಮಣಿಯೆ  ಕೇಳು  ಕುವರಿಯ ಕೊಟ್ಟರೆ
ಸಮರವು ಬೇಡೆನುತ  ಹೇಳುವರವರು ॥

ಮಯಬ್ರಹ್ಮ: ಹೇ ರಮಣಿ ಅ ಭ್ರಷ್ಟನಾದ ಶ್ರೀ ಹರಿಯು ಮತ್ತು ಆ ಶಂಕರನು ನಿನ್ನ ಕುಮಾರಿಯನ್ನು ವಳ್ಳೆಯ ಮಾತಿನಿಂದ ಕೊಡುವೆಯೊ ಅಥವಾ ಯುದ್ಧವನ್ನು ಮಾಡುವೆಯೋ ಎಂಬುದಾಗಿ ಚಾರನ ಮುಖೇನ ವರ್ತಮಾನವನ್ನು ಕಳಿಸುವಂಥವರಾದರು. ಆದ್ದರಿಂದ ನನಗೆ ಕೋಪವು ಹೆಗ್ಗಳವಾಗಿ ಅವರೊಡನೆ ಸಮರಕ್ಕೆ ಹೋಗುತ್ತೇನೆ ಕಾಂತೆ ಮತಿಗುಣವಂತೆ.

ಪದ

ಕುವರಿಗೆ  ಲಗ್ನದ  ಕಾಲವಾಗುತ ಬಂತು
ಪುರದೊಳು  ಕಂಡರೆ  ನಗುವರು ಜನರು ॥

ಶಾಂತಾದೇವಿ: ಪ್ರಾಣಕಾಂತ ನಮ್ಮ ಕುಮಾರಿಯಾದ ಸಂಜ್ಞಾದೇವಿಗೆ ಹನ್ನೆರಡು ವರುಷ ತುಂಬುವಂಥದ್ದಾಯಿತು. ಕನ್ಯಾರ್ಥಿಯಾಗಿ ಬಂದವರನ್ನು ಕೊಲ್ಲುತ್ತಾರೆಂದು ಈ ಲೋಕದ ಜನರು ನಗುವುದಿಲ್ಲವೆ. ಖಂಡಿತವಾಗಿ ಹೋಗಬೇಡವೈ ಕಾಂತ ಮತಿಗುಣವಂತ.

ಪದ

ವಿನಯ  ಪೂರ್ವಕವಾಗಿ  ಕನ್ಯ ಕೇಳಲು  ಅವರು
ಬಂದರೆ  ಕೊಡುವೆನು  ಕೇಳೆನ್ನ ರಮಣಿ ॥

ಮಯಬ್ರಹ್ಮ: ಹೇ ರಮಣಿ ಕನ್ಯವನ್ನು ಕೇಳುವುದಕ್ಕೆ ಬರುವಂಥವರು ನಮ್ಮ ಅರಮನೆಗೆ ಬಂದು ವಳ್ಳೆಯ ಮಾತಿನಿಂದ ಕೇಳಬೇಕು. ಅದನ್ನು ಬಿಟ್ಟು ಪುರದಾಚೆ ನಿಂತುಕೊಂಡು ವಳ್ಳೆಯ ಮಾತಿನಿಂದ ಕುಮಾರಿಯನ್ನು ಕೊಡುವನೋ ಅಥವ ವೈರದಿಂದ ಕಾದುವನೋ ಎಂಬುದಾಗಿ ಚಾರನ ಮುಖೇಣ ವರ್ತಮಾನವನ್ನು ತಿಳಿಸಿದರು. ಆದ್ದರಿಂದ ನಾನು ಅವರ ಮೇಲೆ ರಣಾಗ್ರಕ್ಕೆ ಹೋಗುತ್ತೇನೈ ಕಾಂತೆ ಮತಿಗುಣವಂತೆ.

ಪದ

ಕುವರಿಗೆ  ಯೌವನ  ಕಾಲವಾಗುತ್ತ ಬಂತು
ಗರುಡ  ಗಾಂಧರ‌್ವರಿಗೆ  ಕೊಡಬೇಕು  ರಮಣಾ ॥

ಶಾಂತಾದೇವಿ: ಪ್ರಾಣಕಾಂತ ನಮ್ಮ ಕುಮಾರಿಗೆ ಯೌವ್ವನ ಕಾಲವು ಬಂದಂತಾಯಿತು. ಪ್ರಾಯ ಸಮರ್ಥಳಾದ ಕುಮಾರಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಗರುಡ ಗಾಂಧರ‌್ವರಿಗೆ ಯಾರಿಗಾದರು ಕೊಟ್ಟು ಲಗ್ನ ಮಾಡಬಾರದೆ ಕಾಂತ ಮತಿ ಗುಣವಂತ.

ಪದ
ಇಂದಿನ ದಿನದೊಳು  ಸಮರವಾ  ಮಾಡಿನ್ನು  ಬರುವೆನು
ನಾನಿನ್ನು  ತೆರಳು ನೀ  ಅರಮನೆಗೆ॥

ಮಾತು: ಹೇ ರಮಣಿ ನಾನು ರಣಾಗ್ರವನ್ನು ಮಾಡಿಕೊಂಡು ಬರುತ್ತೇನೆ. ನೀನು ಅರಮನೆಗೆ ತೆರಳುವಂಥವಳಾಗೆ ಕಾಂತೆ ಗುಣವಂತೆ.

ಶಾಂತಾದೇವಿ: ಪ್ರಾಣಕಾಂತ ನಿಮ್ಮ ಅಪ್ಪಣೆಯಂತೆ ಅರಮನೆಗೆ ತೆರಳುತ್ತೇನೈ.

ಭಾಮಿನಿ

ಇತ್ತಲಾ  ಮಯಬ್ರಹ್ಮನು  ತನ್ನ ಸತಿಯಾದ
ಶಾಂತಾದೇವಿ  ಯೊಡನೆ  ಸಂಭಾಷಣೆಯ ಮಾಡಿ
ಶಾಂತಾದೇವಿಯು  ಅರಮನೆಗೆ
ತೆರಳಲಾಗಲಾಕ್ಷಣ  ಇತ್ತಲಾ ಪರಮೇಶ್ವರನು
ಮಯಬ್ರಹ್ಮನೊಡನೆ ಸಮರಕೆ
ಹೋಗಬೇಕೆಂದೆನುತ  ಬರುತಿರಲಾಗ ॥

ಮಯಬ್ರಹ್ಮ: ಚಾರನೆ ವರ್ತಮಾನವೇನು.

ಚಾರಕ: ಸ್ವಾಮಿ ಮಯಬ್ರಹ್ಮದೇವರೆ ಪರಮೇಶ್ವರ ದೇವರು ನಿಮ್ಮ ಮೇಲೆ ಯುದ್ಧಕ್ಕೆ ಬಂದು ದ್ವಾರಬಾಗಿಲಲ್ಲಿ ನಿಂತಿರುವರು.

ಮಯಬ್ರಹ್ಮ: ಸೇವಕಾ ಬಂದರು ಬರಲಿ ನಾನು ನೋಡಿಕೊಳ್ಳುತ್ತೇನೆ.

ಪದ

ಗೌರಿ ವಂದಿತ  ಕೇಳು  ಸಮರದೊಳ್  ನಿನ್ನನ್ನು
ಹಾರಿಸುವೆ  ಶಿರವನ್ನು  ನೋಡುವೆ  ನಾನೀಗ ಬೇಗ ॥

ಮಯಬ್ರಹ್ಮ: ಯಲವೋ ಶಂಕರ, ಪುನಹ ನನ್ನೊಡನೆ ಯುದ್ಧಕ್ಕೆ ಬಂದಿರುವೆಯ ನೀನು ವೋರ‌್ವನೆ ಬರದೆ ನಿನ್ನ ಜೊತೆಯಲ್ಲಿ ದೇವತೆಗಳನ್ನು ಕರೆದುಕೊಂಡು ಬರುವಂಥವನಾಗೋ ಮಹೇಶ್ವರ.

ಪದ

ನೀನೇ  ಶೂರನೆಂದು  ಮೂಲೋಕದೊಳಗೆಲ್ಲಾ
ಬಗಳುವೆ  ಅಧಮನೆ  ನೀನೀಗ ಬೇಗಾ ॥

ಈಶ್ವರ: ಯಲವೋ ಅಧಮನಾದ ಮಯಬ್ರಹ್ಮನೆ ಕೇಳು. ಈ ಮೂರು ಲೋಕದಲ್ಲಿಯೂ ನೀನೇ ಶೂರನೆಂದು ನಿನ್ನ ಶೌರ‌್ಯವನ್ನು ತೋರಿಸಬೇಡ. ನಿನ್ನ ಶೌರ‌್ಯ ಸಾಹಸವನ್ನು ನೋಡುತ್ತೇನೆ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಮಯಬ್ರಹ್ಮ: ಯಲವೋ ಮಹೇಶ್ವರ ಹೇಳುತ್ತೇನೆ ಕೇಳು.

ಪದ

ನೋಡು ನೋಡೆಲೋ ಅಧಮಾ ನಿನ್ನ ಶೌರ‌್ಯವ ನಾನು
ಸಮರದೊಳು  ನೋಡುವೆ  ನಿನ್ನನು ನಾನು ॥

ಮಯಬ್ರಹ್ಮ: ಯಲವೋ ಮಹೇಶ್ವರ, ನಿಮಿಷ ಮಾತ್ರದಲ್ಲಿ ನಿನ್ನ ಶಿರವನ್ನು ಕತ್ತರಿಸಿ ಕೆಡಹುತ್ತೇನೆ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ಯಲವೋ  ಬ್ರಹ್ಮನೆ ಕೇಳು  ಮಂತ್ರಬಾಣವ ನಾನು
ಬಿಡುವೆನು  ಭರದೊಳು  ನಾನೀಗ ಬೇಗಾ ॥

ಈಶ್ವರ: ಯಲವೋ ಅಧಮನಾದ ಮಯಬ್ರಹ್ಮನೆ ಕೇಳು. ಇಗೋ ನೋಡು ಒಂದು ಘನತರವಾದ ಮಂತ್ರಬಾಣವನ್ನು ಬಿಡುತ್ತೇನೆ. ತಡೆದುಕೊಂಡು ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ಅಸ್ತ್ರ  ಶಸ್ತ್ರ  ವಿದ್ಯವನು  ಕಲಿಸಿದವನು
ನಾನು  ನಿನ್ನ  ಶೌರ‌್ಯವ ನಾನು  ನೋಡುವೆ ॥

ಮಯಬ್ರಹ್ಮ: ಯಲವೋ ಮಹೇಶ್ವರ, ನಿನಗೆ ಅಸ್ತ್ರ ಶಸ್ತ್ರ ವಿದ್ಯವನ್ನು ಕಲಿಸಿದವನು ನಾನು. ಆದ್ದರಿಂದ ನಿನ್ನ ಬಾಣವು ನನ್ನನ್ನು ಏನು ಮಾಡುವುದು. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ಯಂದ ಮಾತನು  ಕೇಳಿ  ಕೋಪವ  ಶಿವತಾಳಿ
ಪರ್ವತಾಸ್ತ್ರದಿ  ನಾನು  ಹೊಡೆಯುವೆನೆಂದಾ ॥

ಈಶ್ವರ: ಯಲವೋ ಮಯಬ್ರಹ್ಮನೆ ಕೇಳು ಇದೋ ನೋಡು ಪರ್ವತಾಸ್ತ್ರವನ್ನು ಹೂಡಿ ಹೊಡೆಯುತ್ತೇನೆ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಮಯಬ್ರಹ್ಮ: ಛೇ ಭ್ರಷ್ಟ ಹಾಗಾದರೆ ಯುದ್ಧಕ್ಕೆ ಯದುರಾಗು.

ಭಾಮಿನಿ

ಇತ್ತಲಾ  ಮಯಬ್ರಹ್ಮನ  ಬಾಣದಿಂದ
ಪರಮೇಶ್ವರನು ಮೂರ್ಛಿಸಲಾಗ ಲಾಕ್ಷಣ
ಇತ್ತಲಾ  ಕಶ್ಯಪ ಮುನಿಗಳು ಬರುತಿರಲಾಗಾ ॥

(ಕಶ್ಯಪ ಋಷಿ ಪ್ರವೇಶ)

ಪದ

ವೇಣು ಗೋಪಾಲ  ವೇದ ಮುರಾರೆ
ಭೋಗಿ ಶಯನ  ನೇತ್ರದೇವಾ  ವೇಣು ಗೋಪಾಲ ॥

ಕಶ್ಯಪ: ಯಾರಲ್ಲಿ ಸೇವಕಾ ಜಾಗ್ರತೆಯಾಗಿ ನನ್ನ ಕಂದನಾದ ದೇವೇಂದ್ರನನ್ನು ಬರಮಾಡು.

ಚಾರಕ: ಸ್ವಾಮಿ ಕಶ್ಯಪ ಋಷಿಗಳೆ ಈಗಲೇ ಕರೆದುಕೊಂಡು ಬರುತ್ತೇನೆ.

ಚಾರಕ: ದೇವೇಂದ್ರ ಮಹಾರಾಜರಿಗೆ ಜಯವಾಗಲಿ.

ದೇವೇಂದ್ರ: ಚಾರನೆ ವರ್ತಮಾನವೇನು.

ಚಾರಕ: ಸ್ವಾಮಿ, ದೇವೇಂದ್ರ ಭೂಪಾಲ ನಿಮ್ಮ ತಂದೆಯವರಾದ. ಕಶ್ಯಪ ಮುನಿಗಳು ನಿಮ್ಮನ್ನು ಕರೆದುಕೊಂಡು ಬರುವಂತೆ ಹೇಳಿರುವರು.

ದೇವೇಂದ್ರ: ಸೇವಕಾ ಈಗಲೇ ಬರುತ್ತೇನೆ.

ದೇವೇಂದ್ರ: ತಂದೆಯವರ ಪಾದಕ್ಕೆ ನಮಸ್ಕರಿಸುವೆನು.

ಕಶ್ಯಪ: ಕಂದ ನಿನಗೆ ಮಂಗಳವಾಗಲಿ ಮೇಲಕ್ಕೇಳು.

ದೇವೇಂದ್ರ: ತಂದೆಯವರೆ ನನ್ನನ್ನು ಬರಮಾಡಿಕೊಂಡ ಕಾರಣವೇನು.

ಕಶ್ಯಪ: ಕಂದ ಹೇಳುತ್ತೇನೆ ಕೇಳು.

ಪದ

ತನೆಯನೆ  ಕೇಳು  ಕಾಲವ  ಕಳೆಯದೆ
ಪೆಂದೋಟಪುರಕೆ  ತೆರಳೈ ಬೇಗಾ ॥

ಕಶ್ಯಪ: ಮಗು ದೇವೇಂದ್ರ, ಪುರೋಹಿತರು ಹೇಳಿದಂತೆ ಮೀನ ಚೈತ್ರ ತಿಂಗಳು ಕಳೆದು ಹೋಯಿತು. ಕನ್ಯೆಯ ವಿಚಾರಕ್ಕೆ ಆ ಪೆಂದೋಟಪುರಕ್ಕೆ ಹೊರಡುವಂಥವನಾಗಪ್ಪಾ ಮಗು ದೇವೇಂದ್ರ.

ದೇವೇಂದ್ರ: ತಂದೆಯವರೆ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಜನಕಾ ಲಾಲಿಸಿ ಕೇಳಿ  ವಿನಯದಿಂ  ಪೇಳುವೆನು
ಪಯಣವ ಬೆಳಸುವೆ  ಕೇಳೈ ಜನಕಾ ॥

ದೇವೇಂದ್ರ: ತಂದೆಯವರೆ, ನಿಮ್ಮ ಅಪ್ಪಣೆಯಂತೆ ಈಗಲೇ ಆ ಪೆಂದೋಟಪುರಕ್ಕೆ  ಸಕಲ ಸಮೂಹವನ್ನು ಸಿದ್ಧಪಡಿಸಿಕೊಂಡು ಹೊರಡುತ್ತೇನೆ.

ದೇವೇಂದ್ರ: ಸೇವಕಾ ಜಾಗ್ರತೆಯಾಗಿ ಆ ಪೆಂದೋಟಪುರಕ್ಕೆ ರಥವನ್ನು ಹೊಡೆಯುವಂಥವನಾಗು.

ಚಾರಕ: ದೇವೇಂದ್ರ ಭೂಪಾಲ ನಿಮ್ಮ ಇಷ್ಟದಂತೆ ಆಗಲಿ.

ಪದ

ಬರುವ  ದಾರಿಲಿ  ಹರಿಹರರು  ಮೂರ್ಛೆಯಿಂದ
ಮಲಗಿರುವರು  ಇದರ  ಪರಿಯ ಪೇಳೈ
ಕಂದಾ ॥ನೋಡಲಾರೆ  ನೇತ್ರಗಳಿಂದಾ ॥

ಕಶ್ಯಪ: ಮಗು ದೇವೇಂದ್ರ, ನಾವು ಬರುವ ದಾರಿಯಲ್ಲಿ ಹರಿಹರರು ಮೂರ್ಛೆಯಿಂದ ಮಲಗಿರುವ ಕಾರಣವೇನು ಇದರ ವಿಚಾರವನ್ನು ತಿಳಿಸುವನಾಗು.

ದೇವೇಂದ್ರ: ತಂದೆಯವರೆ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಜನಕ ಲಾಲಿಸಿ ಕೇಳು  ವಿನಯದಿಂ
ಪೇಳುವೆ ಮಯಬ್ರಹ್ಮನೊಡನೆ  ಸಮರವ ಮಾಡಿ
ಇವರು  ಮೂರ್ಚೆಯಿಂದಲಿ ಈಗ
ಮಲಗಿರುವರು  ಜನಕ  ಪೇಳುವೆ ॥

ದೇವೇಂದ್ರ: ತಂದೆಯವರೆ ನಂದಿವಾಹನನಾದ ಶಂಕರನು ಗರುಡವಾಹನನಾದ ಹರಿಯು ಆ ಮಯಬ್ರಹ್ಮನೊಡನೆ ಕಾಡಾ ಕಾಡಾ ಯುದ್ಧವನ್ನು ಮಾಡಿ ಸೋತು ಮೂರ್ಛೆಯಿಂದ ಮಲಗಿರುವರಲ್ಲದೆ ಮತ್ತೆ ಬೇರೆಯಿಲ್ಲವೈ ಜನಕಾ.

ಕಶ್ಯಪ: ಕಂದ ಹೇಳುತ್ತೇನೆ ಕೇಳು.

ಪದ

ಹರಿಹರರು  ಮೂರ್ಛೆಯಿಂದ  ಮಲಗಿರುವುದ
ನೋಡಿ ನಾವು  ಹೋಗುವುದು  ತರವಲ್ಲಾ
ಅಪವಾದ  ಬರುವುದು  ಕೇಳು ॥

ಕಶ್ಯಪ: ಮಗುದೇವೇಂದ್ರ, ಹರಿಹರರು ಮೂರ್ಛೆಯಿಂದ ಮಲಗಿರುವುದನ್ನು ನೋಡಿ ಸುಮ್ಮನೆ ಹೋದರೆ ನಮಗೆ ಅಪವಾದವು ಬರುವುದು. ಆದ್ದರಿಂದ ಇವರನ್ನು ನನ್ನ ಮಂತ್ರಶಕ್ತಿಯಿಂದ ಮೇಲಕ್ಕೆ ಏಳಿಸಿದರೆ ನಮಗೆ ಸಂತೋಷವಾಗುವುದು. ನನ್ನ ಮಂತ್ರಶಕ್ತಿಯಿಂದ ಮೇಲಕ್ಕೆ ಏಳುವಂತೆ ಮಾಡುತ್ತೇನೆ ನೋಡುತ್ತಾ ಯಿರು ಓಂ ಪಟಸ್ವಾಹಾ ಹರಿಹರರೆ ಮೇಲಕ್ಕೇಳಿರಿ.

ಹರಿಹರರು: ಕಶ್ಯಪಋಷಿಗಳೆ ನಾವು ಧನ್ಯರಾದೆವು.

ಕಶ್ಯಪರುಷಿ: ಅಯ್ಯ ಹರಿಹರರೆ ನೀವು ಈ ರೀತಿಯಾಗಿ ಮೂರ್ಛೆಯಿಂದ ಮಲಗಲು ಕಾರಣವೇನು.

ಪದ

ಕಶ್ಯಪ  ಮುನಿ ಕೇಳಿ  ಪೇಳುವೆ  ನಾನೀಗಾ
ನಾರದ  ಮುನಿ ಬಂದು  ಚಾಡಿ ಹೇಳಿದ  ನಮಗೆ
ಅ ಮಯಬ್ರಹ್ಮನಿಂದ  ಯುದ್ಧವ  ಮಾಡೀಗ
ಮೂರ್ಛೆಯಿಂದಲಿ  ನಾವು  ಮಲಗಿದೆವು  ದೇವಾ ॥

ಈಶ್ವರ: ಕಶ್ಯಪ ರುಷಿಗಳೆ ನಾರದರು ನಮ್ಮ ಕೈಲಾಸಕ್ಕೆ ಬಂದು ಆ ಪೆಂದೋಟಪುರದ  ಮಯಬ್ರಹ್ಮನಿಗೆ ಓರ‌್ವ ಕುಮಾರಿ ಇರುವಳು ಆತನು ಸುಮ್ಮನೆ ಕೊಡುವುದಿಲ್ಲಾ ಆತನಲ್ಲಿ ಖಾಡಾಖಾಡಿ ಯುದ್ಧವನ್ನು ಮಾಡಿ ಆತನ ಮಗಳನ್ನು ತರಬೇಕೆಂದು ಹೇಳಿದನು ಆದ್ದರಿಂದ ಆತನಲ್ಲಿ ಯುದ್ಧವನ್ನು ಮಾಡಿ ಆತನ ಬಾಣದ ಜ್ವಾಲೆಯನ್ನು ತಾಳಲಾರದೆ ಮೂರ್ಚೆಯಿಂದ ಮಲಗಿರುವೆನೈ ಸ್ವಾಮಿ ಕಶ್ಯಪರೆ.

ಕೃಷ್ಣ: ಸ್ವಾಮಿ ಕಶ್ಯಪರೇ, ಚಾಡಿನಾರದನ ಮಾತನ್ನು ಕೇಳಿ ಮಯಬ್ರಹ್ಮನಲ್ಲಿ ಯುದ್ಧವನ್ನು ಮಾಡಿ ಆತನ ಬಾಣದ ಜ್ವಾಲೆಯನ್ನು ತಾಳಲಾರದೆ ಮೂರ್ಚೆಯಿಂದ ಮಲಗಿರುವೆನೈ ಸ್ವಾಮಿ ಕಶ್ಯಪರೆ.

ಭಾಮಿನಿ

ಇತ್ತಲಾ  ಕಶ್ಯಪರುಷಿಗಳು  ಹರಿಹರರುಗಳು ಸಂಭ್ರಮದಿ
ಇರುತಿರಲಾಗಲಾಕ್ಷಣ  ನಾರದ ಮುನಿಗಳು  ಸಂಭ್ರಮದಿ
ಬರುತಿರಲಾಗಲಾಕ್ಷಣಾ ॥

ಪದ
ಹರಿನಾರಾಯಣ  ದುರಿತವಿಹಾರಣ
ಕರುಣದಿ  ಸಲಹೋ ಯನ್ನ  ದೇವಾ
ನಾರಾಯಣನೆಂಬೋ  ನಾಮದ  ಮಂತ್ರವ
ನಾರದ ಬಿತ್ತಿದ ಧರೆಯೊಳಗೆ  ದೇವಾ  ದೇವಾ ॥

ನಾರದ: ನಾರಾಯಣ ನಾರಾಯಣ ಕಶ್ಯಪ ಮುನಿಗಳಿಗೆ ಮತ್ತು ಹರಿಹರರೆ ನಮಸ್ಕರಿಸುವೆನು.

ಕಶ್ಯಪರುಹರಿಹರರು: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ನಾರದ.

ನಾರದ: ಸ್ವಾಮಿ ಕಶ್ಯಪರೆ ಹರಿಹರ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ದೇವ  ದೇವ  ಇಂದು  ನಿಮಗೆ  ಬೇಡುವೆ  ನಾನು  ದೇವಾ
ಕರುಣದಿಂದ  ಪಾಲಿಸೆನ್ನ  ಬೇಡುವೆನು  ದೇವಾ  ಪುರೋಹಿತರು
ಹೇಳಿದಂತೆ  ಮೀನಚೈತ್ರ  ವೆಂಬ ಮಾಸ  ಈ ತಿಂಗಳು
ಹೋದ ಮೇಲೆ  ಎಂಬ ಶಾಸ್ತ್ರ  ಹೇಳಿದರು  ಅವರು  ದೇವಾ  ದೇವಾ ॥

ನಾರದ: ಸ್ವಾಮಿ ಹರಿಹರರರೆ ಪುರೋಹಿತರು ಹೇಳಿದ್ದೇನೆಂದರೆ ಲಗ್ನಕ್ಕೆ ಮೀನಚೈತ್ರ ವಳ್ಳೆಯ ದಿವಸವೇ ಅಲ್ಲ. ಈ ತಿಂಗಳು ಹೋದಮೇಲೆ ಯಾವ ಶುಭಾಶುಭ ಕಾರ್ಯಗಳು ನಡೆಯುವವೆಂದು ಹೇಳಿದರು. ಆದ್ದರಿಂದ ನಿಮ್ಮಗಳನ್ನು ಕಳಿಸಿದರೆ ಶಾಸ್ತ್ರದ ವಿಚಾರವು ಗೊತ್ತಾಗುವುದೆಂದು ನಿಮ್ಮಗಳನ್ನು ಕಳಿಸಿದೆನು ನೀವು ನನ್ನ ಮೇಲೆ ಯಾವ ಸಂಶಯವನ್ನು ಇಡಬೇಡಿರೆಂದು ಬೇಡಿಕೊಳ್ಳುತ್ತೇನೈ ಸ್ವಾಮಿ ಹರಿಹರರುಗಳೇ.

ಕಶ್ಯಪ: ಅಯ್ಯ ಶಂಕರ ಆ ಮಯಬ್ರಹ್ಮನ ಮಗಳನ್ನು ನನ್ನ ಕಂದನಾದ ಸೂರ‌್ಯನಿಗೆ ತರಬೇಕೆಂದು ಬಂದಿರುತ್ತೇನೆ. ಇದು ನಿಮಗೆ ಸಮ್ಮತವೋ ಹೇಗೆ.

ಹರಿಹರರು: ಸ್ವಾಮಿ ಕಶ್ಯಪರೆ ಸೂರ‌್ಯದೇವನಿಗೆ ಲಗ್ನದ ವಿಚಾರವನ್ನು ಕೇಳಿ ನಮಗೆ ಬಹಳ ಸಂತೋಷವಾಯಿತು ಮತ್ತು ನಮಗೂ ಸಮ್ಮತವೆ.

ಕಶ್ಯಪ: ಹಾಗಾದರೆ ನೀವುಗಳು ನನ್ನ ಜೊತೆಯಲ್ಲಿ ಬರುವರಾಗಿರಿ.

ಈಶ್ವರ: ಕಶ್ಯಪ ಮುನಿಗಳೇ, ಆ ಪಾಪಾತ್ಮನ ಪಟ್ಟಣಕ್ಕೆ ನಾವು ಖಂಡಿತವಾಗಿ ಬರುವುದಿಲ್ಲಾ.

ಕಶ್ಯಪ: ಶಂಕರ ಕೃಷ್ಣ ಆ ಮಯಬ್ರಹ್ಮನು ನಿಮ್ಮಗಳನ್ನು ಮರ‌್ಯಾದೆಯಿಂದ ಕಾಣದೆ ಹೋದರೆ ನನಗೂ ಬೇಡ ಬನ್ನಿ ಹೋಗೋಣ.

ಹರಿಹರರು: ಕಶ್ಯಪರೆ ನಿಮ್ಮ ಇಷ್ಟದಂತೆ ಆಗಲಿ ಬರುತ್ತೇವೆ.

�/D�l:��`�^-ascii-font-family:Calibri;mso-ascii-theme-font: minor-latin;mso-hansi-font-family:Calibri;mso-hansi-theme-font:minor-latin’>ಪ್ರಾಣಕಾಂತರು ರಗ್ರಕ್ಕೆ ಹೋಗುತ್ತಾರೆಂಬ ವಾರ್ತೆಯನ್ನು ಕೇಳಿ ಬಂದಿರುತ್ತೇನೆ. ಜಾಗ್ರತೆಯಾಗಿ ನನ್ನ ಸಖೀಮಣಿಯನ್ನು ಆಸ್ಥಾನಕ್ಕೆ ಬರುಮಾಡು.

 

ಸಖಿ: ಅಣೈಯ್ಯ ಸಾರಥಿ ನಾವು ಧಾರೆಂದರೆ ಪೆಂದೋಟಪುರವನ್ನು ಪರಿಪಾಲಿಸುವ ಮಯಬ್ರಹ್ಮದೇವರಿಗೆ ಪತ್ನಿಯಳಾದಂಥ ಶಾಂತಾದೇವಿಗೆ ಸೇವಕಳಾದಂಥ ಸಖೀಮಣಿಯೆಂದು ತಿಳಿಯಪ್ಪಾ ಸಾರಥಿ ಸಂಧಾನಮತಿ. ಅಣೈಯ್ಯ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ಶಾಂತಾದೇವಿಯು ಕರೆಸಿಕೊಂಡ  ಕಾರಣ ಬಾಹೋಣವಾಯಿತು. ಜಾಗ್ರತೆಯಾಗಿ ತೋರಿಸುವಂಥವ ನಾಗಪ್ಪಾ ಮಗು ಬಾಲಕ.

ಸಖಿ: ನಮೋ ನಮೋ ದೊರೆಸಾನಿ ದಿವ್ಯ ಸುಜ್ಞಾನಿ.

ಶಾಂತಾದೇವಿ: ಅಮ್ಮಾ ಸಖೀಮಣಿಯೆ ನಿನಗೆ ಮಂಗಳವಾಗಲಿ ಮೇಲಕ್ಕೇಳು. ಅಮ್ಮಾ ದೊರೆಸಾನಿ ಹೇಳುತ್ತೇನೆ ಕೇಳಿ.

ಪದ

ಅರಸಿ ನೀ  ಕೇಳಮ್ಮಾ  ಕರೆಸೀದ  ಪರಿಯೇನು
ಸಂಭ್ರಮದಿಂದ  ಹೇಳಮ್ಮಾ  ತಾಯೆ ॥

ಸಖಿ: ಅಮ್ಮಾ ದೊರೆಸಾನಿ, ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು ಜಾಗ್ರತೆಯಾಗಿ ಹೇಳುವಂಥವರಾಗಿರಿ.

ಪದ

ಕೇಳಮ್ಮ  ಸಖೀಮಣಿಯೆ  ಹರುಷದಿಂ ಪೇಳುವೆ
ಪ್ರಾಣಕಾಂತರು  ಈಗ  ಸಮರಕ್ಕೆ  ಹೋಗುವರು ॥

ಶಾಂತಾದೇವಿ: ಅಮ್ಮಾ ಸಖೀಮಣಿಯೆ, ಪ್ರಾಣಕಾಂತರು ಶಂಕರನೊಂದಿಗೆ ರಣಾಗ್ರವನ್ನು ಮಾಡುವುದು  ಸರಿಯಲ್ಲಾ. ಅವರನ್ನು ಮಕ್ಕಳೋಪಾದಿಯಲ್ಲಿ ಕಾಣಬೇಕು. ಆದ್ದರಿಂದ ಅವರೊಡನೆ ರಣಾಗ್ರವನ್ನು ಮಾಡುವುದು ಸರಿಯಲ್ಲವೆಂದು ಹೇಳಬೇಕಮ್ಮಾ ಸಖೀಮಣಿಯೆ.

ಪದ

ಅರಸಿ ಕೇಳಮ್ಮಾ  ವಿವರವೇನಿರುವದು  ಅದರ
ಮರ್ಮವು  ನನಗೆ  ತಿಳಿಯದು  ತಾಯೆ ॥

ಸಖಿ: ಅಮ್ಮಾ ದೊರೆಸಾನಿ, ನಿಮ್ಮ ರಮಾರಮಣರು ರಣಾಗ್ರಕ್ಕೆ ಹೋದರೆ ಯಾವ ತೊಂದರೆಯು ಆಗುವುದಿಲ್ಲಾ. ನೀವು ಎಷ್ಟು ಮಾತ್ರಕ್ಕೂ ಚಿಂತಿಸಬೇಡಮ್ಮಾ ದೊರೆಸಾನಿ ದಿವ್ಯ ಸುಜ್ಞಾನಿ.

ಶಾಂತಾದೇವಿ: ಅಮ್ಮಾ ಸಖೀಮಣಿಯೆ ಹೇಳುತ್ತೇನೆ ಕೇಳು.

ಪದ

ರಮಣಾ  ನಲ್ಲಿಗೆ  ನಾನು  ಹೋಗುವೆನಮ್ಮ  ಸಖಿಯೆ
ತೆರಳು  ನೀ ಅರಮನೆಗೆ  ತೆರಳಮ್ಮಾ  ಸಖಿಯೆ ॥

ಶಾಂತಾದೇವಿ: ಅಮ್ಮಾ ಸಖೀಮಣಿಯೆ ನಾನು ಪ್ರಾಣಕಾಂತರಲ್ಲಿಗೆ ಹೋಗುತ್ತೇನೆ. ನೀನು ಅರಮನೆಗೆ ತೆರಳುವಂಥವಳಾಗಮ್ಮಾ ಸಖಿಮಣಿಯೆ.

ಸಖಿ: ಅಮ್ಮಾ ದೊರೆಸಾನಿ ನಿಮ್ಮ ಇಷ್ಟದಂತೆ ಅರಮನೆಗೆ ತೆರಳುತ್ತೇನೆ.

ಭಾಮಿನಿ

ಇತ್ತಲಾ  ಶಾಂತಾದೇವಿಯು  ತನ್ನ
ಸಖಿಯೊಡನೆ  ಸಂಭಾಷಣೆಯ ಮಾಡಿ
ತನ್ನ  ಪತಿಯಾದ  ಮಯಬ್ರಹ್ಮದೇವರಲ್ಲಿಗೆ
ಸಂಭ್ರಮದಿ  ಬರುತಿರಲಾಗಲಾಕ್ಷಣಾ ॥

ಶಾಂತಾದೇವಿ: ಪ್ರಾಣಕಾಂತ ನಮಸ್ಕರಿಸುವೆನು.

ಮಯಬ್ರಹ್ಮ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ಕಾಂತೆ ಮತಿ ಗುಣವಂತೆ. ಹೇ ರಮಣಿ ನೀನು ಅರಮನೆಯಲ್ಲಿ ಸುಖವಾಗಿ ಇರುವುದನ್ನು ಬಿಟ್ಟು ಇಲ್ಲಿಗೆ ಬರಲು ಕಾರಣವೇನು.