ಎನ್ನಗುರುವಿನಂತೆ ದೊಡ್ಡವರೋ | ಹರಿಹರನೇ
ಶಂಭೋ ತನ್ನ ಮಾರ್ಗವ ತೋರಿಕೊಟ್ಟವರೋ
ಆಸೆ ಪಟ್ಟು ದೇಶ ತಿರುಗಿ ಲೇಸದಂತ
ಗಿರಿಯ ತಂದು ಕೂಸಿನಂತೆ ಸಾಕಿ
ಸಲಹಿ ಮೋಸ ಮಾಡಿಹೋದರಮ್ಮಾ         || ಎನ್ನಗುರು ||

ಅಂಡ ಪಿಂಡದ ಮಧ್ಯ ಕುಳಿತವರೇ ಅವರಿಗಲ್ಲಿ
ಸೂರ್ಯ ಚಂದ್ರರ ಸಾಕ್ಷಿ ಇಟ್ಟವರೆ |
ಕುಂಡಲಿಯೆಂಬೊ ಹಣ್ಣು ಸವಿದು | ಕಂಬ ಮುರಿದು
ಕಾಲವಾಗಿ ಅಂಬರಕ್ಕೆ ಹೋದರಮ್ಮಾ        || ಎನ್ನಗುರು ||

ಇನ್ನು ಸಾಲದೆಂದು ನಾವು ತಿನ್ನರಾಗಿ ಬೇಡಿ
ಕೊಂಡು ಅದರರ್ಧವನ್ನೆ ಹೇಳಿ ನಮಗೆ
ಅಂಬರಕ್ಕೆ ಹೋದರಮ್ಮಾ || ಎನ್ನಗುರು ||

ಆರು ಚಕ್ರವ ಬಳಸಿ ನಿಂತವರೆ ಅವರೀಗ
ಅಲ್ಲಿ ಹಾರಿ ಒಂದೊಂದು ಹದ್ದು ಕೊಂದವರೆ |
ಹದ್ದು ಕೊಂದು ದಾರ ಮಾಡಿ | ತಮ್ಮ
ಪಂಜರ ಹಾಕುವಾಗ | ಬ್ರಹ್ಮನೆಂಬೊ ಕಳ್ಳ
ಬೆಕ್ಕು ಹೊತ್ತುಕೊಂಡು ಹೋಯಿತಮ್ಮಾ      || ಎನ್ನಗುರು ||