(ಕೃಷ್ಣ ಮತ್ತು ಮಯಬ್ರಹ್ಮನ ಯುದ್ಧ ಮಂತ್ರಿ ಮೂರ್ಛೆ)

ಕೃಷ್ಣ: ಯಲವೋ ಮಂತ್ರಿ ನಿನ್ನ ಪಾಡೇನಾಯಿತು ನೋಡಿದೆಯಾ.

ಭಾಮಿನಿ

ಇತ್ತಲಾ  ಶ್ರೀ ಕೃಷ್ಣ ಪರಮಾತ್ಮನ  ಬಾಣದಿಂದ
ಮಂತ್ರಿಯು  ಮೂರ್ಛೆಸಲಾಗಲಾಕ್ಷಣಾ  ಇದ ತಿಳಿದ
ಓರ್ವ ಚಾರಕನು  ಮಯಬ್ರಹ್ಮನಲ್ಲಿಗೆ  ಬಂದು ತಿಳಿಸಲಾಗಾ ॥

ಚಾರಕ: ಮಯಬ್ರಹ್ಮ ದೇವರಿಗೆ ಜಯವಾಗಲಿ.

ಮಯಬ್ರಹ್ಮ: ಚಾರನೆ ವರ್ತಮಾನವೇನು.

ಚಾರಕ: ಸ್ವಾಮಿ ಮಯಬ್ರಹ್ಮದೇವರೆ ನಿಮ್ಮ ಮಂತ್ರಿಯು ಆ ಕೃಷ್ಣ ಪರಮಾತ್ಮನೊಡನೆ ಯುದ್ಧವನ್ನು ಮಾಡಿ ಸೋತೋದ್ರು ಕಣಪ್ಪೊ.

ಮಯಬ್ರಹ್ಮ: ಅಯ್ಯ ಸಾರಥಿ ಆ ಕಳ್ಳ ಕ್ರಿಷ್ಣನು ನನ್ನ ಮಂತ್ರಿಯನ್ನು ಮೂರ್ಛೆ ಕೆಡಹಿದನೆ ಭಲಾ ಭಲಾ ಅಯ್ಯ ಮಂತ್ರಿ ಅವನ ಶೌರ‌್ಯ ಸಾಹಸವನ್ನು ನೋಡುತ್ತೇನೆ.

ಪದ

ಕಾಂತಾಪತಿಯೆ  ಕೇಳು  ಧುರದೊಳು  ನಿನ್ನನು
ಜೈಸುವೆನು  ಸಮರದಿ  ನಾನೀಗ ಬೇಗಾ॥

ಕೃಷ್ಣ: ಯಲವೋ ಮಯಬ್ರಹ್ಮನೆ ಕೇಳು ನಾನು ನಿನ್ನ ಮಗಳನ್ನು ಬಯಸಿ ಬಂದಿರುತ್ತೇನೆ ನಿನ್ನ ಮಗಳನ್ನು ನನಗೆ ಕೊಟ್ಟು ಲಗ್ನ ಮಾಡುವೆಯೊ ಅಥವಾ ವೈರದಿಂದ ಕಾದುವೆಯೋ ಜಾಗ್ರತೆಯಾಗಿ ಹೇಳುವಂಥವನಾಗು.

ಪದ

ಧುರದೋಳ್  ನನ್ನನು  ಜೈಸುವರ‌್ಯಾರುಂಟು
ಮೂರುಲೋಕದೊಳು  ಕಾಣೆ  ಕೇಳೈಯ್ಯ  ನೀನು॥

ಮಯಬ್ರಹ್ಮ: ಯಲವೋ ಕಳ್ಳ ಕೃಷ್ಣ ಹೇಳುತ್ತೇನೆ ಕೇಳು ನನ್ನನ್ನು ಗೆಲ್ಲುವಂಥ ಶೂರರನ್ನು ಈ ಮೂರು ಲೋಕದಲ್ಲಿಯೂ ಕಾಣಲಿಲ್ಲಾ. ಮದಕರಿಯ ಸ್ವಪ್ನ ಕೇಸರಿಯಾದ ಸಿಂಹವು ಬರಲು ಆನೆಯು ಬದುಕುವುದುಂಟೆ ವೀರಾಧಿವೀರನಾದ ಮಯಬ್ರಹ್ಮನ ಪಟ್ಟಣಕ್ಕೆ ನೀನು ಬಂದು ಬದುಕುವುದುಂಟೆ. ಬಂದ ದಾರಿಯನ್ನು ಹಿಡಿದುಕೊಂಡು ಹೊರಡುವಂಥವನಾಗು.

ಪದ

ರಣಹೇಡಿ  ಬ್ರಹ್ಮ ಕೇಳು  ನಿನ್ನ ಶೌರ‌್ಯವ ನಾನು ॥
ಚಕ್ರದಿಂ  ಹರಿಸುವೆ  ಕೇಳೆಲೋ  ನೀನು ॥

ಕೃಷ್ಣ: ಯಲವೋ ಬ್ರಹ್ಮ ನನ್ನನ್ನು ಜೈಸುವಂಥ ಶೂರನನ್ನು ಈ ಮೂರು ಲೋಕದಲ್ಲಿಯು ಕಾಣಲಿಲ್ಲಾ ನಿನ್ನ ಶೌರ‌್ಯ ಸಾಹಸವನ್ನು ನೋಡುತ್ತೇನೆ ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಮಯಬ್ರಹ್ಮ: ಯಲವೋ ಕ್ರಿಷ್ಣ ಹೇಳುತ್ತೇನೆ ಕೇಳು.

ಪದ

ಹಸುರು  ಪಂಥವ  ನಾನು  ಬಿಡುವೆನು  ಸಮರದಿ  ನಿನ್ನ
ಶೌರ‌್ಯವ ನಾನು  ನೋಡುವೆ  ಈಗಾ ॥

ಮಯಬ್ರಹ್ಮ: ಯಲವೋ ಭಂಡನಾದ ನಾರಾಯಣನೆ ಕೇಳು. ನೀನು ಹಿಂದೆ ಹಮ್ಮಿನಿಂದ ಬ್ರಹ್ಮನ ವುದರವನ್ನು ಹೊಕ್ಕು ಈಚೆಗೆ ಬರಲು ದಾರಿತಪ್ಪಿ ಆ ಬ್ರಹ್ಮನ ಅದೋದ್ಭರದಲ್ಲಿ ಇಳಿದಂಥವನು ನೀನು ಆದ್ದರಿಂದಲೇ ನಿನಗೆ ಅದೆಕ್ಷಜನೆಂದು ಹೆಸರಾಗಲಿಲ್ಲವೆ. ಛೆ ಭಂಡ ನಿನ್ನ ಭಂಡ ಮಾತುಗಳು ಹಾಗಿರಲಿ. ಮರಿಯಾದೆಯಿಂದ ನಿನ್ನ ಪಟ್ಟಣಕ್ಕೆ ತೆರಳುವಂಥವನಾಗು.

ಕೃಷ್ಣ: ಎಲವೋ ಭ್ರಷ್ಟ ಹೇಳುತ್ತೇನೆ ಕೇಳು.

ಪದ

ವುರುಗ ಬಾಣವ  ನಾನು  ಬಿಡುವೆನು  ಭರದೊಳು
ಸಮರದೊಳು  ಹಾರಿಸುವೆ  ನಿನ್ನನು  ನಾನು ॥

ಕೃಷ್ಣ: ಎಲವೊ ಅಧಮನಾದ ಮಯಬ್ರಹ್ಮನೇ ಕೇಳು. ಸಹಸ್ರ ಸಂಖ್ಯೆಯುಳ್ಳ – ಉರಗ ಬಾಣವನ್ನು ಬಿಟ್ಟಿರುತ್ತೇನೆ. ಇದರ ಜ್ವಾಲೆಯನ್ನು ತಡೆದುಕೊಂಡು ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗು ವಂಥವನಾಗು.

ಮಯಬ್ರಹ್ಮ: ಯಲವೊ ಕೃಷ್ಣ ಹೇಳುತ್ತೇನೆ ಕೇಳುವಂಥವನಾಗು.

ಪದ

ಗರುಡ ಶರವನು ನಾನು ಬಿಡುವೆನು ಭರದೊಳು ನಿನ್ನ
ಶೌರ‌್ಯವ ನಾನು ನೋಡುವೆ ಈಗ ॥

ಮಯಬ್ರಹ್ಮ: ಯಲ ಅಧಮ, ನೀನು ಬಿಟ್ಟಿರುವ ವುರಗ ಬಾಣವನ್ನು ಮಧ್ಯಮಾರ್ಗದಲ್ಲಿ ಕತ್ತರಿಸಿ ಪುನಹ ನಿನ್ನ ಮೇಲೆ ಗರುಡ ಬಾಣವನ್ನು ಬಿಟ್ಟು ನಿನ್ನ ತಲೆಯನ್ನು ಹಾರಿಸುತ್ತೇನೆ ನನ್ನ ಸಾಮರ್ಥ್ಯವನ್ನು ತಿಳಿದುಕೊಳ್ಳಲೋ ಅಧಮ.

ಪದ

ಅಗ್ನಿ ಬಾಣವ ನಾನು ಬಿಡುವೆನೂ ನೋಡೆಲವೊ
ಸುಟ್ಟು ಬಿಡುವೆನು ತಡೆದುಕೊಳ್ಳಲೊ ಅಧಮ ॥

ಕೃಷ್ಣ: ಯಲಾ ಅಧಮನಾದ ಮಯಬ್ರಹ್ಮನೇ ಕೇಳು. ನೀನು ಬಿಟ್ಟಿರುವ ಅಗ್ನಿಬಾಣವನ್ನು ಮಧ್ಯಮಾರ್ಗದಲ್ಲಿ ಕತ್ತರಿಸಿ ಪುನಹ ನಾನು ಅಗ್ನಿ ಬಾಣವನ್ನು ಬಿಟ್ಟಿರುತ್ತೇನೆ. ಇದರ ಜ್ವಾಲೆಯನ್ನು ತಡೆದುಕೊಳ್ಳುವಂಥವನಾಗು ಅಧಮ.

ಪದ

ಶರಗಳಾ ಬಿಡುವೆನು ಅಧಮನೆ ನಿನಗೀಗಾ ॥

ಮಯಬ್ರಹ್ಮ: ಎಲಾ ಚೋರನಾದ ಕ್ರಿಷ್ಣನೇ ಕೇಳು, ನೀನು ಬಿಟ್ಟಿರುವ ಅಗ್ನಿಬಾಣವನ್ನು ಮಧ್ಯಮಾರ್ಗದಲ್ಲಿ ಕತ್ತರಿಸಿ ನನ್ನ ಬತ್ತಳಿಕೆಯೊಳಗಿರುವ ಕಾಲಮೇಘದ ಮಳೆಯನ್ನು ಸುರಿಸಿ ನಿನ್ನನ್ನು ನಿನ್ನ ಸೈನ್ಯವನ್ನು ಸಹ ನೀರಿನಲ್ಲಿ ಮುಳುಗಿಸಿ ಬಿಡುತ್ತೇನೆ ನೋಡುವಂಥವನಾಗಲೊ ಅದಮಾ.

ಕೃಷ್ಣ: ಯಲವೋ ಬ್ರಹ್ಮ ಎಂಜಲೆಲೆಗಳನ್ನು ತಿಂದು ಜೀವಿಸಲಾರದೆ ನನ್ನ ಮೇಲೆ ಯುದ್ಧಕ್ಕೆ ಬಂದಿರುವೆಯಾ ಭ್ರಷ್ಟ ನನ್ನಲ್ಲಿ ರಣಾಗ್ರವನ್ನು ಮಾಡಿ ಮರಣ ವೊಂದಬೇಡ  ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ಮಡದಿ  ಆಸೆಯ  ಬಿಟ್ಟು  ಸಮರಕ್ಕೆ  ನಿಲ್ಲು
ಕೊಲ್ಲದೆ  ಬಿಡುವನಲ್ಲವೋ ನಾನು ॥

ಮಯಬ್ರಹ್ಮ: ಯಲವೋ ಭ್ರಷ್ಟಾ, ಬ್ರಾಹ್ಮಣರು ಭೋಜನವನ್ನು ಮಾಡಿ ಸಂತೋಷಪಡುವರು. ಗೋವುಗಳು ಎಳೆಹುಲ್ಲನ್ನು ತಿಂದು ಸಂತೋಷಪಡುವವು. ಸತಿಯನ್ನು ಅಗಲಿದ ಗಂಡನು ಬಂದರೆ ಸಂತೋಷಪಡುವಳು. ನಿನ್ನೊಡನೆ ಯುದ್ಧವನ್ನು ಮಾಡಿ ನಾನು ಸಂತೋಷಪಡುವೆನು. ಯಲವೋ ಭ್ರಷ್ಟ ನಿನ್ನ ಮಡದಿ ಮಕ್ಕಳ ಆಸೆಯನ್ನು ಬಿಟ್ಟು ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

 

(ಯುದ್ಧಕೃಷ್ಣ ಮೂರ್ಛೆ)

ಭಾಮಿನಿ

ಇತ್ತಲಾ  ಮಯಬ್ರಹ್ಮನ  ಬಾಣದಿಂದಾ
ಶ್ರೀ ಕೃಷ್ಣ ಪರಮಾತ್ಮನು  ಮೂರ್ಛೆಸಲಾಗಲಾಕ್ಷಣ
ಶ್ರೀಕ್ರಿಷ್ಣ ಪರಮಾತ್ಮನು ಮೂರ್ಛೆಯಿಂದೆದ್ದು
ಓರ‌್ವ ಚಾರಕನೊಡನೆ ಮಂದಿ ಮಾರ್ಬಲ ಸಹಿತ
ವೈಕುಂಠಕ್ಕೆ  ಹೋಗಬೇಕೆಂದೆನುತ  ತಿಳಿಸಲಾಗ ॥

ಕೃಷ್ಣ: ಅಯ್ಯ ಸೇವಕಾ ಈ ಮಯ ಬ್ರಹ್ಮನಲ್ಲಿ ಯುದ್ಧವನ್ನು ಮಾಡಲು ಅಜರುದ್ರಾದಿಗಳಿಗೂ ಅಸಾಧ್ಯವಾಗಿರುವುದು. ಆದ್ದರಿಂದ ನಮ್ಮ ಸೇನಾ ಸಮೂಹವನ್ನು ವೈಕುಂಠಕ್ಕೆ ಹೊರಡಿಸುವಂಥವನಾಗು.

ಈಶ್ವರನ ಸಭೆ

ಸ್ತೋತ್ರ:
ಶಂಕರ  ಪರಮೇಶ  ಮಹೇಶಾ
ದುರುಳ ವಿನಾಶ  ಕರ್ಮದಿ ಭೂಷಾ
ಶಂಕರ ಪರಮೇಶ ತ್ರಿಪುರ  ಹರ ಸುರ ಬವರ
ಬೇಡಲು  ಹರಿಹರ  ಅಳವಲ್ಲಾ  ಶಂಕರ
ಪರಮೇಶ  ಮಹೇಶಾ  ಜಯ ಜಯ
ನಮಃ ಪಾರ್ವತೀ ಪತೆ  ಹರಹರ  ಮಹದೇವಾ॥

ಶ್ರೀ ಗುರು ಮಂತ್ರ

ಓಂ ಮೃತ್ಯುಂಜಯಾಯ  ರುದ್ರಾಯ  ನೀಲಕಂಠಾಯ
ಶಂಭುವೇ  ಅಮೃತೇಶಾಯ  ಸರ‌್ವಾಯ  ಮಹಾದೇವಾನುತೆ ನಮೋ ನಮಃ ॥

ದೇವತೆಗಳು: ಪರಮಾತ್ಮನನ್ನು ಸ್ಕರಿಸುವೆವು.

ಈಶ್ವರ: ದೇವತೆಗಳೆ ಇಮಗೆ ಮಂಗಳವಾಗಲಿ ಮೇಲಕ್ಕೇಳಿರೈ ದೇವತೆಗಳೆ.

ದೇವತೆಗಳು: ಪರಮಾತ್ಮ ನಿಮ್ಮ ಆಶೀರ‌್ವಾದದಿಂದ ನಾವು ಧನ್ಯರಾದೆವು.

ಭಾಮಿನಿ

ಇತ್ತಲಾ  ಪರಮೇಶ್ವರನು  ಸಕಲ ವೈಭವದಿಂದ
ಕುಳಿತಿರುವ  ಸಮಯೊದೊಳಾಗಲಾಕ್ಷಣ
ತ್ರಿಲೋಕ  ಸಂಚಾರಿಗಳಾದ  ನಾರದರು  ಬರುತಿರಲಾಗಾ ॥

ಪದ

ಶಂಕರ  ಗಿರಿಜೇಶ  ಸದಾಶಿವ  ಲಂಕಾಧೀಶ
ಬಿಂಕವಿನಾಶ ಶಂಕರ  ಗಿರಿಜೇಶ  ಸದಾಶಿವ ॥

ನಾರದ: ನಾರಾಯಣ ನಾರಾಯಣ ಇಲ್ಲಿ ಉಭಯತ್ರರು ಕುಳಿತಿರುವರು ಈವಾಗ ವಳ್ಳೆಯ ಸಮಯಾ ಇಲ್ಲಿ ಚಾಡಿಬೀಜವನ್ನು ಬಿತ್ತುತ್ತೇನೆ. ಹ್ಯಾಗೆ ಉರಿಯುವುದೋ ನೋಡುತ್ತಾ ಯಿರಿ. ನಾರಾಯಣ ನಾನು ಈಗಲೇ ಪರಮೇಶ್ವರನ ಆಸ್ಥಾನಕ್ಕೆ ಹೋಗುತ್ತೇನೆ.

ಪದ

ಸಾಂಬಶಿವಾಯ ನಮೋ  ರಜತಾಗಿರಿ  ಸಾಂಬಶಿವಾಯ
ನಮೋ ಶಾಂಭವಿ ಮನೋಹರ
ಕೃಪಾಕರ  ಶಿವಾ ಸಾಂಬಶಿವಾಯ ನಮೋ ॥

ನಾರದ: ಪರಮಾತ್ಮ ನಮಸ್ಕರಿಸುವೆನು ಪಾರ್ವತಾ ದೇವಿ ನಮಸ್ಕರಿಸುವೆನು.

ಈಶ್ವರ ಪಾರ್ವತಿ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ನಾರದ.

ಈಶ್ವರ: ನಾರದ ತ್ರಿಲೋಕದ ವಿಚಾರವೇನಾದರು ಇದ್ದರೆ ತಿಳಿಸು.

ನಾರದ: ಪರಮಾತ್ಮ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಕಂಡಿದ್ದನ್ನ  ಹೇಳಿದರೆ  ಕೊಂಡಿಕಾರ
ಎನ್ನುವರು  ನಾರಾಯಣಾ  ದೇವಾ ॥

ನಾರದ: ಪರಮಾತ್ಮ ತಿಳಿದ ಸಮಾಚಾರವನ್ನು ಹೇಳೋಣವೆಂದರೆ ನನ್ನನ್ನು ಚಾಡಿಕೋರನಾರದ ಎಂದು ಅಪಹಾಸ್ಯ ಮಾಡುವರು. ಹೇಳಿದರು ಕಷ್ಟ ಹೇಳದೆ ಇದ್ದರು ಕಷ್ಟ. ತಿಳಿದ ಸಮಾಚಾರವನ್ನು ವಂಚಿಸಬಾರದು. ಸ್ವಾಮಿ ದ್ರೋಹಕ್ಕೆ ಗುರಿಯಾಗಬೇಕಾಗುತ್ತದೆ. ಅರಿಕೆ ಮಾಡಿಕೊಳ್ಳುತ್ತೇನೆ.

ಈಶ್ವರ: ನಾರದ ಈಗ ಯಾವ ಲೋಕದಿಂದ ಬಂದಿರುವೆ ಹೇಳು. ಇದೂ ಅಲ್ಲದೆ ಯಾವ ಯಾವ ಲೋಕಕ್ಕೆ ಕೊಳ್ಳಿ ಚುಚ್ಚಿ ಬಂದಿರುವೆ ಹೇಳು. ಯಾಕೆಂದರೆ ಇದು ನಿನ್ನ ಜನ್ಮ ಸ್ವಭಾವ.

ಪದ
ಮೂರು  ನೇತ್ರಕೆ  ಮೂರುಜನ ಸ್ತ್ರೀಯರು
ನಿಮಗಿರಬೇಕೆ ದೇವ  ದೇವ
ರೂಪಿನೊಳು ಅತಿಚಲ್ವೆ  ರಂಭೆ ಮೇನಕೆಗಿಂತ
ಅವಳು  ನಾರಾಯಣ ದೇವಾ ॥

ನಾರದ: ಸ್ವಾಮಿ ಶಂಕರಮೂರ್ತಿ ನಿಮಗೆ ಇರತಕ್ಕಂಥ ಮೂರು ನೇತ್ರಗಳಿಗೆ ಮೂರುಜನ  ಸತಿಯರು ಇದ್ದೇ ಇರಬೇಕು ಮತ್ತು ಆ ಮಯಬ್ರಹ್ಮನ ಕುಮಾರಿಯನ್ನು ತಂದು ಲಗ್ನವಾದರೆ ನಿಮ್ಮ ಕೈಲಾಸದ ಭಾಗ್ಯೋದಯವನ್ನು ವರ್ಣಿಸಲು ಅಸಾಧ್ಯವಾಗಿರುವುದು. ಪರಮಾತ್ಮಾ ಇದೂ ಅಲ್ಲದೆ ಲಕ್ಷ್ಮಿ ಸರಸ್ವತಿ ರಂಭೆ ಮೇನಕೆ ನಿಮ್ಮ ಸತಿಯಾದ ಪಾರ್ವತಾದೇವಿಗಿಂತಲೂ ಅತಿ ಚೆಲುವೆಯಾಗಿರುವ. ಮಯಬ್ರಹ್ಮನ ಕುಮಾರಿಯಾದ ಸಂಜ್ಞಾದೇವಿಯನ್ನು ತಂದು ಲಗ್ನವಾದರೆ ನಿಮ್ಮ ಭಾಗ್ಯವೆ ಭಾಗ್ಯ ಪರಮಾತ್ಮಾ ನಾರಾಯಣ ನಾರಾಯಣ.

ಈಶ್ವರ: ನಾರದ ಆ ಕನ್ಯೆಯು ಅಂಥ ಅತಿ ಚಲ್ವೆಯಾಗಿರುವಳೆ.

ನಾರದ: ಆಹಾ ಪರಮಾತ್ಮ ಅವಳ ರೂಪು ಅವಳ ಸೌಂದರ‌್ಯ ವರ್ಣಿಸಲು ಅಸಾಧ್ಯವಾಗಿರುವುದು ಪರಮಾತ್ಮಾ.

ಈಶ್ವರ: ನಾರದ ಸುಳ್ಳು ಹೇಳಬೇಡ ನಿಜವಾಗಿದ್ದರೆ ಹೇಳು.

ನಾರದ: ಪರಮಾತ್ಮ ಆತನ ಕುಮಾರಿಯನ್ನು ಸುಮ್ಮನೆ ಕೇಳಿದರೆ ಕೊಡುವುದಿಲ್ಲಾ. ಆತನಲ್ಲಿ ಖಾಡಾಖಾಡಿ ಯುದ್ಧವನ್ನು ಮಾಡಿ ಆತನನ್ನು ಜೈಸಿದರೆ ಆತನು ಕುಮಾರಿಯನ್ನು ಕೊಡುವನು ಇಲ್ಲದೆ ಹೋದರೆ ಕೊಡುವುದಿಲ್ಲವೈ ಪರಮಾತ್ಮ ತಿಳಿದ ಸಮಾಚಾರವನ್ನು ವಂಚಿಸಬಾರದೆಂದು ಹೇಳಿರುತ್ತೇನೆ. ಇದರ ಮೇಲೆ ತಮ್ಮ ಇಷ್ಟ ನಾರಾಯಣ ನಾರಾಯಣ.

ಈಶ್ವರ: ನಾರದ ಆ ಕನ್ಯೆಯನ್ನು ನಾನು ತರುತ್ತೇನೆ ನೀನು ತೆರಳುವಂಥವನಾಗು.

ನಾರದ: ಪರಮಾತ್ಮ ನಾನು ಈಗಲೇ ಗಮನ ಮಾಡುತ್ತೇನೆ. ನಾನು ಇಲ್ಲಿ ಸ್ವಲ್ಪ ಬೆಂಕಿಯನ್ನು ಹಚ್ಚಿದ್ದಾಯಿತು ಹ್ಯಾಗೆ ವುರಿಯುವುದೋ ನೋಡುತ್ತಾ ಯಿರಿ.

ಪದ

ಹರಿನಾರಾಯಣ  ಹರಿನಾರಾಯಣ
ಹರಿನಾರಾಯಣ ಎನು ಮನವೆ
ನಾರಾಯಣನೆಂಬೋ ನಾಮದ ಮಂತ್ರವ
ನಾರದ ಬಿತ್ತಿ ಧರೆಯೊಳಗೆ  ನಾರಾಯಣಾ ದೇವಾ ॥

ಈಶ್ವರ: ಸೇವಕಾ  ನಮ್ಮ ರತ್ನ ಖಚಿತವಾದ ರಥವನ್ನು ಆ ಪೆಂದೋಟಪುರಕ್ಕೆ ಹೊಡೆಯುವನಾಗು.

ಚಾರಕ: ಪರಮಾತ್ಮ ನಿಮ್ಮ ಅಪ್ಪಣೆಯಂತೆ ಹೊಡೆಯುತ್ತೇನೆ.

ಭಾಮಿನಿ

ಇತ್ತಲಾ ನಾರದ ಮುನಿಗಳು  ಪರಮೇಶ್ವರಗೆ
ಬೋಧನೆಯ ತಿಳಿಸಿ  ಮಯಬ್ರಹ್ಮನ
ಪಟ್ಟಣಕೆ ಹೋಗಬೇಕೆಂದೆನುತ ಬರುತಿರಲಾಗ ॥

ನಾರದ: ನಾರಾಯಣ ನಾರಾಯಣ ನಾನು ಈಗಲೇ ಆ ಮಯಬ್ರಹ್ಮನ ಪಟ್ಟಣಕ್ಕೆ ಹೋಗಿ ಇಲ್ಲಿನ ವಿಚಾರವನ್ನು ತಿಳಿಸಿ ಈರ‌್ವರು ಜಗಳ ಮಡುವಂಥೆ ಮಾಡುತ್ತೇನೆ ನೋಡುತ್ತಾ ಯಿರಿ ನಾರಾಯಣ.

ಪದ

ಏನು  ಆನಂದವಾಗಿದೆ ಶ್ರೀ ಹರಿಯನಾಮ
ಏನು  ಆನಂದವಾಗಿದೆ  ಗಾನಲೋಲ ನಿನ್ನ
ಮಹಿಮೆಯ ಧ್ಯಾನ ಮಾಡುವ  ಸಮಯದಿ
ಏನು  ಆನಂದವಾಗಿದೆ ಶ್ರೀಹರಿ ನಾಮ ॥

ನಾರದ: ನಾರಾಯಣ ನಾರಾಯಣ, ಸಾರಥಿ ನಿಮ್ಮ ಅರಸನಾದ ಆ ಮಯಬ್ರಹ್ಮನಲ್ಲಿಗೆ ಹೋಗಿ ನಾರದ ಮುನಿಗಳು ಬಂದಿರುವರೆಂದು ತಿಳಿಸು.

ಸಾರಥಿ: ನಾರದ ಮುನಿಗಳೆ ಈಗಲೇ ಹೋಗಿ ತಿಳಿಸುತ್ತೇನೆ.

ಸಾರಥಿ: ಮಯಬ್ರಹ್ಮ ಭೂಪಾಲರಿಗೆ ಜಯವಾಗಲಿ. ಮಹಾಸ್ವಾಮಿ ನಾರದ ಮುನಿಗಳು ಬಂದು ದ್ವಾರ ಬಾಗಿಲಲ್ಲಿ ನಿಂತಿರುವರು.

ಮಯಬ್ರಹ್ಮ: ಸಾರಥಿ ಅವರನ್ನು ಮರ‌್ಯಾದೆಯಿಂದ ಒಳಗೆ ಬರಮಾಡು. ನಾರದ ಮಹಾತ್ಮರಿಗೆ ವಂದಿಸುವೆನು.

ನಾರದ: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ಮಯಬ್ರಹ್ಮದೇವಾ.

ಮಯಬ್ರಹ್ಮ: ಅಯ್ಯ ನಾರದ, ತಾವು ತ್ರಿಲೋಕ ಸಂಚಾರಿಗಳು. ಯಾವ ಯಾವ ಲೋಕದಲ್ಲಿ ಏನೇನು ಸಮಾಚಾರಗಳು ನಡೆದಿರುವುವು  ಮರೆಮಾಚದೆ ತಿಳಿಸುವಂಥವರಾಗಿರಿ.

ನಾರದ: ಅಯ್ಯ ಮಯಬ್ರಹ್ಮದೇವ  ತಿಳಿದ ಸಮಾಚಾರವನ್ನು ಹೇಳುತ್ತೇನೆ ಎಂದರೆ ನನ್ನನ್ನು ಚಾಡಿಕೋರ ನಾರದ ಎಂದು ಅಪಹಾಸ್ಯ ಮಾಡುವರು. ಹೇಳಿದರು ಕಷ್ಠ ಹೇಳದೆ ಇದ್ದರು ಕಷ್ಟ. ತಿಳಿದ ಸಮಾಚಾರವನ್ನು ವಂಚಿಸಬಾರದು. ಕಡುಪರಾಕ್ರಮಿಯಾದ  ನಿನಗೆ ಯಂಥ ಅಪಮಾನವು ಸಂಭವಿಸಿರುವುದಯ್ಯ.

ಮಯಬ್ರಹ್ಮ: ನಾರದರೆ ಅಂಥಾ ಅಪಮಾನವು ಸಂಭವಿಸಲು ಕಾರಣವೇನು. ಅಂಥ ವೀರಾಧಿ ವೀರರ‌್ಯಾರಿವರು. ಜಾಗ್ರತೆಯಾಗಿ ತಿಳಿಸುವಂಥವರಾಗಿ.

ನಾರದ: ಅಯ್ಯ ಮಯಬ್ರಹ್ಮದೇವ ಹೇಳುತ್ತೇನೆ ಚಿತ್ತವಿಟ್ಟು ಕೇಳು.

ಪದ

ಯೀಶನಾಣೆ  ಹೇಳುವೆನು  ದೋಷವಿಲ್ಲ ಕೇಳೈ ನೀನು  ಶಂಕರನು
ನಿನ್ನ ಪುರಕೆ  ಬರುವರು  ಕೇಳು ನೀನು  ನಾರಾಯಣಾ  ದೇವಾ ॥

ನಾರದ: ಅಯ್ಯ ಮಯಬ್ರಹ್ಮದೇವಾ ನಾನು ದೇಶ ಸಂಚಾರ ಮಾಡಿಕೊಂಡು ಕೈಲಾಸ ಮಾರ್ಗವಾಗಿ ಬರುತ್ತಿದ್ದೆನು. ಆ ಕೈಲಾಸವಾಸನಾದ ಶಂಕರ ಮಹದೇವರು ನಿನ್ನ ಪಟ್ಟಣಕ್ಕೆ ಬರುತ್ತೇವೆಂದು ಹೊರಟಿರುವರುಯ್ಯ ಮಯಬ್ರಹ್ಮದೇವಾ.

ಮಯಬ್ರಹ್ಮ: ಏನು ಏನು ನಾರದ ಮಹಾತ್ಮರೆ ಆ ಕೈಲಾಸವಾಸನಾದ ಪರಮೇಶ್ವರದೇವರು ನನ್ನ  ಮಂದಿರಕ್ಕೆ ಬರುವರೆ. ಬಹಳ ಸಂತೋಷ. ಅಯ್ಯ ಮಂತ್ರಿ, ಆ ಕೈಲಾಸವಾಸನಾದ ಪರಮೇಶ್ವರ ದೇವರು ನನ್ನ ಮಂದಿರಕ್ಕೆ ಬರುವರಂತೆ. ಜಾಗ್ರತೆಯಾಗಿ ನಮ್ಮ ಪಟ್ಟಣವನ್ನು ಶ್ರುಂಗಾರ ಮಾಡಿಸು.

ನಾರದ: ಹಾಗಲ್ಲವಯ್ಯ ಆತನು ನಿನ್ನ ಪಟ್ಟಣಕ್ಕೆ ಬಂದು ನಿನ್ನೊಡನೆ ಖಾಡಾ ಖಾಡಿ ಯುದ್ಧವನ್ನು ಮಾಡಿ ನಿನ್ನ ಮಗಳಾದ ಸಂಜ್ಞಾದೇವಿಯನ್ನು ಕದ್ದುಕೊಂಡು ಹೋಗಿ ಲಗ್ನವಾಗುವೆನೆಂದು ಹೊರಟಿರುವರೈಯ್ಯ ಮಯಬ್ರಹ್ಮದೇವಾ.

ಮಯಬ್ರಹ್ಮ: ನಾರದರೆ ಹುಸಿಯ ಮಾತನ್ನು ಹೇಳಬೇಡಿ. ನಿಜವಾಗಿದ್ದರೆ ಹೇಳಿ ಹೊಸ ಮನುಷ್ಯರು ನನ್ನ ಪಟ್ಟಣಕ್ಕೆ ಬಂದು ಬದುಕುವುದುಂಟೆ ನಾರದ ಮುನಿಗಳೇ.

ನಾರದ: ಅಯ್ಯ ಮಯಬ್ರಹ್ಮದೇವಾ  ಅರಸರ ಬಳಿಯಲ್ಲಿ ಅತಿಶಯ ಮಾತುಗಳನ್ನು ಆಡಬಾರದು ಆಡದೆ ಇದ್ದರೆ ತೀರದು. ಆದರೆ ನೀನು ಮಾತ್ರ ಆತನೊಂದಿಗೆ ವಿಶ್ವಾಸ ಇಡಬೇಡ ಎಚ್ಚರಿಕೆ.

ಭಾಮಿನಿ

ನಾರದರ ನುಡಿಯ  ಕೇಳಿದಾಕ್ಷಣ  ಸಿಡಿಲು ಗರ್ಜನೆಯಂತೆ
ಗರ್ಜಿಸಿ  ತನ್ನ ಮಂತ್ರಿಗೆ  ಹೇಳಿದನೂ  ಸೈನ್ಯ ಸಮೂಹವನ್ನು
ಸಿದ್ಧಪಡಿಸೆಂದೆನುತಾ ॥ಹೇಳಿದನಾಗಾ ॥

ಮಯಬ್ರಹ್ಮ: ಅಯ್ಯ ಮಂತ್ರಿ. ನಾರದರು ಹೇಳಿದ ವಿಚಾರವನ್ನು ಕೇಳಿದೆಯಾ. ಆ ನಂದಿವಾಹನನಾದ ಶಂಕರನು ನಮ್ಮ ಮೇಲೆ ದಳಗೂಡಿ ಯುದ್ಧಕ್ಕೆ ಬರುವರಂತೆ. ಜಾಗ್ರತೆಯಾಗಿ ಸೇನಾ ಸಮೂಹವನ್ನು ಸಿದ್ಧಪಡಿಸುವಂಥವನಾಗು.

ಮಂತ್ರಿ: ರಾಜೇಂದ್ರ, ನಿಮ್ಮ ಅಪ್ಪಣೆಯಂತೆ ಸೇನಾಸಮೂಹವನ್ನು ಸಿದ್ಧಪಡಿಸುತ್ತೇನೆ.

ಭಾಮಿನಿ

ಇತ್ತಲಾ ಪರಮೇಶ್ವರನು
ಮಯಬ್ರಹ್ಮನ ಪಟ್ಟಣಕ್ಕೆ ಹೋಗಬೇಕೆಂದೆನುತ
ಸಂಭ್ರಮದಿ  ಬರುತಿರಲಾಗ ॥

ಈಶ್ವರ: ಯಾರಲ್ಲಿ ಸಾರಥಿ ಆ ಮಯಬ್ರಹ್ಮನಲ್ಲಿಗೆ ಹೋಗಿ ಪರಮೇಶ್ವರ ದೇವರು ನಿನ್ನ ಮೇಲೆ ಯುದ್ಧಕ್ಕೆ ಬರುವರೆಂದು ತಿಳಿಸು. ಅಲ್ಲದೆ, ವಳ್ಳೆಯ ಮಾತಿನಿಂದ ಅವನ ಮಗಳಾದ ಸಂಜ್ಞಾದೇವಿಯನ್ನು ಕೊಡುತ್ತಾನೋ ಅಥವ ವೈರದಿಂದ ಯುದ್ಧ ಮಾಡುವನೊ ಕೇಳುವಂಥವನಾಗು.

ಸಾರಥಿ: ಸ್ವಾಮಿ ಪರಮೇಶ್ವರ ದೇವರೆ ಈಗಲೇ ಹೋಗಿ ತಿಳಿದುಕೊಂಡು ಬರುತ್ತೇನೆ. ಮಯಬ್ರಹ್ಮ ದೇವರಿಗೆ ಜಯವಾಗಲಿ. ಸ್ವಾಮಿ ಮಯಬ್ರಹ್ಮದೇವರೆ ಕೈಲಾಸವಾಸನಾದ ಪರಮೇಶ್ವರ ದೇವರು ನಿಮ್ಮ ಮೇಲೆ ಯುದ್ಧಕ್ಕೆ ಬರುವರಂತೆ ವಳ್ಳೆಯ ಮಾತಿನಿಂದ ನಿಮ್ಮ ಮಗಳಾದ ಸಂಜ್ಞಾದೇವಿಯನ್ನು ಕೊಟ್ಟರೆ ಸರಿಯಂತೆ. ಇಲ್ಲವಾದರೆ ನಿಮ್ಮ ಮೇಲೆ ಯುದ್ಧ ಮಾಡುತ್ತಾರಂತೆ.

ಭಾಮಿನಿ

ಚಾರ ನುಡಿಯ  ಕೇಳಿದಾಕ್ಷಣ  ಸಿಡಿಲು ಗರ್ಜನೆಯಂತೆ
ಘರ್ಜಿಸಿ ಮಯಬ್ರಹ್ಮನು  ತನ್ನ ಮಂತ್ರಿಯೊಡನೆ
ಸೇನಾ ಸಮೂಹವನ್ನು ಸಿದ್ಧಪಡಿಸಬೇಕೆಂದೆನುತ  ನುಡಿದನಾಗಾ ॥

ಮಯಬ್ರಹ್ಮ: ಅಯ್ಯ ಮಂತ್ರಿ, ಆ ಕೈಲಾಸವಾಸನಾದ ಶಂಕರನು ನನ್ನ ಮೇಲೆ ಯುದ್ಧಕ್ಕೆ ಬರುವನಂತೆ ಜಾಗ್ರತೆಯಾಗಿ ಸೇನಾ ಸಮೂಹವನ್ನು ಸಿದ್ಧಪಡಿಸುವಂಥವನಾಗು.

ಮಂತ್ರಿ: ರಾಜೇಂದ್ರ ನಿಮ್ಮ ಅಪ್ಪಣೆಯಂತೆ ಸೇನಾ ಸಮೂಹವನ್ನು ಸಿದ್ಧಪಡಿಸುತ್ತೇನೆ.

ಮಯಬ್ರಹ್ಮ: ಯಲವೋ ನಂದಿವಾಹನನಾದ ಶಂಕರನೆ ಕೇಳು. ನೀನು ನನ್ನ ಮಂದಿರಕ್ಕೆ ಬರಲು ಕಾರಣವೇನು ಜಾಗ್ರತೆಯಾಗಿ ಪೇಳಬೇಕೈ ಶಂಕರಾ.

ಪದ

ಪೆಂದೋಟ  ಪುರದರಸ  ಮಯಬ್ರಹ್ಮನೆ ಕೇಳು
ಹರುಷದಿಂದಲಿ  ನನಗೆ  ಕೊಡು ನಿನ್ನ  ಸುತೆಯಾ ॥

ಈಶ್ವರ: ಯಲವೋ ಭ್ರಷ್ಟನಾದ ಮಯಬ್ರಹ್ಮನೆ ಕೇಳು ನಿನ್ನ ಮಗಳಾದ ಸಂಜ್ಞಾದೇವಿಯನ್ನು ನನಗೆ ಕೊಟ್ಟು ಲಗ್ನ ಮಾಡಿದರೆ ಸರಿಯಾಯ್ತು. ನಿನ್ನಲ್ಲಿ ರಣಾಗ್ರವನ್ನು ಮಾಡಿ ಜೈಸಿಕೊಂಡು ಹೋಗುತ್ತೇನೆ ನೋಡುವಂಥವನಾಗಲೋ ಭ್ರಷ್ಟಾ.

ಮಯಬ್ರಹ್ಮ: ಯಲವೋ ಮಹೇಶ್ವರ ಹೇಳುತ್ತೇನೆ ಕೇಳು.

heme� x�tm�\x�en; mso-hansi-font-family:Calibri;mso-hansi-theme-font:minor-latin’>ಸಂಖ್ಯೆಯುಳ್ಳ ಕಮಲನಿಗೆ ಧಾರೆಂದು ತಿಳಿಯಬಲ್ಲೆ ಭಲೈ ಸಾರಥಿ ಇನ್ನೂ ಗೊತ್ತಾಗಲಿಲ್ಲವೆ ಮುನಿಮುಖ್ಯರೋಳ್ ಶ್ರೇಷ್ಟರೆಂದೆನಿಸಿರ್ಪ ಕಾಶ್ಯಪರ ಧರ್ಮಪತ್ನಿಯರಾದ ಅಧಿತಿ ದೇವಿಯ ಗರ್ಭಾಂಬುಧಿಯೊಳ್ ಪುಟ್ಟಿ ಸುಕುಮಾರನೆಂದೆನಿಸಿ ಸಪ್ತ ಅಶ್ವಂಗಳನ್ನು ಕಟ್ಟುವ ಭಾನುದೇವನೆಂದು ತಿಳಿಯುವಂಥವನಾಗೈ ಸಾರಥಿ ಸಂಧಾನಮತಿ.

ಭಲೈ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ಈ ವನಾಂತರವನ್ನು ಹೊಕ್ಕು ಪರಿಮಳ ವಾಸನೆಯುಳ್ಳ ಪುಷ್ಪಗಳನ್ನು ಕೊಯ್ದುಕೊಂಡು ಪೋಗಬೇಕೆಂದು ಬಂದಿರುತ್ತೇನೆ ಜಾಗ್ರತೆಯಾಗಿ ವುದ್ಯಾನವನದ ಬಾಗಿಲನ್ನು ತೆಗೆಯುವಂಥವನಾಗು ಆಹಾ ಈ ವನಾಂತರವನ್ನು ನೋಡಿದರೆ, ನನ್ನ ಮನಸ್ಸಿಗೆ ಬಹಳ ಆನಂದವಾಗುತ್ತಿರುವುದು.

 

ಆಹಾ ! ಇದೇನಾಶ್ಚರ‌್ಯ ಈ ವುದ್ಯಾನವನದ ಮಧ್ಯದಲ್ಲಿ ಓರ್ವ ಸ್ತ್ರೀಯಳು ಮಲಗಿರುವಳಲ್ಲಾ, ಈಕೆ ಯಾರಾಗಿರಬಹುದು, ವಿಚಾರಿಸಿ ನೋಡುವೆನು.