ದೇವೇಂದ್ರ: ಚಾರನೆ ವರ್ತಮಾನವೇನು.

ಚಾರಕ: ರಾಜೇಂದ್ರ ನಿಮ್ಮ ತಂದೆಯವರಾದ ಕಶ್ಯಪ ಮುನಿಗಳು ನಿಮ್ಮನ್ನು ಕರೆದುಕೊಂಡು ಬರುವಂತೆ ಆಜ್ಞಾಪಿಸಿರುವರು.

ದೇವೇಂದ್ರ: ಸಾರಥಿ ಈಗಲೇ ಬರುತ್ತೇನೆ ನಡೆ ಹೋಗೋಣ.

ದೇವೇಂದ್ರ: ತಂದೆಯವರ ಪಾದಕ್ಕೆ ನಮಸ್ಕರಿಸುವೆನು.

ಕಶ್ಯಪ: ನಿನಗೆ ಮಂಗಳವಾಗಲಿ, ಮೇಲಕ್ಕೇಳೈ ಮಗು ದೇವೇಂದ್ರ.

ದೇವೇಂದ್ರ: ತಂದೆಯವರೆ ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು ಜಾಗ್ರತೆಯಾಗಿ ಹೇಳುವಂಥವರಾಗಿರಿ.

ಕಶ್ಯಪ: ಕಂದ ನಿನ್ನನ್ನು ಕರೆಸಿಕೊಂಡ ಕಾರಣವೇನೆಂದರೆ ನಿನ್ನ ಅನುಜನಾದ ಸೂರ‌್ಯದೇವನು ನನ್ನನ್ನು ನಿನ್ನನ್ನು ಸಹ ಕರೆಯುವುದಕ್ಕೆ ಕಳಿಸಿರುವನು ಹೋಗೋಣ ನಡಿ.

ಭಾಮಿನಿ

ಇತ್ತಲಾ ಕಶ್ಯಪ ಮುನಿಗಳು  ಕಂದನಾದ
ದೇವೇಂದ್ರನೊಡನೆ ಸಂಭ್ರಮದಿ  ಬರುತಿರಲಾಗಲಾಕ್ಷಣ ಇತ್ತ
ಸೂರ‌್ಯದೇವನು  ಸಂಭ್ರಮದಿ  ಇರುತಿರಲಾಗಲಾಕ್ಷಣ ॥

ಸೂರ್ಯದೇವ: ತಂದೆಯವರ ಪಾದಕ್ಕೆ ನಮಸ್ಕರಿಸುವೆನು,

ಕಶ್ಯಪ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ಕಂದ ಸೂರ‌್ಯದೇವಾ.

ಸೂರ್ಯದೇವ: ತಂದೆಯವರೆ ನಿಮ್ಮ ಆಶೀರ‌್ವಾದದಿಂದ ನಾನು ಧನ್ಯನಾದೆನು.

ಸೂರ್ಯದೇವ: ಅಗ್ರಜಾ ನಮಸ್ಕರಿಸುವೆನು. ನಾರದ ಮಹಾತ್ಮರಿಗೆ ನಮಸ್ಕರಿಸುವೆನು.

ನಾರದ: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ಸೂರ‌್ಯದೇವ.

ಕಶ್ಯಪ: ಕಂದ ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿದ ಕಾರಣವೇನು ಜಾಗ್ರತೆಯಾಗಿ ಹೇಳುವಂಥವನಾಗು.

ಸೂರ್ಯದೇವ: ತಂದೆಯವರೆ ನಾನು ಇದುವರೆವಿಗೂ ಬ್ರಹ್ಮಚಾರಿಯಾಗಿದ್ದೆನು. ಈವಾಗ ನನಗೆ ಲಗ್ನ ಮಾಡಬೇಕೆಂದು ಬೇಡಿಕೊಳ್ಳುತ್ತೇನೈ ತಂದೆಯವರೆ.

ನಾರದ: ಸೂರ‌್ಯದೇವ ಕನ್ನೆಯು ಎಲ್ಲಿರುವಳು.

ಸೂರ್ಯದೇವ: ನಾರದ ಮಹಾತ್ಮರೆ, ಆ ಕನ್ನೆ ಯಾರೆಂದರೆ ಪೆಂದೋಟಪುರದ ಅರಸನಾದ ಮಯಬ್ರಹ್ಮನ ಕುಮಾರಿಯಾದ ಸಂಜ್ಞಾದೇವಿಯನ್ನು ತಂದು ಲಗ್ನ ಮಾಡಬೇಕೆಂದು ಬೇಡಿಕೊಳ್ಳುತ್ತೇನೆ.

ಕಶ್ಯಪ: ನಾರದ, ನನ್ನ ಕಂದನಾದ ಸೂರ‌್ಯನಿಗೆ ಯೌವ್ವನ ಕಾಲವು ಬಂದಿರುವುದು. ಆದಕಾರಣ ಪೆಂದೋಟಪುರದ ಮಯಬ್ರಹ್ಮನ ಮಗಳನ್ನು ಬಯಸಿರುವನು. ಇದಕ್ಕೆ ಹೇಗೆ ಮಾಡುವುದು.

ಪದ

ತಂದೆ  ಲಾಲಿಸಿ  ಕೇಳು  ಕನ್ನೆಯು  ಇರುವಂಥ
ಪರಿಯನ್ನು  ಪೇಳುವೆ  ಕೇಳೈ  ಜನಕ ॥

ದೇವೇಂದ್ರ: ತಂದೆಯವರೆ ಹೆಣ್ಣು ಇರುವ ಮನೆಗಳಿಗೆ ಅನೇಕ ಮಂದಿ ಬರುವರು. ಆದರೆ ಆ ಬ್ರಹ್ಮನು ಬರೆದ ಲಿಖಿತವನ್ನು ಮೀರಿ ನಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲವೈ ತಂದೆಯವರೇ.

ಕಶ್ಯಪ: ನಾರದ ನೀನು ಆ ಮಯಬ್ರಹ್ಮನ ಪಟ್ಟಣಕ್ಕೆ ಹೋಗಿ ಸೂಕ್ಷ್ಮವಾಗಿ ಕನ್ಯೆ ವಿಚಾರವನ್ನು ತಿಳಿದುಕೊಂಡು ಬರುವರಾಗಿರಿ.

ನಾರದ: ಸ್ವಾಮಿ ಕಶ್ಯಪರೆ, ಕನ್ನೆಯನ್ನು ಕೇಳಬೇಕಾದರೆ ದಿನ ವಾರ ನಕ್ಷತ್ರ ಇವುಗಳನ್ನು ಕೇಳಿ ಅವು ಪರಿಶುದ್ಧವಾದರೆ ಕನ್ಯೆಯನ್ನು ಕೊಡುವುದಿಲ್ಲವೆಂದು ಹೇಳುವುದಕ್ಕೆ ಕಾರಣವೇ ಇಲ್ಲಾ ಆವಾಗ ನಾನು ತಿಳಿದುಕೊಂಡು ಬರುತ್ತೇನೆ.

ದೇವೇಂದ್ರ: ಸಾರಥಿ ಪುರೋಹಿತರನ್ನು ಬರಮಾಡು.

ಪದ

ರಾಜರ ಮನೆಯೊಳು  ಭೋಜನವೆಂದರೆ
ಯೋಜನವಾದರು ಹೋಗುವೆವು ತುಪ್ಪದಿ ಕರಿದಿಹ
ಹಪ್ಪಳ  ಸಂಡಿಗೆ ಎಪ್ಪತ್ತಾದರು  ತಿನ್ನುವೆವು
ಲಾಡುಗಳಾ  ಪೇಣಿಗಳಾ  ಎಪ್ಪತ್ತಾದರು ತಿನ್ನುವೆವು ॥

ಪುರೋಹಿತರು: ಏನು ಬೇಳೆಹುಳಿ ರಾಮಶಾಸ್ತ್ರಿಗಳೆ ನೀವು ಎಲ್ಲಿಂದ ಬರೋಣವಾಯ್ತು ಏನು ಶಾಮಶಾಸ್ತ್ರಿಗಳೆ ನೀವು ಎಲ್ಲಿಂದ ಬರೋಣವಾಯ್ತು. ನಾವು ಮೊನ್ನೆ ಜಾವಗಲ್ಲಿಗೆ ಹೋಗಿದ್ದೆ ಸಮಾಚಾರವೇನು ಶಾನುಭೋಗರ ಮನೆಯಲ್ಲಿ ರುಕ್ಕು ಇದ್ದಾಳಲ್ಲಾ ಅವಳಿಗೆ ಗಂಡುಮಗು ಜನನವಾಗಿತ್ತು. ನಾಮಕರಣಕ್ಕೆ ಬರಬೇಕಂತ ಟಪಾಲ್ ಹಾಕಿದ್ರು ಅದಕೋಸ್ಕರ ಹೋಗಿದ್ದೆ. ನೀವು ಎಲ್ಲಿಂದ ಬರೋಣವಾಯಿತು. ನಾವು ಬೇಲೂರಿಗೆ ಹೋಗಿದ್ದೆವು. ಯೇನು ಸಮಾಚಾರ. ಅಲ್ಲಿ ಎಂಕಂಭಟ್ರು ಮನೆ ವುಪಾಕರ್ಮ ಮಾಡಿದ್ರು. ನನಗೆ ಟಪಾಲ್ ಹಾಕಿದ್ರು. ಅದಕ್ಕೋಸ್ಕರ ಹೋಗಿದ್ದೆ ಸ್ವಾಮಿ. ಆದ್ದರಿಂದಲೆ ಗಂಟು ದಪ್ಪಾಗಿ ಕಾಣುತ್ತೆ ಇಲ್ಲಾಂದ್ರೆ ಬಡಬ್ರಾಹ್ಮಣರು ಏನು ಸ್ವಲ್ಪ ಕೊಟ್ಟಿದ್ದಾರೆ ನಿಮ್ಮ ಗಂಟು ದೊಡ್ಡದಾಗಿ ಕಾಣುತ್ತಲ್ಲಾ. ಇಲ್ಲಾ ಸ್ವಾಮಿ ನನಗೂ ನಿಮ್ಮಂತಲೆ ಕೊಟ್ಟಿದ್ದಾರೆ ಸರಿ ಸ್ವಾಮಿ ಈ ಮಾರ್ಗ ಬಂದುಬಿಟ್ರಲ್ಲಾ ವಿಚಾರವೇನು. ನೋಡಿ ದೇವೇಂದ್ರ ಮಹಾರಾಜರು ಪಂಚಾಂಗಶ್ರವಣ ಮಾಡಬೇಕಂಥ ಕರೆ ಕಳಿಸಿದ್ರು ಆದ್ದರಿಂದ ಈ ಮಾರ್ಗವಾಗಿ ಬರ್ತಾ ಇದ್ದೇನೆ. ನೀವು ಬಂದಿದ್ದು ಸಮಾ. ನಮಗು ಟಪಾಲ್ ಕಳಿಸಿದ್ರು ನಾನು ಅದಕ್ಕೋಸ್ಕರ ಬರ್ತಾ ಇದ್ದೇನೆ ಓಹೋ ವಳ್ಳೇದು ನಡೀರಿ ವಬ್ಬರಿಗಿಂತ ಇಬ್ಬರು ಲೇಸು. ಪಂಚಾಂಗ ತಂದಿದ್ದೀರ ಪಂಚಾಂಗ ಹೋದ್ರೆ ನಕ್ಷತ್ರ ಹೋಗುತ್ತೆ ನಡೀರಿ ಹೋಗೋಣ.

ದೇವೇಂದ್ರ: ಪುರೋಹಿತರಿಗೆ ನಮಸ್ಕರಿಸುವೆನು.

ಪುರೋಹಿತರು: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ದೇವೇಂದ್ರ ಭೂಪಾಲ ಅಯ್ಯ ದೇವೇಂದ್ರ ಭೂಪಾಲ ನಮ್ಮನ್ನು ಇಷ್ಟು ಜಾಗ್ರತೆಯಿಂದ  ಕರೆಸಿಕೊಂಡ ಕಾರಣವೇನು.

ದೇವೇಂದ್ರ: ಸ್ವಾಮಿ ಪುರೋಹಿತರೆ ನಿಮ್ಮನ್ನು ಕರೆಸಿಕೊಂಡ ಕಾರಣವೇನೆಂದರೆ ನನ್ನ ಅನುಜನಾದ ಸೂರ‌್ಯದೇವನಿಗೆ ಕನ್ಯಾರ್ಥಿಯಾಗಿ ಹೋಗಬೇಕಾಗಿದೆ ಪಂಚಾಂಗವನ್ನು ನೋಡಿ ಹೇಳುವಂಥವರಾಗಿರಿ.

ಪುರೋಹಿತರು: ದೇವೇಂದ್ರ ಭೂಪಾಲ ನಿನ್ನ ಇಷ್ಟದಂತೆ ಆಗಲಿ. ಈವಾಗ ಇರೋದು ಪಂಚಾಂಗ ವೃಷಭ ಮಿಥುನ ಕನ್ಯಾ ತುಲಾ ವೃಶ್ಚಿಕ ಏನು ಸ್ವಾಮಿ ಈವಾಗ ಮೀನ ಚೈತ್ರ ಮಕರ ಸಂಕ್ರಮಣ ಈ ತಿಂಗಳು ದಿವಸ ಚೆನ್ನಾಗಿಲ್ಲಾ. ಮುಂದೆ ವೈಶಾಖ ಶುದ್ಧ ಪಂಚಮಿ ಲಗ್ನ ಚೆನ್ನಾಗಿದೆ. ಆವಾಗ ಮಾಡಬಹುದು ಪ್ರಶಸ್ತವಾಗಿದೆ.

ದೇವೇಂದ್ರ: ಪುರೋಹಿತರೆ ನಿಮ್ಮ ಇಷ್ಟದಂತೆ ಆಗಲಿದ. ಅಯ್ಯ ಮಂತ್ರಿ ಇವರಿಗೆ ಬೇಕಾದ ವುಡುಗೊರೆ ಬಹುಮಾನಗಳನ್ನು ಕೊಟ್ಟು ಕಳಿಸುವಂಥವನಾಗು.

ಮಂತ್ರಿ: ರಾಜೇಂದ್ರ ನಿಮ್ಮ ಇಷ್ಟದಂತೆ  ಕೊಡುತ್ತೇನೆ. ಪುರೋಹಿತರೆ ನಾನು ಕೊಡುವ ವುಡುಗೊರೆ ಬಹುಮಾನಗಳನ್ನು ತೆಗೆದುಕೊಳ್ಳುವಂಥವರಾಗಿರಿ.

ಕಶ್ಯಪ: ಮಗು ದೇವೇಂದ್ರ ಪುರೋಹಿತರು ಹೇಳಿದಂತೆ ಮೀನ ಚೈತ್ರ ತಿಂಗಳು ಕಳೆದ ಮೇಲೆ ಮುಂದಿನ ತಿಂಗಳಿಗೆ ಪ್ರಯಾಣ ಮಾಡೋಣ ಸುಮ್ಮನಿರಪ್ಪ ಕಂದಾ.

ದೇವೇಂದ್ರ: ತಂದೆಯವರೆ ನಿಮ್ಮ ವಚನವನ್ನು ಮೀರಿದವರಿಗೆ ಘೋರವಾದ ಕಷ್ಟಗಳು  ವುಂಟಾಗುವುದೆಂದು ಹೇಳುವರು. ಆದ್ದರಿಂದ ನಿಮ್ಮ ವಚನವನ್ನು ಮೀರಿ ನಡೆಯುವುದಿಲ್ಲವೈ ತಂದೆಯವರೆ.

ಕಶ್ಯಪ: ಮಗು ದೇವೇಂದ್ರ ಹಾಗಾದರೆ ಹೋಗೋಣ ನಡೆ.

ನಾರದ: ನಾರಾಯಣ ನಾರಾಯಣ ಇಲ್ಲಿನವರೆವಿಗು ನಡೆದ ವಿಚಾರವೆಲ್ಲಾ ಗೊತ್ತಾಯಿತು ಈಗಲೇ ವೈಕುಂಠಕ್ಕೆ ಹೋಗಿ ಆ ವಿಷ್ಣುವಿಗೆ ಒಂದು ವಿಚಾರವನ್ನು ಹೇಳಿ ಕಾಣದವನಂತೆ ಸುಮ್ಮನೆ ಇರುತ್ತೇನೆ ನಾರಾಯಣ ನಾನು ಈಗಲೇ ಹೋಗುವೆನು.

ಪದ

ದೇವಳಿಗೀತ  ಲಕ್ಷ್ಮೀ ಸಮೇತ  ಲೀಲಾ ಮಾನಸರೂಪ
ದೇವಾ ದೇವಾ  ನಾರಾಯಣ ॥

ಸ್ತೋತ್ರ:
ವುಡುಪಿ ಕೃಷ್ಣ, ಪೊಡವಿಗೊಡೆಯ  ಬಿಡದೆ ನಾಂ ನಿನ್ನ  ಅಡಿಗೆರಗುವೆ ॥
ಕಡಲಶಯನಾ ಬಡವರನ್ನು  ಬಿಡದೆ  ಸಲಹೋ
ಮೃಡನ  ಸಖನೆ  ನಾರೀಜನರ  ಸೀರೆ ಸೆಳೆದು  ಚೋರತನದಿ
ಮರವನೇರಿ  ಕ್ಷೀರವನ್ನೆ  ಸೂರೆಗೊಳ್ವ  ಮಾರಜನಕಾ
ಮೋಹನಾಂಗಾ  ಕೃಷ್ಣಾ  ಕೃಷ್ಣಾ  ದೇವಾ॥ಶ್ರೇಷ್ಟ ಸತಿಯ
ರೊಲಿಸಿಕೊಂಡು ಅಷ್ಟ ಭಾಗ್ಯವ  ನೀಗಿದೆ  ಕಿೃಷ್ಣಾ  ಕಿೃಷ್ಣಾ  ದೇವಾ ॥

ಭಾಮಿನಿ

ಇತ್ತಲಾ ಶ್ರೀಕೃಷ್ಣ ಪರಮಾತ್ಮನು  ಸಂತೋಷದಿಂದ
ಕುಳಿತಿರುವ  ಸಮಯದೊಳಾಕ್ಷಣ  ತ್ರಿಲೋಕ
ಸಂಚಾರಿಗಳಾದ ನಾರದ ಮುನಿಗಳು  ಬರುತಿರಲಾಗ ॥

ನಾರದ: ನಾರಾಯಣ ನಾರಾಯಣ ಇಲ್ಲಿ ವುಭಯತ್ರರು ಕುಳಿತಿರುವರು. ಈವಾಗ ವಳ್ಳೆಯ ಸಮಯ. ಇಲ್ಲಿ ಸ್ವಲ್ಪ ಚಾಡಿಬೀಜವನ್ನು ಬಿತ್ತುತ್ತೇನೆ. ಏನಾಗುವುದೋ ನೋಡುತ್ತಾ ಯಿರಿ. ಶ್ರೀಕೃಷ್ಣ ಪರಮಾತ್ಮ ನಮಸ್ಕರಿಸುವೆನು.

ಕೃಷ್ಣ: ನಾರದ ನಿನಗೆ ಮಂಗಳವಾಗಲಿ ಮೇಲಕ್ಕೆಳು.

ನಾರದ: ಕೃಷ್ಣ ಪರಮಾತ್ಮಾ ನಿಮ್ಮ ಆಶೀರ‌್ವಾದದಿಂದ ಧನ್ಯನಾದೆನು.

ಶ್ರೀಕೃಷ್ಣ: ನಾರದ ಹೇಳುತ್ತೇನೆ ಕೇಳು.

ಪದ

ಕೇಳೈ  ನಾರದ  ಮುನಿಪ  ಹದಿನಾಲ್ಕು ಲೋಕವ
ತಿರುಗಿ ಬಂದಿರುವೆ  ಪೇಳು ನಾರದ ನೀನು ॥

ಕೃಷ್ಣ: ನಾರದ ಯಾವ ಯಾವ ಲೋಕದಲ್ಲಿ ಏನೇನು ಸಮಾಚಾರಗಳು ನಡೆದಿರುವುವು ತಿಳಿಸುವಂಥವನಾಗು.

ನಾರದ: ಕೃಷ್ಣ ಪರಮಾತ್ಮ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಕೇಳೈ  ವೈಕುಂಠನಾಥ  ಪೇಳುವೆ ನಾ ನಿನಗೆ
ಆಶ್ಚರ‌್ಯವಾಗಿದೆ  ಕೇಳೈಯ್ಯ  ನೀನು  ಪೆಂದೋಟಪುರದರಸ
ಮಯಬ್ರಹ್ಮನ ಕುವರಿ ಲಕ್ಷ್ಮಿಗುನ್ನತವಾಗಿ
ಇರುವಳು ದೇವಾ  ರೂಪಿನೊಳು  ಅತಿಚೆಲ್ವೆ
ಆಲಸ್ಯ  ಮಾಡಬೇಡಿ  ತರಬೇಕು
ದೇವಾ  ತರಬೇಕು ನೀವು  ನಾರಯಣಾ ॥

ನಾರದ: ಕೃಷ್ಣ ಪರಮಾತ್ಮ ನಾನು ಸಮಸ್ತ ಲೋಕವನ್ನು ತಿರುಗಿಕೊಂಡು ಬಂದೆನು. ಆ ಪೆಂದೋಟಪುರದಮಯಬ್ರಹ್ಮನ ಕುಮಾರಿ ಇದ್ದಾಳಲ್ಲಾ ನಿನ್ನ ಸತಿಯಾದ ಲಕ್ಷ್ಮಿದೇವಿ ಇಲ್ಲಾ ಸತ್ಯಭಾಮೆಯು ಇಲ್ಲಾ, ಆಹಾ ಅವಳ ರೂಪು ಅವಳ ಸೌಂದರ‌್ಯ ಅವಳ ನಡು ಅವಳ ಕಣ್ಣು ಹುಬ್ಬುಗಳು, ಆಹಾ ಎಷ್ಟೆಂದು ಹೇಳಲಿ ಪರಮಾತ್ಮ. ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ದಶಾವತಾರವ  ಎತ್ತಿದರು  ನಿಮಗೆ  ಅಂತಾ ಕಾಮಿ
ಯು  ದೊರೆಯುವುದಿಲ್ಲಾ ನಾರಾಯಣಾ ॥

ನಾರದ: ಪರಮಾತ್ಮ ಆ ಕನ್ಯೆಯನ್ನು ತಂದು ಲಗ್ನವಾದರೆ ನಿಮ್ಮ ವೈಕುಂಠಕ್ಕೆ ಆದಿಲಕ್ಷ್ಮಿಯಂತೆ ತೋರುವಳು. ತಿಳಿದ ಸಮಾಚಾರವನ್ನು ವಂಚಿಸಬಾರದೆಂದು ಹೇಳಿರುತ್ತೇನೆ ಇದರ ಮೇಲೆ ತಮ್ಮ ಇಷ್ಟ.

ಕೃಷ್ಣ: ನಾರದ ಹೇಳುತ್ತೇನೆ ಕೇಳು.

ಪದ
ಅಂಥವಳಾದ ಮೇಲೆ  ಕನ್ನೆಯ  ತರುವೆನು ॥

ಕೃಷ್ಣ: ನಾರದ ಹಾಗಾದರೆ ಆ ಕನ್ಯೆಯನ್ನು ತರುತ್ತೇನೆ. ನೀನು ತ್ರಿಲೋಕ ಸಂಚಾರಿಯಾಗಿ ತೆರಳುವನಾಗು.

ನಾರದ: ನಾರಾಯಣ ನಾರಾಯಣ ಇಲ್ಲಿ ಸ್ವಲ್ಪ ಚಾಡಿ ಬೀಜವನ್ನು ತಳಿದಿದ್ದಾಯಿತು. ಈಗಲೆ ಆ ಮಯಬ್ರಹ್ಮನ ಪಟ್ಟಣಕ್ಕೆ ಹೋಗಿ ಕೃಷ್ಣನ ವಿಚಾರವನ್ನು ಹೇಳಿ ಈರ‌್ವರು ಜಗಳವಾಡುವಂತೆ ಮಾಡಿ ಕಂಡು ಕಾಣದವನಂತೆ ಸುಮ್ಮನೆ ಇರುವೆನು ನಾನು ತೆರಳುತ್ತೇನೆ.

ಭಾಮಿನಿ

ಇತ್ತಲಾ ನಾರದರು ಶ್ರೀಕೃಷ್ಣ ಪರಮಾತ್ಮನಿಗೆ
ಬೋಧನೆಯ ಹೇಳಿ ಮಯಬ್ರಹ್ಮನ ಪಟ್ಟಣಕೆ ಬರುತಿರಲಾಗಾ ॥

ನಾರದ: ಗೋವಿಂದ ಮಾಧವ ಗೋಪಾಲ ಕೇಶವಾ
ನರಸಿಂಹನಾರಾಯಣಾ ರಾಮ ರಾಘವ
ರಾಜೀವಲೋಚನ ಕಾಮಿತಫಲದ ಕರಿವರದಾ ನಾರಾಯಣಾ
ದೇವಾ ॥ನಾರಾಯಣ ನಾರಾಯಣ॥

ಮಯಬ್ರಹ್ಮನ ಸಭೆ

ಮಯಬ್ರಹ್ಮ: ನಾರದ ಮಹಾತ್ಮರಿಗೆ ನಮಸ್ಕರಿಸುವೆನು.

ನಾರದ: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ಮಯಬ್ರಹ್ಮದೇವ.

ಪದ

ಮೂರು ಲೋಕವನ್ನು  ಚರಿಪ  ನಾರದ  ಋಷಿಯೆ
ಯಾವ ಯಾವ  ದೇಶದಲ್ಲಿ  ಏನು  ವಾರ್ತೆಯೂ ॥

ಮಯಬ್ರಹ್ಮ: ನಾರದ ಮಹಾತ್ಮರೆ, ತಾವು ತ್ರಿಲೋಕ ಸಂಚಾರಿಗಳು ಯಾವ ಯಾವ ದೇಶದಲ್ಲಿ ಏನೇನು ಸಮಾಚಾರಗಳು ನಡೆದಿರುವುವು. ಮರೆಮಾಜದೆ ಹೇಳುವಂಥವರಾಗಿರಿ.

ನಾರದ: ನಾರಾಯಣ ನಾರಾಯಣ ರಾಜೇಂದ್ರ ಸಕಲ ಲೋಕದಲ್ಲಿ ತಮ್ಮ ಹೆಸರೇಳಿದ ಮಾತ್ರಕ್ಕೆ ಭಯದಲ್ಲಿ ಇರುವರಲ್ಲದೆ ಮತ್ತೆ ಬೇರೆ ಇಲ್ಲವೈಯ್ಯ ರಾಜೇಂದ್ರ.

ಪದ

ಕೇಳೈ  ನಾರದ  ಮುನಿಪ  ಧರೆಯೊಳಗೆನ್ನನು  ಭಜಿಸು
ವರೋ  ಇಲ್ಲವೋ  ಹೇಳೈ ನಾರದ ನೀನು ॥

ಮಯಬ್ರಹ್ಮ: ನಾರದ ಮಹಾತ್ಮರೇ, ಈ ಧಾರುಣಿಯ ಮೇಲಿರುವ ರಾಜಾಧಿರಾಜರಿಗೆಲ್ಲಾ  ವೀರಾಧಿವೀರ ಮಯಬ್ರಹ್ಮ ಭೂಪಾಲನ ಭಯ ಇರುವುದೋ ಇಲ್ಲವೋ ಇದೂ ಅಲ್ಲದೆ ಅವರ ಕರ್ಮವನ್ನು ಕಡೆಮಾಡಿ ಧರ್ಮವನ್ನು ಆಚರಿಸುವರೋ ಇಲ್ಲವೋ ಜಾಗ್ರತೆಯಾಗಿ ಹೇಳುವಂಥವರಾಗಿರಿ.

ನಾರದ: ಅಯ್ಯ ಮಯಬ್ರಹ್ಮದೇವ ಈ ಧಾರುಣಿಯ ಜನರು ನಿನ್ನನ್ನು ನೋಡಿ ಅಪಹಾಸ್ಯ ಮಾಡುವರು ಅದನ್ನು ಕಂಡು ನಿನಗೆ ತಿಳಿಸೋಣವೆಂದು ಬಂದೆನು ನಾರಾಯಣ.

ಮಯಬ್ರಹ್ಮ: ನಾರದ ಮಹಾತ್ಮರೆ ನನ್ನನ್ನು ಕಂಡು ಅಪಹಾಸ್ಯ ಮಾಡಲು ಕಾರಣವೇನು ಅಂಥ ವೀರಾಧಿವೀರರು ಯಾರಿರುವರು.

ನಾರದ: ಅಯ್ಯ ಮಯಬ್ರಹ್ಮದೇವ ತಿಳಿದ ಸಮಾಚಾರವನ್ನು ಹೇಳೋಣವೆಂದರೆ ನನ್ನನ್ನು ಚಾಡಿಕೋರ ನಾರದ ಎಂದು ಅಪಹಾಸ್ಯ ಮಾಡುವರು ಹೇಳಿದರು ಕಷ್ಟ ಹೇಳದೆ ಇದ್ದರು ಕಷ್ಟ ತಿಳಿದ ಸಮಾಚಾರವನ್ನು ವಂಚಿಸಬಾರದು ಹೇಳುತ್ತೇನೆ ಕೇಳು.

ಪದ

ಇದಕೆ ಯೋಚನೆ ಯಾಕೆ ನಾರದ ಮುನಿವರ
ಹರುಷದಿಂದಲಿ  ನನಗೆ  ಪೇಳಿರಿ ನೀವು ॥

ಮಯಬ್ರಹ್ಮ: ಸ್ವಾಮಿ ನಾರದ ಮಹಾತ್ಮರೆ ನಿಮಗೆ ಯಾವ ತೊಂದರೆಯು ಬರದಂತೆ ಮಾಡುತ್ತೇನೆ ಇದೂ ಅಲ್ಲದೆ ಯಾವ ದ್ರೋಹಿಯ ಏನು ಯೋಚನೆ ಮಾಡಿರುವನು ಮರೆ ಮಾಜದೆ ಹೇಳುವಂಥವರಾಗಿರಿ.

ನಾರದ: ಅಯ್ಯ ಪರಮಾತ್ಮನು ನಿನ್ನ ಪಟ್ಟಣಕ್ಕೆ ಬರಬೇಕೆಂದು ಹೊರಟಿರುವರು.

ಮಯಬ್ರಹ್ಮ: ನಾರದರೆ ಪರಮಾತ್ಮನು ನನ್ನ ಮಂದಿರಕ್ಕೆ ಬರುವರೆ ಬಹಳ ಸಂತೋಷ. ಅಯ್ಯ ಮಂತ್ರಿ ನಮ್ಮ ಪಟ್ಟಣಕ್ಕೆ ಪರಮಾತ್ಮನು ಬರುವರಂತೆ. ನೀನು ನಮ್ಮ ಪಟ್ಟಣವನ್ನು ಶ್ರುಂಗಾರ ಮಾಡಿಸಿ ಕೇರಿಕೇರಿಗಳಲ್ಲಿ ಮುತ್ತಿನ ತೋರಣಗಳನ್ನು ಕಟ್ಟಿಸಿ ನಾರಾಯಣನು ಬರುವುದನ್ನೆ ಯದುರು ನೋಡೋಣ.

ನಾರದ: ಪರಮಾತ್ಮನು ನಿನ್ನ ಪಟ್ಟಣಕ್ಕೆ ಬಂದು ನಿನ್ನೊಡನೆ ಖಾಡಾಖಾಡಾ ಯುದ್ಧವನ್ನು ಮಾಡಿ  ನಿನ್ನ ಮಗಳಾದ ಸಂಜ್ಞಾದೇವಿಯನ್ನು ಕದ್ದುಕೊಂಡು ಹೋಗಿ ಲಗ್ನವಾಗುವೆನೆಂದು ಹೊರಟಿರುವರು. ನೀನು ಮಾತ್ರ ಆತನೊಡನೆ ವಿಶ್ವಾಸ ಮಾಡಬೇಡ ಎಚ್ಚರಿಕೆ.

ಮಯಬ್ರಹ್ಮ: ನಾರದ ಮಹಾತ್ಮರೆ, ಸುಳ್ಳು ಮಾತು ಹೇಳಬೇಡಿ. ಆ ನಾರಾಯಣನು ನನ್ನ ಮೇಲೆ ಯುದ್ಧಕ್ಕೆ ಬಂದು ನನ್ನನ್ನು ಜೈಸುವುದುಂಟೆ ಯಾವುದನ್ನು ಮರಮಾಜದೆ ಹೇಳುವಂಥವರಾಗಿರಿ.

ನಾರದ: ಅಯ್ಯ ಮಯಬ್ರಹ್ಮದೇವ  ನಾನು ಸುಳ್ಳು ಮಾತು ಹೇಳುವುದಿಲ್ಲಾ. ನೀನು ಆತನೊಂದಿಗೆ ವಿಶ್ವಾಸ ಮಾಡಬೇಡ. ನಾನು ಗಮನ ಮಾಡುತ್ತೇನೆ ನಾರಾಯಣ.

ಮಯಬ್ರಹ್ಮ: ಅಯ್ಯ ಮಂತ್ರಿ, ನಾರದ ಮಹಾತ್ಮರು ಹೇಳಿದ ವಿಚಾರವನ್ನು ಕೇಳಿದೆಯಾ. ಆ ನಾರಾಯಣ ನನ್ನ ಮೇಲೆ ಯುದ್ಧಕ್ಕೆ ಬರುವನಂತೆ ಜಾಗ್ರತೆಯಾಗಿ ನಮ್ಮ ಸೇನಾ ಸಮೂಹವನ್ನು ಸಿದ್ಧಪಡಿಸುವಂಥವನಾಗು.

ಮಂತ್ರಿ: ರಾಜೇಂದ್ರ ನಿಮ್ಮ ಅಪ್ಪಣೆಯಂತೆ ಆಗಲಿ.

ನಾರದ: ನಾರಾಯಣ ನಾರಾಯಣ ಈವಾಗ ಈ ಮಯಬ್ರಹ್ಮನಿಗೆ ಸ್ವಲ್ಪ ಚಾಡಿ ಬೀಜವನ್ನು ಬಿತ್ತಿದ್ದಾಯಿತು. ಹ್ಯಾಗೆ ಉರಿಯುವುದೋ ನೋಡುತ್ತಾ ಯಿರಿ. ನಾನು ಈಗಲೇ ಗಮನ ಮಾಡುತ್ತೇನೆ.

ಕೃಷ್ಣ: ಭಲೈ ಸಾರಥಿ ಆ ಮಯಬ್ರಹ್ಮನಲ್ಲಿಗೆ ಹೋಗಿ ವೈಕುಂಠವಾಸನಾದ ನಾರಾಯಣ ದೇವರು ನಿನ್ನ ಮೇಲೆ ಯುದ್ಧಕ್ಕೆ ಬರುವರೆಂದು ತಿಳಿಸು. ಒಳ್ಳೆ ಮಾತಿನಿಂದ ಅವನ ಕುಮಾರಿಯನ್ನು ಕೊಡುತ್ತಾನೊ ಅಥವಾ ವೈರದಿಂದ ಯುದ್ಧ ಮಾಡುವನೋ ಯಾವುದನ್ನು ಜಾಗ್ರತೆಯಾಗಿ ತಿಳಿದುಕೊಂಡು ಬರುವನಾಗು.

ಚಾರಕ: ಮಹಾಸ್ವಾಮಿ ಈಗಲೇ ಹೋಗಿ ತಿಳಿದುಕೊಂಡು ಬರುತ್ತೇನೆ.

ಭಾಮಿನಿ

ಇತ್ತಲಾ  ಓರ್ವ ಚಾರಕನು  ನಾರಾಯಣನ ವಿಷಯವಂ
ಸಂಗ್ರಹಿಸಿ  ಮಯಬ್ರಹ್ಮನ ಪಟ್ಟಣಕ್ಕೆ ಬರುತ್ತಿರಲಾಗ ಲಾಕ್ಷಣ
ಇತ್ತಲಾ  ಮಯಬ್ರಹ್ಮದೇವರು  ಸಂಭ್ರಮದಿ  ಕುಳಿತಿರಲಾಗಾ ॥

ಚಾರಕ: ಮಯಬ್ರಹ್ಮ ದೇವರಿಗೆ ಜಯವಾಗಲಿ. ಸ್ವಾಮಿ ಮಯಬ್ರಹ್ಮದೇವರೆ ವೈಕುಂಠ ವಾಸನಾದ ಪರಮಾತ್ಮನು ನಿಮ್ಮ ಪಟ್ಟಣಕ್ಕೆ ಬರುತ್ತಾರಂತೆ. ಒಳ್ಳೆ ಮಾತಿನಿಂದ ನಿಮ್ಮ ಮಗಳಾದ ಸಂಜ್ಞಾದೇವಿಯನ್ನು ಅವರಿಗೆ ಕೊಟ್ಟು ಲಗ್ನ ಮಾಡಿದರೆ ಸರಿಯಂತೆ. ಇಲ್ಲವಾದರೆ ನಿಮ್ಮ ಮೇಲೆ ಖಾಡಾ ಖಾಡಾ ಯುದ್ಧ ಮಾಡುತ್ತಾರಂತೆ.

ಭಾಮಿನಿ

ಚರ ನುಡಿಯ  ಕೇಳಿದಾಕ್ಷಣ  ಸಿಡಿಲು ಗರ್ಜನೆಯಂತೆ
ಗರ್ಜಿಸಿ  ತನ್ನ ಮಂತ್ರಿಯೊಡನೆ ಸೇನಾ
ಸಮೂಹವನ್ನು  ಸಿದ್ಧಪಡಿಸೆಂದು  ನುಡಿದನಾಗಾ ॥

ಮಯಬ್ರಹ್ಮ: ಅಯ್ಯ ಮಂತ್ರಿ ಸೇವಕನು ಆಡಿದ ಮಾತನ್ನು ಕೇಳಿದೆಯಾ ಆ ಶ್ರೀಕೃಷ್ಣನು ನನ್ನ ಮೇಲೆ ಯುದ್ಧಕ್ಕೆ ಬರುವನಂತೆ. ಜಾಗ್ರತೆಯಾಗಿ ಸೇನಾ ಸಮೂಹವನ್ನು ಸಿದ್ಧಪಡಿಸುವಂಥವನಾಗು.

ಮಂತ್ರಿ: ರಾಜೇಂದ್ರ ನಿಂಮ್ಮ ಅಪ್ಪಣೆಯಂತೆ ಸೇನಾ ಸಮೂಹವನ್ನು ಸಿದ್ಧಪಡಿಸುತ್ತೇನೆ.

ಚಾರಕ: ಮಯ ಬ್ರಹ್ಮದೇವರಿಗೆ ಜಯವಾಗಲಿ.

ಮಯಬ್ರಹ್ಮ: ಚಾರನೆ ವರ್ತಮಾನವೇನು.

ಚಾರಕ: ಸ್ವಾಮಿ ಮಯಬ್ರಹ್ಮ ದೇವರೆ ಶ್ರೀಕೃಷ್ಣದೇವರು ನಿಮ್ಮ ದ್ವಾರ ಬಾಗಿಲಲ್ಲಿ ನಿಂತಿರುತ್ತಾರೆ.

ಮಯಬ್ರಹ್ಮ: ಅಯ್ಯ ಮಂತ್ರಿ ಶ್ರೀಕ್ರಿಷ್ಣನು ಯುದ್ಧಕ್ಕೆ ಬಂದಿರುವನಂತೆ ನೀನು ಅವನೊಡನೆ ರಣಾಗ್ರವನ್ನು ಮಾಡಿ ಜೈಸುವಂಥವನಾಗು.

ಮಂತ್ರಿ: ರಾಜೇಂದ್ರ ನಿಮ್ಮ ಅಪ್ಪಣೆಯಂತೆ ನಾನು ಯುದ್ಧವನ್ನು ಮಾಡಿ ಜೈಸುತ್ತೇನೆ,

ಮಂತ್ರಿ: ಯಲವೋ ಕೃಷ್ಣ ಹೇಳುತ್ತೇನೆ ಕೇಳು. ನೀನು ಇಲ್ಲಿಗೆ ಬರಲು ಕಾರಣವೇನು ಜಾಗ್ರತೆಯಾಗಿ ಪೇಳಬೇಕೈ ಕಳ್ಳ ಕ್ರಿಷ್ಣ.

ಪದ

ದುರುಳ  ಮಂತ್ರಿಯೆ ಕೇಳು  ದುರುಳತನವು
ನಿನಗೆ  ತರವಲ್ಲ  ಕೇಳ್ ನೀನು ॥

ಕೃಷ್ಣ: ಯಲವೋ ನೀಚ ಮಂತ್ರಿ. ವಳ್ಳೆಯಮಾತಿನಿಂದ ನಿಮ್ಮ ಅರಸನು ಅವನ ಕುಮಾರಿಯನ್ನು ನನಗೆ ಕೊಟ್ಟು ಲಗ್ನ ಮಾಡಿದರೆ ಸರಿ ಇಲ್ಲವಾದರೆ ನಿಮ್ಮನ್ನು ಸುಟ್ಟು ಸೂರೆ ಮಾಡುವೆನು.

asci* ��n-�\x�elibri;mso-ascii-theme-font: minor-latin;mso-hansi-font-family:Calibri;mso-hansi-theme-font:minor-latin’>ಘನಮಾರ್ಗವನ್ನು ಅನಾಯಾಸದಿಂದ ಸಂಚರಿಸುತ್ತ ಸಹಸ್ರ ಸಂಖ್ಯೆಯುಳ್ಳ ಕಮಲನಿಗೆ ಧಾರೆಂದು ತಿಳಿಯಬಲ್ಲೆ ಭಲೈ ಸಾರಥಿ ಇನ್ನೂ ಗೊತ್ತಾಗಲಿಲ್ಲವೆ ಮುನಿಮುಖ್ಯರೋಳ್ ಶ್ರೇಷ್ಟರೆಂದೆನಿಸಿರ್ಪ ಕಾಶ್ಯಪರ ಧರ್ಮಪತ್ನಿಯರಾದ ಅಧಿತಿ ದೇವಿಯ ಗರ್ಭಾಂಬುಧಿಯೊಳ್ ಪುಟ್ಟಿ ಸುಕುಮಾರನೆಂದೆನಿಸಿ ಸಪ್ತ ಅಶ್ವಂಗಳನ್ನು ಕಟ್ಟುವ ಭಾನುದೇವನೆಂದು ತಿಳಿಯುವಂಥವನಾಗೈ ಸಾರಥಿ ಸಂಧಾನಮತಿ.

 

ಭಲೈ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ಈ ವನಾಂತರವನ್ನು ಹೊಕ್ಕು ಪರಿಮಳ ವಾಸನೆಯುಳ್ಳ ಪುಷ್ಪಗಳನ್ನು ಕೊಯ್ದುಕೊಂಡು ಪೋಗಬೇಕೆಂದು ಬಂದಿರುತ್ತೇನೆ ಜಾಗ್ರತೆಯಾಗಿ ವುದ್ಯಾನವನದ ಬಾಗಿಲನ್ನು ತೆಗೆಯುವಂಥವನಾಗು ಆಹಾ ಈ ವನಾಂತರವನ್ನು ನೋಡಿದರೆ, ನನ್ನ ಮನಸ್ಸಿಗೆ ಬಹಳ ಆನಂದವಾಗುತ್ತಿರುವುದು.

ಆಹಾ ! ಇದೇನಾಶ್ಚರ‌್ಯ ಈ ವುದ್ಯಾನವನದ ಮಧ್ಯದಲ್ಲಿ ಓರ್ವ ಸ್ತ್ರೀಯಳು ಮಲಗಿರುವಳಲ್ಲಾ, ಈಕೆ ಯಾರಾಗಿರಬಹುದು, ವಿಚಾರಿಸಿ ನೋಡುವೆನು.

ಮಂತ್ರಿ: ಯಲವೋ ಕೃಷ್ಣ ಹಾಗಾದರೆ ಯುದ್ಧಕ್ಕೆ ಯದುರಾಗು.