ಪದ

ನಂದಿವಾಹನ ಕೇಳು  ನೀ ಬಂದ  ಪರಿಯೇನು
ಚಂದದಿಂದಲಿ  ನನಗೆ ಪೇಳೀಗ ಬೇಗಾ ॥

ಮಯಬ್ರಹ್ಮ: ಯಲವೋ ಪಾರ್ವತೀ ಪತಿಯಾದ ಶಂಕರನೆ ಕೇಳು ನೀನು ಬಂದ ವಿಚಾರವೇನು ಅಂದವಾಗಿ ಪೇಳಬೇಕೈ ಶಂಕರಾ.

ಪದ

ಕನ್ಯಾ  ಕೇಳಲು  ಬಂದೆ  ಕೊಡು ನಿನ್ನ  ಸುತೆಯ ॥

ಈಶ್ವರ: ಯಲವೋ ಮಯಬ್ರಹ್ಮನೆ ಕೇಳು ವಳ್ಳೆಯ ಮಾತಿನಿಂದ ನಿನ್ನ ಮಗಳನ್ನು ಕೊಟ್ಟರೆ ಸರಿ ಇಲ್ಲವಾದರೆ ನಿನ್ನನ್ನು ಸುಟ್ಟು ಸೂರೆ ಮಾಡುವೆನು.

ಮಯಬ್ರಹ್ಮ: ಯಲವೋ ಮಹೇಶ್ವರ ಹೇಳುತ್ತೇನೆ ಕೇಳು.

ಪದ

ಸುತೆಯಳ  ಬಯಸಿದೆ  ಹಿತದಿ  ಕೇಳೈಯ್ಯ ನೀನು
ಕೊಡುವದಿಲ್ಲವೋ ನಾನು  ಸುತೆಯಳ ನಿನಗೆ ॥

ಮಯಬ್ರಹ್ಮ: ಯಲೈ ಕೈಲಾಸ ವಾಸನಾದ ಶಂಕರನೆ ಕೇಳು. ನನ್ನ ಮಗಳಾದ ಸಂಜ್ಞಾದೇವಿಯನ್ನು ಬಯಸಿ ಬಂದಿರುವೆಯ. ನನ್ನ ಕುಮಾರಿಯನ್ನು ಕೊಡಬೇಕಾದರೆ ನನ್ನಲ್ಲಿ ರಣಾಗ್ರವನ್ನು ಮಾಡಿ ಜೈಸಿದರೆ ಕೊಡುತ್ತೇನೆ ಇಲ್ಲವಾದರೆ ಕೊಡುವುದಿಲ್ಲವೊ ಮಹೇಶ್ವರ.

ಈಶ್ವರ: ಯಲವೋ ಮಯಬ್ರಹ್ಮ ಹೇಳುತ್ತೇನೆ ಕೇಳು.

ಪದ

ಹೊಲಯನೆ  ಕೇಳೆಲೋ  ಅಧಮಾ  ಸುತೆಯ ಕೊಡುವೆ
ಎಂದು  ಹಿತದಿ ನಾಂ ಬಂದೆ  ಕೇಳೈಯ್ಯ ನೀನು ॥

ಈಶ್ವರ: ಯಲವೋ ಭ್ರಷ್ಟನಾದ ಮಯಬ್ರಹ್ಮನೆ ಕೇಳು. ನೀಚವೃತ್ತಿಯುಳ್ಳವನು ದೀರ್ಘ ಕೋಪವುಳ್ಳವನು ಈ ಜನರು ಕರ್ಮ ಚಂಡಾಲನೆನಿಸುವರು. ಎಲೋ ಚಂಡಾಲ ನಿನ್ನನ್ನು ಈ ರಣಭೂಮಿಗೆ ತುಳಿದು ಬಿಡುತ್ತೇನೆ ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗಲೋ ಭ್ರಷ್ಟಾ.

ಪದ

ಬೂದಿಬಡುಕನೆ ಕೇಳು  ಹೆಮ್ಮೆಯಿಂದಲಿ ನೀನು
ಉಬ್ಬಿ ಬಂದಿರುವೆಯಾ  ಕೇಳೆಲೋ ನೀನು ॥

ಮಯಬ್ರಹ್ಮ: ಯಲವೊ ಮಹೇಶ್ವರ ಮೃಗದೊಳಗೆಲ್ಲಾ ಗಾರ್ದಭನು ಚಂಡಾಲನೆನಿಸುವನು. ಪಕ್ಷಿಗಳೊಳಗೆಲ್ಲಾ ಕಾಗೆ ಚಂಡಾಲನೆನಿಸುವುದು. ಯತೀಶ್ವರರೊಳಗೆಲ್ಲಾ ನೀನು ಚಂಡಾಲನಾದ ಕಾರಣ ಬಾಯಿಗೆ ಬಂದಂತೆ ಬಗುಳಬೇಡ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗಲೋ ಅಧಮಾ.

ಪದ
ತೋರು  ತೋರೆಲೋ  ನಿನ್ನ ಶೌರ‌್ಯ  ವ ನೀಗಾ
ಸಮರದೊಳ್  ಅರಿಸುವೆ  ಹರಿಸುವೆ ನಾನು ॥

ಈಶ್ವರ: ಯಲವೋ ಅಧಮನಾದ ಮಯಬ್ರಹ್ಮನೆ ಕೇಳು. ನನ್ನ ಎದುರಿನಲ್ಲಿ ಬಂದು ನಿಂತುಕೊಂಡು ನಿನ್ನ ಪರಾಕ್ರಮದ ಮಾತುಗಳನ್ನು ಆಡುವೆಯಾ. ಛೇ ಭ್ರಷ್ಟ ನಿನ್ನ ಶೌರ‌್ಯ ಸಾಹಸವನ್ನು ನೋಡುತ್ತೇನೆ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ತಿರುಕ ಬುರುಡೆಯ  ಹಿಡಿದು  ತಿರುಗಿದೆ  ನೀನೀಗ
ನಿನ್ನ ಶೌರ‌್ಯವ ನಾನು  ನೋಡುವೆ  ನಾನು॥

ಮಯಬ್ರಹ್ಮ: ಯಲವೋ ಮಹೇಶ್ವರ, ಹಿಂದೆ ಹಮ್ಮಿನಿಂದ ಬ್ರಹ್ಮನ ಶಿರವನ್ನು ಕತ್ತರಿಸಿ ಆ ಶಿರವು ನಿನ್ನ ಕರವನ್ನು ಕಚ್ಚಿ ಹನ್ನೆರಡು ವರುಷ ಹೆಂಡರು ಮಕ್ಕಳನ್ನು ಬಿಟ್ಟು ವನವಾಸ ಮಾಡಲಿಲ್ಲವೆ? ಆಗಿನ ಕಾಲದಲ್ಲಿ ನೀನು ನನ್ನನ್ನು ಬಂದು ಬೇಡಲಾಗಿ ಆದಿ ನಾರಾಯಣನಿಂದ ಬಿಡುಗಡೆ ಮಾಡಿಸಲಿಲ್ಲವೆ. ಛೇ ಭ್ರಷ್ಟ ನಿನ್ನ ಶೌರ‌್ಯ ಸಾಹಸವನ್ನು ನೋಡುತ್ತೇನೆ ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ಗರುಡ ಶರವನು ನಾನು ಬಿಡುವೆನು ಭರದೊಳು.

ಈಶ್ವರ: ಯಲವೋ ಭ್ರಷ್ಟನಾದ ಮಯಬ್ರಹ್ಮನೆ ಕೇಳು. ನಿನ್ನನ್ನು ಕ್ಷಣಮಾತ್ರದಲ್ಲಿ ಸುಟ್ಟು ಬೂದಿ ಮಾಡುತ್ತೇನೆ ನೋಡುವಂಥವನಾಗು.

ಪದ

ಮೋಹನಾಸ್ತ್ರವ ನಾನು  ಬಿಡುವೆನು  ಭರದೊಳು ॥

ಮಯಬ್ರಹ್ಮ: ಯಲವೋ ಭ್ರಷ್ಟನಾದ ಶಂಕರನೇ ಕೇಳು. ನೀನು ಪರಾಕ್ರಮದ ನುಡಿಗಳನ್ನು ನುಡಿಯುತ್ತಿರುವೆಯಾ. ನನ್ನ ಕರದಲ್ಲಿರುವ ಮೋಹನಾಸ್ತ್ರವನ್ನು ಬಿಡುತ್ತೇನೆ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಈಶ್ವರ: ಯಲವೋ ಭ್ರಷ್ಟ ಹಾಗಾದರೆ ಯುದ್ಧಕ್ಕೆ ಯದುರಾಗುವಂಥವನಾಗು.

 

(ಯುದ್ಧಈಶ್ವರನ ಮೂರ್ಚೆ)

ಭಾಮಿನಿ

ಇತ್ತಲಾ ಮಯಬ್ರಹ್ಮನ  ಬಾಣದಿಂದ  ಪರಮೇಶ್ವರನು
ಮೂರ್ಛಿಸಲಾಗಲಾಕ್ಷಣ  ಇತ್ತಲಾ ಪರಮೇಶ್ವರ
ಪುತ್ರನಾದ  ಶಣ್ಮುಖದೇವರು  ಸಂಭ್ರಮದಿ ಬರುತಿರಲಾಗಲಾಕ್ಷಣ ॥

 

(ಷಣ್ಮುಖ ಬರುವಿಕೆ)

ಷಣ್ಮುಖ: ಭಲೈ ಮನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ. ಭಲೈ ಮಾನುಷ್ಯನೆ ಕರಕಂದುಳ ಪುಟವೆತ್ತಿ ನಮ್ಮನ್ನು ಧಾರೆಂದು ಕೇಳುವ ಮಾನುಷ್ಯ ನೀ ಧಾರೋ ಹೀಗೆ ಬಾರೋ. ಭಲೈ ಸಾರಥಿ ನಾವು ಧಾರೆಂದರೆ ಯೀ ಬ್ರಂಹ್ಮಾಂಡದೋಳ್ ನನ್ನ ಆರ್ಭಟಕ್ಕೆ ಯಾರು ನಿಲ್ಲಲಾರದೆ ಅಂತರಿಕ್ಷದಲ್ಲಿರುವ ಸುರನರ ಗರುಡ ಗಾಂಧಾರ‌್ವರನ್ನು ಮಂದರಾದ್ರಿ ಕೈಲಾಸಪಟ್ಟಣವನ್ನು ಪರಿಪಾಲಿಸುವಂಥ ಶಂಕರ ಮಹಾದೇವರಿಗೆ ಕುಮಾರನಾದ ನಾನು ದುಷ್ಟರಾದ ತಾರಕಾಸುರ ಪದ್ಮಾಸುರ ಸಿಂಹವಕ್ರರೆಂಬಸೊಕ್ಕಿದ ರಕ್ಕಸರನ್ನು ಚಕ್ಕಿ ಚಂಡಾಡಿದ ಷಣ್ಮುಖ ದೇವರೆಂದು ಈ ಸಭೆಯೋಳ್ ಕಿತಾಪ್ ಮಾಡುವಂಥವನಾಗೋ ಸಾರಥಿ ಸಂಧಾನಮತಿ. ಭಲೈ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ನನ್ನ ಪ್ರದಾನಮಂತ್ರಿ ಯಾದ ಯಕ್ಷಭೂಪಾಲನನ್ನು ಆಸ್ಥಾನಕ್ಕೆ ಬರಮಾಡು.

ಯಕ್ಷಭೂಪಾಲ: ಭಲೈ ಮಾನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ. ಭಲೈ ಮಾನುಷ್ಯನೆ ನಮ್ಮ ಯದುರಿನಲ್ಲಿ ಬಂದು ನಿಂತು ಕಟುತರ ಭಯವಿಲ್ಲದೆ ಮಾತನಾಡಿಸುವ ಮಾನುಷ್ಯ ನೀ ಧಾರೋ ಹೀಗೆ ಬಾರೋ ಭಲೈ ಸಾರಥಿ ನಾವು ಧಾರೆಂದರೆ ಕೈಲಾಸ ಪಟ್ಟಣವನ್ನು ಪರಿಪಾಲಿಸುವಂಥ ಪರಮೇಶ್ವರ ದೇವರಿಗೆ ಪ್ರೇಮದ ಪುತ್ರನಾದಂಥ ಷಣ್ಮುಖದೇವರಿಗೆ ಪ್ರಧಾನಮಂತ್ರಿಯಾದ ಯಕ್ಷಭೂಪಾಲನೆಂದು ತಿಳಿಯೈ ಸಾರಥಿ ಸಂಧಾನಮತಿ. ಭಲೈ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ನಮ್ಮ ಸ್ವಾಮಿಯಾದ ಶಣ್ಮುಖ ದೇವರು ಕರೆಸಿಕೊಂಡ ಕಾರಣ ಬಾಹೋಣವಾಯಿತು. ಜಾಗ್ರತೆಯಾಗಿ ತೋರಿಸುವಂಥವನಾಗು.

ಚಾರಕ: ನಿಮ್ಮ ವಾಮಭಾಗದಲ್ಲಿರುವರೈ ದೇವಾ ಕರುಣ ಪ್ರಭಾವಾ.

ಮಂತ್ರಿ: ಷಣ್ಮುಖ ದೇವರೆ ನಮಸ್ಕರಿಸುವೆ.

ಷಣ್ಮುಖ: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ಯಕ್ಷ ಭೂಪಾಲ.

ಮಂತ್ರಿ: ಸ್ವಾಮಿ ಷಣ್ಮುಖ ದೇವರೆ ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು ಜಾಗ್ರತೆಯಾಗಿ ಪೇಳುವಂಥವರಾಗಿರಿ.

ಷಣ್ಮುಖ: ಅಯ್ಯ ಮಂತ್ರಿ ಹೇಳುತ್ತೇನೆ ಕೇಳುವಂಥವನಾಗು.

ಪದ

ರಕ್ಕಸರ  ಕೊಂದಂಥ ಯಕ್ಷ ಭೂಪಾಲ ಕೇಳು
ನಮ್ಮ ತಂದೆಯು ಹೋದವರು ಬರಲಿಲ್ಲ ಕೇಳು॥

ಷಣ್ಮುಖ: ಅಯ್ಯ ಮಂತ್ರಿ ನಮ್ಮ ತಂದೆಯವರಾದ ಪರಮೇಶ್ವರ ದೇವರು ಆ ಭ್ರಷ್ಟನಾದ ಮಯಬ್ರಹ್ಮನೊಡನೆ ಯುದ್ಧಕ್ಕೆ ಹೋದವರು ರಣದಲ್ಲಿ ಸೋತರೋ ಅಥವಾ ವೈರಿಗಳನ್ನು ಗೆದ್ದರೋ ಯಾವುದು ಗೊತ್ತಾಗಲಿಲ್ಲವೈ ಮಂತ್ರಿ ಕಾರ್ಯದಲ್ಲಿ ಸ್ವತಂತ್ರಿ.

ಮಂತ್ರಿ: ಸ್ವಾಮಿ ಷಣ್ಮುಖ ದೇವರೆ ಹೇಳುತ್ತೇನೆ ಕೇಳುವಂಥವರಾಗಿರಿ.

ಪದ

ಇದಕೆ  ಯೋಚನೆ  ಯಾಕೆ  ಶಣ್ಮುಖದೇವರೆ
ನಂದಿ ವಾಹನನಿಗೆ  ಮರಣವುಂಟೆ ॥

ಮಂತ್ರಿ: ಸ್ವಾಮಿ ಷಣ್ಮುಖ ದೇವರೆ ನಿಮ್ಮ ತಂದೆಯವರಾದ ಸದಾಶಿವ ಮೂರ್ತಿಯು ಯುದ್ಧದಲ್ಲಿ ಎಂದಿಗೂ ಸೋತಿಲ್ಲಾ. ಅದೋ ನೋಡಿ ನಮ್ಮ ಸೇವಕನು ಓಡಿ ಬರುತ್ತಿರುವನು ಆತನನ್ನು ವಿಚಾರಿಸಿದರೆ ಯಲ್ಲವೂ ಗೊತ್ತಾಗುವುದು.

ಪದ

ಇತ್ತಲಾ ಮಯಬ್ರಹ್ಮನ  ಬಾಣದಿಂದ ಪರಮೇಶ್ವರನು
ಮೂರ್ಛಿಸಲಾಗಲಾಕ್ಷಣ  ಇದ ತಿಳಿದ
ಓರ್ವ ಚಾರಕನು  ಷಣ್ಮುಖದೇವರಿಗೆ
ತಿಳಿಸಬೇಕೆಂದೆನುತ ಸಂಭ್ರಮದಿ  ಬರುತಿರಲಾಗ ॥

ಚಾರಕ: ಶಣ್ಮುಖ ದೇವರಿಗೆ ಜಯವಾಗಲಿ.

ಷಣ್ಮುಖ: ಚಾರನೆ  ವರ್ತಮಾನವೇನು.

ಚಾರಕ: ಸ್ವಾಮಿ ಷಣ್ಮುಖ ದೇವರೆ ನಿಮ್ಮ ತಂದೆಯವರಾದ ಪರಮೇಶ್ವರ ದೇವರು ಆ ಮಯಬ್ರಹ್ಮನ ಬಾಣದಿಂದ ಮೂರ್ಛೆಯಾಗಿ ಮಲಗಿರುವರೈ ಸ್ವಾಮಿ ಶಣ್ಮುಖದೇವರೆ.

ಭಾಮಿನಿ

ಚರನ ನುಡಿಯನು  ಕೇಳಿದಾಕ್ಷಣಾ  ಸಿಡಿಲು ಘರ್ಜನೆಯಂತೆ
ಘರ್ಜಿಸಿ  ಮಯಬ್ರಹ್ಮನೊಡನೆ ಸಮರಕೆ
ಹೋಗಬೇಕೆಂದೆನುತ  ತನ್ನ  ಮಂತ್ರಿ  ಯೊಡನೆ
ಸೇನಾಸಮೂಹವ ಸಿದ್ಧ ಪಡಿಸಬೇಕೆಂದೆನುತ  ನುಡಿದನಾಗ ॥

ಷಣ್ಮುಖ: ಅಯ್ಯ ಮಂತ್ರಿ. ಚಾರಕನು ಆಡಿದ ಮಾತನ್ನು ಕೇಳಿದೆಯಾ ಆ ಮಯಬ್ರಹ್ಮನಲ್ಲಿಗೆ ಯುದ್ಧಕ್ಕೆ ಹೋಗಬೇಕಾಗಿದೆ. ಜಾಗ್ರತೆಯಾಗಿ ನಮ್ಮ ಸೇನಾ ಸಮೂಹವನ್ನು ಸಿದ್ಧಪಡಿಸಿಕೊಂಡು ಜಾಗ್ರತೆಯಾಗಿ ಹೊರಡುವಂಥವನಾಗು.

ಮಂತ್ರಿ: ಸ್ವಾಮಿ ಷಣ್ಮುಖದೇವರೆ ನಿಮ್ಮ ಇಷ್ಟದಂತೆ ಸಿದ್ಧಪಡಿಸುತ್ತೇನೆ.

ಷಣ್ಮುಖ: ಸೇವಕಾ ಜಾಗ್ರತೆಯಾಗಿ ಮಯಬ್ರಹ್ಮನಲ್ಲಿಗೆ ಹೋಗಿ ಷಣ್ಮುಖ ದೇವರು ನಿನ್ನ ಮೇಲೆ ಯುದ್ಧಕ್ಕೆ ಬಂದಿರುವರೆಂದು ತಿಳಿಸುವನಾಗು.

ಚಾರಕ: ಸ್ವಾಮಿ ಷಣ್ಮುಖ ದೇವರೆ ನಿಮ್ಮ ಅಪ್ಪಣೆಯಂತೆ ಈಗಲೇ ಹೋಗಿ ತಿಳಿಸುತ್ತೇನೆ. ಮಯಬ್ರಹ್ಮ ಭೂಪಾಲನಿಗೆ ಜಯವಾಗಲಿ.

ಮಯಬ್ರಹ್ಮ: ಚಾರನೆ ವರ್ತಮಾನವೇನು.

ಚಾರಕ: ಸ್ವಾಮಿ ಮಯಬ್ರಹ್ಮದೇವರೆ ಪರಮೇಶ್ವರನ ಪುತ್ರನಾದ ಷಣ್ಮುಖದೇವರು ನಿಮ್ಮ ಮೇಲೆ ಯುದ್ಧಕ್ಕೆ ಬಂದು ದ್ವಾರಬಾಗಿಲಲ್ಲಿ ನಿಂತಿರುವರು.

ಮಯಬ್ರಹ್ಮ: ಸೇವಕಾ ಬಂದರು ಬರಲಿ ನಾನು ನೋಡಿಕೊಳ್ಳುತ್ತೇನೆ.

ಪದ

ದುರುಳಾ  ಕೇಳೆಲೋ  ನಿನ್ನ  ಧುರದೊಳು  ಜೈಸುವೆ ॥

ಷಣ್ಮುಖ: ಯಲವೋ ಅಧಮನಾದ ಮಯಬ್ರಹ್ಮನೆ ಹೇಳುತ್ತೇನೆ ಕೇಳು. ನಮ್ಮ ತಂದೆಯವರಾದ ಸದಾಶಿವ ಮೂರ್ತಿಯನ್ನು ಜೈಸಿದೆನೆಂದು ನಿನ್ನ ಶೌರ‌್ಯವನ್ನು ತೋರಿಸಬೇಡ. ನಿನ್ನನ್ನು ಕ್ಷಣಮಾತ್ರದಲ್ಲಿ ಈ ರಣಭೂಮಿಗೆ ಬಲಿಯನ್ನು ಕೊಡುತ್ತೇನೆ ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗಲೋ ಭ್ರಷ್ಟಾ ಹೇಳುತ್ತೇನೆ ಕೇಳು.

ಪದ

ಯೇನಾ ಬಗಳಿದೆ  ದುರುಳ  ಶ್ವಾನನಂದದಿ ನೀನು
ನಿನ್ನ  ಶೌರ‌್ಯವ ನಾನು  ನೋಡುವೆ ನೀಗಾ॥

ಮಯಬ್ರಹ್ಮ: ಯಲವೋ ಶಿವನ ಸುತನೇ ಷಣ್ಮುಖನೆ ಕೇಳು. ದುಷ್ಟರಿಗೆ ಮಾಡಿದ ವುಪಕಾರವು ಹಾವಿಗೆ ಹಾಲು ಕುಡಿಸಿದರೆ ವಿಷವು ಎಷ್ಟು ಹೆಚ್ಚಾಗುತ್ತದೆಯೋ ಅದರಂತೆ ನಿಮ್ಮ ನೀಚಬುದ್ಧಿಯನ್ನು ಬಿಡವುದಿಲ್ಲವೋ ಭ್ರಷ್ಟ ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಷಣ್ಮುಖ: ಯಲವೋ ಭ್ರಷ್ಟ ಹೇಳುತ್ತೇನೆ ಕೇಳು. ಯನ್ನ ಪಿತನನ್ನು ಗೆದ್ದನೆಂದೆನುತಲಿ ಗರ್ವವ ಪಡಬೇಡ ಅಧಮನೆ ಕೇಳೋ.

ಪರಬ್ರಹ್ಮ: ಯಲವೋ ಶಿವನ ಸುತನೆ ಲೋಕದ ವಿಷಯದಲ್ಲಿ ನಾಚಿಕೆಯು ದಾಕ್ಷಿಣ್ಯವು ಧರ್ಮಕ್ಕೆ ವೃದ್ಧಿಯು. ಯೀ ಗುಣವು ಯಾರಲ್ಲಿಲ್ಲವೋ ಆತನೊಂದಿಗೆ ಎಂದಿಗೂ ವಿಶ್ವಾಸ ಮಾಡಬಾರದು. ಛೇ ಭ್ರಷ್ಟ ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ವುರಗಾ ಬಾಣವ ನಾನು  ಬಿಡುವೆನು
ಭರದೊಳು  ಸಮರದೊಳ್  ಹರಿಸುವೆ ಶಿರವಾ ॥

ಷಣ್ಮುಖ: ಯಲವೋ ಮಯಬ್ರಹ್ಮನೆ ಕೇಳು. ನನ್ನಲ್ಲಿ ಇರತಕ್ಕ ವುರಗ ಬಾಣವನ್ನು ಬಿಡುವೆನು. ಇದರ ಜ್ವಾಲೆಯನ್ನು ತಡೆದುಕೊಂಡು ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ಗರುಡಾ ಬಾಣವ ನಾನು  ಬಿಡುವೆನು  ಭರದೊಳು ॥

ಮಯಬ್ರಹ್ಮ: ಯಲವೋ ಶಿವನಸುತನಾದ ಷಣ್ಮುಖನೆ ಕೇಳು ನೀನು ಬಿಟ್ಟಿರುವ ವುರುಗ ಬಾಣವನ್ನು ಪುಡಿಪುಡಿ ಮಾಡಿ ಹೊಸದಾಗಿ ನನ್ನ ಗರುಡ ಬಾಣವನ್ನು ಹೂಡಿ ಹೊಡೆಯುತ್ತೇನೆ. ತಡೆದುಕೊಂಡು ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ಪರ್ವತಾಸ್ತ್ರವ ನಾನು  ಬಿಡುವೆನು  ಭರದೊಳು
ನಿನ್ನ ಶೌರ‌್ಯವ ನಾನು  ನೋಡುವೆ  ನಾನು ॥

ಷಣ್ಮುಖ: ಯಲವೋ ಭ್ರಷ್ಟನಾದ ಮಯಬ್ರಹ್ಮನೆ ಕೇಳು. ನೀನು ಬಿಟ್ಟಿರುವ ಗರುಡ ಬಾಣವನ್ನು ಪುಡಿ ಪುಡಿ ಮಾಡಿ ನನ್ನ ಕರದೊಳಗಿರುವ ಪರ‌್ವತಾಸ್ತ್ರವನ್ನು ಹೂಡಿ ಹೊಡೆಯುತ್ತೇನೆ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ಮತ್ತೆ  ಧನುಸ್ಸನು  ಪಿಡಿದು  ಹೊಡೆಯುವೆ
ನಾನೀಗಾ  ಸಮರದೋಳ್  ಹರಿಸುವೆ ನಾನು ॥

ಮಯಬ್ರಹ್ಮ: ಯಲವೋ ಭ್ರಷ್ಟ. ಹೇಳುತ್ತೇನೆ ಕೇಳು. ನಾನು ಬಿಟ್ಟ ಬಾಣದ ಮಹಿಮೆಯು ನನಗೆ ಗೊತ್ತಾಯಿತು ನನ್ನ ಕರದಲ್ಲಿರುವ ಗದಾದಂಡದಿಂದ ಹಾಗೆ ಅಪ್ಪಳಿಸಿ ಬಿಡುತ್ತೇನೆ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

(ಯುದ್ಧಷಣ್ಮುಖನ ಮೂರ್ಛೆ)

ಮಯಬ್ರಹ್ಮ: ಯಲವೋ ಭ್ರಷ್ಟ. ನಿನ್ನ ಪಾಡೇನಾಯಿತು ನೋಡಿದೆಯಾ. ಮತ್ಯಾರಿರುವರು ಬನ್ನಿ ನೋಡಿಕೊಳ್ಳುತ್ತೇನೆ.

ಭಾಮಿನಿ

ಇತ್ತಲಾ  ಪಾರ್ವತಾ ದೇವಿಯು  ಪತಿಯಾದ
ಪರಮೇಶ್ವರನು  ಸುತನಾದ  ಷಣ್ಮುಖ ದೇವರು
ಮಯಬ್ರಹ್ಮನ ಮೇಲೆ  ಸಮರಕೆ ಹೋದವರು
ಬರಲಿಲ್ಲವೆಂದೆನುತ  ತನ್ನ  ಸಖಿಯೊಡನೆ ಪ್ರಳಾಪಿಸುತಿರಲಾಗಾ ॥

(ಪಾರ್ವತಾದೇವಿ ಬರುವುದು)

ಪಾರ್ವತಾದೇವಿ: ಯಾರಲ್ಲಿ ನನ್ನ ಸಖೀಮಣಿಯನ್ನು ಆಸ್ಥಾನಕ್ಕೆ ಬರಮಾಡು.

ಸಖಿ: ಪಾರ್ವತಾದೇವಿ ನಮಸ್ಕರಿಸುವೆನು.

ಪಾರ್ವತಾದೇವಿ: ನಿನಗೆ ಮಂಗಳವಾಗಲಿ ಮೇಲಕ್ಕೇಳಮ್ಮಾ ಸಖೀಮಣಿಯೆ.

ಸಖಿ: ಪಾರ್ವತಾದೇವಿ ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು ಪೇಳಬೇಕಮ್ಮಾ ಪಾರ್ವತಾದೇವಿ.

ಪಾರ್ವತಾದೇವಿ: ಅಮ್ಮಾ ಸಖೀಮಣಿಯೆ ಹೇಳುತ್ತೇನೆ ಕೇಳು.

ಪದ

ಸಖಿಯಳೆ  ಕೇಳಮ್ಮಾ  ಹರುಷದಿಂ ಪೇಳು
ಪುತ್ರರು ಬರಲಿಲ್ಲಾ  ಹೇಳಮ್ಮಾ  ಸಖಿಯೇ
ರಣದೊಳ್ ಮಡಿದಿಹರೋ  ಧುರವ ಜೈಸಿರುವರೊ
ಪೇಳುವರ‌್ಯಾರಮ್ಮ ವರಚಂದ್ರ ಮುಖಿಯೆ ॥

ಪಾರ್ವತಾದೇವಿ: ಅಮ್ಮಾ ಸಖೀಮಣಿಯೆ ಪ್ರಾಣಕಾಂತರಾದ ಪರಶಿವ ಮೂರ್ತಿಯು ಕಂದನಾದ ಷಣ್ಮುಖನು ಸಹ ಪೆಂದೋಟಪುರದ ಮಯಬ್ರಹ್ಮನೊಡನೆ ಯುದ್ಧಕ್ಕೆ ಹೋದವರು ಇನ್ನೂ ಬಾರಲಿಲ್ಲವಲ್ಲಾ ಅವರಿಗೆ ಜಯವಾಯಿತೊ ಅಪಜಯವಾಯಿತೊ ಯಾವುದನ್ನು ತಿಳಿಸುವರೆ ಇಲ್ಲವಲ್ಲಮ್ಮಾ ಸಖೀಮಣಿಯೆ.

ಪದ

ಹದಿನಾಲ್ಕು  ಲೋಕದೊಳ್  ಹರನ ಕೊಲ್ಲುವಂಥ
ಶೂರರ ಕಾಣೆನು  ಕೇಳಮ್ಮಾ ತಾಯೆ ॥

ಸಖಿ: ಅಮ್ಮಾ ಪಾರ್ವತಿದೇವಿ ಮೂರು ಲೋಕದಲ್ಲಿಯು ಹರನನ್ನು ಕೊಲ್ಲುವುದಕ್ಕೆ ಯಾರಿಂದ ತಾನೆ ಸಾಧ್ಯವಾದೀತು. ಪರಶಿವನು ಮುನಿದರೆ ಲೋಕವೆಲ್ಲಾ ನಾಶವಾಗುವುದು. ಆ ಮಯಬ್ರಹ್ಮನು ಪರಶಿವನನ್ನು ಕೊಲ್ಲುವುದುಂಟೇನಮ್ಮಾ ತಾಯೆ.

ಸಖಿ : ಅಮ್ಮಾ ಪಾರ್ವತಾದೇವಿ ಅದೋ ನೋಡಿ ಪರಶಿವಮೂರ್ತಿಯು ಕಂದನಾದ ಷಣ್ಮುಖನು ಯುದ್ಧದಲ್ಲಿ ಜೈಸಿರಬಹುದು. ಆದ್ದರಿಂದಲೆ ನಮ್ಮ ಸೇವಕನು ಓಡಿಬರುತ್ತಿರುವನು. ನೋಡುವಂಥವ ರಾಗಿರಮ್ಮಾ ಪಾರ್ವತಾದೇವಿ.

ಭಾಮಿನಿ

ಇತ್ತಲಾ  ಪಾರ್ವತಾದೇವಿಯು  ತನ್ನ
ಸಖಿಯೊಡನೆ  ಪತಿಪುತ್ರರು  ಬರಲಿಲ್ಲವೆಂದೆನುತ
ಪ್ರಳಾಪಿಸುವ ಸಮಯೊಳಾಗಲಾಕ್ಷಣ
ಓರ್ವ ಚಾರನು  ಪತಿಪುತ್ರರ ವಿಷಯ
ಪಾರ್ವತಾದೇವಿಗೆ  ತಿಳಿಸಬೇಕೆಂದೆನುತ
ಸಂಭ್ರಮದಿ  ಬರುತಿರಲಾಗಾ ॥

ಚಾರಕ: ಪಾರ್ವತಮ್ಮನವರಿಗೆ ನಮಸ್ಕರಿಸುವೆನು.

ಪಾರ್ವತಾದೇವಿ: ಸೇವಕಾ ನಿನಗೆ ಮಂಗಳವಾಗಲಿ ಮೆಲಕ್ಕೇಳು ನೀನು ಬಂದ ವಿಚಾರವೇನು.

ಚಾರಕ: ತಾಯಿ ಪಾರ್ವತಮ್ಮನವರೆ ಅ ಮಯಬ್ರಹ್ಮನ ಬಾಣದಿಂದ ಪರಮೇಶ್ವರ ದೇವರು ನಿಮ್ಮ ಕಂದನಾದ ಷಣ್ಮುಖದೇವರು ಯುದ್ಧದಲ್ಲಿ ಸೋತು ಮೂರ್ಛೆ ಇಂದ ಈ ಧರಣಿ ಮೇಲೆ ಮಲಗಿರುವರಮ್ಮಾ ಪಾರ್ವತಾದೇವಿ.

ಪಾರ್ವತಾದೇವಿ: ಆಹಾ ಕೆಟ್ಟೆನು ಕೆಟ್ಟೆನು ಯಂಥ ಮೋಸವಾಯಿತು.

ಕಂದ
ಚರನ  ನುಡಿಯನು  ಕೇಳಿದಾಕ್ಷಣ
ಮನದಿ ದುಃಖವ ತಾಳಿ  ಪಾರ್ವತಾದೇವಿಯು
ಪತಿಪುತ್ರರು ಇರುವ ಸ್ಥಳಕೆ  ಹೋಗಬೇಕೆಂದೆನುತ
ತನ್ನ ಸಖಿಯೊಡನೆ  ನುಡಿದಳಾಗಾ ॥

ಪಾರ್ವತಾದೇವಿ: ಅಮ್ಮಾ ಸಖೀಮಣಿಯೆ ಚಾರಕನು ಹೇಳಿದಾಕ್ಷಣವೆ ನನ್ನ ಮನವು ನೀರಿನಲ್ಲಿ ಮುಳುಗುವಂಥದ್ದಾಯಿತು. ಪತಿಪುತ್ರರು ಈ ಧಾರುಣಿಯಲ್ಲಿ ಮಲಗುವಂಥವರಾದರಲ್ಲಾ. ಸೇವಕಾ ಜಾಗ್ರತೆಯಾಗಿ ರಣಭೂಮಿಗೆ ರಥವನ್ನು ಹೊಡೆಯುವನಾಗು.

ಪದ

ಯತ್ತ ನೋಡಲೋ  ಕತ್ತಲಾಗಿದೆ
ಸೈರಿಸಲಾರೆನು  ಮನದೊಳು  ವ್ಯಥೆಯನು ॥

ಪಾರ್ವತಾದೇವಿ: ಅಮ್ಮಾ ಸಖೀಮಣಿಯೆ ಮುಂದಕ್ಕೆ ವಂದು ಹೆಜ್ಜೆಯನ್ನು ಇಡಲು ಸಾಧ್ಯವಿಲ್ಲಾ ಕೆಟ್ಟೆನಲ್ಲಮ್ಮ ಸಖೀಮಣಿಯೆ.

ಪದ

ಪುತ್ರಾನ  ಕಳಕೊಂಡೆ  ಪತಿಯನ್ನು  ಕಳಕೊಂಡೆ
ಸೈರಿಸಲಾರೆನು  ಸಖಿಯೆ  ಸೈರಿಸಲಾರೆನು  ನಾನು ॥

ಪಾರ್ವತಾದೇವಿ: ಅಮ್ಮಾ ಸಖೀಮಣಿಯೆ ಕಾಂತರನ್ನು ಕಂದನಾದ ಷಣ್ಮುಖನನ್ನು ಸಹ ಕಳೆದುಕೊಂಡು ಕಾಂತಾ ಪುತ್ರ ಹೀನಳಾದೆನಲ್ಲಾ. ಅಮ್ಮಾ ಸಖೀಮಣಿಯೆ ಖಂಡಿತವಾಗಿ ಸೈರಿಸಲಾರೆನಮ್ಮಾ. ಅಮ್ಮಾ ಸಖೀಮಣಿಯೆ ಪ್ರಾಣಕಾಂತರು ಇರುವ ಸ್ಥಳಕ್ಕೆ ಹೋಗೋಣ ನಡಿಯಮ್ಮಾ ಸಖೀಮಣಿಯೆ.

ಪದ

ಹಾ ಪ್ರಿಯಾ  ಪ್ರಶಾಂತ ಹೃದಯ  ಮರಣ ಹೊಂದಿದೆಯಾ
ಪ್ರಿಯಾ  ಅರಸಿ  ಯೊಳನು ಮರೆಸಿ ನೀವು  ಮರಣ
ಹೊಂದಿದೆಯಾ  ಪ್ರಿಯಾ  ಚಾಡಿ ನಾರದನಿಂದ  ನೀವು
ಮರಣ ಹೊಂದಿದೆಯಾ ಪ್ರಿಯಾ  ಹಾ ಪ್ರಿಯ
ಪ್ರಶಾಂತಹೃದಯ  ಮರಣ  ಹೊಂದಿದೆಯಾ
ಪ್ರಿಯಾ ಕಾಂತಾ  ದೇವಾ ॥

ಪಾರ್ವತಾದೇವಿ: ಅಯ್ಯೋ ಪ್ರಾಣಕಾಂತರೆ. ಚಾಡಿ ನಾರದನ ಮಾತನ್ನು ಕೇಳಿ ಖೂಳನಾದ ಮಯಬ್ರಹ್ಮನಲ್ಲಿ ರಣಾಗ್ರವನ್ನು ಮಾಡಿ ಈ ಧಾರುಣಿಯ ಮೇಲೆ ಮಲಗುವಂಥವರಾದಿರಲ್ಲಾ. ಎದ್ದು ವಂದು ಮಾತನ್ನಾದರು ಆಡಬಾರದೆ ಕಾಂತ. ಖಂಡಿತವಾಗಿ ನಾನು ಸೈರಿಸಲಾರೆನು.

ಪದ

ಜನನಿ ನೀಂ  ಕೇಳಮ್ಮಾ  ಶಿವ ತಾನು  ಮಡಿದರೆ
ಲೋಕವು ವುಳಿಯುವುದೆ  ಕೇಳಮ್ಮಾ  ತಾಯೇ॥

ಸಖಿ: ಅಮ್ಮಾ ಪಾರ್ವತಾದೇವಿ, ಈ ಲೋಕವನ್ನು ಪರಿಪಾಲಿಸುವಂಥ ಪರಶಿವಮೂರ್ತಿಗೆ ಮರಣವು ಬಂದರೆ ಲೋಕವು ವುಳಿಯುವುದುಂಟೇ. ಇದೂ ಅಲ್ಲದೆ ಪರಶಿವಮೂರ್ತಿಯು ಕಂದನಾದ ಷಣ್ಮುಖನು ಮೂರ್ಚೆಯಿಂದ ಮೇಲಕ್ಕೇಳುವರು ನೋಡಮ್ಮಾ ತಾಯೆ ಪಾರ್ವತಾದೇವಿ.

soe ��s-�\x�ely:Calibri;mso-hansi-theme-font: minor-latin’>ನಿನ್ನಲ್ಲಿ ರಣಾಗ್ರವನ್ನು ಮಾಡಿ ಜೈಸಿಕೊಂಡು ಹೋಗುತ್ತೇನೆ ನೋಡುವಂಥವನಾಗಲೋ ಭ್ರಷ್ಟಾ.

 

ಮಯಬ್ರಹ್ಮ: ಯಲವೋ ಮಹೇಶ್ವರ ಹೇಳುತ್ತೇನೆ ಕೇಳು.

heme� x�tm�\x�en; mso-hansi-font-family:Calibri;mso-hansi-theme-font:minor-latin’>ಸಂಖ್ಯೆಯುಳ್ಳ ಕಮಲನಿಗೆ ಧಾರೆಂದು ತಿಳಿಯಬಲ್ಲೆ ಭಲೈ ಸಾರಥಿ ಇನ್ನೂ ಗೊತ್ತಾಗಲಿಲ್ಲವೆ ಮುನಿಮುಖ್ಯರೋಳ್ ಶ್ರೇಷ್ಟರೆಂದೆನಿಸಿರ್ಪ ಕಾಶ್ಯಪರ ಧರ್ಮಪತ್ನಿಯರಾದ ಅಧಿತಿ ದೇವಿಯ ಗರ್ಭಾಂಬುಧಿಯೊಳ್ ಪುಟ್ಟಿ ಸುಕುಮಾರನೆಂದೆನಿಸಿ ಸಪ್ತ ಅಶ್ವಂಗಳನ್ನು ಕಟ್ಟುವ ಭಾನುದೇವನೆಂದು ತಿಳಿಯುವಂಥವನಾಗೈ ಸಾರಥಿ ಸಂಧಾನಮತಿ.

 

ಭಲೈ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ಈ ವನಾಂತರವನ್ನು ಹೊಕ್ಕು ಪರಿಮಳ ವಾಸನೆಯುಳ್ಳ ಪುಷ್ಪಗಳನ್ನು ಕೊಯ್ದುಕೊಂಡು ಪೋಗಬೇಕೆಂದು ಬಂದಿರುತ್ತೇನೆ ಜಾಗ್ರತೆಯಾಗಿ ವುದ್ಯಾನವನದ ಬಾಗಿಲನ್ನು ತೆಗೆಯುವಂಥವನಾಗು ಆಹಾ ಈ ವನಾಂತರವನ್ನು ನೋಡಿದರೆ, ನನ್ನ ಮನಸ್ಸಿಗೆ ಬಹಳ ಆನಂದವಾಗುತ್ತಿರುವುದು.

ಆಹಾ ! ಇದೇನಾಶ್ಚರ‌್ಯ ಈ ವುದ್ಯಾನವನದ ಮಧ್ಯದಲ್ಲಿ ಓರ್ವ ಸ್ತ್ರೀಯಳು ಮಲಗಿರುವಳಲ್ಲಾ, ಈಕೆ ಯಾರಾಗಿರಬಹುದು, ವಿಚಾರಿಸಿ ನೋಡುವೆನು.