Categories
e-ದಿನ

ಸೆಪ್ಟೆಂಬರ್-10

 

ಪ್ರಮುಖ ಘಟನಾವಳಿಗಳು:

1846: ಲಾಕ್ ಸ್ಟಿಚ್ ಹೊಲಿಗೆ ಯಂತ್ರಕ್ಕೆ ಎಲಿಯಾಸ್ ಹೌವೆ ಪೇಟೆಂಟ್ ಪಡೆದರು.

1847: ಹವಾಯಿಯಲ್ಲಿ ಮೊದಲ ಚಲನಚಿತ್ರ ಮಂದಿರವನ್ನು ತೆರೆಯಲಾಯಿತು.

1869: ಜಪಾನಿನ ಯೋಕೋಹಾಮಾದಲ್ಲಿ ಬ್ಯಾಪ್ಟಿಸ್ಟ್ ಮಂತ್ರಿಯೊಬ್ಬ ರಿಕ್ಷಾವನ್ನು ಕಂಡುಹಿಡಿದರು.

1894: ಲಂಡನ್ನಿನ ಟ್ಯಾಕ್ಸಿ ಚಾಲಕ ಜಾರ್ಜ್ ಸ್ಮಿತ್ ಕುಡಿದು ವಾಹನ ಚಾಲನೆ ಮಾಡಿದಕ್ಕಾಗಿ ದಂಡ ಪಡೆದ ಮೊದಲಿಗ.

1913: ತೀರದಿಂದ ತೀರಕ್ಕೆ ಸಂಪರ್ಕ ಕಲ್ಪಿಸುವ ಮೊದಲ ಹೆದ್ದಾರಿಯಾದ ಲಿಂಕನ್ ಹೆದ್ದಾರಿ ತೆರೆಯಲಾಯಿತು.

1919: ಚೀನಾ ಲೀಗ್ ಆಫ್ ನೇಷನ್ಸಿನ ಸದಸ್ಯತ್ವ ಪಡೆಯಿತು.

1940: ಬಕ್ಕಿಂಗ್ ಹ್ಯಾಮ್ ಅರಮನೆಯ ಮೇಲೆ ಜರ್ಮನ್ ಪಡೆಗಳು ಬಾಂಬಿನ ದಾಳಿ ನಡೆಸಿದರು.

1966: ಹರ್ಯಾಣ ಮತ್ತು ಪಂಜಾಬ್ ರಚನೆಗೆ ಎರಡು ಸ್ವತಂತ್ರ ರಾಜ್ಯಗಳಾಗಿ ಪಂಜಾಬ್ ಮರು ಸಂಘಟನೆಯ ಮಸೂದೆಯನ್ನು ಸಂಸತ್ತು ಅಂಗೀಕರಿಸಿತು.

1977: ಯೋಜನಾ ಆಯೋಗವು ರೋಲಿಂಗ್ ಯೋಜನೆಯ ಪರಿಕಲ್ಪನೆಯನ್ನು ಪರಿಚಯಿಸಲು ನಿರ್ಧರಿಸಿತು.

1990: ಎಲ್ಲಿಸ್ ದ್ವೀಪವು ಒಂದು ವಸ್ತುಸಂಗ್ರಹಾಲಯವಾಗಿ ಪುನಃ ಪ್ರಾರಂಭವಾಯಿತು.

1993: 1000 ಬೋಯಿಂಗ್ 747 ಜಂಬೋ ವಿಮಾನವು ನಿರ್ಮಾಣಗೊಂಡಿತು.

1997: ಡಿಸ್ಕವರಿ ಚ್ಯಾನಲ್ ಟ್ರಾವಲ್ ಚ್ಯಾನಲ್ಲನ್ನು 20 ಮಿಲಿಯನ್ ಡಾಲರುಗಳಿಗೆ ಕೊಂಡುಕೊಳ್ಳುತ್ತದೆ.

2012: ಭಾರೀ ಮಳೆ ಮತ್ತು ಪ್ರವಾಹದಿಂದ ವಿಯೆಟ್ನಂನಲ್ಲಿ 29 ಮಂದಿ ಮೃತರಾದರು.

ಪ್ರಮುಖ ಜನನ/ಮರಣ:

1858: ಆಧುನಿಕ ಗುಜರಾತಿ ಪದ್ಯಗಳ ಪಿತಾಮಹ ಎಂದೇ ಖ್ಯಾತಿ ಪಡೆದ ಮಣಿಲಾಲ್ ನಾಥುಬಾಯಿ ದ್ವಿವೇದಿ ಜನಿಸಿದರು.

1872: “ರಣಜಿ” ಎಂಬ ಹೆಸರಿನ ಖ್ಯಾತಿಯ ಪ್ರಸಿದ್ಧ ಕ್ರಿಕೆಟಿಗ ಸರ್ ರಣಜಿತ್ ಸಿಂಹಜಿ ವಿಭಾಜಿ ಜನಿಸಿದರು.

1887: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಗೋವಿಂದ್ ವಲ್ಲಭ ಪಂತ್ ಜನಿಸಿದರು.

1911: ಸಾಮಾಜಿಕ ಸುಧಾರಕ, ರಾಜಕಾರಣಿ ಮತ್ತು ಕಾರ್ಮಿಕ ಸಂಘವಾದಿ ಜತಿನ್ ಚಕ್ರವರ್ತಿ ಜನಿಸಿದರು.

1912: ಭಾರತದ ಉಪರಾಷ್ಟ್ರಪತಿಯಾಗಿದ್ದ ಬಿ.ಡಿ.ಜತ್ತಿ ಅವರು ಜನಿಸಿದರು.

1915: ಕ್ರಾಂತಿಕಾರಿ ಜತಿಂದ್ರನಾಥ್ ಮುಖರ್ಜಿ ಪೋಲೀಸರ ಮತ್ತು ಕ್ರಾಂತಿಕಾರಿಗಳ ನಡುವೆ ನಡೆದ ಚಕಮಕಿಯಲ್ಲಿ ಗಾಯಗೊಂಡು ನಿಧನರಾದರು.

1920: ತಮಿಳು ಭಾಷೆಯ ರಾಷ್ಟ್ರೀಯ ಕವಿ, ಲೇಖಕ ಸುಬ್ರಮಣ್ಯಂ ಭಾರತಿ ನಿಧನರಾದರು.

1920: ಅಂಕಿ ಅಂಶಗಳಲ್ಲಿ “ಅಂದಾಜು ಸಿದ್ಧಾಂತ” ಮಂಡಿಸಿದ ಕಲ್ಯಾಂಪುಡಿ ರಾಧಾಕೃಷ್ಣ ರಾವ್ ಜನಿಸಿದರು.

1923: ಜನಪ್ರಿಯ ಬಂಗಾಳಿ ನಾಟಕಕಾರ, ಕಥೆ ಬರಹಗಾರ ಮತ್ತು ಕವಿ ಸುಕುಮಾರ್ ರಾಯ್ ನಿಧನರಾದರು.

1924: ಖ್ಯಾತ ಹಿಂದಿ ಲೇಖಕ ಕೆ.ಟಿ.ಗೋಪಾಲಕೃಷ್ಣನ್ ಜನಿಸಿದರು.

1989: ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಜನಿಸಿದರು.