Categories
e-ದಿನ

ಸೆಪ್ಟೆಂಬರ್-11

 

ಪ್ರಮುಖ ಘಟನಾವಳಿಗಳು:

1803: ಬ್ರಿಟಿಷರ ಮತ್ತು ಮರಾಠರ ನಡುವೆ ದೆಹಲಿಯ ಕದನ ನಡೆಯಿತು.

1853: ಮೊದಲ ವಿದ್ಯುತ್ ಟೆಲಿಗ್ರಾಫನ್ನು ಬಳಸಲಾಯಿತು.

1875: ದಿನಪತ್ರಿಕೆಯಲ್ಲಿ ಮೊದಲ ಬಾರಿಗೆ ವ್ಯಂಗ್ಯಚಿತ್ರವನ್ನು ಮುದ್ರಿಸಲಾಯಿತು.

1893: ಸ್ವಾಮಿ ವಿವೇಕಾನಂದ ತಮ್ಮ ಮೊದಲ ಭಾಷಣವನ್ನು ಶಿಕಾಗೋದ ವಿಶ್ವ ಧರ್ಮ ಸಂಸತ್ ಸಭೆಯಲ್ಲಿ ಮಾಡಿದರು.

1906: ದಕ್ಷಿಣ ಆಫ್ರಿಕಾದಲ್ಲಿ ಅಹಿಂಸಾ ಚಳುವಳಿ ನಿರೂಪಿಸಲು ಮಹಾತ್ಮಾ ಗಾಂಧಿ “ಸತ್ಯಾಗ್ರಹ” ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು.

1948: ಭಾರತದ ಸರ್ಕಾರದ ಪಡೆಗಳು ಹೈದರಾಬಾದ್ ರಾಜ್ಯವನ್ನು ಪ್ರವೇಶಿಸಿತು.

1956: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಂದು ನೇತಾಜಿ ತನಿಖಾ ಸಮಿತಿಯ ತೀರ್ಮಾನವನ್ನು ಲೋಕಸಭೆಯಲ್ಲಿ ಪ್ರಧಾನಿ ಘೋಷಿಸಿದರು.

1965: ಲಾಹೋರಿನ ಅಗ್ನೇಯ ಭಾಗವಾದ ಬುರ್ಕಿ ಪಟ್ಟಣವನ್ನು ಭಾರತೀಯ ಸೇನೆ ಸೆರೆಹಿಡಿದ ಕಾರಣ ಇಂಡೋ-ಪಾಕಿಸ್ತಾನ ಯುದ್ಧ ನಡೆಯಿತು.

1970: ಫೊರ್ಡ್ ಸಂಸ್ಥೆಯ “ಪಿಂಟೋ” ಕಾರನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.

1995: ಪಂಚಾಯತ್ ಚುನಾವಣೆಯನ್ನು ಚರ್ಚಿಸಲು ರಾಜ್ಯ ಪಂಚಾಯತ್ ಮಂತ್ರಿಯ ಸಭೆಯನ್ನು ಪ್ರಧಾನಿ ಪಿ ವಿ ನರಸಿಂಹ ರಾವ್ ಉದ್ಘಾಟಿಸಿದರು.ಈ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಆಡಳಿತ ಮತ್ತು ಹಣಕಾಸಿನ ಅಧಿಕಾರವನ್ನು ವಿತರಿಸಲಾಯಿತು.

1996: ಯೂನಿಯನ್ ಪೆಸಿಫಿಕ್ ರೈಲುರಸ್ತೆ ದಕ್ಷಿಣ ಪೆಸಿಫಿಕ್ ರೈಲು ರಸ್ತೆ ಅನ್ನು ಖರೀದಿಸಿತು.

2001: ಎರಡು ಪ್ರಯಾಣಿಕ ವಿಮಾನಗಳು ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಗೋಪುರಕ್ಕೆ ಭಯೋತ್ಪಾದಕರು ಅಪಘಾತ ಮಾಡಿದ ಕಾರಣ 2752 ಜನ ಸಾವನ್ನಪ್ಪಿದರು.

2007: ವೆಸ್ಟ್ ಇಂಡಿಯನ್ ಬ್ಯಾಟ್ಸ್ ಮ್ಯಾನ್ ಆಗಿದ್ದ ಕ್ರಿಸ್ ಗೇಲ್ಸ್ ಟಿ-20 ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಶತಕ ಬಾರಿಸಿದ ಮೊದಲ ಆಟಗಾರ.

ಪ್ರಮುಖ ಜನನ/ಮರಣ:

1884: ಭಾರತೀಯ ರಾಜಕಾರಣಿ ಮತ್ತು ಕಾರ್ಯಕರ್ತ ಸುಧಾಮೋಯಿ ಪ್ರಮಾಣಿಕ್ ಜನಿಸಿದರು.

1889: ಓ.ಪಿ.ಸಚಿವ ಮತ್ತು ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಡಾ.ಪಿ.ಸುಬ್ಬರಾಯನ್ ಜನಿಸಿದರು.

1895: ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿನೋಭಾ ಭಾವೆ ಜನಿಸಿದರು.

1911: ಕ್ರಿಕೆಟ್ ಆಟಗಾರ ಲಾಲಾ ಅಮರನಾಥ್ ಅವರು ಜನಿಸಿದರು.

1921: ಭಾರತೀಯ ಪತ್ರಕರ್ತ ಹಾಗೂ ಕವಿ ಸುಬ್ರಮಣ್ಯ ಭಾರತಿ ನಿಧನರಾದರು.

1948: ಪಾಕಿಸ್ತಾನದ ಪಿತಾಮಹ ಎಂದೇ ಖ್ಯಾತರಾಗಿದ್ದ ಮೊಹಮ್ಮದ್ ಅಲಿ ಜಿನ್ನಾ ಅವರು ನಿಧನರಾದರು.

1964: ಕವಿ ಮತ್ತು ವಿಮರ್ಶಕ ಗಜಾನನ್ ಮಾಧವ್ ಮುಕ್ತಿಭೋದ್ ನಿಧನರಾದರು.

1973: ಭಾರತೀಯ ತತ್ವಗುರು ನೀಮ್ ಕರೋಲಿ ಬಾಬಾ ನಿಧನರಾದರು.

1976: ಭಾರತೀಯ ಕ್ರಿಕೆಟ್ ಪಟು ಮುರಳಿ ಕಾರ್ತಿಕ್ ಜನಿಸಿದರು.

1987: ಕವಿ ಮತ್ತು ಶಿಕ್ಷಣ ತಜ್ಞ ಮಹಾದೇವಿ ವರ್ಮ ನಿಧನರಾದರು.