Categories
e-ದಿನ

ಸೆಪ್ಟೆಂಬರ್-13

 

ಪ್ರಮುಖ ಘಟನಾವಳಿಗಳು:

1500: ಪೋರ್ಚುಗೀಸ್ ಪರಿಶೋಧಕ ಮತ್ತು ನಾವಿಕ ಪೆಡ್ರೋ ಆಲ್ವಾರೆಜ್ ಭಾರತದ ಕ್ಯಾಲಿಕಟ್ಟಿಗೆ ಆಗಮಿಸಿ ಭಾರತದಲ್ಲಿ ಮೊದಲ ಯೂರೋಪಿಯನ್ ಕಾರ್ಖಾನೆಯನ್ನು ತೆರೆದರು.

1788: ನ್ಯೂಯಾರ್ಕ್ ನಗರ ಅಮೇರಿಕಾದ ಮೊದಲ ರಾಜಧಾನಿ ಆಯಿತು.

1789: ಅಮೇರಿಕಾದ ಸರ್ಕಾರವು ತನ್ನ ಮೊದಲ ಸಾಲವನ್ನು ಪಡೆಯಿತು.

1881: ಅಮೇರಿಕಾದ ಲೇವಿಸ್ ಹಾರ್ವಡ್ ಲ್ಯಾಟಿಮರ್ ಕಾರ್ಬನ್ ಫಿಲಮೆಂಟ್ ಇರುವ ವಿದ್ಯುತ್ ದೀಪವನ್ನು ಕಂಡುಹಿಡಿದರು ಮತ್ತು ಅದಕ್ಕಾಗಿ ಪೇಟೆಂಟ್ ಪಡೆದರು.

1898: ಚಲನಚಿತ್ರ ಮಾಡಲು ಬಳಸುವ ಸೆಲುಲಾಯಿಡ್ ಛಾಯಾಗ್ರಹಣದ ಪೊರೆಗೆ ಹ್ಯಾನಿಬಲ್ ವಿಲ್ಲಿಸ್ಟನ್ ಗುಡ್ವಿನ್ ಪೇಟೆಂಟ್ ಪಡೆದರು.

1948: ಭಾರತದ ಉಪ ಪ್ರಧಾನ ಮಂತ್ರಿ ವಲ್ಲಭಾಯಿ ಪಟೇಲ್ ಹೈದರಾಬಾದನ್ನು ಭಾರತೀಯ ಒಕ್ಕೂಟದಲ್ಲಿ ಸಂಯೋಜಿಸಲು ಸೈನ್ಯಕ್ಕೆ ಆದೇಶ ನೀಡಿದರು.

1948: ನ್ಯೂಯಾರ್ಕಿನ ನಗರದಲ್ಲಿ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಪ್ರಾರಂಭಿಸಲಾಯಿತು. ಕಲೆಗಳನ್ನು ಪ್ರದರ್ಶಿಸುವಲ್ಲಿ ಪರಿಣತಿ ಪಡೆದ ಮೊದಲ ಸಾರ್ವಜನಿಕ ಶಾಲೆ ಇದು.

1949: ಅಮೇರಿಕಾದ ಲೇಡೀಸ್ ಪ್ರೊಫೆಷನಲ್ ಗಾಲ್ಫ್ ಅಸೋಸಿಯೇಷನ್ ಅನ್ನು ಸ್ಥಾಪಿಸಲಾಯಿತು.

1955: ಸ್ವಿಜರ್ಲ್ಯಾಂಡಿನ ಸಂಶೋಧಕ ಜಾರ್ಜ್ ಡೆ ಮೆಸ್ಟ್ರಾಲ್ “ವೆಲ್ಕ್ರೋ” ಪೇಟೆಂಟ್ ಪಡೆದರು.

1956: ಐಬಿಎಂ ವಿಶ್ವದ ಮೊದಲ ಹಾರ್ಡ್ ಡಿಸ್ಕ್ ಆದ “ಐಬಿಎಂ 305” ಉತ್ಪಾದಿಸಿ ಪರಿಚಯಿಸಿತು. ಇದು 5 ಎಂಬಿಗಳ ದತ್ತಾಂಶವನ್ನು ಸಂಗ್ರಹಿಸಬಹುದಾಗಿತ್ತು.

1971: ವಿಶ್ವ ಹಾಕಿ ಅಸೋಸಿಯೇಷನ್ ರೂಪಿತವಾಯಿತು.

1977: ಮೊದಲ ಬಾರಿಗೆ ಡೀಸಲ್ ಬಳಸಿ ಉಪಯೋಗಿಸಬಹುದಾದ ಮೋಟಾರು ವಾಹನವನ್ನು ಜೆನೆರಲ್ ಮೋಟಾರ್ಸ್ ಪರಿಚಯಿಸಿತು.

1998: ಹ್ಯಾಕರ್ಸ್ ಆಕ್ರಮಣದನಂತರ ನ್ಯೂಯಾರ್ಕ್ ಟೈಮ್ಸ್ ತನ್ನ ವೆಬ್ ಸೈಟ್ ಅನ್ನು ಮುಚ್ಚಿತು.

2000: ವೈದ್ಯಕೀಯ ಸಮುದಾಯ ಮತ್ತು ಹಲವು ರಾಜ್ಯ ಸರ್ಕಾರಗಳಿಂದ ಪ್ರತಿಭಟನೆ ನಡೆದರೂ ಸಹ ಅಯೋಡಿನ್ ಇಲ್ಲದ ಉಪ್ಪಿನ ಬಳಕೆಯನ್ನು ನಿಷೇಧದ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆಯಿತು.

2008: ಭಾರತದ ದೆಹೆಲಿಯಲ್ಲಿ ಬಾಂಬ್ ಸ್ಪೋಟದಿಂದಾಗಿ 30 ಜನ ಸಾವನ್ನಪ್ಪಿ 130 ಜನ ಗಾಯಗೊಂಡರು.

ಪ್ರಮುಖ ಜನನ/ಮರಣ:

1893: ಪ್ರಾರ್ಥನಾ ಸಮಾಜದ ಸಂಸ್ಥಾಪಕರಲ್ಲೊಬ್ಬರಾದ ಮಾಮ ಪರಮಾನಂದ್ ನಿಧನರಾದರು.

1928: ಪ್ರಮುಖ ಹಿಂದಿ ಲೇಖಕ ಶ್ರೀಧರ್ ಪಾಠಕ್ ನಿಧನರಾದರು.

1929: ಭಾರತೀಯ ಕಾರ್ಯಕರ್ತ ಜತಿಂದ್ರ ನಾಥ್ ದಾಸ್ ನಿಧನರಾದರು.

1973: ಭಾರತೀಯ ಕವಿ ಮತ್ತು ತತ್ವಜ್ಞಾನಿ ಸಜ್ಜದ್ ಜಹೀರ್ ನಿಧನರಾದರು.

1975: ಭಾರತೀಯ ಹಾಡುಗಾರ ಮತ್ತು ಸಂಗೀತಶಾಸ್ತ್ರಜ್ಞ ಮುಡಿಕೊಂಡನ್ ವೆಂಕಟರಮಣ ಐಯ್ಯರ್ ನಿಧನರಾದರು.

1980: ಭಾರತೀಯ ಫೀಲ್ಡ್ ಹಾಕಿ ಆಟಗಾರ ವಿರೆನ್ ರಸ್ಕ್ವಿನ್ ಜನಿಸಿದರು.

1984: ಬ್ರಹ್ಮಾನಂದ್ ಸಂಸ್ಥೆಗಳ ಸಂಸ್ಥಾಪಕ ಸ್ವಾಮಿ ಬ್ರಹ್ಮಾನಂದ ನಿಧನರಾದರು.

1997: ಕಲ್ಕತ್ತಾದಲ್ಲಿ ರಾಜ್ಯ ಗೌರವಗಳೊಂದಿಗೆ ಮದರ್ ಥೆರೆಸಾ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

2012: ಭಾರತದ 21ನೇ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರ ನಿಧನರಾದರು.