Categories
e-ದಿನ

ಸೆಪ್ಟೆಂಬರ್ 14

 

ಪ್ರಮುಖ ಘಟನಾವಳಿಗಳು:

1682: ವೇಲ್ಸಿನ ಅತ್ಯಂತ ಹಳೆಯ ಶಾಲೆಗಳಲೊಂದಾದ ಬಿಷಪ್ ಘರ್ ಶಾಲೆ ಸ್ಥಾಪನೆಯಾಯಿತು.

1820: ಕಲ್ಕತ್ತಾದ ಅಗ್ರಿ-ಹಾರ್ಟಿಕಲ್ಚರ್ ಗಾರ್ಡನ್ ಕಾರ್ಯ ಆರಂಭಿಸಿತು.

1848: ಅಲೆಕ್ಸಾಂಡರ್ ಸ್ಟೀವರ್ಟ್ ಅಮೇರಿಕಾದಲ್ಲಿ ಮೊದಲ ಡಿಪಾರ್ಟ್ ಮೆಂಟಲ್ ಸ್ಟೋರ್ ತೆರೆದರು.

1886: ಜಾರ್ಜ್ ಕೆ ಆಂಡ್ರಿಸನ್ ಟೈಪ್ ರೈಟರ್ ರಿಬ್ಬನ್ನಿಗೆ ಪೇಟೆಂಟ್ ಪಡೆದರು.

1949: ಮೂರು ದಿನಗಳ ಚರ್ಚೆಯ ನಂತರ ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆಯೆಂದು ಸಂಸತ್ತು ಘೋಷಿಸಿತು.

1951: ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಬೀಜರಹಿತ ಕಲ್ಲಂಗಡಿಯನ್ನು ಬೆಳೆಸಲಾಯಿತು.

1951: ಯೂರೋಪಿನ ಅತಿ ದೊಡ್ಡ ತೈಲ ಸಂಸ್ಕರಣಾಗಾರವು ಫಾಲಿಯಲ್ಲಿ ತೆರೆಯಲಾಯಿತು.

1953: ಆಂಧ್ರಪ್ರದೇಶವನ್ನು ಸ್ಥಾಪಿಸಲಾಯಿತು. ಕರ್ನೂಲ್ ಬದಲಿಗೆ ಹೈದರಾಬಾದನ್ನು ರಾಜಧಾನಿಯನ್ನಾಗಿ ಮಾಡಲಾಯಿತು.

1960: ಇರಾಕ್, ಇರಾನ್, ಕುವೈಟ್ ಮತ್ತು ಸೌದಿ ಅರೇಬಿಯಾ ಸೇರಿ ಒಪೆಕ್ (ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆ) ಅನ್ನು ರೂಪಿಸಿತು.

1965: ಪಾಕಿಸ್ತಾನ ಏರ್ಫೋರ್ಸ್ ಕಲ್ಕತ್ತಾ ಮತ್ತು ಆಗರ್ತಲಾ ನಾಗರಿಕ ವಿಮಾನ ನಿಲ್ದಾಣದ ಮೇಲೆ ಬಾಂಬನ್ನು ಸ್ಪೋಟಿಸಿತು.

1991: ಅಸ್ಸಾಂ ಅಲ್ಲಿ ಯು.ಎಲ್.ಎಫ್.ಎ ಉಗ್ರರ ವಿರುದ್ಧ ಸೈನ್ಯ “ಆಪರೇಷನ್ ರೈನೋ” ಕಾರ್ಯಾಚರಣೆ ಆರಂಭಿಸಿತು.

1992: ಸತತ 3 ದಿನಗಳ ಭಾರಿ ಮಳೆಯ ಕಾರಣ ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿ ಸುಮಾರು 2500 ಜನ ಮೃತಾದರು.

1997: ಅಹಮದಾಬಾದ್ ಮತ್ತು ಹವರಾ ಎಕ್ಸ್ಪ್ರೆಸ್ ರೈಲಿನ 4 ಭೋಗಿಗಳು ಹಳಿ ತಪ್ಪಿದ ಕಾರಣ 78 ಜನ ಸತ್ತು 250 ಜನ ಗಾಯಗೊಂಡರು.

1997: ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ ವಿಶಾಖಪಟ್ಟಣದ ಸಂಸ್ಕರಣಾಗಾರದಲ್ಲಿ ಸ್ಪೋಟಗೊಂಡು ಶೇಖರಣಾ ಟ್ಯಾಂಕುಗಳನ್ನು ನಾಶಪಡಿಸಿತು. ಸುಮಾರು 51 ಜನ ಮೃತರಾದರು.

1998: 23 ವರ್ಷಗಳಲ್ಲಿ ಮೈಕ್ರೋ ಸಾಫ್ಟ್ ವಿಶ್ವದಲ್ಲೇ ಅತಿ ದೊಡ್ಡ ಸಂಸ್ಥೆಯಾಯಿತು.

ಪ್ರಮುಖ ಜನನ/ಮರಣ:

1774: ಭಾರತದ ಮೊದಲ ಗವರ್ನರ್ ಜೆನರಲ್ ಬೆಂಟಿಕ್ ಜನಿಸಿದರು.

1868: ಸಂಸ್ಕೃತ ವ್ಯಾಕರಣದ ಸಾಹಿತಿ ಮತ್ತು ಗುರು ಸ್ವಾಮಿ ವಿರ್ಜಿನಂದ ನಿಧನರಾದರು.

1910: ಮಹಾರಾಷ್ಟ್ರದ ವ್ಯಾಪಾರಿ ಮತ್ತು ಕೈಗಾರಿಕೋಧ್ಯಮಿ ಡೆನ್ನಿಸ್ ಲಾರೆನ್ಸ್ ಎಮೊ ಜನಿಸಿದರು.

1932: ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ್ತಿ ದುರ್ಗಾ ಭಾಯಿ ಜನಿಸಿದರು.

1963: ಕ್ರಿಕೆಟ್ ಆಟಗಾರ ಮತ್ತು ಕೋಚ್ ರಾಬಿನ್ ಸಿಂಗ್ ಜನಿಸಿದರು.

1971: ಖ್ಯಾತ ಬೆಂಗಾಲಿ ಸಾಹಿತಿ ತಾರಾಶಂಕರ್ ಭಂಡೋಪಾಧ್ಯಾಯ ನಿಧನರಾದರು.

1992: ಭಾರತೀಯ ಕ್ರಿಕೆಟ್ ಆಟಗಾರ ಎಸ್.ಎ.ಬ್ಯಾನರ್ಜಿ ನಿಧನರಾದರು.