Categories
e-ದಿನ

ಸೆಪ್ಟೆಂಬರ್ 20

 

ಪ್ರಮುಖ ಘಟನಾವಳಿಗಳು:

1839: ನೆಧರ್ಲ್ಯಾಂಡಿನಲ್ಲಿ ಮೊದಲ ರೈಲು ರಸ್ತೆ ತೆರೆಯಲಾಯಿತು

1848: ಅಮೇರಿಕನ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ ಅನ್ನು ರಚಿಸಲಾಯಿತು.

1857: 1857ರ ಭಾರತೀಯ ದಂಗೆಯು ಈಸ್ಟ್ ಇಂಡಿಯಾ ಕಂಪನಿಗೆ ನಿಷ್ಟಾವಂತ ಸೈನಿಕರು ದೆಹೆಲಿಯನ್ನು ವಶಪಡಿಸಿಕೊಳ್ಳುವುದರೊಂದಿಗೆ ಮುಕ್ತಾಯವಾಯಿತು.

1859: ಜಾರ್ಜ್ ಸಿಂಪ್ಸನ್ ವಿದ್ಯುತ್ ಶೇಣಿಗೆ ಪೇಟೆಂಟ್ ಪಡೆದರು.

1878: ದಿ ಹಿಂದು, ಆಂಗ್ಲ ಭಾಷೆಯ ದೈನಂದಿನ ದಿನಪತ್ರಿಕೆಯಾಗಿ ಮೊದಲ ಬಾರಿಗೆ ಪ್ರಕಟವಾಯಿತು.

1891: ಅಮೇರಿಕಾದ ಸ್ಪ್ರಿಂಗ್ ಫೀಲ್ಡಿನಲ್ಲಿ ಮೊದಲ ಗ್ಯಾಸೊಲೀನ್ ಚಾಲಿತ ಕಾರನ್ನು ಪರಿಚಯಿಸಲಾಯಿತು.

1932: ಅಸ್ಪೃಶ್ಯತೆಯ ವಿರುದ್ಧ ಮಹಾತ್ಮಾ ಗಾಂಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

1954: ಮೊದಲ ಕಂಪ್ಯೂಟರ್ ಪ್ರೋಗ್ರಾಮ್ ಆದ ಫೋಟ್ರಾನ್ ಚಲಾಯಿಸಲಾಯಿತು.

1989: ಐಪಿಕೆಎಫ್ ಶ್ರೀಲಂಕಾದಲ್ಲಿ ಎಲ್ ಟಿ ಟಿ ಇ ವಿರುದ್ಧ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತು. ಎಲ್ ಟಿ ಟಿ ಇ ಪ್ರತಿಯಾಗಿ ಭಾರತೀಯ ಶಸ್ತ್ರಾಸ್ತ್ರ ಪಡೆಗಳ ವಿರುದ್ಧ ಎಲ್ಲಾ ಕಾರ್ಯಾಚರಣೆಯನ್ನು ನಿಲ್ಲಿಸಿತು.

1993: ಪ್ರಧಾನಿ ನರಸಿಂಹ ರಾವ್ ಟೆಹರಾನಿನಲ್ಲಿ ಮೂರು ದಿನಗಳ ಭೇಟಿಗಾಗಿ ಆಗಮಿಸಿದರು.

2002: ಭಾರತದ ಪಶ್ಚಿಮ ಗುಜರಾತಿನಲ್ಲಿ ಕೋಮುಘರ್ಷಣೆ ನಡೆದಾಗ ಗುಂಪುಗಳ ಚದುರಿಸಲು ಪೋಲಿಸ್ ಹಾರಿಸಿದ ಗುಂಡಿನಿಂದ ಒಬ್ಬ ಸತ್ತು 5 ಮಂದಿ ಗಾಯಗೊಂಡರು.

2004: ಭಾರತದ ಬಾಹ್ಯಾಕಾಶ ಸಂಸ್ಥೆಯು ರಾಷ್ಟ್ರದ ಮೊದಲ ಶೈಕ್ಷಣಿಕ ಸೇವೆಗಳಿಗೆ ಬಳಸಲು ಉಪಗ್ರಹವನ್ನು ಯಶಸ್ವಿಯಾಗಿ ಆರಂಭಿಸಿತು.

ಪ್ರಮುಖ ಜನನ/ಮರಣ:

1819: ಗೋವಾದ ಕ್ರಾಂತಿಕಾರಿ ವಿಜ್ಞಾನಿ ಜೋಸ್ ಕಸ್ಟೋಡಿಯೋ ಫರಿಯಾ ನಿಧನರಾದರು.

1881: ಖ್ಯಾತ ಮರಾಠಿ ಲೇಖಕ ಪಂಡಿತ್ ಕಾಶಿನಾಥ್ ಬಾಬಾಜಿ ಜನಿಸಿದರು.

1911: ಭಾರತೀಯ ತತ್ವಜ್ಞಾನಿ ಮತ್ತು ಕಾರ್ಯಕರ್ತ ಶ್ರೀರಾಮ್ ಶರ್ಮ ಜನಿಸಿದರು.

1923: ಭಾರತೀಯ ನಟ, ನಿರ್ಮಾಪಕ ಅಕ್ಕಿನೇನಿ ನಾಗೇಶ್ವರ ರಾವ್ ಜನಿಸಿದರು.

1934: ಭಾರತೀಯ ವ್ಯಂಗ್ಯಚಿತ್ರಕಾರ, ಪತ್ರಕರ್ತ, ಮತ್ತು ಕಾರ್ಯಕರ್ತ ರಜಿಂದರ್ ಪುರಿ ಜನಿಸಿದರು.

1940: ಪತ್ರಕರ್ತ ಮತ್ತು ಮುದ್ರಣಾಲಯದ ನಿರ್ದೇಶಕ ಸರೋಜ್ ಲಾಲ್ವಾನಿ ಜನಿಸಿದರು.

1946: ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ಮಾರ್ಕಂಡೇಯಕಾಟ್ಜು ಜನಿಸಿದರು.

1949: ಭಾರತೀಯ ನಿರ್ದೇಶಕ, ನಿರ್ಮಾಪಕ, ಮತ್ತು ಚಿತ್ರರಚನೆಕಾರ ಮಹೇಶ್ ಭಟ್ ಜನಿಸಿದರು.

2015: ಭಾರತೀಯ ಉದ್ಯಮಿ ಜಗ್ಮೋಹನ್ ದಾಲ್ಮಿಯ ಅವರು ನಿಧನರಾದರು.