ಪ್ರಮುಖ ಘಟನಾವಳಿಗಳು:

 • 1789: ಅಮೇರಿಕಾದ ಅಟಾರ್ನಿ ಜೆನರಲ್ ಕಚೇರಿಯನ್ನು ಸ್ಥಾಪಿಸಲಾಯಿತು.

 • 1789: ಅಮೇರಿಕಾದ ಕಾಂಗ್ರೆಸ್ ಅಂಚೆ ಕಚೇರಿಯನ್ನು ಸ್ಥಾಪಿಸಿತು.

 • 1853: ಲಂಡನ್ನಿನ ಮೊದಲ ಪ್ರಾಂತೀಯ ದಿನಪತ್ರಿಕೆ ಆರಂಭವಾಯಿತು.

 • 1889: ಅಲೆಕ್ಸಾಂಡರ್ ಡೇ ಡಯಲ್ ಟೈಮ್ ರೆಕಾರ್ಡರ್ ಅನ್ನು ಪೇಟೆಂಟ್ ಪಡೆದರು.

 • 1924: ಬಾಸ್ಟನ್ನಿನ ಮ್ಯಾಸಾಚುಸೆಟ್ಸ್ ವಿಮಾನ ನಿಲ್ದಾಣ ತೆರೆಯಲಾಯಿತು.

 • 1932: ಗಾಂಧಿ ಮತ್ತು ಬಿ.ಆರ್.ಅಂಬೇಡ್ಕರ್ ಪೂನಾ ಒಪ್ಪಂದಕ್ಕೆ ಒಪ್ಪಿಗೆ ನೀಡಿದರು, ಇದರ ಅನುಸಾರಅಸ್ಪೃಷ್ಯರಿಗೆ ಭಾರತೀಯ ಪ್ರಾಂತೀಯ ಶಾಸಕಾಂಗಗಳಲ್ಲಿ ಸ್ಥಾನಗಳನ್ನು ಮೀಸಲಿಡಲಾಯಿತು.

 • 1948: ಹೊಂಡಾ ಮೋಟಾರ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

 • 1979: ಮೊದಲ ಕಂಪ್ಯೂಟರ್ ಮಾಹಿತಿ ಸೇವೆಯಾಗಿ ಕಂಪ್ಯೂಸರ್ವ್ ಕಾರ್ಯಾಚರಣೆಯನ್ನು ಆರಂಭಿಸಿತು.

 • 2002: ಗುಜರಾತಿನ ಗಾಂಧಿನಗರದಲ್ಲಿನ ಅಕ್ಷರಧಾಮ ದೇವಸ್ಥಾನದ ಮೇಲೆ ಭಯೋತ್ಪಾದಕರು ದಾಳಿ ಮಾಡಿದರು.

 • 2014: ಮಾರ್ಸ್ ಕಕ್ಷಗಾಮಿ ಮಿಷನ್ (MOM) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೂಲಕ ಭೂ ಕಕ್ಷೆಗೆ ಮಂಗಳ ಗ್ರಹದ ಕಕ್ಷೆಯಲ್ಲಿ ಯಶಸ್ವಿಯಾಗಿ ಸೇರಿಸಲ್ಪಟ್ಟಿತು.

ಪ್ರಮುಖ ಜನನ/ಮರಣ:

 • 1861: ಭಾರತೀಯ ಕಾರ್ಯಕರ್ತೆ, ಸ್ವಾಂತಂತ್ರ ಹೋರಾಟಗಾರ್ತಿ ಭಿಕಾಜಿ ಕಾಮ ಜನಿಸಿದರು.

 • 1918: ಭಾರತ ಮೂಲದ ಅಮೇರಿಕನ್ ಸೈದ್ಧಾಂತಿಕ ರಸಾಯನಶಾಸ್ತ್ರಜ್ಞ ದಿವಾರ್-ಚಾಟ್-ಡುನ್ಕಾನ್ಸನ್ ಮಾದರಿಯನ್ನು ಅಭಿವೃದ್ಧಿ ಪಡಿಸಿದ ಮೈಕಲ್ ಜೆ.ಎಸ್.ದಿವಾರ್ ಜನಿಸಿದರು.

 • 1925: ಭಾರತೀಯ ಮನಃಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ಔತಾರ್ ಸಿಂಗ್ ಪೈಂತಲ್ ಜನಿಸಿದರು.

 • 1936: ಭಾರತೀಯ ವ್ಯಾಪಾರಿ ಸಿವಂತಿ ಆದಿತನ್ ಜನಿಸಿದರು.

 • 1950: ಕ್ರಿಕೆಟ್ ಆಟಗಾರ ಮೊಹಿಂದರ್ ಅಮರ್ನಾಥ್ ಜನಿಸಿದರು.

 • 1972: ತೆಲಗು ಚಿತ್ರಕಥೆಗಾರ, ನಿರ್ದೇಶಕ ಶ್ರೀನು ವೈತ್ಲಾ ಜನಿಸಿದರು.

 • 1984: ಫುಟ್ ಬಾಲ್ಆಟಗಾರ ಅನ್ವರ್ ಅಲಿ ಜನಿಸಿದರು.

 • 2002: ಭಾರತೀಯ ಭೌತವಿಜ್ಞಾನಿ ಮತ್ತು ಪವನಶಾಸ್ತ್ರಜ್ಞ ಭಾರತದ ದೂರದ ಸಂವೇದನೆಯ ಪಿತಾಮಹ ಎಂದು ಪರಿಗಣಿಸಲಾದ ಪಿಶಾರೋತ್ ರಾಮ ನಿಧನರಾದರು.

 • 2006: ಭರತನಾಟ್ಯ ಪ್ರವೀಣೆ, ನಟಿ ಪದ್ಮಿನಿ ನಿಧನರಾದರು.

 • 2012: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟ ಸುರೇಂದ್ರನಾಥ್ ತಿಲಕನ್ ನಿಧನರಾದರು.