Categories
e-ದಿನ

ಸೆಪ್ಟೆಂಬರ್-29

 

ಪ್ರಮುಖ ಘಟನಾವಳಿಗಳು:

1708: ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆ ಮತ್ತು ನ್ಯೂ ಈಸ್ಟ್ ಇಂಡಿಯಾ ಸಂಸ್ಥೆ ವಿಲೀನವಾಯಿತು.

1789: ಅಮೇರಿಕಾದ ಯುದ್ಧ ಇಲಾಖೆಯು ಸೈನ್ಯವನ್ನು ಸ್ಥಾಪಿಸಿತು.

1911: ಟರ್ಕಿ ದೇಶದ ಮೇಲೆ ಇಟಲಿಯು ಯುದ್ದವನ್ನು ಘೋಷಿಸಿತು.

1916: ಅಮೇರಿಕಾದ ತೈಲ ಉದ್ಯಮಿ ಜಾನ್ ಡಿ ರಾಕ್ಫೆಲ್ಲರ್ ಪ್ರಪಂಚದ ಮೊದಲ ಬಿಲಿಯನೇಯರ್ ಆದರು.

1923: ಗೋಲ್ಡನ್ ಗೇಟ್ ಪಾರ್ಕಿನಲ್ಲಿರುವ ಸ್ಟೀನ್ ಹಾರ್ಟ್ ಅಕ್ವೇರಿಯಂ ಸಾರ್ವಜನಿಕರಿಗೆ ತೆರೆಯಲಾಯಿತು.

1930: ನ್ಯೂಯಾರ್ಕ್ ಸಿಟಿ ಕಾಲೇಜು ರೇಡಿಯೋ ಜಾಹಿರಾತಿನ ಮೊದಲ ಕೋರ್ಸ್ ಅನ್ನು ಆರಂಭಿಸಿತು.

1938: ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ದಾಖಲೆ ಸಂಗ್ರಹದ ಕೋರ್ಸ್ ಆರಂಭಿಸಲಾಯಿತು.

1950: ಟೆಲಿಫೋನ್ ಕಾಲ್ ಉತ್ತರಿಸುವ ಯಂತ್ರವನ್ನು ಬೆಲ್ ಲ್ಯಾಬೋರೇಟರಿಸ್ ಅವರಿಂದ ರಚಿಸಲಾಯಿತು.

1959: ಆರತಿ ಸಾಹಾ ಇಂಗ್ಲಿಷ್ ಚ್ಯಾನಲ್ ಈಜಿದ ಏಷಿಯಾದ ಮೊದಲ ಮಹಿಳೆಯಾದರು.

1967: ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ವಿಶ್ವ ಹಣಕಾಸು ವ್ಯವಸ್ಥೆಯ ಸುಧಾರಣೆ ಮಾಡಿತು.

1990:ವಾಷಿಂಗ್ಟನ್ ನ್ಯಾಷನಲ್ ಕ್ಯಾಥೆಡ್ರಲ್ ನಿರ್ಮಾಣ 83 ವರ್ಷಗಳಿಗೆ ಪೂರ್ಣಗೊಂಡಿತು.

2010: ಆಧಾರ್ ಕಾರ್ಡ್ ಯೋಜನೆಯನ್ನು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಹಾರಾಷ್ಟ್ರದ ನಂದೂರ್ಬರ್ ಜಿಲ್ಲೆಯಲ್ಲಿ ಉದ್ಘಾಟಿಸಿದರು.

ಪ್ರಮುಖ ಜನನ/ಮರಣ:

1928: ಭಾರತದ ಮೊದಲ ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರ ಜನಿಸಿದರು.

1929: ಜಮ್ಮು ಕಶ್ಮೀರದ ಪ್ರಮುಖ ರಾಜಕಾರಣಿ ಸೈಯದ್ ಅಲಿ ಶಾಹ್ ಗೀಲಾನಿ ಜನಿಸಿದರು.

1932: ಹಿಂದಿ ಚಲನಚಿತ್ರಗಳ ಹಾಸ್ಯ ನಟ ಮೆಹೆಮೂದ್ ಜನಿಸಿದರು.

1947: ಭಾರತದ 38ನೇ ಮುಖ್ಯ ನ್ಯಾಯಮೂರ್ತಿ ಎಸ್.ಹೆಚ್.ಕಪಾಡಿಯಾ ಜನಿಸಿದರು.

1957: ಪೆಟ್ರೊಲಜಿ, ಮೈನೆರೊಲಜಿ ಮತ್ತು ಭೂವಜ್ಞಾನಿ ಆನಂದ್ ಮೋಹನ್ ಜನಿಸಿದರು.

1986: ಭಾರತದ ಮೊದಲ ಸೌರ ಶಕ್ತಿ ಚಾಲಿತ ಕಾರಿನ ಸೃಷ್ಟಿಕರ್ತ ಅಂಕುರ್ ಶರ್ಮ ಜನಿಸಿದರು.

2000: ಭಾರತೀಯ ಪತ್ರಕರ್ತ ಶಾಪುರ್ ಖಾರೆಗಾತ್ ನಿಧನರಾದರು.

2004: ಮಲಯಾಳದ ಕವಯಿತ್ರಿ ಬಾಲಮಣಿ ಅಮ್ಮ ನಿಧನರಾದರು.

2008: ಹೈದರಾಬಾದಿನ ರಾಜಕಾರಣಿ ಸುಲ್ತಾನ್ ಸಲಾಹುದ್ದಿನ್ ಓವೈಸಿ ನಿಧನರಾದರು.