Categories
e-ದಿನ

ಸೆಪ್ಟೆಂಬರ್-3

 

ಪ್ರಮುಖ ಘಟನಾವಳಿಗಳು:

1609: ಮ್ಯಾನ್ ಹ್ಯಾಟನ್ ದ್ವೀಪವನ್ನು ಹೆನ್ರಿ ಹಡ್ಸನ್ ಕಂಡುಹಿಡಿದರು.

1833; ಮೊದಲ ದೈನಂದಿನ ಪತ್ರಿಕೆಯಾದ ನ್ಯೂಯಾರ್ಕ್ ಸನ್ ಪ್ರಕಟಣೆ ಮಾಡಲಾಯಿತು.

1912: ವಿಶ್ವದ ನೌಕಾಪಡೆಗೆ ಆಹಾರವನ್ನು ಸರಬರಾಜು ಮಾಡುವ ಸಲುವಾಗಿ ವಿಶ್ವದ ಮೊದಲ ಕ್ಯಾನರಿ ಪ್ರಾರಂಭವಾಯಿತು.

1921: ಬೆಲ್ಜಿಯಮ್ಮಿನ ಕಮ್ಮ್ಯುನಿಸ್ಟ್ ಪಕ್ಷವಾದ ಕೆ.ಪಿ.ಬಿ ರೂಪಿಸಲಾಯಿತು.

1940: ಮೊದಲ ಹೈಡೆಫಿನೆಷನ್ ಬಣ್ಣ ಟಿವಿಯನ್ನು ಪ್ರದರ್ಶಿಸಲಾಯಿತು.

1953: ಮಾನವ ಹಕ್ಕುಗಳ ಮೇಲಿನ ಯೂರೋಪಿಯನ್ ಒಪ್ಪಂದವು ಜಾರಿಗೆ ತರಲಾಯಿತು.

1967: ಸ್ವೀಡನ್ನಿನಲ್ಲಿ ವಾಹನಗಳನ್ನು ರಸ್ತೆಯ ಬಲ ಭಾಗದಲ್ಲಿ ಚಾಲನೆ ಮಾಡಲು ಪ್ರಾರಂಭಿಸಲಾಯಿತು.

1984: ದಕ್ಷಿಣ ಆಫ್ರಿಕಾ ಸಂವಿಧಾನವನ್ನು ಅಳವಡಿಸಿಕೊಂಡಿತು.

1994: ಐಟಿಸಿ, ಐಓಸಿ ಮತ್ತು ಐಟಿಡಿಸಿ ಸೇರಿದಂತೆ 21 ಪಬ್ಲಿಕ್ ಸೆಕ್ಟರ್ ಯೂನಿಟ್ ಗಳಲ್ಲಿ ಸರ್ಕಾರಿ ಹಿಡುವಳಿಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿತು.

1997: ಮಧ್ಯಪ್ರದೇಶದ ಉಚ್ಚ ನ್ಯಾಯಾಲವು ಕಾಲೇಜಿನಲ್ಲಿ ರಾಗಿಂಗ್ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಹುಡುಗಿಯ ಕುಟುಂಬದವರಿಗೆ 50,000 ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿತು.

1999: ಕಾರ್ಗಿಲ್ ಘರ್ಷಣೆಯ ನಂತರ ಭಾರತ ಮಿಲಿಟರಿ ಆಧುನಿಕರಣದ ಒಂದು ಹೊಸ ಹಂತವನ್ನು ಪ್ರಾರಂಭಿಸಿತು.

2013: ಮೈಕ್ರೋಸಾಫ್ಟ್ ಕಂಪೆನಿ ನೋಕಿಯಾ ಸಂಸ್ಥೆಯನ್ನು 7.2 ಬಿಲಿಯನ್ನಿಗೆ ಖರೀದಿಸಿತು.

ಪ್ರಮುಖ ಜನನ/ಮರಣ:

1905: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮುಖಂಡ ಕಮಲಾಪತಿ ತ್ರಿಪಾಠಿ ಜನಿಸಿದರು.

1953: ಖ್ಯಾತ ತಬಲಾ ವಾದಕ ಲಕ್ಷ್ಮಣ್ ರಾವ್ ಪರ್ವತ್ಕರ್ ನಿಧನರಾದರು.

1956: ಭಾರತೀಯ ನಟ ಮತ್ತು ನಿರ್ದೇಶಕ ಜೇಸುದಾಸ್ ಗುಪ್ತ ಜನಿಸಿದರು.

1971: ಮ್ಯಾನ್ ಬುಕ್ಕರ್ ಪ್ರಶಸ್ತಿ ವಿಜೇತ ಲೇಖಕ ಕಿರಣ್ ದೇಸಾಯಿ ಜನಿಸಿದರು.

1974: ಭಾರತೀಯ ಕ್ರಿಕೆಟ್ ಆಟಗಾರ ರಾಹುಲ್ ಸಾಂಘ್ವಿ ಜನಿಸಿದರು.

1997: ಪ್ರಸಿದ್ಧ ಗೀತರಚನೆಕಾರ ಮತ್ತು ಪ್ರಸಿದ್ಧ ಕವಿ ಅಂಜನ್ (ಲಾಲ್ಜಿ ಪಾಂಡೆ) ನಿಧನರಾದರು.

2014: ಭಾರತದ 14ನೇ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಎ.ಪಿ.ವೆಂಕಟೇಶ್ವರನ್ ನಿಧನರಾದರು.