Categories
e-ದಿನ

ಸೆಪ್ಟೆಂಬರ್-30

 

ಪ್ರಮುಖ ಘಟನಾವಳಿಗಳು:

1452: ಮೊದಲ ಪುಸ್ತಕ ಜೊಹಾನ್ ಗುಟ್ಟೆನ್ ಬರ್ಗಿನ ಬೈಬಲ್ ಪ್ರಕಟಿಸಲಾಯಿತು.

1791: ಪ್ಯಾರಿಸಿನಲ್ಲಿನ ರಾಷ್ಟ್ರೀಯ ಸಂವಿಧಾನ ಸಭೆಯನ್ನು ರದ್ದು ಮಾಡಲಾಯಿತು.

1841: ಸ್ಟೇಪ್ಲರಿಗಾಗಿ ಸ್ಯಾಮುಯೆಲ್ ಸ್ಲೊಕಂ ಪೇಟೆಂಟ್ ಪಡೆದರು.

1846: ರೋಗಿಗೆ ಈಥರ್ ಅನ್ನು ನೀಡಿದ ನಂತರ ಡಾ.ವಿಲಿಯಂ ಮಾರ್ಟನ್ ನೋವು ರಹಿತ ಹಲ್ಲಿನ ಶಸ್ತ್ರಚಿಕಿತ್ಸೆ ಮಾಡಿದರು.

1882: ಆಪೆಲ್ಟನ್ನಿನಲ್ಲಿ ವಿಶ್ವದ ಮೊದಲ ಜಲವಿದ್ಯುತ್ ಸ್ಥಾವರದ ಕಾರ್ಯಾಚರಣೆ ಆರಂಭವಾಯಿತು.

1898: ನ್ಯೂಯಾರ್ಕ ನಗರವನ್ನು ಸ್ಥಾಪಿಸಲಾಯಿತು.

1944: ಡಚ್ ಜೆನೆರಲ್ ಮೈನ್ ಕೆಲಸಗಾರರ ಒಕ್ಕೂಟ ರೂಪಗೊಂಡಿತು.

1967: ಫೈನ್ ಆರ್ಟ್ ಪ್ಯಾಲೆಸ್ ಮತ್ತೆ ತೆರೆಯಲಾಯಿತು.

1970: ನ್ಯೂ ಅಮೇರಿಕನ್ ಬೈಬಲ್ ಪ್ರಕಟನೆಯಾಯಿತು.

1980: ಇಸ್ರೇಲ್ ತನ್ನ ನೂತರ ಕರೆನ್ಸಿಯಾದ ಶೇಕೆಲ್ ಅನ್ನು ಪೌಂಡ್ ಬದಲಾಗಿ ವಿತರಿಸಿತು.

1993: ಮಹಾರಾಷ್ಟ್ರದ ಲಾತೂರಿನಲ್ಲಿ ಭೂಕಂಪದಲ್ಲಿ 20,000 ಜನರು ಸಾವನ್ನಪ್ಪಿದರು.

ಪ್ರಮುಖ ಜನನ/ಮರಣ:

1828: ಕ್ರಿಯಾ ಯೋಗದ ಯೋಗ ವಿಜ್ಞಾನ ಪ್ರತಿಪಾದಿಸಿದ ಯೋಗಿರಾಜ್ ಎಂದೇ ಖ್ಯಾತಿ ಪಡೆದ ಶ್ಯಾಮ ಚರಣ್ ಲಾಹಿರಿ ಜನಿಸಿದರು.

1881: ಅಣ್ಣಮಲೈ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ರಾಜಾ ಅಣ್ಣ ಮಲೈ ಚೆಟ್ಟಿಯಾರ್ ಜನಿಸಿದರರು.

1900: ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಂ.ಸಿ.ಚಾಗ್ಲಾ ಜನಿಸಿದರು.

1922: ಭಾರತೀಯ ಚಿತ್ರಗಳ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಹೃಷಿಕೇಶ್ ಮುಖರ್ಜಿ ಜನಿಸಿದರು.

1940: ಹಿಂದಿ ಚಿತ್ರಗಳ ಸಂಗೀತ ಸಂಯೋಜಕ ಪ್ಯಾರೆಲಾಲ್ ರಾಮ್ ಪ್ರಸಾದ್ ಶರ್ಮ ಜನಿಸಿದರು.

1941: ಭಾರತೀಯ ಶಿಕ್ಷಣತಜ್ಞ ಮತ್ತು 5ನೇ ಕಾಮನ್ ವೆಲ್ತ್ ಸೆಕ್ರೆಟರಿ ಜೆನರಲ್ ಕಮಲೇಶ್ ಶರ್ಮ ಜನಿಸಿದರು.

1947: ಜೆ.ಎಂ.ಫೈನಾನ್ಷಿಯಲ್ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕ ನಿಮೇಶ್ ಕಂಪನಿ ಜನಿಸಿದರು.

1961: ಭಾರತೀಯ ಕ್ರಿಕೆಟ್ ಆಟಗಾರ ಚಂದ್ರಕಾಂತ್ ಪಂಡಿತ್ ಜನಿಸಿದರು.

1972: ಹಿಂದಿ ಖ್ಯಾತ ಹಿನ್ನಲೆ ಗಾಯಕ ಶಾನ್ ಜನಿಸಿದರು.

2014: ರಾಜಕಾರಣಿ ಮೌಲ್ವಿ ಇಫ್ತಿಕಾರ್ ಹುಸ್ಸೇನ್ ಅನ್ಸಾರಿ ನಿಧನರಾದರು.