Categories
e-ದಿನ

ಸೆಪ್ಟೆಂಬರ್-5

 

ಪ್ರಮುಖ ಘಟನಾವಳಿಗಳು:

1612: ಈಸ್ಟ್ ಇಂಡಿಯಾ ಸಂಸ್ಥೆಯ ನೌಕಾಪಡೆಯನ್ನು ಸ್ಥಾಪಿಸಲಾಯಿತು.

1786: ಮಾಂಟ್ಪ್ಲೈಸಿರ್ ಸೆರಾಮಿಕ್ ಫ್ಯಾಕ್ಟರಿ ಸ್ಕ್ಯಾರ್ಬೀಕ್ ಬೆಲ್ಜಿಯಮ್ಮಿನಲ್ಲಿ ತೆರೆಯಲಾಯಿತು.

1838: ನೆದರ್ನ್ಯಾಂಡಿನ ಉಟ್ರೆಕ್ಟಿನಲ್ಲಿ ಕೇಂದ್ರ ವಸ್ತು ಸಂಗ್ರಹಾಲಯ ತೆರೆಯಲಾಯಿತು.

1839: ಮೊದಲ ಓಪಿಯಂ ಯುದ್ಧ ಚೀನಾದಲ್ಲಿ ಆರಂಭವಾಯಿತು.

1844: ಮಿನ್ನೇಸೋಟಾ ಮೆಸಬೀ ಗುಡ್ಡದಲ್ಲಿ ಕಬ್ಬಿಣದ ಅದಿರನ್ನು ಪತ್ತೆ ಮಾಡಲಾಯಿತು.

1882: ನ್ಯೂಯಾರ್ಕಿನಲ್ಲಿ ಮೊದಲ ಕಾರ್ಮಿಕ ದಿನದ ಪರೇಡಿನಲ್ಲಿ 10,000 ಕಾರ್ಮಿಕರು ಪಾಲುಗೊಂಡರು.

1885: ಮೊದಲ ಗ್ಯಾಸೋಲೀನ್ ಪಂಪನ್ನು ಗ್ಯಾಸೊಲೀನ್ ವ್ಯಾಪಾರಿಗೆ ತಲುಪಿಸಲಾಯಿತು.

1889: ಜರ್ಮನ್ ದೇಶದ ಕ್ರಿಸ್ಟೀನ್ ಹಾರ್ಡ್ತ್ ಮೊದಲ ಆಧುನಿಕ ಸ್ಥನಬಂಧಕ್ಕೆ ಪೇಟೆಂಟ್ ಪಡೆದರು.

1958: ಮೊದಲ ಬಣ್ಣದ ವೀಡಿಯೋ ರೆಕಾರ್ಡಿಂಗನ್ನು ಮ್ಯಾಗ್ನೆಟಿಕ್ ಟೇಪಿನಲ್ಲಿ ಪ್ರಸ್ತುತಪಡಿಸಲಾಯಿತು.

1967: ಭಾರತದ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಹಿಂದಿ ಸಮಿತಿಯನ್ನು ರಚಿಸಲಾಯಿತು.

1979: ಮೌಂಟ್ ಬ್ಯಾಟನ್ ಅವರ ಅಂತ್ಯಕ್ರಿಯೆ ಬರ್ಮಾದಲ್ಲಿ ನೆರವೇರಿಸಲಾಯಿತು.

1988: ಮಾನನಷ್ಟ ಕಾಯಿದೆಯ ವಿರೋಧಿಸಿ ಪತ್ರಿಕೆ ಉದ್ಯಮದವರು ಪ್ರತಿಭಟನೆ ಮಾಡಿದ ಕಾರಣ ರಾಷ್ಟ್ರದೆಲ್ಲೆಡೆ ಪತ್ರಿಕೆ ಇಲ್ಲದಂತಾಯಿತು.

2014: ಮಧ್ಯ ಡೆನ್ಮಾರ್ಕಿನಲ್ಲಿ ಖಾಸಗಿ ಸಣ್ಣ ಹೆಲಿಕಾಪ್ಟರ್ ಸಮುದ್ರಕ್ಕೆ ಅಪ್ಪಳಿಸಿದ ಕಾರಣ ಕನಿಷ್ಟ 3 ಜನ ಮೃತ ಪಟ್ಟು ನಾಲ್ಕನೇ ವ್ಯಕ್ತಿ ಕಾಣೆಯಾದರು.

ಪ್ರಮುಖ ಜನನ/ಮರಣ:

1846: ಈಸ್ಟ್ ಇಂಡಿಯಾ ಕಂಪನಿಯ ರಾಜ್ಯಪಾಲ ಆಗಿದ್ದ ಸರ್ ಚಾರ್ಲ್ಸ್ ಮೆಟ್ಕಾಫ್ ನಿಧನರಾದರು.

1872: ಭಾರತದ ವಕೀಲರು ಮತ್ತು ರಾಜಕಾರಣಿ ವಿ.ಓ.ಚಿದಂಬರಂ ಪಿಳ್ಳೈ ಜನಿಸಿದರು.

1888: ಭಾರತದ ಎರಡನೇ ರಾಷ್ಟ್ರಪತಿ ಆಗಿದ್ದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಜನಿಸಿದರು.

1904: ಸಂತ ಸಾಹಿತ್ಯದ ಸಂಪಾದಕ ಮತ್ತು ಪರಿಣಿತ ಬಾಲಚಂದ್ರ ಪಂಡರಿನಾಥ್ ಬಹಿರಾತ್ ಜನಿಸಿದರು.

1910: ಭಾರತೀಯ ಕ್ರಿಕೆಟಿಗರಾದ ಫೈರೋಜ್ ಪಾಲಿಯಾ ಜನಿಸಿದರು.

1928: ಕಥಕ್ ನೃತ್ಯ ಪ್ರತಿಪಾದಕಿ ದಮಯಂತಿ ಜೋಶಿ ಜನಿಸಿದರು.

1986: ಭಾರತೀಯ ಕ್ರಿಕೆಟ್ ಆಟಗಾರ ಪ್ರಜ್ಞಾನ್ ಓಝಾ ಜನಿಸಿದರು,

1991: ಭಾರತೀಯ ಕವಿ ಮತ್ತು ಲೇಖಕ ಶರದ್ ಜೋಶಿ ನಿಧನರಾದರು.

1997: ನೋಬಲ್ ಪ್ರಶಸ್ತಿ ಪುರಸ್ಕೃತೆ ಮದರ್ ಥೆರೆಸಾ ನಿಧನರಾದರು.

2015: ಭಾರತೀಯ ಗಾಯಕ, ಗೀತ ರಚನೆಕಾರ ಆದೇಶ್ ಶ್ರೀವಾತ್ಸವ್ ನಿಧನರಾದರು.