Categories
e-ದಿನ

ಸೆಪ್ಟೆಂಬರ್-7

 

ಪ್ರಮುಖ ಘಟನಾವಳಿಗಳು:

1630: ಬೋಸ್ಟನ್, ಮ್ಯಾಸಚೂಸೆಟ್ಸ್ ನಗರವನ್ನು ಸ್ಥಾಪಿಸಲಾಯಿತು.

1812: ನೆಪೋಲಿಯನ್ ರಷ್ಯಾ ಪಡೆಯನ್ನು ಸೋಲಿಸಿದರು.

1813: ಮೊದಲ ಬಾರಿಗೆ ಅಮೇರಿಕಾಕ್ಕೆ “ಅಂಕಲ್ ಸ್ಯಾಮ್” ಎಂಬ ಹೆಸರನ್ನು ಬಳಸಲಾಯಿತು.

1822: ಬ್ರಜಿಲ್ ಪೋರ್ಚುಗಲ್ಲಿನಿಂದ ತನ್ನ ಸ್ವಾತಂತ್ರವನ್ನು ಘೋಷಿಸಿತು.

1888: ಎಡಿತ್ ಎಲೀನರ್ ಮೆಕ್ಲೀನರ್ ನ್ಯೂಯಾರ್ಕಿನ ಆಸ್ಪತ್ರೆಯಲ್ಲಿ ಇನ್ಕ್ಯೂಬೇಟರಿನಲ್ಲಿ ಸಂರಕ್ಷಿಸಿದ ಮೊದಲ ಮಗುವಾಗಿತ್ತು.

1905: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರ “ವಂದೇ ಮಾತರಂ” ಅನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಾರಣಾಸಿಯ ಅಧಿವೇಶನದಲ್ಲಿ ರಾಷ್ಟ್ರೀಯ ಗೀತೆಯಾಗಿ ಅಳವಡಿಸಲಾಯಿತು.

1906: ಮೊದಲ ಭಾರತೀಯ ಬ್ಯಾಂಕ್ ಆದ ಬ್ಯಾಂಕ್ ಆಫ್ ಇಂಡಿಯಾವನ್ನು ನೋಂದಾಯಿಸಲಾಯಿತು.

1914: ನ್ಯೂಯಾರ್ಕಿನ ಅಂಚೆ ಕಛೇರಿಯ ಕಟ್ಟಡವನ್ನು ಸಾರ್ವಜನಿಕರಿಗೆ ತೆರೆಯಲಾಯಿತು.

1921: ಮಿಸ್ ಅಮೇರಿಕಾ ಸ್ಪರ್ಧೆಯನ್ನು ಆರಂಭಿಸಲಾಯಿತು.

1927: ಫಿಲೋ ಟೈಲರ್ ಸಂಪೂರ್ಣ ಎಲೆಕ್ಟ್ರಾನಿಕ್ ಟಿವಿ ರಚಿಸುವಲ್ಲಿ ಯಶಸ್ವಿಯಾದರು.

1931: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಸುತ್ತಿನ ಟೇಬಲ್ ಕಾನ್ಫರೆನ್ಸ್ ಅನ್ನು ತಪ್ಪಿದ ನಂತರ ಮಹಾತ್ಮಾ ಗಾಂಧಿ ಮತ್ತು ಸರೋಜಿನಿ ನಾಯ್ಡು ಅವರೊಂದಿಗೆ ಎರಡನೇ ರೌಂಡ್ ಟೇಬಲ್ ಸಮ್ಮೇಳನದಲ್ಲಿ ಭಾಗವಹಿಸಿದರು.

1947: ಗಾಂಧೀಜಿ ದೆಹಲಿಗೆ ಕಲ್ಕತ್ತಾದಿಂದ ಹೊರಟು ಗಲಭೆ-ಪೀಡಿತ ಪ್ರದೇಶಗಳಿಗೆ ದೈನಂದಿನ ಭೇಟಿಗಳನ್ನು ಆರಂಭಿಸಿದರು.

1953: ನಿಕಿತಾ ಖುರ್ಷಿಯೋ ಅವರು ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1965: ಇಂಡೋ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಚೀನಾವು ಭಾರತೀಯ ಗಡಿಯಲ್ಲಿ ಅದರ ಸೈನ್ಯವನ್ನು ಬಲಪಡಿಸುತ್ತದೆ ಎಂದು ಚೀನಾ ಘೋಷಿಸಿತು.

1965: ಪಾಕಿಸ್ಥಾನದ ನೌಕಾಪಡೆಯು 1965ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ “ಆಪರೇಷನ್ ದ್ವಾರಕಾ” ವನ್ನು ಪ್ರಾರಂಭಿಸಿತು.

ಪ್ರಮುಖ ಜನನ/ಮರಣ:

1905: ಪತ್ರಕರ್ತ ಮತ್ತು ಮರಾಠಿ ಸಾಹಿತಿ ರಘುನಾಥ್ ಗೋವಿಂದ ಸರ್ದೇಸಾಯಿ ಜನಿಸಿದರು.

1933: ಸ್ವಯಂ ಉದ್ಯೋಗಿ ಮಹಿಳಾ ಸಂಘದ ಸ್ಥಾಪಕಿ ವಕೀಲೆ ಇಲಾ ಭಟ್ ಜನಿಸಿದರು.

1951: ಪ್ರಖ್ಯಾತ ನಟ ಮತ್ತು ನಿರ್ಮಾಪಕ ಮಮ್ಮೂಟಿ ಜನಿಸಿದರು.

1967: ಭಾರತೀಯ ಇಂಗ್ಲಿಷ್ ಅಕೌಂಟೆಂಟ್ ಮತ್ತು ರಾಜಕಾರಣಿ ಅಲೋಕ್ ಶರ್ಮ ಜನಿಸಿದರು.

1968: ಪ್ರಸಿದ್ಧ ಹಿಂದಿ ಕಾದಂಬರಿಗಾರ ಬೆನಿಪುರಿ ಶರ್ಮ ನಿಧನರಾದರು.

1995: ಬಿಬಿಸಿ ಸ್ಟ್ರಿಂಗರ್ ಮತ್ತು ಏಷಿಯನ್ ಏಜ್ ವಿಶೇಷ ವರದಿಗಾರರಾಗಿದ್ದ ಮೊಹಮ್ಮದ್ ಯೂಸೆಫ್ ಜಮೀಲ್ ನಿಧನರಾದರು.

1998: ಗುಜರಾತ್ ಮತ್ತು ಮಧ್ಯಪ್ರದೇಶದ ಮಾಜಿ ರಾಜ್ಯಪಾಲರಾಗಿದ್ದ ಪ್ರೊ. ಕೆ.ಎಂ.ಚಂಡಿ ನಿಧನರಾದರು.

2013: ಭಾರತದ 13ನೇ ವಿದೇಶಾಂಗ ಕಾರ್ಯದರ್ಶಿ ಆಗಿದ್ದ ರೋಮೇಶ್ ಭಂಡಾರಿ ನಿಧನರಾದರು.