ಇದೊಂದು ಮಕ್ಕಳ ಕಥಾಸಂಗ್ರಹ. ಇಲ್ಲಿನ ಕತೆಗಳೆಲ್ಲ ಸರಳ ಭಾಷೆಯಲ್ಲಿವೆ. ಪರೋಕ್ಷವಾಗಿ ನೀತಿಬೋಧಕವೂ ಆಗಿವೆ. ನಾಡಿನ ಮಕ್ಕಳು ಇವುಗಳ ಸದುಪಯೋಗ ಮಾಡಿಕೊಂಡರೆ ನನ್ನ ಶ್ರಮ ಸಾರ್ಥಕ.

ಕಿರು ಹೊತ್ತಗೆಯು ಬೆಳಕು ಕಾಣಲು ಕಾರಣರಾದವರು ನನ್ನ ಬಂಧುಗಳೂ, ಪ್ರೋತ್ಸಾಹಕರೂ ಆದ ಶ್ರೀ ಕೊಡೆತ್ತೂರು ಭುವನಾಭಿರಾಮ ಉಡುಪ, ಒಡೆಯರು, ಯುಗಪುರುಷ ಪ್ರಕಟಣಾಲಯ ಕಿನ್ನಿಗೋಳಿ ಅವರು. ಶ್ರೀಯುತರಿಗೆ ನನ್ನ ಅನಂತ ವಂದನೆಗಳು.

ಪುಸ್ತಕಕ್ಕೆ ಅಂದವಾದ ಚಿತ್ರಗಳನ್ನು ರಚಿಸಿ ಕೊಟ್ಟವರು ನನ್ನ ಕಲಾವಿದ ಮಿತ್ರ ಶ್ರೀ ಬಾಲ ಮಧುರ ಕಾನನ, ಬೇಳ ಅವರು. ಇದನ್ನು ಅಂದವಾಗಿ ಮುದ್ರಿಸಿ ಕೊಟ್ಟವರು ಯುಗಪುರುಷ ಮುದ್ರಣಾಲಯದ ಸಿಬ್ಬಂದಿ ವರ್ಗದವರು. ಅವರೆಲ್ಲರಿಗೂ ನನ್ನ ಹಾರ್ದಿಕ ಕೃತಜ್ಞತೆಗಳು.

ಕಳೆದ ಐದು ದಶಕಗಳ ನನ್ನ ಸಾಹಿತ್ಯ ಸೇವೆಯಲ್ಲಿ ನನಗೆ ಮಹದುಪಕಾರ ಮಾಡಿದವರು ದಿ| ಕೊ. . ಉಡುಪ, ಕಿನ್ನಿಗೋಳಿ ಮತ್ತು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು. ಅವರಿಬ್ಬರೂ ನನಗೆ ಚಿರಸ್ಮರಣೀಯರು.

ಪಳಕಳ ಸೀತಾರಾಮ ಭಟ್ಟ
ಶಿಶು ಸಾಹಿತ್ಯ ಮಾಲೆ
ಮಿತ್ತ ಬೈಲು