ಸೂಚನೆ :      ಗೋಷ

[1]ಕಾಂತೆ[2]ಯರುಗಳ ಅಂತ=
ಸ್ತಾಪವನು ಸಂತಯಿಸಿ ದನುಜ-ಚ
ಮೂಪತಿಯನೊಡಗೂಡಿ ನಡೆದರು ಬಲಮುರಾಂತಕರು||

ಪದನು :
ಏಳಿ ತಡವೇ[3]ಕೆನು[4][5]ಖಿಳ[6]ಗೋ
ಪಾಲರೆಲ್ಲರ [7]ಕರೆದು ಘೃತಮಧು[8]
ಹಾಲು [9]ಮೊಸರೇನುಳ್ಳ ಪಣ್ಭಲ ಸಹಿತ ಬಹುದೆಂದು[10]
ಹೇಳುತಿರಲಕ್ರೂರನಾಗಳೆ
ಮೇಳವಿಸಿದನು ರಥವನಾ ವನ
ಮಾಲಿ ಬಲರುತ್ಸಾಹ ಮಿಗೆ ಸಿಂಗರಿಸಿದರು ತನುವ                                                      ೧

ಪರಿಮಳೋದಕದಿಂದ ತೊಳೆದರು
ಚರಣ ವದನವ[11]ನಸಿತ[12] ಪೀತಾಂ
ಬರವನುಟ್ಟರು [13]ಪೂಸಿ[14]ದರು ಶ್ರೀಗಂಧಕಸ್ತುರಿಯ
ಅರುಣಮಯ ಗುಂಜಗಳ [15]ಮುಕ್ತಾ[16]
ಭರಣವನು ತೊಟ್ಟೆಸೆವ [17]ಮಲ್ಲಿಗೆ[18]
ಬಿರುಮುಗುಳ ತುರುಬಿದರು ರಾಮಮುಕುಂದರೊಲವಿನಲಿ                                            ೨

ಕರಿಮುಖನ ಸತ್ಕರಿಸಿ ನಿಂದರು
ಹರಿ ಹಲಾಯುಧರವರ ಗಡಣದ
ತರುಣ ಗೋವಳರೆಸೆದ೧೦[19]ರವರು ನಿಜ ಸ್ವರೂಪದಲಿ೧೦[20]
ಹಿರಿಯರಹ ನಂದಾದ್ಯಖಿಳ ಗೋ
ಪರು ಸವಿಸ್ತರದಿಂದ ಗವ್ಯೋ
ತ್ಕರದ ಕಂಬಿಯ ಮಂದಿ ಸಹಿತೈತಂದರೊಗ್ಗಿನಲಿ                                                        ೩

ಹರಿಬಲರು ಬಂದಾ ಯಶೋದೆಯ
ಚರಣದಲಿ ಮೈಯಿಕ್ಕಿ ನರರಿಗೆ
ಪರಮ ಧರ್ಮವಿದೆಂಬುದನು ತೋರಿಸುವ [21]ಮಾರ್ಗದಲಿ[22]
ಕರುಣವಚನದಲಂಜಿ ಮಧುರೆಗೆ
ತೆರಳಲೇನಾವಮ್ಮ ಎನೆ ಕಾ
ತರಿಸಿ ಗದ್ಗದ ಕಂಠದಲಿ ಮರುಗಿದಳು ಲಲಿತಾಂಗಿ                                                       ೪

ಮಗನೆ ನಾನೆಂತಗಲಿ ಬದುಕುವೆ
ನಗೆಗೆಡೆಯ ಮಾಡಿದೆಯಲಾ! ನಂ
ಬುಗೆಯ ಕೆಡಿಸಿದೆ ಮುಪ್ಪಿನವಳಿನ್ನಾರ ಸೇರುವೆನು?
ಮೊಗವನೀಕ್ಷಿಸಿ ಸಕಲ ದುಃಖವ
ಬಗೆಯದಿದ್ದೆನು ಬಿಟ್ಟು ಹೋಹುದು
[23]ಸುಗುಣ[24]ವಲ್ಲೆಂ[25]ದಳಲಿ[26] ತುಂಬಿದ[27]ಳಬಲೆ[28] ಕಂಬನಿಯ                                                          ೫

ನೋಡಿ ಹಿಗ್ಗುವೆನಡಿಗಗೆ ಕೊಂ
ಡಾಡಿ ಹಾರೈಸುವೆನಕಟ ಮುಂ
ಡಾಡಿ ದಣಿಯೆನು ಬಹಳ ತಡೆದರೆ ಹಲವ ಹಂಬಲಿಸಿ
ಬಾಡುವೆನು ಬಂದಪ್ಪಿದಡೆ ಮೊಗ
ನೋಡಿ ಪುಳಿಕಿತೆಯಹೆನು ಪಾಪಿಯ
ಮಾಡಿ ವಿಧಿಯಗಲಿಸಿತೆ [29][30]ಮ್ಮನೆನುತ್ತ ಹಲುಬಿದಳು                                                         ೬

ತಾಯೆ ಶೋಕಿಸಬೇಡ ವಿವಿಧೋ
ಪಾಯದಲಿ ಬಂದಲ್ಲದಿರೆ ನಾ
ನೀಯವಸ್ಥೆಯ ಕಂಡು ನಿಲುವೆನೆ ಕಂಸನಗರಿಯಲಿ
ನೋಯದಿರಿ ಚಿತ್ತದಲೆನುತ ಕಮ
ಳಾಯತಾಂಬಕ[31]ನಾ[32] ಯಶೋದೆಯ
ಕಾಯವನು ತಕ್ಕೈಸಿ ಚರಣಕ್ಕೆರಗೆ ಹರಸಿದಳು                                                            ೭

ಅಸುರ ನಿಮಗುಪಹತಿಗಳನು ಚಿಂ
ತಿಸದಿರಲಿ ನೀವ್ ವಿಜಯರಾಗಿ[33]ಯೆ[34]
ವಸುಮತಿ[35]ಗೆ ಪತಿಯಾಗಿ ರಿಪುಗಳ ಸೀಳಿ ಸಮರದಲಿ
ಹಸುಳೆಗಳು ನೀವ್ ಕಂಸನತಿ ಸಾ-
ಹಸಿ[36] ಗನಿರದಿರಿ ಬೇಗ ಬಹುದೆಂ
ದೊಸೆದು ಹರಸಿದಳಪ್ಪಿ ಮುಂಡಾಡಿದಳು [37]ಹರುಷದಲಿ[38]                                                      ೮

ತುರುಗಳನು [39]ಬೀಳ್ಕೊಂಡು[40] ನೇಹದ
ಕರುಗಳನು [41]ಬೋಳಯಿಸಿ[42] ಘೋಷದ
ಹಿರಿಯರಿಗೆ ಕೈ ಮುಗಿದು ದಧಿ-ದೂರ್ವಾಕ್ಷತೆಯ ಧರಿಸಿ
ಪರಿಪರಿಯ ವಿವಿಧಾರತಿಯ[43]ನವ-
ಧರಿಸಿ[44] ಕೈ[45]ಕೊಂಡ[46] ಸುರ-ಮಂತ್ರಿಯ
ಹೊರೆಗೆ [47]ಬಂದೇರಿದರು ಹರಿಬಲರುಗಳು[48] ಮಣಿರಥವ                                                        ೯

ಕೊಳಲದನಿ ತಂಬಟದ ರವ ಗೋ-
ವಳರ೧೦[49] ಕಲಕಲ ಬೊಬ್ಬೆ ರಭಸದ
ಕೊಳುಗುಳದ ಕಹಳೆಗಳನಕ್ರೂರನ ಜಯಧ್ವನಿಯ೧೦[50]
ಬಲ-ಮುಕುಂದರ ೧೧[51]ತೊಡಕು೧೧[52] ಬೇಡೆಂ-
ದುಲಿವ ೧೨[53]ಗೋಪರ೧೨[54] ನಾದ೧೩[55]ವಾ೧೩[56]ದಿಗು
ವಳಯ೧೪[57]ದಲಿ೧೪[58] ತುಂಬಿದುದು ಹರುಷಿತನಾದನ ೧೫[59]ಕ್ರೂರ೧೫[60]                                            ೧೦

ಆ ಸಮಯದಲಿ ಗೋಕುಲದ ಸುವಿ-
ಲಾಸಿನಿಯರಕ್ರೂರಮಾಡಿದ
ವೈಸಿಕವಿದೇನೆಂದು ಮನದಲಿ ನೊಂದು ತವಕದಲಿ
ಓಸರಿಸಿದುಡುಗೆಗಳ ಕೆದರಿದ
ಕೇಶ[61]ಪಾಶದ[62] ಕಂದಿದಾಸ್ಯದ
ಸೂಸಿದಂತಃಕರಣದವರೈತಂದರೊಗ್ಗಿನಲಿ                                                                 ೧೧

*[63]ಮಲ್ಲಿಗೆಯ ಮಾ[64][65]ವಿಯ ಜಾಜಿಯ
ಮೊಲ್ಲೆಗಳ ಮಂಟಪದಲೆಮ್ಮಯ
ಲಲ್ಲೆನುಡಿಗಳ [66]ಸವಿಸಿದಾತನನಗಲಿ[67] ಬದುಕುವೆವೆ?
ಎಲ್ಲಿ ಹರಿಯಿಹನಲ್ಲಿಯೇ ಸುಖ
[68]ವಲ್ಲಿ[69] ಕಾಮನ [70]ಬಗೆಯ[71] ಬಾಣದ
[72]ಪುಲ್ಲಣಾಭನೆ ಮೊರೆಯೆನುತಲೈದಿದರು ಬಾಲೆಯರು[73]                                           ೧೨

ಶಶಿಮುಖಿಯರುತ್ಪಲದಳಾಕ್ಷಿಯ
ರೆಸೆವ ಬಿಂಬಾಧರೆಯರುಜ್ವಲ
ದಶನೆಯರು ಗುರುಕುಚೆಯರಗ್ಗದ ಕಂಬುಕಂಠೆಯರು
ಅಸಿಯ ನಡುವಿನ ನೀರೆಯರು ಲಂ-
ಬಿಸುವ ಕಬ[74]ರಿಯ ಚದುರೆಯರು ಹೊಸ[75]
ನಸುನಗೆಯ ಕಲಹಂಸಗಮನೆಯರೈದಿ [76]ತಚ್ಯತನ[77]                                                            ೧೩

*[78]!ಕಳಶಕುಚ ನಡುನಡುಗೆ ಮೇಲುದು
ತೊಲಗೆ ನಡೆ ದಡದಡಿಸೆ ನೇವುರ
ವುಲಿಯೆ ನೊಸಲಿನ ತಿಲಕ ನಸು ಬೆಮರೇರೆ ತವಕದಲಿ
ಸೆಳೆನಡುವು ಸಲೆ ಬಳುಕೆ ಮತಿ ಸಂ-
ಚಳಿಸೆ ದುಗುಡದ ಭಾರದಲಿ ಗೋ-
ಕುಲದ ಸತಿಯರು ಬಂದರಾಗಚ್ಯುತನ ಸಮ್ಮುಖಕೆ                                                      ೧೪

*[79]ಅಂಗಜನ ಮಸೆದಲಗ ಪೋಲ್ವ ರ-
ಥಾಂಗ ಮಿಥುನಸ್ತನೆಯರತನುವಿ-
ನಂಗನೆಯನಳುಕಿಸುವ ಗುರುಜಘನೆಯರು ಮನ್ಮಥನ
ಸಂಗರದೊಳೋಡಿಸುವ ಕಲ್ಪ ಲ
ತಾಂಗಿಯರು ಮದನನ ಶರೌಘನಿ
ಷಂಗ ಕಬರೀಭರೆಯರೈದಿದರಾ ಜನಾರ್ದನನ                                                            ೧೫

*[80]ಬಾಲೆಯರು [81]ಯೌವನೆಯರಂಗಜ[82]
ಕೇಳಿಯಲಿ ಕೋವಿದೆಯರಿಚ್ಛೆಯ
ಪಾಲಿಸುವ ಬಾಲಿಕೆಯರೊಗ್ಗಿಸಿ ಮುನಿವ ಚದುರೆಯರು
ಆಳಿ[83]ಗೊಂಡಗ್ಗಿಸುವ[84] ಜಾಣಿನ
ಮೇಳದುದ್ದಂಡೆಯರು ಜೊತ್ತಿನ
ಸೂಳು ಪಾಳಿಯೊಳಂಗನೆಯ[85] ರೈದಿತು ಜಗತ್ಪತಿಯ[86]                                            ೧೬

*[87]ಮೊಲೆಯಲುಗೆ ಮುಡಿಸಡಿಲೆ ಕೊನೆ ಮುಡಿ
ಬಳಲೆ ಮಣಿಮೇಖಲೆಯ ಕಿಂಕಿಣಿ
ಕಳಲೆ ಸುಳಿಗುರುಳಳುರೆ ಮುಖದಲಿ ಬೆಮರ ಬಿಂದುಗಳು
ಹೊಳೆಯ ಹೃದಯದೊಳಸಮಶರಶಿಖಿ
ಬಳೆದು ತಳವೆಳಗಾಗಿ ಹೊಸ ಗೋ-
ವಳನನಂದರಸುತ್ತ ಬಂದರು ಗೋಪಕಾಂತೆಯರು                                                      ೧೭

*[88]ನೊಸಲ ಬೆಮರಿನ ನಿಮಿರ್ದ ಕುರುಳಿನ
ಮುಸುಳಿಸುವ ಬೆಳುಗಣ್ಣ ಬಸವಳಿ
ದುಸುರು ಬರತಧರದ ಮಿಡುಂಕುವ ಕಂಬುಕಂಧರದ
ಮಿಸುನಿಗೊಡವೆನಲೆಸೆವ ಕುಚಯುಗ-
ದಸಮಭಾರದಲುಡಿವ ನಡುವಿನ
ಶಶಿಮುಖಿಯರೊ[89]ಗ್ಗಿನಲಿ[90] ಬಳಿವಿಡಿ[91]ದೈದಿ[92]ತಚ್ಯುತನ                                                     ೧೮

ಕರೆವ ಕೆಲಸದ ಬಿಟ್ಟು [93]ಕಡೆವುದ[94]
ಮರೆದು ಮಕ್ಕಳ [95]ಬಿಸುಟು[96] ಗಂಡನ
ತೊರೆದು, ಮದನನ ಮದವಿಕಾರದಲಖಿಳ ಗೋಪಿಯರು
ನಿರಿಯನೋಸರಿಸುತ್ತಲಚ್ಯುತ
[97]ನರಿಕೆಯಲಿ[98] ಕಳವಳದ ಕರಣದ
ಲರಸುತೈದಿದರತ್ಯಧಿಕ ವಿರಹಾನುತಾಪದಲಿ                                                             ೧೯

ಥಳಥಳಿಸುವೆಳಮೀನ ಢಾಳವ
ಗೆಲುವ ಕಂಗಳ ಕೋಕಕುಚಯುಗ
ದಳಿ ಕುಟಿಲಕುಂತಳದ ಸುಳಿನಾಭಿಯ ವಳಿತ್ರಯದ
ಜಳಜವದನದ ಕಮಳಸಮಪದ
ತಳದ ವರಕಳಹಂಸಗಮನದ
ಲಲನೆಯರು ಬೆಂಬಿಡದೆ ಬಳಿವಿಡಿ ದೈದಿತಚ್ಯುತನ                                                   ೨೦

ನೋಡುವರು ಬೆರಗಾಗಿ ಬೆದರುತ
ಕೂಡೆ ಕಲೆಯುತ ಕೃಷ್ಣ ಎನುತುವೆ
ಓಡುವರು ಮುಂದಿರ್ದ ಕಲುಮುಳು[99]ಹರಳನೀ[100]ಕ್ಷಿಸದೆ
ಬಾಡಿ ನಿಲುವರು, ತಳಿತ ಮಾವನು
ಕೂಡೆ ಬಂದಪ್ಪುವರು ಕಾಮನ
[101]ಬೀಡಿದೀ[102] ಮರನೆಂದು ಹರಿದರು ಹರಿದು ದೆಸೆದೆಸೆಗೆ                                                       ೨೧

ನಡೆವ ಭರದಿಂದೆಡಹಿ ಬೀಳುವ
ರೊಡೆದ ವದನವನೊತ್ತಿ [103]ಕೊಳ್ವರು[104]
ಪಿಡಿಯ ನಡುವಿನ ಜಡಿವ ಕುಚಗಳ ಬಳಲ್ದ ಮುಡಿವಿಡಿದು
ಮಡದಿಯರು ತಮತಮಗೆ [105]ಬರಿ[106]ಮೊರೆ
[107]ಯಿಡುವ ಜೀವನವನ್ನು ನಿಲಿಸುವ
ಡರಿದೆನುತ[108] ಗೋಪಿಯರು [109]ಹರಿದರು[110] ಕೃಷ್ಣನಿದ್ಧೆಡೆಗೆ                                                     ೨೨

ಮುತ್ತಿನೋಲೆಯ ಮೂಗುತಿಯ ಮಿಗೆ
ಹತ್ತೆ ಕಟ್ಟಿದ[111]ತರಳ[112] ಮೌಕ್ತಿಕ
ದುತ್ತಮದ ಮಾಣಿಕದ ಮಣಿಗಳ ಸರದ ಹೆರೆನೊಸಲ
ಹತ್ತಿಸಿದ ಬೊಟ್ಟುಗಳ ಶಿರದಲಿ
ತೆತ್ತಿಸಿದ[113]ಶಶಿರವಿ[114]ಯ ಕಿರಣದ
ಮತ್ತ ಗಜಗಮನೆಯರು [115]ಹರಿದರು[116] ಹರಿದು ಹರಿಯೆಡೆಗೆ                                        ೨೩

ಕಾಲ ಕಡಗದ ಮೇಲೆಯಂದುಗೆ
ಕೀಲಿಸಿದ ಕಡೆಯಗಳ ಮುರಿಗೆಯ
ಮೇಲೆ ಕಟ್ಟಿದ ಗೆಜ್ಜೆಗಳ ಬೆರಳುಗುರುಪಿಲ್ಲಿಗಳ
ಕಾಲ ಗತಿಗಳ ೧೦[117]ಕಣ್ಣ೧೦[118] ಚೆಲುವಿನ
ಬಾಲೆಯರು ೧೧[119]ಬನ೧೧[120]ದೊಳಗೆ ಬಂದರು
ಕಾಲ ೧೨[121]ಶೋಣಿತದೋರಣದೊಳ೧೨[122] ಬಲೆಯರು ದುಗುಡದಲಿ                                               ೨೪

ಉಟ್ಟ ಸೀರೆಯ ಮರೆದು, ಲಜ್ಜೆಯ
ಬಿಟ್ಟು [123]ಮನ್ಮಥನುಪಟಳಕೆ[124] ಕಂ-
ಗೆಟ್ಟು ಮನ[125]ದನುಗೆಟ್ಟು ಹೊಟ್ಟೆಯ ಹೊಡೆಯುತೈತಂದು[126]
ಅಟ್ಟಹಾಸದ ಶೋಕದಲಿ ಮರ-
ವಟ್ಟು ಗೋಪಿಯರೆಲ್ಲ [127]ಕೃಷ್ಣನ[128]
[129]ನಿಟ್ಟಣಿಸಿದರು ದೃಷ್ಟಿಯಲಿ ಬಿಡು[130]ವನಿಯ[131]ತವಕದಲಿ                                                    ೨೫

ತರಳೆಯೊಬ್ಬಳು ಬರಲು ಕಂಡರೆ
ಪುರುಳಿ ಕೋಗಿಲೆ ತುಂಬಿಗಳು ಬಂ-
ದುರವಣಿಸಿ ಮೊರೆದೆರಗೆ ಕೋಪಿಸಿ ನೂಕಿ ನಡೆತರಲು
ಹರಿಣಹರಿಹಂಸೆಗಳು [132]ಹರಿ ತಂ-
ದರರೆ ಕಂಡಂಜಿದಳು ಕರೆದಳು[133]
ಹರಿಯೆ ಹರಿ ನಾನಾ ಹರಿಯೆ ನೋಡೆಂದು ತೋರಿದಳು                                               ೨೬


[1] ೧-೧ ಕನ್ನೆ (ಆ) (ಮು)

[2] ೧-೧ ಕನ್ನೆ (ಆ) (ಮು)

[3] ೨-೨ ಕೆಂದು (ಆ-ಮು)

[4] ೨-೨ ಕೆಂದು (ಆ-ಮು)

[5] ೩-೩ ಬಲ (ಮು)

[6] ೩-೩ ಬಲ (ಮು)

[7] ೪-೪ ಕರೆಕರೆದು ಘೃತ (ಆ)

[8] ೪-೪ ಕರೆಕರೆದು ಘೃತ (ಆ)

[9] ೫-೫ ಮೊಸರು ಫಣ್ ಪಲವ ಸಹಿತುಯ್ದು : ಬಹುದೆಂದು (ಮು)

[10] ೫-೫ ಮೊಸರು ಫಣ್ ಪಲವ ಸಹಿತುಯ್ದು : ಬಹುದೆಂದು (ಮು)

[11] ೬-೬ ನಾಸ್ಯ (ಆ)

[12] ೬-೬ ನಾಸ್ಯ (ಆ)

[13] ೭-೭ ಹೊರಸಿ (ಆ)

[14] ೭-೭ ಹೊರಸಿ (ಆ)

[15] ೮-೮ ಮೌಕ್ತಿಕ (ಆ)

[16] ೮-೮ ಮೌಕ್ತಿಕ (ಆ)

[17] ೯-೯ ಕಂದದ

[18] ೯-೯ ಕಂದದ

[19] ೧೦-೧೦ ರವದಿರು ನೈಜರೂಪದಲಿ (ಆ)

[20] ೧೦-೧೦ ರವದಿರು ನೈಜರೂಪದಲಿ (ಆ)

[21] ೧-೧ ಮಾಳ್ಕೆಯಲಿ (ಆ-ಮು)

[22] ೧-೧ ಮಾಳ್ಕೆಯಲಿ (ಆ-ಮು)

[23] ೨-೨ ಸುಗಮ (ಆ)

[24] ೨-೨ ಸುಗಮ (ಆ)

[25] ೩-೩ ದಬಲೆ (ಆ-ಮು)

[26] ೩-೩ ದಬಲೆ (ಆ-ಮು)

[27] ೪-೪ ಳಳಲಿ (ಆ-ಮು)

[28] ೪-೪ ಳಳಲಿ (ಆ-ಮು)

[29] ೫-೫ ನಿ (ಆ-ಮು)

[30] ೫-೫ ನಿ (ಆ-ಮು)

[31] ೬-೬ ತಾ (ಆ)

[32] ೬-೬ ತಾ (ಆ)

[33] ೧-೧ ರಿ (ಆ)

[34] ೧-೧ ರಿ (ಆ)

[35] ೨ ಯ (ಆ-ಮು)

[36] ೩ ಕ (ಆ-ಮು)

[37] ೪-೪ ನಂದನನ (ಮು)

[38] ೪-೪ ನಂದನನ (ಮು)

[39] ೫-೫ ಬೋಳಯ್ಸಿ (ಆ-ಮು)

[40] ೫-೫ ಬೋಳಯ್ಸಿ (ಆ-ಮು)

[41] ೬-೬ ಮುಂಡಾಡಿ (ಆ-ಮು)

[42] ೬-೬ ಮುಂಡಾಡಿ (ಆ-ಮು)

[43] ೭-೭ ನಾ ದರಿಸಿ (ಆ-ಮು)

[44] ೭-೭ ನಾ ದರಿಸಿ (ಆ-ಮು)

[45] ೮-೮ ಕೊಳುತ (ಆ-ಮು)

[46] ೮-೮ ಕೊಳುತ (ಆ-ಮು)

[47] ೯-೯ ಹರಿಬಲರುಗಳು ಬಂದೇರಿದರು (ಆ) ಬಂದಡಿರಿದನು ಹರಿಸಹಿತ (ಮು)

[48] ೯-೯ ಹರಿಬಲರುಗಳು ಬಂದೇರಿದರು (ಆ) ಬಂದಡಿರಿದನು ಹರಿಸಹಿತ (ಮು)

[49] ೧೦-೧೦ ಬೊಬ್ಬೆಯ ರಭಸ ಹರೆಗಳೆ ಮೊಳಗಿ ತನಿದೆಕ್ಖಾಳವಕ್ರೂರನ ಜಯಧ್ವಾನ (ಆ) ಬೊಬ್ಬೆಯ ರಭಸ ಹರೆಗಳ ಮೊಳಗು ಕಹಳೆಯ ನಾದಕ್ರೂರನ ಜಯಧ್ವಾನ (ಮು)

[50] ೧೦-೧೦ ಬೊಬ್ಬೆಯ ರಭಸ ಹರೆಗಳೆ ಮೊಳಗಿ ತನಿದೆಕ್ಖಾಳವಕ್ರೂರನ ಜಯಧ್ವಾನ (ಆ) ಬೊಬ್ಬೆಯ ರಭಸ ಹರೆಗಳ ಮೊಳಗು ಕಹಳೆಯ ನಾದಕ್ರೂರನ ಜಯಧ್ವಾನ (ಮು)

[51] ೧೧-೧೧ ತೋಟ (ಆ)

[52] ೧೧-೧೧ ತೋಟ (ಆ)

[53] ೧೨-೧೨ ಕಹಳೆಯ (ಆ)

[54] ೧೨-೧೨ ಕಹಳೆಯ (ಆ)

[55] ೧೩-೧೩ ಮಿಗೆ (ಆ-ಮು)

[56] ೧೩-೧೩ ಮಿಗೆ (ಆ-ಮು)

[57] ೧೪-೧೪ ವನು (ಆ ಮು)

[58] ೧೪-೧೪ ವನು (ಆ ಮು)

[59] ೧೫-೧೫ ನಹಿರಾಯ (ಆ)

[60] ೧೫-೧೫ ನಹಿರಾಯ (ಆ)

[61] ೧-೧ ಬಂಧದ (ಆ-ಮು)

[62] ೧-೧ ಬಂಧದ (ಆ-ಮು)

[63] ಈ ಪದ್ಯವು ಆ ಪ್ರತಿಯಲ್ಲಿ, ೪ನೆಯ ಸಂಧಿಯ ೨೦ನೆಯ ಪದ್ಯವಾಗಿದೆ. ೭-೭ ರೀಭರೆಯರೊಪ್ಪುವ (ಆ-ಮು)  ೮-೮ ದರು ಕೂಡೆ (ಮು).

[64] ೨-೨ (ಆ)

[65] ೨-೨ (ಆ)

[66] ೩-೩ ಸಲಿಸುವಾತನನುಳಿದು (ಮು)

[67] ೩-೩ ಸಲಿಸುವಾತನನುಳಿದು (ಮು)

[68] ೪-೪ ವಿಲ್ಲಿ (ಆ-ಮು)

[69] ೪-೪ ವಿಲ್ಲಿ (ಆ-ಮು)

[70] ೫-೫ ನನೆಯ (ಆ-ಮು)

[71] ೫-೫ ನನೆಯ (ಆ-ಮು)

[72] ೬-೬ ಘಲ್ಲಣೆಗೆ ನಿಲಲಾರೆವೆನುತೈದಿದರು ಚಪಲೆಯರು (ಆ-ಮು)

[73] ೬-೬ ಘಲ್ಲಣೆಗೆ ನಿಲಲಾರೆವೆನುತೈದಿದರು ಚಪಲೆಯರು (ಆ-ಮು)

[74] ೭-೭ ರೀಭರೆಯರೊಪ್ಪುವ (ಆ-ಮು)

[75] ೭-೭ ರೀಭರೆಯರೊಪ್ಪುವ (ಆ-ಮು)

[76] ೮-೮ ದರು ಕೂಡೆ (ಮು)

[77] ೮-೮ ದರು ಕೂಡೆ (ಮು)

[78] *೧ ಈ ಪದ್ಯವನು ಆ ಪ್ರತಿಯಲಿಲ್ಲ. ಆ ಪ್ರತಿಯಲ್ಲಿ ೧೩ನೆಯದಾಗಿ ಮು ಪ್ರತಿಯಲ್ಲಿ ೨೫ನೆಯ ಪದ್ಯವಾಗಿ ಬಂದಿದೆ.

[79] *೨ ಈ ಪದ್ಯವು ಆ ಪ್ರತಿಯಲ್ಲಿ ಮಾತ್ರ ಇದೆ.

[80] *೩ ಈ ಪದ್ಯವು ಆ ಪ್ರತಿಯಲ್ಲಿ ೧೯ನೆಯ ಪದ್ಯವಾಗಿ ಬಂದಿದೆ.

[81] ೧-೧ ಯುವತಿಯರನಂಗನ (ಮು)

[82] ೧-೧ ಯುವತಿಯರನಂಗನ (ಮು)

[83] ೨-೨ ಹೋ ರಂಜಸುವ (ಆ)

[84] ೨-೨ ಹೋ ರಂಜಸುವ (ಆ)

[85] ೩-೩ ರೈದಿದರು ಗೋಪತಿಯ (ಆ).

[86] ೩-೩ ರೈದಿದರು ಗೋಪತಿಯ (ಆ).

[87] * ಈ ಪದ್ಯವು ಆ ಪ್ರತಿಯಲ್ಲಿ ಇಲ್ಲ. ಆ ಪ್ರತಿಯಲ್ಲಿ ೧೬ನೆಯದಾಗಿ ಮು ಪ್ರತಿಯಲ್ಲಿ ೨೪ನೆಯದಾಗಿ ಬಂದಿದೆ.

[88] * ಮುದ್ರಿತ ಪ್ರತಿಯಲ್ಲಿ ಈ ಪದ್ಯ ೨೭ನೆಯದಾಗಿದೆ.

[89] ೧-೧ ಗ್ಗಂದು (ಮು)

[90] ೧-೧ ಗ್ಗಂದು (ಮು)

[91] ೨-೨ ಲಜ್ಜೆಯ (ಆ)

[92] ೨-೨ ಲಜ್ಜೆಯ (ಆ)

[93] ೩-೩ ನುಳಿದು (ಆ) ೩ ರ (ಆ)

[94] ೩-೩ ನುಳಿದು (ಆ) ೩ ರ (ಆ)

[95] ೪-೪ ನೆರಕದಲಿ (ಆ), ನೆರಕೆಯಲಿ (ಮು)

[96] ೪-೪ ನೆರಕದಲಿ (ಆ), ನೆರಕೆಯಲಿ (ಮು)

[97] ೫-೫ ದಿರ್ದರ (ಆ-ಮು)

[98] ೫-೫ ದಿರ್ದರ (ಆ-ಮು)

[99] ೧-೧ ಹಳ್ಳವೀ (ಮು)

[100] ೧-೧ ಹಳ್ಳವೀ (ಮು)

[101] ೨-೨ ಬೀಡು ಈ (ಆ)

[102] ೨-೨ ಬೀಡು ಈ (ಆ)

[103] ೩-೩ ಯೇಳ್ವರು (ಮು)

[104] ೩-೩ ಯೇಳ್ವರು (ಮು)

[105] ೪-೪ ನೆರೆ (ಮು)

[106] ೪-೪ ನೆರೆ (ಮು)

[107] ೫-೫ ಯಿಡುತೆ ಜೀವನ ನಿಲಿಸಲರಿಯದೆ ತಡೆಬಡದೆ (ಮು)

[108] ೫-೫ ಯಿಡುತೆ ಜೀವನ ನಿಲಿಸಲರಿಯದೆ ತಡೆಬಡದೆ (ಮು)

[109] ೬-೬ ನಡೆದರು (ಮು)

[110] ೬-೬ ನಡೆದರು (ಮು)

[111] ೭-೭ ಕೊರಳ (ಆ)

[112] ೭-೭ ಕೊರಳ (ಆ)

[113] ೮-೮ ರವಿ – ಶಶಿ (ಆ)

[114] ೮-೮ ರವಿ – ಶಶಿ (ಆ)

[115] ೯-೯ ಬಂದರು (ಆ)

[116] ೯-೯ ಬಂದರು (ಆ)

[117] ೧೦-೧೦ ನಯನ (ಆ)

[118] ೧೦-೧೦ ನಯನ (ಆ)

[119] ೧೧-೧೧ ಭರ (ಆ)

[120] ೧೧-೧೧ ಭರ (ಆ)

[121] ೧೨-೧೨ ರಕ್ತದ ವಾರಣದ ಅಬ(ಆ)

[122] ೧೨-೧೨ ರಕ್ತದ ವಾರಣದ ಅಬ(ಆ)

[123] ೧-೧ ಮದನನ ಉಪಟಳಕನೆ (ಆ)

[124] ೧-೧ ಮದನನ ಉಪಟಳಕನೆ (ಆ)

[125] ವನು ಕೆಟ್ಟು ಹಾದಿಯ ಹಿಡಿದು ನಡೆತರಲು (ಆ)

[126] ವನು ಕೆಟ್ಟು ಹಾದಿಯ ಹಿಡಿದು ನಡೆತರಲು (ಆ)

[127] ೩-೩ ಹರಿಯನು (ಆ)

[128] ೩-೩ ಹರಿಯನು (ಆ)

[129] ೪ ಇ (ಆ)

[130] ೫-೫ ಮತಿಯ (ಆ)

[131] ೫-೫ ಮತಿಯ (ಆ)

[132] ೬-೬ ಹರಿತರೆಲರರೆ ಹರಿ ಗೆಂಡಂಜಿ ಕರದೊಳು (ಆ)

[133] ೬-೬ ಹರಿತರೆಲರರೆ ಹರಿ ಗೆಂಡಂಜಿ ಕರದೊಳು (ಆ)