ತಳಿರು ನೆತ್ತರ ಕಾರೆ

[1]ಸಾಲಿನ[2]
ಹೊಳೆವ ತಾರೆಯು ಹಾರೆ ಕದಳಿಗೆ
ಬಳೆದ ಬಳಲಿಕೆ ತೋರೆ ಕಮಲದ ನಡುವೆಯುರಿ[3]ಯೇರೆ[4]
ಎಳಲತೆಯು ನೆರೆ ತಾರೆಯಮೃತದ
ಕಳಸಗಳು ಹೆರಸಾರೆ ಚಂದ್ರನ
ಕಳೆ[5]ಯ ತನಿ[6] ಬಿಳುಪೇರೆ ಬಿದ್ದಳು ಹರಿಯ ಚರಣದಲಿ                                                           ೨೭

ಕಮಲ೧೦[7]ದಲಿಯುರಿ೧೦[8]ಯೇಳ್ವ ಶಿಖಿಯಲಿ
ಕಮಲ ಕಂ೧೧[9]ದಲು೧೧[10] ಕಮಲಕೆರಗುವ
ಭ್ರಮರಗಳು ೧೨[11]ಕೆದರಿದವು೧೨[12] ಕಮಲದ ಕುಮುದದೆಸಳಿನಲಿ
ಕಮಲ ಜನನಿಯು ಜಾರೆ ನನೆಗಳ
ಕಮಲವಾನಲು ಕಮಲ ವೈರಿಗೆ
ಕಮಲವೆರ೧೩[13]ಡುವ೧೩[14] ನಿರಿಸಿ ಬಿದ್ದಳು ೧೪[15]ಕಮಲಯುಗಳದಲಿ೧೪[16]                                           ೨೮

ಕರಿದು ಬಿಳಿದಿನ ಕಡೆಯ ಕೆಂಪಿನ
ದರಿಯ ತೀರದಿ ಸುತ್ತುವಳಯದಿ
ಹರನರಸಿ ಹರಿಹರಿದು ಜಾರುತ ಬೀಳುತಿರೆ ಕಂಡು
ಹರಿಯು ತನ್ನಾತ್ಮಜೆಯ ಹಸ್ತದ
ಲೊರಸಿ ತರುಣಿಯನಪ್ಪಿ ಕರದಲಿ
[17]ಶಿರದ[18]ಕರ್ಪುರವೀಯೆ ಕಸ್ತುರಿಯಾಗಿ ಬೆರಗಾದ                                                     ೨೯

[19]ಶಶಿ[20]ಯೊಳಗೆ ಬೆಳೆದಿರ್ದ ಸಂಪಗೆ
ಯೆಸೆವ ಪರಿಮಳವುಂಬ ತುಂಬಿಯ
ಮುಸುಕುತಿಹ ಭ್ರಮರಗಳ ಬಂಧನವಿಕ್ಕಿ ನಡೆ[21]ತರಲು[22]
ಉಸಿರ ಢಗೆ ಸಂದಣಿಸಿ ನುಡಿಗಳ
ನುಸುರಲಾರದೆ ಬೀಳೆ [23]ಹರಿಯಾ[24]
ಸಸಿಯ ಕರದೊಳಗೆತ್ತೆ ಕಮಲವು ಕಂದೆ ಬೆರಗಾದ                                                      ೩೦

ತುಂಬಿ ಕಚ್ಚಿದ ಕೇದಗೆಯ ಗರಿ
ತುಂಬಿ ತುಳುಕುವ ಮುಂಬನಿಯ [25]ಶಿಖಿ[26]
ತುಂಬಿ ಮದನಾಸ್ತ್ರದಲಿ ಚೆಲ್ಲುತಲಿರಲು ಹರಿ ಕಂಡು
ತುಂಬಿಗಳ ನೇವರಿಸಿ [27]ಕುಂಭಿಯ[28]
ಕುಂಭಕಲಶದ ತುದಿಯ ತುಂಬಿಯ
ಚುಂಬಿಸುವ ಮೌಕ್ತಿಕದ ತುಂಬಿಯ ಕಂಡು ಬೆರಗಾದ                                                    ೩೧

ಹರಿಯ ವಿರಹದಲೊಬ್ಬ ಸತಿಯಾ
ಹರಿಯ ಕೂಡುವೆನೆಂದು ಭರದಲಿ
ಹರಿಯ ನುಂಗುತ ಹರಿಯನುಗುಳುತ ಹರಿಯುತಿರೆ ಕಂಡು
ಹರಿಯು ಹರಿತಂದ[29] ಡರೆಯಾ[30]ಕ್ಷಣ
ಹರಿ ಕರಿಯ ಬಂಧನದ ಬಿಡಿಸಲು
ಹರಿಯ ತರುಣಿಯ ಸರಸವನು ಹರಿ ನೋಡಿ ನಗುತಿರ್ದ                                               ೩೨

ಅಳಿಯ ಬಳಗದ [31]ಫಣಿಯ ಶಿರ[32]ದಲಿ
ಅಳಿಯ [33][34]ಹಾರದಲಿ ಯೆರಗುವ
ಅಳಿಯ ಸಮ್ಮೋಹ[35]ನದ ಅಳಿ[36]ಗಳ ನೆಳಲ ಸತ್ತಿಗೆಯ
ಅಳಿಯ [37]ಮಿತ್ರನ ಮಿತ್ರನುಬ್ಚೆಯ[38]
ನಳಿಯ ಗರಿಗಾಳಿಯಲಿ ಕಳೆಯುತ
ಅಳಿಯ ಬಲುಮೆಯಲಂಗಜಾಸ್ತ್ರವ [39]ಗೆಲೆಯುತೈ[40]ದಿದಳು                                         ೩೩

ಹಗಲ ಚಂದ್ರನ ಕಂಡು ಬೇಗದ
ಲೊಗುವ ಶಿಲೆಗಳ ಸಾರವನು ಸತಿ
ಮೊಗೆದು ಕಮಲದಿ ಕಮಲಕೆರೆಯಲು ಕಮಲದೆಳವೆರೆಯ
ತೆಗೆದ ಸಾರವು ತುಂ[41]ಬಿ[42] ನೈದಿಲ
ಬಿಗುಹು ಸಡಿಲಲು ಕರ್ಣಭವನದ
ತಗಹು ತೆಗೆಯಲು ಹರಿದಳಂಗನೆ ಹರಿಯ ತಂಪಿನಲಿ                                                  ೩೪

ಉಟ್ಟ ಕಾವಿಯ ಸೀರೆ ಬೆನ್ನಲಿ
ಬಿಟ್ಟ ಜಡೆ ಹೆರೆನೊಸಲ[43] ಚಂದ್ರದ[44]
ಬೊಟ್ಟು ಶಿರದಲಿ ತೆತ್ತಿಸಿದ ರವಿಶಶಿಯ ಕಿರಣಗಳ
ತೊಟ್ಟ ಭುಜಕೀರ್ತಿಗಳ ನಡುವಲಿ
ಕಟ್ಟಿ ಫಣಿ[45]ನೇ[46] ವಳವ ಹರಿತಹ
ದಿಟ್ಟೆಯನು ತೆಗೆದಪ್ಪೆ ಹರಿಹರನಂತೆಯೊಪ್ಪಿದರು                                                       ೩೫

ಬಾಲೆಯೊಬ್ಬಳು ಜಡೆಯ ಸರ್ಪನೆ
ಮೇಲೆ ಸಂಪಗೆಯರಳ ತುಂಬಿಯೆ
ಕಾಲಭರಣವ ತೆಗೆದು ಪುನುಗು-ಜವಾದಿಗಳ ಪೂಸಿ
ಕಾಳೆಗಕೆಯಿದಿರಾದ ಕಾಮಗೆ
ಬಾಳದಲಿ ಬಲು ನಳಿನದೆಸಳನು
ಮೇಳ [47]ವಿಸಿ[48] ಬರುತಿರಲು ಹರಿ ಮೆಚ್ಚಿದನು ನಸುನಗುತ                                          ೩೬

ತುಂಬಿ ತುಂಬಿಯ ಚುಂಬಿಸುತ ಮಿಗೆ
ಬಿಂಬ[49]ಫಲದಲಿ[50] ಗಿಳಿಗಳೆರಗುತ
ಕುಂಭಕುಚ [51]ನಳಿತೋಳ[52]ಭಾವಕೆ ಬಿಡದೆ ಮದಗಜವು
ಅಂಬು ಧನುವಿಗೆ[53] ಮನದ [54]ಮಧ್ಯಕೆ
ಬೆಂಬಿಡದೆ ಹರಿ ನಡೆವ ಚೆಲುವಿಗೆ
ಇಂಬು[55] ಗೊಂಡಿ[56] ರುತಿಹವು ಹಂಸೆಗ[57]ಳೊಬ್ಬ[58] ಬಾಲಿಕೆಯ                                               ೩೭

ಮುಡಿಯ ಮಾಲೆಯ ಮೇಲೆ ಮೆರೆವಾ
ರಡಿಯ[59]ಮಾಲೆಯ[60] ಸಾಲ ಸಡಗರ
ದಡಿಗೆ ನಟನಿಸಿ ನಡೆವ ಹಂಸೆಯ ನಲಿವ ನವಿಲುಗಳ
ಬಿಡದೆಯಡರುವ ಫಣಿಯ ಬಳಲಿದೆ
ತೊಡರುಗಾಲಿನ ತೊದಳು ನುಡಿಗಳ
ಮಡದಿಯೊಬ್ಬಳು ಮುಂದುಗಾಣದೆ ನಿಂದು ಮರುಗಿದಳು                                             ೩೮

ನೋಡಲಮ್ಮಳು ತೆರೆದು ನಯನವ
ನಾಡಲಮ್ಮಳು ಮಾತುಗಳ [61]ಸ್ವರ[62]
ಮಾಡಲಮ್ಮಳು [63]ನಡೆಯಲಮ್ಮಳು[64] ಮುಂದುಕಡಿಯಿಟ್ಟು
ಕೂಡಲಮ್ಮಳು ಅಳಕ-ನಿಚಯವ
ನೀಡಲಮ್ಮಳು ಬೀಸಿ ತೋಳನು
ಹೇಡಿ ಮನದಲಿ ಹೆದರಿ ನಿಂದಳು ಬಿಗಿದ ಬೆರಗಿನಲಿ                                                     ೩೯

ನುಡಿಗೆ ಬೆದರುವ ಅಧರ[65]ವೇಣಿಗೆ[66]
ನಡುಗುತಿಹ ಮುಖ ಮುಖಕೆ ಪದತಳ
೧೦[67]ನಡೆಗೆ ತೊಡೆ೧೦[68] ನಡುವಿಂಗೆ ಕುಚ ದಂತಕ್ಕೆ ಕರಯುಗಳ
ನಿಡಿಯ೧೧[69] ತೋಳಿಗೆ ನಯನ ನಾಸಿಕ
ದೆಡೆಗೆ ಕುಂತಳ೧೨[70]ವಲುಗೆ೧೨[71] ತನು ನಡು
ನಡುಗುತಿಹ ಭೀತಿಯಲಿ ಬಂದಳು ಹರಿದು ಹರಿಯೆಡೆಗೆ                                                 ೪೦

[72]ನಿ[73]ಗಡ ಕಂಕಣ [74]ಕಡಗ[75]ದೋಳಿಯ
ತಗಡು ಬಳೆ ತಾತಿಗಳ ಪಂತಿಯ
ಬಿಗಿದ ಲುಳಿಸರಪಣಿಯ ಮುಂಗೈ[76]ಗಳ ಮುರಾಗಿ[77]ಗಳ
ಬಿಗಿದ ನಳಿತೋಳುಗಳ ಬಂದಿಯ
ವಿಗಡ ಭುಜಕೀರ್ತಿಗಳ ಹಾರದ
ಸುಗುಣ ಕಾಂಚಿಯ ದಾಮದಬಲೆಯರೈದಿದರು ಹರಿಯ                                                ೪೧

ಹರಿಹರಿಯುತೊಬ್ಚೊಬ್ಚರೈದಿಯೆ
ಭರದಿ ಹರಿಯನು ಹಿಡಿದು ತಮ್ಮನು
ಮರುಳು ಮಾಡಿಯೆ ಹೋಹ ಪರಿ ಲೇಸಾಯಿತಿಂದಿನಲಿ
ಮರಳು ಮನೆಗಳಿಗೆಂದು ಕೃಷ್ಣನ
ಬರಸೆಳೆದು ಬಿಗಿದಪ್ಪಿ ಮುದ್ದಿಸಿ
ಚರಣವನು ಹಿಡಿಹಿಡಿದು ಬಿನ್ನೈಸಿದರು ಗೋಪಿಯರು                                                    ೪೨

ಆಟ ನಿನ್ನೊಳು ನಯನ ತಣಿಯ[78][79]
ನೋಟ ನಿನ್ನೊಳು ಮುನಿಸು ಹರಿಸದ
ತೋಟಿ ನಿನ್ನೊಳು ಎಮಗೆ ಕಾಮನ ಬೇಟ ನಿನ್ನೊಳಗೆ
ಕೂಟ ನಿನ್ನೊಳು ಕೂಡಿ ದಣಿಯದ
ಮಾಟ ನಿನ್ನೊಳು ಬಲಿದ ಸ್ನೇಹದ-
ಘಾಟ ನಿನ್ನೊಳಗೆಂದು ಮುರುಗಿದರಖಿಳ ನಾರಿಯರು                                                   ೪೩

ಎಳಲತೆಯ ಮನೆಗಳಲಿ ಹೊಳೆವೆಳ
ದಳಿರ ಹಾಸಿಗೆಗಳಲಿಯಿರುಬಿನ
ಬಳಿಯ [80]ಮಲ್ಲಿಗೆ ಮೊಲ್ಲೆ ಜಾಜಿಯ ಮೆಳೆಯ ಮಂಚದಲಿ[81]
ಎಳನಗೆಯ ಸೊಗಸಿನಲ್ಲಿ ನಮ್ಮಯ
ಕಳಶಕುಚ ಮಧ್ಯದಲಿಯೊಪ್ಪುವ
ಸುಲಭ ಕೃಷ್ಣನೆ ನಿನ್ನ ಮರೆದಾವೆಂತು ಬದುಕುವೆವು                                                     ೪೪

ಮಧುರ ಮಾವಿನ ಹಣ್ಣನರಗಿಣಿ
ಕರ್ದುಕಿ ಕಂಗಳ ಮುಚ್ಚಿ ಪಕ್ಕವ
ಬಿದಿರಿ ಸಾರವ ತೆಗೆವವೊಲು ಅಧರಾಮೃತವ ಸವಿದು
ಹೃದಯ ತಾಪವ ಕೆಡಿಸಿ ಕಾಮನ
ಕದುಬಿನೆಸುಗೆಯ ನಿಲಿಸಿ ಕೂಟದ
ಚದುರುಗಳ ಸವಿಗಲಿಸಿ ತೊಲಗಿದಡೆಂತು ಬದುಕುವೆವು                                                ೪೫

ತಿಳಿಗೊಳದ ತೀರದಲಿ ರಂಜಿಪ
ಪುಳಿನದಲಿ ಬೆಳೆದಿರ್ದ ಹವಳದ
ಸೆಳೆಯ ಮಂಟಪದೊಳಗೆ ಹಾಸಿದ ತಳಿರು ಪುಷ್ಪಗಳ
ಹಲವು ಪರಿಮಳಗಳನು ಸೂಸುವ
ಸುಳಿವ ಮಂದಾನಿಳನ ಸಾರದ
ಲೊಲಿಸಿಯೊಲುಮೆಯೆನರಿದು ಕೂಡುವ ಕೃಷ್ಣ ಬಿಡಲಾರೆ                                              ೪೬

ಸರಸದಲಿ ಸವಿನುಡಿಯ ಮಾತಿನ
ಹರುಷದಲಿ ಹದಿರುಗಳ ಮುನಿಸಿನ
ಮರಸಿನಲಿ ಮೆಚ್ಚಿಕೆಯ ಮಮತೆಯ ಮರುಕದೊಲುಮೆಯಲಿ
ಎರಕದಲಿ ಯೆವೆಯಿಕ್ಕದೀಕ್ಷಿಸಿ
ಸುರತ-ಸುಖವನು ತೋರ್ಪ ನಿರ್ಮಳ
ಪರಮ ಪುರುಷೋತ್ತಮನೆ ನಿನ್ನನದೆಂತು ಮರೆದಿಹೆ[82]ನು[83]                                         ೪೭

ಎಳೆಯ ಬಾಳೆಯ ಬನದ ಮಧ್ಯದ
ಹೊಳೆವ ಹೊಂದಾವರೆಯ ಕೊಳದಲಿ
ಬೆಳೆದ [84]ಸೋ[85]ಮದ ಲತೆಯ ನೆಳಲೊಳಗುಲಿವ ಖಗಕುಲದ
ಗಳರವದ ಚುಂಬನದ [86]ವಾರಿಯ
ಗಳವನೀಕ್ಷಿಸಿ ಯೊಲಿದವೊಲುಮೆಯ[87]
[88]ನಲವ[89]ರಿದು ಮಿಗೆ ಕೂಡಿ ದಣಿಯದೆ ಕೃಷ್ಣ ಬಿಡಲಾರೆ                                                         ೪೮

ನಿನ್ನ ಸಂಗವ ಮಾಳ್ಪೆನೆಂದಾಂ
ಮುನ್ನ ನೋಂತೆನು ಹಲವು ನೋಂಪಿಯ
[90]ನೆ[91]ನ್ನ ಹೊನ್ನಿನ ಬಹುಳದಾನದ ಪುಣ್ಯ ಫಲದಿಂದ
ನಿನ್ನ ಸಂಗವ ಮಾಡಿ ನಿನ್ನಯ
ಚೆನ್ನ ತೋಳಿನೊಳೊರಗಿ ಮೆಚ್ಚಿದ
ಕನ್ನೆಯನು ತೊಲಗಿದರೆ ನಾನದನೆಂತು ಸೈರಿಪೆನು                                                     ೪೯

ಬಿರಿದ ಬಾಯರೆದೆರೆದ ಕಂಗಳ
ಜರಿದ ಸೀರೆಯ ಕೆದರಿದಳಕದ
ಸುರಿವ ಬೆಮರಿನ ಸೂಸುವುರಿಹೊಯ್ ವಳ್ಳೆಗಳ ಭರದಿ
ಹರಳು [92]ಕಲುಮುಳ್ಳು[93]ಗಳ ಘಾಯಕೆ
ಸುರಿವ ನೆತ್ತರ ಪದದ ಪದ್ಮಿನಿ
ಹರಿಯ ಚರಣದಿ ಬಂದು ಬಿದ್ದಳು ಶರಿರವನು ಮರೆದು                                                ೫೦

[94]ಎತ್ತಲೇ[95]ಳದೆ ಹರಿಯ ಚರಣದಿ
ಹತ್ತಿದಂದದಲಿರಲು ಕರದಿಂ
ದೆತ್ತಿ ಕುಳ್ಳಿರಿಸುತ್ತ ಕಂಡನು ವಿ[96]ಗಡ[97] ಜೀವನೆಯ
ಬಿತ್ತರಿಸಿಯಾಕೆಯ ಗುಣಂಗಳ
ಮತ್ತೆ ಮೈದಡವಿದರೆ ಆ ಸತಿ
ಚಿತ್ತಜನ ಜರೆಯುತ್ತಲೆದ್ದಳು ಮತ್ತೆ ಮೈಮುರಿದು                                                          ೫೧

ಪ್ರಾಣವಲ್ಲಭ ಕೃಷ್ಣ ಮನ್ಮಥ
ಜಾನನೆಚ್ಚಂಬುಗಳು ಮನವನು
[98]ಪೂಣಿಸಿತು ನಾ[99]ನಳಿಯೆ ಹೆಂಗೊಲೆ ನಿನ್ನ ತಾಗುವುದು
ಕಾಣೆನಾಸೆಯನೆನ್ನ ಜೀವದ
ಕೇಣಿಕಾರನು ನೀನು[100] ಕೇಳ್ ನಿ
ನ್ನಾಣೆಯೆನುತವೆ ಹರಿಯ[101] ಬಿಗಿದಪ್ಪಿದಳು ಲತೆಗಳಲಿ                                                            ೫೨

ಕಮಲಗಳು ಕನ್ನಡಿಯ ಹಿಡಿಯಲು
ಕಮಲ ಹಿಮಕರನೊ[102]ಡನೆ[103] ಬೆರಸಲು
ಕಮಲದಗ್ರದ ಸಸಿಯ ಸಸಿಯೊಳಗಿಟ್ಟು ಮುಂಡಾಡಿ
ಕಮಲಗಳ ಕೇದಗೆಯ ದಳದಲಿ
ಭ್ರಮರಗಳ ಸಂತಯಿಸಿ ಕೂಡುವ
ಕಮಲನಾಭನೆ ನಿನ್ನ [104]ನಗಲ್ದಾ[105]ನೆಂತು ಸೈರಿಪೆನು                                                            ೫೩

ತುಂಬಿವರಿಗಳ ದುಂಡು ದಂಡೆಗ
ಳಿಂಬಿ[106]ನಲಿ ಯೊ[107]ರಗಿರ್ದ ತುಂಬಿಯ
ನಂಬುಜದಿ ನಸುಸೆಳೆದು ಬಿಂಬವ ಸವಿದು ಮಧ್ಯದಲಿ
ತುಂಬಿಯನು ಕುಳ್ಳಿರಿಸಿ ತುಂಬಿದ
ಕುಂಭ-ಕಳಶದ ಮೇಲೆ ತುಂಬಿಗೆ
ತುಂಬಿ [108]ಕಸ್ತೂರಿ ಮಣಿಯ ಕೂಡುವ[109] ಕೃಷ್ಣ ಬಿಡಲಾರೆ                                                        ೫೪

ಚಂದ್ರಕಾಂತದ ಚಂದ್ರಶಾಲೆಯ
ಚಂದ್ರಮನ ಬೆಳಕಿ[110][111]ಲಿ ಚಂದ್ರನ
ಚಂದ್ರ[112]ನಲಿ[113] ಮುಂಡಾಡಿ ಚಂದ್ರನ ಚಂದ್ರನಿಂ ಸವಿದು
ಚಂದ್ರಗೆ[114]ಣೆ ಮಾಣಿಕವ ರಂಜಿಸಿ
ಚಂದ್ರಮನ ಚಕ್ರಾಂ[115]ಕಕೀಯುತ
ಚಂದ್ರಮನ ಕಳೆಯರಿತು ನೆರೆ[116]ವ ಮುಕುಂದ[117] ಬಿಡಲಾರೆ                                        ೫೫

ನಳಿನದೆಸಳಲಿ ಹೊಳೆವ ಜಲಚರ
ದೊಳಗೆ ತೊಳಗುವ ಕರಿಯ ಚಂದ್ರನ
ಲಲನೆಯರು ದಣಿವಂತೆ ನಿನ್ನಯ ಚಲುವಿಕೆಯ ತೋರಿ
ಒಲಿಸಿ ಬೇಟವ ೧೦[118]ಬಲಿದು೧೦[119] ಕೂಟವ
ಕಲಿಸಿಯಿಚ್ಛೆಯ ಸಲಿಸಿ ಕಾಮನ
ಗೆಲಿಸಿ ಮನವನು ನಿಲಿಸಿ ತೊಲಗಿದಡೆಂತು ಸೈರಿಪೆನು                                                 ೫೬

ಲತೆಯ ಮೇಗಣ ಗಿ[120]ರಿ[121]ಗಳನು ಎಳ
ಲತೆಯ ಕಮಳದಿ ಪಿಡಿದು ಲತೆಯನು
ಲತೆಗಳಲಿ ಬಿಗಿಬಿಗಿದು ಲತೆಯೆರಡೇಕವೆಂದೆನಿಸಿ
ಲತೆಯ [122]ಚಿತ್ತದ[123] ಸುರಗಿಯಿಂದವೆ
ಲತೆಗೆ ಪಟು[124]ನೂಲೆಳೆಯ ಸೇರಿಸಿ[125]
ಲತೆಗೆಯೆಳಸಸಿಯೊತ್ತಿ ಕೂಡುವ ಕೃಷ್ಣ ಬಿಡಲಾರೆ                                                       ೫೭

ಮದನ ಮನವನ್ನೆಚ್ಚ ಮಿಟ್ಟಿಗ
ಳೆದೆಯೊಳಗೆಯೆರಡಾಗಿ ಮೂಡಲು
ಬೆದರಿ ಗಿಣಿಕೋಗಿಲೆಗೆ ತುಂಬಿಗೆಯಿಂದುಮಾರುತಗೆ
ಎದುರು ನುಡಿಯಲಿಕಂಜಿ ನಿನ್ನಯ
ಪದಯುಗವ ಸಾರಿದೆನು ಕೂಟದ
ಚದುರುಗಳ ಸವಿಗಲಿಸಿ ತೊಲಗಿದರೆಂತು ಸೈರಿಪೆನು                                                   ೫೮

ರಂಗ ನಿನ್ನಯ ಅಧರಬಿಂಬದ
ಪೊಂಗೊಳಲ ಹದಿನಾರು ಸಾವಿರ
ರಂಗಿಸುವ ರಾಗಗಳ ರಚನೆಗೆಯೊಲಿದು ಬಂದವಳ
ಸಂಗಸುಖಸಾಗರದ ಧರೆಯಲಿ
ಹಿಂಗದೋಲಾಡಿಸಿಯೆ ನೀ ಹೋ-
ಹಂಗವಿದು ಲೇಸೆನುತ ಪಿಡಿದಳು ತುಡಿಗೆಮುಂಜೆರಗ                                                   ೫೯

*[126]ಈಸು ದಿನ ಸೌಖ್ಯದಲಿ ನಂದನ
ಘೋಷವನು ಪುರವೆನಿಸಿ ಮನ್ಮಥ
ವಾಸಿಯನು ಸಲೆ ತುಂಬಿ ಮತ್ ಪ್ರಾಣೇಶನೆಂದಿನಿಸಿ
ಈ ಸಮಯದಲಿ ಬಿ[127]ಟ್ಟು[128] ಹೋಹ ವಿ
ಳಾಸವಿದು [129]ಲೇಸಾಯ್ತು[130] ಜೀವನ
ದಾಸೆ ನಮಗಿ[131]ಲ್ಲೆಂ[132]ದು ಮರುಗಿದರಖಿಳ ಗೋಪಿಯರು                                         ೬೦


[1] ೭-೭ ಸಾವಿನ (ಆ)

[2] ೭-೭ ಸಾವಿನ (ಆ)

[3] ೮-೮ ದೋರೆ (ಆ)

[4] ೮-೮ ದೋರೆ (ಆ)

[5] ೯-೯ ಯರತು (ಆ)

[6] ೯-೯ ಯರತು (ಆ)

[7] ೧೦-೧೦ ದೊಳಗುರಿ (ಮು)

[8] ೧೦-೧೦ ದೊಳಗುರಿ (ಮು)

[9] ೧೧-೧೧ ದಿತು (ಆ)

[10] ೧೧-೧೧ ದಿತು (ಆ)

[11] ೧೨-೧೨ ಬೆಚ್ಚಿದುವು (ಆ)

[12] ೧೨-೧೨ ಬೆಚ್ಚಿದುವು (ಆ)

[13] ೧೩-೧೩ ಡನು (ಆ)

[14] ೧೩-೧೩ ಡನು (ಆ)

[15] ೧೪-೧೪ ಚರಣಕಮಲದಲಿ (ಆ)

[16] ೧೪-೧೪ ಚರಣಕಮಲದಲಿ (ಆ)

[17] ೧-೧ ಭರದೆ (ಮು)

[18] ೧-೧ ಭರದೆ (ಮು)

[19] ೨-೨ ಸಸಿ (ಮು)

[20] ೨-೨ ಸಸಿ (ಮು)

[21] ೩-೩ ತಂದು (ಮು)

[22] ೩-೩ ತಂದು (ಮು)

[23] ೪-೪ ಸತಿ ಹರಿ (ಮು)

[24] ೪-೪ ಸತಿ ಹರಿ (ಮು)

[25] ೫-೫ ಸತಿ (ಆ-ಮು)

[26] ೫-೫ ಸತಿ (ಆ-ಮು)

[27] ೬-೬ ತುಂಬಿದ (ಆ), ತುಂಬಿಯ (ಮು)

[28] ೬-೬ ತುಂಬಿದ (ಆ), ತುಂಬಿಯ (ಮು)

[29] ೭-೭ ಹರಿದಾ (ಆ-ಮು)

[30] ೭-೭ ಹರಿದಾ (ಆ-ಮು)

[31] ೧-೧ ಖಣಿಯ ತೆರ (ಆ)

[32] ೧-೧ ಖಣಿಯ ತೆರ (ಆ)

[33] ೨-೨ ದಾ (ಮು)

[34] ೨-೨ ದಾ (ಮು)

[35] ೩-೩ ಕರದಳಿ (ಮು)

[36] ೩-೩ ಕರದಳಿ (ಮು)

[37] ೪-೪ ಮಿತ್ರನು ಬೇಯ ಲಾಗಳಿ (ಆ)

[38] ೪-೪ ಮಿತ್ರನು ಬೇಯ ಲಾಗಳಿ (ಆ)

[39] ೫-೫ ಗೆಲುತಲೈ (ಆ)

[40] ೫-೫ ಗೆಲುತಲೈ (ಆ)

[41] ೬-೬ ಬೆ (ಮು)

[42] ೬-೬ ಬೆ (ಮು)

[43] ೭-೭ ಭಸ್ಮದ (ಆ)

[44] ೭-೭ ಭಸ್ಮದ (ಆ)

[45] ೮-೮ ಲೇ (ಆ)

[46] ೮-೮ ಲೇ (ಆ)

[47] ೯-೯ ದಲಿ (ಆ)

[48] ೯-೯ ದಲಿ (ಆ)

[49] ೧-೧ ಫಳವನು (ಆ), (ಮು)

[50] ೧-೧ ಫಳವನು (ಆ), (ಮು)

[51] ೨-೨ ವರಬಾಹು (ಮು)

[52] ೨-೨ ವರಬಾಹು (ಮು)

[53] ೩-೩ ಮದನ (ಆ, ಮು)

[54] ೩-೩ ಮದನ (ಆ, ಮು)

[55] ೪-೪ ಗೊಡದಿರು (ಆ)

[56] ೪-೪ ಗೊಡದಿರು (ಆ)

[57] ೫-೫ ಳಬುಜ (ಆ)

[58] ೫-೫ ಳಬುಜ (ಆ)

[59] ೬-೬ ಮೊಲ್ಲೆಯ (ಮು)

[60] ೬-೬ ಮೊಲ್ಲೆಯ (ಮು)

[61] ೭-೭ ನುರೆ (ಮು)

[62] ೭-೭ ನುರೆ (ಮು)

[63] ೮-೮ ಮಂದಗಮನವ (ಮು)

[64] ೮-೮ ಮಂದಗಮನವ (ಮು)

[65] ೯-೯ ವಣ್ಣಿಗೆ (ಆ)

[66] ೯-೯ ವಣ್ಣಿಗೆ (ಆ)

[67] ೧೦-೧೦ ನಡುಗುತಿರೆ (ಮು)

[68] ೧೦-೧೦ ನಡುಗುತಿರೆ (ಮು)

[69] ೧೧ ದು (ಆ)

[70] ೧೨-೧೨ ವಳುಕೆ (ಮು), ನಖಕೆ (ಆ)

[71] ೧೨-೧೨ ವಳುಕೆ (ಮು), ನಖಕೆ (ಆ)

[72] ೧-೧ ತ (ಮು)

[73] ೧-೧ ತ (ಮು)

[74] ೨-೨ ನಿಗಳ (ಮು)

[75] ೨-೨ ನಿಗಳ (ಮು)

[76] ೩-೩ ತಳದ ಮುರಡಿ (ಮು)

[77] ೩-೩ ತಳದ ಮುರಡಿ (ಮು)

[78] ೪-೪ ಲು (ಮು)

[79] ೪-೪ ಲು (ಮು)

[80] ೫-೫ ಬಳ್ಳಿಯ ಮೇಲೆ ಹಂಸೆಯ ತುಳಿಯ ಹಾಸಿನಲಿ (ಮು)

[81] ೫-೫ ಬಳ್ಳಿಯ ಮೇಲೆ ಹಂಸೆಯ ತುಳಿಯ ಹಾಸಿನಲಿ (ಮು)

[82] ೧-೧ ವು (ಮು)

[83] ೧-೧ ವು (ಮು)

[84] ೨-೨ ಹೇ (ಮು)

[85] ೨-೨ ಹೇ (ಮು)

[86] ೩-೩ ಪಾರಿವ ಗಳಯುಗವನೀಕ್ಷಿಸೊಲಿದೊಲುಮಯ (ಮು)

[87] ೩-೩ ಪಾರಿವ ಗಳಯುಗವನೀಕ್ಷಿಸೊಲಿದೊಲುಮಯ (ಮು)

[88] ೪-೪ ನೆಲೆಯ (ಮು)

[89] ೪-೪ ನೆಲೆಯ (ಮು)

[90] ೧-೧ ನ (ಆ, ಮು)

[91] ೧-೧ ನ (ಆ, ಮು)

[92] ೨-೨ ಮುಳು ಕಲ್ಲು (ಮು)

[93] ೨-೨ ಮುಳು ಕಲ್ಲು (ಮು)

[94] ೩-೩ ಮತ್ತೆಯೇ (ಮು)

[95] ೩-೩ ಮತ್ತೆಯೇ (ಮು)

[96] ೪-೪ ಕಟ (ಮು)

[97] ೪-೪ ಕಟ (ಮು)

[98] ೫-೫ ಹೂಣಿಸಿದುವಾ (ಮು)

[99] ೫-೫ ಹೂಣಿಸಿದುವಾ (ಮು)

[100] ೬-೬ ಕೇಳೈ ಮಾಣೆ : ಸೈರಿಸೆನೆನುತ (ಮು)

[101] ೬-೬ ಕೇಳೈ ಮಾಣೆ : ಸೈರಿಸೆನೆನುತ (ಮು)

[102] ೧-೧ ಳಗೆ (ಆ-ಮು)

[103] ೧-೧ ಳಗೆ (ಆ-ಮು)

[104] ೨-೨ ಮರೆದಾ (ಆ-ಮು)

[105] ೨-೨ ಮರೆದಾ (ಆ-ಮು)

[106] ೩-೩ ನೊಳಗೋ (ಮು)

[107] ೩-೩ ನೊಳಗೋ (ಮು)

[108] ೪-೪ ಕತ್ತು ರಿಯುಡುವ ಮಣಿಯನು (ಮು)

[109] ೪-೪ ಕತ್ತು ರಿಯುಡುವ ಮಣಿಯನು (ಮು)

[110] ೫-೫ ಗಿ (ಆ)

[111] ೫-೫ ಗಿ (ಆ)

[112] ೬-೬ ನಿಂ (ಆ, ಮು)

[113] ೬-೬ ನಿಂ (ಆ, ಮು)

[114] ೭ ಳೆ (ಆ)

[115] ೮ ಗ (ಆ)

[116] ೯-೯ ಗೋವಿಂದ (ಆ-ಮು)

[117] ೯-೯ ಗೋವಿಂದ (ಆ-ಮು)

[118] ೧೦-೧೦ ಬಳಿಕ (ಮು)

[119] ೧೦-೧೦ ಬಳಿಕ (ಮು)

[120] ೧-೧ ಣಿ (ಆ)

[121] ೧-೧ ಣಿ (ಆ)

[122] ೨-೨ ಭೇದದ (ಆ)

[123] ೨-೨ ಭೇದದ (ಆ)

[124] ೩-೩ ತರಲತೆಯನೇರಿಸಿ (ಮು)

[125] ೩-೩ ತರಲತೆಯನೇರಿಸಿ (ಮು)

[126] * ಈ ಪದ್ಯದ ಮೊದಲಿನ ಮೂರು ಸಾಲುಗಳು ಮುದ್ರಿತ ಪ್ರತಿಯಲ್ಲಿ ಹೀಗಿವೆ: ಲೇಸು ಲೇಸೈ ಕೃಷ್ಣ ನಮ್ಮನು | ಗಾಸಿಗೆಯ್ಯುತೆ ಪೋಗುವರೆ ಈ | ಮೋಸಗಾರಿಕೆ ವಿದ್ಯೆಗಳನೆಮ್ಮಲ್ಲಿ ನಡೆಸುವೆಯ||

[127] ೪-೪ ಸುಟು (ಆ)

[128] ೪-೪ ಸುಟು (ಆ)

[129] ೫-೫ ಸೆನುತೆ (ಆ)

[130] ೫-೫ ಸೆನುತೆ (ಆ)

[131] ೬-೬ ಲ್ಲೆನುತ (ಆ)

[132] ೬-೬ ಲ್ಲೆನುತ (ಆ)