ದೇವ ನಿನ್ನ ಮು

[1]ಖೇದು[2]ವನು ಬಿ
ಟ್ಟಾವ ಪರಿಯಲಿ[3] ಜೀವಿಸುವೆನೀ
ಜೀವ ತಲೆಕೆಳಗಾಗುತಿದೆಯ[4]ರೆಗಳಿಗೆ ಮಾತ್ರದಲಿ
[5]ಸಾವಿಗಾನಂಜಿದರೆ ಮಿಕ್ಕೆನ-
ಗಾವುದರ ಫಲವಿಲ್ಲ ಸತಿಯರಿ-
ಗಾವುದೀ ನಗೆ ಲಜ್ಜೆ ಮರಣವು ಎಂದಳೊಬ್ಬ ಸಖಿ[6]                                                     ೬೧

ಗುರುಕುಚದ ನಗೆಮೊಗದ ವೈರದ
ಅರಳುಗಂಗಳ ತೋಳುಗಳ ಮ-
ಚ್ಚರದ ಸುಳಿಗುರುಳಗಳ ನಾಸಾಪುಟದ ಮನಮುನಿಸ
ಹರಿ ತನಗೆ ಸರಿಯೆಂಬ ಬಿಂಬಾ-
ಧರದಿ ಕುಣಿಸುವ ಮೆಲುನುಡಿಯ ಕಾ-
ಹುರುತನದ ದುರ್ಗತಿಯರೈತಂದುದು ಸಖೀನಿವಹ                                                     ೬೨

ನಡು ನಡುಗೆ ಬಳುಕುತ್ತ ಕುಚಯುಗ
ಜಡಿ[7]ಯೆ ದಂತ[8]ನಿತಂಬ ತಮ್ಮೊಳು
ಕಡು ನಿರೋಧವ ಮಾಡುತೊಪ್ಪುವ ಕಬರಿ ನಸುನಗೆಯ
ಹೊಡಕರಿ[9]ಸೆಯಿವರೀ ಜಗಳವನು[10]
ಬಿಡಿಸು ನೀನೆಂದಚ್ಯುತನ ಕಾ-
ಲ್ಪಿಡಿಯೆ ಬಂದರೆನಲ್ಕೆ ನೆರೆದುದು ವಲ್ಲ[11]ಭೀ ನಿವಹ                                                    ೬೩
[12][13] ತವರನಗಲಿ [14][15]ಸುರದ್ವಿಷ-
ನೀತನೆನಿಸಿ ಮದೀಯ ಚಿತ್ತ
ಪ್ರೀತಿಯನು ಧಿಃಕರಿಸಿ ನಂದ-ಯಶೋದೆಯರ ಮನವ
ಮಾತಿನಲಿ ಮೋಹಿಸಿದ ದುಷ್ಟಂ
ಗೇತಕೀಯಕ್ರೂರವೆಸರಬು-
ಜಾತಲೋಚನ ತಿಳುಹೆನುತ ಮುತ್ತಿತು ಸತೀನಿವಹ                                                     ೬೪

ಬಂದಖಿಳ ಗೋಪಿಯರು ಕೃಷ್ಣನ
ಹಿಂದೆಮುಂದಿಕ್ಕೆಲದೊಳಳುಕದೆ
ಸಂದಣಿಸಿ ಕೈಮುಗಿದು ಮುದ್ದಿಸಿ ಮುನಿದು ಮುಂಡಾಡಿ
ಇಂದುಪರಿಯಂತೆಮ್ಮ [16]ಚಿತ್ತವ[17]
ಬಂದಿವಿಡಿದೀಗಗಲಿ ಹೋಹರೆ
ಕೊಂದು ಹೋಗೆಂ[18]ದೆನುತ[19] ಹೊರಳಿದರಂಘ್ರಿಕಮಲದಲಿ                                          ೬೫

ನಿಲ್ಲಿ ನೀವಂಜದಿರೆನು[20]ತ ನೆರೆ
ಫುಲ್ಲ [21]ಪಂಕಜನೇತ್ರನೆಲ್ಲರ
ಭುಲ್ಲವಿಸಿ ಮೈದಡವಿ ಕಂಬನಿದೊಡೆದು ಬಿಗಿದಪ್ಪಿ
ಬಿಲ್ಲ ಹಬ್ಬದ ಮರುದಿವಸ ಬಂ-
ದಲ್ಲದಿರೆ ನಿಮ್ಮಾಣೆಯೆನೆ ಸಿರಿ
ವಲ್ಲಭಂಗೊಬ್ಬೊಬ್ಬರರುಹಿದರಳಲಿ ನಿಜ ಮತವ                                                         ೬೬

ನಂದನಂದನ ನಿನ್ನೊಡನೆ ನಾ
ಬಂದೊಡಲ್ಲದೆ ಮಾಣೆನೆನಗೇ
ನೆಂದು ಬುದ್ಧಿಯ ಪೇಳ್ವೆ ವೈಸಿಕವೆನ್ನಕೂಡೇಕೆ?
ತಂದೆತಾ[22]ಯ್ಗಳ[23] ಬಂಧುವರ್ಗದ
ಬಂದಿಗಳುಕದೆ ಬಂದೆನೆಲೆ ಗೋ-
ವಿಂದ ಸಲಹೆಂದೊರ್ವ ಸತಿ ಕಾಲ್ವಿಡಿದಳಚ್ಯುತನ                                                        ೬೭

ನಿನ್ನೊಲವ ನಾ ಬಲ್ಲೆನೆಲೆ ಸಂ-
ಪನ್ನೆ ಶಶಿಮುಖಿಯಾಡಿ ತೋರುವೊ
ಡೆನ್ನ ನಿನ್ನಲಿ ಭೇದವೇ ನಾನಾವನೆಂದರಿಯಾ
ಮನ್ನಣೆಯ ಮಾನಿನಿಯರಲಿ ಸಂ-
ಪನ್ನೆಯನು ನಾನಾಗಲಿ ಬದುಕುವೊ
ಡೆನ್ನ ತನುವುಕ್ಕಿನಲಿ ಮಾಡಿತೆ ಕಾಂತೆ ಕೇಳೆಂದ                                                         ೬೮

ಮುರಮಥನ ಚಿಕ್ಕಂದಿನೆನ್ನನು
ಮರೆಯಲಾಗದು ಕಂಸನಗರಿಯ
ತರುಣಿಯರ ಸಂ[24]ಯೋಗ[25] [26]ಸಮರ[27]ದಲೆನ್ನ ನೆನೆದಿಹುದು[28]
ವಿರಹದಲಿ ನಾನಳಿದೆನಾದರೆ
ಮರಳಿ ನೀನಿದ್ದಲ್ಲಿ ಹುಟ್ಟುವ
ವರವ ಕೊಡು ಬೀಳ್ಕೊಂಡೆ[29]ನೆಂದೆರಗಿದಳು ಚರಣದಲಿ[30]                                          ೬೯

ಅವಳ ನುಡಿಗತಿ ಮೆಚ್ಚಿ ಕಮಲಾ
ಧವನು ಬಹು ಪ್ರೇಮದಲಿ ನುಡಿದನು
ಧವಳಲೋಚನೆ ನಿನ್ನ ಮರೆದಾನಲ್ಲಿ ನೆಲೆಸುವೆನೆ
ತವಕಿಸುವ ತನು ನಿಲ್ಲದೀ ಲವ
ಲವಿಕೆ [31]ಬೀಯದು ತನುಸುಖದೊಳನು[32]
[33]ಭವವ ಕಾಣೆನು ನಿನ್ನ ಹತ್ತಿರಕೆ[34]ಳೆದು ತಹುದೆಂದ                                                  ೭೦

ಎಲೆ ಮನಃಪ್ರಿಯ ಕೃಷ್ಣ ಕೇಳಿ
ನ್ನುಳಿವನೊಲಿವರೆ ನಿನ್ನ ಕಂಗಳ
ಬೆಳಗ ನಿನ್ನ ಧರಾಮೃತವ ನಿನ್ನಾಸ್ಯಪಂಕಜದೆ
ಚೆಲುವಿಕೆಯನೆನಗಿತ್ತ ಕಳಿಸಿ ಮ
ರಳಿಯೆ[35] ನೀ ಬಹ ದಿನಕೆ ಬಾ ಮೇ
ಣುಳಿದಡಲ್ಲಿಗೆ ಕರೆಸು ನಂಬಿದೆನೆಂದಳೊಬ್ಬ ಸತಿ                                                         ೭೧

ತರುಣಿ ಕೇ[36]ಳ್ ನಿ[37]ನ್ನೊಲವನಾ ಬಿ
ಟ್ಟಿರೆ ಸಮರ್ಥನೆ ನಿನ್ನ ಯೌವನ
ಸರಸಿಜಾ [38]ಕರಕೆ[39]ನ್ನ ಮನ ಮದ೧೦[40]ಹಂಸನೆಂದರಿಯಾ
ನಿರುತವಿದು ನಿನ್ನಾಣೆ ಬಹೆನೊಂ
ದೆರಡು ದಿವಸಕೆ ಚಿಂತೆ ಬೇಡೆಂ
ದೂರದು ನಂಬುಗೆಗೊಟ್ಟು ಕಳುಹಿದನಾ ಸುವಾಸಿನಿಯ                                                            ೭೨

ಎಲೆ ಜನಾರ್ದನ ಹೋಗು [41]ನೀನದ
ಕಳಕುವವಳಾನಲ್ಲ[42] ಮಿಕ್ಕಿನ
ಲಲನೆಯರ ಪರಿಯೆಂದು ನೋಡದಿರೆನ್ನ ಚಿತ್ತವ[43]ನು[44]
[45]ಕಲು ಹೃದಯ ನೀ ಮದನ[46] ಬಾಣದ
ಕೊ[47]ಲೆಗೆ ಸೈರಿಸಲಾರೆ ಈ ತನು
ವಳಿದಡೆ[48]ನಗ[49]ಪರಾಧವಿಲ್ಲೆನುತಿರ್ದಳಬುಜಾಕ್ಷಿ                                                       ೭೩

ಕಂಬುಕಂಧರೆ ಕೇಳು ನಿನ್ನ ಮು
ಖಾಂಬುಜದ ಪರಿಮಳಕೆ ಮೋಹಿಪ
ತುಂಬಿಯಲ್ಲವೆ [50]ನನ್ನ ತನುವದನಾಡಿ ಫಲವೇನು[51]
ನಂಬಲಾಪರೆ ನಂಬು ಬಯಲ ವಿ
[52]ಡಂಬಿನವ[53]ನಾನಲ್ಲ ಕೋ ರಸ
ದಂಬುಲವನೆಂ[54]ದಪ್ಪಿ[55]ಕಳುಹಿದನಾ ಸುವಾಸಿನಿಯ                                                 ೭೪

ದೇವ ನಿನ್ನ ಮುಖಾಂ [56]ಬುಜವ[57] ಬಿ
ಟ್ಟಾವ ಪರಿಯಲಿ ಹದುಳಿಸುವೆ೧೦[58]ನೆ
ನ್ನೀ ವಿಕಳಮೆಂತಡಗಿಯಿವೆ ಕೋಗಳಿಗೆ ಮಾತ್ರದಲಿ೧೦[59]
ಸಾವೆ ನೀನಗಲಿದಡೆ ಬಳಿ೧೧[60]ಕಿ
ನ್ನಾವ ಮಾತಿನಲೇನು ಫಲ ತನು
ಬೇವು೧೨[61]ತಿದೆಯೆನಗೆಂದೊಡಾ ಹರಿ ಸತಿಯೆ ಕೇಳೆಂದ೧೨[62]                                           ೭೫

ಗಂಧಸಿಂಧುರಯಾನೆ ಬಾ ಮನ
ಗುಂದದಿರು ಸುಯ್ಯದಿರು ಮುಖದಲಿ
ಕಂದಿದೇತಕೆ ಚದುರತನಕಿದು ನೀತಿಯೇ ನಿನಗೆ
ನಂದನಾಣೆ ಧನುರ್ಮಹೋತ್ಸವ
ದೊಂದಿರುಳೊಳಲ್ಲಿರ್ದು ಮರುದಿನ
ಬಂದು ನಿನ್ನೊಡನಿಲ್ಲದಿರೆನಬುಜಾಕ್ಷಿ ಕೇಳೆಂದ                                                             ೭೬

ಏತಕೆಲೆ ದನುಜಾರಿ ಠಕ್ಕಿನ
ಮಾತಿನಲಿ ಬೋಸರಿಪೆ[63] ನಮ್ಮನು
ಬೂತು ಮಾಡದೆ ಹೋಗು ನಿನ್ನಯ ಚಿಂತೆ ನಮಗೇಕೆ?
ನೀ ತರುಣ ನಿನಗೊಲಿದು[64]ದೆಮ್ಮಯ
ನೀತಿ ಸಾಕಂತಿರಲಿ ಜೀವದ
ಭೀತಿಯೆಳ್ಳನಿತಿಲ್ಲೆನುತ ಬಿಸುಸುಯ್ದಳಬುಜಾಕ್ಷಿ                                                            ೭೭

ಆ ಕಮಲಲೋಚನೆಯ ಚಿತ್ತದ
ಜೋಕೆಯನು ಹರಿ[65]ಯರಿದು[66] ನಿಸ್ಪೃಹೆ
ಯೀಕೆ ಹದುಳಿಸಲರಿಯಳೆಂದೇಕಾಂತದಲಿ ಕರೆದು
ಸಾಕು ಸತಿ ನಿಬ್ಬರದ ನುಡಿಗಳ
ವೇ[67]ಕೆ ಹೃದಯವನರಿದು ಮತ್ತವಿ
ವೇಕಿತನದಲಿ ಮುಳಿ[68]ಯಬೇಡೆಂದೆನುತ ಕೈಮುಗಿದ                                                  ೭೮

ಮರುಳು ಮಾಧವ ನಿನ್ನ ಗುಣ ಸೌಂ
[69]ರಿಯ[70] ಕಂಡರೆ ರಾಜಧಾನಿಯ
ತರುಣಿಯರು ಬರಲೀಯರಿ[71]ದು ದಿಟವೆನ್ನ ಚಿತ್ತದಲಿ
ಮರಳಿ ನೀ [72]ಬಹುದ[73]ರಿದು ನೇಹದ
ಪರಿವಿಡಿಯ ಮಾತುಗಳನಾಡದೆ
ತೆರಳು ಮಥುರಾಪುರಿಗೆ ಬೇಗದೊಳೆಂದಳಿಂದುಮುಖಿ                                                  ೭೯

ಲಲನೆ ಚಿತ್ತೈಸೆಲೆ ನಿತಂಬಿನಿ
ಮುಳಿಯದಿರು ನಳಿನಾಕ್ಷಿ ಚಿತ್ತದ
ಕಲುಷವನು ಬಿಡು ಸುದತಿ ಯಳಲದಿ[74]ರಿನಿತು[75] ಬಾ೧೦[76]ರೆಂದ೧೦[77]
ಒಲವು ಮಿಗೆ ಬಿಗಿಯಪ್ಪಿ ರಸದಂ
ಬುಲವನಿ೧೧[78]ತ್ತನು೧೧[79]ರಾಗದಲಿ ಮುಡಿ
ಯಲರನೆಲ್ಲಗಿರಿತ್ತು ಹರಿ ಹೋ೧೨[80]ಪಿಯರ೧೨[81] ಬೀಳ್ಕೊಂಡ                                            ೮೦

ಹಿಂದೆ ತುರುವಿಂಡುಗಳ ಕಾದಿಹ
ಮಂದಿಯನು ಪರುಠವಿಸಿ ಕಳುಹುತ
ಬಂದ ಹಿರಿಯರ ನಿಲಿಸಿ ಬಹ ಗೋವಳರ ಬೋಳಯಿಸಿ
ಮುಂದಣಧ್ವಕೆ ಬೋನವನು ತಹು
ದೆಂದು ನೇಮಿಸಿ ರಾಮ ಸಹಿತ ಮು
ಕುಂದ ತೆರಳಿದನಳ್ಳಿರಿವ ಬಹು ವಾದ್ಯ ರಭಸದಲಿ                                                        ೮೧

ಬಳಿಕ ರಥವೆಚ್ಚಂಬಿನಂತು
ಚ್ಚಳಿಸಿ ಹಾಯ್ದುದು ಹಯದ ಖುರಪುಟ
ದಳಿತ ಭೂರಜ ಮುಸುಕಿತಭ್ರದೊಳರ್ಕಮಂಡಲವ
ಬಳಿಯಲೈದಿಯೆ ಬಹವರನು ಕಂ
ಡಳವಳಿದು ಗೋಪಿಯ[82]ರು ಬಿಟ್ಟು[83]
ಮ್ಮಳಿಸುತಳಲುತ ನೆನೆಯುತಿರ್ದರು ಹರಿಯ ಸದ್ಗುಣವ                                               ೮೨
ನಾಲ್ಕನೆಯ ಸಂಧಿ ಮುಗಿದುದು


[1] ೧-೧ ಖಾಬ್ಜ (ಮು)

[2] ೧-೧ ಖಾಬ್ಜ (ಮು)

[3] ೨-೨ ಹದುಳಿಸುವೆನೆನೆ | ನೀ ವಿಕಳ ಮದ್ದರೆದವೊಳು (ಮು)

[4] ೨-೨ ಹದುಳಿಸುವೆನೆನೆ | ನೀ ವಿಕಳ ಮದ್ದರೆದವೊಳು (ಮು)

[5] ೩-೩ ಸಾವೆ ನೀನಗಲಿದೊಡೆ ಬಳಿಕಿ | ನ್ನಾವ ಮಾತಿನಲ್ಲೇನು ಫಲ ತನು | ಬೇವುತಿದೆ ಎನಗೆಂದು ಹರಿದಳು ಸತಿಯು ಸುಯ್ವಿಡುತೆ || (ಮು)

[6] ೩-೩ ಸಾವೆ ನೀನಗಲಿದೊಡೆ ಬಳಿಕಿ | ನ್ನಾವ ಮಾತಿನಲ್ಲೇನು ಫಲ ತನು | ಬೇವುತಿದೆ ಎನಗೆಂದು ಹರಿದಳು ಸತಿಯು ಸುಯ್ವಿಡುತೆ || (ಮು)

[7] ೪-೪ ಯಲತ್ತ (ಮು)

[8] ೪-೪ ಯಲತ್ತ (ಮು)

[9] ೫-೫ ಸುತಿದೆಯಿವರ ಜಗಳವ (ಮು)

[10] ೫-೫ ಸುತಿದೆಯಿವರ ಜಗಳವ (ಮು)

[11] ೬-೬ ವೀ (ಮು)

[12] ೭-೭ ಸೋ (ಮು)

[13] ೭-೭ ಸೋ (ಮು)

[14] ೮-೮ ಸಿ (ಆ)

[15] ೮-೮ ಸಿ (ಆ)

[16] ೧-೧ ನಂಬಿಸಿ (ಮು)

[17] ೧-೧ ನಂಬಿಸಿ (ಮು)

[18] ೨-೨ ದಳಲಿ (ಆ)

[19] ೨-೨ ದಳಲಿ (ಆ)

[20] ೩-೩ ತ್ತುತ್ಫುಲ್ಲ (ಅ,ಮು)

[21] ೩-೩ ತ್ತುತ್ಫುಲ್ಲ (ಅ,ಮು)

[22] ೪-೪ ಯ್ಸಖಿ (ಆ), ರತಿ (ಅ)

[23] ೪-೪ ಯ್ಸಖಿ (ಆ), ರತಿ (ಅ)

[24] ೧-೧ ಭೋಗ (ಆ-ಮು)

[25] ೧-೧ ಭೋಗ (ಆ-ಮು)

[26] ೨-೨ ಕಾಲ (ಮು)

[27] ೨-೨ ಕಾಲ (ಮು)

[28] ೩ -೩ ಸಮಯದೊಳೆನ್ನ ನೆನೆಸುವುದು (ಆ)

[29] ೪-೪ ನೆಂದು ಪದಕ್ಕೆ ನಮಿಸಿದಳು (ಆ)

[30] ೪-೪ ನೆಂದು ಪದಕ್ಕೆ ನಮಿಸಿದಳು (ಆ)

[31] ೫-೫ ಬಿಡದೀ ದೇಹ ಸುಖದನು (ಆ-ಮು)

[32] ೫-೫ ಬಿಡದೀ ದೇಹ ಸುಖದನು (ಆ-ಮು)

[33] ೬-೬ ಛಡಾಳಿಸಿ ಮರಳಿ ನಿನ್ನೆಡೆಗೆ (ಆ-ಮು)

[34] ೬-೬ ಛಡಾಳಿಸಿ ಮರಳಿ ನಿನ್ನೆಡೆಗೆ (ಆ-ಮು)

[35] ೭-೭ ಚೆಲುವಿಕೆಯ ನೆನೆವವೊಲು ಮನವನು ಸಲಿಸಿ (ಮು)

[36] ೮-೮ ಳೆ (ಮು)

[37] ೮-೮ ಳೆ (ಮು)

[38] ೯-೯ ತಕ್ಕೆ (ಆ-ಮು)

[39] ೯-೯ ತಕ್ಕೆ (ಆ-ಮು)

[40] ೧೦ ದು (ಮು)

[41] ೧-೧ ನೀನಿಂತಳುಕಿಸುವರಾವಲ್ಲ (ಅ)

[42] ೧-೧ ನೀನಿಂತಳುಕಿಸುವರಾವಲ್ಲ (ಅ)

[43] ೨-೨ ದಲಿ (ಆ)

[44] ೨-೨ ದಲಿ (ಆ)

[45] ೩-೩ ಕಲುಷವಿಲ್ಲ ಮನೋಜ (ಆ-ಮು)

[46] ೩-೩ ಕಲುಷವಿಲ್ಲ ಮನೋಜ (ಆ-ಮು)

[47] ೪ ಬ (ಆ)

[48] ೫-೫ ನ್ನ (ಮು)

[49] ೫-೫ ನ್ನ (ಮು)

[50] ೬-೬ ಯೆನ್ನ ತನುನಾನಾಡಿದೀ ಮಾತ (ಆ), ಎನ್ನ ತನು ನಾನಾಡಿ ಫಲವೇನು (ಮು)

[51] ೬-೬ ಯೆನ್ನ ತನುನಾನಾಡಿದೀ ಮಾತ (ಆ), ಎನ್ನ ತನು ನಾನಾಡಿ ಫಲವೇನು (ಮು)

[52] ೭-೭ ಡಂಬದವ (ಆ-ಮು)

[53] ೭-೭ ಡಂಬದವ (ಆ-ಮು)

[54] ೮-೮ ದಿತ್ತು (ಆ)

[55] ೮-೮ ದಿತ್ತು (ಆ)

[56] ೯-೯ ಬ್ಜವನು (ಆ-ಮು)

[57] ೯-೯ ಬ್ಜವನು (ಆ-ಮು)

[58] ೧೦-೧೦ ನನ ಗೀ ವಿತ್ತಳ ಮೇಲುಗೆಡೆದಂತಿದೆ ವಿಘಳಗೆಯಲಿ (ಆ), ನೆನೆ ನೀ ವಿಕಳ ಮದ್ದೆರೆದವೋಲರೆಗಳಿಗೆ ಮಾತ್ರದಲಿ (ಮು),

[59] ೧೦-೧೦ ನನ ಗೀ ವಿತ್ತಳ ಮೇಲುಗೆಡೆದಂತಿದೆ ವಿಘಳಗೆಯಲಿ (ಆ), ನೆನೆ ನೀ ವಿಕಳ ಮದ್ದೆರೆದವೋಲರೆಗಳಿಗೆ ಮಾತ್ರದಲಿ (ಮು),

[60] ೧೧ ಕೆ (ಆ)

[61] ೧೨-೧೨ ದಿನಿಯರಗಲ್ಕೆ ಸಮನಿಸಿದಂದು ಸತಿಯರಿಗೆ (ಆ), ದಿದೆ ಎನಗೆಂದು ಹರಿದಳು ಸತಿಯುಸು ಯ್ವಿಡುತ (ಮು)

[62] ೧೨-೧೨ ದಿನಿಯರಗಲ್ಕೆ ಸಮನಿಸಿದಂದು ಸತಿಯರಿಗೆ (ಆ), ದಿದೆ ಎನಗೆಂದು ಹರಿದಳು ಸತಿಯುಸು ಯ್ವಿಡುತ (ಮು)

[63] ೧ ಸಿ (ಅ-ಮು)

[64] ೨ ವು (ಮು)

[65] ೩-೩ ಕಂಡು (ಆ)

[66] ೩-೩ ಕಂಡು (ಆ)

[67] ೪ ದೇ (ಅ-ಮು)

[68] ೫ ನಿ (ಅ)

[69] ೬-೬ ರವ (ಆ)

[70] ೬-೬ ರವ (ಆ)

[71] ೭ ರ (ಆ-ಮು)

[72] ೮-೮ ಹದನ (ಮು)

[73] ೮-೮ ಹದನ (ಮು)

[74] ೯-೯ ರಬಲೆ (ಆ)

[75] ೯-೯ ರಬಲೆ (ಆ)

[76] ೧೦-೧೦ ಯೆಂದು (ಅ-ಮು)

[77] ೧೦-೧೦ ಯೆಂದು (ಅ-ಮು)

[78] ೧೧-೧೧ ತ್ತು ಸ (ಆ-ಮು)

[79] ೧೧-೧೧ ತ್ತು ಸ (ಆ-ಮು)

[80] ೧೨-೧೨ ಕುಲವ (ಆ)

[81] ೧೨-೧೨ ಕುಲವ (ಆ)

[82] ೧-೧ ರ ಬೀಡು (ಆ) ರು ಬಿಡದು (ಮು)

[83] ೧-೧ ರ ಬೀಡು (ಆ) ರು ಬಿಡದು (ಮು)