ಸೂಚನೆ : ದನುಜಹರನಕ್ರೂರದೇವನ
ಮನದ ಭಕುತಿಗೆ ಮೆಚ್ಚಿ ತನ್ನಯ
ಘನತೆಯನು ತೋರಿದನು ಯಮುನಾ ನದಿಯ ತೀರದಲಿ ||

ಪದನು :

ಹರಿಯ ವಿರಹವ್ಯಥೆಯ ಸೈರಿಸ
ಲರಿಯದಾ ಗೋಪಿಯರು ಕಾಮನ
ಸರಳ ಬಂದಿಗೆ ತನುವನೊಪ್ಪಿಸಿ

[1]ದೈನ್ಯ[2] ಭಾವದಲಿ
ಮರುಗಿ ರಸದಂಬುಲ ಸುಗಂಧಾ
ಭರಣ ಸುಮ[3]ನವ ಗೀತವೆಲ್ಲವ
ತೊರೆದು ಧೃ[4]ತಿಗೆಟ್ಟಳಲುತಿರ್ದರು ಬಹಳ ದುಗುಡದಲಿ                                                           ೧

ಸರಸಿರುಹ ಹಿಮಸಮಯದಲಿ ಮನ
ಮರುಗುವಂತೆ ರಥಾಂಗಕಾಂತೆಯ
ರಿರುಳು ಶೋಕಿಸುವಂತೆ ಕುಮುದಿನಿ ರವಿಯ ರೌದ್ರದಲಿ
ಕೊರಗುವಂತೆ ಘನಾಗಮದ ಸಿತ
ಕಿರಣನಂತೆ ಕವಿತ್ವ [5]ಜನಮನ
ದಿರವವೊಲ್[6] ವಲ್ಲಭೆಯರಿರ್ದರು [7]ಹಲವು ಚಿಂತೆಯಲಿ[8]                                           ೨

*[9]ಗೋವಳರ ಕಾಂತೆಯರು ಕೃಷ್ಣನ
ಜೀವದನುವನು ಕೃಷ್ಣ ಸೋದರ
ಮಾವನನು ಮಿಗೆ ಕೃಷ್ಣ ಪುರುಷರ ಕೃಷ್ಣ ಮಕ್ಕಳನು
ಜೀವವಲ್ಲಭಕೃಷ್ಣ ನಿಜವೆಂ
ದಾವ ಕಡೆಯನು ನೋಡಿ ಕೃಷ್ಣನ
ಭಾವದಲಿ ಮುಳುಗಿರ್ದರುನ್ನ ತವಿರಹವಿಕಳದಲಿ                                                         ೩

ನೆನೆನೆನೆದು ಸಿಗ್ಗಾಗಿ [10]ಸುಯ್ಯುತ[11]
[12]ಮನದ[13] [14]ಬೆಳಕೆ[15]ಡೆಗುಂದಿ [16]ಮನವಿ[17]
ಟ್ಟನವರತ ಹಂಬಲಿಸಿ ಕಂಬನಿದುಂಬಿ [18]ತಾಪಿಸುತ[19]
ಕನಸಿನಲಿ ಕಳವಳಿಸಿ ಮೂರ್ಚ್ಛೆಗೆ
ಮನವ ತೆತ್ತ [20]ಳವಳಿದು[21] ಮಧುಸೂ
ದನನ ವಿರಹದಲಿರ್ದುದಾ ಗೋಪಿಯರು ವಂಗಡಿಸಿ                                                     ೪

ಸಿರಿಯರಸನಿಹ ವರುಷ [22]ಹಲವೊಂ[23]
ದರೆಗಳಿಗೆ[24]ಯಾಗಿರ್ದುದಾ ಹರಿ[25]
ತೆರಳಿದೊಂದರೆಗಳಿಗೆ ಯುಗಶತವಾಯಿತಕಟೆನುತ
ಹರುಷವನು ಬೀಳ್ಕೊಟ್ಟು ಚಿಂತೆಯ
ಕರೆದು ಮನ್ನಿಸಿ ಮನ[26]ದ ರಸ[27] ಪಂ
ಜರದೊಳಿಹ ಸಾರಿಕೆಯೊ೧೦[28]ಲೊಪ್ಪಿತು೧೦[29] ನಿಖಿಳ ಗೋಪಿಯರು                                               ೫

ಮುಳಿಸರಿದು ಮನ್ನಿಸುವ ನಲುವೆಯ
ನೆಲೆಯರಿದು ಬೋಳವಿಸಿ ಚಿತ್ತವ
ನೊಳಗು ಮಾಡುವನಾಶೆಯರಿದಾಲಿಂಗಿಸುವನೊಲಿದು
ಕಲೆಯರಿದು ಚುಂಬಿಸುವ ನಲಿದ
ಗ್ಗಳಿಸಿ ಕೂಡುವ ೧೧[30]ಮೇಲಣು೧೧[31]ಚಿತವ
ನುಳುಹದಿ೧೨[32]ಹನೇ೧೨[33]ನೆನುತ ಹಂಬಲಿಸಿ೧೩[34]ದುದು೧೩[35]ತಮ್ಮೊಳಗೆ                                          ೬

ಸರಸದಲಿ ಸವಿನುಡಿಗಳಲಿ ಬೋ
ಸರಿಸುವು೧೪[36]ಚಿತೋಕ್ತಿಯಲಿ ಕೊಡುವಾ
೧೫[37]ರಣೆಯಲಿ ಮನ್ನಣೆಯಲಂಜಿಕೆಯಲಿ ವಿಳಾಸದಲಿ
ಕರುಣತನದಲಿ ಮದನಸುಖದಿಂ
ಬರಿವ ಚಾತುರ್ಯದಲಿ ಕೃಷ್ಣನ
ಸರಿಯೊರೆಯ ವಿಟನಾವನೆಂದಳಲಿದರು ಗೋಪಿಯರು                                                            ೭

ಹಿಂಗಿದನು ಹರಿಯೆಂಬ ನುಡಿ ನಮ
ಗಂಗವಲ್ಲ ಮದೀಯ ಹೃದಯೋ
ತ್ತುಂಗ ಪೀಠದೊಳಕ್ಷಿಗಳೊಳೋರಂತೆ ಸೆರೆವಿಡಿದು
ಭಂಗ ಬಡುವುದು ನೀತಿಯಲ್ಲೆನು
ತಂಗನೆಯರಚ್ಯುತನ ಕೂರ್ಮೆಯ
ಸಂಗವನು ನೆನೆನೆನೆದು ಸಂತಯಿಸಿದರು ತನುಮನವ                                                ೮

ಗೋವಳರು ಮಿಗೆ ಕೃಷ್ಣವರ್ಣದ
ಜೀವದನವನು ನೋಡಿ ಕೃಷ್ಣನ
ಭಾವದಲಿ ಮುಳುಗಿರ್ದರುನ್ನತ ವಿರಹ ವಿಕಳದಲಿ
ಆವ ಪರಿಯಲೊ ನಮ್ಮ ದೇವನ
ಭಾವಿಸಿಯೆ ಕೊಂಡೊಯ್ದನೆಮ್ಮೀ
ಜೀವದಾಸೆಯದೇತಕೆಂದರು ಗೋಪರುಳಿದವರು                                                        ೯

ಇಂತು [38]ಹದುಳಿಸಿ[39] ಕೃಷ್ಣವಿರಹದ
ಚಿಂತೆಯನು [40]ಪೊರಮಡಿಸಿ[41] [42]ಗೋಷ್ಠ[43]
ಕಾಂತೆಯರು ಸೈರಣೆಯ ಸಂಭಾವಿಸಿದರಿ[44]ಚ್ಛೆಯಲಿ[45]
ಕಂತುಪಿತನಕ್ರೂರಸಹಿತ
ಧ್ವಾಂತದಲಿ [46]ಬರುತೆಡಬಲದ ತರು
ಸಂತತಿಯ[47] ನೀಕ್ಷಿಸುತ ನಡೆದನು [48]ಗಹನ[49] ಮಧ್ಯದಲಿ                                          ೧೦

ಜಾಲ [50]ಚೇಲ ಪಲಾಶಕಮ್ಮರ
ಸಾಲ ಕಡವರ[51]ನೆಲ್ಲಿ ತ[52]ಗಸಂ[53]
ಕೋಲೆ ಬೆಲವತ್ತೆಸೆವ ಸೂರ್ಯನ ಭಕ್ತ ಮುಳುಮುತ್ತ
ಹಾಲೆ ತದುಕೆಲೆ[54]ಗೋಣಿ[55]ಗೊರವಿ ತ
ಮಾಲ ಬೊಬ್ಬುಲಿ ದಿಂಡೆಲವ ಕ
ತ್ತಾ೧೦[56]ಳೆ ಗೇರಿಪ್ಪೆಗಳನೀಕ್ಷಿಸುತಸುರರಿಪುನಡೆದ                                                        ೧೧

ತಾರೆ ತರಿಯಸಿತಾರ್ಕ ಕೇಸರ
ಗಾರೆ ಬಿಳಿಯಿಮ್ಮತ್ತಿ ಬಿಲ್ವಭ
ಯಾರಿ ಚಿಲ್ಲರೆನೇರಿ[57]ಲವು ತುಂ[58]ಬುರವು ಹೆಜ್ಜಾಲಿ
ಬೋರೆ [59]ಪಾಲ್ಮರ[60] ನಗರೆ ಹೊನ್ನೆ ನ-
ಮೇರು ಹಲು ಮಾಣಿಕ್ಯ ಘನ ಗಾಂ-
ಧಾರಿಗಳ ಮಧ್ಯದಲಿ ನಡೆದುದು ತೇರು ಮುರಹರನ                                                    ೧೨

[61]ಇಕ್ಕೆಲದಿ[62] ಬೆಳೆದಖಿಳ [63]ಮರಗಳ[64]
ತಕ್ಕೆಯಲಿ ವಂಗಡಿಸಿ ಜಾರುವ
ಸೊಕ್ಕಿದಾನೆಯ ಸೀಳ್ದು ಹರಹುವ ವಿಗಡಕೇಸರಿಯ
ಧಿಕ್ಕರಿಪ ಶರಭ[65]ಗಳ ದಾವಣಿ[66]
ಲೆಕ್ಕಿಸದ ಬೇರುಂಡ ಸಹಿತಿವ
ಸಿಕ್ಕಿಸುವ ಲುಬ್ಧಕರನೀಕ್ಷಿಸುತಸುರರಿಪು ನಡೆದ                                                           ೧೩

ಮರೆ ಕಡವೆ ಕಾಳ್ಕೋಣ ಪೆರ್ಬುಲಿ
ಕರಡಿ ಮೊಲ ಸಾರಂಗ ಸೂಕರ
[67]ಹರಿಣಿ ಖಡ್ಗಿ ವೃಕಾದಿ ಮೃಗಗಳ ಮಂಜರಾದಿಗಳ[68]
ನೆರವಿಗಳನರೆಯಟ್ಟಿ ಕೊಲಲ
ಬ್ಬರಿಪ ಬೇಡರ ದನಿಯ ಹೊದರೆ
ದ್ದುರಿವ [69]ದಾವಾಗ್ನಿ [70]ಗಳನೀಕ್ಷಿಸುತಸುರರಿಪು ನಡೆದ                                                            ೧೪

ಅಂಬರವನಂಡಲೆವ ಶೈಲ ನಿ
ತಂಬದಿಂದೊ[71]ಸರ್ದಿ[72]ಳಿವ ನಿರ್ಝರ
ದಿಂಬುವಿಡಿದವ್ವಳಿಸಿ[73] ಕಾನನವುಚ್ಚಳಿಸಿ ಬೆಳೆದು
ಲಂ ೧೦ [74]ಬಿಸುವ ಪೆರ್ಬಿದಿರ ರವಕೆ ವಿ
ಡಂ ೧೦[75]ಬಿಸುವ ರವಿರಥದ ತುರಗಕೆ
ಡೊಂಬಿಸುವ ಮರ್ಕಟವನೀಕ್ಷಿಸುತಸುರರಿಪು ನಡೆದ                                                    ೧೫

ಗಿರಿತರುವ್ರಜ ವಿಷ್ಣುಪದ ಸಂ
ಸ್ಪರುಶದಿಂದೊಪ್ಪಿದುದು ಕರಿಗಳು
ಹರಿವಿರೋಧದಲರಿವಳಿಯ ಕಡು ಮೂಕ[76]ಭಾವದಲಿ
ಚರಿಸುತಿರ್ದುವಶೇಷ ಮೃಗ ಭೂ
ಧರನ ಮೂರ್ತಿಯ ನೋಡಿ ಭವಸಾ
ಗರವ ಲೆಕ್ಕಿಸದಿಷ್ಟು[77]ವಾ ವಿಪಿನಪ್ರದೇಶದಲಿ                                                             ೧೬

ಆಡುವೆಳನವಿಲುಗಳನೊಸೆದುರೆ
ನೋಡುತಿಹ ವಾನರರ ಮೋಹಿಸಿ
ಪಾಡುತಿಹ ಕೋಗಿಲೆಯನುತ್ಸಾಹಿಸುವ ಖಗಕುಲವ[78]
ಹೂ[79]ಡಿಸುವ ಬನಗತ್ತಲೆಯೊಳೊಡ
ಗೂ[80]ಡಿದಾ[81] ಶಬರಿಯರ ತನ್ನೊಡ
ನಾಡಗಳಿಗರುಹುತ್ತ ನಡೆದನು ದಾನವಧ್ವಂಸಿ                                                             ೧೭

ಕಾನನವನುಳಿದಸುರಪುರದು
ದ್ಯಾನಸೀಮೆಯನೈದಿ ಬರೆ ಮುಂ
ದಾನದೀಶ್ವರಿ ಯಮುನೆಯತಿ ಸಂರಂಭ ರಭಸದಲಿ
ದಾನವಾರಿಯ ಕೀರ್ತಿಸುತ ಸು-
ಮ್ಮಾನದಲಿ ಮೆಯ್ಯಿಕ್ಕಿದಂತಿರೆ
ದಾನಪತಿ [82]ತೋರಿದನು ತುದಿವೆರಳಿಂ[83] ಜಗತ್ಪತಿಗೆ                                                            ೧೮

ದೂರದಲಿ ಹರಿ ಕಂಡನಘಸಂ
ಹಾರಿಯನು ಹರಿನೀಲಸನ್ನಿಭ
ವಾರಿಯನು ಭವಭಯವಿದಾರಿಯನಖಿಳ ಪಾತಕದ
ವೈರಿಯನು ಭಾಗೀರಥಿಯ ಹಿತ
ಕಾರಿಯನು ಸರಸಿರುಹಸಖನ ಕು
ಮಾರಿಯನು ಕಾಳಿಂಗದಿಯನು ಕಾಮಿತಫಲಪ್ರದೆಯ                                                   ೧೯

*[84]ಕಡುಗಡದ[85] ಸುಳಿಗಳ ತರಂಗದ
ಮಡುಗಡಲನನುಕೂಲಪ್ರೀತಿಯ
ಕಡೆಗಡಲ ಮೆಟ್ಟಿದ್ದು ಹಾಯ್ದಬ್ಬರಿಪ [86]ಶಿಲೆ[87]ಗಡಲ
ಕಡುವೆಳೆದ ತಾ ಕಡಲ ನಿಡು ಹೆ-
ಗ್ಗಡಲ ನಿಟ್ಟೆಡೆಗಡಲ ಮಥುರೆಯ
ನಡಗಲಿಸಿ ಧೂಳ್ಗಡಲ ಯಮುನೆಯ ಕಂಡನಸುರಾರಿ                                                   ೨೦

ಭುವನಭೂಷಣೆಯನಿಮಿಷರಿಗು
ತ್ಸವ ಸು[88]ವಾಸಿನಿ[89] ಪಠಿತ ಮನು ಮುನಿ
ನಿವಹ ಸುಲಲಿತ ಸುಖವಿಘೋಷಿಣಿ ತನಗೆ ಮಾರ್ಮಲೆವ
ವಿವಿಧ ಕುಜ[90]ನೋದ್ದೂ ತವಾರುಣಿ[91]
ಪವಣರಿಯ ಬಾರದ ವಿಹಾರಿಣಿ
ರವಿಜೆ ದೂರದೆ ತನುಜೆಯಂತಿರೆ ಕಂಡನಸುರಾರಿ                                                       ೨೧

ಹರಿಯ ಪದನಖದಿಂದ ಹುಟ್ಟಿದ
ಸುರನದಿಯ ಸಂಸರ್ಗದಿಂದು
ರ್ವರೆಗೆ ಪಾವನತೀರ್ಥವೆನಿಸಿದೆನಿಂದಿರೇಶ್ವರನ
[92]ತರುಣತೆಯ[93]ಲೀಲೆಗಳನೀಕ್ಷಿಸಿ
ಪರಮಸುವ್ರತೆಯಾದೆನೆನ್ನೊಳು
ಸರಿನದಿಗಳಾರೆಂದು ಹೆಚ್ಚಿತು ಯಮುನೆ ಹರುಷವಲಿ                                                    ೨೨

ಬಂದು ಹರಿ ಸನ್ನಿಧಿಯಲಿಹ ಕಾ-
ಳಿಂದಿಯಲಿ ರಥವಿಳಿದು ಗೋಪರ
ವೃಂದವವನು ಬಳಲಿದಿರೆನುತ ಸುಮ್ಮಾನ ವಚನದಲಿ
ಹಿಂದುಳಿದರಿಲ್ಲಲೆ ಎನುತ ದಯೆ
ಯಿಂದ ಕರೆಕರೆದೋವಿ ನುಡಿಸಿ ಮು-
ಕುಂದನಾ ನದಿದಡದೊಳೋಲಗಗೊಟ್ಟು ಕುಳ್ಳಿರ್ದ                                                       ೨೩

ಮುಂದೆಸೆವ ಬಲರಾಮ ಬಲದಲಿ
ನಂದನೆಡದಲಿ ದಾನಪತಿಯೊಡ
ವಂದ ಗೋವಳರಿದಿರುಗಟ್ಟಿನೊಳಪರ ಭಾಗದಲಿ
[94]ಬಂದ ಪಣ್ ಫಲ ಪಾಲ್ಮೊಸರಿನಾ[95]
ಮಂದಿಯಿರೆ ಬಳಲಿಕೆಯ ಕಳಿದರ
ವಿಂದಲೋಚನನರಸನಂ[96]ತೊಲವಿಂದಲೊಪ್ಪಿದನು[97]                                                            ೨೪

ಪಾಡುವರು ಕೆಲರಚ್ಯುತನ ಕೊಂ
ಡಾಡುವರು ಕೆಲರೆದ್ದು ಕುಣಿಕುಣಿ
ದಾಡುವರು ಕೆಲರೆಡಬಲಕೆ ಸಿಡಿದೆದ್ದು ಸಂಭ್ರಮಿಸಿ
ನೋಡುವರು ಕೆಲರುದಕದೊಳಗೀ
ಸಾಡುವರು ಕೆಲರಾಯಸವನೀ
ಡಾಡಿ ವಿಶ್ರಮಿಸುವರು ಕೆಲವರೊಡವಂದ ಗೋವಳರು                                                             ೨೫

ನೀಲಗಿರಿ[98]ಸಿತಗಿರಿಗಳೊಂದೇ[99]
ಮೂಲೆಗೈತಂದಂತೆ ಗೋವರ
ಮೇಳದಲಿ ಬಲಕೃಷ್ಣರೆಸೆದಿರೆ ದಾನಪತಿ ಬಳಿಕ
ಬಾಲೆಯರು ಪತಿಗಂಜಿ ನುಡಿವಂ
ತೇಳುಗಂಘ್ರಿಗೆ ನಮಿಸಿ ಲಕ್ಷ್ರೀ
ಲೋಲ ಚಿತ್ತೈಸೆಂದು ಬಿನ್ನಹ ಮಾಡಲನುವಾದ                                                           ೨೬

ದೇವ ನಾನೀ[100] ಯಮುನೆಯಲಿ ಸ-
ದ್ಭಾವ ಮಿಗಲವಗಾಹಿಸುವೆ ನೀ-
ವೀ ವಸುಧೆಗವತರಿಸಲಾಗದು ರಥದ ಮೇಲಿಹುದು
ಗೋವಳರನೊಗ್ಗೊಡಿಸಬೇಡರೆ
ಜಾವ ಸೈರಿಸಿ ನೋಡುತಿರೆಯೆಂ
ದೋವಿ [101]ಬಳಿಕ[102]ಕ್ರೂರನಿಳಿದನು ಭಾನುಜೆಯ ತಡಿಗೆ                                                        ೨೭

ಆತನತಿಶಯ ಭಕ್ತಿಭಾವ
ಪ್ರೀತಿಯನು ಹರಿ ಕಂಡು ಮನದಲಿ
ಸೋತು ತನ್ನ ನಿಜಪ್ರಭಾವವ ತೋರಿಸುವೆನೆನುತ
ಆ ತರುಛ್ಛಾಯೆಯಲಿ ಸುಖವಿರ
ಲಾ ತಪೋನಿಧಿ ಬಂದು ಭುವನ
ಖ್ಯಾತೆಯಹ ಕಾಳಿಂದಿಗತಿ ಮುದದಿಂದ ವಂದಿಸಿದ                                                      ೨೮

ಬಕ ಮರಾಳ ರಥಾಂಗ ಸಾರಸ
ನಿಕರ ಪುಳಿನಸ್ಥಳದೊಳಿರೆ ನಳ
ಮಕರ ನಕ್ರ ಜಳೂಕ ಮಡುಗಡಲೊಳಗೆ [103]ಸಂಭ್ರಮಿಸೆ[104]
ಸಕಲ [105]ವಿಷಜ ಸಮೂಹ[106] ಸೌಗಂ
ಧಿಕವಘಾಟದೊಳೆಸೆಯಲತಿ ಸು-
ವ್ಯಕುತವೆನಲೊಪ್ಪಿದಳು ಯಮರಾಡನುಜೆ ಗಾಢದಲಿ                                                   ೨೯

ನಿಯತವಹ ಶೌಚಾಚಮನ ನಿ-
ರ್ಣಯವನತಿವಿಸ್ತರಿಸಿ ಕರಣ-
ತ್ರಯವ ತಾ ನೆಲೆಗೊಳಿಸಿ [107]ಸಲೆ[108] ಸಂಕಲ್ಪ ಸಮಯದಲಿ
ಬಯಕೆಯಿಲ್ಲದೆ ವಿಷ್ಣುಚರಣ
ದ್ವಯವ ಸಂಸ್ಮರಿಸುತ್ತ ವಾಣಿ
ಪ್ರಿಯ [109]ವಧುವ[110] ಮಧ್ಯದಲಿ ಮುಳುಗಿದ ತನ್ನ ನೀಕ್ಷಿಸುತ                                        ೩೦


[1] ೧-೧ ದೀನ (ಮು)

[2] ೧-೧ ದೀನ (ಮು)

[3] ೨-೨ ನಸು (ಆ), ನೋ (ಮು)

[4] ೩ ಮ(ಆ)

[5] ೪-೪ ಕೃತಿಗಳ ಮನದವೊಲು (ಆ)

[6] ೪-೪ ಕೃತಿಗಳ ಮನದವೊಲು (ಆ)

[7] ೫-೫ ಬಹಳ ದುಗುಡದಲಿ (ಆ)

[8] ೫-೫ ಬಹಳ ದುಗುಡದಲಿ (ಆ)

[9] *ಈ ಪದ್ಯವು “ಆ” ಪ್ರತಿಯಲ್ಲಿ ಮಾತ್ರ ದೊರೆಯುತ್ತದೆ.

[10] ೧-೧ ಸುಯ್ದಾ (ಆ-ಮು)

[11] ೧-೧ ಸುಯ್ದಾ (ಆ-ಮು)

[12] ೨-೨ ಘನ (ಅ), ಸ್ತನ (ಮು)

[13] ೨-೨ ಘನ (ಅ), ಸ್ತನ (ಮು)

[14] ೩-೩ ಬಳೆಗೆದೆ (ಮು)

[15] ೩-೩ ಬಳೆಗೆದೆ (ಮು)

[16] ೪-೪ ಮರವ (ಆ)

[17] ೪-೪ ಮರವ (ಆ)

[18] ೫-೫ ತಾಪದಲಿ (ಅ-ಮು)

[19] ೫-೫ ತಾಪದಲಿ (ಅ-ಮು)

[20] ೬-೬ ವರಂಥೆ (ಮು)

[21] ೬-೬ ವರಂಥೆ (ಮು)

[22] ೭-೭ ತಾನೊಂ (ಅ-ಮು)

[23] ೭-೭ ತಾನೊಂ (ಅ-ಮು)

[24] ೮-೮ ಹಾಗಿಹುದು ಹರಿ ತಾ (ಅ)

[25] ೮-೮ ಹಾಗಿಹುದು ಹರಿ ತಾ (ಅ)

[26] ೯-೯ ದನ ಶರ (ಆ-ಮು)

[27] ೯-೯ ದನ ಶರ (ಆ-ಮು)

[28] ೧೦-೧೦ ಲಿರ್ದರು (ಮು), ಲೊಪ್ಪಿರೆ (ಆ)

[29] ೧೦-೧೦ ಲಿರ್ದರು (ಮು), ಲೊಪ್ಪಿರೆ (ಆ)

[30] ೧೧-೧೧ ಮೆಚ್ಚಿನು (ಆ)

[31] ೧೧-೧೧ ಮೆಚ್ಚಿನು (ಆ)

[32] ೧೨-೧೨ ದೆಮ್ಮವ (ಆ)

[33] ೧೨-೧೨ ದೆಮ್ಮವ (ಆ)

[34] ೧೩-೧೩ ದರು (ಆ-ಮು)

[35] ೧೩-೧೩ ದರು (ಆ-ಮು)

[36] ೧೪ ತು (ಆ)

[37] ೧೫ ದ (ಆ-ಮು)

[38] ೧-೧ ಸೈರಿಸಿ (ಮು)

[39] ೧-೧ ಸೈರಿಸಿ (ಮು)

[40] ೨-೨ ನೆರೆ ಮಾಡಿ (ಅ)

[41] ೨-೨ ನೆರೆ ಮಾಡಿ (ಅ)

[42] ೩-೩ ಘೋಷ (ಆ-ಮು)

[43] ೩-೩ ಘೋಷ (ಆ-ಮು)

[44] ೪-೪ ರೆದೆಯಲ್ಲಿ (ಅ)

[45] ೪-೪ ರೆದೆಯಲ್ಲಿ (ಅ)

[46] ೫-೫ ಬರುತಿರ್ದ ಶಕುನದ | ಹಂತಿಗಳ (ಮು)

[47] ೫-೫ ಬರುತಿರ್ದ ಶಕುನದ | ಹಂತಿಗಳ (ಮು)

[48] ೬-೬ ವನದ (ಆ-ಮು)

[49] ೬-೬ ವನದ (ಆ-ಮು)

[50] ೭-೭ ಚಂದನ ಪನಸ ವಟಮುಂ | ತಾಲ ಕಗ್ಗುಲಿ (ಮು)

[51] ೭-೭ ಚಂದನ ಪನಸ ವಟಮುಂ | ತಾಲ ಕಗ್ಗುಲಿ (ಮು)

[52] ೮-೮ ತದುಕಂ (ಆ)

[53] ೮-೮ ತದುಕಂ (ಆ)

[54] ೯-೯ ಗಳ್ಳಿ (ಆ-ಮು)

[55] ೯-೯ ಗಳ್ಳಿ (ಆ-ಮು)

[56] ೧೦ ದ್ದಾ (ಆ-ಮು)

[57] ೧-೧ ಲವುದುಂ (ಮು)

[58] ೧-೧ ಲವುದುಂ (ಮು)

[59] ೨-೨ ಸಾಲ್ಮರ (ಅ), ಶಾಲ್ಮಲಿ (ಮು)

[60] ೨-೨ ಸಾಲ್ಮರ (ಅ), ಶಾಲ್ಮಲಿ (ಮು)

[61] ೩-೩ ಇಕ್ಕರಿಸಿ (ಆ-ಮು)

[62] ೩-೩ ಇಕ್ಕರಿಸಿ (ಆ-ಮು)

[63] ೪-೪ ವೃಕ್ಷದ (ಮು)

[64] ೪-೪ ವೃಕ್ಷದ (ಮು)

[65] ೫-೫ ದ ವಿಕಾರವ (ಆ)

[66] ೫-೫ ದ ವಿಕಾರವ (ಆ)

[67] ೬-೬ ಹರಿಣಿ ನಿಖಿಳ ವಿಕಾರಿ ಮೃಗಗಳ ಮಂಜರಾದಿಗಳ (ಆ), ಹರಿಣ ಮೊದಲಾದಖಿಳ ಮೃಗಗಳ ಕುಂಜರಾಜಿಗಳ (ಮು)

[68] ೬-೬ ಹರಿಣಿ ನಿಖಿಳ ವಿಕಾರಿ ಮೃಗಗಳ ಮಂಜರಾದಿಗಳ (ಆ), ಹರಿಣ ಮೊದಲಾದಖಿಳ ಮೃಗಗಳ ಕುಂಜರಾಜಿಗಳ (ಮು)

[69] ೭-೭ ದುವ್ವಾಳಿ (ಮು)

[70] ೭-೭ ದುವ್ವಾಳಿ (ಮು)

[71] ೮-೮ ಸರಿ (ಅ), ಸೆದಿ (ಆ)

[72] ೮-೮ ಸರಿ (ಅ), ಸೆದಿ (ಆ)

[73] ೯ ಪ(ಮು), ಝೋಂ (ಆ)

[74] ೧೦ ಗುಂ (ಮು)

[75] ೧೦ ಗುಂ (ಮು)

[76] ೧ ರ್ಖ (ಆ)

[77] ೨ ರ್ದು (ಆ-ಮು)

[78] ೩ ದ (ಅ)

[79] ೪ ಗಾ (ಮು)

[80] ೫-೫ ಡುವಾ (ಆ), ಡುತಿಹ (ಮು)

[81] ೫-೫ ಡುವಾ (ಆ), ಡುತಿಹ (ಮು)

[82] ೬-೬ ಪರಿತೋಷದಲಿ ತೋರಿದ (ಮು)

[83] ೬-೬ ಪರಿತೋಷದಲಿ ತೋರಿದ (ಮು)

[84] * ಮುದ್ರಿತ ಪ್ರತಿಯಲ್ಲಿ ಈ ಪದ್ಯವಿಲ್ಲ.

[85] ೧ ಲ (ಆ)

[86] ೨-೨ ಸೈ (ಆ)

[87] ೨-೨ ಸೈ (ಆ)

[88] ೩-೩ ಭಾಷಿಣಿ (ಆ), ಭಾಷಿನಿ (ಮು)

[89] ೩-೩ ಭಾಷಿಣಿ (ಆ), ಭಾಷಿನಿ (ಮು)

[90] ೪-೪ ವನಧೂತಕಾರಿಣಿ (ಮು)

[91] ೪-೪ ವನಧೂತಕಾರಿಣಿ (ಮು)

[92] ೫-೫ ಕರುಣತೆಯ (ಅ), ತೆರತೆರದ (ಮು).

[93] ೫-೫ ಕರುಣತೆಯ (ಅ), ತೆರತೆರದ (ಮು).

[94] ೧-೧ ತಂದ ಪಲವಣ್ಬೆಪ್ಪ ಪಾಲ್ಮೊಸರ್ (ಮು)

[95] ೧-೧ ತಂದ ಪಲವಣ್ಬೆಪ್ಪ ಪಾಲ್ಮೊಸರ್ (ಮು)

[96] ೨-೨ ತೋಲಗದೊಳೆಸೆದಿರ್ದ (ಆ)

[97] ೨-೨ ತೋಲಗದೊಳೆಸೆದಿರ್ದ (ಆ)

[98] ೩-೩ ಯಾ ಶಿಖರಮೊಂದೇ (ಅ)

[99] ೩-೩ ಯಾ ಶಿಖರಮೊಂದೇ (ಅ)

[100] ೪ನೇ (ಅ)

[101] ೫-೫ ನುಡಿದ (ಆ-ಮು).

[102] ೫-೫ ನುಡಿದ (ಆ-ಮು).

[103] ೧-೧ ಸಂಚರಿಸೆ (ಆ-ಮು)

[104] ೧-೧ ಸಂಚರಿಸೆ (ಆ-ಮು)

[105] ೨-೨ ವಿಪ್ರರು ಹೇಮಮುದ (ಆ)

[106] ೨-೨ ವಿಪ್ರರು ಹೇಮಮುದ (ಆ)

[107] ೩-೩ ಯವ (ಆ), ಯಾ (ಮು)

[108] ೩-೩ ಯವ (ಆ), ಯಾ (ಮು)

[109] ೪ + ನ (ಆ)

[110] ೫ ವ (ಅ)