ಹರುಷ ಮಿಗೆ ಗೋಪಾಲಮಂತ್ರೋ
ಚ್ಚರಣೆಯಿಂದಘಮರುಷಣವನಾ
ದರಿಸುತಿರೆ ಜಲದೊಳಗೆ ರವಿಶತಕೋಟಿರಶ್ಮಿ

[1]ಯಲಿ[2]
[3]ಮೆರೆವ[4] ದೇಹಚ್ಛವಿಯ [5]ವಿಕಚಾಂ[6]
ಬುರುಹನೇತ್ರದ [7]ಕೌಸ್ತುಭಾದ್ಯಾ[8]
೧೦[9]ಭರಣದನುಪಮ ಶಂಖ ಚಕ್ರದ ವಿಷ್ಣುವೆಸೆದಿರ್ದ೧೦[10]                                                 ೩೧

ಥಳಥಳಿಸಿ ಹೊಳೆವಹಿಲಲಾಮನ
ಲಲಿತ [11]ಕಾಯದ[12] ಮೇಲೆ ಪವಡಿಸಿ
ತಳಿತ ಸಾವಿರ ಹೆಡೆವಣಿಯ ರಶ್ಮಿಗಳ ಲಹರಿಯಲಿ
ಹೊಲಬುಗೆಡುತಜಭವ ಸುರೇಂದ್ರರ
ಕುಲವದೋಲಯಿಸುತ್ತು [13]ಮಿರೆ[14] ಮಾ-
ಲಲನೆ ಸಹಿತೆಸೆದಿರ್ಪ ವಿಷ್ಣುವ ಕಂಡನಕ್ರೂರ                                                              ೩೨

ಲೀಲೆಯಿಂದೀ ಜಗವ ಹುಟ್ಟಿಸಿ
ಪಾಲಿಸು[15]ತ್ತರ್ದಿಸುತ ಮರಳಿ ನಿ
ರಾಳ[16] ಪಥದಲಿ ಸಕಲ ನಿಗೆಮಾತೀತನೆಂದೆನಿಸಿ
ಕೌಳಿಕದ [17]ಮಾಯಾ[18] ಪ್ರಪಂಚವ
[19]ಢಾಳಿಸುವ [20]ನಿಶ್ಯಂಕ[21]ನಾದ ಕೃ-
ಪಾಳುಗಳ ಬಲ್ಲಹನನಿದಿರಲಿ ಕಂಡನಕ್ರೂರ                                                                ೩೩

ರವಿ ಘಟೋದಕ [22]ಹಲವರಲಿ[23] ಸಂ
ಭವಿಸಿ ತೋರ್ಪಂದದಲಿ ತಾನೀ
ಭುವನದಲಿ ಪರಿಪೂರ್ಣ ಚೇತನ[24]ನೀ[25] ತನೆಂದೆನಿಸಿ
ವಿವಿಧ ಮತಕಧಿಪತಿಯೆನಿಸಿ ಸು-
ಪ್ರವರದಲಿ ಜಗದೊಳಗೆ ಹೊರಗೊ
ಪ್ಪುವ ಪರ[26]ಬ್ರಹ್ಮೈಕ[27] ರೂಪನ ಕಂಡನಕ್ರೂರ                                                                      ೩೪

ರೂಪಳಿದ ಚಿದ್ರೂಪನದ್ಭುತ
ರೂಪನಗಣಿತರೂಪನುನ್ನತ
ರೂಪನೂರ್ಜಿತ ವಿಶ್ವರೂಪನತರ್ಕ್ಯಪರರೂಪ
ತಾಪ೧೦[28]ಸರ೧೦[29]ಹೃದ್ದೀಪ ಗತಪರಿ
ತಾಪ೧೧[30]ನಂ೧೧[31] ನಿರ್ಲೇಪನಿಂದಿರೆ
ಯೋಪ ಜಗದೀಶ್ವರ ಮುಕುಂದನ ಕಂಡನಕ್ರೂರ                                                        ೩೫

ಸಗುಣನಹ ಪರತತ್ವ್ತರೂಪನ
ಹೊಗಳುವರೆ ಜಗಮಯನು ನಿರ್ಗುಣಿ
ಬಗೆದು[32] ತೋರುವ ಲೀಲೆಯಲಿ ಸಲಹುವನು ಭುವನಗಳ
ನಿಗಮದಂಗವಣೆಯಲಿ ಮುನಿಗಳ
ಹೊಗಳಿಕೆಯ ಜಗದೀಶನನು ತನಿ
ವೊಗರೊಳೆಸೆದನ ಕಂಡು ಹರುಷಿತನಾದನಕ್ರೂರ                                                       ೩೬

ನಾರದನ ಸಂಗೀತ ವುಷನಿಷ[ದ್] ನಾರಿಯರ ರತುನಾರತಿಯ ವಿ
ಸ್ತಾರ ಮುಕ್ತಿಸ್ತ್ರೀಯ ನರ್ತನವಿದಿರೊಳೋಲಗಿದ
ವೀರ ವಿಹಗೇಶ್ವರನ ಜಯರವ
ಭೂರಿಸುರರರ್ಚಿಸುವ ವಿಭವದ
ಲಾ ರಮಾಪತಿಯಿರಲು ಕಂಡಕ್ರೂರ ಬೆರಗಾದ                                                           ೩೭

ಆ ಮುಕುಂದನ [33]ಕಂಡು ದಿವ್ಯ[34]
ಪ್ರೇಮದಲಿ ಮೆಯ್ಯಿಕ್ಕೆ ಸೌಖ್ಯದ
ಸೀಮೆಯಲಿ ಸಂತುಷ್ಟನಾಗಿ ನಿರಂತರಾಯದಲಿ
ಕಾಮಿಸದೆ ಕಲ್ಪಿಸದೆ ಭರದಲಿ
[35]ಕೈಮುಗಿದು[36] ಕೊಂಡಾಡುತಿರೆ ನಿ
ಸ್ಸೀಮ ದೇವರ ದೇವನಿತ್ತನು ದಿವ್ಯಲೋಚನವ                                                           ೩೮

ಆ ಸುಖದ ಸುಗ್ಗಿಯಲಿ ಕಮಳಾ
ಧೀಶ ಪುರುಷೋತ್ತಮನ ಮೂರ್ತಿ ವಿ
ಳಾಸವನು ನೆರೆ ಕಂಡು ಬಳಕಾತನ ನಿರೂಪದಲಿ
ಓಸರಿಸದಂಬುರುಹನಾಭಿಯ
ಮೀಸಲಿನ ಕುಹರದಲಿ ಜಠರಾ
[37]ವಾಸವ[38]ನು ಪೊಕ್ಕಲ್ಲಿ ಕಂಡನು ಕಣ್ಗೆ ಕೌತುಕವ                                                     ೩೯

ಕಂಡನಗಣಿತ ಕೋಟಿ ವಾಣಿಯ
ಗಂಡರನು ಶತಕೋಟಿ[39]ರಕ್ಷೋ[40]
ದ್ದಂಡರನು ತತ್ ಸ್ಥಾನ ತತ್ ಪರಿಕರದ ಸೀಮೆಯಲಿ
ಚಂಡ[41]ರುಚಿ[42]ಹಿಮ[43]ರುಚಿ[44] ಸುರೇಂದ್ರರ
ತಂಡವನು ದಿಗಧಿಪರ ವಸುಗಳ
ಹಿಂಡುಗಳ ಮುನುಮುನಿಗಳೊಟ್ಟಿಲ [45]ನೋಡಿ[46] ಬೆರಗಾದ                                         ೪೦

ನಾಕ ಮೊದಲಾಗಿಹ ಚತುರ್ದಶ
ಲೋಕ ಲೋಕಾಧರವೆನಿಪ ದಿ
ವೌಕ[47]ಸರ ಹಿಮಗಿರಿಯ[48] ಮಂದರ ನೀಲಪರ್ವತವ[49]
ಲೋಕಪಾಲಕ[50] ಗ್ರಹ ಭಗಣ[51]ನಿಕ
ರಾಕುಲಾಭ್ರವ ದಿಗ್ಗಜೇಂದ್ರಾ[52]
ನೀಕವನು ಸುರಧೇನು ನಿಕರವ ಕಂಡ[53] ನಕ್ರೂರ[54]                                                    ೪೧

ಧರೆ ಫಣೀಶ್ವರ ದಿಗಿಭಕುಲ ಭೂ
ಧರ ಸಮಸ್ತದ್ವೀಪ ಸಾಗರ
ಗಿರಿಗಹನ ಸಹ೧೦[55] ಪಳ್ಳಿ ೧೦[56]ನಗರ ಗ್ರಾಮ ಪಟ್ಟಣವ
ವರಮುನಿಗಳಾಶ್ರಮದ ಧರಣೀ
ಶ್ವರರ ತಳತಂತ್ರವನು ಘನಸಂ
ಗರ ವಿವಾದವನಂತ ಕೋಟಿಯ ೧೨[57]ಕಂಡು ಬೆರಗಾದ೧೨[58]                                                        ೪೨

ಸುರನರೋರೆಗಸಿದ್ದ ವಿದ್ಯಾ
ಧರ ಗರುಡ ಗಂಧರ್ವ ರಾತ್ರಿಂ
ಚರ ಪಿಶಾಚರ ಗಡಣವೆಸೆದಿರೆ ಗಣನೆಯಿಲ್ಲೆನಿಸಿ
ಹರಿ ಬಲರು೧೩ ನದಿತೀರದಲಿ ಗೋ
ಪರ ಸಮೇಳದಲಿರಲು ಕಂಡತಿ
ಹರುಷ ಮಿಗಲಕ್ರೂರದೇವನು ನೋಡಿ೧೩ ಬೆರಗಾದ                                                      ೪೩

ಏನಿದದ್ಭುತವೆನುತ ದಿವ್ಯ
ಜ್ಞಾನಿ[59]ಯೆಡ ಬಲವೀಕ್ಷಿಸುತ್ತಿರೆ[60]
ದಾನವಾಂತಕ ರಥದ ಮೇಲಿರೆ ಕಂಡು ಶಂಕಿಸುತ
[61]ತಾನಿದೆಲ್ಲಿಗೆ ಬಂದೆ ಕಂಡೆನಿ
ದೇನ [62]ನೊಂದೇ[63] ನಿಮಿಷದಲಿ ಹರಿ
ತಾನೆ ತಪ್ಪದು ತನ್ನೊಲವು ಕೈಸಾರಿತೆನುತಿರ್ದ                                                          ೪೪

ಹುಲುಮನುಜ ನಾನೆತ್ತ ಬೊಮ್ಮದ
ನೆಲೆಯನರಿವುದಿದೆತ್ತ ಡೊಂಬಿನ
[64]ಮಲಿನ ಮಾನುಷ[65]ರೆತ್ತ ಫಣಿಪತಿಶಯನ ತಾನೆತ್ತ
ಚಲಿತ ಧೈರ್ಯನದೆತ್ತ ವಿಶ್ವದ
ಹೊಳಹ ಕಾಣ್ಬುದಿದೆತ್ತ ಮಾಧವ
ನೊಲವು [66]ಫಲಿಸಿತ್ತಿಂದು[67] ನಾ ಕೃತಕೃತ್ಯನೆನುತಿರ್ದ                                                            ೪೫

ಹಿಂದೆ ಜನ್ಮ ಸಹಸ್ರದಲಿ ಸುರ
ಸಿಂಧುವನು ಸೇವಿಸಿದೆನೋ ಯತಿ
ವೃಂದವನು ಮನ್ನಿಸಿದೆನೋ ವೈಷ್ಣವ ಮಹಾಸಭೆಗೆ
ವಂದಿಸಿದೆನೋ ಹರಿದಿನ[68]ದ ವ್ರತ
ವೊಂದನಾ[69]ನುತ್ತರಿಸಿದೆನೊ[70] ಎನ
ಗಿಂದು ಹರಿ ಕರುಣಿಸುವು[71]ದಂದಿನ ಸುಕೃತ ಫಲವೆಂದ                                                           ೪೬

ಅತಿಥಿ ಪೂಜೆಯ ಫಲವೊ ಮೇಣ
ಚ್ಯುತ ಸಮಾರಾಧನೆಯ ಸುಕೃತವೊ
ಶ್ರುತಿ ಪುರಾ[72]ಣೋತ್ಕೃಷ್ಟ [73]ಪುಣ್ಯವೊ ಬಹು ವಿಧಾನದಲಿ
ಪಥಿಕರಿಗೆ ೧೦[74]ಜಲವೆರೆದ೧೦[75] ಧರ್ಮ
ಪ್ರತತಿಯೋ ವಿವಿಧಾನ್ನ ದಾನ
ವ್ರತದ ಮಹಿಮೆಯೊ ಘಟಿಸಿತೆನಗಿಷ್ಟಾರ್ಥ೧೧[76]ವೆನುತಿರ್ದ೧೧[77]                                       ೪೭

ಬಳಿಕ ಯಮುನಾನದಿಯಲೊಪ್ಪುವ
ಶಿಲೆಗೆ ಬಂದು ಸಮಸ್ತ ಗಂಧಾ-
ಮಳ-ವಿಭೂಷಣನಾಗಿ ಜಪತಪವರ್ಘ್ಯ ಮೊದಲಾದ
ವಿಲಸಿತಾನುಷ್ಠಾನ ವಿಧಿಯೊಂ
ದುಳಿಯದಂತಿರೆ ಮಾಡಿ ಭರದಲಿ
ಬಲ-ಮುಕುಂದರ ಹೊರೆಗೆ ಬಂದನು ಬಹಳ ಹರುಷದಲಿ                                               ೪೮

ಸ್ಯಂದನದ ಮೇಲಿಹ ಮುಕುಂದನ
ಮುಂದೆ ಕರಸರಸಿರುಹಯುಗಳವ
ನೊಂದುಗೂಡಿ ಕೃತಾರ್ಥಭಾವದ[78]ಲೆರಗಿ[79] ನಿಂದಿರ್ದ
ತಂದೆ ಜಯ ಜಯ ಭಾಗವತ ಜನ
ಬಂಧು ಜಯ ಜಯ ವಿಧಿಭವಾಮರ
ವಂದ್ಯ ಜಯ ಜಯ [80]ಎನುತ ಕೀರ್ತಿಸುತಿದ್ದನಕ್ರೂರ                                                  ೪೯

ನಿತ್ಯ ಜಯ ದೇವಕಿಯ ಮೋಹದ
[81]ಪತ್ಯ[82] ಜಯ [83]ನಿಸ್ಸಂಗ[84] ನೆನಿಸಿದ
ಸತ್ಯ ಜಯ ಗೋಪಾಲ ಲೀಲಾ[85]ಭರಿತ ಜಯಜಯತು[86]
ಮೃತ್ಯುವಿರಹಿತ ಜಯ [87]ಧನಂಜಯ[88]
[89]ಭೃತ್ಯ[90] ಜಯ ನಿಗಮಾರ್ಥ ನಿಕರ
ಸ್ತುತ್ಯ ಜಯ ಗೋಪೀಜನಪ್ರಿಯ ಜಯ ಜಯೆನುತಿರ್ದ                                                  ೫೦

ಜಯ ಜಗನ್ಮಯ ಜಯ ನಿರಾಮಯ
ಜಯ ಸುರಾಶ್ರಯ ಜಯ ರಮಾಪ್ರಿಯ
ಜಯ ಶತಾಹ್ವಯ ರೂಪ ಜಯ ನಿಷ್ಕಲ ಪರಂಜ್ಯೋತಿ
ಜಯ ದಯಾಪರ ಜಯ ಮನೋಹರ
ಜಯ ಧರಾಧರ ಜಯ ಭಯಂಕರ
ಜಯ [91]ಶುಭಾಕರ ಜಯ ಮುಕುಂದ ಮುರಾರಿ[92]ಯೆನುತಿರ್ದ                                      ೫೧

[93]ಒದೆದೊಡೊಲಿವ[94] ಮಹಾತ್ಮ ಜಯ ಹೊಗ
ಳಿದರೆ ಹಿಗ್ಗುವಸುಲಭ ಜಯ ಬೇ
ದುದನೀವ ಕೃಪಾಲುಜಯ ಮರೆದರಿದು ಚಿಂತಿಸಲು
ಹೃದಯದಿಂದಗಲದ ವಿಳಾಸದ
ನಿಧಿಯೆ ಜಯ, ಬೈದವಗೆ ಮೋಕ್ಷದ
ಪದವನಿತ್ತ ವಿನೋದಿ ಜಯ ಹರಿ ಜಯ ಜಯೆನುತಿರ್ದ                                                 ೫೨

ರಾಮ ಜಯ ಕಮಲಾದೃಗುತ್ಪಲ
ಸೋಮ ಜಯ ಗೋಪಿಜನಾನನ
ತಾಮರಸ ಹರಿದಶ್ವಜಯ ಸಜ್ಜನ ಸಹಾಯ ಜಯ
ಸೀಮೆಯಳಿದ [95]ಸುಖವೆ[96] ಜಯ ಭವ
ಭೀಮ ಜಯ ಸಂತಾಪಸಂಹರ
ನಾಮ ಜಯ ವಸುದೇವಸುತ ಜಯ ಜಯ ಜಯೆನುತಿರ್ದ                                            ೫೩

ಈ ಪರಿಯಲತ್ಯಂತ ಮಧುರಾ
ಳಾಪದಲಿ ಹರಿಬಲರ ಕೀರ್ತಿಸಿ
ರೂಪನೆವೆಯಿಕ್ಕದೆ ನಿರೀಕ್ಷಿಸುತಡಿಗೆ ಮೆಯ್ಯಿಕ್ಕಿ
ಶ್ರೀಪತಿಯೆ ನಿಜಲೀಲೆಯಿಂ ಮಥು
ರಾಪುರ[97]ಕೆ[98] ಬಹುದೆಂದು ಕೈಮುಗಿ
ದಾ ಪರಮ ವೈಷ್ಣವ ಶಿರೋಮಣಿ ತೆರಳುತಿಂತೆಂದ                                                     ೫೪

ಅಸುರ ನಿಮ್ಮಾಗಮನವನು ಕಾಂ
ಕ್ಷಿಸುತಿಹನು ನಾ ಹೋಗಿ ಕುಟಿಲ
ವ್ಯಸನಿಯನು ಸಂತಯಿಸುವೆನು ನೀಂ ಮಥುರೆಯುಪವನದ
ಲಸಿತ ವಿಭವವನೀಕ್ಷಿಸುತ ಸುರ
ರೊಸಗೆ ಮಿಗೆ ಬಂದೆನ್ನ [99]ಗೃಹದಲಿ[100]
[101]ವಸತಿಯಿಕ್ಕಿ [102]ಸಬೇಕೆನುತ ಬಿನ್ನವಿಸಿ ಬೀಳ್ಕೊಂಡ                                                          ೫೫

ತೆರಳಿದನು ರಥ ಸಹಿತ ಕಂಸಾ
ಸುರನ ಹೊರೆಗಕ್ರೂರನಾಕ್ಷಣ
ಹರಿ ಬರುತ ಯಮುನಾ ನದಿಯನುತ್ತರಿಸಿ ವಹಿಲದಲಿ
ತರುಣ ಗೋಪ ಕದಂಬ ಸಹಿತ
ಬ್ಬರಿಸುತೋ[103]ಡುತ ಬಂದು ಮಥುರೇ
ಶ್ವರನ ಬಹುಳೋದ್ಯಾನದಲಿ ಬಿಡಿಸಿದನು[104] ಪಾಳೆಯವ                                                          ೫೬
ಐದನೆಯ ಸಂಧಿ ಮುಗಿದುದು


[1] ೬-೬ ರಶ್ಮಿಗಳ (ಆ)

[2] ೬-೬ ರಶ್ಮಿಗಳ (ಆ)

[3] ೭-೭ ಜರಿದ (ಆ)

[4] ೭-೭ ಜರಿದ (ಆ)

[5] ೮-೮ ಕಾಂಶಾ (ಆ)

[6] ೮-೮ ಕಾಂಶಾ (ಆ)

[7] ೯-೯ ಶಂಖ ಚಕ್ರದ (ಆ)

[8] ೯-೯ ಶಂಖ ಚಕ್ರದ (ಆ)

[9] ೧೦-೧೦ ವರಣನಾಗಿಯೆ ಕೌಸ್ತು ಭಾದ್ಯಾ ಭರಣನಿರೆ ಕಂಡ (ಆ)

[10] ೧೦-೧೦ ವರಣನಾಗಿಯೆ ಕೌಸ್ತು ಭಾದ್ಯಾ ಭರಣನಿರೆ ಕಂಡ (ಆ)

[11] ೧-೧ ಗಾತ್ರದ (ಆ)

[12] ೧-೧ ಗಾತ್ರದ (ಆ)

[13] ೨-೨ ತ್ತಲಿರೆ (ಆ)

[14] ೨-೨ ತ್ತಲಿರೆ (ಆ)

[15] ೩-೩ ತ ಮರಳಿಸುತಲವನೀ | ಜಾಳ (ಆ-ಮು)

[16] ೩-೩ ತ ಮರಳಿಸುತಲವನೀ | ಜಾಳ (ಆ-ಮು)

[17] ೪-೪ ಕೀ (ಆ)

[18] ೪-೪ ಕೀ (ಆ)

[19] ೫ ಕೀ (ಆ)

[20] ೬-೬ ನಿಸ್ಸಂಗ (ಆ-ಮು)

[21] ೬-೬ ನಿಸ್ಸಂಗ (ಆ-ಮು)

[22] ೭-೭ ಕೂಟದಲಿ (ಅ-ಮು)

[23] ೭-೭ ಕೂಟದಲಿ (ಅ-ಮು)

[24] ೮-೮ ಭಕುತ (ಅ)

[25] ೮-೮ ಭಕುತ (ಅ)

[26] ೯-೯ ಬ್ರಹ್ಮಸ್ವ (ಅ)

[27] ೯-೯ ಬ್ರಹ್ಮಸ್ವ (ಅ)

[28] ೧೦-೧೦ ಹರ (ಅ)

[29] ೧೦-೧೦ ಹರ (ಅ)

[30] ೧೧-೧೧ ಭವ (ಆ-ಮು)

[31] ೧೧-೧೧ ಭವ (ಆ-ಮು)

[32] ೧ ಯ (ಆ-ಮು)

[33] ೨-೨ ಕಾಣುತಮಿತ (ಮು)

[34] ೨-೨ ಕಾಣುತಮಿತ (ಮು)

[35] ೩-೩ ಪ್ರೇಮ ಮಿಗೆ (ಆ)

[36] ೩-೩ ಪ್ರೇಮ ಮಿಗೆ (ಆ)

[37] ೪-೪ ವೇಶ (ಆ)

[38] ೪-೪ ವೇಶ (ಆ)

[39] ೧-೧ ದಶದೋರ್ (ಆ-ಮು)

[40] ೧-೧ ದಶದೋರ್ (ಆ-ಮು)

[41] ೨-೨ ಕರ (ಮು)

[42] ೨-೨ ಕರ (ಮು)

[43] ೨-೨ ಕರ (ಮು)

[44] ೨-೨ ಕರ (ಮು)

[45] ೩-೩ ನೆಣಸಿ (ಆ)

[46] ೩-೩ ನೆಣಸಿ (ಆ)

[47] ೪-೪ ಸಾದ್ರಿ ಹಿಮಾದ್ರಿ (ಆ-ಮು)

[48] ೪-೪ ಸಾದ್ರಿ ಹಿಮಾದ್ರಿ (ಆ-ಮು)

[49] ೫ ದ (ಆ)

[50] ೬ ರ (ಆ)

[51] ೭-೭ ನಿರ್ವ್ಯಾಕುಳಿತ ನಭದಲ್ಲಿ ಚಂದ್ರಾ (ಆ)

[52] ೮-೮ ನಗಣಿತವ (ಆ)

[53] ೯-೯ ಹಿತಲ್ಲಿ (ಆ-ಮು)

[54] ೯-೯ ಹಿತಲ್ಲಿ (ಆ-ಮು)

[55] ೧೦-೧೦ ಧರಾಧೀ (ಆ)

[56] ೧೦-೧೦ ಧರಾಧೀ (ಆ)

[57] ೧೨-೧೨ ತರಣಿಯ ಪಾದಾಂತರದೊಳಿದ್ದ ೯೦ರಲ್ಲಿ ತಾನಘ್ಯಮರುಷಣದೊಳಿಹ ಹರಿಯ ಕಂಡಡಿಗಡಿಗೆ (ಆ), ನದಿಯ ದಡದೊಳು ಗೋ | ಪರ ಸುಮೇಳದೊಳಿರಲು ತಾನಘ| ಮರುಕ್ಷಣದೊಳಿಹ ಹರಿಯ ಕಂರಿಡಕ್ರೂರ (ಮು)

[58] ೧೨-೧೨ ತರಣಿಯ ಪಾದಾಂತರದೊಳಿದ್ದ ೯೦ರಲ್ಲಿ ತಾನಘ್ಯಮರುಷಣದೊಳಿಹ ಹರಿಯ ಕಂಡಡಿಗಡಿಗೆ (ಆ), ನದಿಯ ದಡದೊಳು ಗೋ | ಪರ ಸುಮೇಳದೊಳಿರಲು ತಾನಘ| ಮರುಕ್ಷಣದೊಳಿಹ ಹರಿಯ ಕಂರಿಡಕ್ರೂರ (ಮು)

[59] ೧-೧ ಯಿದ್ದೆಡ ಬಲವನೀಕ್ಷಿಸಿ (ಆ-ಮು)

[60] ೧-೧ ಯಿದ್ದೆಡ ಬಲವನೀಕ್ಷಿಸಿ (ಆ-ಮು)

[61] ೨ ಆ (ಮು)

[62] ೩-೩ ನೋಡಿದೆ (ಅ)

[63] ೩-೩ ನೋಡಿದೆ (ಅ)

[64] ೪-೪ ಕಲುಷ ಮಾನಿಸ (ಅ), ಕಲುಷ ಮಾನಸ (ಮು)

[65] ೪-೪ ಕಲುಷ ಮಾನಿಸ (ಅ), ಕಲುಷ ಮಾನಸ (ಮು)

[66] ೫-೫ ಫಲಿಸಿತು ಸತ್ಯ (ಆ)

[67] ೫-೫ ಫಲಿಸಿತು ಸತ್ಯ (ಆ)

[68] ೬-(ಮು)

[69] ೭-೭ ಸತ್ಕರಿಸಿದೆನೊ (ಆ-ಮು)

[70] ೭-೭ ಸತ್ಕರಿಸಿದೆನೊ (ಆ-ಮು)

[71] ೮ ದೆ (ಆ)

[72] ೯-೯ ಣದಗಣ್ಯ (ಆ), ಣದ ಬಹುಳ (ಮು)

[73] ೯-೯ ಣದಗಣ್ಯ (ಆ), ಣದ ಬಹುಳ (ಮು)

[74] ೧೦-೧೦ ನೀರೆರೆದ (ಮು)

[75] ೧೦-೧೦ ನೀರೆರೆದ (ಮು)

[76] ೧೧-೧೧ ಫಲವೆಂದ (ಆ)

[77] ೧೧-೧೧ ಫಲವೆಂದ (ಆ)

[78] ೧-೧ ದಿ ಮಲಗಿ (ಆ)

[79] ೧-೧ ದಿ ಮಲಗಿ (ಆ)

[80] ೨-೨ ಕೃಷ್ಣ ಜಯ ಜಯವೆನುತ ಕೀರ್ತಿಸಿದ (ಆ-ಮು)

[81] ೩-೩ ಪುತ್ರ (ಆ)

[82] ೩-೩ ಪುತ್ರ (ಆ)

[83] ೪-೪ ನಿಷ್ಪಂದ (ಆ)

[84] ೪-೪ ನಿಷ್ಪಂದ (ಆ)

[85] ೫-೫ ಚರಣ ತರುಣ ಜಯ (ಮು)

[86] ೫-೫ ಚರಣ ತರುಣ ಜಯ (ಮು)

[87] ೬-೬ ಚರಾಚರ (ಆ)

[88] ೬-೬ ಚರಾಚರ (ಆ)

[89] ೭-೭ ಚಿತ್ರ (ಆ)

[90] ೭-೭ ಚಿತ್ರ (ಆ)

[91] ೮-೮ ಮುಕುಂದ ಮುರಾರಿ ರಕ್ಷಿಸು ಜಯ ಜ (ಆ-ಮು)

[92] ೮-೮ ಮುಕುಂದ ಮುರಾರಿ ರಕ್ಷಿಸು ಜಯ ಜ (ಆ-ಮು)

[93] ೧-೧ ಮುದದೊಳೊಳಿವ (ಮು), ಒದೆದೊಡೊಲಿನ (ಆ)

[94] ೧-೧ ಮುದದೊಳೊಳಿವ (ಮು), ಒದೆದೊಡೊಲಿನ (ಆ)

[95] ೨-೨ ನಿಧಿಯೆ (ಆ)

[96] ೨-೨ ನಿಧಿಯೆ (ಆ)

[97] ೩-೩ ರಿಗೆ (ಮು)

[98] ೩-೩ ರಿಗೆ (ಮು)

[99] ೪-೪ ಹೃದಯನ (ಆ)

[100] ೪-೪ ಹೃದಯನ (ಆ)

[101] ೫-೫ ಸಸಿನೆ ರಕ್ಷಿ (ಆ)

[102] ೫-೫ ಸಸಿನೆ ರಕ್ಷಿ (ಆ)

[103] ೧ ತಾ (ಆ-ಮು)

[104] ೨ ರು (ಆ)