ಸೂಚನೆ :         ಪಟ್ಟಣದ

[1]ಹೆಬ್ಬಾಗಿಲಲಿ ಸೀ
ಳ್ದಿಟ್ಟು[2] ರಜಕನನಾ ಸುದಾಮಗೆ
ಕೊಟ್ಟು ವರವನು ನೆಗಪಿದನು ಕುಬುಜೆಯನು ಮುರವೈರಿ||

ಪದನು :
ದಾನವಾ[3]ಟವಿಯಟ್ಟಿ[4] ಸುಡುವ ಕೃ
ಶಾನು ಬಪ್ಪಂದದಲಿ ಸುರುರಭಿ-
ಮಾನದಂಕುರವೊಣಗುವಾಗ ಸುವೃಷ್ಟಿ ಸುರಿವಂತೆ
ಜ್ಞಾನಿಗಳ ಹೃದಯಾಬ್ಜನಿkಕರಕೆ
ಭಾನುವೊಗೆವಂ[5]ದದಲಿ ನಂದನ
ಸೂನು ನಡೆತಂದನು ಸುರಾರಿಯ ನಗರಿಯುಪವನಕೆ                                                  ೧

ಪರಿಮಳದ ನೆಲೆ[6]ವೀಡು[7] ತಂಪಿನ
ಶರಧಿ ಸುಖದಾಗರ ವಿಳಾಸದ
ಪರಮಸೀಮೆ ಮhಹೋತ್ಸವದ ಮನೆ ನಲವ ನಟರಂಗ
ವಿರಹಿಗಳ ವಿಶ್ರಮ ವಿಳಾಸಿನಿ
ಯರ [8]ವಿಹಾರ[9] ವಿಕೃತದ ಗುರು ಶಂ
ಕರ ರಿಪುಸ್ಥಳವೆನಿಪ ವನಕಸುರಾರಿ ನಡೆತಂದ                                                            ೨

ತಳತ ಶಾಖೆಯ ಪೂತ [10]ಶೋಕೆಯ[11]
[12]ಫಲಿತ ಸಹಕಾರ[13]ಗಳ[14] ನಿಚಯದ
ತಿಲಕ ಕೇಸರ ಕುರವಕಾದ್ಯುತ್ಕೃಷ್ಟ ತರುತತಿಯ
ಬಳಸಿದೆಳದೆಂಗಡಕೆಗಳ ಮಾ
ದಳ ಕದಳಿ ನಾರಂಗ ದಾಡಿಮ
ಪಲಸುಗಳ ಪರಿವಿಡಿಯಲೆಸೆವುಪವನಕೆ ಹರಿಬಂದ                                                       ೩

ತರುಲತಾಗ್ರಹ [15]ಕ್ರೀಡೆ[16]ಕುಳಿ ಸುಖ
[17]ಸರಸ ಕಾರಣ[18] ಶೈತ್ಯ ಮಂಟಪ
ಪರಿ[19]ಪರಿ[20]ಯ ಕೃತಕಾದ್ರಿ[21]ಯಿಂದೊಳಗೆಸೆವ ವರ[22]ಕೂಪ
ಪರಿವ ದೀರ್ಘ ಕೃಶೋಕ್ತಿ[23]ಗಳ[24] ಬೈ
ವರಗಿಳಿಯ ಸವಿಯುಲಿಯ ಕೋಗಿಲೆ
ಮೊರೆವ [25]ಭೃಂಗಗಳುಪವನಕೆ[26] ನಡೆತಂದನಸುರಾರಿ                                                          ೪

ಒಳಗೊಳಗೆ ಮಡಗಿ[27]ರು[28]ವ ಮಲ್ಲಿಗೆ
ಯಲರನವಲಂಬಿಸುವ ಮೊರೆವಳಿ
ಕುಳದ ಕ್ರಮ[29]ದಿಂ[30] ಕೀರ್ತಿಸುವ [31]ಕಲಕಂಠಸಂಗತಿಯ[32]
ಚಲುವಿಕೆಯನಾಲಿಸುವ ಗಿಳಿಗಳ
ಕಲರಸೋಕ್ತಿಯನಾದರಿಪ ಕೋ-
ಗಿಲೆಯ ಕೋಳಾಹಳದಲೆಸೆವುಪವನಕೆ ಹರಿ ಬಂದ                                                      ೫

ಲಲನೆ ಸಹಿತನಲಾಕ್ಷವೃಕ್ಷದ
ನೆಳಲೊಳೆಸೆವರಥಾಂಗ ವಿತತಿಯ
ನಳಿನ ವನ ಮಧ್ಯದಲಿ ೧೦[33]ನರ್ತಿಪ೧೦[34] ರಾಜಹಂಸ೧೧[35]ಗಳ
ಸುಳಿ ೧೨[36]ಸುಳಿ೧೨[37] ವ ಪಾರಿ೧೩[38]ವ ಚಯಂ೧೩[39]ಗಳ
ನಲಿದು ಪಾಡುವ ಕಿನ್ನರರ ಸಂ
ಕುಳದೊಳೆಸೆವುಪವನಕೆ ಬಿಜಯಂಗೈದನಸುರಾರಿ                                                       ೬

ತಳಿರಡಿಯ ರಂಭೋರುಗಳ ಸಿತ
ಪುಳಿನ ಜಘನಸ್ಥಳದ ಸರಸಿಯ
ಸುಳಿಯ ನಾಭಿಯ ಚಕ್ರವಾಕಸ್ತನದ ದೋರ್ಲತೆಯ
ನಳಿನ ವದನದ ಕೈರವಾಕ್ಷಿಯ
ಲಳಿತ ಬಿಂಬಾಧರ ಪಿಕಸ್ವರ
ದಳಿಗುರುಳ ಶಿಖಿಕಚದ ವನಮಾನಿನಿಯ ಹರಿ ಕಂಡ                                                    ೭

[40]ತಳಿದು ದೃಢ[41] ಪರಿಪರಿಯ ಪುಷ್ಪಾ
ವಳಿಯ ತಲ್ಬದ ಮೇಲೆ [42]ಪತ್ರಾ[43]
ವಳಿಯ ಹಚ್ಚಡಿಸುತ್ತ ಮಿಗೆ ತಂಬೆಲರ ಕೈಕೊಳುತ
ಒಲುಮೆಯಿನಿಯರ ನೆಮ್ಮಿ ಸೊಗಸ-
ಗ್ಗಳಿಸಿ [44]ಕೂಡುವ[45] ಮುನಿವ ನಿಮಿಷಕೆ
ತಿಳಿವ ಕಾಲ್ಪಿಡಿವಬಲೆಯರ [46]ನಿಟ್ಟಿ[47] ಸಿದನಸುರಾರಿ                                                  ೮

ಮರಮರಕೆ ಲಂಘಿಸುವ ಬೆರಳಲಿ
ಬರಿಯ ತುರಿಸುವ ಕಳವಳಿಸಿ ಪಲ್
ಗಿರಿವ ಮರಿಗಳನೆತ್ತಿ ಮುದ್ದಿಸಿ ಪರಸಿ ತೂಪಿರಿವ
ತರುಣಿಯರ ನೇಡಿಸುವ ಪಣ್ಗಳ
[48]ತರೆ[49]ದು ದೆಸೆದೆಸೆಗಿಡುವ ಕಪಿಗಳ
ನೆರವಿನೆರವಿಯ ಕಂಡು ಕಂಡುಸುರಾರಿ ನಗುತಿರ್ದ                                                      ೯

ಮಾವನನು ಕೊಲಲೆಂದು ದೇವರ
ದೇವ ಬಂದನಶೋಕೆಯಾದಳು
ದೇವಕೀವಧು ದಾನವರು ಸಲೆ ಕೆಟ್ಟರಿಂದಿನಲಿ
ದೇವರಿಪುಗಳ ವಧುಗಳವಶಕು
ನಾವಳಿಯ ಬಂದಿಯಲಿ ಸಿಲುಕಿದ
ರಾವು ಸುಕೃತಿಗಳೆಂಬ ಗಿಳಿಗಳ ನುಡಿಗೆ ನಗುತಿರ್ದ                                                     ೧೦

ವನದೊಳಾಡುವ ವಾರವನಿ[50]ತಾ[51]
ನನಸುಧಾಂಶು ರಥಾಂಗಮಿಥುನಕೆ
ಮುನಿ[52]ಯೆ ತಿಮಿರದ ತಂಡದಿಕ್ಕೆಯ ಕೆಡಿಸುತನವರತ
ಮುನಿದರಂತಸ್ತಾಪಮರ್ದನ
[53]ವೆನಿಸಿ ಬಾಳ್ವುದಿದೊಂದು ವಿಸ್ಮಯ
ವೆನುತ ಹರಿಯುಪವನದ ಮಧ್ಯದ ಮಂಟಪಕೆ ನಡೆದ                                                  ೧೧

ಹರುಷ ಮಿಗೆ ಮಂಟಪ[54]ವ ಮುದದಿಂ[55]
ಪರಿದು ಗೋವರು ಸಹಿತ ಕುಳ್ಳಿರೆ
ಹರಿ ಬಳಿಕ ಮುಸುಕಿರ್ದ ಬಳಲಿಕೆಯನ್ನು ನೀಗಾಡಿ
ಪಿರಿದು ಪಸಿವಾಯ್ತಿಲ್ಲಿ ಕಲಸೋ
ಗರವನಾರೋಗಿಸುವೆನೆಂದಾ
ಸರಸಿಯಲಿ ಕಾಲ್ದೊಳೆದು ಬಂದನು ಶೈತ್ಯಮಂಟಪಕೆ                                                   ೧೨

ನಂದ ಮೊದಲಾದಖಿಳ ಗೋಪರ
ವೃಂದ[56]ಸಹಿತಾ[57]ರೋಗಣೆಗೆ ಹರಿ
ಬಂದು ಮಾನ್ಯರ ಗುರುಲಘುತ್ವವನರಿದು ಕುಳ್ಳಿರಿಸಿ
ಬಂದ ಘೃತದಧ್ಯೋದನಂಗಳ
ತಂದು ತಂದೆಲ್ಲರಿಗೆ ಬಡಿಸುವು
ದೆಂದು ಕರೆದೆಲ್ಲರಿಗೆ ನೇಮಿಸಿದನು ಮುರಧ್ವಂಸಿ                                                          ೧೩

ಹರಿ ಬಲರು ಸಂಗಡಿಸಿ ಬಹುಪರಿ-
ಕರ ಸಹಿತ ವಿವೆಧಾನ್ನಪಾನದ
ಪರಿವಿಡಿಯ ಪಲವುಪ್ಪುಗಾಯ್ಗಳನಾದರದಿ ಬಡಿಸಿ
ಕಿರಿಯರಿಗೆ ಸವಿದುತ್ತ ತೋರುತ
ಮರಳಿ ತಾನಾರೋಗಿಸುತ ಸಿರಿ
ಯರಸರ ಪಂಕ್ತಿಯಲೆಸೆದನಮರಪ್ರತತಿ ನಲಿಯುತಿರೆ                                                  ೧೪

ಬಳಿಕ ಕೈದೊಳೆದುಪವನದ ಕಪಿ
ಕುಲವನೆಲ್ಲವ ನೆರಹಿ ಕಲಸಿದ
ಕಳವೆಯಶನದ ರಾಶಿಗಳ ಮಂದಿರಿಸಿ ಸುರಿಯುತಿರೆ
ಸುಳಿಸುಳದು ಮುಕ್ಕುರಿಕಿ ಕವಿದ-
ವ್ವಳಿಸಿ ಸೆಳೆದೊಡಗಲಸಿ ಮೋದುವ
ಲುಳಿಯ ಕಂಡಸುರಾರಿ ಗಹಗಹಿಸುತ್ತ ನಗುತಿರ್ದ                                                        ೧೫

ಅಟ್ಟಹಾಸವನುಳಿದು ದುರಿತಘು
ರಟ್ಟ ಗೋಪರಿಗೊಲಿದು ವೀಳೆಯ
ಗೊಟ್ಟು ತಾ ಕೈಕೊಂಡು ಬಳಿಕುಪವನದ ಸಂಭ್ರಮವ
ದಿಟ್ಟಿಸುತ ತೂಪಿರಿಯುತಾಡುವ
ಪಟ್ಟಣದ ಪಥವಿಡಿದು ಕಂಸನ
ಮೆಟ್ಟಿ ಸೀಳುವ ಭರದಲಸುರವಿರೋಧಿ ಬರುತಿರ್ದ                                                       ೧೬

ಬೇಗದ[58]ಲಿ[59] ಬಂದಸುರ ನಗರಿಯ
ಬಾಗಿಲಲಿ ಹರಿ ನಿಂದು ಪರಿವಾ[60]
ಸಾಗರದ ಗಂಭೀರತೆಯ ಕಂಡದಕೆ ತಲೆದೂಗಿ
ನಾಗಭವನಕೆ ಮಥುರೆಯಿದು ಸಮ
ಭಾಗವನಿಮಿಷಸೇವ್ಯವೆನಿಸದೆ
ಯೀ ಗರುವತನ ಚಿತ್ರವೆಂದಸುರಾರಿ ನಗುತಿರ್ದ                                                         ೧೭

ಹೇಮಮಯ ನವರತ್ನ [61]ಕೆಚ್ಚಿದ[62]
ಸೋಮಸೂರ್ಯಾಗ್ನಿ ಪ್ರಕಾಶ
ಸ್ತೋಮ ಸಂಯುತ ವಿವಿಧ ಸಲ[63] ವಭೇದ್ಯವಾಗಮ್ಮ[64]
ಯಾಮಿನೀ ಚರರೊಡೆಯನಿಹ ನಿಜ
ಸೀಮೆ ವಸುಧಾರಮಣಿಗೆನಿ[65]ಸಿದ[66]
ರಾಮಣೀಯಕ ಕುಕ್ಷಿಯೆನಲೆಸೆದಿರ್ದುದಾ ಮಥುರೆ                                                       ೧೮

ಮುಗಿಲನಳ್ಳರಿವಿಂದು ಸೂರ್ಯರ
ತೆಗೆವ ಸುಮನೋಮನವ ಕಲಕುವ
ಗಗನ ಕೋಟೆಯ ಬಂಧಿಸುವ ಮಾರುತನ ಸೆರೆವಿಡಿವ
ಖಗ ಕುಲವ ಸಂತಯಿಸಲೀಯದೆ
ಬೆಗಡುಗೊಳಿಸುವ ಕನಕ ಶೈಲವ
ನಗುವ ಕೋಟೆಯ ತೆನೆಯ ಕಂಡಸುರಾರಿ ಬೆರಗಾದ                                                   ೧೯

ಅಟ್ಟಣೆಗಳಗಣಿತ ಸುರೌಘವ
ನಿಟ್ಟುಕೆಡಹುವ ಡೆಂಕಣಿಗೆ ತಾಂ
ಕಟ್ಟಣೆಗಳಿಲ್ಲಿವರ ಕಾವಲದಡಿಗರಕ್ಕಸರ
ದಿಟ್ಟಿಸಿ[67]ದರೆವೆ[68] ಸೀವುದಸುರನ
ಪಟ್ಟಣದ ಪರಿಲೇಸೆನುತ ಮನ
ಮುಟ್ಟಿ ಕೊಂಡಾಡಿದನು ಹರಿ ನಿಜಶಿರವನೊಲಿದೊಲಿದು                                                ೨೦

ಎತ್ತ ನೋಡಿದಡತ್ತ ದೈತ್ಯರ
ಮೊತ್ತ ಕಡುಗುದುರೆಗಳ ಸಂದಣಿ
ಮತ್ತಗಜದಬ್ಬರಣೆಯೊದರುವ ವಾದ್ಯನಿರ್ಘೋಷ
ಸುತ್ತಸುಳಿವಂದಣದ ಪಲ್ಲವ
ಸತ್ತಿಗೆಯ ಸಡಗರ ಮುರಾರಿಯ
ಚಿತ್ತವನು ಕಾಲ್ವಿಡಿದುದೇನೆಂಬೆನು ಮಹಾದ್ಭುತವ                                                       ೨೧

ಆ ಸಮಯದಲಿ ರಜಕನಧಿಕ ವಿ
ಲಾಸದಲಿ ಮಥುರಾಪುರೀಶನ
ಮೀಸಲಿನ ಮಡಿ[69]ವರ್ಗಸಹಿತಿ[70]ದಿರಾಗಿ ಬರೆ ಕಂಡು
ಈಸುವಸ್ತ್ರವನಿವನ ಕೈಯಿಂ
ದೀಸಿಕೊಳಬೇಕೆಂದು ಹರಿ ತಂ
ದಾ [71]ಸಗರ್ವನ[72] ಮುಂದೆ ನಿಂದಸುರಾರಿಯಿಂತೆಂದ                                                            ೨೨

ಕೊಡು ಸುವಸ್ತ್ರವನಂಜದಿರು ನಾ
ವುಡುವಡೊಡೆಯರು ಮಾವ ಕಂಸನ
ನುಡಿಯ ಮೀರದೆ ಬಿಲ್ಲ ಹಬ್ಬಕೆ ಬಂದೆವಿಂದೀಗ
ತಡವ ಮಾಡದೆ ಬೇಗ ತಾ ಸಂ
ಗಡದವರು ಕಡು [73]ಶೀಘ್ರ[74]ರೆನೆ ಕೇ
ಳ್ದಡಿಗಡಿಗೆ ಬೆರಗಾಗಿ ಬಳಿಕಾ ರಜಕನಿಂತೆಂದ                                                             ೨೩

ಬಲ್ಲೆನಾಂ ಗೋವಳಯರಿಷ್ಟಕೆ
ಸಲ್ಲದವರೇ ಮಡಿಯನುಡುವರೆ
ಬಲ್ಲಿರೇ ಸಾಮಾನ್ಯರೇ ಬಯಸಿದಿರಿ ಸಂಗತವ
ಬಿಲ್ಲಹಬ್ಬಕೆ ಬಂದಿರೇ ಕಡು
ಹುಳ್ಳವರು ಬಾಯ್ಭಡಿಕರಿದಿರಲಿ
ನಿಲ್ಲದಿರಿ ಹೆರಸಾರಿರೆನೆ ಖತಿಗೊಂಡನಸುರಾರಿ                                                           ೨೪

ನುಡಿಯದಿರು ಜಡ ಖೂಳ ನಾಲಗೆ
ಗೆಡುಕುತನ ನಮ್ಮೊಡನೆಯೇ ಎನು
ತಡರಿ ಮುಂದಲೆವಿಡಿದು ಕೆಡೆಯೊದೆದಿಳೆಯೊಳಪ್ಪಳಿಸಿ
ಒಡಲನಿಬ್ಚಗೆಯಾಗಿ ಸೀಳ್ದವ
ಗಡಿಸಿ ರಜಕನ ನೀಗಿ ಮಡಿಗಳ
ಗಡಣದೊಟ್ಟಿಲ ಸೂರೆಗೊಂಡಸುರಾರಿ ನಗುತಿರ್ದ                                                        ೨೫

ಥಳಥಳಿಪ ಪೊಂಬಟ್ಟೆ ಪಟ್ಟಾ
ವಳಿಗಳನು ತಾನುಟ್ಟು ನೀಲಿಯ
ಹೊಳೆವ ಪಳಿಗಳ ಜೋಡನಿತ್ತನು ಕಾಮಪಾಲಂಗೆ
ಉಳಿದ ಗೋಪರಿಗೆಲ್ಲ ನಸು ಮಾಂ
ದಳಿರ ಸಾಲಿಯ ಚಂದ್ರಿಕೆಯ ಮು
ಕ್ಕಳಿಯ ವಸ್ತ್ರವನಿತ್ತು ಹೊಕ್ಕನು ಮತ್ತೆ ಪಟ್ಟಣವ                                                          ೨೬

ಹೊಕ್ಕು ಕಂಡನು ನಾಲ್ಕು ದೆಸೆಗಳ
ನಿಕ್ಕುರಿಸಿದಂಗಡಿಯನಭ್ರವ
ಜಕ್ಕುಲಿಸುತಿಹ ದೇವತಾಲಯಗಳ ಮಹೋನ್ನತಿಯ
ರಕ್ಕಸರ ಕರುವಾಡದೋಜೆಯ
ಲೆಕ್ಕವಿಲ್ಲದ ಮಂಟಪಂಗಳ
ಮಿಕ್ಕೆಸೆವ ಧವಳಾರ ಗೋಪುರನಂತಕೋಟಿಗಳ                                                         ೨೭

ತರವಿಡಿದ [75]ಧವ[76]ಳಾತಪತ್ರದ
ನೊರೆಯನಗಣಿತ ತೋರಣಂಗಳ
ತೆರೆಯ ನಡೆವಾ ವ್ರಜ [77]ಸಮಾಜದ[78] ಸುಳಿಯ ಗೃಹಜಲದ
ತರುಣಿಯರ ದೃಕ್ ಶಫರ ವಿತತಿಯ
ನುರಿವ ಕಂಸಕ್ರೋಧವಡಬನ
ಧರಿಸಿ ಪುರ ಜಲರಾಶಿಯಂತಿರೆ ಕಂಡನಸುರಾರಿ                                                         ೨೮

ಥಳಥಳಿಪ ಹೊಂಗಳಸ [79]ರವಿಗಳ[80]
ಲಲನೆಯರ ವದನೇಂದುಗಳ[81]ವೊಳ
ಗೊ[82]ಳಗೆಸೆವ ಶುಭ ಮಂಗಳದ ಯಾದವರ [83]ಗಡಣದಲಿ[84]
ಕುಲಗುರುಗಳಕ್ರೂರ ಮುಖ್ಯರ
ಲಲತ ಕವಿಗಳ ಮಂದ ಬುದ್ಧಿಯ
ಖಳರ ಸಂದಣೆಯಿಂದ ಮೆರೆದುದು ಮಥುರೆ ನಭದಂತೆ                                                            ೨೯

ಇಂತೆಸೆವ ಮಥುರಾಪುರಿಯನೆತಿ
ಸಂತಸದೊಳೀಕ್ಷಿಸುತ ಹರಿ ಬರೆ
ಮುಂತೆ ಕವಿಕವಿದಡರಿ ನೊಡುವಶೇಷಪುರಜನರ
ತಿಂತಿಣಿಸಿ ಕೈಮುಗಿದ ಭೂಸುರ
ಸಂತತಿಯ ಕಣ್ಗಳ ನಿವಾಳಿಯ
ಕಾಂತೆಯರ ಸಂವರಣೆ ಮೆರೆದುದು ಕೇರಿಕೇರಿಯಲಿ                                                     ೩೦

ಹರಿಚರಣಸಂಸರ್ಗದಿಂದಾ
ಪುರದ ಕಿಲ್ಟಿಷ ಹರಿದುದಸುರರ
ಹರಣ ಗಮನೋದ್ಯುಕ್ತವಾಯ್ತಿರ್ದೆಸೆಯ ಯಾದವರ
ಹರುಷದಾರತಿ ಹೆಚ್ಚಿತಂಗನೆ
ಯರ ಮನೋರಥ ಸಫಲವಾಯ್ತು
ರ್ವರೆಯ ಹೊರೆ ಹಿಂಗಿದುದು ಕಂಸಂಗಾಯ್ತು ಕಡೆಗಾಲ                                                ೩೧

[85]ಧರ್ಮ[86] ವಿಮ್ಮಡಿಯಾಯ್ತು ದನುಜರ
ಹೆಮ್ಮೆ ಕರಿಮೊಳೆಯಾ[87]ಯ್ತು ದೇವಕಿ
ಯುಮ್ಮಳಿಕೆ ಬಯಲಾಯ್ತು ಸಜ್ಜನರೊಸಗೆ ಹಿರಿದಾಯ್ತು
[88]ಕರ್ಮಿ[89]ಗಳ ಕಳಕಳಿ[90]ಕೆ ಕಡೆಯಾ
ಯ್ತಮ್ಮದೋಡಿತನೀತಿ ಮುಸಲಿಯ
ತಮ್ಮನಂಘ್ರಿಸರೋಜ ದರ್ಶನದಿಂದ ಮಧುರೆಯಲಿ                                                      ೩೨


[1] ೧-೧ ಬಾಹೆಯಲಿ ಸೀಳ್ದಿಳೆ ಗಿಟ್ಟು (ಆ-ಮು)

[2] ೧-೧ ಬಾಹೆಯಲಿ ಸೀಳ್ದಿಳೆ ಗಿಟ್ಟು (ಆ-ಮು)

[3] ೨-೨ ಡಿಯನಟ್ಟಿ (ಆ), ಟನಿಗಟ್ಟಿ (ಆ-ಮು)

[4] ೨-೨ ಡಿಯನಟ್ಟಿ (ಆ), ಟನಿಗಟ್ಟಿ (ಆ-ಮು)

[5] ೩ ದ (ಮು)

[6] ೪-೪ ವಿಡಿದು (ಆ)

[7] ೪-೪ ವಿಡಿದು (ಆ)

[8] ೫-೫ ಧಿಕಾರ (ಮು), ವಿಕಾರ (ಆ)

[9] ೫-೫ ಧಿಕಾರ (ಮು), ವಿಕಾರ (ಆ)

[10] ೬-೬ ಸಂಪಗೆ

[11] ೬-೬ ಸಂಪಗೆ

[12] ೭ ಗಳ (ಆ)

[13] ೮-೮ (ಆ)

[14] ೮-೮ (ಆ)

[15] ೧-೧ ಖೇ (ಆ)

[16] ೧-೧ ಖೇ (ಆ)

[17] ೨-೨ ಕರಸತಾರಾ (ಆ)

[18] ೨-೨ ಕರಸತಾರಾ (ಆ)

[19] ೩-೩ ವಿಡಿ (ಆ)

[20] ೩-೩ ವಿಡಿ (ಆ)

[21] ೪-೪ ವಿವಿಧಾಂದೋಳ ರಸ (ಆ)

[22] ೪-೪ ವಿವಿಧಾಂದೋಳ ರಸ (ಆ)

[23] ೫-೫ ಯೊಳು (ಮು)

[24] ೫-೫ ಯೊಳು (ಮು)

[25] ೬-೬ ಆರಡಿಗಳ ವನಕೆ (ಆ), ಪಾರಿವವಿಹ ವನಕೆ (ಮು)

[26] ೬-೬ ಆರಡಿಗಳ ವನಕೆ (ಆ), ಪಾರಿವವಿಹ ವನಕೆ (ಮು)

[27] ೭-೭ ಲಿರಿ (ಆ-ಮು)

[28] ೭-೭ ಲಿರಿ (ಆ-ಮು)

[29] ೮-೮ ವನು (ಮು)

[30] ೮-೮ ವನು (ಮು)

[31] ೯-೯ ಕಲಕಂಠ ಸರಗತಿಯ (ಆ), ಸೋಗೆಗಳ ಕೇಗುಗಳ (ಮು)

[32] ೯-೯ ಕಲಕಂಠ ಸರಗತಿಯ (ಆ), ಸೋಗೆಗಳ ಕೇಗುಗಳ (ಮು)

[33] ೧೦-೧೦ ರಮಿಸುವ (ಆ-ಮು)

[34] ೧೦-೧೦ ರಮಿಸುವ (ಆ-ಮು)

[35] ೧೧ ಸಿ (ಆ)

[36] ೧೨-೧೨ ದುಲಿ (ಮು), ದುಳಿ (ಆ)

[37] ೧೨-೧೨ ದುಲಿ (ಮು), ದುಳಿ (ಆ)

[38] ೧೩-೧೩ ರಾವತಂ (ಮು)

[39] ೧೩-೧೩ ರಾವತಂ (ಮು)

[40] ೧-೧ ಕಳಿದುದಿದ್ (ಮು)

[41] ೧-೧ ಕಳಿದುದಿದ್ (ಮು)

[42] ೨-೨ ಕಕ್ಷಾ (ಮು)

[43] ೨-೨ ಕಕ್ಷಾ (ಮು)

[44] ೩-೩ ತವಕಿಸೆ (ಆ-ಮು)

[45] ೩-೩ ತವಕಿಸೆ (ಆ-ಮು)

[46] ೪-೪ ನೀಕ್ಷಿ (ಮು)

[47] ೪-೪ ನೀಕ್ಷಿ (ಮು)

[48] ೫-೫ ಪರಿ (ಮು), ತಿ (ಮು)

[49] ೫-೫ ಪರಿ (ಮು), ತಿ (ಮು)

[50] ೬-೬ ಧುವಾ (ಮ)

[51] ೬-೬ ಧುವಾ (ಮ)

[52] ೭ ದ (ಮ)

[53] ೮ ನೆ (ಆ-ಮು)

[54] ೧-೧ ದ ಸರಿಸಕೆ (ಮು)

[55] ೧-೧ ದ ಸರಿಸಕೆ (ಮು)

[56] ೨-೨ ದೊಡನಾ (ಮು).

[57] ೨-೨ ದೊಡನಾ (ಮು).

[58] ೧-೧ ದಿಂ (ಮು)

[59] ೧-೧ ದಿಂ (ಮು)

[60] ೨ ಖಾ (ಮು)

[61] ೩-೩ ಸುಖಚಿತ (ಮು)

[62] ೩-೩ ಸುಖಚಿತ (ಮು)

[63] ೪-೪ ವಿಲಾಸದಿನಭೇದ್ಯ (ಮು)

[64] ೪-೪ ವಿಲಾಸದಿನಭೇದ್ಯ (ಮು)

[65] ೫-೫ ಸೆದಿಹ (ಮು)

[66] ೫-೫ ಸೆದಿಹ (ಮು)

[67] ೧-೧ ದೊಡೆ (ಮು)

[68] ೧-೧ ದೊಡೆ (ಮು)

[69] ೨-೨ ಗಡಣದೊಡನಿ (ಮು)

[70] ೨-೨ ಗಡಣದೊಡನಿ (ಮು)

[71] ೩-೩ ಸುವರ್ಗದ (ಮು)

[72] ೩-೩ ಸುವರ್ಗದ (ಮು)

[73] ೪-೪ ಸಿತಗ (ಮು)

[74] ೪-೪ ಸಿತಗ (ಮು)

[75] ೧-೧ ಆಶು (ಆ)

[76] ೧-೧ ಆಶು (ಆ)

[77] ೨-೨ ದ ಜನಗಳ (ಮು)

[78] ೨-೨ ದ ಜನಗಳ (ಮು)

[79] ೩-೩ ನೇಸರ (ಮು)

[80] ೩-೩ ನೇಸರ (ಮು)

[81] ೪-೪ ಪಾಡೊ (ಮು)

[82] ೪-೪ ಪಾಡೊ (ಮು)

[83] ೫-೫ ಬುಧವರರ (ಮು)

[84] ೫-೫ ಬುಧವರರ (ಮು)

[85] ೧-೧ ದಮ್ಮ (ಮು)

[86] ೧-೧ ದಮ್ಮ (ಮು)

[87] ೨ ಯೋ (ಮು)

[88] ೩ ಕಮ್ಮಿ (ಮು)

[89] ೩ ಕಮ್ಮಿ (ಮು)

[90] ೪ ಳ (ಮು)